ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, November 10, 2023

ಬ್ರಾಹ್ಮಣ ಶೂದ್ರನೆಂಬುದರಲ್ಲಿ ಮೇಲುಕೀಳಿಲ್ಲ

ಒಬ್ಬ ಬ್ರಾಹ್ಮಣ ಶೂದ್ರನಾದರೆ  ಭೌತಿಕದಲ್ಲಿ ಸಾಧನೆ ಮಾಡಬಹುದು‌ ಹಾಗೆಯೇ ಶೂದ್ರ ಬ್ರಾಹ್ಮಣನಾದರೆ ಅಧ್ಯಾತ್ಮ ಸಾಧನೆಯಾಗುತ್ತದೆ.ಇದರಲ್ಲಿ ಮೇಲುಕೀಳೆಂಬುದಿಲ್ಲ.ಸಾಧನೆಗೆ ಪರಿಶ್ರಮ ಅಗತ್ಯವಿದೆ. ಬ್ರಾಹ್ಮಣನೆಂದರೆ ಜಾತಿಯಲ್ಲ ಶೂದ್ರನೆಂದರೂ ಜಾತಿಯಲ್ಲ. ಬ್ರಹ್ಮಜ್ಞಾನವನರಿತವರು ಬ್ರಾಹ್ಮಣ ಸೇವೆಯಿಂದ  ಜ್ಞಾನಿಯಾಗೋದು  ಮಹಾತ್ಮರ ಲಕ್ಷಣವಾಗಿತ್ತು.
ಸೇವೆಯಿಂದಲೇ ಸೇವಕನಾಗೋದು ಇದರಲ್ಲಿ ಪರಮಾತ್ಮನ ಸೇವಕನಾಗೋದಕ್ಕೆ ಪ್ರತಿಯೊಬ್ಬರಲ್ಲಿಯೂ ಅಡಗಿರುವ ಪರಮಾತ್ಮನ ಸೇವೆ  ಮಾಡುವ ಜ್ಞಾನಬೇಕಷ್ಟೆ. ಭಗವಂತನ ತಲೆಯ ಜ್ಞಾನ ಕಾಲಿನವರೆಗೂ ಹರಡಿದೆ. ಮಾನವನ ಚಿಂತನೆಯ  ತಲೆ ಸರಿಯಿಲ್ಲದೆ ಕಾಲಿನ‌ನಡಿಗೆ ಸರಿಯಾಗದು.ಯಾರೂ ಅವರ ಕಾಲನ್ನು ಕೊಟ್ಟು ನೀನು ನಡೆ ಎನ್ನಲಾಗದು.ಆದರೆ ತಲೆ ಬಳಸಿಕೊಂಡು ಇತರರನ್ನು ನಡೆಸಿದವರಿದ್ದಾರೆ.ಅದು ಸರಿದಾರಿಯಾಗಿದ್ದರೆ‌ ನಡಿಗೆಯಿಂದ ಜ್ಞಾನ ಇಲ್ಲವಾದರೆ ಅಜ್ಞಾನ. ಒಟ್ಟಿನಲ್ಲಿ  ನಡೆಯೋದಕ್ಕೆ ಎಲ್ಲರಿಗೂ ಗೊತ್ತಿದೆ  ಅವರವರ ನಡಿಗೆಯಲ್ಲಿ ಯಾರ ಜ್ಞಾನವಿದೆ ಎನ್ನುವುದು ತಿಳಿದಾಗಲೇ ನಮ್ಮ ಕಾಲು ನಮ್ಮ ಹಿಂದಿನವರ‌ಕಾಲಿನಂತೆ ನಡೆದಿದೆಯೋ ಅಥವಾ ಹಿಂದಿರುಗಿದೆಯೋ ತಿಳಿಯಬಹುದು. ಇಲ್ಲಿ ಯಾರೋ ತಿಳಿಸಿದ್ದನ್ನು ಸತ್ಯವೆಂದು ತಿಳಿದವರೆ ಹೆಚ್ಚು. ಹೀಗಾಗಿ ಯಾರದ್ದೋ ಕಾಲವನ್ನು ಕಾಲನ್ನು  ನಮ್ಮದೆಂದು ನಡೆದಾಗ ನಮ್ಮ ಕಾಲಿಗೆ ಶಕ್ತಿಬರದು. ಇದರಿಂದ ಧರ್ಮ ಸತ್ಯ ಬೆಳೆದಿದ್ದರೆ  ಬ್ರಹ್ಮಜ್ಞಾನವಾಗುತ್ತದೆ.