ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, October 11, 2023

ರಾಜಕೀಯ ಮಾಧ್ಯಮ ಅಗತ್ಯವೆಷ್ಟಿದೆ?

ರಾಜಕೀಯ ‌ಮತ್ತು ಮಾಧ್ಯಮ ಇಲ್ಲದಿದ್ದರೆ  ಏನಾಗುತ್ತಿತ್ತು? 
ಯಾವೊಬ್ಬನೂ ಸಮಾಜದಲ್ಲಿ ಇದನ್ನು ಬಿಟ್ಟು ಜೀವನ
ನಡೆಸುತ್ತಿಲ್ಲವೆಂದರೆ ಇದರಿಂದಲೇ ಜೀವನವೇ ಅಥವಾ ಇದರ ಹಿಂದೆ ಜೀವನವಿದೆಯೆ?  ಮಧ್ಯವರ್ತಿಗಳಾಗಿ ನಿಂತಿರುವವರಿಗೆ ಇದರಿಂದ ಜೀವನ‌ನಡೆದಿದೆ ಉಳಿದವರು ಇವರ ಹಿಂದೆ ನಿಂತು ಹಿಂದುಳಿದವರಾಗಿದ್ದಾರೆನ್ನಬಹುದು.
ಹಾಗಾದರೆ ಮುಂದೆ‌ ನಡೆದವರು  ಯಾರು ?

ವಾಸ್ತವದಲ್ಲಿ ಬದುಕಲು ಹಿಂದಿನ ವಿಚಾರ ತಿಳಿಯುತ್ತಾ‌  ಮುಂದಿನ ಭವಿಷ್ಯವೇ‌ ಮುಖ್ಯವಾಗುತ್ತಾ ಇಂದು ಹಣಗಳಿಸಿ ಕೂಡಿಡುತ್ತಾ  ವ್ಯವಹಾರದಲ್ಲಿ ‌ಮುಳುಗಿದವರು ಮಾನವರು.
ದೇವತೆಗಳ ಕಾಲದಲ್ಲಿದ್ದ  ಸುಖ ಶಾಂತಿಯೇ ಬೇರೆ ಈಗಿನಸುಖವೇ ಬೇರೆಯಾಗುತ್ತಾ ಶಾಂತಿ ಕಳೆದುಕೊಂಡು ಹೊರಗಿನ ಹೋರಾಟ,ಹಾರಾಟ ಮಾರಾಟದಲ್ಲಿ ರಾಜಕೀಯತೆ ಹೆಚ್ಚಾಗುತ್ತಾ ಮಧ್ಯವರ್ತಿಗಳು ಸಾಕಷ್ಟು ಬೆಳೆದರು.ಅಂದರೆ ಇಲ್ಲಿ ಮಾಧ್ಯಮವೆಂದರೆ ಮಧ್ಯವರ್ತಿ ಎಂದರೆ ಸರಿಯಾಗುತ್ತದೆ. ಇವರ ಜೀವನ ನಡೆಸಬೇಕಾದರೆ ಸತ್ಯಕ್ಕಿಂತಮಿಥ್ಯವೇಹೆಚ್ಚುಹಣಸಂಪಾದನೆಗೆಯೋಗ್ಯವಾದ್ದರಿಂದ ಸತ್ಯ ಬಿಟ್ಟು ಮಿಥ್ಯ ಬೆಳೆಯಿತು. ಆದರೆ ದೇವರ ಹೆಸರಿನಲ್ಲಿ ಮಿಥ್ಯ ಬೆಳೆದಂತೆಲ್ಲಾ ದೈವಶಕ್ತಿ ಕ್ಷೀಣವಾಗುತ್ತಾ ಅಸುರಿ ಶಕ್ತಿ ಬೆಳೆಯಿತು. ಈ ಮಧ್ಯವರ್ತಿಗಳ ನಂಬಿ ಮನೆ ಬಿಟ್ಟು ಹೊರಬಂದವರು ತಿರುಗಿ    ಹೋಗಲಾಗದೆ‌     ಮರೆ
ಯಾದರು. ಮರೆಯಾದವರ  ಮರೆಯಬಾರದೆಂದು ಅವರ ಹೆಸರಿನಲ್ಲಿ ರಾಜಕೀಯ ಬೆಳೆಸಿಕೊಂಡು ದೊಡ್ಡ ದೊಡ್ಡ ಪ್ರತಿಮೆಯ ರೂಪದಲ್ಲಿ ಮಧ್ಯವರ್ತಿಗಳು ತಮ್ಮ ಜೀವನ‌ಕಟ್ಟಿಕೊಂಡರೂ  ಮಹಾತ್ಮರ ನಡೆನುಡಿಯಲ್ಲಿದ್ದ ಸತ್ಯ ಹಾಗು ಧರ್ಮ  ಅರ್ಥ ವಾಗದೆ ಪ್ರಚಾರಕ್ಕೆ ಬಳಕೆಯಾಗುತ್ತಾ ತತ್ವ ಬಿಟ್ಟು ತಂತ್ರಜ್ಞಾನ ಮಿತಿಮೀರಿತು. ತಂತ್ರದಿಂದ ಸ್ವತಂತ್ರ ಜ್ಞಾನ ಸೃಷ್ಟಿ ಮಾಡಲು ಹೋಗಿ ಅತಂತ್ರಸ್ಥಿತಿಗೆ ಮಾನವನ ಜೀವನ ನಿಂತಿದೆ ಎಂದರೆ ಮಾನವನಿಗೆ ಮಾನವನೇ ಶತ್ತು.
