ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, October 6, 2023

ಜನ್ಮದಿನಾಂಕ=ಜನ್ಮತಿಥಿ?

ಹಿಂದೂ ಸನಾತನ ಧರ್ಮದಲ್ಲಿ ತಿಥಿನಕ್ಷತ್ರ ಪ್ರಕಾರ ಜನ್ಮದಿನ ಆಚರಿಸುವರೇಕೆ? 

ಜನ್ಮದಿನಾಂಕ ಜನ್ಮ ತಿಥಿ  ಒಂದೇ ದಿನ ಬರೋದು .ಅದು ಹುಟ್ಟಿದ ದಿನವಾಗಿದೆ.ನಂತರದ ದಿನಗಳಲ್ಲಿ ಬರುವ ಜನ್ಮದಿನಾಂಕ  ಜನ್ಮ ತಿಥಿ ನಕ್ಷತ್ರ,ವಾರ ಎಲ್ಲಾ ಬೇರೆಬೇರೆಯಾಗಿರುತ್ತದೆ. ಇದರಲ್ಲಿ ತಿಥಿ ನಕ್ಷತ್ರ ದಿನದ ಆಚರಣೆ ಶ್ರೇಷ್ಠ ವೆಂದು ನಮ್ಮ ಗುರುಹಿರಿಯರು ತಿಳಿಸಿರುತ್ತಾರೆ. ದಿನಾಂಕವು ಸರಿಯಾಗಿ  365 ದಿನಕ್ಕೆ ಬಂದರೆ ನಕ್ಷತ್ರತಿಥಿ ವಾರದಲ್ಲಿ ವ್ಯತ್ಯಾಸವಿರುತ್ತದೆ.
ಜನಿಸಿದ ವೇಳೆಯನ್ನು ಆಧರಿಸಿಕೊಂಡು  ತಿಥಿ ನಕ್ಷತ್ರ ವಾರದ ಮೇಲೆ ಮಕ್ಕಳ ಭವಿಷ್ಯ ತಿಳಿಸುವಾಗ  ಅದರ ಚಲನ ವಲನಗಳಂತೆ  ನಮ್ಮ ಆಚಾರ,ವಿಚಾರಗಳಿದ್ದರೆ  ಆತ್ಮತೃಪ್ತಿ ಎಂದು ಸನಾತನ ಧರ್ಮ ತಿಳಿಸುತ್ತದೆ. ಯಾವಾಗ ದಿನಾಂಕದ ಪ್ರಕಾರ ಜನ್ಮ ದಿನಾಚರಣೆ ಮಾಡುವೆವೋ  ಮನಸ್ಸಿಗೆ ಸಂತೋಷವಾಗುತ್ತದೆ ಆದರೆ ಆ ದಿನದಲ್ಲಿ ತಿಥಿ ನಕ್ಷತ್ರ ವಾರ ಕೂಡಿರದಿದ್ದರೆ ಮೇಲಿರುವ ಶಕ್ತಿಯಿಂದ ಜೀವಾತ್ಮ ದೂರವಾಗುತ್ತಾ ಕೆಳಗಿನ ಶಕ್ತಿಯ ಅಧೀನದಲ್ಲಿ ಜೀವನ ನಡೆಯುತ್ತದೆ ಎನ್ನುವ ಸೂಕ್ಷ್ಮ ಸತ್ಯವಡಗಿದೆ. ಅಂದರೆ ಆಕಾಶದಲ್ಲಿರುವ ಗ್ರಹನಕ್ಷತ್ರಗಳ ಚಲನವಲನಗಳ ಪ್ರಭಾವ ಭೂಮಿಯಲ್ಲಿರುವ  ಮನುಕುಲದ ಮನಸ್ಸಿನಮೇಲೆ ಬೀರುತ್ತಲೇ ಇರೋವಾಗ  ಅದನ್ನರಿಯದೆ ಅಥವಾ ಅದರ ವಿರುದ್ದ ನಡೆದಂತೆಲ್ಲಾ ಜೀವನದಲ್ಲಿ ಸಮಸ್ಯೆಗಳೇ ಹೆಚ್ಚಾಗುತ್ತದೆ .ವೈಜ್ಞಾನಿಕ ಯುಗದಲ್ಲಿ  ಆಕಾಶದೆತ್ತರ ಹಾರುವ ಪ್ರಯೋಗದಲ್ಲಿ ಯಶಸ್ಸು ಗಳಿಸಿದ್ದರೂ ಅದರಲ್ಲಿ ಒಂದು ಗ್ರಹವಾಗಿರುವ ಭೂಮಿಯ ಮೇಲಿರುವ ಸತ್ಯವನ್ನು ಮರೆತಂತೆಲ್ಲಾ  ಗ್ರಹಚಾರ ಸುತ್ತಿಕೊಳ್ಳುತ್ತದೆ. ಆದರೂ ಯಾವುದೇ ಆಚರಣೆಯು  ಪುರುಷಪ್ರಕೃತಿಯ ಯೋಗದಲ್ಲಿ ಸತ್ವಯುತವಾಗಿದ್ದರೆ  ಉತ್ತಮ ಫಲ ಸಿಗುತ್ತದೆ.ಇದಕ್ಕಾಗಿ ಸಾಕಷ್ಟು ದೇವತಾರಾಧನೆ, ದಾನಧರ್ಮ, ವ್ರತ,ಕಥೆ,ಪುರಾಣ ಶಾಸ್ತ್ರ ಸಂಪ್ರದಾಯ ಗುಡಿಗೋಪುರಗಳು ಭೂಮಿಯಲ್ಲಿ ಇದ್ದರೂ  ಅಸುರಿಗುಣವನ್ನು  ಬಿಟ್ಟು ನಡೆಯಲಾಗದೆ  ತನ್ನ ಅಸ್ತಿತ್ವಕ್ಕೆ ತಾನೇಹೋರಾಟ ಮಾಡಿಕೊಳ್ಳುವಂತಾಗಿರೋದು  ನಮ್ಮ ಈ ಜನ್ಮದ ಮೂಲವರಿಯದೆ ಉದ್ದೇಶ ತಿಳಿಯದೆ ಜೀವಾತ್ಮನಿಗೆ ಸರಿಯಾದ ದಾರಿಕಾಣದೆ ನಡೆದಿರುವ ನಮ್ಮ ಭೌತಿಕದ ರಾಜಕೀಯತೆ ಎಂದರೆ ಸರಿಯಾಗಬಹುದು. ರಾಜಕೀಯತೆ ಎಂದರೆ  ನಾನೇ ಸರಿ ನಾನೇ ಎಲ್ಲಾ ನನ್ನಿಂದಲೇ ದೇವರು ಧರ್ಮ ಎನ್ನುವ ಅಧಿಕಾರದ ಮಧ ಎನ್ನಬಹುದು.
ಆತ್ಮಕ್ಕೆ ಜನನ ಮರಣ ವಿಲ್ಲ. ದೇಹ  ಶಾಶ್ವತವಲ್ಲ.
