ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, November 7, 2023

ಮೊದಲು ಮಾನವನಾಗು ನಂತರ ಮಹಾತ್ಮನಾಗಬಹುದು

ಇತ್ತೀಚೆಗೆ ನನ್ನ ಜೀವನದ ಕೆಲವು ಅನುಭವವನ್ನು  ಹಂಚಿಕೊಳ್ಳುವ ಲೇಖನ  ಬರೆಯುವ ಮನಸ್ಸಾಗುತ್ತಿದೆ. ಮೊದಲು ಇದರಲ್ಲಿಏನೂ ವಿಶೇಷವಿಲ್ಲ ಎಲ್ಲರಂತೆ  ನನಗೂ ಅನಿಸಿದೆಯಷ್ಟೆ ಎಂದು  ಅನಿಸಿತ್ತು ಆದರೆ ಈಗ ಎಲ್ಲಾ  ಓದಿ ತಿಳಿದದ್ದನ್ನು ಬರೆದರೆ ನನ್ನ ಅನುಭವಕ್ಕೆ ಬಂದ ಮೇಲೆ ಇಳಿಸುವ ಪ್ರಯತ್ನದಲ್ಲಿ ವಾಸ್ತವ ಸತ್ಯವಿರೋದು ವಿಶೇಷ ಎನಿಸಿತು. ಕಾರಣ ಪುರಾಣ ಭವಿಷ್ಯದ ನಡುವಿರುವ ವಾಸ್ತವವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನಾವು  ವಾಸ್ತವತೆಯನ್ನು ಅರ್ಥ ಮಾಡಿಕೊಂಡು ತತ್ವವನರಿತರೆ ಭವಿಷ್ಯಕ್ಕೆ ಉತ್ತಮ. ನಾವೇ  ಸತ್ಯಾಸತ್ಯತೆ ತಿಳಿಯದೆ ಪುರಾಣ ವನ್ನು ಮುಂದೆ ಬಿಟ್ಟರೆ  ದೊಡ್ಡ ರಾಮಾಯಣ ಮಹಾಭಾರತ ಯುದ್ದ ಇನ್ನೊಂದು ರೂಪಪಡೆಯುತ್ತದೆ. ಒಟ್ಟಿನಲ್ಲಿ ಯುದ್ದಕ್ಕೆ ಕಾರಣವೇ ಅರ್ಧ ಸತ್ಯದ ರಾಜಕೀಯ. ಯುದ್ದ ಒಳಗೇ ನಡೆದಿದ್ದರೂ ಅದರಿಂದ ಶಾಂತಿ ಸಿಗದೆ ಹೊರಗಿನಯುದ್ದಕ್ಕೆ ಶಾಂತಿದೂತರಾಗಿ ಹೋದರೆ  ವ್ಯರ್ಥ ಪ್ರಯತ್ನ.
ಹಾಗಾಗಿ ವಾಸ್ತವದಲ್ಲಿ ನಾವು ಪ್ರಜಾಪ್ರಭುತ್ವದ ಸಾಮಾನ್ಯ ಪ್ರಜೆಯಾಗಿದ್ದು ದೇಶದೊಳಗೆ ಇದ್ದು ನಮ್ಮ ಮೂಲದ ಶಿಕ್ಷಣ ಧರ್ಮ ಕರ್ಮ ದ ಬಗ್ಗೆ ಎಷ್ಟು ತಿಳಿಯಲಾಗಿದೆ? ಎಷ್ಟು ಅಳವಡಿಸಿಕೊಂಡು ಸತ್ಯ ಅರ್ಥ ವಾಗಿದೆ? ತತ್ವದೆಡೆಗೆ  ನಡೆದೆವೋ ತಂತ್ರದೆಡೆಗೆ ನಡೆದೆವೋ?  ನಾವು ಯಾರ ಆಳಾಗಿರುವೆವೋ ಅವರ ಋಣ ತೀರಿಸಲು  ಸೇವೆ ನಡೆದಿದೆಯೋ ಅಥವಾ ಅವರಿಂದಲೇ ಸೇವೆ ಬಯಸಿದೆವೋ? ಪ್ರಜಾಪ್ರಭುತ್ವದ ಪ್ರಜೆಗಳು ದೇಶ ಸೇವೆಗೆ  ಮನೆಯಿಂದ ಹೊರಬರುವ ಮೊದಲು ಮನೆಯೊಳಗೆ  ಸೇವೆಯ ಅರ್ಥ ತಿಳಿದಿರಬೇಕಿತ್ತು. ಸರ್ಕಾರದ ಕೆಲಸ ದೇವರ ಕೆಲಸ ಎಂದಾಗ  ದೇವರ ಕೆಲಸದಲ್ಲಿ ಭ್ರಷ್ಟಾಚಾರ ವಿರುವುದೆ?
ದೇಶಸೇವೆಯೇ ಈಶಸೇವೆ ಎಂದಾಗ  ಸೇವೆಯಲ್ಲಿ ತೃಪ್ತಿ ಮುಕ್ತಿ ಸಿಕ್ಕಿದೆಯೆ?  ಋಣ ಎಂದರೆ ಸಾಲ. ಈ ಸಾಲ ತೀರಿಸಲು ಸೇವೆ ಮಾಡಬೇಕು. ಭೂಮಿಯ ಋಣ ತೀರಿಸಲು ಭೂತಾಯಿ ಸೇವಕರಾಗಬೇಕು.ತಾಯಿ ಋಣ ತೀರಿಸಲು ತಾಯಿ ಸೇವೆ , ದೇಶದ ಋಣಕ್ಕೆ ದೇಶಸೇವೆ,ಪರಮಾತ್ಮನ ಋಣ ತೀರಿಸಲು ಪರಮಾತ್ಮನ ಸೇವೆ ಆಗಬೇಕು. ಆದರೆ ಇದರಲ್ಲಿ ಸ್ವಾರ್ಥ ಅಹಂಕಾರ ಪ್ರತಿಫಲಾಪೇಕ್ಷೆ ಇರಬಾರದೆನ್ನುವ ಸತ್ಯ ಭಗವಂತನೇ ತಿಳಿಸಿರುವಾಗ ಎಲ್ಲಿ ಸೇವೆಯಾಗಿದೆ? ಎಲ್ಲಿ ಸೇವೆಯಲ್ಲಿ ಲೋಪಧೋಷಗಳಾಗಿದೆ ಎನ್ನುವ ಬಗ್ಗೆ ಧಾರ್ಮಿಕ,ಶೈಕ್ಷಣಿಕ, ಆರ್ಥಿಕ/ಸಾಮಾಜಿಕ ಕ್ಷೇತ್ರದಲ್ಲಿರುವ‌ ಪ್ರತಿಯೊಬ್ಬರೂ  ಆತ್ಮಾವಲೋಕನ ಮಾಡಿಕೊಂಡರೆ  ಸಾಮಾನ್ಯಜ್ಞಾನವನ್ನು ಸಾಮಾನ್ಯ
ಸತ್ಯವನ್ನು, ಸಾಮಾನ್ಯ ಸ್ತ್ರೀ ಪುರುಷರನ್ನು, ಮಕ್ಕಳ
ಜ್ಞಾನವನ್ನು  ಹಿಂದಕ್ಕೆ ತಳ್ಳುತ್ತಾ ತಾನೇ ವಿಶೇಷ ವ್ಯಕ್ತಿ ಎನ್ನುವ ಅಹಂಕಾರ ಸ್ವಾರ್ಥ ದಲ್ಲಿ  ಮುಂದಿನ ಭವಿಷ್ಯ ನಿರ್ಣಯ ಮಾಡಲು ಇಂದಿನ ಸ್ಥಿತಿಯನ್ನು ಹದಗೆಡಿಸಿಕೊಂಡಿರುವ  ಅಜ್ಞಾನ ಕಾರಣವಾಗಿದೆ ಎನ್ನಬಹುದು.ಈಗಲೂ ನಿರಂತರವಾಗಿ  ಶೋಷಣೆಗಳು ನಡೆದಿವೆ. ಇದು ಅಜ್ಞಾನದ ಸಂಕೇತವಷ್ಟೆ. ಯಾರನ್ನೂ ಶೋಷಣೆ ಮಾಡಿ  ನಮ್ಮ ಆತ್ಮಕ್ಕೆ ಮುಕ್ತಿ ಸಿಗುವುದೆ? ಅಥವಾ ಅಸತ್ಯ ಅಧರ್ಮ ಅನ್ಯಾಯ ಕ್ಕೆ ಸಹಕಾರ ಕೊಟ್ಟು ಹಣಗಳಿಸಿ ಧರ್ಮ ಕಾರ್ಯ ನಡೆಸಿದರೆ‌ ಪರಮಾತ್ಮನಿಗೆ ತಲುಪುವುದೆ? ಒಟ್ಟಿನಲ್ಲಿ ಮಾನವ ತಾನು ತೋಡಿಕೊಂಡ ಹೊಂಡದಲ್ಲಿ ತಾನೇ ಬಿದ್ದರೂ ಅದಕ್ಕೆ ಕಾರಣ  ಅಜ್ಞಾನವಾಗಿರುತ್ತದೆ. ಪ್ರತಿಯೊಬ್ಬರಲ್ಲಿಯೂ ಅಡಗಿರುವ  ಜ್ಞಾನವನ್ನು  ಒಳಹೊಕ್ಕಿ ಗುರುತಿಸಿಕೊಳ್ಳಲು ಮಕ್ಕಳಿಗೆ ಪೋಷಕರು ಬಿಡೋದಿಲ್ಲ ಪೋಷಕರಿಗೆ ಸಮಾಜ ಬಿಡೋದಿಲ್ಲ. ಸಮಾಜಕ್ಕೆ  ರಾಜಕೀಯ ಬಿಡೋದಿಲ್ಲ ರಾಜಕೀಯಕ್ಕೆ ಮಾಧ್ಯಮಗಳು ಬಿಡೋದಿಲ್ಲ. ಹಾಗಾದರೆ ಎಲ್ಲದಕ್ಕೂ ಕಾರಣ ಮಾಧ್ಯಮವೆಂದರೆ  ಸರಿಯೆ ತಪ್ಪೆ? ಮಾಧ್ಯಮ ಬೆಳೆದಿರೋದೆ  ಜನರಿಂದಾದಾಗ  ಜನ ಎಲ್ಲಿಯವರೆಗೆ  ಒಳಸತ್ಯ ಬಿಟ್ಟು ವಾಸ್ತವತೆಯನ್ನು  ಮಾಧ್ಯಮದಿಂದ ಅಳೆಯುವರೋ ಅಲ್ಲಿಯವರೆಗೆ  ಪರಿಸ್ಥಿತಿ ಸುಧಾರಿಸದು.ಮಾಧ್ಯಮವೇ  ಒಂದು ಮಧ್ಯವರ್ತಿಗಳ ತಾಣ ಅದರೊಳಗೆ ಹೋಗಿ ಕುಳಿತು ವಾದವಿವಾದ ಮಾಡುವ ಮಧ್ಯವರ್ತಿಗಳು  ಎಷ್ಟು ಸತ್ಯವಂತರು ಧರ್ಮ ವಂತರು ಇರಬಹುದು? ಇದ್ದರೂ ಅವರ ಸಂಪೂರ್ಣ ಸತ್ಯ ಹೊರಬರದು. ಅರ್ಧ ಸತ್ಯದಿಂದ  ಬದಲಾವಣೆ ಕಷ್ಟವಿದೆ. ಸರ್ವಜ್ಞ ರಾಗೋದಕ್ಕೆ ಪೂರ್ಣ ಸತ್ಯ ಅಗತ್ಯವಿದೆ. ಹೀಗಾಗಿ ವಾಸ್ತವ ಸತ್ಯ ಪುರಾಣ ಭವಿಷ್ಯದ ನಡುವಿರೋವಾಗ ಹಿಂದಿನ ಧರ್ಮ ಕ್ಕೂ ಈಗಿನ ಆಚರಣೆಗೂ ಮುಂದಿನ  ಬದಲಾವಣೆಗೂ  ಪರಸ್ಪರ ಹೊಂದಿಕೆಯಾದರೆ ಉತ್ತಮ. ಹೊಂದಾಣಿಕೆಯೇ ಇಲ್ಲದೆ ಹೋದರೆ ಅಧಮ. ಸತ್ಯ ಒಂದೇ ಅದು ಬದಲಾಗದು.
ಬದಲಾಗೋದು ಮಾನವನ ಮನಸ್ಸು.ಆತ್ಮವಲ್ಲ.ಹೀಗಾಗಿ ಆತ್ಮಸಂಶೋಧನೆಯಿಂದಷ್ಟೆ ಧರ್ಮ ಸ್ಥಾಪನೆ. ಇದಕ್ಕೆ ಹೊರಗಿನ ರಾಜಕೀಯ ತಿಳಿಯುವ ಮೊದಲು
ರಾಜಯೋಗದ  ವಿಚಾರ ಅರ್ಥ ವಾದರೆ ಯೋಗ.
ಇಲ್ಲವಾದರೆ ಭೋಗದಿಂದ  ರೋಗದ ಸಮಾಜ ನಿರ್ಮಾಣ.
