ಭಯೋತ್ಪಾದನೆ ಅಧ್ಯಾತ್ಮದ ವಿಷಯದಲ್ಲಿ ಭೌತಿಕ ವಿಷಯದಲ್ಲಿ ಹೆಚ್ಚಾದಾಗಲೇ ಮಾನವ ತನ್ನ ಅಸ್ತಿತ್ವಕ್ಕೆ ಹೋರಾಟ ಮಾಡುವಂತಾಗುತ್ತದೆ.ಇಷ್ಟಕ್ಕೂ ಭಯ ಒಂದು ರೋಗವೆ? ವರವೇ?
ಭಯಭಕ್ತಿ ಇದ್ದರೆ ಮಾತ್ರ ಗುರುಹಿರಿಯರನ್ನು ದೇವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎನ್ನುವರು ಅಧ್ಯಾತ್ಮ ಚಿಂತಕರು .ಹಾಗೆಯೇ ಭಯೋತ್ಪಾದನೆ ನಡೆಸುವ ಜನರೂ ತಮ್ಮ ಮೇಲೆ ಭಯ ಹುಟ್ಟಿಸುವುದೇ ಉದ್ದೇಶ ಮಾಡಿಕೊಂಡಿರುವರು. ಇದರಲ್ಲಿ ಧರ್ಮಾಧರ್ಮಗಳ ಪ್ರಶ್ನೆಗೆ ಉತ್ತರ ಹುಡುಕಿದರೆ ಇಬ್ಬರೂ ಭಯ ಹುಟ್ಟಿಸಿ ಆಳುವವರೆ ,ಒಬ್ಬರು ಮುಕ್ತಿಗೆ ಮಾರ್ಗದರ್ಶಕರಾದರೆ ಇನ್ನೊಬ್ಬರು ಜೀವಭಯದರ್ಶಕರು ಜೀವಭಯ ಇಲ್ಲದೆ ಎಷ್ಟೋ ಭಯೋತ್ಪಾದಕರು ತಾವು ಸತ್ತು ಇತರರನ್ನು ಸಾಯಿಸುತ್ತಿರುವರೆಂದರೆ ಇವರಿಗೆ ಮಾರ್ಗದರ್ಶನ ನೀಡಿದ ಗುರು ಅಸುರರಾಗಿವರು. ಒಟ್ಟಿನಲ್ಲಿ ಜೀವನದಲ್ಲಿ ಭಯವಿಲ್ಲದೆ ಜೀವಿಸಲಾಗದೆನ್ನುವ ಮಟ್ಟಿಗೆ ಹೊರಗಿನವರು,ಒಳಗಿನವರು ಮಧ್ಯವರ್ತಿಗಳು ತಾವೂ ಮಾನವರೆ ಎನ್ನುವ ಸತ್ಯ ತಿಳಿಯದೆ ಅಮಾಯಕರಿಗೆ ಭಯಹುಟ್ಟಿಸುತ್ತಾ ತಮ್ಮ ಬೇಳೆಬೇಯಿಸಿಕೊಂಡರೆ ಅಧರ್ಮ ಕ್ಕೆ ತಕ್ಕಂತೆ ಫಲ. ಕರ್ಮಕ್ಕೆ ತಕ್ಕಂತೆ ಫಲ. ಇದು ಎಲ್ಲಾ ಕ್ಷೇತ್ರಗಳಲ್ಲಿ ನಡೆದಿರೋದು ದುರಂತ.ಸುರಕ್ಷಿತವಾಗಿದ್ದ ಮಹಿಳೆ ಮಕ್ಕಳನ್ನೂ ಬಿಡದೆ ಮನೆಯಿಂದ ಹೊರತಂದು ಹೋರಾಟಕ್ಕೆ ಬಳಸಿದರೆ ಮನೆಯೊಳಗೆ ಸೇರಿಸುವವರು ಯಾರು? ದಾರಿತಪ್ಪಿಸಿಕೊಂಡವರು ಭಯೋತ್ಪಾದಕ ಕೃತ್ಯಕ್ಕೆ ಸಹಕರಿಸಿದರೆ ಭಯೋತ್ಪಾದನೆಗೆ ಇನ್ನಷ್ಟು ಬಲ ಸಿಗುತ್ತದೆ. ಮನಸ್ಸು ಒಳಗಿದ್ದಷ್ಟು ಸುರಕ್ಷಿತ.ಹೊರಬಂದಷ್ಟೂ ಕಷ್ಟ ನಷ್ಟ ಇದು ಸನಾತನ ಕಾಲದಿಂದಲೂ ತಿಳಿದ ಸತ್ಯ. ನಮ್ಮ ಮನಸ್ಸೇ ಮಿತ್ರ ಶತ್ರುವಾಗಿರುವಾಗ. ಯಾರಿಂದ ಯಾರಿಗೆ ಭಯ? ಚಿಂತನೆಗಳು ಉತ್ತಮವಾಗಿದ್ದು ಯಾರನ್ನೂ ತಂತ್ರದಿಂದ ಆಳದಿದ್ದರೆ ನಿರ್ಭಯ .ತನ್ನ ತಾನರಿಯಲು ಭಯವೂ ಸಾತ್ವಿಕವಾಗಿರಬೇಕು. ರಾಜಸವಾಗಿದ್ದರೆ ಆಳುವರು ತಾಮಸವಾಗಿದ್ದರೆ ಸೋಮಾರಿಗಳಾಗಿದ್ದು ಮಾರಿಗೆ ಬಲಿಯಾಗುವರು.
