ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, October 29, 2023

ಗ್ರಹಣ ದೋಷ ಹಣವಿದ್ದವರಿಗೆ ಹೆಚ್ಚು

ಮಾಧ್ಯಮಗಳಲ್ಲಿ  ಗ್ರಹಣದ ವಿಚಾರ ಪ್ರಚಾರ ಮಾಡುವಾಗ ಅಧ್ಯಾತ್ಮ ಚಿಂತಕರು ಒಂದೆಡೆ ವೈಜ್ಞಾನಿಕ ಚಿಂತಕರು ಮತ್ತೊಂದು ಕಡೆ ವಿವರಣೆ ಕೊಡಲು ಅವಕಾಶ ನೀಡುವರು. ಜನರ ಚಿಂತನೆ ಯಾವ ದಿಕ್ಕಿನೆಡೆಗೆ ‌ನಡೆದರೂ ಗ್ರಹಣವನ್ನು ತಡೆಯೋ ಶಕ್ತಿ ಯಾರಿಗೂ ಇಲ್ಲ. ಇದೊಂದು ಸೌರಮಂಡಲದ ಕೌತುಕವೆಂದವರು ಮನೆಯಿಂದ ಹೊರಬಂದು ಗ್ರಹಣವೀಕ್ಷಣೆ ಮಾಡಿದರೆ ರಾಹುಕೇತುಗಳ  ಕಾಟವೆನ್ನುವವರು ಮನೆಯೊಳಗೆ ಹೊರಗೆ ದೇವತಾರಾಧನೆ ಮಾಡುವರು. ಇದರಿಂದಾಗಿ  ಶಾಂತಿ ಸುಖ ನೆಮ್ಮದಿ ಹೆಚ್ಚುವುದು  ಎನ್ನುವರು. ಆದರೆ ಇವೆರಡರ ಮಧ್ಯೆ ನಿಂತು  ಜನರಲ್ಲಿ ಇಲ್ಲದ ಭಯ ಹುಟ್ಟಿಸುವವರಾಗಲಿ,ಭಯಪಡದೆ  ಧೈರ್ಯ ವಾಗಿರಿ ಎನ್ನುವ ಹಲವು ಮಂದಿಗೆ  ಲಾಭವೇ ಆಗುತ್ತದೆ. ಜನ ಮಾತ್ರ ತಮ್ಮ ಒಳಗಿರುವ  ಗ್ರಹ ದೋಷ ನಿವಾರಣೆಗಾಗಿ  ಪೂಜೆ ಮಾಡಿಸಿ ಹೋಮಹವನದಿಂದ ಶಾಂತಿ ಪಡೆದರೆ ಏನೂ ಮಾಡದವರು  ತಮ್ಮ ಗ್ರಹಚಾರಕ್ಕೆ ಈ ಪ್ರಚಾರಕರೆ ಕಾರಣವೆಂದರೂ ಸರಿ.
ಒಟ್ಟಿನಲ್ಲಿ ಭೂಮಿಯ ನೆರಳು ಚಂದ್ನನ ಮೇಲೆ ಬಿದ್ದಾಗ ಅದರಿಂದ ಭೂಮಿಯ ಜನರ ಜೀವನ ದಲ್ಲಿ  ಕೆಲವು ಬದಲಾವಣೆಯಾಗೋದು ಸತ್ಯ. ಯಾವುದೇ ಬದಲಾವಣೆಯನ್ನು ಸ್ವೀಕರಿಸುವ ದೃಷ್ಟಿ ಕೋನದಲ್ಲಿ ಬದಲಾವಣೆ ಆದಾಗಲೇ‌ ಮನಸ್ಸು  ಶಾಂತಿ ಕಳೆದುಕೊಳ್ಳುವುದು.