ಇತ್ತೀಚೆಗೆ ಸಾಕಷ್ಟು  ವೈಧ್ಯಕೀಯ ಸೇವಾಕೇಂದ್ರ ಬೆಳೆದಿದೆ.
ಅದರೊಳಗೆ ಸೇವೆ ಹೇಗೆ ನಡೆದಿದೆ ಎನ್ನುವ ಸತ್ಯ
ತಿಳಿಯುತ್ತಿದೆ.
ಹಾಗೆಯೇ ಧಾರ್ಮಿಕ ಸೇವಾಕೇಂದ್ರಗಳೂ ಲೆಕ್ಕವಿಲ್ಲದಷ್ಟಿದೆ ಧರ್ಮ ಎತ್ತ ಸಾಗಿದೆ?  ಕಾರಣವಿಷ್ಟೆ ಸೇವೆಯ  ಮಾರ್ಗ ಸರಿಯಿಲ್ಲ. ಭ್ರಷ್ಟಾಚಾರ ದ ಹಣದಿಂದ ಎಷ್ಟು ಸೇವೆ ಮಾಡಿದರೂ ಭ್ರಷ್ಟರಿಗೆ ಶಕ್ತಿ.ಹಣದಿಂದ ಸೇವೆ‌ ಮಾಡುವಾಗ ಜ್ಞಾನವಿರಬೇಕು.ಸತ್ಪಾತ್ರರಿಗೆ ದಾನಮಾಡಬೇಕೆನ್ನುವರು.
ಅಪಾತ್ರರಿಗೆ‌ ಕೊಟ್ಟರೆ ವ್ಯರ್ಥ.
ಒಂದು ಕುಟುಂಬದಲ್ಲಿ  ಸದಸ್ಯರುಗಳ ಸಮಸ್ಯೆ ಬೇರೆ ಬೇರೆ ಆಗಿರುತ್ತದೆ. ಹಾಗಂತ  ಸಮಸ್ಯೆಯನ್ನು ಹೊಂದಿರುವ  ವ್ಯಕ್ತಿಗೆ  ಸಹಕರಿಸದೆ ಹೊರಗಿನವರಿಗೆ ಸಹಕಾರ ನೀಡಿದರೆ ಧರ್ಮ ವೆ? ಹೊರಗಿನವರ ಜೊತೆಗೆ ಒಳಗಿನವರ ಸಮಸ್ಯೆಯೂ ಪರಿಹಾರವಾಗುವ  ಯೋಜನೆಯನ್ನು  ಸರ್ಕಾರ ಮಾಡಲು ಕಷ್ಟ. ದೇಶದ ಸಾಲ ತೀರಿಸಲು ದೇಶದ ಪ್ರಜೆಗಳೇ ದುಡಿಯಬೇಕಿತ್ತು. ಹೊರಗಿನವರನ್ನು ದುಡಿಸಿ‌
ಒಳಗಿದ್ದವರಿಗೆ ಉಚಿತವಾಗಿ ತಿನ್ನಿಸಿದರೆ  ಸೋಮಾರಿಗಳಾಗಿ  ರೋಗಿಗಳು ಬೆಳೆಯುವರಲ್ಲವೆ? ಇದರಲ್ಲಿ ತಪ್ಪು ಯಾರದ್ದು? ಕುಳಿತು ತಿಂದವರದ್ದೆ ತಿನ್ನಿಸಿದವರದ್ದೆ? ಇಬ್ಬರ ತಪ್ಪು ಮೂರನೆಯವರಿಗೆ  ಲಾಭವಾದಾಗ   ಲಾಭ ಮಾಡಿಕೊಂಡು ಲೋಭಿಗಳು ಬೆಳೆಯುವರು. ಕಾಮ,ಕ್ರೋಧ ಲೋಭ ಮೋಹ ಮಧ ಮತ್ಸರಗಳಿಂದ‌  ತಪ್ಪಿಸಿಕೊಂಡು  ಜೀವನ ನಡೆಸೋದು ಕಷ್ಟ.ಎಂತೆಂತಹ  ಜ್ಞಾನಿಗಳೇ ಎಡವಿರುವಾಗ ಸಾಮಾನ್ಯರ ಪಾಡೇನು? ಆದರೂ  ನಾವಿರುವ ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಅವಕಾಶವಿದೆ.
