ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Saturday, December 30, 2023

ಭಾಷಾರಕ್ಷಣೆಗೆ ಆತ್ಮವಿಶ್ವಾಸಬೇಕು ಅಹಂಕಾರ ವಲ್ಲ

ಕನ್ನಡ ರಕ್ಷಣೆಗಾಗಿ ಸಾಕಷ್ಟು ಹೋರಾಟ ಹಾರಾಟ ಮಾರಾಟಗಳು ನಡೆದಿದೆ ಆದರೆ  ಬೆಳೆದಿರೋದು ಪರಭಾಷಿಗಳೇ ಎನ್ನುವ ಸತ್ಯ ಸಾಭೀತಾಗುತ್ತಿದೆ.ಕಾರಣವಿಷ್ಟೆ ಹೋರಾಟ ಹೊರಗೆ ಮಾಡುತ್ತಾ ನಮ್ಮೊಳಗೇ  ಇದ್ದ ಭಾಷೆಗೆ ಬೆಲೆಕೊಡದೆ ಮಕ್ಕಳಿಗೂ ಪರಭಾಷೆಯ ಶಿಕ್ಷಣಕೊಟ್ಟು ವಿದೇಶಿ ವ್ಯವಹಾರಕ್ಕೆ ಸಹಕರಿಸಿ ಒಳಗೆ  ಕರೆತಂದು ಅವರ ಕಂಪನಿಗಳಲ್ಲಿಯೇ  ಕೆಲಸಮಾಡುತ್ತಾ  ಸಂಸಾರ ನಡೆಸುವಾಗ. ಅವರನ್ನು ವಿರೋಧಿಸುವುದು ಸಾಧ್ಯವೆ?
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಮ್ಮವರೆ ಬ್ರಿಟಿಷ್ ಪರ ನಿಂತು  ತಮ್ಮ ಸ್ವಾರ್ಥ ದ ಜೀವನ ನಡೆಸಬೇಕಾಗಿತ್ತು.ಆದರೆ ನಿಜವಾದ ಸ್ವಾತಂತ್ರ್ಯ ಹೋರಾಟಗಾರರು ಅವರನ್ನು ವಿರೋಧಿಸುತ್ತಾ ಅಸಹಕಾರ ಚಳುವಳಿ,ಉಪವಾಸ ಸತ್ಯಾಗ್ರಹ ದಂತಹ ಅಧ್ಯಾತ್ಮಿಕ ಮಾರ್ಗ ದಲ್ಲಿ ನಡೆದಾಗಲೇ  ಬಿಡುಗಡೆ ಸಿಕ್ಕಿದ್ದು. ಇದನ್ನು ಈಗ  ಸರಿಯಾಗಿ ಅರ್ಥ ಮಾಡಿಕೊಳ್ಳದೆ ಪರರ ವಶದಲ್ಲಿದ್ದು ಅವರ ವ್ಯವಹಾರಕ್ಕೆ ಸಹಕರಿಸಿ,ಅವರ ಶಿಕ್ಷಣವನ್ನು ಮಕ್ಕಳಿಗೂ ಕೊಟ್ಟು ಅವರದೇ ಕೈಕೆಳಗೆ ಕೆಲಸ ಮಾಡಿ ಹಣಗಳಿಸಿ  ಅವರು ಸರಿಯಿಲ್ಲವೆಂದರೆ  ಸರಿಯಾಗಿರೋದು