ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Monday, December 11, 2023

ಅನ್ನಬ್ರಹ್ಮನೊಂದಿಗೆ ಅನ್ನಪೂರ್ಣೇಶ್ವರಿ ಇದ್ದರೆ‌ ಆರೋಗ್ಯ

ಬ್ರಹ್ಮನ ಸೃಷ್ಟಿ ಗೆ ಜ್ಞಾನಕೊಡುವ ದೇವಿ,ವಿಷ್ಣುವಿನ ಕಾರ್ಯಕ್ಕೆ ಲಕ್ಮಿಯ ಸಹಕಾರ, ಶಿವನ ಕಾರ್ಯದಲ್ಲಿ ಸಮನಾಗಿ ನಿಂತು ನಡೆಸೋ ಸ್ತ್ರೀ ಶಕ್ತಿಯನ್ನು  ಅರ್ಥ ಮಾಡಿಕೊಳ್ಳಲು ಸೋತರೆ ಭೂಮಿಯಿಂದ ಜೀವಾತ್ಮನಿಗೆ ಮುಕ್ತಿಯಿಲ್ಲ ಅತೃಪ್ತ ಆತ್ಮಗಳ ಭೂಲೋಕವಾದರೆ ನರಕ. ನರಕಾಸುರನ ವಧೆ ಮಾಡಿದ ಶ್ರೀ ಕೃಷ್ಣ ನಿಗೆ ಹದಿನಾರು ಸಾವಿರ ಸ್ತ್ರೀ ಯರೊಂದಿಗೆ ಮದುವೆ ಆಯಿತಂತೆ. ಒಂದು ಸ್ತ್ರೀ ಜನ್ಮ ಸಾರ್ಥಕ ವಾಗೋದು ವಿವಾಹದಿಂದ ಎಂದರೆ  ವಿವಾಹವು ಒಂದು ದೇವತಾಕಾರ್ಯವಾಗಿದೆ. ಶಾಸ್ತ್ರದ ಪ್ರಕಾರ ನಡೆಸೋ ವಿವಾಹದಿಂದ ಉತ್ತಮ ಸಂತಾನವನ್ನು ಮುಂದೆ ಪಡೆಯುವರೆನ್ನುವುದು ಹಿಂದೂ ಸನಾತನ ಧರ್ಮ ತಿಳಿಸಿದೆ.
ಈಗಿನ ಸ್ಥಿತಿಯಲ್ಲಿ  ವಿವಾಹವೇನೋ ವೈಭವದಿಂದ ನಡೆಯುತ್ತದೆ. ಆದರೆ ಅಲ್ಲಿ ಶಾಸ್ತ್ರ ಸಂಪ್ರದಾಯ ವೇದ ಪಠಣಗಳಲ್ಲಿ  ಕಡಿವಾಣವಿರುತ್ತದೆ. ಜನಸಾಗರವಿದ್ದರೂ ಅವರನ್ನು  ಉಪಚರಿಸುವುದೇ ದೊಡ್ಡ ಸಮಸ್ಯೆಯಾಗುತ್ತದೆ.ಹಾಗಾಗಿ ಅನ್ನದಾನದಿಂದ ಸಂತೋಷ ಪಡಲು ಅನೇಕ  ರೀತಿಯಲ್ಲಿ  ವಿಶೇಷ ಭೋಜನವಿರುತ್ತದೆ. ಅನ್ನಬ್ರಹ್ಮನ ನೆನಪಿಸಿಕೊಂಡು ಅನ್ನಪೂರ್ಣ ವಾದಾಗ‌ಜ್ಞಾನ ಹೆಚ್ಚುವುದು. ಇದನ್ನು ಪ್ರತಿದಿನದ ಊಟದಲ್ಲಿಯೂ ಮಾಡಿದಾಗ ನಾವು ತಿಂದ ಅನ್ನವು  