ಜಯದೇವ ಜಯದೇವ ಶ್ರೀ ಗಣಪತಿರಾಯ ಜಯಗಣಪತಿ ರಾಯ ಭಯಕಾರಕ ಭಯಹಾರಕ ಓಂಕಾರಕಾಯ - ದ.ರಾ.ಬೇಂದ್ರೆ..
ದೈವಶಕ್ತಿಯಮೇಲಿನ ಭಯಕ್ಕೂ, ದೆವ್ವಶಕ್ತಿಯ ಕೆಳಗಿರುವ ಭಯಕ್ಕೂ ವ್ಯತ್ಯಾಸವಿದೆ. ಕೆಳಗಿರುವ ಭಯಮೇಲ್ಮಟ್ಟದ ಶಕ್ತಿಯನರಿಯಲಾಗದು. ಮೇಲ್ಮಟ್ಟದ ಶಕ್ತಿಯ ಹಿಂದೆ ಹೋದವರಿಗೆ ಕೆಳಗಿರುವ ದೆವ್ವಗಳು ಕಾಣೋದಿಲ್ಲ. ಇವೆರಡೂ ಮಾನವನೊಳಗೇ ಇರುವ ಅಗೋಚರ ಶಕ್ತಿ. ಯಾರಿಗೆ ಭಯಬಿದ್ದರೂ ತನ್ನ ತಾನರಿಯಲಾಗದು.
ಸಿನಿಮಾ,ನಾಟಕಗಳಲ್ಲಿ ತೋರಿಸುವ ಭಯೋತ್ಪಾದನೆಯ ದೃಶ್ಯಗಳನ್ನು ನೋಡಿಕೊಂಡು ಒಳಗಿದ್ದ ಧೈರ್ಯ ವನ್ನು ಮರೆತು ಹಿಂದುಳಿದವರ ಸಂಖ್ಯೆ ಮಿತಿಮೀರಿದೆ. ಆದರೂ ಭಯ ಬಿಟ್ಟು ಹೊರಗೆ ಬಂದು ಸಾಧಕರಾದವರೆ ಭಯವನ್ನು ಹುಟ್ಟಿಸುವ ಪಾತ್ರಧಾರಿಗಳಾದರೆ ಅಧರ್ಮ. ಕಲಾಕ್ಷೇತ್ರವು ಆಂತರಿಕ ಶುದ್ದಿಮಾಡಿ ಮಾನವನ ಭಯ ನಿವಾರಣೆ ಮಾಡುವಲ್ಲಿ ಯಶಸ್ವಿಯಾದರೆ ಕಲಾವಿದರ ಆರೋಗ್ಯವೂ ಉತ್ತಮ,ಸಮಾಜದ ಆರೋಗ್ಯವೂ ಉತ್ತಮ. ಎಲ್ಲರೂ ಕಲಾವಿದರಾದರೆ ಕಲಾಪ್ರೇಮಿಗಳಾಗಿ ನೋಡುಗರೆಲ್ಲಿರುವರು? ಎಲ್ಲಾ ಶಾಂತಿಯಿಂದಿದ್ದರೆ ಕ್ರಾಂತಿಕಾರರಿಗೆ ಮನರಂಜನೆ ಎಲ್ಲಿರುವುದು? ಮಧ್ಯವರ್ತಿಗಳ. ಕುತಂತ್ರದಿಂದ ಭಯ ಭಕ್ತಿ ನಾಟಕಕ್ಕೆ ಸೀಮಿತವಾದಷ್ಟೂ ಭಯೋತ್ಪಾದಕರೆ ಹೆಚ್ಚುವರು.
ಹಾಗಾದರೆ ನಿಜವಾದ ಭಯೋತ್ಪಾದನೆ ಕೇಂದ್ರ ಯಾವುದು?
ಮಹಾಶಿವನ ಸಂಸಾರದಲ್ಲಿ ಮಿತ್ರ ಶತ್ರುಗಳೆಲ್ಲರೂ ಒಂದಾಗಿ ಇರಲು ಕಾರಣ ಶಿವಶಕ್ತಿಯ ಸಮಾನತೆ. ಭಯದಿಂದ ಅಸಮಾನತೆಯೇ ಹೆಚ್ಚುವುದು. ಇದೇ ಕ್ರಾಂತಿಗೆ ಕಾರಣವಾಗುವುದು. ಕ್ರಾಂತಿಯು ಭಯವನ್ನು ಹೆಚ್ಚಿಸುವುದಲ್ಲವೆ? ಆತ್ಮದುರ್ಭಲ ಭಾರತವಾಗಲು ಭಯೋತ್ಪಾದನೆ ಯೇ ಕಾರಣವಾಗಿರುವುದು.
No comments:
Post a Comment