ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Tuesday, November 7, 2023

ಸರಿತಪ್ಪುಗಳ ಲೆಕ್ಕಾಚಾರದಲ್ಲಿ ಲಾಭ ನಷ್ಟಗಳ ಜೀವನ

ಹಲವು ಬಾರಿ  ನಾವು ಸರಿತಪ್ಪು ಲೆಕ್ಕಾಚಾರವನ್ನು  ಪ್ರತಿಫಲಾಪೇಕ್ಷೆ ಯಿಂದಲೇ ನಡೆಸುವುದರಿಂದ ಜೀವನದಲ್ಲಿ ಕಷ್ಟ ನಷ್ಟಗಳೇ ಹೆಚ್ಚಾಗಿರುತ್ತದೆ.ಕಷ್ಟನಷ್ಟಕ್ಕೆ ಕಾರಣವೇ ನಮ್ಮ ವ್ಯವಹಾರಿಕ ಜೀವನವಾದಾಗ ಅದರಲ್ಲಿ ಧರ್ಮ ವ ಅಳವಡಿಸಿ ಕೊಂಡರೆ  ಧರ್ಮದ ಪ್ರಕಾರ ಯಾವುದು ಸರಿ ತಪ್ಪು ಎನ್ನುವ ಸತ್ಯಜ್ಞಾನ  ಹೆಚ್ಚಾಗಿಸ್ವಲ್ಪ ಮಟ್ಟಿಗೆ ಋಣ
ಮುಕ್ತರಾಗಬಹುದು. ಸಂಪೂರ್ಣ  ಋಣ ತೀರಿಸಲು ಕಷ್ಟ. ಬಡವರಿಗೆ ‌ ಜೀವನ ನಡೆಸಲು ಹಣ ಬೇಕು.ಶ್ರೀಮಂತ ರಿಗೆ  ಜ್ಞಾನವಿರಬೇಕು. ಇವರಿಬ್ಬರ ನಡುವಿರುವ‌ ಮಧ್ಯಮವರ್ಗಕ್ಕೆ ಎರಡೂ ಅಲ್ಪ ಸ್ವಲ್ಪ ಇದ್ದರೂ‌ ಯಾವುದಕ್ಕೆ ಬೆಲೆಕಟ್ಟಬೇಕೆಂಬ ವ್ಯವಹಾರಕ್ಕೆ ಸಿಲುಕಿದರೆ ಅತಂತ್ರ ಜೀವನ. ಹೀಗಾಗಿ ಭೂಮಿ ಒಂದು ಮನುಕುಲಕ್ಕೆ ಮಾಧ್ಯಮವಾಗಿದೆ.ಇದರ ಮೇಲಿದ್ದು ಋಣ ತೀರಿಸಲು  ಆತ್ಮಜ್ಞಾನ ಬೇಕು.ಋಣ ಬೆಳೆಸಲು ಭೌತಿಕ ವಿಜ್ಞಾನ ವಿದೆ. ಇವೆರಡರ‌  ನಡುವಿರುವ ಮಾನವನೊಳಗೆ ಸಾಮಾನ್ಯ ಜ್ಞಾನವಿದ್ದರೆ  ಉತ್ತಮ. ಇದನ್ನೇ ಹಿಂದೆ ತಳ್ಳಿ ಮುಂದೆ ಹೋದರೆ  ಕಷ್ಟ ನಷ್ಟ ಕಟ್ಟಿಟ್ಟ ಬುತ್ತಿ. ಕಷ್ಟ ನಷ್ಟದಿಂದ  ಜ್ಞಾನ ಬರುತ್ತದೆ. ಜ್ಞಾನದ ನಂತರವೇ ‌ಜೀವನದ ಉದ್ದೇಶ ಅರ್ಥ ಆಗೋದೆಂದು ನಮ್ಮ ಹಿಂದಿನ ಮಹಾತ್ಮರುಗಳು ತಿಳಿಸಿದ್ದಾರೆ. ಜ್ಞಾನ ನಮ್ಮ ಹಿಂದಿನವರದ್ದಾಗಿದ್ದು ತತ್ವದೆಡೆಗೆ  ನಡೆದಾಗ  ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದೆ ಯಾಕೆ  ಪರಮಾತ್ಮನ ಸೇವೆ ಮಾಡಬೇಕೆಂಬ ಅರಿವು ಹೆಚ್ಚುವುದು. ಹಾಗಂತ ಈಗಿನ ಸ್ವಾರ್ಥ ಪೂರ್ಣ ಜಗತ್ತಿನಲ್ಲಿ  ಹೀಗೆ ಬದುಕುವುದಕ್ಕೆ  ಸಂನ್ಯಾಸಿಗಳಿಗೇ ಸಾಧ್ಯವಾಗದೆ ಸರ್ಕಾರದ/ಹಿಂದೆ ‌ನಡೆದಿರುವಾಗ ಸಂಸಾರ ಸಾಗಿಸಬೇಕಾದ ಸಾಮಾನ್ಯಗತಿ ಹೇಗಿರಬಹುದು?  ಆದರೆ, ಭಾರತದಂತಹ ಮಹಾದೇಶದಲ್ಲಿ  ಜನಸಂಖ್ಯೆ ಬೆಳೆದಿದೆ ಜ್ಞಾನಿಗಳ ಸಂಖ್ಯೆಕುಸಿದಿದೆ. ಎಲ್ಲರೂ ಹಣಕ್ಕಾಗಿ ಹೊರಗೆ ಬರುವಾಗ  ಒಳಗಿದ್ದು  ಜ್ಞಾನಪಡೆಯೋದು ಬಹಳ‌ಕಷ್ಟದ ಕೆಲಸ.ಹಾಗೆ ಇದ್ದವರನ್ನೇ ಮೂಲೆಗುಂಪು ಮಾಡುವ ಮಂದಿ ಮನೆ ಒಳಗೆ ಹೊರಗಿರುವಾಗ  ಇಲ್ಲಿ ಸರಿತಪ್ಪಿನ ಲೆಕ್ಕಾಚಾರವಾಗಲಿ‌ ಚರ್ಚೆ ವಾದ ವಾಗಲಿ‌  ಅಧ್ಯಾತ್ಮಿಕವಾಗಿ ಮಾಡೋರಿಲ್ಲದೆ  ಅಜ್ಞಾನಕ್ಕೆ ಹೆಚ್ಚಿನ ಸಹಕಾರ ಬೆಲೆ ಸಿಗುತ್ತಾ  ಅಸತ್ಯ ಅನ್ಯಾಯ ಅಧರ್ಮ ವನ್ನು  ಸರಿ ಎಂದು ವಾದಿಸುವವರೂ ನ್ಯಾಯಾಧೀಶರು. ತಪ್ಪು ಎಂದುವಾದಿಸುವವರೂ ನ್ಯಾಯಾಧೀಶರೆ ಹಾಗಾದರೆ ನ್ಯಾಯ ಯಾವುದು? ಒಂದೇ ಸತ್ಯ ನ್ಯಾಯ,ಧರ್ಮ ಎಂದಾಗ ಈ ಪರವಿರೋಧ ಎಲ್ಲಿಂದ‌ಬಂತು? ಒಂದು ಒಳಗಿನ‌ನ್ಯಾಯ ಇನ್ನೊಂದು ಹೊರಗಿನ‌ನ್ಯಾಯ. ಒಳಗಿನ ನ್ಯಾಯವನ್ನು ಆತ್ಮಸಾಕ್ಷಿಯಿಂದಲೇ ತಿಳಿಯಬೇಕು.ಹೊರಗಿನ‌ ನ್ಯಾಯ  ಕಣ್ಣಿಗೆ  ಕಂಡರೂ  ಸರಿಯಿರದು. ಒಟ್ಟಿನಲ್ಲಿ ಹೇಳೋದಾದರೆ ಈ ನ್ಯಾಯಾಲಯ ಎನ್ನುವ ಪವಿತ್ರ  ಮಂದಿರದಲ್ಲಿ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಕುಳಿತಿರುವ‌ ನ್ಯಾಯದೇವತೆಯನ್ನು ಹೊರಗಿನಿಂದ ಅಳೆದು ತೂಗಿ  ತಮ್ಮ ಸ್ವಾರ್ಥ ಬೆಳೆಸಿಕೊಂಡು ಎಷ್ಟು