ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, October 29, 2023

ಸಮಸ್ಯೆಯ ಮೂಲದಲ್ಲಿರುವುದು ಪರಿಹಾರ

ಮಾನವನ ಸಮಸ್ಯೆಗಳಿಗೆ  ಎರಡು ಕಾರಣವೆಂದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಜೀವನದಲ್ಲಿ ಸೋತವರ ಸಲಹೆ ಸಹಕಾರ ಪಡೆಯುವುದು.ಅದೇ ಸಮಸ್ಯೆಯಿಂದ ಹೊರಬಂದವರ ಮಾತನ್ನು ವಿರೋಧಿಸಿ ನಡೆಯುವುದು.
ಸಮಸ್ಯೆ ಏನೇ ಇರಲಿ ಅದಕ್ಕೆ ಪರಿಹಾರವಿರುತ್ತದೆ ಎಂದು ಎಲ್ಲಾ ತಿಳಿದಿದ್ದರೂ ಪರಿಹಾರ ಎಲ್ಲಿ ಯಾರ ಬಳಿ,ಯಾವಾಗ ಸಿಗುವುದೆನ್ನುವ ಅರಿವಿರೋದಿಲ್ಲ ಹೀಗಾಗಿ ಸಮಸ್ಯೆಗೆ ಮತ್ತೊಂದು ಸಮಸ್ಯೆಯನ್ನು ಸೇರಿಸಿಕೊಂಡು ಸಾಲಕ್ಕೆ ಮತ್ತೊಂದು ಸಾಲ‌ಮಾಡಿಕೊಂಡು ಹೊರಗೆ ಬಂದವರಿಗೆ  ಹಿಂದಿರುಗಿ ಹೋಗಲಾಗದೆ ಇದೇ ಜೀವನವೆಂದು  ಹಿಂದೆ ಬರುವವರಿಗೂ ತಿಳಿಸಿದರೆ  ಸಮಸ್ಯೆ  ಬಗೆಹರಿಯದೆ ಜೀವ ಹೋಗುವುದು. ಇಲ್ಲಿ ಹಿಂದಿನವರ ಸಮಸ್ಯೆ ಬೇರೆ ಈಗಿನವರ ಸಮಸ್ಯೆ ಬೇರೆ‌,ಮುಂದಿನವರ ಸಮಸ್ಯೆ ಬೇರೆ ಆಗಿದ್ದರೂ ಅದಕ್ಕೆ ಕಾರಣ ಮತ್ತು ಪರಿಹಾರ ಒಂದೇ ಅದೇ ಅಜ್ಞಾನದ ನಡೆ ನುಡಿ ಧರ್ಮ ಕರ್ಮ ವಾಗಿರುತ್ತದೆ. ಇದನ್ನು ಹಿಂದಿನಜನ ಜ್ಞಾನದೆಡೆಗೆ  ನಡೆಯುತ್ತಾ ಪರಿಹಾರ ಕಂಡಿದ್ದರೆ  ಈಗಿನವರು ವಿಜ್ಞಾನದೆಡೆಗೆ  ಧಾವಿಸಿ ದ್ದಾರೆ. ಮುಂದಿನ ಪೀಳಿಗೆಗೆ ನಾವೇ ದಾರಿದೀಪವಾಗಿರುವಾಗ ನಮ್ಮ ನಡೆ ಯಾವ ಕಡೆ ಎನ್ನುವುದರ ಮೇಲಿದೆ .ಸಮಸ್ಯೆಯಿಲ್ಲದ ಜೀವನವಿಲ್ಲ.ಆದರೆ ಜೀವನವಿಡೀ ಸಮಸ್ಯೆಯೇ ಇರೋದು ಜೀವನವಾಗದು.
