ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, December 15, 2023

ಜ್ಯೋತಿಷ್ಯ ಶಾಸ್ತ್ರ

ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಹಲವರಿಗೆ  ಗೊಂದಲವಿದೆ.ಇದು ಸರಿಯೋ ತಪ್ಪೋ ಎನ್ನುವ  ವಾದ ವಿವಾದದಲ್ಲಿ ಜ್ಯೋತಿಷ್ಯ ಸತ್ಯವಿದ್ದರೂ ಜ್ಯೋತಿಷ್ಯ ನುಡಿದವರಲ್ಲಿ ತಪ್ಪಾಗಿದೆ. ಹಾಗೆ ಸನಾತನ ಹಿಂದೂ ಧರ್ಮದ ಉದ್ದೇಶ ಸರಿಯಿದ್ದರೂ ಎಲ್ಲಾ ಹಿಂದೂಗಳು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸೋತಾಗ  ಪರಕೀಯರು ಹಿಂದೂ ಧರ್ಮ ವೇ ಇಲ್ಲವೆಂದರೆ ತಪ್ಪು ಪರರದ್ದಲ್ಲ ನಮ್ಮವರದ್ದೇ.
ಹೀಗೇ ದೇಶದ. ವಿಚಾರಕ್ಕೆ ಬಂದಾಗ ಎಲ್ಲಾ ಧರ್ಮ ದವರೂ ಭಾರತದ ಋಣ ತೀರಿಸಲು  ಅದರ ಧರ್ಮ ಕರ್ಮ ದ ಬಗ್ಗೆ ಅರಿವನ್ನು ಬೆಳೆಸಿಕೊಳ್ಳಲು  ಅವಕಾಶವಿರಬೇಕು. ಅವಕಾಶ ಇದ್ದರೂ  ಕೊಡದಿದ್ದರೆ ಅದು ನಮ್ಮ ತಪ್ಪು. ಸಹಕಾರವೇ ಇಲ್ಲವಾದರೆ ಅದು ನಮ್ಮ ಕರ್ಮ ಫಲ. ಹಾಗಂತ ನಮ್ಮ  ಆತ್ಮಸಾಕ್ಷಿಗೆ  ನಾವೇ ವಿರುದ್ದ ನಡೆದಾಗ ಇದರ ಫಲವನ್ನು  ಯಾರೋ ಅನುಭವಿಸಲಾಗದು. ಹಾಗಾಗಿ ಭವಿಷ್ಯದ ಚಿಂತನೆ ಮಾಡುವಾಗ‌ಹಿಂದಿರುವ ಗ್ರಹಗತಿಗಳ ಚಲನವಲನದಿಂದ ಮಾನವನ ಜೀವನದಲ್ಲಾಗುವ ಪರಿಣಾಮವನ್ನು ಸೂಕ್ಮವಾಗಿ ತಿಳಿದು ಸೂಕ್ತ ಮಾರ್ಗದರ್ಶನ ಪರಿಹಾರ ಸೂಚಿಸುವ ಜ್ಯೋತಿಷ್ಯ ಶಾಸ್ತ್ರ  ಎಲ್ಲರಿಗೂ ಒಂದೇ ರೀತಿಯಲ್ಲಿ  ಕಲಿಯಲಾಗದಿದ್ದರೂ  ಕಲಿತವರ ನಡೆ ನುಡಿಯ ಮೇಲೇ  ಹೇಳಿಕೆಯೂ  ಇರುತ್ತದೆ. ನಾನೆಂಬುದಿಲ್ಲವೆಂದಿರುವ  ಸತ್ಯದಲ್ಲಿ ಆ ಅಗೋಚರ ಶಕ್ತಿ ಯ ಒಳಗಿನಹೇಳಿಕೆ ಯಾರಿಗೂ ಕಾಣೋದಿಲ್ಲ.ಸ್ವಚ್ಚ ಶುದ್ದ ವ್ಯಕ್ತಿತ್ವವುಳ್ಳವರು  ಏನು ಹೇಳಿದರೂ ಸತ್ಯವಾಗಿರುತ್ತದೆ ಅವರಿಗೆ ಶಾಸ್ತ್ರ ಓದುವ ಅವಕಾಶವಿಲ್ಲದೆಯೂ ಭವಿಷ್ಯ ಅರ್ಥ ವಾಗಬಹುದು. ಹಾಗಂತ ಬೇರೆಯವರ ಭವಿಷ್ಯವನ್ನು ಬದಲಾಯಿಸುವ  ಹಠಕ್ಕೆ ಬಿದ್ದರೆ  ಅದೇ ಭವಿಷ್ಯವನ್ನು ಹಾಳುಮಾಡಲೂಬಹುದು. ಕಾರಣ ಅವರವರ ಧರ್ಮ ಕರ್ಮಕ್ಕೆ ತಕ್ಕಂತೆ ಅವರ ಭವಿಷ್ಯ ವಿರುತ್ತದೆ.  ಇದು ಮನೆಯಿಂದ ಹಿಡಿದು ಮಠ ಮಂದಿರ, ಮಾಧ್ಯಮ, ಮಂತ್ರಿ ಮಹೋದಯರವರೆಗೂ‌    ಒಂದೇ ಸಮನಾಗಿರಲು‌ ಕಷ್ಟ. ಮನೆಯೊಳಗೆ  ಸ್ವಚ್ಚ ಮನಸ್ಸಿನ ಮಾನವರಿರಬೇಕು.
