ನಾವ್ಯಾರ ವಶದಲ್ಲಿರೋದು?
ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...
Sunday, November 26, 2023
ಎಲ್ಲದ್ದಕ್ಕೂ ಇತಿಮಿತಿ ಇರಬೇಕು
ಎಲ್ಲದ್ದಕ್ಕೂ ಒಂದು ಇತಿಮಿತಿಯಿರಬೇಕೆಂದು ಎಲ್ಲರಿಗೂ ತಿಳಿದ ವಿಚಾರ.ಆದರೆ ಇತಿಮಿತಿ ಯಾವುದರಲ್ಲಿರಬೇಕೆಂಬುದೇ ಪ್ರಶ್ನೆಯಾಗಿದೆ. ಭ್ರಷ್ಟಾಚಾರ, ಸಾಲ, ಮನರಂಜನೆ, ಆಸ್ತಿ,ಅಂತಸ್ತು, ಹೆಸರು,ಹಣದ ವಿಚಾರ ಬಂದಾಗ ಆಸೆ ಎದ್ದು ನಿಲ್ಲುತ್ತದೆ. ಆಸೆಯನ್ನು ಹಿಡಿತದಲ್ಲಿಟ್ಟುಕೊಳ್ಳದೆ ಮಿತಿ ಮೀರಿ ಬೆಳೆದಾಗwaegಲೇ ಮೇಲಿರುವ ಎಲ್ಲಾ ಸೇರುವುದು. ಸೇರಿದಂತೆಲ್ಲಾ ನಾನು ಶ್ರೀಮಂತ ಅದೃಷ್ಟವಂತ,ಪುಣ್ಯವಂತ,ಬುದ್ದಿವಂತ ಎನ್ನುವ ಅಹಂಕಾರದ ಜೊತೆಗೆ ಸ್ವಾರ್ಥ ವೂ ಜೊತೆಯಾಗುತ್ತಾ ಕೊನೆಗೆ ಹಿಂದಿರುಗಿ ಕೊಡುವಾಗ ಕೊಡಲಾಗದೆ ಇಟ್ಟುಕೊಂಡರೂ ಸಂತೋಷ ಸಿಗದೆ ಪರಿತಪಿಸುವಂತಹ ಪರಿಸ್ಥಿತಿಯಲ್ಲಿ ಧರ್ಮದ ಮೊರೆ ಹೊಕ್ಕರೂ ಹೆಚ್ಚುವರಿಯನ್ನು ಹೊರಹಾಕದೆ ಶಾಂತಿ,ಸುಖ ಸಮಾಧಾನ ತೃಪ್ತಿ ಮುಕ್ತಿ ಸಿಗೋದಿಲ್ಲವೆನ್ನುವುದೇ ಸನಾತನ ಧರ್ಮ ತಿಳಿಸುತ್ತದೆ. ಅದಕ್ಕಾಗಿ ಹೆಚ್ಚು ಜ್ಞಾನದ ಸಂಪಾದನೆಯೂ ಹಣವನ್ನು ಕೊಡುತ್ತದೆ. ಆದರೆ ಆ ಹಣ ಸದ್ಬಳಕೆ ಮಾಡುವ ಜ್ಞಾನವಿದ್ದವರು ಎಲ್ಲಾ ಇತಿಮಿತಿಗಳನ್ನು ತಿಳಿದು ನಡೆಯುವರು. ಕೆಲವರು ಅರ್ಧ ಸತ್ಯ ತಿಳಿದವರು ಈ ಕಡೆ ಮುಂದೂ ನಡೆಯದೆ ಹಿಂದೆ ಬರದೆ ಅಡ್ಡದಾರಿಯಲ್ಲಿ ಅಡ್ಡಲಾಗಿರುವರು. ಇವರಿಂದಲೇ ದೊಡ್ಡ ದೊಡ್ಡ ಸಮಸ್ಯೆ ಜನ್ಮತಾಳುವುದು ಹೆಚ್ಚಾಗುತ್ತಿದೆ. ಹಣಕ್ಕಾಗಿ ಭ್ರಷ್ಟ ದುಷ್ಟ ಕಳ್ಳ ಸುಳ್ಳರಿಗೆ ಮಣೆ ಹಾಕುವುದರಿಂದ ಸಮಸ್ಯೆ ಬೆಳೆಯುತ್ತದೆ. ಇವರು ಮಿತಿಮೀರಿದರೆ ಮನುಕುಲಕ್ಕೆ ಕಷ್ಟ ನಷ್ಟ.