ಹಣದಿಂದ ಅನ್ಯಾಯ ಗೆಲ್ಲಿಸಿದರೂ   ಅದರ ಫಲ ಹಿಂದಿರುಗಿ ಬರೋವಾಗ  ಹಣವೂ ಇರದು ಜ್ಞಾನವೂ ಇರದು. ಕರ್ಮಫಲವಷ್ಟೆ ಅನುಭವಿಸೋದು. ಯಾವುದೇ  ವ್ಯಕ್ತಿ ಶಕ್ತಿ,ವಸ್ತು,ಒಡವೆ,ವಸ್ತ್ರ, ವಿದ್ಯೆ,ಬುದ್ದಿಯನ್ನು  ರಾಜಕೀಯದಿಂದ  ಪಡೆಯುವುದಕ್ಕೂ ರಾಜಯೋಗದಿಂದ ಗಳಿಸುವುದಕ್ಕೂ ವ್ಯತ್ಯಾಸವಿದೆ. ಪಡೆದದ್ದು ತಾತ್ಕಾಲಿಕ ಗಳಿಸಿದ್ದು ಶಾಶ್ವತ. ದೇವರು ಕೊಟ್ಟಿದ್ದರಲ್ಲಿ  ನನ್ನ ಪಾಲೆಷ್ಟಿದೆ ಇತರರ ಪಾಲೆಷ್ಟಿದೆ ಎನ್ನುವ ಲೆಕ್ಕಾಚಾರ ಹಾಕಿದರೆ ನಮ್ಮ ಪಾಲಿರೋದಿಲ್ಲ.ಅದನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚು ಹೆಚ್ಚು‌ ಇತರರಿಗೆ ಹಂಚಬಹುದಷ್ಟೆ.ಇದರಲ್ಲಿ ಜ್ಞಾನವೂ ಒಂದು. ಜ್ಞಾನ ಎಂದರೆ ತಿಳುವಳಿಕೆ.ಸದ್ವಿಚಾರ ತಿಳಿಸಿದರೆ ಯಾರೂ ಕೇಳೋದಿಲ್ಲವಾದ್ದರಿಂದ ಅದು ಬೆಳೆಯದು.ಅದಕ್ಕೆ ಕೆಟ್ಟವಿಚಾರ ಹಂಚುವುದು ಅಜ್ಞಾನವಾಗುತ್ತದೆ. ಯಾವುದನ್ನು ಹಂಚಬೇಕೋ ಅದನ್ನು ತಡೆದು ಬೇಡವಾದ್ದನ್ನು ಹಂಚಿದರೆ ಇದರ‌ ಪ್ರತಿಫಲವೂ ಬೇಡವಾಗಿರುತ್ತದೆ. ಹಾಗಂತ ಅದನ್ನು ತಡೆಯಲಾಗದು.ಬೆಳೆದು ನಿಂತವರನ್ನು ತಡೆಯೋ ಬದಲು ಮಕ್ಕಳನ್ನು  ಕೆಟ್ಟದಾರಿಗೆ ಹೋಗದಂತೆ ತಡೆಯುವುದು ಜ್ಞಾನ.
ಎಲ್ಲಾ ವಿಷಯಗಳಿಗೂ ಇದು ಅನ್ವಯಿಸುತ್ತದೆ. ನಮಗೆ ಸಿಗಬೇಕಾದ್ದನ್ನು  ಇತರರು  ಪಡೆದರೂ  ನೆಮ್ಮದಿಯಿಂದ  ಶಾಂತಿಯಿಂದ  ಇರುವವರೆ ನಿಜವಾದ ಜ್ಞಾನಿಗಳು. ಕಾರಣ ಅವರಿಗೆ ತಿಳಿದಿದೆ  ಇದೊಂದು ‌ಋಣ ಅದನ್ನು ತೀರಿಸಲೇಬೇಕೆಂದು. ಅದು ಸಿಗದಿದ್ದರೆ ಪರಮಾತ್ಮನ ಕರುಣೆಯಿದೆ ಎಂದರ್ಥ. ಹಿಂದಿನ ಕಾಲದಲ್ಲಿದ್ದಂತೆ ಈಗಿಲ್ಲ.
