ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, December 27, 2023

ಲಕ್ಮಿ ನಾರಾಯಣರಲ್ಲಿ ಬಡತನವಿದೆಯೆ?

ನಾವು ಹಲವಾರು ವಿಚಾರಗಳನ್ನು ಹಂಚಿಕೊಳ್ಳಬಹುದು ಆದರೆ ಹಲವಾರು ಕರ್ಮ ಫಲವನ್ನು ಹಂಚಿಕೊಳ್ಳಲಾಗದು.
ಹಿಂದಿನ ಜನ್ಮದಲ್ಲಿ ಮಾಡಿದ ಸಾಲಕ್ಕೆ ತಕ್ಕಂತೆ ಈ ಜನ್ಮದಲ್ಲಿ  ತೀರಿಸಲು  ಬಡತನ  ವರವಾಗಲೂಬಹುದು ಶಾಪವಾಗಲೂಬಹುದು. ವರವೆಂದು ತಿಳಿಯುವ ಜ್ಞಾನ ಬೇಕು. ತಿಳುವಳಿಕೆಯೇ ಇಲ್ಲವಾದರೆ ಅದೇ ದೊಡ್ಡ ಸಮಸ್ಯೆ.
 ದಾನ ಶೂರ‌ಕರ್ಣ ನಿಗೂ   ಮಹಾದಾನಿಯಾದ  ಬಲಿಚಕ್ರವರ್ತಿಗೂ  ವ್ಯತ್ಯಾಸವಿಷ್ಟೆ. ಇಬ್ಬರೂ ಮಹಾಶೂರರೆ ಆದರೆ  ಕರ್ಣ ನ ಜನ್ಮ ಕಥೆ ಬಲಿಯ ಜನ್ಮಕಥೆ ಬೇರೆ ಬೇರೆ.
ಹಣ ಅಧಿಕಾರವಿಲ್ಲದೆ  ಮುಂದೆ ಬಂದ ಕರ್ಣ  ಕೇಳಿದ್ದನ್ನು ಕೊಡುವಷ್ಟು ದಾನಶೂರನಾದ  ಆದರೆ ಅಂತಿಮವಾಗಿ  ಅದೇ ದೊಡ್ಡ ಶಾಪವಾದಂತಾಯಿತು ಹಾಗೇ ಬಲಿಚಕ್ರವರ್ತಿಯ ದಾನವೂ ಇದೆ ರೀತಿಯಾಗಿದೆ.ಇಲ್ಲಿ ಯಾರ ಹಣವನ್ನು ಯಾರು ಯಾರಿಗೆ ಕೊಡುವರೆಂಬುದರ ಮೇಲಿದೆ‌  ಋಣ ಭಾರ. ಭೂಮಿಯಲ್ಲಿ ಸಾಕಷ್ಟು ಸಂಪತ್ತಿದೆ.ಹಾಗಂತ ಎಲ್ಲವೂ‌ ಮಾನವನೇ ಅನುಭವಿಸಲಾಗದು. ಇಲ್ಲಿಗೆ ಬರುವ ಉದ್ದೇಶ ವೇ ಋಣ ತೀರಿಸುವುದೆಂದಾಗ ಅತಿಯಾಗಿ‌   ಕೊಡುವುದೂ ಪಡೆಯುವುದೂ ಸಾಲವಾಗಿರುತ್ತದೆ ಎನ್ನಬಹುದು. ಬಡತನವನ್ನು ಹಣದಿಂದ ಅಳೆಯಬಹುದು ಗುಣಜ್ಞಾನದಲ್ಲಿ ಅಳೆಯಲಾಗದು.ಹೀಗಾಗಿ  ನಮ್ಮ ಈ ಬಡತನವನ್ನು ನಿವಾರಣೆ ಮಾಡಿಕೊಳ್ಳಲು ಬೇಕಾದ ಜ್ಞಾನ ವನ್ನು ಭಗವಂತ ಕೊಟ್ಟು ಕಳಿಸಿರುವಾಗ ಅದನ್ನು  ಬೆಳೆಸದೆ,ಬಳಸದೆ‌ ಹೊರಗಿನ ಜ್ಞಾನದಿಂದ  ಸಾಧನೆ ಮಾಡಲು ಹೋದರೆ ಹೊರಗಿನ ಸಾಲ ಅತಿಯಾಗಿ ಒಳಗಿದ್ದ ಸಾಲ ಇನ್ನಷ್ಟು ಬೆಳೆಯುತ್ತದೆ.
