ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, December 31, 2023

ನವಗ್ರಹ ಮಂತ್ರ ಮತ್ತು ಅದರ ಅರ್ಥ

*ನವಗ್ರಹ ಮಂತ್ರವನ್ನು ಅದರ ಭಾವಾರ್ಥ ಸಹಿತ ವಿವರಿಸಲಾಗಿದೆ ಸನ್ಮಾನ್ಯಆಸ್ತಿಕ   ಶ್ರದ್ಧಾವಂತರು ಮನುಷ್ಯಪ್ರಯತ್ನದ ಜೊತೆ ಗ್ರಹಬಲಕ್ಕಾಗಿ ಈ ಮಂತ್ರಗಳನ್ನು ಪಠಿಸುವುದರಿಂದ ಉತ್ತಮ ಫಲ ಕಂಡುಕೊಳ್ಳಬಹುದಾಗಿದೆ*

*🌟🌷ನವಗ್ರಹ ಸ್ತೋತ್ರ🌷🌟*

*🌷ಸೂರ್ಯ ಗ್ರಹ ಮಂತ್ರ*

*ಓಂ ಜಪಾಕುಸುಮ ಸಂಕಾಶಂ । ಕಾಶ್ಯಪೇಯಂ ಮಹಾದ್ಯುತಿಂ ।*
*ತಮೋsರಿಮ್ ಸರ್ವಪಾಪಘ್ನಮ್ । ಪ್ರಣತೋsಸ್ಮಿ ದಿವಾಕರಂ*

*ಭಾವಾರ್ಥ : ದಾಸವಾಳ ಹೂಗಳಂತೆ ಕಂಗೊಳಿಸುವ, ಕಶ್ಯಪನ ಮಗನಾದ, ಶತ್ರುವೋ ಎಂಬಂತೆ ಕತ್ತಲನ್ನು ಅಟ್ಟುವ, ಸಕಲ ಪಾಪಗಳನ್ನು ಪರಿಹರಿಸುವ ದಿವಾಕರನಿಗೆ ನಮಸ್ಕರಿಸುತ್ತೇನೆ.*

*🌷ಚಂದ್ರ ಗ್ರಹ ಮಂತ್ರ*

*ಓಂ ದಧಿಶಂಖತುಷಾರಾಭಂ । ಕ್ಷೀರೋದಾರ್ಣವಸಂಭವಮ್।*
*ನಮಾಮಿ ಶಶಿನಂ ಸೋಮಂ । ಶಂಬೋರ್ಮುಕುಟ ಭೂಷಣಂ ।।*

*ಭಾವಾರ್ಥ : ಮೊಸರು, ಶ೦ಖ, ಹಿಮದ೦ತೆ ಹೊಳೆಯುವ; ಕ್ಷೀರಸಾಗರದಿಂದ ಹೊರಹೊಮ್ಮಿದ, ಕಾಂತಿಯುಕ್ತನಾದ, ಮಹಾದೇವನ ಶಿರಸ್ಸನ್ನು ಅಲಂಕರಿಸಿರುವ ಚಂದ್ರದೇವನಿಗೆ ನಮಸ್ಕರಿಸುತ್ತೇನೆ.*

*🌷ಕುಜ ಗ್ರಹ ಮಂತ್ರ*

*ಓಂ ಧರಣೀಗರ್ಭ ಸಂಭೂತಂ । ವಿದ್ಯುತ್ ಕಾಂತಿ ಸಮಪ್ರಭಮ್ ।*
*ಕುಮಾರಂ ಶಕ್ತಿ ಹಸ್ತಾಂಚ । ಮಂಗಳಂ ಪ್ರಣಮಾಮ್ಯಹಮ್ ।।*

*ಭಾವಾರ್ಥ : ಧರಣೀದೇವಿಯ ಗರ್ಭದಲ್ಲಿ ಜನಿಸಿದ, ವಿದ್ಯುತ್ ಕಾಂತಿಗೆ ಸಮನಾದ ಪ್ರಭಾವಳಿಯುಳ್ಳ, ಶಕ್ತ್ಯಾಯುಧದಿಂದ ಶೋಭಿಸುವ, ತರುಣನಾದ ಮಂಗಳನಿಗೆ (ಕುಜ / ಅಂಗಾರಕ) ನಮಸ್ಕರಿಸುತ್ತೇನೆ.*