ಪಂಚಪಾಂಡವರಲ್ಲಿದ್ದ ಒಗ್ಗಟ್ಟು, ಕ್ಷಮೆ,ಕರುಣೆ,ಸಹನೆಯು ಕೌರವರಲ್ಲಿರಲಿಲ್ಲ.ಕಾರಣ ಪಾಂಡವರಲ್ಲಿ ಜ್ಞಾನವಿತ್ತು ಕೌರವ ರಲ್ಲಿ ಅಜ್ಞಾನವಿತ್ತು.  ಇದರ ಫಲವಾಗಿ  ಯುದ್ದವೇ ನಡೆಯಿತು. ಯಾವುದೇ ಆಗಲಿ ಅತಿಯಾದರೆ ಕಷ್ಟ ನಷ್ಟ.
ಭೂಮಿಯನ್ನಾಗಲಿ ಸ್ತ್ರೀ ಯನ್ನಾಗಲಿ ಅತಿಯಾಗಿ ಬಳಸಿದರೂ ಕಷ್ಟ  ಬೆಳೆಸದಿದ್ದರೂ ನಷ್ಟ.ಇತಿಮಿತಿಗಳನ್ನು ಕಾಯ್ದುಕೊಂಡು ಜೀವನ ನಡೆಸುವುದೊಂದೆ  ದಾರಿ. "ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ " ಆಕಾಶದಲ್ಲಿ ತಿರುಗುತ್ತಿರುವ ಭೂಮಿಯಲ್ಲಿ ಮನುಕುಲವಿದೆ. ಭೂಮಿಯ ಋಣ ತೀರಿಸಲು ಬಂದ ಮಾನವ ಇನ್ನಷ್ಟು ಋಣ ಏರಿಸಿಕೊಂಡಿದ್ದರೆ  ಶಾಂತಿ ಹೇಗೆ ಸಿಗಬೇಕು? ಅಸುರರಿಗೆ ಇದು ಅರ್ಥ ವಾಗದ ಕಾರಣ  ದೇವತೆಗಳನ್ನು ದ್ವೇಷ
ಮಾಡಬಹುದು.ಇದು ಅವರ ತಪ್ಪಲ್ಲ ಅಜ್ಞಾನವಷ್ಟೆ. ಇದನ್ನು ದೈವತ್ವದಿಂದ ಸರಿಪಡಿಸುವುದೇ ಧರ್ಮ. ಅಸುರರನ್ನೇ ದ್ವೇಷ ಮಾಡುತ್ತಾ ಮುಂದೆ ಹೋದರೆ  ಸರಿಪಡಿಸುವ‌ಬದಲು ತಾವೇ ಅಸುರರಾಗಬೇಕಾಗುತ್ತದೆ. ಕೆಲವರಿಗೆ ಸತ್ಯ ಅರ್ಥ ವಾಗದೆ ಅಸತ್ಯವನ್ನು ಸತ್ಯವೆಂದು ವಾದ ಮಾಡಿ ಗೆಲ್ಲುವರು.ಹಾಗಂತ ಸತ್ಯ ಗೆದ್ದಂತಾಗೋದಿಲ್ಲವಲ್ಲ. ಇದೇ ಇಂದಿನ‌ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಯಾರೋ  ಹೆಸರು ಹಣ ಅಧಿಕಾರವನ್ನು ಅಧರ್ಮ ಅನ್ಯಾಯ ಅಸತ್ಯದಿಂದ ಪಡೆದು  ತಾನೇ ರಾಜ ಎಂದರೆ ಜನ ಒಪ್ಪುವರೆಂದರೆ  ಅಜ್ಞಾನವಷ್ಟೆ. ಇವನ‌ಹಿಂದೆ ನಡೆದವರೂ ಅಸತ್ಯ ಅನ್ಯಾಯ ಅಧರ್ಮದ ಪಾಲುದಾರರೆ ಆದಾಗ ಅದರ ಪ್ರತಿಫಲ ಎಲ್ಲಾ ಅನುಭವಿಸಲೇಬೇಕಷ್ಟೆ.