ಇಷ್ಟಕ್ಕೂ ಆ ಸಮಯದಲ್ಲಿ ದೇವತಾರಾಧನೆ ಜಪ ತಪ ದ್ಯಾನ ಮಾಡಿ ತಮ್ಮ ಆತ್ಮಶಕ್ತಿ ಹೆಚ್ಚಿಸಿಕೊಂಡರೆ  ಆಗೋ ನಷ್ಟವಾದರೂ ಏನು? ಇದನ್ನು ವಿರೋಧಿಸಿ ಆಗುವ‌ಲಾಭ ಏನೆಂಬುದನ್ನು ಯಾರಾದರೂ ಪ್ರಶ್ನೆ ಮಾಡಿದರೆ‌  ಉತ್ತರ ಸಿಗೋದಿಲ್ಲ. ಪ್ರತಿಕ್ಷಣವೂ ಈ ಜೀವ ಗ್ರಹಗತಿಗೆ ತಕ್ಕಂತೆ  ನಡೆದಿರುತ್ತದೆ.ಜನ್ಮ ಪಡೆಯುವುದೇ ಈ ಗ್ರಹಚಾರದ ಫಲ ಎನ್ನಬಹುದು. ಗ್ರಹಣ ಎಂದರೆ ಗ್ರಹಗಳನ್ನು ಹಿಡಿದುಕೊಂಡು ಹಣ ಮಾಡೋದಲ್ಲ.  ಆ ಹಣದಿಂದ. ಅಂಟಿಕೊಂಡಿರುವ ಗ್ರಹಚಾರ ತೊಳೆದುಕೊಳ್ಳಲು‌ ಒಂದು ಅವಕಾಶವಷ್ಟೆ. ಈ ಅವಕಾಶವನ್ನು ‌ ಯಾರು ಹೇಗೆ‌ಬಳಸುವರೋ ಹಾಗೇ ಫಲಾಫಲಗಳು ಸಿಗುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ  ವಿವರಿಸುವುದನ್ನು‌ ನೋಡಿದಾಗ ಕೇಳಿದಾಗ ಕೆಲವರಿಗೆ‌ಇದ್ದ ಭಯ ಹೋಗುತ್ತದೆ. ಕೆಲವರಿಗೆ ಇಲ್ಲದ ಭಯ ಪ್ರಾರಂಭವಾಗುತ್ತದೆ.ಭಯದಿಂದ  ಉತ್ತಮ ಮಾರ್ಗ ಹಿಡಿದರೆ ಒಳ್ಳೆಯದಾದರೆ‌ ಕೆಲವರು ಕೆಟ್ಟ ಮಾರ್ಗ ಹಿಡಿದು ಕೆಟ್ಟದ್ದಾಗುವುದು. ಗ್ರಹಣ ದೋಷವನ್ನು ‌ನಿವಾರಸಿಕೊಂಡರೆ ಮನಸ್ಸಿಗೆ ಶಾಂತಿ ಸಿಗುವ‌ಕಾರಣ ಶಾಂತಿ‌ಮಾಡಿಸುವರು. ಇಲ್ಲಿ ಕೇವಲ ಗ್ರಹಣದಿಂದ ದೋಷವಿರದ‌ಕಾರಣ ನಮ್ಮ ನಡೆ ನುಡಿಯಲ್ಲಿರುವ ದೋಷವನರಿತು‌ನಡೆದವರಿಗೆ ಗ್ರಹಣ ದೋಷ ಅಂಟುವುದಿಲ್ಲ.ಅಂದರೆ ಅವರವರ ಧರ್ಮ/ಕರ್ಮ ಅರ್ಥ ಮಾಡಿಕೊಂಡು ಸತ್ಯವನರಿತು‌ ನಡೆದವರಿಗೆ ಗ್ರಹಚಾರ ಕಡಿಮೆ.ಇದ್ದರೂ‌ ಅಷ್ಟು  ಘೋರವಾಗಿರದು ಎನ್ನುವ ಕಾರಣಕ್ಕೆ  ಹಿಂದೂ ಧರ್ಮದವರು ಗ್ರಹಗಳ ಚಲನ‌ವಲನವನ್ನು  ತಿಳಿದು ಭವಿಷ್ಯ ನಿರ್ಧಾರ ಮಾಡುತ್ತಾರೆ. ವಿಪರ್ಯಾಸವೆಂದರೆ ಭವಿಷ್ಯ ಉತ್ತಮವಾಗಿ ಕಂಡರೂ  ಅವರಿಗೆ ಕೊಡುವ  ಶಿಕ್ಷಣದ ವಿಷಯದಲ್ಲಿಯೇ ವಿಷವಿದ್ದರೆ ಪ್ರಯೋಜನವಿಲ್ಲ. ಹೀಗಾಗಿ ಭವಿಷ್ಯ ಸುಳ್ಳಾಯಿತು ಎನ್ನಲಾಗದು.