*🌷ಬುಧ ಗ್ರಹ ಮಂತ್ರ*

*ಓಂ ಪ್ರಿಯಂಗುಕಾಲಿಕ ಶ್ಯಾಮಂ । ರೂಪೇಣಾಮ್ ಪ್ರತಿಮಂ ಬುಧಮ್ ।*
*ಸೌಮ್ಯಮ್ ಸೌಮ್ಯ ಗುಣೋಪೇತಂ । ತಮ್ ಬುಧಮ್ ಪ್ರಣಮಾಮ್ಯಹಮ್ ।।*

*ಭಾವಾರ್ಥ : ಪ್ರಿಯ೦ಗು ಲತೆಯ ಚಿಗುರಿನ೦ತೆ ಶ್ಯಾಮವರ್ಣದವನೂ ಸುಂದರನೂ ಸೌಮ್ಯಗುಣಸಂಪನ್ನನೂ ಆದ ಬುಧ ದೇವನನ್ನು ನಮಸ್ಕರಿಸುತ್ತೇನೆ.*

*🌷ಗುರು ಗ್ರಹ ಮಂತ್ರ*

*ಓಂ ದೇವಾನಾಮ್ ಚ ಋಷಿಣಾಮ್ ಚ । ಗುರುಮ್ ಕಾಂಚನ ಸನ್ನಿಭಮ್ ।*
*ಬುದ್ಧಿ ಭೂತಂ ತ್ರಿಲೋಕೇಶಂ । ತಮ್ ನಮಾಮಿ ಬೃಹಸ್ಪತಿಮ್ ।।*

*ಭಾವಾರ್ಥ : ದೇವತೆಗಳಿಗೂ ಋಷಿಗಳಿಗೂ ಪ್ರಿಯನಾದ, ಚಿನ್ನದ೦ತೆ ಹೊಳೆಯುವ, ಮೂರುಲೋಕಗಳಲ್ಲೂ ಸಾಟಿಯಿಲ್ಲದಷ್ಟು ಬುದ್ಧಿಮತ್ತೆ ಹೊಂದಿರುವ ಬೃಹಸ್ಪತಿಗೆ ನಮಸ್ಕರಿಸುತ್ತೇನೆ.*

*🌷ಶುಕ್ರ ಗ್ರಹ ಮಂತ್ರ*

*ಓಂ ಹಿಮಕುಂದ ಮೃಣಾಲಾಭಂ*
*। ದೈತ್ಯಾನಾಮ್ ಪರಮಮ್ ಗುರುಮ್ ।*
*ಸರ್ವಶಾಸ್ತ್ರ ಪ್ರವಕ್ತಾರಮ್ । ಭಾರ್ಗವಂ ಪ್ರಣಮಾಮ್ಯಹಮ್ ।।*

*ಭಾವಾರ್ಥ : ಹಿಮದ ಹಾಗೆ ಹಾಗೂ ಕು೦ದ ಪುಷ್ಪ ಮೃಣಾಲದ ಹಾಗೆ ಶೋಭಿಸುವ, ದೈತ್ಯರ ಪರಮಗುರುವಾದ, ಸಕಲ ಶಾಸ್ತ್ರ ಪರಿಣತನಾದ, ಭೃಗು ಮಹರ್ಷಿಯ ಕುಲದವನಾದ ಶುಕ್ರನಿಗೆ ನಮಸ್ಕರಿಸುತ್ತೇನೆ.*

*🌷ಶನಿ ಗ್ರಹ ಮಂತ್ರ*

*ಓಂ ನೀಲಾಂಜನ್ ಸಮಾಭಾಸಂ । ರವಿಪುತ್ರಂ ಯಮಾಗ್ರಜಮ್ ।*
*ಛಾಯಮಾರ್ತಾಂಡ ಸಮಭೂತಂ । ತಮ್ ನಮಾಮಿ ಶನೈಶ್ಚರಮ್ ।।*

*ಭಾವಾರ್ಥ : ನೀಲವರ್ಣದಿಂದ ಶೋಭಿಸುವ, ಸೂರ್ಯದೇವನ ಮಗನೂ ಯಮನ ಹಿರಿಯ ಸಹೋದರನೂ ಆದ ಛಾಯಾಪುತ್ರ ಶನಿದೇವನಿಗೆ ನಮಸ್ಕರಿಸುತ್ತೇನೆ.*

*🌷ರಾಹು ಗ್ರಹ ಮಂತ್ರ*

*ಓಂ ಅರ್ಧಕಾಯಂ ಮಹಾವೀರ್ಯಮ್ ।* *ಚಂದ್ರಾದಿತ್ಯ ವಿಮರ್ದನಂ ।*
*ಸಿಂಹಿಕಾಗರ್ಭಸಂಭೂತಂ ।* *ತಮ್ ರಾಹುಮ್ ಪ್ರಣಮಾಮ್ಯಹಮ್ ।।*