ಉದಾಹರಣೆಗೆ, ಒಬ್ಬ ರೈತನಿಗೆ ಭೂಮಿ ವರದಾನವಾಗಿರುತ್ತದೆ. ಆ ಭೂಮಿಯನ್ನು ಅವನು ತನ್ನ ಸ್ವಂತ ಬುದ್ದಿ ಜ್ಞಾನದಿಂದ ‌ಎಷ್ಟು ಸದ್ಬಳಕೆ ಮಾಡಿಕೊಂಡು ಅದರಿಂದ ಹಣಗಳಿಸಿ  ಸ್ವತಂತ್ರ ಜೀವನ ನಡೆಸುವನೋ ಆಗವನ ಆತ್ಮತೃಪ್ತಿ ಯಾಗಲು ಸಾಧ್ಯ. ಅದನ್ನು ಮಾರಿಬಂದ ಹಣದಿಂದ ಹೊರಗಿನ ವ್ಯವಹಾರ ನಡೆಸಿ ಇನ್ನಷ್ಟು ಲಾಭಗಳಿಸಿದರೂ  ನಷ್ಟವೂ ಹಿಂದೇ ಇರುತ್ತದೆ.ಭೂಮಿಯ ಸತ್ವ ಉಳಿಯೋದು ಅದನ್ನು ಸರಿಯಾಗಿ ಬಳಸಿದರೆ ಮಾತ್ರ.
ಫಲವತ್ತಾದ ಭೂಮಿಯಲ್ಲಿ  ಕಾರ್ಖಾನೆ ಗಳು ಮನೆಗಳು ಎದ್ದು ನಿಂತರೆ  ಫಲವಿಲ್ಲ.ಹೀಗೇ ಪ್ರತಿಯೊಂದು  ಸ್ಥಳಕ್ಕೂ ಅದರದೇ ಆದ ವಿಶೇಷ ಸ್ಥಾನಮಾನವಿರುತ್ತದೆ. ಒಂದು ದೇವಸ್ಥಾನ ಕಟ್ಟುವುದು ಕಷ್ಟ.ಅದರೊಳಗೆ ದೇವರನ್ನು ನಿಲ್ಲಿಸುವುದು ಇನ್ನೂ ಕಷ್ಟ.ನಿಂತ ದೇವರನ್ನು ಸಾಕುವುದು ಬಹಳ ಕಷ್ಟ. ಕಾರಣ ದೇವರು ಕಣ್ಣಿಗೆ ಕಾಣದ ಶಕ್ತಿ.ಎಲ್ಲಾ ಕಡೆ ಇದ್ದರೂ ಒಂದು ಕಡೆ ನಿಲ್ಲಿಸಿ  ನೋಡೋದು ಕಷ್ಟದ ಕೆಲಸ.
ಇದಕ್ಕಾಗಿ ಸಾಕಷ್ಟು ಜನಬಲ ಹಣಬಲವಿದ್ದರೂ ಜ್ಞಾನದಬಲ ಇಲ್ಲವಾದರೆ ಯಾತ್ರಸ್ಥಳಹೋಗಿಪ್ರವಾಸಿತಾಣವಾಗಬಹುದು. 
ಪ್ರವಾಸದಲ್ಲಿ ಭಕ್ತಿಯ ಕೊರತೆಯಿದ್ದರೆ  ಜೀವನ ಯಾತ್ರೆಯಾಗದು.
 ಒಟ್ಟಿನಲ್ಲಿ ಬಡತನವನ್ನು ವರವಾಗಿ ಸ್ವೀಕರಿಸಿದ ಹಿಂದಿನ ಮಹಾತ್ಮರಂತೆ ನಾವಿಲ್ಲ.ಆದರೆ  ಅವರಿಗಿಂತ  ಹೆಚ್ಚು ಹೆಸರು ಹಣ ಅಧಿಕಾರ ಸ್ಥಾನಮಾನ  ಪಡೆಯುವವರು ನಮ್ಮೊಳಗಿದ್ದಾರೆಂದರೆ ಅಜ್ಞಾನವೆಂದರ್ಥ. ಅಜ್ಞಾನದಲ್ಲಿ ನಾವು ಹೆಚ್ಚಾಗಿ ‌ಬಯಸೋದು  ಹೆಸರು,ಹಣ ಅಧಿಕಾರ ಸ್ಥಾನಮಾನ ಇದು ಪರಮಾತ್ಮನ ಹತ್ತಿರ ಹೋಗಲು ಇರುವ ಅಡ್ಡಿಗಳೆಂದು ಇದರಿಂದ ದೂರವಿದ್ದವರನ್ನು ಬಡವರೆಂದರೆ ನಿಜವಾದ ಬಡತನ  ಯಾವುದರಲ್ಲಿರುತ್ತದೆ? 
