ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, November 15, 2023

ಭಗವಂತ ಅಧರ್ಮಕ್ಕೆ ಸಹಕರಿಸುವನೆ?

ಬದುಕಿರುವಾಗ  ಅರ್ಥ ವಾದ ಸತ್ಯವನ್ನು  ಹೇಳುವ ಅಧಿಕಾರವಿದ್ದರೆ ಅದನ್ನು ಕೇಳೋರು ಹಲವರು.ಅದೇ ಸತ್ಯ ಸತ್ತನಂತರ ಬೇರೆಯವರು ಹೇಳಿದರೆ  ವಿರೋಧಿಸುವವರೂ ಅನೇಕರು ಆಗಿರಬಹುದು. ಕಾರಣ  ಅನುಭವದಿಂದ ಒಬ್ಬರು ತಿಳಿದದ್ದೇ ಇನ್ನೊಬ್ಬರ ಅನುಭವವಾಗಿರದು ಇದರಲ್ಲಿ ಅಸತ್ಯವಿದ್ದರೆ ವಿರೋಧವಿರುತ್ತದೆ. ಶ್ರೀ ಶಂಕರಭಗವತ್ಪಾದರು  ಅಂದಿನ ಕಾಲದಲ್ಲಿದ್ದ  ಅಧರ್ಮ ವನ್ನು  ಹೋಗಿಸಲು  ಒಬ್ಬಂಟಿಯಾಗಿ ಸತ್ಯದೆಡೆಗೆ ನಡೆಯಲು ಅಂದಿನ ಸಮಾಜದ ವಿರೋಧವಿತ್ತು.ಆದರೂ ವಾದದಲ್ಲಿ ಗೆದ್ದು ಜಗದ್ಗುರುಗಳಾದರು. ಸತ್ಯಸಂಶೋಧನೆಗೆ ಆತ್ಮಸಾಕ್ಷಿಯ ಅಗತ್ಯವಿದೆ. ಹೊರಗಿನವರ ಕಣ್ಣಿಗೆ  ನಮ್ಮ ಅನುಭವ ತಿಳಿಸಬೇಕಾದರೆ ಅವರೂ  ಆ ಅನುಭವವದೆಡೆಗೆ  ನಡೆದಿದ್ದರೆ  ಒಪ್ಪಬಹುದು. ಒಟ್ಟಿನಲ್ಲಿ ಒಂದೇ ಸತ್ಯ  ಒಂದೇ ವ್ಯಕ್ತಿ ಒಂದೇ ದೇಶ, ಒಂದೇ ಧರ್ಮದೊಳಗಿದ್ದು  ಹೊರಗಿನ ಅನೇಕವನ್ನು ಒಂದು ಮಾಡೋದು‌ ಬದುಕಿರುವಾಗ ಕಷ್ಟ. ಹಾಗಾಗಿ ಸತ್ಯದಲ್ಲಿ ಬದುಕುವುದೇ ಕಷ್ಟವಾದವರೂ‌ ಅಸತ್ಯದ ಪರ ನಿಂತಾಗ ಅಸತ್ಯದ ಬದುಕಾಗುತ್ತದೆ.  
"ಬ್ರಹ್ಮನ್ ಸತ್ಯ ಜಗತ್ ಮಿಥ್ಯ," "ಅಹಂ ಬ್ರಹ್ಮಾಸ್ಮಿ" "ತತ್ವಮಸಿ" ಇವುಗಳಲ್ಲಿ ಅಡಗಿರುವ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಅಧಿಕಾರ ಹಣ ಜನರ ಅಗತ್ಯವಿಲ್ಲವಾದರೂ  ಅವರಿಂದಲೇ  ಅರ್ಥ ಮಾಡಿಸುವ ಜಗತ್ತಿನಲ್ಲಿದ್ದೇ ತಿಳಿಯಬೇಕಿದೆ. ಎಲ್ಲೋ ಕಾಣದ ಜಗತ್ತಿನಲ್ಲಿ ಕುಳಿತು ತಪಸ್ಸು ಮಾಡಿದವರಿಗೂ  ಇದರ ಅನುಭವವಾಗದು. ಇದನ್ನು  ಅಧ್ವೈತ, ದ್ವೈತ ವಿಶಿಷ್ಟಾದ್ವೈತ ಗಳಲ್ಲೂ  ಒಂದಾಗಿ ಕಾಣೋದು ಮುಖ್ಯವಾಗಿದೆ. 
ಸಂನ್ಯಾಸಿಗಳ ಅನುಭವ ಜ್ಞಾನ ಸಂಸಾರಿಗಳಿಗಿರದು,
ಸಂಸಾರಿಗಳ ಅನುಭವ ಜ್ಞಾನ ಸಂನ್ಯಾಸಿ ಅನುಭವಿಸಲಾಗದು. ಹೀಗಿರುವಾಗ ಸಂನ್ಯಾಸಿಗೆ ಸಂನ್ಯಾಸಿಯೇ  ಸತ್ಯ ತಿಳಿಸಿದರೂ  ಅವರವರ ನಡುವಿನ ಶಿಷ್ಯರು ಬಿಡರು.ಇದು  ಇಂದಿನ ಸ್ಥಿತಿಗೆ ಕಾರಣ. ಸ್ವತಂತ್ರ ವಾಗಿರುವ ಸತ್ಯ ಒಳಗಿತ್ತು.ಮಿಥ್ಯ ಹೊರಗೆ ಬೆಳೆಯಿತು. ಇವೆರಡರ ನಡುವಿನ ರಾಜಕೀಯ ಜನರನ್ನೇ ಆಳಲು ಹೊರಟಿತು. 
ಇದಕ್ಕೆ  ಪರಿಹಾರ ಮಾರ್ಗ ಒಂದೇ  ಪ್ರತಿಮೆಗಳ ಹೆಸರಿನಲ್ಲಿ ಜನರನ್ನು ಒಂದಾಗಿಸೋ ಬದಲು  ಪ್ರತಿಭೆ ಹಾಗು ಜ್ಞಾನಗುರುತಿಸಿ ಬೆಳೆಸುವ ಶಿಕ್ಷಣ ಕೇಂದ್ರ‌ತೆರೆದು ಉತ್ತಮಜ್ಞಾನಿಗಳಿಗೆ ಶಿಕ್ಷಕ ಸ್ಥಾನ ನೀಡಿ ಜೊತೆಗೆ ದೇವಸ್ಥಾನ ವಿದ್ದರೆ  ಮಕ್ಕಳು ದೇವರ ಸನ್ನಿದಿಯಲ್ಲಿದ್ದೇ ಸತ್ಯ ಧರ್ಮದ ಪಾಠ ಕಲಿಯಬಹುದು. ಒಂದು ಪ್ರತಿಮೆಯಿಂದ ಅಸಂಖ್ಯಾತ ಜನರು ಒಮ್ಮೆ ಬೇಟಿನೀಡಿ  ಪ್ರವಾಸ ಮಾಡಬಹುದು. ಅದೇ ಸ್ಥಳದಲ್ಲಿ ಶಾಲೆಯಿದ್ದರೆ ಅಸಂಖ್ಯಾತ ಮಕ್ಕಳ ಜ್ಞಾನೋದಯದ ಕೇಂದ್ರವಾಗಬಹುದು. ಪೋಷಕರಾದವರು ತಮ್ಮ ಮಕ್ಕಳ ಜ್ಞಾನ ಬೆಳೆಸಲು ಹಣ ನೀಡುವುದರಿಂದ  ದಾನ ಧರ್ಮ ಕಾರ್ಯ ಕ್ರಮವಾಗುತ್ತದೆ. ಲಕ್ಷಾಂತರ ಕೋಟ್ಯಾಂತರ  ಹಣದಿಂದ  ಯಾರಾದರೂ ಜ್ಞಾನಿಗಳಾಗಿರುವರೆ?  ಎತ್ತ ಸಾಗುತ್ತಿದೆ ಭಾರತ? 