ಯಾವಾಗ ತನ್ನ ತಾನರಿಯದೆ‌ಮಧ್ಯವರ್ತಿಗಳನ್ನು ನಂಬಿದನೋ ಕೆಟ್ಟ. ಇಲ್ಲಿ ಯಾರೂ ಸ್ವತಂತ್ರ ರಾಗಿಲ್ಲ ಕಾರಣ ಭೂಮಿ  ನಮ್ಮ ಜೀವನ ನಡೆಸಲು ಒಂದು ಮಾಧ್ಯಮ. ಇದರ ಮೇಲೆ ನಿಂತು ಜನರನ್ನು ಆಳುವ ರಾಜಕೀಯ ಮತ್ತು ಮಾಧ್ಯಮಗಳಿಗೇ ಭೂಮಿಯ ಸತ್ಯ ಸತ್ವ ತತ್ಬದ ಅರಿವಿಲ್ಲ ಎಂದಾಗ ಇವರನ್ನು ನಂಬಿ ನಡೆಯೋ ಜನಸಾಮಾನ್ಯರ ಗತಿ ಅದೋಗತಿ. ಒಟ್ಟಿನಲ್ಲಿ ‌ ಒಬ್ಬರನ್ನೊಬ್ಬರು  ಅವಲಂಬಿಸಿ  ಸಹಕರಿಸುತ್ತಾ ಮುಂದೆ ಹೋಗುವಾಗ ನಮ್ಮೊಳಗೇ ‌ಇರುವ  ಆತ್ಮಶಕ್ತಿ ಬೆಳೆಯುತ್ತಿದೆಯೆ? ಕುಸಿಯುತ್ತಿದೆಯೆ? ಸ್ವಾವಲಂಬನೆ ಹೆಚ್ಚಾಗಿದೆಯೆ? ಪರಾವಲಂಬನೆ ಹೆಚ್ಚಾಗಿದೆಯೆ? ಸತ್ಯಜ್ಞಾನ‌ಬೆಳೆಯಿತೆ? ಮಿಥ್ಯಜ್ಞಾನ ಮಿತಿಮೀರಿತೆ? ದೇಶ  ವಿದೇಶವಾಯಿತೆ? ವಿದೇಶವೇ ದೇಶಕ್ಕೆ ಬಂತೆ? ಸ್ವಧರ್ಮ ರಕ್ಷಣೆಯಾಯಿತೆ ಪರಧರ್ಮ ವೆ? ಇವೆಲ್ಲವೂ  ಪ್ರಶ್ನೆಯಾಗಿದ್ದರೂ  ಉತ್ತರ ನಮ್ಮೊಳಗೇ ಕಂಡುಕೊಂಡರೆ  ನಾವು ಸ್ವತಂತ್ರ ರು. ಅದೂ ನಮ್ಮ ಆತ್ಮಸಾಕ್ಷಿಗೆ‌  ನಾವೇ ಹೊಣೆಗಾರರು. ಇದನ್ನು ಯಾವ ರಾಜಕೀಯ ಮಾಧ್ಯಮಗಳಿಂದ ಸರಿಪಡಿಸಲಾಗದು. ನಮ್ಮ ಜೊತೆಗಿರುವ ಸಂಬಂಧಿಕರಿಂದಲೂ ಅಸಾಧ್ಯ.ಕಾರಣ ಒಳಗೆ ಇರುವ‌ ಆತ್ಮಕ್ಕೆ   ತೃಪ್ತಿ ಸಿಗೋದಕ್ಕೆ  ರಾಜಕೀಯ ಮತ್ತು ಮಾಧ್ಯಮ  ಅಂದರೆ ಮಧ್ಯವರ್ತಿಗಳಿಂದ ಸಾಧ್ಯವಿಲ್ಲ ಎನ್ನುವ ಸತ್ಯ ನಮ್ಮ ಮಹಾತ್ಮರುಗಳು ಕಂಡುಕೊಂಡು  ಅದರಿಂದ ದೂರವಿದ್ದು ಅಧ್ಯಾತ್ಮ ಸಾಧನೆ ಮಾಡಿದ್ದರೆಂದರೆ ಈಗಿನ  ಸಾಧಕರಲ್ಲಿ ಇದನ್ನು ಕಾಣಬಹುದೆ? ಇಷ್ಟಕ್ಕೂ ನಮ್ಮ ದೇಶ  ನಡೆದಿರೋದು ಧರ್ಮ ನಿಂತಿರೋದು ಯಾರಿಂದ?
