ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, October 25, 2023

ಆತ್ಮನೊಂದಿಗಿರುವ ಮನಸ್ಸಿನವರೆ ಮಹಾತ್ಮರು.ಮಹಾತ್ಮರಿಗೆ ನೋವಾಗದಿರಲಿ.

ಆತ್ಮಕ್ಕೆ ನೋವು ಮಾಡೋದಕ್ಕೂ ಮನಸ್ಸಿಗೆ ನೋವು ಮಾಡುವುದಕ್ಕೂ ವ್ಯತ್ಯಾಸವಿದೆ. ಮನಸ್ಸು ತನ್ನ ಇಚ್ಚೆಯಂತೆ ನಡೆಯುತ್ತದೆ ಆತ್ಮ  ದೈವೇಚ್ಚೆಯಂತೆ ನಡೆಯುತ್ತದೆ. ಹಾಗಾದರೆ  ದೈವೀಕ ಮನಸ್ಸುಳ್ಳವರ ಮನಸ್ಸಿಗೆ ನೋವಾಗದಂತೆ ನಡೆಯುವುದನ್ನು ಧರ್ಮ ಎಂದರೆ ಸರಿಯಾಗಬಹುದಷ್ಟೆ.ಅಸುರರ ಮನಸ್ಸು ವಿಕೃತವಾಗಿರುತ್ತದೆ ಸ್ವಾರ್ಥ ಅಹಂಕಾರ ದಿಂದ ತುಂಬಿರುವಾಗ ಅವರ ಆತ್ಮಕ್ಕೆ ನೋವಾಗುವುದೆಂದು  ದೈವೀಕ ಶಕ್ತಿ ನಡೆದರೆ  ಅಧರ್ಮ ವೇ ಹೆಚ್ಚಾಗುವುದು. ಸಾಕಷ್ಟು  ಮನಸ್ಸು ನೋವಿನಲ್ಲಿರುತ್ತದೆ.
ಇದಕ್ಕೆ ಕಾರಣ ಏನೆಂಬುದನ್ನು ಸ್ವತಃ ಆ ಮನುಷ್ಯನಿಗೇ ಅರ್ಥ ವಾಗಿರುವುದಿಲ್ಲ.ಇದನ್ನು ಹೊರಗಿನವರು ಸಂತೋಷಪಡಿಸುವ ಪ್ರಯತ್ನ ಮಾಡಿದರೂ ತಾತ್ಕಾಲಿಕ ವಷ್ಟೆ. ಒಳಗಿರುವ ಆತ್ಮವಂಚನೆಯೇ  ಇದಕ್ಕೆ ಕಾರಣ ಎನ್ನುವ ಅಧ್ಯಾತ್ಮ ಸಾಧಕರು ಕಠಿಣ ಮನಸ್ಸುಳ್ಳವರಾಗಿದ್ದು  ಧರ್ಮ ನಿಷ್ಠ ಸತ್ಯನಿಷ್ಠತೆಗಷ್ಟೆ  ಸಹಕಾರ ಕೊಟ್ಟು  ಜೀವನ್ಮುಕ್ತಿ ಕಡೆಗೆ ನಡೆದರು. ಇಂತಹ ಮಹರ್ಷಿಗಳ ಮನಸ್ಸು ಮತ್ತು ಆತ್ಮ ಒಂದೇ  ಮಾರ್ಗದಲ್ಲಿದ್ದ ಕಾರಣ  ಅವರ ಮನಸ್ಸಿನ ವಿರುದ್ದ  ನಡೆದವರನ್ನು  ಅಸುರರೆಂದರು. ಇಲ್ಲಿ  ಶಕ್ತಿ  ಒಂದೇ ಆದರೂ ಮನಸ್ಸು ಬೇರೆ ಬೇರೆ.ಒಂದು ಒಳಗಿನ ಶಕ್ತಿಯೆಡೆಗೆ ನಡೆದರೆ ಇನ್ನೊಂದು ಹೊರಮುಖದ ನಡಿಗೆ.ಇವರಿಬ್ಬರ ನಡುವಿರುವ ಮನುಷ್ಯನ  ಮನಸ್ಸು  ಹೇಗಿರಬಹುದು? ಎಲ್ಲರಲ್ಲಿಯೂ ಅಡಗಿರುವ ಪರಮಾತ್ಮನ ಜೊತೆಗೆ ಪರಮಸತ್ಯವೂ ಇದೆ.ಆದರೆ ಸತ್ಯದ ಬಳಕೆಯಲ್ಲಿ ವ್ಯತ್ಯಾಸವಿದೆ. ಇದೇ‌ ಮನಸ್ಸಿನ ಪ್ರಭಾವ.ಇದನ್ನು ಯಾರು ತನ್ನ ಹತೋಟಿಯಲ್ಲಿಟ್ಟುಕೊಂಡಿರುವರೋ ಅವರು ಯೋಗಿಗಳು,  ಎಲ್ಲೆಂದರಲ್ಲಿ ಬಿಡುವರೋ ಭೋಗಿಗಳು.
ಒಳ್ಳೆಯದನ್ನು ಕೇಳಲು ,ನೋಡಲು,ಮಾಡಲು ಮನಸ್ಸಿಲ್ಲ ಎಂದರೆ‌  ಒಳಗಿರೋ ಸತ್ಯವನ್ನು ತಿಳಿದಿಲ್ಲವೆಂದರ್ಥ. ಹಾಗಂತ ತಿಳಿದಿದ್ದರೂ ನಡೆಯೋ  ಅಧಿಕಾರ,ಹಣ,  ಸ್ಥಾನವಿಲ್ಲದವರ ಮನಸ್ಸು  ಸಂತೋಷವಾಗಿರದು.ಅಂತಹವರು  ಹಿಂದುಳಿದಷ್ಟೂ ಅಧರ್ಮ  ಮುಂದೆ ನಡೆಯುತ್ತದೆ. ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರು ಯಾರು?