ಅಂದರೆ ನಮ್ಮ ಸೃಷ್ಟಿ ಗೆ ಬೆಲೆಯಿರುತ್ತದೆ. ಇಲ್ಲವಾದರೆ  ಕಾಲವನ್ನೇ ಸರಿಯಿಲ್ಲ ಕಾಲೇ ಸರಿಯಿಲ್ಲವೆನಿಸುತ್ತದೆ. ಒಟ್ಟಿನಲ್ಲಿ ಯಾರು ಯಾವ‌ಮಾರ್ಗದಲ್ಲಿ  ನಡೆದರೂ ಆ ಮಾರ್ಗ ಬೆಳೆಯುತ್ತದೆ. ಆಂತರಿಕ ಜ್ಞಾನ ಭೌತಿಕ ವಿಜ್ಞಾನವೆರಡೂ ಒಂದೇ ನಾಣ್ಯದ ಎರಡು ಮುಖವಾಗಿದ್ದರೂ ಆಂತರಿಕ ಜ್ಞಾನ ಬಿಟ್ಟು ಬೌತಿಕವಿಜ್ಞಾನ ಮುಂದೆ ನಡೆದಾಗ  ಒಳಹೊಕ್ಕು ನೋಡುವ ಶಕ್ತಿ ಜೀವಾತ್ಮನಿಗಿರದು. ಹೊರಗಿನ ಶಕ್ತಿಯ ಅಧೀನದಲ್ಲಿ ಬಂಧಿಯಾಗಿರುವಾಗ ಆ ಬಂಧನದಲ್ಲಿ ಇತರರನ್ನೂ ಸಳೆಯುವುದೇ ಅಧರ್ಮ ವಾಗುತ್ತದೆ. ಸೇವೆ ಪರಮಸತ್ಯದಿಂದ ಧರ್ಮ ದಿಂದಾದರೆ  ಪರಮಾತ್ಮನ ಸೇವೆ ಆಗುತ್ತದೆ. ಇದು ಬ್ರಾಹ್ಮಣ,ಕ್ಷತ್ರಿಯ ವೈಶ್ಯ ಶೂದ್ರರಿಗೆ ಒಂದೇ ಆಗಿದ್ದರೂ  ಮೇಲಿನವರು ಕೆಳಗಿಳಿದು ಸೇವೆ ಮಾಡೋದಕ್ಕೂ ಕೆಳಗಿನವರು ಮೇಲೇರಿ ಸೇವಕರಾಗೋದಕ್ಕೂ ವ್ಯತ್ಯಾಸವಿದೆ. ಮೇಲಿನಿಂದ ಕೆಳಗಿಳಿಯುವಾಗ ಅಹಂಕಾರ ಮಾಯವಾಗಿರುತ್ತದೆ.
ಕೆಳಗಿನಿಂದ ಮೇಲೇರುವಾಗ ಆತ್ಮವಿಶ್ವಾಸ ಬೆಳೆದಿರುತ್ತದೆ.ಎರಡೂ ಒಂದೇ  ಇಬ್ಬರಿಗೂ ಪರಮಾತ್ಮನದರ್ಶನವಾಗಿದ್ದರೂ ಅನುಭವದಲ್ಲಿ ವ್ಯತ್ಯಾಸವಿದೆ. ಈ ಅನುಭವವನ್ನು ಸ್ವತಃ ಅನುಭವಿಸಿಯೇ ಅರ್ಥ ಮಾಡಿಕೊಳ್ಳಲು ನಡಿಗೆ ಅಗತ್ಯ. ನಡಿಯದೆ ನುಡಿದರೆ  ಸತ್ಯವಿರದು. 