ಒಮ್ಮೆ ಸಂದರ್ಶಕರೊಬ್ಬರು ರಮಣರನ್ನು ಕೇಳಿದರು, ದೇವರು  ಈ ಭೂಮಿಯ ಮೇಲೆ ಇಷ್ಟೊಂದು ಅನ್ಯಾಯಗಳು ನಡೆಯುತ್ತಿದ್ದರೂ ಸುಮ್ಮನೆ ಏಕಿದ್ದಾನೆ, ಏಕೆ ಎಲ್ಲಾ ಅನ್ಯಾಯಗಳಿಗೆ ಅನುಮತಿಸುತ್ತಾನೆ ಮತ್ತು ನಮ್ಮಲ್ಲಿ ಏಕೆ ಇಷ್ಟೊಂದು ಕೊರತೆಗಳಿವೆ..? ಎಂದು 

ಮಹರ್ಷಿ ಉತ್ತರಿಸಿದರು, ದೇವರ ಬಳಿಗೆ ಹೋಗಿ ಅದರ ಬಗ್ಗೆ ನೀನು ಕೇಳು. ನೀವು ಒಪ್ಪಿಕೊಂಡಂತೆ ನೀವು ಅವನ ಬಳಿಗೆ ಹೋಗಲು ಸಾಧ್ಯವಾಗದಿದ್ದರೆ, ಪ್ರಶ್ನೆಯನ್ನು ಹೇಗೆ ಕೇಳುವುದು..? ದುರ್ಬಲರಿಗೆ ಇಲ್ಲಿ ಮುಕ್ತಿ ಸಿಗುವುದಿಲ್ಲ ಎಂದು 

ಇನ್ನೊಂದು ಪ್ರಶ್ನೆಗೆ ಉತ್ತರವಾಗಿ, ಮಹರ್ಷಿ ಹೇಳಿದರು, ದೇಹವು ಇರುವವರೆಗೆ, ಕೆಲವು ಚಟುವಟಿಕೆಗಳು ಸಂಭವಿಸುತ್ತವೆ. ನಾನೇ ಮಾಡುವವನು’ ಎಂಬ ಧೋರಣೆಯನ್ನು ಮಾತ್ರ ಬಿಡಬೇಕು. ಚಟುವಟಿಕೆಗಳು ಅಡ್ಡಿಯಾಗುವುದಿಲ್ಲ. ಇದು ನಾನು ಮಾಡಿದ್ದೇನೆ ಎಂಬ ಮನೋಭಾವ. ಅದು ಅಡಚಣೆಯಾಗಿದೆ. ಇದಲ್ಲದೆ, ಬಾಹ್ಯ ವಸ್ತುವಿನ ಅಗತ್ಯವಿರುವವರೆಗೆ ಸಂತೋಷಕ್ಕಾಗಿ, ಅಪೂರ್ಣತೆಯ ಭಾವನೆ ಉಂಟಾಗುತ್ತದೆ. ಆತ್ಮನೊಬ್ಬನೇ ಇದ್ದಾನೆ ಎಂದು ಭಾವಿಸಿದಾಗ, ಶಾಶ್ವತ ಸಂತೋಷವು ಉಳಿಯುತ್ತದೆ.

ಧ್ಯಾನಿಸುವಾಗ ನಾನು ಅವನ ಕಣ್ಣುಗಳನ್ನು ನೋಡಬೇಕೇ ಅಥವಾ ಅವನ ಮುಖವನ್ನು ನೋಡಬೇಕೇ ಅಥವಾ ನನ್ನ ಕಣ್ಣುಗಳನ್ನು ಮುಚ್ಚಿ ನಿರ್ದಿಷ್ಟ ವಸ್ತುವಿನ ಮೇಲೆ ಕೇಂದ್ರೀಕರಿಸಬೇಕೇ ಎಂದು ನಾನು ಕೇಳಿದಾಗ, ಅವರು ಉತ್ತರಿಸಿದರು. ನಿಮ್ಮ ಸ್ವಂತ ನೈಜ ಸ್ವಭಾವವನ್ನು ನೋಡಿ. ಇಲ್ಲಿ ಇರುವುದು ಒಂದೇ, ಎಲ್ಲೆಲ್ಲೂ  ಅದು ಒಂದೇ ಆಗಿದೆ, ಹಾಗಾಗಿ ಕಣ್ಣು ತೆರೆದರೂ ಮುಚ್ಚಿದರೂ ಒಂದೇ. ನೀವು ಧ್ಯಾನ ಮಾಡಲು ಬಯಸಿದರೆ, ನಿಮ್ಮಲ್ಲಿರುವ ನಾನು ಮೇಲೆ ಮಾಡಿ. ಅದುವೇ  ಇದು ಆತ್ಮ.

 - ಶ್ರೀ ರಮಣ ಮಹರ್ಷಿಯೊಂದಿಗೆ ಮುಖಾಮುಖಿ ಸ್ವಾಮಿ ಮಾಧವತೀರ್ಥ.

No comments:

Post a Comment