ಯಾರು? ನಮ್ಮೊಳಗೇ ಇರುವ ಸ್ವಾರ್ಥ ಅಹಂಕಾರ  ಪ್ರತಿಫಲಾಪೇಕ್ಷೆಯ ರಾಜಕೀಯ ಗುಣಗಳಿಂದ ಯಾವುದೇ  ಧರ್ಮ ,ಸಂಸ್ಕೃತಿ, ಭಾಷೆ ಉಳಿಸಲಾಗದು ಎನ್ನುವ ಭಗವದ್ಗೀತೆ ಯನ್ನು  ಸರಿಯಾಗಿ ಅರ್ಥ ಮಾಡಿಕೊಂಡರೆ ನಮ್ಮ ಹೋರಾಟದಿಂದಒಳಗಿನ ನೆಮ್ಮದಿ ಶಾಂತಿ ತೃಪ್ತಿ ನೀಡುವುದೆ ಇಲ್ಲವೆ ಎನ್ನುವ ಸತ್ಯದರ್ಶನವಾಗುತ್ತದೆ. ಕನ್ನಡರಕ್ಷಣಾವೇದಿಕೆ ಸಾಕಷ್ಟಿದೆ,ಸಂಘಗಳೂ ಸಾಕಷ್ಟಿದೆ,ಪ್ರಾಧಿಕಾರವೂ ಬೆಳೆದಿದೆ ಆದರೆ ಶಾಲಾಕಾಲೇಜ್ ಗಳಲ್ಲಿ‌ಮಕ್ಕಳು ಆಂಗ್ಲ ಭಾಷೆಯಲ್ಲಿ ಮಾತನಾಡದಿದ್ದರೆ ಶಿಕ್ಷೆ ಇದೆ ಎಂದರೆ ಭಾಷೆಯನ್ನು ಎಲ್ಲಿ ಬೆಳೆಸಬೇಕಿತ್ತು?
ಕಾನೂನಿನ‌ಪ್ರಕಾರ ಶಿಕ್ಷಣ ನೀಡಲಾಗಿದೆಯೆ? ಪೋಷಕರು ನಿಜವಾದ  ರಾಜ್ಯ ದೇಶದ ಪರ‌ನಿಲ್ಲಲು ಸಾಧ್ಯವಾಗಿದೆಯೆ?
ಇಲ್ಲ ಎಂದರೆ  ಪರಕೀಯರಿಗೆ ಮಣೆ ಹಾಕಿ ಸ್ವಾಗತಿಸುವ ಕಾರ್ಯ ಬಿಟ್ಟು ನಮ್ಮವರ ಜ್ಞಾನವನ್ನು  ಗೌರವಿಸುತ್ತಾ ಎಲ್ಲಾ ಒಂದಾಗೋದನ್ನು ಕಲಿತರೆ ಹೊರಗಿನವರು ಬೆಳೆಯೋದಿಲ್ಲ.
ಕಾಲೆಳೆದು ಬೀಳಿಸಿ ಆಟವಾಡುವ‌ಬದಲು ಕೈಹಿಡಿದು ನಡೆಸುವ  ಕೆಲಸವಾದರೆ ಭಾಷೆಯ ಜೊತೆಗೆ ಜ್ಞಾನವೂ ಬೆಳೆಯುತ್ತದೆ. ಕನ್ನಡಮ್ಮ,ಭಾರತಾಂಬೆ ಎನ್ನುವ ನಮ್ಮ ಮನಸ್ಸು ತಾಯಿಯ ಹೃದಯವಂತಿಕೆಯೆಡೆಗೆ ಇದ್ದರೆ  ಒಳಗೇ  ಇದ್ದು  ಧರ್ಮ,ಸಂಸ್ಕೃತಿ, ಭಾಷೆ,ದೇಶದ ಸ್ಥಿತಿಗತಿಗೆ ಕಾರಣ ತಿಳಿದು ಪರಿಹಾರವೂ ಒಳಗೇ ಸಿಗುತ್ತದೆ.