ಹಿಂದೆ ಮನೆತುಂಬ ಮಕ್ಕಳು ಇದ್ದು ದುಡಿಯುವ‌ಕೈಗಳು ಕಡಿಮೆಯಿದ್ದ ಕಾರಣ ಹಣದ ಕೊರತೆಯಲ್ಲಿ ಪಾಲಿಗೆ ಬಂದದ್ದು ಪಂಚಾಮೃತವಾಗಿ ಹಂಚಿ ಹೊಂದಿಕೊಳ್ಳುವ ಗುಣವಿತ್ತು.ಈಗಿದು‌ಬದಲಾಗಿದೆ ಮನೆಮಂದಿಯೆಲ್ಲಾ ದುಡಿಯುತ್ತಾರೆ‌  ಮಕ್ಕಳಿಲ್ಲ.  ಇದ್ದರೂ  ಅವರಿಗೆ ಕಷ್ಟದ ಅರಿವಿಲ್ಲದೆ ಬೆಳೆಸಿ ಕೊನೆಯಲ್ಲಿ ಸಂಪತ್ತಿಗಾಗಿ  ಪೋಷಕರನ್ನೇ ಆಪತ್ತಿಗೆ ತಳ್ಳಿ ಹೋಗುವವರಿದ್ದಾರೆ. ಸಾಲ ಎಂದರೆ ಏನು ಎನ್ನುವ ಸಾಮಾನ್ಯ ಜ್ಞಾನದ ಕೊರತೆಯೇ ಇದಕ್ಕೆಲ್ಲಾ ಕಾರಣ.
ಹಣದಿಂದ ಸಾಲ ತೀರಿಸುವುದಾಗಿದ್ದರೆ ದೇಶದ ತುಂಬಾ ಹಣವಂತರಿದ್ದಾರೆ ಆದರೆ ಅವರಿಗೆ ದೇಶದ ಸಾಲ ತೀರಿಸುವ‌ಜ್ಞಾನದ ಕೊರತೆಯಿಂದ. ಮೈತುಂಬ ಸಾಲವಿದ್ದು ಜೀವಹೋದರೂ ಸರಿ  ಸದ್ಬಳಕೆ ಮಾಡಲಾಗುತ್ತಿಲ್ಲ.ಇದು ಎಲ್ಲಾ ದೇಶದಲ್ಲಿಯೂ ಇದ್ದರೂ ಭಾರತದಂತಹ ಮಹಾದೇಶಕ್ಕೆ ನುಂಗಲಾರದ ತುತ್ತಾಗಿದೆ. ಜನರಿಗೆ ಉಚಿತಕೊಟ್ಟು ಇನ್ನಷ್ಟು ಸಮಸ್ಯೆ ಏರಿಸುವ‌ಬದಲಾಗಿ ಯಾರಿಗೆ ನಿಜವಾಗಿಯೂ ಅಗತ್ಯವಿದೆಯೋ ಅದನ್ನು ಖಚಿತಪಡಿಸಿಕೊಂಡು ಕೊಟ್ಟು  ಹಿಂದಿರುಗಿಸಲು  ಉದ್ಯೋಗ ಕೊಟ್ಟರೆ ಉತ್ತಮ. 
ಎಷ್ಟೋ ಯುವಪೀಳಿಗೆ ಶ್ರೀಮಂತ ರಾಗಿದ್ದರೂ  ಹಣದ ದುರ್ಭಳಕೆ ಯಿಂದಾಗಿ ಸಾಲದ ಹೊರೆ ಹೊತ್ತು ಭ್ರಷ್ಟರ ವಶದಲ್ಲಿದ್ದಾರೆಂದರೆ  ಇವರಲ್ಲಿದ್ದ ವಿವೇಕ ಶಕ್ತಿಯನ್ನು ಜಾಗೃತಗೊಳಿಸುವುದು ಧರ್ಮ ವಾಗಿದೆ.ಕೆಲವೆಡೆ ನಡೆದಿದೆ.ಹಲವು ಕಡೆ ಅವಿವೇಕಿಗಳೇ ಹೆಚ್ಚಾಗಿದ್ದಾರೆಂದಾಗ ಬಡತನವು ಶಾಪವಾಗಿದೆ. ಉತ್ತಮ ಸಂಸ್ಕಾರದ ಶಿಕ್ಷಣಪಡೆದವರಿಗೆ  ಮಾತ್ರ ಜ್ಞಾನದಿಂದ ಜೀವನ ನಡೆಸೋ ಶಕ್ತಿಯಿದ್ದು ಯಾವ ಸರ್ಕಾರದ ಹಂಗಿರದೆ ಸ್ವತಂತ್ರ ವಾಗಿರುವರು. 
ಕುರುಡು ಕಾಂಚಾಣ ಕುಣಿಯುತಲಿತ್ತು ಕಾಲಿಗೆಬಿದ್ದವರ ತುಳಿಯುತಲಿತ್ತು ಕುರುಡು ಕಾಂಚಾಣ....