ಕಷ್ಟಪಡಬೇಕು‌ನಿಜ ಆದರೆ ಸುಖವೇ ಸಿಗದ ಕಷ್ಟದಲ್ಲಿ ಆತ್ಮಕ್ಕೆ ತೃಪ್ತಿ ಸಿಗದು. ಮಾನವನ ಮಧ್ಯಸ್ಥಿಕೆ ಯಲ್ಲಿ ಒಳಗಿರುವ ದೈವ ಹಾಗು ಅಸುರ ಶಕ್ತಿಯನ್ನು  ಹೇಗೆ ಬಳಸಿದರೆ  ಸಮಸ್ಯೆಗೆ ಪರಿಹಾರವಿದೆ ಎನ್ನುವ ಜ್ಞಾನವಿದ್ದರೆ  ಸಮಸ್ಯೆಯ ಮೂಲ ತಿಳಿಯಬಹುದು. ರೆಂಬೆಕೊಂಬೆಗಳನ್ನು  ಕಡಿದರೂ ಬುಡ ಸರಿಯಿಲ್ಲವಾದರೆ ಮತ್ತೆ ಮರ ಅಥವಾ ಗಿಡ ಚಿಗುರುತ್ತಲೇ  ಇರುತ್ತದೆ .ಹಾಗಾಗಿ ನಮ್ಮ ಭಾರತೀಯರ ಸಮಸ್ಯೆಗೆ ಕಾರಣ ಮೂಲದ ಶಿಕ್ಷಣವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸೋತು ಹೊರಗಿನ ಶಿಕ್ಷಣ ಪಡೆದು ಮುಂದೆ ನಡೆದವರು ಹಣದ ಶ್ರೀಮಂತ ರಾದರು. ಜ್ಞಾನದ ಶ್ರೀಮಂತ ರಲ್ಲಿದ್ದ ಶಾಂತಿ  ಹಣದ ಶ್ರೀಮಂತ ರಲ್ಲಿರದೆ ಸಮಸ್ಯೆಯನ್ನು ಹಣದಿಂದ ತೀರಿಸಿಕೊಳ್ಳಲು ಹೋಗಿ ಇನ್ನಷ್ಟು  ಋಣ ಅಥವಾ ಸಾಲ ಮಾಡಿ ಹೋದರು. ಇದನ್ನು ಜ್ಞಾನದಿಂದ ತಿಳಿದವರು ಹಣವನ್ನು ದಾನಧರ್ಮ ಕ್ಕೆ ಬಳಸಿ  ದೈವತ್ವ ಪಡೆದು ಸಮಸ್ಯೆಯಿಂದ ಮುಕ್ತಿ ಪಡೆದರು. ಕಾಣದ ಸಮಸ್ಯೆಯನ್ನು ಕಾಣುವ  ಹಣದಿಂದ ತೀರಿಸುವಾಗ ಕಾಣದ ಜ್ಞಾನದ ಅಗತ್ಯವಿದೆ. ಕಾರಣ ಸಮಸ್ಯೆ ಬೆಳೆದಿರೋದು ಕಾಣುವ ಭೌತಿಕದ ಆಸೆ ಆಕಾಂಕ್ಷೆಗಳಾದಾಗ ಅದರಿಂದ ದೂರವಿರಲು ಸತ್ಯಜ್ಞಾನವಿರಬೇಕು. ಇವೆರಡರ ನಡುವೆ ಜೀವನ‌
ನಡೆಸುವಾಗ ಕೆಲವೊಮ್ಮೆ ಸಮಸ್ಯೆಯನ್ನು ಎದುರಿಸಲಾಗದೆ ಪರರ ಸಹಕಾರ,ಸಲಹೆ,ಸೂಚನೆಗಳು ಅಗತ್ಯವಾಗುತ್ತದೆ. ಆ ಸಮಯದಲ್ಲಿ  ಉತ್ತಮವಾದ ಸತ್ಸಂಗ ವಿದ್ದರೆ ‌ಪುಣ್ಯ. ದುಷ್ಟರ ಸಂಗ ಸಿಕ್ಕರೆ ಮುಗಿಯಿತು ಕಥೆ. ಹಾಗಾಗಿ  ಸಂಸಾರಕ್ಕೆ ಇಳಿದವರ ಸಮಸ್ಯೆಗೆ ಪರಿಹಾರ  ಕೊಡಲು  ಆ ಸಮಸ್ಯೆ ಯಿಂದ ಹೊರಬಂದವರಿಗೆ ಸಾಧ್ಯವಿದೆ ಸಂಸಾರವನ್ನು ಬಿಟ್ಟು ನಡೆದವರಿಗೆ ಅದರ ಅನುಭವವಿಲ್ಲದೆ ಪರಿಹಾರ  ಕೊಡಲು  ಸಾಧ್ಯವಾಗದು. ಶ್ರೀ ಶಂಕರಭಗವತ್ಪಾದರು ಮಂಡನಮಿಶ್ರರೊಂದಿಗೆ  ವಾದದಲ್ಲಿ ಗೆದ್ದ ಪ್ರಸಂಗದಲ್ಲಿ ಮಂಡನಮಿಶ್ರರ ಪತ್ನಿ ಉಭಯಭಾರತಿಯವರು ತನ್ನೊಂದಿಗೆ ವಾದದಲ್ಲಿ ಗೆಲ್ಲಲು ಕಾಮಸೂತ್ರದ  ಪ್ರಶ್ನೆ ಹಾಕಿದಾಗ ಸಂನ್ಯಾಸಿಗಳಾಗಿದ್ದ ಶ್ರೀ ಶಂಕರರಿಗೆ ಉತ್ತರ ನೀಡಲಾಗದೆ ಕೆಲಸಮಯದ  ನಂತರ  ಆ ಪ್ರಶ್ನೆಗೆ ಉತ್ತರ ಕೊಡಲು  ಪರಕಾಯ ಪ್ರವೇಶ ಮಾಡಿದ್ದರೆಂದೂ ನಂತರ  ವಾದದಲ್ಲಿ ಗೆದ್ದರೆಂಬುದು  ತಿಳಿದ ವಿಚಾರ. ಹಾಗಾಗಿ ಎಲ್ಲಾ ಪ್ರಶ್ನೆಗೂ ಎಲ್ಲಾ ಸಮಸ್ಯೆಗೂ ಉತ್ತರ ಹಾಗು ಪರಿಹಾರವಿದ್ದರೂ  ಯಾರೊಂದಿಗೆ ಯಾವ ಪ್ರಶ್ನೆಗೆ ಉತ್ತರ ತಿಳಿದರೆ ಉತ್ತಮ ಎನ್ನುವ  ಸತ್ಯಜ್ಞಾನ ಅಗತ್ಯವಿದೆ. ಅಂದಿನ  ಮಹಾಜ್ಞಾನಿಗಳ ಸ್ವತಂತ್ರ ಜ್ಞಾನ ಇಂದಿಲ್ಲ.ಓದಿ ತಿಳಿದರೆ ಅನುಭವವಿಲ್ಲ.ಅನುಭವಿಸಿ ತಿಳಿದು  ಬರೆದು ತಿಳಿಸಿದರೆ ಓದುವವರಿಲ್ಲ. ಒಟ್ಟಿನಲ್ಲಿ ಅವರವರ ಸಮಸ್ಯೆಗೆ  ಅವರೆ ಕಾರಣವಾದಾಗ ಒಳಗೇ‌ಇದ್ದು ಪರಿಹಾರ ಕಂಡುಕೊಂಡರೆ  ಉತ್ತಮ ಜ್ಞಾನ. 