ನಮ್ಮಲ್ಲಿ ಸುಳ್ಳಿತ್ತು ಎನ್ನಬೇಕಷ್ಟೆ. ಸತ್ಯ ಒಂದೇ ಅದನ್ನು ತಿರುಚಿ ಹರಡಿದಾಗ ಜನ್ಮ ತಾಳುವ ಅನೇಕ ಸುಳ್ಳಿನ ಸಂತೆಯಲ್ಲಿ ವ್ಯವಹಾರ ನಡೆಸಿದವರ ಜೀವನದಲ್ಲಿ ಸಮಸ್ಯೆಗಳೇ ಹೆಚ್ಚುಇದಕ್ಕೆ ಕಾರಣ ದೂರದ ಬೆಟ್ಟ ನುಣ್ಣಗೆ ಎನ್ನುವಂತೆ ಹತ್ತಿರವಿರುವ  ಕಲ್ಲುಮಣ್ಣುಗಳ ಬಿಟ್ಟು ದೂರದ ಬೆಟ್ಟ ಹತ್ತಲು ಹೋಗಿರುವ ಮನಸ್ಸು.   ಬೇರೆ ಗ್ರಹಗಳವರೆಗೆ ಹೋಗುವ‌ ಬುದ್ದಿಶಕ್ತಿ ಇರುವ‌ಮಾನವನಿಗೆ ತನ್ನು ಹತ್ತಿರವೇ ತನ್ನ ಕಾಲಬುಡವಿರುವ ಭೂಮಿಯ ಬಗ್ಗೆ ಅರಿವಿರದೆ ಅಥವಾ ಇದ್ದರೂ  ತಿರಸ್ಕಾರದಿಂದ ನೋಡಿದರೆ  ಗ್ರಹಚಾರ ಸುತ್ತಿಕೊಳ್ಳುವುದು ಸಹಜ.ಆದರೆ ಈಗಿನವರು ಗ್ರಹಗಳ ಮೇಲೇ ಲಗ್ಗೆ ಹಾಕಿ ಸಂಶೋಧನೆ ನಡೆಸಿ ಎಲ್ಲಾ ಸುಳ್ಳು ಎಂದು  ವಾದ ಮಾಡಿದರೂ‌ ಪ್ರತಿವಾದಕರು ಗ್ರಹದಂತೆ ಸುತ್ತುವುದನ್ನು ಬಿಡಲಾಗದು.ಭೂಮಿಯೇ ಒಂದು ಗ್ರಹ.ಅದರ ಮೇಲಿರುವ‌ ಮನಷ್ಯರು ಗ್ರಹಗಳ ಬಿಂದುಗಳು. ಭೂಮಿಯನ್ನು ಸುತ್ತುವ ಚಂದ್ರಗ್ರಹಕ್ಕೆ‌ಗ್ರಹಣ ಹಿಡಿಯೋದು ಎಂದರೆ ಭೂಮಿಯ ನೆರಳು  ಚಂದ್ರನ ಮೇಲೆ ಬಿದ್ದಾಗ  ವಾತಾವರಣದಲ್ಲಿ ಆಗುವ‌ ಬದಲಾವಣೆಯ ಕಾಲ. ಆ ಬದಲಾವಣೆಯನ್ನು ಮಾನವನು ತನ್ನ ಮನಸ್ಸಿಗೆ ಬಂದಂತೆ ವಿವರಿಸುವ ಸ್ವಾತಂತ್ರ್ಯ ವಿದೆ. ಆದರೆ, ಅದನ್ನು  ಸರಿಯಾಗಿ ಅರ್ಥ ಮಾಡಿಸುವ ಜ್ಞಾನದಲ್ಲಿಯೇ  ವ್ಯತ್ಯಾಸವಿದ್ದಾಗ ಎಲ್ಲರಿಗೂ  ಹಿಡಿದಿರುವ ಗ್ರಹಣವನ್ನು ಬಿಡಿಸಲಾಗದು. ಹೀಗಾಗಿ ದೈವ ಶಕ್ತಿಯನ್ನು ಹೆಚ್ಚಿಸಿಕೊಂಡು  ಸತ್ಯವರಿಯುವ ಸ್ವಾತಂತ್ರ್ಯ  ಎಲ್ಲರಿಗೂ ಇದೆ.ಆದರೆ ಅಂತಹ ಶಕ್ತಿಯನ್ನು ಬೆಳೆಸೋರಿಲ್ಲದೆ ಗ್ರಹಣ ಹೆಚ್ಚಾಗಿದೆ. 
