ಯೋಗಕ್ಕಾಗಿ ಕಷ್ಟಪಟ್ಟವರು ಮಹಾತ್ಮರೆನಿಸಿಕೊಂಡರು.
ಭೋಗಕ್ಕಾಗಿ ಕಷ್ಟಪಟ್ಟವರು ಅಸುರರೆನಿಸಿದರು. ಕಷ್ಟನಷ್ಟ ಪಾಪಪುಣ್ಯಗಳನ್ನು ಅಳೆದು ತೂಗುವ ವ್ಯವಹಾರದಲ್ಲಿ ಸತ್ಯಜ್ಞಾನ ಮಿಥ್ಯಜ್ಞಾನದ ನಡುವೆ ಸಾಮಾನ್ಯ ಜ್ಞಾನವೂ ಅಡಗಿದೆ. ಹಾಗಾಗಿ ಮಧ್ಯವರ್ತಿ ಮಾನವ ಸಾಮಾನ್ಯರಂತಿದ್ದು ಜೀವನದ ಸತ್ಯಾಸತ್ಯತೆಯನ್ನು ತಿಳಿಯುವುದೇ ಧರ್ಮ ವಾಗಿದೆ. ಯಾರೋ ಹಿಂದೆ ಮುಂದೆ ನಿಂತು ಹೇಳೋದು ಅವರ ಜ್ಞಾನವಾಗಿರುವುದು.ಅದರಲ್ಲಿ ಸತ್ಯಾಸತ್ಯತೆಯನ್ನು ತಿಳಿಯುವುದಕ್ಕೆ ಅದರೊಳಗೆ ಹೊಕ್ಕಿ ತನ್ನ ಆತ್ಮಸಾಕ್ಷಿಗೆ ದಕ್ಕೆ ಬರದಂತಿರೋದುಬಹಳ ಕಷ್ಟದ ಕೆಲಸ.ಹಾಗಾಗಿ ಎಷ್ಟೋ ಸ್ತ್ರೀ ಯರು ತಮ್ಮ ಜ್ಞಾನವನ್ನು ಬಿಟ್ಟು ಪರರ ಜ್ಞಾನವನ್ನು ಬೆಳೆಸಿ ಭೂಮಿಯ ಸತ್ಯ ಸತ್ವ ತತ್ವಕ್ಕೆ ದಕ್ಕೆಯಾಗುತ್ತಿದ್ದರೂ ಏನೂ ಮಾಡದ ಪರಿಸ್ಥಿತಿಯಲ್ಲಿ ಸಂಸಾರದ ಒಳಗೆ ಹೊರಗೆ ದುಡಿದರೂ ಗೌರವದ ನಿರೀಕ್ಷೆಯಲ್ಲಿರೋದು ಭಾರತದಂತಹ ದೇಶಕ್ಕೆ ನುಂಗಲಾರದ ತುತ್ತಾಗಿದೆ. ಹಣವಿದ್ದರೆ ಮಾತ್ರ ಗೌರವ ಎಂದಾಗ ಸಂಪಾದಿಸಲು ಹೊರಗಿನ ಜ್ಞಾನ ಬೇಕು. ಅಧ್ಯಾತ್ಮ ಜ್ಞಾನಕ್ಕೆ ಬೆಲೆಕೊಡದವರೊಂದಿಗೆ ಎಷ್ಟು ದುಡಿದರೂ ವ್ಯರ್ಥ. ನಮ್ಮ ಭಾರತೀಯ ಗೃಹಿಣಿಯರಿಗೆ ಗೃಹಲಕ್ಮಿ ಯೋಜನೆಯ ಮೂಲಕ ಸರ್ಕಾರ ಹಣ ನೀಡುವ ಪರಿಸ್ಥಿತಿ ಬಂದಿರೋದು ದುರಂತ. ಎಷ್ಟೋ ಮಹಿಳೆಯರ ಮೈತುಂಬಾ ಒಡವೆ ಹಾಕಿಕೊಂಡರೂ ಮುಗಿಯದಷ್ಟು ಒಡವೆ ಆಸ್ತಿಯಿದೆ.ಆದರೆ ಕಷ್ಟಪಟ್ಟು ಹೊರಗೆ ಒಳಗೆ ದುಡಿದರೂ ಒಂದು ತುಂಡು ಚಿನ್ನ ಖರೀದಿಸಲು ಸಾಲ ಮಾಡುವ ಮಹಿಳೆಯರೂ ಇದ್ದಾರೆ.ಈ ಅಂತರದಲ್ಲಿ ಮೇಲುಕೀಳಿನ ವ್ಯವಹಾರವೇ ಹೆಚ್ಚು ಧರ್ಮದ ದೃಷ್ಟಿಯಿಂದ ನೋಡುವ ಕಣ್ಣಿಲ್ಲ. ಇದನ್ನು ಧಾರ್ಮಿಕ ವರ್ಗ ಸರಿಪಡಿಸಬಹುದೆ? ರಾಜಕೀಯ ಕ್ಷೇತ್ರ ಸರಿಪಡಿಸಲಾಗುವುದೆ? ಧಾರ್ಮಿಕ ಕ್ಷೇತ್ರವೇ ರಾಜಕೀಯದ ಹಿಂದೆ ನಿಂತರೆ ದೊಡ್ಡವರು ಯಾರು? ಲಕ್ಮಿಪೂಜೆಯನ್ನು ಸಾಲ ಮಾಡಿ ಮಾಡಿದರೆ ಅರ್ಥ ವಿಲ್ಲ. ಸಾಲದ ಹಾಗು ಭ್ರಷ್ಟಾಚಾರದ ಹಣದಲ್ಲಿ ಭಗವಂತ ಕಾಣೋದಿಲ್ಲವೆಂದರೆ ಅವನ ಹೃದಯಲಕ್ಮಿ ಒಲಿಯುವಳೆ? ಇತ್ತೀಚೆಗೆ ಪ್ರತಿಮೆಗೆ ಸುರಿಯುವ ಹಣ ದೇಶದ ಸಾಲ ತೀರಿಸಲು ಬಳಸಲಾಗದೆ ದೇಶದ ತುಂಬಾ ವಿದೇಶಿ ಸಾಲ ಹೆಚ್ಚಾಗುತ್ತಿದೆ. ಅವರಕೈಕೆಳಗೆ ದುಡಿದು ತೀರಿಸಲೇಬೇಕೆನ್ನುವ ಮಟ್ಟಿಗೆ ಕಂಪನಿಗಳು ಯುವಕಯುವತಿಯರನ್ನುಸೆಳೆಯುತ್ತಿದ್ದಾರೆ. ಆಸ್ತಿ ಇದ್ದವರನ್ನೂ ದೇಶದಿಂದ ಹೊರಗೆ ಕಳಿಸಿ ಪೋಷಕರು ವೃದ್ದಾಶ್ರಮ ಸೇರುತ್ತಿರುವುದನ್ನೂ ಕಾಣುತ್ತಿದ್ದೇವೆ ಇದರಲ್ಲಿ ಧರ್ಮ ವಿದೆಯೆ? ಎಲ್ಲೋ ಕೆಲವರು ತಮ್ಮ ಹಣ ಬಲ ಜನಬಲದಲ್ಲಿ ಹೆಸರುಗಳಿಸಿ ಸಾಧನೆ ಎಂದರೆ ಅವರ ಹಿಂದೆ ನಡೆದವರ ಗತಿ ಕೇಳೋರಿಲ್ಲ. ಒಟ್ಟಿನಲ್ಲಿ ಜನಮರುಳೋ ಜಾತ್ರೆಯೋ ಎನ್ನುವಂತೆ ಸತ್ಯ ಕಣ್ಣೆದುರೇ ಇದ್ದರೂ ನಂಬದಜನ ಮರುಳಾಗುತ್ತಿರೋದು ಹಣಕ್ಕೆ. ಜ್ಞಾನ ಒಳಗೇ ಕೊಳೆತು ನಾರಿದರೂ ಬಳಸಲಾಗದೆ ಮನಸ್ಸೇ ಹಾಳಾಗುತ್ತಿದೆ.
ಇದಕ್ಕೆ ಸರ್ಕಾರದ ಗೃಹಲಕ್ಮಿ ಯೋಜನೆ ಜಾರಿಗೆ ಬಂದರೂ ಆ ಹಣವನ್ನು ಗೃಹಿಣಿಯರು ಬಳಸಲು ಸ್ವಾತಂತ್ರ್ಯ ವಿದೆಯೆ? ಅಥವಾ ಹೇಗೆ ಬಳಸಬೇಕೆಂಬ ಜ್ಞಾನವಿದೆಯೆ? ಇದ್ದರೆ ಇದರಿಂದ ಮನೆಮನೆಯಲ್ಲಿ ಸುಖ ಶಾಂತಿ ಕಾಣಬಹುದಷ್ಟೆ. ಸರ್ಕಾರದ ಹಣ ಜನರ ಋಣ,ಜನರ ಋಣ ತೀರಿಸಲು ಸೇವೆ ಮಾಡಬೇಕು.ಜನಸೇವೆ ಮಾಡಲು ಹೊರಬರಬೇಕು.ಹೊರಗೆ ಬಂದರೆ ಸಂಸಾರಕ್ಕೆ ತೊಂದರೆ. ಸಂಸಾರಕ್ಕೆ ತೊಂದರೆ ಯಾದರೆ ನಾರಿಮಾರಿಯಾಗಿ ಸಿಡಿದೇಳುವಳು. ಹಾಸಿಗೆ ಇದ್ದಷ್ಟು ಕಾಲುಚಾಚು, ಪಾಲಿಗೆ ಬಂದದ್ದು ಪಂಚಾಮೃತ ಇದಕ್ಕೆ ಅನುಭವಿ ಜ್ಞಾನಿಗಳು ಹೇಳಿರೋದೆನಿಸುತ್ತದೆ. ಮನಸ್ಸಿನ ಸಂತೋಷದ ಜೊತೆಗೆ ಆತ್ಮಸಂತೋಷವಿದ್ದರೆ ಮನೆಯಲ್ಲಿ ನೆಮ್ಮದಿ. ಆತ್ಮಸಂತೋಷಕ್ಕೆ ಆತ್ಮಸಂಶೋಧನೆ ಬೇಕು. ಇಂದಿನ ಭೌತಿಕದ ವಿಜ್ಞಾನ ಸಂಶೋಧನೆಯು ಆಕಾಶದೆತ್ತರ ಬೆಳೆದಿದ್ದರೂ ಕೆಳಗಿರುವ ಭೂಮಿಯನ್ನು ಅರ್ಥ ಮಾಡಿಕೊಳ್ಳಲು ಸೋತರೆ ಮನುಕುಲಕ್ಕೆ ನಷ್ಟ.
No comments:
Post a Comment