ಸ್ವತಂತ್ರ ಜ್ಞಾನ ಬಳಸಿ ಸ್ವತಂತ್ರ ವಿದ್ಯೆ ಗಳಿಸಿ ಸ್ವತಂತ್ರ ಜೀವನ ನಡೆಸುವುದಕ್ಕೆ ಸಾಮಾನ್ಯಜ್ಞಾನ ಅಗತ್ಯ.ಅದೇ ಉತ್ತಮ ದಾರಿಹಿಡಿದರೆ ವಿಶೇಷಜ್ಞಾನ ಒಳಗೇ ಕಾಣುವುದು.ಇದನ್ನು ಸದ್ಬಳಕೆ ಮಾಡಿಕೊಂಡರೆ ಸಂತೃಪ್ತಿ,
ಸಂತೋಷ, ಸಮಾಧಾನ,ಶಾಂತಿ ಕೊಡುತ್ತದೆ.
ಇದನ್ನು  ತಿಳಿದುಕೊಳ್ಳಲು  ಸತ್ಯವೇ ದೇವರಾದರೆ ಉತ್ತಮ. 
ಮಕ್ಕಳನ್ನು ದೇವರೆಂದರು ಕಾರಣ ಅವರಲ್ಲಿ ಸತ್ಯ ನಿಷ್ಕಲ್ಮಶ ಹೃದಯವಿರುತ್ತದೆ.  ಆದರೆ ಅವರಿಗೆ ಪೋಷಕರೆ ದೆವ್ವಗಳಂತೆ ಕಾಡಿದರೆ  ಎಲ್ಲಿಗೆ ಹೋಗಬೇಕು?. ಕಲಿಗಾಲದ ಪ್ರಭಾವದಲ್ಲಿ ಯಾರಲ್ಲಿ ಯಾವ‌ ಮಹಾತ್ಮ,ಪ್ರೇತಾತ್ಮ,ಭೂತಾತ್ಮ, ದೇವಾತ್ಮ,
ಪರಮಾತ್ಮನಿರುವರೋ  ಹೊರಗಿನ ಕಣ್ಣಿಗೆ ಕಾಣದೆ  ಎಲ್ಲಾ ನಾನೇ ನನ್ನಿಂದಲೇ ನಡೆದಿದೆ ಎನ್ನುವ ಭ್ರಮೆಯಲ್ಲಿ  ಜೀವನ‌
ನಡೆಸಿರುವಾಗ  ಪರಮಸತ್ಯ ತಿಳಿದವರೂ ತಿಳಿಸಲಾಗದು.
ತಿಳಿಸಿದರೂ ಅನುಭವಿಸದೆ ಅರ್ಥ ವಾಗದು. ಅರ್ಥ ವಾದ ಮೇಲೆ ಹೇಳಿಕೇಳಿ ಉಪಯೋಗವಿದ್ದರೆ  ಸರಿ ಇಲ್ಲವಾದರೆ ಸುಮ್ಮನಿರೋದು ಸರಿ. ಆದರೂ ಕೋಟ್ಯಾಂತರ ಜೀವರಾಶಿಗಳಲ್ಲಿ‌ ಒಬ್ಬರಿಗಾದರೂ ತಲುಪಿದರೂ  ಸತ್ಯ ಬೆಳೆಯುತ್ತದೆ. ಎಲ್ಲರೂ  ಒಂದೇ ಶಕ್ತಿಯ ಅಧೀನದಲ್ಲಿರುವ ಸಣ್ಣ ಕಣಗಳಷ್ಟೆ. ಆ ಕಣವನರಿತರೆ  ಶಕ್ತಿಯ ದರ್ಶನ.  ಅಣು ಪರಮಾಣುಗಳನ್ನು ಮನಸ್ಸಿಗೆಬಂದಂತೆಬಳಸಬಹುದಾದರೂ
 ಅದರ ಪ್ರತಿಫಲ  ತಿರುಗಿ ಬರೋವಾಗ ಅದೇ ಮನಸ್ಸಿನಿಂದ ಸ್ವೀಕರಿಸುವ ಶಕ್ತಿ‌ಮಾನವನಿಗಿರದು. ಹಾಗೆಯೇ ಅನೇಕ ದೇವಾನು ದೇವತೆಗಳನ್ನು ಸೃಷ್ಟಿ ಮಾಡಿಕೊಂಡು 
ಬೇಡಬಹುದು.ಕೊಟ್ಟ ಮೇಲೆ ಸದ್ಬಳಕೆ ಮಾಡಿಕೊಳ್ಳುವ ಜ್ಞಾನವಿದ್ದರೆ ಸರಿ ದುರ್ಭಳಕೆ ಮಾಡಿಕೊಂಡು ದೇವರನ್ನೇ ಆಳಲು ಹೊರಟರೆ ಅಸುರರಾದಂತಾಯಿತು. ಎಲ್ಲಿರುವರು ದೇವಾಸುರರು? ಇದೊಂದು ಗುಣವಷ್ಟೆ. ಶಕ್ತಿಯನ್ನು  ಹೇಗೆ ಬಳಸಿದರೂ ಫಲವಿದೆ. ಒಳ್ಳೆಯದಕ್ಕೆ ಬಳಸಿದರೆ ಒಳ್ಳೆಯದಾಗುತ್ತದೆ.