ವೈಜ್ಞಾನಿಕತೆಯ ಹಿಂದೆ ಹೊರಟವರಿಗೆ ವೈಚಾರಿಕತೆಯ ಅರ್ಥ ಆಗದೆ ಏನೇನೂ ತಿರುಚಿ ಕೊಂಡು ತಾವೂ ಸೀದಾ ನಡೆಯದೆ‌ ನಡೆಯುತ್ತಿದ್ದವರನ್ನೂ  ತಡೆದು ಮಧ್ಯವರ್ತಿಗಳು ಅತಂತ್ರಸ್ಥಿತಿಗೆ ತಂದಿರೋದು ದುರಂತಕ್ಕೆ ಕಾರಣ. ಇಲ್ಲಿ ಯಾರೂ ಯಾರನ್ನೂ ಉಳಿಸಲಾಗದು ಬೆಳೆಸಲೂ ಆಗದು.
ಮೊದಲು ನಮ್ಮ ನಮ್ಮ ಧರ್ಮ, ಕರ್ಮ ಭಾಷೆ,ಸಂಸ್ಕೃತಿ ಅರ್ಥ ಮಾಡಿಕೊಂಡು ಹೊರಗೆ ಬಂದರೆ ಹೊರಗೂ ಸರಿ ಆಗಬಹುದಷ್ಟೆ.  ಎಲ್ಲಿಯವರೆಗೆ  ಮಾನವನ‌ಮನಸ್ಸು ಶುದ್ದವಾಗದೋ ಅಲ್ಲಿಯವರೆಗೆ ಶಾಂತಿ ಸಿಗದು.ಸತ್ಯ ತಿಳಿಯದು, ಸತ್ಯವೇ ಇಲ್ಲದ ಧರ್ಮ ಕುಂಟುತ್ತದೆ.ಧರ್ಮ ವಿಲ್ಲದ ಸತ್ಯ ಕುರುಡಾಗಿರುತ್ತದೆ.
ಪರಕೀಯರನ್ನು  ಮೆಚ್ಚಿಸುವುದಕ್ಕಾಗಿ ನಮ್ಮತನ ಬಿಟ್ಟರೆ ನಾಟಕವಾಗುತ್ತದೆ. ನಾಟಕ ಅರ್ಧ ಸತ್ಯವಷ್ಡೆ.ಅರ್ಧ ಸತ್ಯ‌ ಅಸತ್ಯಕ್ಕಿಂತ ಅಪಾಯಕರ. ಕಾರಣ ಅಸತ್ಯವನ್ನಾದರೂ  ತಡೆಯಬಹುದು. ಕಾರಣ ಸತ್ಯ ಒಂದೇ ಇರುತ್ತದೆ.ಅಸತ್ಯ ಹೋದ ಮೇಲೆ ಕಾಣುತ್ತದೆ. ಆದರೆ ಈ ಮಧ್ಯವರ್ತಿಗಳ ಅರ್ಧ ಸತ್ಯ  ಈಕಡೆಯೂ ಹೋಗದೆ ಆಕಡೆಯೂ ಹೋಗದೆ ತಡೆಯುವುದೇ ಕೆಲಸ ಮಾಡುತ್ತದೆ. ಹೀಗಾಗಿ ದೇವರು ಅಸುರರ‌ ನಡುವಿರುವ ಮಾನವನಿಗೆ ಸಮಸ್ಯೆ ಹೆಚ್ಚು. ಈ ಕಡೆ ಕಾಣದ ದೇವರು ಆ ಕಡೆ ಕಾಣುವ ಅಸುರರು‌ ಇಬ್ಬರ ನಡುವೆ ಮಾನವರು ಭೂಮಿಯನ್ನು  ಆಳೋದಕ್ಕೆ ಹೋಗುತ್ತಾ ತಾವೇ ಆಳಾಗಿ ಹಾಳಾಗಿ ಹೋದರೂ‌ ಕೇಳೋರಿಲ್ಲ ಹೇಳೋರಿಲ್ಲದೆ ನಿರ್ಗತಿಕರಾಗಿರುವರು.ಹಣದಿಂದ ಸರಿಪಡಿಸಲಾಗದ್ದನ್ನು ಸತ್ಯಜ್ಞಾನದಿಂದ ಸರಿಪಡಿಸಬಹುದು ಎನ್ನುವ ಮಹಾತ್ಮರನ್ನು ಪೂಜಿಸುವ ಬದಲು ಅವರ ನಡೆ ನುಡಿಯಲ್ಲಿದ್ದ ತತ್ವವನರಿತರೆ  ನಮ್ಮೊಳಗೇ ಇರುವ‌ಮಹಾತ್ಮರ ದರ್ಶನ ಸಾಧ್ಯವಿದೆ. ಹೋರಾಟವೇ ಜೀವನ.ಆದರೆ ಇದರಲ್ಲಿ ಸತ್ಯ ಧರ್ಮದ ಜ್ಞಾನವಿರಬೇಕಷ್ಟೆ ಇದೇ ನಮಗೆ ಸನ್ಮತಿ, ಸದ್ಗತಿ  ಕೊಡುತ್ತದೆಂದಿರುವರು  ಮಹಾತ್ಮರುಗಳು. ಹಣ ಇಂದು ಬಂದು ನಾಳೆ ಹೋಗಬಹುದು. ಜ್ಞಾನ ಶಾಶ್ವತವಾಗಿರುವುದು.