ಹೊರಗಿರುವ ಅಸಂಖ್ಯಾತ ಮನಸ್ದು ಬುದ್ದಿ,ವಿದ್ಯೆಯನ್ನು  ಜಯಿಸಲಾಗದು.ಒಳಗಿರೋದನ್ನು ಗೆದ್ದು  ಹೋಗಬಹುದು. ಎಂದು ಹಿಂದಿನ  ಮಹಾತ್ಮರು  ತಿಳಿಸಿರೋದು. ಮಹಾತ್ಮರನ್ನು ಹೊಗಳಿಕೊಂಡು‌ ಮಾನವರನ್ನು ತೆಗಳಿಕೊಂಡು  ಅಸುರರ   ಹಿಂದೆ ನಡೆದರೆ  ಹೊರಗಿನ ಮನಸ್ಸು ಬೆಳೆಯುತ್ತದೆ. ಒಳ. ಮನಸ್ಸಿನ‌ ಮಾತು ಹಿಂದುಳಿಯುತ್ತದೆ. ಅಂತರ್ಮುಖಿಯಾಗಿದ್ದವರು ಸನಾತನ ಧರ್ಮ ಸ್ಥಾಪಕರು. 
ಕಲಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ,
ಮುನಿಯ ಬೇಡ ಅನ್ಯರಿಗೆ ಅಸಹ್ಯಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ.ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ....ಬೇಡವೆಂದದ್ದೇ  ಬೇಕೆಂದು   ಹರಡುವ  ಅಸುರಿ  ಮನಸ್ಸಿಗೆ ನೋವಾದರೂ ಸರಿ  ಆತ್ಮಶುದ್ದವಾಗಬೇಕಿದೆ. ಆತ್ಮ ಸಂಶೋಧನೆ ಸುಲಭವಿಲ್ಲದ ಕಾರಣ   ಭೌತಿಕದಲ್ಲಿ ಮನಸ್ಸು ಬೆಳೆಯುತ್ತಾ  ಅತೃಪ್ತಿಯಿಂದ ನೋವಿನಲ್ಲಿರುವುದು. ಯಾರಾದರೂ ಹಣದಿಂದ  ಆತ್ಮನಿಗೆ ಸಂತೋಷಪಡಿಸಬಹುದಾಗಿದ್ದರೆ‌  ದೈವೀಶಕ್ತಿಯ ಕೊರತೆಯೇ ಇರುತ್ತಿರಲಿಲ್ಲ..  ಆದರೆ ಮನಸ್ಸನ್ನು ಸೂರೆಗೊಳ್ಳುವುದರ ಮೂಲಕ  ಸಂತೋಷಪಡಿಸುವುದಕ್ಕೆ  ಮನರಂಜನೆಯ ಮಾಧ್ಯಮವಿದೆ. ಇದರಲ್ಲಿ  ಆತ್ಮವಂಚನೆ ಆಗದ  ಕಾರ್ಯಕ್ರಮ ಹೆಚ್ಚಾದರೆ ಸಾತ್ವಿಕ‌ಮನಸ್ಸು ಅರಳುತ್ತದೆ. ಕೇವಲ ರಾಜಸಿಕ ತಾಮಸಿಕ  ಶಕ್ತಿಹೆಚ್ಚಿಸಿದರೆ ಆತ್ಮವಂಚನೆಯ ಫಲ ಉಣ್ಣಬೇಕಾಗುವುದು. ಒಟ್ಟಿನಲ್ಲಿ ಮನಸ್ಸೇ ಎಲ್ಲಾ  ‌ ಬದಲಾವಣೆಯ ಮೂಲವಾಗಿದೆ. ಹಿಂದಿನ ಇಂದಿನ ನಾಳೆಯ,ಮುಂದಿನ ದಿನಗಳಲ್ಲಿ ಮನಸ್ಸಿನ  ಆಟವನ್ನು  ತಡೆಯೋರಿಲ್ಲ  ತಡೆ ಒಳಗೇ ಹಾಕಿದರೆ‌ ಸಂತೋಷವಿರಲ್ಲ. ಹಾಗಂತ ಇದನ್ನು ನೋವೆಂದರೆ ಪೂರ್ಣ  ಸತ್ಯವಲ್ಲ. ಹಣವಿದ್ದವರಿಗೆ‌ಜೀವನದ ಕಷ್ಟಕ್ಕೆ  ಕಾರಣ. ತಿಳಿಯದು, ಜ್ಞಾನವಿದ್ದವರಿಗೆ ತಿಳಿದರೂ ತೋರಿಸಲಾಗದು. ಕಷ್ಟ ಬಂದಾಗ ದು:ಖ, ಸುಖ ಬಂದಾಗ  ಸಂತೋಷ. ಒಂದೇ ನಾಣ್ಯದ ಎರಡು ಮುಖಗಳನ್ನು ಒಂದೆ ಸಲ ನೋಡಲಾಗದು. ಮುಖ ಬದಲಾವಣೆ ಆಗುತ್ತಿರುತ್ತದೆ ಬೆಲೆಯಲ್ಲ.

No comments:

Post a Comment