ಪ್ರಜಾಪ್ರಭುತ್ವದ ಪ್ರಜೆಗಳ ಜ್ಞಾನದಿಂದ ನಡೆದಿದೆ. ಇದರಲ್ಲಿ ಅಸತ್ಯವೇ ತುಂಬಿದ್ದರೆ  ಪ್ರಗತಿಯಾಗದು. ಅಧರ್ಮ ಕ್ಕೆ ನಮ್ಮ ಸಹಕಾರವಿದ್ದಷ್ಟೂ ಅಧೋಗತಿ. ಇಷ್ಟು  ಸತ್ಯ ತಿಳಿದವರು ರಾಜಕೀಯ ಬಿಟ್ಟು ರಾಜಯೋಗವರಿತು ಸ್ವತಂತ್ರ ಜೀವನ ನಡೆಸುತ್ತಾ  ಮಹಾತ್ಮರ  ನಡೆ ನುಡಿಯ ಹಿಂದಿನ ಧರ್ಮ ಸೂಕ್ಷ್ಮ ಅರ್ಥ ಮಾಡಿಕೊಳ್ಳಲು ಸಾಧ್ಯ. ಎಲ್ಲಿಯವರೆಗೆ ನಾನು ಧರ್ಮ ರಕ್ಷಕನೆಂಬ ಅಹಂಕಾರ ದಿಂದ  ರಾಜಕೀಯ ನಡೆಸುವನೋ ಅಲ್ಲಿಯವರೆಗೆ  ಧರ್ಮ ಸೂಕ್ಷ್ಮ ಅರ್ಥ ವಾಗದು. ಇಲ್ಲಿ ಯಾರಿಂದಲೂ ಧರ್ಮ ಉಳಿದಿಲ್ಲ ಪೂರ್ಣ ಅಳಿದೂ ಇಲ್ಲ.ಕಾರಣ ಮಧ್ಯದಲ್ಲಿ ನಿಂತಿರುವ ಧರ್ಮಾಧರ್ಮಗಳಿಗೆ ಸಹಕಾರ ಕೊಡುವ ಮಾಧ್ಯಮ ಅರ್ಧ ಸತ್ಯ ಹಿಡಿದು ಆಡಿಸುತ್ತಿದ್ದರೆ  ಅತಂತ್ರಸ್ಥಿತಿಗೆ ಜೀವ ತಲುಪುತ್ತದೆ. ಅದಕ್ಕಾಗಿ  ಒಳಗಿನ ಸತ್ಯ ಆತ್ಮಸಾಕ್ಷಿಗೆ ಒಪ್ಪುವ ಸದ್ವಿಚಾರ  ಹೆಚ್ಚಾಗಿ‌ ತಿಳಿದವರೂ ಹೊರಗಿನ‌  ದುಷ್ಟರ ವಿಚಾರ ತಲೆಗೆ ತುಂಬಿಕೊಂಡು ವಿರೋಧಿಸಿ ದ್ವೇಷ ಬೆಳೆಯಿತೇ ವಿನ:  ಆತ್ಮಕ್ಕೆ ಶಾಂತಿ ಸಿಗಲಿಲ್ಲ ಸಂಪಾದಿಸಿದ ಪುಣ್ಯ ಕುಸಿದು ಪಾಪ ಹೆಚ್ಚಾಯಿತು. ಕಲಿಯುಗದವರೆಗೆ ಬಂದಿರುವ‌ ಈ ಅತೃಪ್ತ ಆತ್ಮಗಳು ಕಣ್ಣಿಗೆ ಕಾಣದೆ ಮನರಂಜನೆಯಾಗುತ್ತಿದೆ ಎಂದರೆ ಹಿಂದಿರುವ ಆತ್ಮವಂಚನೆಯ ಫಲ ಜೀವಾತ್ಮನೇ ಅನುಭವಿಸಲೇಬೇಕೆಂದು  ಪರಮಾತ್ಮನ  ನ್ಯಾಯ. ಹೊರಗಿನ  ನ್ಯಾಯವನ್ನು ಹಣದಿಂದ ಗೆದ್ದು ಮುಂದೆ ಹೋದರೆ ಒಳಗೇ ಇದ್ದ ಅನ್ಯಾಯಕ್ಕೆ ತಕ್ಕಂತೆ  ಅಂತಿಮ ತೀರ್ಪು ಕೊಡುವುದೇ  ಅಧ್ಯಾತ್ಮ ಸತ್ಯ. ಇದಕ್ಕಾಗಿ ಅಲ್ಲವೆ ಹಿಂದೂ ಸನಾತನಧರ್ಮ  ಹಿಂದುಳಿದಿರೋದು ಅಂದರೆ  ಮೊದಲು ಧರ್ಮದಲ್ಲಿ ಮುಂದುವರಿದ  ದೇಶವಾಗಿದ್ದ ಭಾರತ ಈಗ ಮುಂದುವರಿಯುತ್ತಿರುವ ಭಾರತವಾಗಿದೆ.ಇದು ಆತ್ಮಜ್ಞಾನದೆಡೆಗೆ ನಡೆದರೆ ಆತ್ಮನಿರ್ಭರ ಭಾರತ.ಹೊರಗೆ ಅಂದರೆ ವೈಜ್ಞಾನಿಕವಾಗಿ  ನಡೆದರೆ ಆತ್ಮದುರ್ಭಲ ಭಾರತ.