ಯಾರೇ ಆಗಲಿ ಪರರ ಧರ್ಮ, ಭಾಷೆ ಸಂಸ್ಕೃತಿ ಯನ್ನು ಅಳಿಸುವ ಕೆಲಸ ಮಾಡಿದರೆ ವಿನಾಶ ಕಟ್ಟಿಟ್ಟ ಬುತ್ತಿ.ಇಷ್ಟು ತಿಳಿದರೆ ತಾವಿರುವ‌ ನೆಲಜಲದ ಋಣ ತೀರಿಸಲು ‌ಅದನ್ನು ಬೆಳೆಯಲು ಬಿಡಬೇಕು.  ನಮ್ಮಲ್ಲಿ ಹಣವಿದೆ ಅಧಿಕಾರವಿದೆ ಸ್ಥಾನಮಾನ ಸಿಕ್ಕಿದೆ ಎಂದರೆ ನಾವು ಮಾಡಿದ್ದೆಲ್ಲಾ ಸರಿಎಂದಲ್ಲ ಅದರಲ್ಲಿ ಸತ್ಯ ಧರ್ಮ ನ್ಯಾಯ ನೀತಿ ಸಂಸ್ಕೃತಿ ಎಷ್ಟಿದೆ ಎನ್ನುವುದನ್ನು  ಜ್ಞಾನದಿಂದ ತಿಳಿದಾಗಲೇ  ನಿಜವಾದ ಜೀವನವಾಗಿರುತ್ತದೆ.ಇಲ್ಲವಾದರೆ  ಸಮಾಜದ ಜೊತೆಗೆ ಸಂಸಾರದ ಸಮಸ್ಯೆಯೂ ಹೆಚ್ಚಾಗಿ  ಅಶಾಂತಿಯಿಂದ ಜೀವ ಹೋಗುತ್ತದೆ. ಎಲ್ಲಿಯವರೆಗೆ ಆತ್ಮಕ್ಕೆ ಶಾಂತಿ ಸಿಗದೋ ಅಲ್ಲಿಯವರೆಗೆ ಜನ್ಮ ಶತಸಿದ್ದ. ಒಟ್ಟಿನಲ್ಲಿ ಅಧ್ಯಾತ್ಮ ಎಂದರೆ ತನ್ನ ತಾನರಿತು ಎಲ್ಲರಲ್ಲಿಯೂ ಅಡಗಿರುವ ಸತ್ಯಧರ್ಮ ದಿಂದ  ಒಳಗೂ ಹೊರಗೂ ಶಾಂತಿ ಬೆಳೆಸೋದಾಗಿತ್ತು.ಈಗ ಕಲಿಗಾಲ ಕಲಿಕೆಯೇ ದಾರಿತಪ್ಪಿಸಿ ನಡೆಸಿರುವಾಗ ಎಲ್ಲಿದೆ ಶಾಂತಿ?  ಎಲ್ಲರಿಗೂ  ಒಂದೇ ಭೂಮಿ,ಒಂದೇ ತಾಯಿ,ಒಂದೇ ದೇಶ ಒಂದೇ ಮತ,ಒಂದೇ ಧರ್ಮ ಒಂದೇ ದೇವರು ಎನ್ನುವುದು ಸುಲಭ. ಆ ಒಂದರ ಹಿಂದೆ ನಡೆದವರನ್ನು ಅರ್ಥ ಮಾಡಿಕೊಳ್ಳಲು ಕಷ್ಟ. ಕಷ್ಟಪಡದೆ ಬೇರೆ ಬೇರೆ ಮಾಡಿ‌ಕೊನೆಗೆ ಒಂದು ಮಾಡೋದಕ್ಕೆ ಸಾಕಷ್ಟು ಕಷ್ಟವಿದೆ.