*ಭಾವಾರ್ಥ : ಅರ್ಧ ದೇಹವನ್ನು ಹೊಂದಿದ್ದರೂ ವೀರನಾದ, ಸೂರ್ಯ ಚಂದ್ರರನ್ನು ಗ್ರಹಣದ ಮೂಲಕ ಪೀಡಿಸುವ, ಸಿಂಹಿಕೆಯ ಮಗನಾದ ರಾಹುವಿಗೆ ನಮಸ್ಕರಿಸುತ್ತೇನೆ.*

*🌷ಕೇತು ಗ್ರಹ ಮಂತ್ರ*

*ಓಂ ಪಲಾಶಪುಷ್ಪ ಸಂಕಾಶಂ । ತಾರಕಾಗ್ರಹ ಮಸ್ತಕಂ ।*
*ರೌದ್ರಂ ರೌದ್ರಾತ್ಮಕಂ ಘೋರಂ । ತಮ್ ಕೇತುಂ ಪ್ರಣಮಾಮ್ಯಹಮ್ ।।*

*ಭಾವಾರ್ಥ : ಪಲಾಶ ಹೂವಿನ೦ತೆ ಕೆ೦ಪಾದ, ನಕ್ಷತ್ರ ಹಾಗೂ ಗ್ರಹಗಳ ನೆತ್ತಿಯಲ್ಲಿ ಶೋಭಿಸುವ, ಅತ್ಯ೦ತ ರೌದ್ರನಾದ ಹಾಗೂ ಘೋರನಾದ ಕೇತುವಿಗೆ ನನ್ನ ಪ್ರಣಾಮಗಳು*

*🌷ನಮಃ ಸೂರ್ಯಾಯ ಸೋಮಾಯ ಮ೦ಗಲಾಯ ಬುಧಾಯ ಚ|*
*ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ||*

*ಇತಿ ವ್ಯಾಸಮುಖೋದ್ಗೀತಂ ಯಃ ಪಠೇತ್ ಸುಸಮಾಹಿತಃ|*
*ದಿವಾ ವಾ ಯದಿ ವಾ ರಾತ್ರೌ ವಿಘ್ನಶಾಂತಿರ್ಭವಿಷ್ಯತಿ ||*

*ವೇದವ್ಯಾಸರು ಹೇಳಿದ ಈ ನವಗ್ರಹಸ್ತೋತ್ರವನ್ನು ಹಗಲು ಅಥವಾ ರಾತ್ರಿ ವೇಳೆ ಏಕಾಗ್ರತೆಯಿಂದ ಪಠಿಸಿದರೆ ಉತ್ತಮ ಫಲಗಳು ದೊರೆಯುವವು*🙏🏻🌷🌷
ವ್ಯಾಸಾಯ ವಿಷ್ಣು ರೂಪಾಯ ವ್ಯಶಸರೂಪಾಯ ವಿಷ್ಣುವೆ ನಮೋ ವೈಬ್ಹ್ಮನಿಧಯೆ ವಾಸಿಷ್ಟಾಯ ನಮೋ ನಮ:
 ಶ್ರೀ ಮಹಾವಿಷ್ಣುವಿನ  ಅವತಾರರಾದ  ವೇದವ್ಯಾಸರು ರಚಿಸಿದ  ನವಗ್ರಹ  ಸ್ತೋತ್ರ ಮಾನವನಿಗೆ  ಬರುವ ಗ್ರಹಚಾರ ದೋಷದಿಂದ  ಬಿಡುಗಡೆ ಪಡೆಯಲು  ಸೂಕ್ತ ವಾಗಿದೆ. ಯಾವುದು ಸರಿತಪ್ಪು ತಿಳಿಯದೆ  ಎಷ್ಟೋ ಗ್ರಹ ದೋಷಗಳನ್ನು  ಜೀವಾತ್ಮ ಹೊತ್ತುಕೊಂಡು  ಭೂಮಿಯಲ್ಲಿ  ಜೀವನ ನಡೆಸುವಾಗ  ಇಂತಹ ಸ್ತೋತ್ರದಿಂದ ಪರಿಹಾರ ಕಂಡುಕೊಳ್ಳಲು ಮಹರ್ಷಿಗಳು  ನೀಡಿದ ವರವಾಗಿದೆ. 

No comments:

Post a Comment