ಸಾಧ್ಯವಿಲ್ಲದ ಕಾರಣ ಹೊರಗೆ ಬಂದವರು ಹೊರಗಿನವರಿಂದ ತನ್ನ ಭವಿಷ್ಯ ಕೇಳಿಕೊಂಡು ನಡೆಯಬೇಕಾಯಿತು.ಆದರೆ ಗ್ರಹಗತಿಗಳಿಗೆ  ಯಾರು ಶ್ರೇಷ್ಠ ಕನಿಷ್ಟವೆನ್ನುವುದನ್ನು  ತಾಳೆಹಾಕುವ ಲೆಕ್ಕಾಚಾರದಲ್ಲಿ ಹಣ ಬರೋದಿಲ್ಲ ಜ್ಞಾನವೇ ಬರೋದು. ಹಾಗಾಗಿ ಜ್ಯೋತಿಷ್ಯ ‌ ಆತ್ಮಜ್ಯೋತಿಯ. ಒಂದು ಸಂದೇಶ. ಹೇಳುವವರಲ್ಲಿ ಆತ್ಮಜ್ಞಾನವಿದ್ದರೆ  ಹೇಳಿದ್ದು ಸತ್ಯವಾಗೇ ಇರುತ್ತದೆ. ಕಲಿತು ಹೇಳುವಾಗ. ಸ್ವಲ್ಪ ತಪ್ಪಾದರೂ  ಕೇಳುವವರ ಹಣೆಬರಹವನ್ನು ಅಳಿಸಲು ಜ್ಯೋತಿಷ್ಯ ಶಾಸ್ತ್ರ ವೂ ಸಹಕರಿಸದು.ಎಲ್ಲಾ ಮೇಲಿನ ಶಕ್ತಿಯ ಆದೇಶದಂತೆ‌ನಡೆದರೂ ಮಧ್ಯದಲ್ಲಿ ತಡೆದು ನಿಲ್ಲಿಸುವ ಶಕ್ತಿ ಕೆಲವರಿಗಷ್ಟೆ ಇದೆ. ಅವರೂ ಮುಂದೆ ಹೋದ ಮೇಲೆ ಆಗೋದನ್ನು ತಡೆಯಲಾಗದು.ಅದಕ್ಕೆ ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಒಂದಿರಲಿ ಎಂದರು ದಾಸ ಶ್ರೇಷ್ಠ ರು.
ಈಗಿನ ಭಾರತದ ಭವಿಷ್ಯವನ್ನು ‌ಹಿಂದೆಯೇ ತಿಳಿಸಿದ್ದರು. ಕಲಿಯುಗದ ಭವಿಷ್ಯವನ್ನು  ಹಿಂದಿನ ಯುಗದಲ್ಲೇ ತಿಳಿಸಿದ್ದರು. ಹಾಗಾದರೆ ಆಗೋದನ್ನು ಮೊದಲೇ ತಿಳಿಸಿರುವ ಹಿಂದಿನ ವಿಜ್ಞಾನ  ಆತ್ಮಜ್ಞಾನವಾಗಿದೆ. ಆತ್ಮಜ್ಞಾನದಿಂದ ನಮ್ಮ ಭವಿಷ್ಯ ಉತ್ತಮವಾಗಿರುತ್ತದೆ ಎಂದಾಗ  ನಮ್ಮ ಮೂಲ ಶಿಕ್ಷಣ ಆತ್ಮಜ್ಞಾನದೆಡೆಗೆ  ನಡೆದರೆ ಮಕ್ಕಳ ಭವಿಷ್ಯ ಉತ್ತಮವಾಗಿರಬಹುದಲ್ಲವೆ? ಒಳಗೆ ಅಡಗಿರುವ ಜ್ಞಾನಶಕ್ತಿ ಗುರುತಿಸಿ  ಶಿಕ್ಷಣ ನೀಡಿದರೆ‌ ಸರ್ವಜ್ಞ ರಾಗದಿದ್ದರೂ ವಿಜ್ಞಾನಿಗಳಾಗಬಹುದು.ಇಲ್ಲಿ ವಿಜ್ಞಾನ ವಿಶೇಷವಾದ ಜ್ಞಾನ. ಒಳಗಿನ  ಜ್ಞಾನದ ಜೊತೆಗೆ ಹೊರಗಿನ ಜ್ಞಾನ ಹೊಂದಿಕೊಂಡು ನಡೆದಾಗ  ಪರಿಪೂರ್ಣತೆ ಕಾಣಬಹುದು.
