ಭೂತ ವರ್ತಮಾನ ಭವಿಷ್ಯ ಮಾನವನ ಕೈಯಲ್ಲಿದೆಯೆ?ಜ್ಞಾನದಲ್ಲಿದೆಯೆ?
ಕೈ ದೇಹದ ಒಂದು ಭಾಗ ಜ್ಞಾನ ದೇಹದ ಶಕ್ತಿ. ಜ್ಞಾನಕ್ಕೆ ತಕ್ಕಂತೆ ಕೈಚಳಕ. ಕೈಚಳಕದಿಂದ ಜ್ಞಾನ. ಒಟ್ಟಿನಲ್ಲಿ ಒಂದನ್ನು ಬಿಟ್ಟು ಇನ್ನೊಂದು ಇಲ್ಲವೆಂದರೂ ತಪ್ಪು. ಕೈಯಿಲ್ಲದವರು ಜ್ಞಾನಿಗಳಾಗಬಹುದು. ಅದರಂತೆ ಕೆಲಸ ಮಾಡಲಾಗದೆ ಬೇರೆಯವರ ಕೈಯಿಂದ ಮಾಡಿಸಿದರೂ ಅವರು ಮಾಡಿದಂತಾಗೋದಿಲ್ಲ.ಹೀಗಾಗಿ ಒಳಗಿನಜ್ಞಾನದ ಜೊತೆಗೆ ಕೈ ಕೆಲಸಮಾಡಿದರೆ ಅನುಭವ ಪೂರ್ಣ ವಾಗಿರುತ್ತದೆ.
ಭೂತಕಾಲದ ವಿಷಯ ಮುಗಿದಿದೆ ವರ್ತ ಮಾನ ಅದರ ಮೂಲಕ ನಡೆದಿದೆ ಇದರಂತೆ ಭವಿಷ್ಯವಿರುತ್ತದೆ. ಇದರಲ್ಲಿ ಭೂತಕಾಲದ ಶಿಕ್ಷಣವಿಲ್ಲ ಶಿಕ್ಷಣ ವ್ಯಾಪಾರವಾಗುತ್ತಿದೆ ವ್ಯವಹಾರಕ್ಕೆ ಇಳಿದಾಗ ಹಣದ ಲಾಭವೇ ಮುಖ್ಯವಾಗಿ ಸತ್ಯ ಹಿಂದುಳಿಯುತ್ತದೆ. ಯುಗಯುಗದ ಪುರಾಣಗಳಿಂದ ಧರ್ಮ ರಕ್ಷಣೆಯಾಗಬೇಕಾದರೆ ಅಲ್ಲಿದ್ದ ಸತ್ಯ ಧರ್ಮದ ಸೂಕ್ಮತೆಯನ್ನು ಜ್ಞಾನದಿಂದ ತಿಳಿಯಬೇಕೆನ್ನುವರು. ಜ್ಞಾನ ಅನುಭವದಿಂದಾದರೆ ವಾಸ್ತವತೆಯ ಸತ್ಯಾಸತ್ಯತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿ ಕೈಯಿಂದ ಉತ್ತಮ ಕೆಲಸಮಾಡಬಹುದು. ಕೆಲಸ ಮಾಡದೆಯೇ ಅನುಭವಿಸದೇ ತಲೆಗೆಹಾಕಿಕೊಂಡ ವಿಷಯವು ವರ್ತ ಮಾನವನ್ನು ಹಾಳು ಮಾಡುತ್ತಾ ಭವಿಷ್ಯದಲ್ಲಿ ಅದರ ಫಲ ಅನುಭವಿಸಬೇಕು.
ನಮ್ಮ ಹಿಂದಿನ ಗುರುಹಿರಿಯರು ಮಾಡಿಟ್ಟ ಭೌತಿಕ ಆಸ್ತಿಯನ್ನು ಕೈಯಿಂದ ಬಳಸಿದಂತೆ ಅವರ ಜ್ಞಾನವನ್ನು ಬೆಳೆಸಿಕೊಂಡರೆ ಭವಿಷ್ಯ ಉತ್ತಮ. ಇದಕ್ಕೆ ಭೂತಕಾಲ ತಿಳಿಯುತ್ತಾ ವರ್ತಮಾನವನ್ನು ಸದ್ಬಳಕೆ ಮಾಡಿಕೊಂಡರೆ ಭವಿಷ್ಯವೂ ಚೆನ್ನಾಗಿ ಇರುತ್ತದೆ.