ಯಾಕೆ ಪ್ರಜಾಪ್ರಭುತ್ವದ  ಪ್ರಜೆಗಳಿಗೆ ಸಮಸ್ಯೆಯ ಸರಮಾಲೆ ಬೆಳೆದಿದೆ ಎಂದಾಗ  ಸಮಸ್ಯೆ ಹೊರಗಿನ ವಿಜ್ಞಾನದಿಂದ ಬೆಳೆಸಿ  ಒಳಗಿನ ಜ್ಞಾನ ಹಿಂದುಳಿದಿದೆ. ಪರಿಹಾರ  ಜ್ಞಾನದಿಂದ ಕಂಡುಕೊಳ್ಳಲು ವಿಜ್ಞಾನ ಬಿಡುತ್ತಿಲ್ಲ.  
ಗ್ರಹಣದ ವಿಚಾರದಲ್ಲೂ  ಹಣ ಮಾಡಬಹುದಾದರೆ  ಗ್ರಹಚಾರ  ಹೆಚ್ಚಾಗುವುದಿಲ್ಲವೆ? ಆದರೂ  ಗ್ರಹಗಳ ಚಲನವನ್ನು  ತಡೆಯೋ ಶಕ್ತಿ ಮಾನವನಿಗಿಲ್ಲ ಕಾರಣ ಭೂ ಗ್ರಹದ ಒಂದು ಸಣ್ಣ ಬಿಂದು ಗಾತ್ರದ ಜ್ಞಾನ ಅವನಲ್ಲಿದೆ
ಯಷ್ಟೆ.  ಒಂದು ಬಿಂದವೇ ಇಷ್ಟೆಲ್ಲಾ ಆಟವಾಡುವಾಗ  ಎಲ್ಲಾ ಬಿಂದುಗಳನ್ನು ತನ್ನೊಳಗೆ ಇಟ್ಟುಕೊಂಡಿರುವ  ಮಹಾಶಕ್ತಿ
ಯನ್ನು  ಅರ್ಥ ಮಾಡಿಕೊಳ್ಳಲು ಸಾಧ್ಯವೆ? ಅದಕ್ಕಾಗಿ  ಪರ ವಿರೋಧದ ಗುಂಪು ಘರ್ಷಣೆ ಹೋರಾಟ,ಹಾರಾಟ,
ಮಾರಾಟದಲ್ಲಿಯೇ ಜೀವನ ಮುಗಿಯುತ್ತಿದೆ. ನಿರಂತರವಾಗಿ  ನಡೆದಿರುವ ಇದು ಯುಗಯುಗದ ಪುರಾಣ ಕಥೆಯಾಗಿ‌ದ್ದರೂ  ಸತ್ಯ ಒಂದೇ ಭೂಮಿ ಒಂದೇ ಆಗಿದೆ. ಜನನ ಮರಣದ ನಡುವಿರುವ ಜೀವನದ ಸತ್ಯ ತಿಳಿಯುವುದೇ‌  ಜೀವನದ ಮುಖ್ಯ ಗುರಿಯಾಗಿತ್ತು. ಆಗೋದನ್ನು ತಪ್ಪಿಸಲಾಗದು.ಆಗಿದ್ದಕ್ಕೆ ಕಾರಣವಿರುತ್ತದೆ. ಇದು ನಮ್ಮ ಅಜ್ಞಾನದಿಂದಲೋ  ಜ್ಞಾನದಿಂದಲೋ  ನಡೆದರೂ‌  ನಾವೇ ಕಾರಣವಾದಾಗ  ನಾವು ಬದಲಾದರೆ ಉತ್ತಮ  ಪ್ರತಿಫಲವಿದೆ. ಹೊರಜಗತ್ತನ್ನು ಅರಿಯೋ ಮೊದಲು ಒಳಜಗತ್ತನ್ನು ತಿಳಿದಿದ್ದರೆ ಉತ್ತಮ. ವಿಷ್ಣುವಿನವತಾರ ಪುರುಷರು ವಿಷ್ಣುವಿನ ಒಂದು ಮಹಾಶಕ್ತಿ ಎಂದರೆ ದ್ವೈತ ಸ್ವಯಂ ವಿಷ್ಣುವೇ ಎಂದರೆ ಅಧ್ವೈತ. ಇದನ್ನು ವಾದ ಮಾಡುತ್ತಾ ಕುಳಿತರೆ  ಉಪಯೋಗವಿಲ್ಲ ಒಂದೇ ಸತ್ಯ.

No comments:

Post a Comment