ಶ್ರೀ ಶಂಕರಾಚಾರ್ಯರಂತೆ ಮದ್ವಾಚಾರ್ಯರಾಗಲಿ ರಾಮಾನುಜಾಚಾರ್ಯ ರಾಗಲಿ  ನಡೆದಿಲ್ಲವಾದರೂ ಅವರ ತತ್ವದ ಉದ್ದೇಶ ಒಂದೇ ಆಗಿತ್ತು. ಆ ತತ್ವವನರಿಯದೆ ಬೇರೆ ಬೇರೆ ಎಂದವರ ನಡಿಗೆಯಲ್ಲಿ ವ್ಯತ್ಯಾಸವಾಗಿ ಪರಮಾತ್ಮನ  ತಿಳಿದ ರೀತಿ ನೀತಿ ಸಂಸ್ಕೃತಿ ಆಚರಣೆಗಳು ಬೆಳೆದವು ಧರ್ಮ ಹಿಂದುಳಿಯಿತು. ಒಂದೇ ಭೂಮಿಯಲ್ಲಿ  ಅಸಂಖ್ಯಾತ ಧರ್ಮ ಜಾತಿ ಪಂಗಡ ವರ್ಗ ಪಕ್ಷವಿದ್ದರೆ  ಒಂದು ಮಾಡೋದು ಕಷ್ಟ.ಆದರೂ ಭಾರತದಂತಹ ಪವಿತ್ರ ದೇಶದಲ್ಲಿ ಸರ್ವ ಮತ ಸಮ್ಮತ ಎನ್ನುವ ಮಂತ್ರವಿದೆ.ಇದನ್ನು ರಾಜಕೀಯಕ್ಕೆ ಬಳಸಿ  ಬೇರೆ ಬೇರೆ ಮಾಡಿದರೆ  ರಾಜಯೋಗವೆಲ್ಲಿರುವುದು? ಲೇಖನಗಳಲ್ಲಿ ಅಡಗಿರುವ ವಾಸ್ತವ ಸತ್ಯವನ್ನು  ಒಪ್ಪಿಕೊಳ್ಳಲು ಕಷ್ಟವಾದರೂ ಸತ್ಯ ಒಪ್ಪಿಕೊಂಡರೆ ಆತ್ಮರಕ್ಷಣೆ  ಆತ್ಮರಕ್ಷಣೆಯಿಂದ ದೇಶರಕ್ಷಣೆ.ದೇಶದ ಧರ್ಮ ಉಳಿಸಲು ಮೇಲಿರುವವರ ಅಹಂಕಾರ ಹೋಗಬೇಕು ಕೆಳಗಿರುವವರ ಆತ್ಮವಿಶ್ವಾಸ ಬೆಳೆಸಬೇಕಿದೆ. ಮೇಲೆ ನಿಂತು ಕೆಳಗಿನಿಂದ ಕಷ್ಟಪಟ್ಟು ಮೇಲೆ ಬರುವವರನ್ನು ಕಾಲಿನಿಂದ ತುಳಿದರೆ  ಧರ್ಮ ವಾಗದು. ಒಟ್ಟಿನಲ್ಲಿ  ಶಂಖದಿಂದ ಬಂದದ್ದಷ್ಟೇ ಸತ್ಯವಲ್ಲ.ಶಂಖವೆಷ್ಟು ಸ್ವಚ್ಚವಾಗಿದೆ ಆರೋಗ್ಯವಾಗಿದೆ  ಎನ್ನುವ ಸತ್ಯ ಮುಖ್ಯವಾಗಿದೆ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಮಾಡಿಕೊಟ್ಟು  ಹೋದರೆ  ಪ್ರಗತಿ ಎಂದರೆ ಮೂರನೆಯವರು ಮಧ್ಯವರ್ತಿಗಳು. ಅರ್ದ ಸತ್ಯ  ಹಿಡಿದರೆ ಅತಂತ್ರ ಜೀವನ. ಅಸತ್ಯವಾದರೂ ಕೊನೆಗೆ ಸತ್ಯದೆಡೆಗೆ ನಿಲ್ಲಬಹುದು ಆದರೆ ಅರ್ಧ ಸತ್ಯಯಾವತ್ತೂ ಅಪಾಯಕಾರಿ. 