ಎಲ್ಲಾ ಸಮಸ್ಯೆಯನ್ನೂ ಸರ್ಕಾರ ಪರಿಹಾರ ನೀಡುವುದೆನ್ನುವುದು ತಪ್ಪು ಕಲ್ಪನೆ. ಪ್ರಜೆಗಳಾದವರು ಅವರವರ ಮನೆಯೊಳಗಿನ ಸಮಸ್ಯೆಯನ್ನು ಸಮಾಜದಲ್ಲಿ ಹರಡಿಕೊಂಡು ಮಾಧ್ಯಮಗಳ ಮೂಲಕ ಮನೆ ಮನೆ ತಲುಪಿಸಿ ಸರ್ಕಾರದಿಂದ  ಪರಿಹಾರ ಪಡೆದರೆ  ಸಾಲ ಬೆಳೆದು ಇನ್ನೊಂದು ದೊಡ್ಡ ಸಮಸ್ಯೆ ಮನೆ ಸೇರುತ್ತದೆ. ಒಳಗಿರುವಸಮಸ್ಯೆಗೆ ಪರಿಹಾರ ಒಳಗೇ ಸಿಗುವಂತಿದ್ದರೆ ಹುಡುಕಬೇಕು. ಸಿಕ್ಕರೆ ಮೂಲದಲ್ಲಿಯೇ ಪರಿಹಾರವಾದಂತೆ.
ಹೊರತಂದಷ್ಟೂ ಬೆಳೆಯುತ್ತದೆ. ಇದೊಂದು ಸಾಮಾನ್ಯ ಜ್ಞಾನ. ಸ್ತ್ರೀ ಯರಾಗಲಿ  ಪುರುಷರಾಗಲಿ   ಸಂಸಾರದೊಳ
ಗಿರುವ ಸಮಸ್ಯೆಗೆ ಪರಿಹಾರವನ್ನು ಅಧ್ಯಾತ್ಮ ಮಾರ್ಗದಲ್ಲಿ ಕಂಡುಕೊಂಡರೆ  ಶಾಂತಿ. ತಿಳಿಯದೆ ಹೊರಬಂದು ಭೌತಿಕದಲ್ಲಿ ‌ಹುಡುಕಿದರೂ ಸಿಗೋದಿಲ್ಲ.  ದೇಶದ ಸಮಸ್ಯೆಗೆ ವಿದೇಶದಿಂದ ಪರಿಹಾರ ಕಂಡುಕೊಂಡರೆ  ವಿದೇಶದ ಸಾಲ ಬೆಳೆಯುತ್ತದೆ. ತೀರಿಸದೆ ವಿಧಿಯಿಲ್ಲ. ಹೀಗಾಗಿ ಎಷ್ಟೋ ವಿದ್ಯಾವಂತರು ಜ್ಞಾನಿಗಳು  ಸಮಸ್ಯೆಯನ್ನು  ದೊಡ್ಡದಾಗಿಸಿಕೊಂಡು ಹೊರಗೆ ಬಂದು ಹೊರಗುಳಿದರು. ಇದರಿಂದಾಗಿ  ಮೂಲದ ಕೊಂಡಿ ಕಳಚಿ ಜೀವ ಅತಂತ್ರವಾಯಿತು.  ಅತಂತ್ರವಾದವರ ಜೊತೆಗೆ ‌ ಸ್ವತಂತ್ರ ಜ್ಞಾನವಿದ್ದವರೂ ಹೋದರೆ ಅಧೋಗತಿ.
ಶಿವ ಶಕ್ತಿಯರ  ಸಹಕಾರ ಸಹಾಯವಿಲ್ಲದೆ ಯಾವ ಸಮಸ್ಯೆಗೂ ಪರಿಹಾರ ಸಿಗದು.

No comments:

Post a Comment