ಇಂದು ಒಳಗಿನ ಜ್ಞಾನಕ್ಕೆ ವಿರುದ್ದದ ಹೊರಗಿನ ಶಿಕ್ಷಣವೇ ಮಕ್ಕಳನ್ನು ದಾರಿತಪ್ಪಿಸಿ ನಡೆಸಿರೋದೇ ಅಜ್ಞಾನಕ್ಕೆ ಕಾರಣ. ಇದನ್ನು  ಯಾವ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲು ಸಾಧ್ಯ?
ಮಕ್ಕಳ ಶಿಕ್ಷಣದ ವಿಚಾರ ಬಂದಾಗ ಹೇಳೋದು ಬಹಳ ದೊಡ್ಡ ಅಧಿಕಾರಿ ಆಗುವನು, ಇಂಜಿನಿಯರಿಂಗ್, ಡಾಕ್ಟರ್ ವಿಜ್ಞಾನಿ ಆಗುವನೆಂದರೆ ಬಹಳ ಸಂತೋಷ. ಅದೇ ಓದು ಹತ್ತದಿದ್ದರೆ ದನ ಕಾಯೋ ಎಮ್ಮೆ ಮೇಯಿಸೋ,ಮಠ ಸೇರೋ, ಕೂಲಿ ಮಾಡೋ‌  ಎನ್ನುವ  ವ್ಯಂಗ್ಯ ಪದವನ್ನು ಬಳಸುವವರೊಮ್ಮೆ  ಚಿಂತನೆ ಮಾಡಿದರೆ ಶ್ರೀ ಕೃಷ್ಣ ನಿಗೆ ಗೋವಿಂದ ಎನ್ನುವರು, ಗೋಸೇವೆಯಿಂದ ಕೋಟ್ಯಾಂತರ ದೇವತೆಗಳ ಸೇವೆ ಮಾಡಿದಂತಾಗಿ ಋಣ ಕಳೆಯುತ್ತದೆ. ಸೇವೆಯಲ್ಲಿ ಕೂಲಿಯೂ ಒಂದು. ಅಂದಿನ ದಿನದ ಹಣದಲ್ಲಿ ತನ್ನ ಸಂಸಾರದ  ಹೊಟ್ಟೆ ತುಂಬಿಸುವುದರ ಮೂಲಕ ಯಾವ‌ಭ್ರಷ್ಟತೆಯಿಲ್ಲದೆ ಹಣ ಸಂಗ್ರಹಣೆಯಿಲ್ಲದೆಯೂ
ಕೂಲಿಮಾಡುವವರ ಸಂಸಾರದಲ್ಲಿ ಸಂತೋಷವಿರುವುದು, ಮಠಗಳಲ್ಲಿ ನಡೆಸುವ ಧಾರ್ಮಿಕ ಕ್ರಿಯೆಗಳಿಂದಲೇ ಸಮಾಜದಲ್ಲಿ ಧರ್ಮ ನಿಂತಿರೋದು. ಬಡಬ್ರಾಹ್ಮಣ,ಬಡರೈತ,ಬಡಸೈನಿಕ ಬಡ ಶಿಕ್ಷಕ ಎಂದರೆ ಅಜ್ಞಾನ. ಅವರ ಜ್ಞಾನವನ್ನು ಗುರುತಿಸದ ಕಣ್ಣಿಗೆ  ಹಣವಷ್ಟೆ ಕಾಣೋದು. ಹೀಗಾಗಿ ಸಾಲ ಮಾಡಿಯಾದರೂ ಹೊರಗಿನ ಶಿಕ್ಷಣ ಪಡೆದಯಾವ ಇಂಜಿನಿಯರಿಂಗ್, ಡಾಕ್ಟರ್ ಇನ್ನಿತರ ಅಧಿಕಾರಿಗಳು  ನೇರವಾಗಿ   ಯಾರ ಸಹಕಾರ,ಹಣ,
ಸಾಲವಿಲ್ಲದೆ ಓದಿ ಮೇಲೇರಿಲ್ಲ.ಸ್ವತಂತ್ರ ವಾಗಿ ಜೀವನ‌ ನಡೆಸಲು  ಹೊರಗಿನ ಜ್ಞಾನ ಕ್ಕಿಂತ ಒಳಗಿನ ಜ್ಞಾನವೇ ಆಸ್ತಿಯಾಗಿದೆ. ಅದನ್ನು ಹೆಚ್ಚಿಸಿಕೊಂಡು  ಎಲ್ಲರಿಗೂ  ಉಪಯೋಗವಾಗುವ  ಕೆಲಸ ಮಾಡುವುದರಿಂದ ಭವಿಷ್ಯ ಚೆನ್ನಾಗಿ ಇರುತ್ತದೆ.ದುರ್ಭಳಕೆ  ಮಾಡಿಕೊಂಡರೆ  ಭವಿಷ್ಯ ಹಾಳಾಗಿರುವುದು.

No comments:

Post a Comment