ಬ್ರಹ್ಮ ವಿಷ್ಣು ಶಿವ ಪುರಾಣದ ಜೊತೆಗೆ ಎಲ್ಲಾ ದೇವತೆಗಳ ಪುರಾಣಗಳಲ್ಲಿ ಅಸುರಶಕ್ತಿಯನ್ನು ಹೇಗೆ ನಿಗ್ರಹ ಮಾಡಿ ಭೂಮಿಯಲ್ಲಿ ಧರ್ಮ ಸ್ಥಾಪನೆ ಮಾಡಿದರೆಂಬ ಸತ್ಯವಿದೆ. ಇದರಲ್ಲಿ ಸತ್ಯ ಧರ್ಮಹುಡುಕದೆ ಅಸತ್ಯ ಅಧರ್ಮ ಅನ್ಯಾಯವನ್ನು ಎತ್ತಿ ಹಿಡಿದು ಪ್ರಚಾರ ಮಾಡುವುದರಿಂದ ಅಸತ್ಯ ಅಧರ್ಮ ಅನ್ಯಾಯವೇ ಕೇಳುಗರ ಮನಸ್ಸಿನಲ್ಲಿ ಆವರಿಸುತ್ತಾ ಕೊನೆಗೆ ತಮ್ಮೊಳಗೇ ಹಿಂದುಳಿದ ಸತ್ಯ ಧರ್ಮ ಮರೆತರೆ ಅಸುರರನ್ನು ಬೆಳೆಸಿದಂತಾಗುವುದಲ್ಲವೆ? ಅದಕ್ಕೆ ಹೇಳೋದು ಅಸತ್ಯದೊಳಗೇ ಅಡಗಿರುವ ಸತ್ಯ,
ಅಧರ್ಮದೊಳಗಿರುವ ಧರ್ಮ, ಅನ್ಯಾಯದೊಳಗಿದ್ದ ನ್ಯಾಯ ಕಣ್ಣಿಗೆ ಕಾಣದಿದ್ದರೂ ಅಸುರರೊಳಗಿರುವ ಸುರರು ಅಮರ. ಅಮರರಾದವರನ್ನು ಹುಟ್ಟಿಸಿ ನಡೆಸುವ ಶಕ್ತಿ ಮಾನವನಿಗಿದೆಯೆ?
ಜಗನ್ಮಾತೆಯ ಸಂಪತ್ತಿನ ಖಜಾನೆ ಖಾಲಿಯಾಗೋದೇ ಇಲ್ಲ. ಹಣವನ್ನು ಕೊಟ್ಟು ಜ್ಞಾನ ಪಡೆಯುತ್ತಾಳೆ,ಜ್ಞಾನಕೊಟ್ಟು ಹಣ ಪಡೆಯುತ್ತಾಳೆ. ಯಾರಿಗೆ ಜ್ಞಾನಬೇಕೋ ಯಾರಿಗೆ ಹಣ ಬೇಕೋ ಅವರು ಬೇಡೋದಂತೂ ಮುಗಿಯುವುದಿಲ್ಲ. ಕಾರಣ ಎಷ್ಟೇ ಪಡೆದರೂ ತಿರುಗಿ ಕೊಡೋವರೆಗೂ ಆತ್ಮತೃಪ್ತಿಯಾಗದು. ಇದಕ್ಕಾಗಿ ಮಾನವ ಬೇಡೋದು ಸಹಜ.ಹಾಗೆ ಕೊಡೋದು ಸಹಜವಾಗಿರದು. ಹಾಗಾಗಿ ಸರಿಯಾಗಿ ನಡೆದುಕೊಳ್ಳದವರಿಂದ ಕಿತ್ತುಕೊಳ್ಳುವುದೂ ಜಗನ್ಮಾತೆಗೆ ಗೊತ್ತು. ಎಲ್ಲಾ ಮಕ್ಕಳನ್ನೂ ಸರಿಸಮನಾಗಿ ಕಾಣುವ ಇವಳನ್ನು ಅರ್ಥ ಮಾಡಿಕೊಳ್ಳದೆ ಇವಳನ್ನೇ ತನ್ನ ವಶದಲ್ಲಿಟ್ಟುಕೊಂಡು ಜನರನ್ನು ಆಳೋದರಿಂದ ಏನಾದರೂ ಧರ್ಮ ರಕ್ಷಣೆ ಆಗೋ ಹಾಗಿದ್ದರೆ ಈ ಅಸುರ ಶಕ್ತಿ ಇಷ್ಟು ಬೆಳೆಯದೆ ಧರ್ಮದ ಜೊತೆಗೆ ಸತ್ಯ ಶಾಂತಿ,ನೆಮ್ಮದಿ, ತೃಪ್ತಿ ಮಾನವ ಪಡೆಯಬಹುದಿತ್ತು. ಆದರೆ ಈಗ ಯಾರಲ್ಲಿಯೂ ಇದು ಕಾಣಿಸುತ್ತಿಲ್ಲವೆಂದರೆ ಹೊರಗಿನ ಜಗತ್ತನ್ನು ನೋಡಿ ಒಳಗಿದ್ದ ಜಗನ್ಮಾತೆಯ ಶಕ್ತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲವೆಂದರ್ಥ. ಎಷ್ಟು ಹೊರಗಿನ ಸಂಪತ್ತಿದ್ದರೂ ಒಳಗಿನ ಜ್ಞಾನದ ಸಂಪತ್ತಿಲ್ಲವಾದರೆ ದುರ್ಭಳಕೆ ಮಾಡುವ ಅಸುರರೆ ಹೆಚ್ಚಾಗೋದು. ಇದೊಂದು ಸರಳವಾಗಿರುವ ಸತ್ಯ.
No comments:
Post a Comment