ಪ್ರತಿಮೆಗಳ  ಪ್ರದರ್ಶ ನ  ಪ್ರತಿಭೆಗಳ ಪ್ರದರ್ಶನದಲ್ಲಿ ವ್ಯವಹಾರವಿರದೆ ಧರ್ಮದ ತತ್ವ ಇದ್ದರೆ ಒಗ್ಗಟ್ಟು ಏಕತೆ ಐಕ್ಯತೆಗೇನೂ ಕೊರತೆಯಾಗದು. ಒಗ್ಗಟ್ಟಿನಲ್ಲಿದೆ ಬಲ. ಇದು ಭಿನ್ನಾಭಿಪ್ರಾಯ ದ್ವೇಷವನ್ನು ಹುಟ್ಟುಹಾಕದಂತಿರಬೇಕಷ್ಟೆ. ಎಲ್ಲರೊಳಗಿರುವ ಚೇತನಾಶಕ್ತಿಯು ಹೊರಗಣ್ಣಿಗೆ ಕಾಣದೆ ಇದ್ದರೆ  ಅವರು ಅಚೇತನರು ಎನ್ನುವುದು ಸರಿಯಲ್ಲ.ನಮ್ಮ ದೃಷ್ಟಿ ಸರಿಯಿಲ್ಲವೆನ್ನಬಹುದಷ್ಟೆ. ದೃಷ್ಟಿದೋಷಕ್ಕೆ ತತ್ವಜ್ಞಾನ ಪರಿಹಾರ ನೀಡಬಹುದು ತಂತ್ರದಿಂದ ಸಾಧ್ಯವಿಲ್ಲ. ತಂತ್ರದಲ್ಲಿ ಒಂದೇ  ಸತ್ಯವಿರದು.  ಓದುಗರು ಇದನ್ನು ಶೇರ್ ಮಾಡಿಕೊಂಡರೆ‌ ನಷ್ಟವೇನಿಲ್ಲ.ಆದರೂ ಮಾಡೋದಿಲ್ಲ ಇದೇ ಭಾರತೀಯರ ದೊಡ್ಡ ಸಮಸ್ಯೆಗೆ ಕಾರಣ. ಯಾವುದೋ ಚಿತ್ರ  ಹಂಚಿಕೊಳ್ಳುವುದು ಸುಲಭ.ಸತ್ಯ ಹಂಚಿಕೊಳ್ಳಲು ಕಷ್ಟ. ಕಾರಣ ಸತ್ಯವೇ ದೇವರು.ದೇವರನ್ನು ಹಂಚಿಕೊಳ್ಳಲು ಕಷ್ಟವಾದರೂ ಎಲ್ಲರಲ್ಲಿಯೂ ಅವನೇ ಇರೋದಲ್ಲವೆ? ಬೆಳೆದರೆ  ನಮಗೇ ಮುಕ್ತಿ ಸಿಗುತ್ತದೆ.
ವಿಷ್ಣುವಿನವತಾರದಲ್ಲಿ  ಯಾವುದೇ ಜಾತಿ ವರ್ಣ ದ ವರ್ಣನೆ ಮಾಡೋಹಾಗಿಲ್ಲ.  ಭೂಮಿಯಲ್ಲಿ ಧರ್ಮ ರಕ್ಷಣೆಯೇ ಗುರಿಯಾಗಿತ್ತು.  ಇದರಲ್ಲಿ ತಪ್ಪು ಕಂಡರೆ ತಿಳಿಸಿದರೆ ಸರಿಪಡಿಸಬಹುದು. ತಪ್ಪು ಮಾನವನಿಂದ ಆಗುತ್ತದೆ ಸರಿಪಡಿಸಿಕೊಳ್ಳುವುದೂ  ಮನುಷ್ಯತ್ವ.ಮನುಷ್ಯತ್ವಕ್ಕೆ ತತ್ವದ ಅಗತ್ಯವಿದೆ .ಭಾರತದೊಳಗಿದ್ದು ನಾನು ಭಾರತೀಯ ಎಂದರೆ ಸರಿ ವಿದೇಶಕ್ಕೆ ಹೋಗಿ ಹೇಳಿದರೆ ಅರ್ಧ ಸತ್ಯವಲ್ಲವೆ? ಹಾಗೆ ಬ್ರಹ್ಮಾಂಡದೊಳಗಿದ್ದು ಅಹಂ ಬ್ರಹ್ಮಾಸ್ಮಿ ಎಂದರೆ ಸರಿ ಆದರೆ ಬ್ರಹ್ಮಜ್ಞಾನವಿಲ್ಲದೆ ಹೊರಗಿದ್ದರೆ ಸರಿಯಲ್ಲ. ಬ್ರಹ್ಮನ ಅರ್ಥ ಮಾಡಿಕೊಳ್ಳಲು ಮೊದಲು ನಾನ್ಯಾರೆಂಬುದನ್ನು ಅರಿಯಬೇಕು. ನನ್ನಲ್ಲಿ ರುವ ಜ್ಞಾನ ಯಾರದ್ದೆಂದು ಅರ್ಥ ವಾಗಬೇಕು. ನಾನೇ ಪರರ ವಶದಲ್ಲಿರುವಾಗ  ಪರಮಾತ್ಮನ ಅರಿಯಲಾಗದು. ಇದನ್ನು ಹೊರಗಿನಿಂದ ತಿಳಿಯುವುದೂ  ತಾತ್ಕಾಲಿಕ ವಾಗಿರುತ್ತದೆ.