ಯಾವಾಗ ಜ್ಞಾನ ಬಿಟ್ಟು ಹಣ ಕ್ಕಾಗಿ ಕೈಬಳಕೆ
ಯಾಗುವುದೋ ಕಾಲುಜಾರಿ ಬಿದ್ದರೂ ಮೀಸೆ ಮಣ್ಣಾಗಿಲ್ಲವೆನ್ನುವವರು ಭವಿಷ್ಯದಲ್ಲಿರುವರು.
ಸೃಷ್ಟಿ ಸ್ಥಿತಿ ಲಯ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಯಾವುದನ್ನು ಸೃಷ್ಟಿ ಮಾಡಿದರೆ ಸ್ಥಿತಿ ಚೆನ್ನಾಗಿದ್ದು ಮುಕ್ತಿ ಸಿಗುವುದೆನ್ನುವ ಸತ್ಯಜ್ಞಾನವಿದ್ದರೆ ಭೂತಕಾಲದ ಸತ್ಯದ ಜೊತೆಗೆ ವರ್ತ ಮಾನ ಕಳೆಯುತ್ತಾ ಭವಿಷ್ಯದಲ್ಲಿ ಮುಕ್ತಿ ಪಡೆಯಬಹುದು. ಇದು ಹೊರಗಿನ ಸರ್ಕಾರದಿಂದ ನಿರೀಕ್ಷೆ ಮಾಡದೆ ಒಳಗಿರುವ ಆತ್ಮಕ್ಕೆ ಸತ್ಯಕ್ಕೆ ದೇವರಿಗೆ, ಹತ್ತಿರವಿದ್ದುಗುರು ಹಿರಿಯರ ಧರ್ಮ ಕರ್ಮದ ಸಹಕಾರದಿಂದ ಸಾಧ್ಯವಿತ್ತು.ಇದೇ ಸನಾತನ ಹಿಂದೂ ಧರ್ಮದ ಭೂತ ವರ್ತಮಾನ ಭವಿಷ್ಯವಾಗಿದೆ. ಹಿಂದಿರುಗಿ ನೋಡದೆ ಓಡಿದರೆ ಬೀಳೋದು ತಪ್ಪಲ್ಲ. ಎಷ್ಟು ಮೇಲೇರಿದರೂ ಭೂಮಿಯಲ್ಲಿಯೆ ಜನನ ಮರಣ. ಬೇರೆ ಲೋಕವಿದೆಯೆ ಮನುಜನಿಗೆ? ಮೇಲಿರುವ ಮನೆವರೆಗೆ ಹೋಗಲು ಕೆಳಗಿರುವ ಮನೆಯ ಸಾಲ ತೀರಿಸಲೇಬೇಕು. ಇದಕ್ಕೆ ಹಿಂದಿನ ಸಾಲದ ಜೊತೆಗೆ ಈಗನ ಸಾಲ ಬೆಳೆದು ಭವಿಷ್ಯವೇ ಸಾಲವಾಗಿರುತ್ತದೆ. ಇದನ್ನು ಸತ್ಕರ್ಮ, ಸ್ವಧರ್ಮ, ಸುಜ್ಞಾನ, ಸತ್ಯಜ್ಞಾನವೇ ಭೂತವಾಗಿದ್ದರೆ ವರ್ತಮಾನವೂ ಉತ್ತಮವಾಗಿದ್ದು ಭವಿಷ್ಯದಲ್ಲಿ ಶಾಂತಿ ಕಾಣಬಹುದೆನ್ನುವರು ಮಹಾತ್ಮರು.ನಮ್ಮ ಮಹಾತ್ಮರುಗಳು ತಮ್ಮ ಕೊನೆಗಾಲದಲ್ಲಿ ಆಸ್ತಿ ಬಿಟ್ಟು ಜ್ಞಾನ ಪಡೆದರು. ನಾವು ಆಸ್ತಿಗಾಗಿ ಸತ್ಯಜ್ಞಾನ ಬಿಟ್ಟು ಹಿಂದುಳಿದರೆ ಭವಿಷ್ಯದ ಗತಿ ?
No comments:
Post a Comment