ಯೋಗಿ ಬಯಸಿದ್ದು ಯೋಗಿಗೆ ಭೋಗಿ ಬಯಸಿದ್ದು ಭೋಗಿಗೆ.ಇವರಿಬ್ಬರ ನಡುವಿರುವವರ ಬಯಕೆಯಿಂದ ರೋಗಿಗಳು ಬೆಳೆದಿರೋದು. ಪರಮಾತ್ಮಜೀವಾತ್ಮನ ಸೇರೋದು ಅಧ್ಯಾತ್ಮಿಕ ಯೋಗ, ಪರದೇಶದೊಳಗೆ ಸ್ವದೇಶ ಸೇರಿಸೋದು ಭೋಗಿಗಳ ಭೌತಿಕ ಯೋಗ. ಇವರಿಬ್ಬರ ನಡುವಿದ್ದು ತಮ್ಮ ಯೋಗಾಭೋಗದ ಲೆಕ್ಕಾಚಾರದಲ್ಲಿ ಕಷ್ಟ ನಷ್ಟ ಅನುಭವಿಸುತ್ತಾ ತಮ್ಮ ಮಾನಸಿಕ ನೆಮ್ಮದಿ ಜೊತೆಗೆ ಎಲ್ಲರ ಮನಸ್ಸನ್ನೂ ಕೆಡಿಸಿ ಆರೋಗ್ಯ ಹಾಳು ಮಾಡೋದು ಮಧ್ಯವರ್ತಿಗಳ ರೋಗಕ್ಕೆ ಕಾರಣ. ದೇವಾಸುರರ ನಡುವಿನ ಮಾನವನ ರೋಗಕ್ಕೆ ಇದೇ ಕಾರಣವಾದಾಗ ಆರೋಗ್ಯದ ಕಡೆಗೆನಡೆಯಲು ದೈವಗುಣಸಂಪತ್ತು ಅಗತ್ಯವಿದೆ. ಇದುಭೌತಿಕ ಸಂಪತ್ತಿನೆಡೆಗೆ ವಿಪರೀತವಾಗಿ ಬೆಳೆದರೆ ಅಸುರಿ ಶಕ್ತಿಯಿಂದ ಆಪತ್ತು. Ferrer's dresser Ferrer's r
Subscribe to:
Post Comments (Atom)
-
ಇವತ್ತಿನ ವಿಶೇಷ ಲೇಖನದಲ್ಲಿ ಎಲ್ಲಾ ವಿಷಯದ ಮೂಲವೇ ವ್ಯವಹಾರವಾಗಿದೆ ಎನ್ನುವುದಾಗಿದೆ. ಇದು ಸತ್ಯವೆ ಅಸತ್ಯವೆ ನಿಮ್ಮಭಿಪ್ರಾಯ ತಿಳಿಸಿ ಸಕ್ಕರೆಯಲ್ಲಿ ವಿಷವಿದೆ ಎನ್ನುವುದ...
-
ಚಿಂತೆ ಚಿತೆಗೆ ಸಮಾನವೆನ್ನುವರು. ಚಿಂತೆಯಿಲ್ಲದ ಮನುಷ್ಯನಿಲ್ಲ.ಚಿಂತೆಯಿಲ್ಲದ ಮಹಾತ್ಮರಿದ್ದರು. ಮಹಾತ್ಮರ ಚಿಂತನೆಗಳು ಸತ್ವಪೂರ್ಣ ವಾದ ಕಾರಣ ಆಗೋದೆಲ್ಲಾ ಒಳ್ಳೆಯದಕ್ಕೆ, ಆ...
-
ಸಾಮಾನ್ಯವಾಗಿ ಆತ್ಮಜ್ಞಾನ ಪಡೆದ ಮಹಾತ್ಮರನ್ನು ಗಮನಿಸಿದರೆ ಅವರಲ್ಲಿ ಮುಗ್ದತೆಯೇ ಪ್ರಾರಂಭದ ಶಿಕ್ಷಣವಾಗಿತ್ತು ಗುರು ಭಕ್ತಿ ಗುರುವಿನ ಮೇಲಿರುವ ಭಯದಿಂದ ಉತ್ತಮ ಜ್ಞಾನದ ಶಿ...
No comments:
Post a Comment