ವಿಜ್ಞಾನ  ಒಳಗಿನ ಶಕ್ತಿಯಿಂದ  ಹೊರಗಿನ ಸತ್ಯವರಿತು ಬೆಳೆಸಿದಾಗ ಸಮಾನತೆಯ ಅರಿವಾಗೋದು. ಮಧ್ಯವರ್ತಿಗಳು ಸತ್ಯದ ಪರ ನಿಂತು ಧರ್ಮಕ್ಕೆ ಹೆಚ್ಚಿನ  ಅವಕಾಶ ನೀಡಿದರೆ ಉತ್ತಮ ರಾಜಕೀಯ ವಾಗುತ್ತದೆ. ರಾಜಕೀಯ ವೆಂದರೆ ಆಳೋದುಇದು ಧರ್ಮದ ಪರವಿದ್ದರೆ 
ಶಾಂತಿ. ಅಧರ್ಮ ಅಸತ್ಯ  ಮನಸ್ಸಿಗೆ‌ ಮನರಂಜನೆ ನೀಡಬಹುದು ಅದರ ಪ್ರತಿಫಲ ಅಷ್ಟೇ ಕಠೋರವಾಗಿರುತ್ತದೆ. 
ಹೀಗಾಗಿ ಒಳ್ಳೆಯವರಿಗೆ‌ ಕಷ್ಟಗಳು ಹೆಚ್ಚು. ಸತ್ಯಕ್ಕೆ ಬೆಲೆಯಿಲ್ಲ ಧರ್ಮಕ್ಕೆ ನೆಲೆಯಿಲ್ಲದ  ಭೂಮಿಯಲ್ಲಿ ಮಾನವ ಸ್ವತಂತ್ರ ವಾಗಿಲ್ಲ. ಮಹಾತ್ಮರು ಸ್ವತಂತ್ರ ಜ್ಞಾನದಿಂದ ಬದುಕಿದ್ದರು. ಸ್ವತಂತ್ರ ಭಾರತವನ್ನು  ಅಧರ್ಮದೆಡೆಗೆ ನಡೆಸಿದವರಿಗೆ ಸಹಕಾರ ಕೊಟ್ಟು ಬೆಳೆಸಿದ ಮಾಧ್ಯಮ ಸಹಕಾರವೇ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ.ಇದನ್ನು ತಡೆಯಲಾಗದು ಇದರಿಂದ ದೂರವಿದ್ದು ಸತ್ಯ ತಿಳಿದು ಸ್ವತಂತ್ರರಾದವರಿದ್ದಾರೆ.
ಮಧ್ಯವರ್ತಿಗಳು ಯಾರು? ಆಕಾಶಪಾತಾಳದ‌ಮಧ್ಯವರ್ತಿ ಭೂಮಿ, ವಿಶ್ವದೇಶದ ಮಧ್ಯವರ್ತಿ ವಿದೇಶ,  ದೇವಾಸುರರ ಮಧ್ಯವರ್ತಿ ಮಾನವ, ಹಾಗೆ ಮಾನವರಲ್ಲಿ ಮಧ್ಯವರ್ತಿಗಳು ಸಾಕಷ್ಟು ಮಂದಿ ಇರುವರು. ಯಾವುದೂ ಯಾರನ್ನೂ ಅತಿಯಾಗಿ ನಂಬದೆ ಅತಿಯಾಗಬಾರದಷ್ಟೆ. 

No comments:

Post a Comment