ಕಷ್ಟದ ಹಿಂದೆ ಸುಖವಿದ್ದಂತೆ ಸುಖದ ಹಿಂದೆ ಕಷ್ಟವಿದೆ.
ಎಲ್ಲರನ್ನೂ ಒಂದಾಗಿಸಲು ಹೋದರೆ ಅವರೊಳಗಿದ್ದ ಜ್ಞಾನ ಒಂದೇ ಆಗಬೇಕಾದರೆ ಶಿಕ್ಷಣ ಒಂದೇ ಕೊಡಬೇಕು.ಸಾಧ್ಯವೆ?
ದೇಶೀಯ ಶಿಕ್ಷಣ ದೇಶದ ಪರವಿದ್ದರೆ ದೇಶಭಕ್ತರು.ದೇಶಕ್ಕೆ ವಿರುದ್ದವಿದ್ದರೆ ದೇಶದ್ರೋಹಿಗಳು.ಎಷ್ಟು ಸರಳವಾಗಿದೆ ಸತ್ಯ.
ನಾವೆಲ್ಲರೂ  ಮಧ್ಯದಲ್ಲಿ  ನಿಂತ ದೋಣಿಯಲ್ಲಿರುವ ಪ್ರಯಾಣಿಕರಷ್ಟೆ. ಸರಿಯಾದ ದಡ ತಲುಪಬೇಕಾದರೆ ಹಿಂದೆ ಮುಂದೆ ನೋಡಬೇಕಷ್ಟೆ. ಮದ್ಯದಲ್ಲಿ ನಿಂತು ಯುದ್ದ ನಡೆಸಿದರೆ  ಎಲ್ಲಾ ನೀರಿನಲ್ಲಿ ಮುಳುಗುವುದಂತೂ ಸತ್ಯ. ಜೀವ ಹೋದರೆ ಜನ್ಮ ಪಡೆಯಬಹುದು. ಜ್ಞಾನವಿದ್ದರೆ ಉತ್ತಮ‌ಜನ್ಮ.ಜನ್ಮವೇ ಇಲ್ಲವೆಂದವರನ್ನು  ಏನೂ ಮಾಡಲಾಗದು..ಸತ್ಯ ಸತ್ಯವೇ ಅಲ್ಲವೆ? ಮನುಕುಲದ ಒಳಿತಿಗಾಗಿ ಮಾನವೀಯತೆಯ ಜೊತೆಗೆ ದೈವೀಕತೆಯು ಅಗತ್ಯವಿದೆ.
ದೈವೀಕ ಗುಣಜ್ಞಾನದಿಂದ ಧರ್ಮ, ಸತ್ಯ ಭಾಷೆಯ‌ಮಹತ್ವವರಿತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇಲ್ಲವಾದರೆ ಅಹಂಕಾರವೇ ಬೆಳೆದು  ಆಳಿ ಆಳಿಸುತ್ತದೆ.

No comments:

Post a Comment