ಒಂದು ಯಜ್ಞ ದ ರೂಪದಲ್ಲಿ ಪರಮಾತ್ಮನ ತಲುಪಲು ಸಾಧ್ಯ. ಆತ್ಮ ಕ್ಕೆ ಜ್ಞಾನದ ಹಸಿವಿರೋದರಿಂದ ಜ್ಞಾನದಿಂದ ಸಂಪಾದಿಸಿದ ಅನ್ನವನ್ನು ಯಜ್ಞ ದ ರೀತಿಯಲ್ಲಿ ಸೇವಿಸಿದರೆ ಒಳಗಿರುವ ಎಲ್ಲಾ ದೇವಾಂಶಗಳಿಗೂ ತಲುಪಿ  ಸಂತೃಪ್ತ ರಾಗಿರುವರು. ಆಗ ದೈವೀಕ ಗುಣ ಸಂಪತ್ತು ಲಭಿಸುವುದು.ಇದೇ ಆರೋಗ್ಯದ ಗುಟ್ಟು. ಅನ್ನಾಹಾರವಿಲ್ಲದೆ ಎಷ್ಟೋ ವರ್ಷಗಳ ತಪಸ್ಸಿನಿಂದ ಪರಮಾತ್ಮನ ಸೇರಿದ ಋಷಿಗಳಾಗಲು ಕಷ್ಟ.ಆದರೆ ಅನ್ನ ಆಹಾರದಲ್ಲಿ ಪರಮಾತ್ಮನ ಸತ್ವವ ಕಂಡು  ಸೇವಿಸುವ ಜ್ಞಾನವಿದ್ದರೆ  ಅದೇ ಖುಷಿ. ಋಷಿಗಳಂತಿರಲಾಗದಿದ್ದರೂ ಸರಿ ಖುಷಿಯನ್ನು ಒಳಗಿನಿಂದ ಬೆಳೆಸಿಕೊಂಡರೆ  ಉತ್ತಮ. 
ಕಲುಷಿತ  ನೀರು ಆಹಾರಗಳನ್ನು ಸೇವಿಸಿಯೂ  ಬದುಕುತ್ತಿರುವ  ಮಾನವನೊಳಗೇ ಅಡಗಿರುವ ದೈವ ಶಕ್ತಿಗೆ 
ಜ್ಞಾನದ ಹಸಿವಿದೆ  ಹೊರಗಿನ ಆಹಾರದ ತಯಾರಿಕೆಯಲ್ಲಿ ಜ್ಞಾನವಿದ್ದರೆ  ಇದು ಆತ್ಮಬಲವನ್ನು ಇನ್ನಷ್ಟು ಹೆಚ್ಚಿಸಿ ದೈವಬಲದಿಂದ  ದೇಹದ ಆರೋಗ್ಯವೃದ್ದಿಯಾಗುತ್ತದೆ . ಒಂದು ಹಿಡಿ ಅನ್ನವಿದ್ದರೂ ಜೀವ ಬದುಕುತ್ತದೆ ಆದರೆ ಇದು ಸಾತ್ವಿಕ ಜ್ಞಾನದಿಂದ ಸಂಪಾದಿಸಿದ್ದರೆ ಸಂತೃಪ್ತಿ. ಶಿಷ್ಟಾಚಾರದ ಸಂಪಾದನೆಯಲ್ಲಿ ಸತ್ಯಜ್ಞಾನವನ್ನು  ಕಾಣಬಹುದು.ಇದು ದೈವೀಕ ಸಂಪತ್ತು. ದೇಹವೇ ದೇಗುಲವಾದಾಗ ಅದರೊಳಗೆ ನಾವು ಹಾಕುವ ಆಹಾರ ವಿಷಯಗಳು ಹೇಗಿರಬೇಕಿತ್ತು? .
ಆರೋಗ್ಯವು ಯೋಗದಿಂದ ವೃದ್ದಿಯಾದರೆ ಮುಕ್ತಿ.

No comments:

Post a Comment