ಒಟ್ಟಿನಲ್ಲಿ ಆತ್ಮಾವಲೋಕನ ಕ್ಕೆ ರಾಜಕೀಯದ ಅಗತ್ಯವಿಲ್ಲ. ರಾಜಕೀಯದಲ್ಲಿ ತಂತ್ರವಿರುವ ಕಾರಣ ಸ್ವತಂತ್ರ ಜ್ಞಾನ ಕುಸಿಯುತ್ತದೆ. ಹೊರಗಿನಿಂದ ಬೆಳೆದ ದೇವರನ್ನು ಒಳಗಿರುವ ದೈವತ್ವದೆಡೆಗೆ  ನಡೆಸಬಹುದಾದರೆ  ಬದಲಾವಣೆ  ಸಾಧ್ಯ. ಯಾರನ್ನೂ ಬದಲಾಯಿಸಲು ಹೋಗಿ  ನಮ್ಮ ಮೂಲವನ್ನು ದೂರಮಾಡಿಕೊಂಡರೆ ನಷ್ಟ ನಮಗೇ. ಹೊರಗಿನ ಕಾನೂನಿಗೆ ಶರಣಾದಂತೆ ಒಳಗಿನ ಕಾನೂನಿಗೆ ಶರಣಾದರೆ  ಶರಣರ  ತತ್ವದೊಳಗಿದ್ದ ಸಾಮಾನ್ಯಜ್ಞಾನ ಕಾಣುವುದು. ಮೊದಲು ಮಾನವರಾದರೆ ಮಹಾತ್ಮರೂ ಕಾಣುವರು. 
ಒಟ್ಟಾರೆ ಹೇಳೋದಾದರೆ ಮಾನವನೇ ಮಾಡಿಕೊಂಡಿರುವ  ವ್ಯವಸ್ಥೆಯಲ್ಲಿ  ದೊಡ್ಡ ದೊಡ್ಡ ಅವಸ್ಥೆ ಸೃಷ್ಟಿ ಯಾಗಿ ಸ್ಥಿತಿಗೆ ಕಾರಣವಾಗಿ ಲಯದ ಕಾರ್ಯ  ನಡೆದಿದೆ. ಇದನ್ನು ತಪ್ಪಿಸಲು ಸೃಷ್ಟಿ ಸರಿಯಾಗಿರಬೇಕು. ಅದೇ ಶಿಕ್ಷಣ ಸರಿಯಾಗಬೇಕು. ಅದರಲ್ಲಿ ರಾಜಕೀಯವಿದ್ದರೆ ಮುಗಿಯಿತು ಕಥೆ.ಮಕ್ಕಳ ಜ್ಞಾನಕ್ಕೆ ಬೆಲೆಯೇ ಇರದು. ಪೋಷಕರ  ಸಮಸ್ಯೆಗೆ ಪರಿಹಾರ ಸಿಗದು. ಜನ್ಮಜನ್ಮದ ಕರ್ಮ ಅನುಭವಿಸಲೇಬೇಕೆನ್ನುವುದೇ ಕರ್ಮ ಸಿದ್ದಾಂತ. ಜ್ಞಾನಯೋಗ ಕರ್ಮ ಯೋಗಕ್ಕಿಂತ ದೊಡ್ಡದು ಎಂದರು ಶಂಕರರು. ಆದರೆ ಈಗ ಕರ್ಮ ವಿಲ್ಲದ ಜ್ಞಾನ  ಸಣ್ಣದಾಗುತ್ತಿದೆ. ಅನುಭವವಿಲ್ಲದವರು ಅನುಭವಿಗಳನ್ನೇ  ಕೆಳಗೆ ತಳ್ಳಿ  ಆಳುತ್ತಿರೋದು  ಕಣ್ಣಿಗೆ ಕಾಣುತ್ತಿರುವ ಸತ್ಯವಾಗಿದ್ದರೂ  ತಿಳಿಸೋ ಹಾಗಿಲ್ಲ.ಕಾರಣ ಇವರ  ಹಿಂದೆ ನಡೆದವರಿಗೆ ಸ್ವಂತ ಜ್ಞಾನದ ಕೊರತೆಯಿದೆ.