ಕೆಟ್ಟದ್ದಕ್ಕೆ ಬಳಸಿ ಅಹಂಕಾರ ಸ್ವಾರ್ಥ ಮಿತಿ ಮೀರಿದರೆ ಅಧೋಗತಿ.  ಮಕ್ಕಳಿಗಾಗಿ ಆಸ್ತಿ ಮಾಡುವ ವ್ಯವಹಾರಕ್ಕೆ ಇಳಿದು ಮಕ್ಕಳ ಜ್ಞಾನ ಕುಸಿದರೆ ತಕ್ಕ ಶಾಸ್ತಿ ಮಕ್ಕಳು ದೊಡ್ಡವರಾದ ನಂತರ ಮಾಡುವರು. ಜ್ಞಾನದಿಂದ ಆಸ್ತಿ ಮಾಡಬೇಕು. ಜ್ಞಾನವೇ ಆಸ್ತಿಯಾಗಬೇಕು ಅದರಲ್ಲೂ ಅಧ್ಯಾತ್ಮ ವಿಜ್ಞಾನವಿದ್ದರೆ ಶಾಂತಿಯ ಜೀವನ.
ಹಣವಿಲ್ಲದೆ ಏನೂ ಸಾಧಿಸಲಾಗದು. ಆದರೆ ದಾಸಸಂತರು ಹಣ ಬಿಟ್ಟುಕೊಟ್ಟು ಜ್ಞಾನಪಡೆದರು.ಇಂದು ಹಣಕ್ಕಾಗಿ ಜ್ಞಾನ ಬಿಟ್ಟು ಹೊರನಡೆದವರಿಗೆ ಹಿಂದಿರುಗಲಾಗದ ಪರಿಸ್ಥಿತಿಗೆ ಸರ್ಕಾರ ಕಾರಣವೆಂದರೆ  ಪ್ರಜೆಗಳ ಸಹಕಾರವೇ  ಕಾರಣ.ಅಂದರೆ ನಾವೇ ಕಾರಣವಾದಾಗ ಬದಲಾವಣೆ ನಮ್ಮಿಂದ ಆಗಬೇಕಷ್ಟೆ. ಅದೇ ಕಷ್ಟ.ಕಷ್ಟಪಟ್ಟರೆ ಸುಖವಿದೆ ಎಂದರು  ಶ್ರಮ ಜೀವಿಗಳು. ಸನಾತನಧರ್ಮ  ಸರಳ
ಜೀವನದಲ್ಲಿದೆ. ಎಂದಾಗ ಹಿಂದಿರುಗಿ ಹೋಗಲು ಸಾಧ್ಯವೆ?
ಆತ್ಮವಿಶ್ವಾಸಕ್ಕೂ ಅಹಂಕಾರಕ್ಕೂ ವ್ಯತ್ಯಾಸವಿಷ್ಟೆ. ಒಂದು ಒಳಗಿನ ಶಕ್ತಿ ಇನ್ನೊಂದು ಹೊರಗಿನ ಶಕ್ತಿ.  ವಾಸ್ತವದಲ್ಲಿ  ನಮ್ಮ ಆತ್ಮವಿಶ್ವಾಸ  ಅಹಂಕಾರದೆಡೆಗೆ ಹೊರಟಿರುವ‌ ಕಾರಣ ಮನುಕುಲಕ್ಕೆ  ಸಮಸ್ಯೆ ಮಿತಿಮೀರಿದೆ.ಸಮಸ್ಯೆ ಒಳಗಿನಿಂದ ಬೆಳೆದಿದ್ದರೆ ಪರಿಹಾರ ಒಳಗೇ ಹುಡುಕಿದರೆ ಸಿಗಬಹುದು.
ಹೊರಗಿಲ್ಲ.ಇದೊಂದು ಸಾಮಾನ್ಯ ಜ್ಞಾನವಷ್ಟೆ.

No comments:

Post a Comment