ಚಂದ್ರಗ್ರಹಣ  ರಾತ್ರಿಯ ಸಮಯದಲ್ಲಿ ಮಾತ್ರ ಕಾಣೋದರಿಂದ  ನೋಡೋದಕ್ಕೆ  ಹಲವರು ನಿದ್ರೆ ಮಾಡದಿದ್ದರೆ ಕೆಲವರು ನೋಡಿ ಜಪ ತಪದಿಂದ ತಮ್ಮ ಆತ್ಮಶಕ್ತಿ ಹೆಚ್ಚಿಸಿಕೊಳ್ಳುವರು. ಇವೆರಡೂ ಮಾಡದವರು ನಿದ್ರೆಯಲ್ಲಿರುವರು. ಗಾಳಿಯಲ್ಲಿ ಹರಡೋ ಸೂಕ್ಮವಾದ‌ ಅಗೋಚರ ಶಕ್ತಿ ಎಲ್ಲರೊಳಗೂ ಹರಡುತ್ತದೆ. ಯಾರು ಎಚ್ಚರವಾಗಿರುವರೋ ಅವರಿಗೆ ಹೆಚ್ಚು ಆರೋಗ್ಯಕ್ಕೆ ಹಾನಿ ಇರದು.ಹೀಗಾಗಿ  ಗ್ರಹಣಕಾಲದಲ್ಲಿ   ನಿದ್ರೆ    ಮಾಡಬಾರದೆ
ನ್ನುವರು. 
ಒಟ್ಟಿನಲ್ಲಿ  ನಮ್ಮ ಆತ್ಮೋದ್ದಾರಕ್ಕೆ ನಮ್ಮ ಮನಸ್ಸೇ ಕಾರಣ. ಮನಸ್ಸು ಕ್ಷೀಣವಾಗಿದ್ದರೆ ಚಂದ್ರ ದೋಷ ಎನ್ನುವರು. ಮನಸ್ಸಿದ್ದರೆ ಮಾರ್ಗ .ಆದರೆ ಮಾರ್ಗ ಉತ್ತಮವಾಗಿರಲು ಉತ್ತಮ ಮನಸ್ಸಿರಬೇಕಷ್ಟೆ.  ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭವಾದರೆ ನಷ್ಟ ಯಾರಿಗೆ?  ಮಧ್ಯವರ್ತಿಗಳು  ಬದಲಾದರೆ  ಬದಲಾವಣೆ ಸಾಧ್ಯವಿದೆ.
ಆದರೆ ಬದಲಾಗೋದೇ ಕಷ್ಟವಾಗಿದೆ.ಜೀವಾತ್ಮ ಪರಮಾತ್ಮನ ಸ್ಮರಣೆಯಲ್ಲಿದ್ದಾಗ ಗ್ರಹದೋಷವಿರದು.ಹಾಗಾದರೆ ಪ್ರತಿಕ್ಷಣವೂ ನಾಮಜಪದಲ್ಲಿರುವವರಿಗೆ ಗ್ರಹಚಾರವಿರದು.
ಗ್ರಹಣಕಾಲದಲ್ಲಿ  ಮಂದಿರ ಮನೆಯಲ್ಲಿರುವ ವಿಗ್ರಹವನ್ನು ‌ನೀರಿನಲ್ಲಿಡುವರು ಯಾಕೆ ಗೊತ್ತೆ?

No comments:

Post a Comment