ಸರ್ಕಾರ ಉಚಿತ ಕೊಟ್ಟು  ಸಾಲದ ಹೊರೆ  ಒಳಗೇ ಬೆಳೆದಾಗ ತೀರಿಸದೆ ಬೇರೆ ದಾರಿಯಿಲ್ಲ ಹೊರಗೇ  ಉಳಿಯಬೇಕಾಗಿದೆ.  ಕಾಲಚಕ್ರ ತಿರುಗುತ್ತದೆ ಇದನ್ನು ನಿಲ್ಲಿಸುವ ಶಕ್ತಿ ಮಾನವನಿಗಿಲ್ಲ. ಎಷ್ಟು ಹಿಂದಿನ ದ್ವೇಷ ಹೊರಹಾಕಿದರೂ  ಹಿಂದುಳಿದವರು ಮುಂದೆ ಬರೋದಿಲ್ಲ. ದ್ವೇಷದಿಂದ ಜ್ಞಾನಬರದು. ಹಣದಿಂದ ದ್ವೇಷ ಅಳಿಯದು.ಆದರೂ ತಾತ್ಕಾಲಿಕ ವಾಗಿ  ಶಾಂತಿ ಸಿಗಬಹುದು. ಋಣ ತೀರಿಸುವುದು ಕಷ್ಟ. ತಂತ್ರವಿರಲಿ ಕುತಂತ್ರವಾಗದಿರಲಿ. ಸ್ವತಂತ್ರ ಭಾರತಕ್ಕೆ ಆತ್ಮಾವಲೋಕನ ಅಗತ್ಯವಿದೆ. ಅಧ್ಯಾತ್ಮ  ದೂರದ ದೇಶಕ್ಕೆ ಪ್ರಚಾರವಾಗಿದ್ದರೂ ನಮ್ಮವರಲ್ಲಿಯೇ  ಇರದಿದ್ದರೆ ಆತ್ಮನಿರ್ಭರ ಭಾರತವಾಗದು. ಪ್ರಯತ್ನ ನಮ್ಮದು ಫಲ ಭಗವಂತನದು.
ಬ್ರಹ್ಮಜ್ಞಾನಿಗಳಾಗಿದ್ದ ಮಹರ್ಷಿಗಳು‌   ಸೃಷ್ಟಿ ಯ ರಹಸ್ಯ ಅರಿತರು. ಆ ಅರಿವಿನಲ್ಲಿ  ಎಲ್ಲಾ ನಡೆಯಲಾಗಿಲ್ಲ ಕಾರಣ  ಜ್ಞಾನದಲ್ಲಿ ವ್ಯತ್ಯಾಸವಾಗಿದೆ. ಒಬ್ಬರ ಜ್ಞಾನ
ಮತ್ತೊಬ್ಬರಿಗೆ ವಿಜ್ಞಾನವೆನಿಸಬಹುದು. ವಿಜ್ಞಾನ ಅಜ್ಞಾನವೂ ಆಗಬಹುದು. ಜ್ಞಾನ ವಿಜ್ಞಾನದ ನಡುವಿರುವ ಸಾಮಾನ್ಯ ಜ್ಞಾನ. ಮಾನವನಿಗೆ  ಅಗತ್ಯವಿದೆ. 

No comments:

Post a Comment