ಹಿಂದಿನ ದಾನವರಿಗೂ ಈಗಿನ ದಾನವರಿಗೂ ವ್ಯತ್ಯಾಸವಿದೆ. ಹಿಂದೆ ತಮ್ಮ ಪಾಲಿಗೆ ಬಂದದ್ದರಲ್ಲಿ  ಕೊಟ್ಟು ಕೈಮುಗಿಯುತ್ತಿದ್ದರು.ಈಗ ಬೇರೆಯವರಿಗೆ ಸೇರಬೇಕಾದ್ದನ್ನು ಕಿತ್ತುಕೊಂಡು  ಕೊಟ್ಟು ಕೈಮುಗಿಸಿಕೊಳ್ಳುವರು. ಎಷ್ಟು ಅಂತರವಿದೆ.ಈ ಅಂತರದಲ್ಲಿ ಮಧ್ಯವರ್ತಿಗಳು  ಅವಾಂತರ ಎಬ್ಬಿಸಿ ಜನರನ್ನು ಆಳುತ್ತಿರೋದು ದುರಂತವಷ್ಟೆ. ಏನೇ ಇರಲಿ ಯಾರ ಹಣವನ್ನು ಯಾರೋ ಯಾರಿಗೋ ಕೊಟ್ಟರೂ ಪಡೆದವನು ತೀರಿಸುವವರೆಗೂ ನೆಮ್ಮದಿಯಿರದು.
ಅದಾಗೇ ಬಂದರೆ ಪರಮಾತ್ಮನ  ಕೊಡುಗೆ ಕಿತ್ತು ಪಡೆದರೆ ಪರಕೀಯರ ಉಡುಗೊರೆ. ಉಡುಗೊರೆ ಶಾಶ್ವತವಲ್ಲ.

ಲಕ್ಮಿನಾರಾಯಣರಲ್ಲಿ  ಯಾರು ದೊಡ್ಡವರೆಂದರೆ ಮಾನವ ಲಕ್ಮಿ ಎನ್ನಬಹುದು. ನಾರಾಯಣನ ಹೃದಯದವರೆಗೆ ಹೋಗಿ ಅವಳನ್ನು ಒಲಿಸಿಕೊಂಡು  ಬದುಕುವುದು ಸುಲಭವೆ?

ಹಿಂದಿನ ಸನಾತನ ಧರ್ಮಕ್ಕೂ ಈಗಿನ ಧರ್ಮಕ್ಕೂ ವ್ಯತ್ಯಾಸವಿಷ್ಟೆ ಅಂದಿನ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿತ್ತು ಈಗ  ನಮ್ಮೊಳಗೇ ತಿಳಿಯದೆ ಅಹಂಕಾರ ಹೆಚ್ಚಾಗುತ್ತಿದೆ.

No comments:

Post a Comment