ಇರೋವಾಗಲೇ  ಮೂಲದ ಧರ್ಮ ಕರ್ಮ ವನರಿತು  ಮೇಲಿರುವ ಮಹಾ ಶಕ್ತಿಯೆಡೆಗೆ  ನಡೆದವರು ಮಹಾತ್ಮರಾದರು ಎಂದರೆ‌  ಇಲ್ಲಿ  ಯೋಗದಿಂದ  ಜನ್ಮಸಾರ್ಥಕವಾಗಿದೆ. ಯೋಗವೆಂದರೆ ಕೂಡುವುದು ಸೇರುವುದು  ಎಲ್ಲಿಂದ ಬಂದಿದೆಯೋ ಜೀವ ತಿರುಗಿ ಅಲ್ಲಿಗೆ ಸೇರಿದಾಗಲೇ ಮಹಾಯೋಗವಾಗುತ್ತದೆ. ಹಾಗಾಗಿ  ದಿನಾಂಕ ವರ್ಷಕ್ಕೊಮ್ಮೆ ಬಂದಂತೆ ತಿಥಿ ನಕ್ಷತ್ರದೆಡೆಗೆ‌  ಆಚರಣೆ ನಡೆದರೆ ಮಹಾಯೋಗವಾಗುತ್ತದೆ.ಪರಮಾತ್ಮನೆಡೆಗೆ ಜೀವಾತ್ಮ ಸೇರಲು‌ಒಳಗಿರುವ ಶಕ್ತಿಯ ಕಡೆಗೆ ನಡೆಯುವುದು ಶ್ರೇಷ್ಠ ವೆಂದರು. ಕೆಲವರಿಗೆ ಇದು ತಿಳಿಯದಿದ್ದರೆ ದಿನಾಂಕದ ಪ್ರಕಾರ ಜನ್ಮದಿನಾಚರಣೆ ಮಾಡಿಕೊಂಡರೂ ಅದು ಸಾತ್ವಿಕವಾಗಿದ್ದರೆ  ಉತ್ತಮ ಭವಿಷ್ಯವೆನ್ನುವರು. ಈ ವಿಚಾರ ಎಲ್ಲಾ ವಿಷಯಗಳಿಗೂ ಅನ್ವಯಿಸುತ್ತದೆ. ಜನ್ಮ ಪಡೆದ ಸ್ಥಳ, ಕುಟುಂಬ, ರಾಜ್ಯ, ದೇಶದ ಋಣ ತೀರಿಸಲು  ಅದರೊಳಗೆ ಇದ್ದು  ಸಾತ್ವಿಕ ಜೀವನ ನಡೆಸಲು ಅಧ್ಯಾತ್ಮ ಸಂಶೋಧನೆಯಿಂದ ಮಾತ್ರ ಸಾಧ್ಯವೆನ್ನುವುದು ಸನಾತನ ಧರ್ಮದ ತಿರುಳಾಗಿದೆ. ತಿರುಗಿ ಅಂದರೆ ಹಿಂದಿರುಗಿ  ಸತ್ಯ ತಿಳಿದು ನಡೆದರೆ ಹಿಂದೂ ಧರ್ಮ ಎಲ್ಲೂ ಹೋಗಿಲ್ಲ ನಮ್ಮೊಳಗೇ ಇದೆ.ಸಂಶೋಧನೆ ಒಳಗೇ‌ ನಡೆಸಿಕೊಂಡರೆ  ಧರ್ಮ ರಕ್ಷಣೆ. ಹೊರಗೆ ಹುಡುಕಿದರೆ ಆಗದು. ಎಷ್ಟೋ ಹೋರಾಟಗಳು ಹೊರಗಿನಿಂದ ನಡೆದಿದೆ. ಇದರಿಂದಾಗಿ ಜೀವ ಪ್ರಾಣ ಹೋಗಿವೆಯಾದರೂ ಹಿಂದೂ ಸನಾತನ ಧರ್ಮ ದ ಬೆಳವಣಿಗೆಯಾಗಿಲ್ಲವೆಂದರೆ  ಸಂಶೋಧನೆ ನಮ್ಮೊಳಗೇ ನಡೆದಿಲ್ಲವೆಂದರ್ಥ. ಕಲಿಕೆ ಹೊರಗಿನಿಂದ ನಡೆದಿದೆಯಾದರೆ ಕಲಿಕೆಯಲ್ಲಿ ಸ್ವಾರ್ಥ ಅಹಂಕಾರ ಹೆಚ್ಚಾಗಿದೆ. ಇದು ಮಕ್ಕಳು ಮೊಮ್ಮಕ್ಕಳ ಕಾಲಕ್ಕೆ ಸಂಪೂರ್ಣ ಹೊರಗಿನ ಕಲಿಕೆಯಾಗಿ ಒಳಗೇ ಅಡಗಿದ್ದ ಸತ್ಯಜ್ಞಾನ ಹಿಂದುಳಿದಂತೆಲ್ಲಾ  ಮಾನವ ಅಸತ್ಯವನ್ನು ಸತ್ಯವೆನ್ನುವ ಭ್ರಮೆಯಲ್ಲಿ ಬದುಕುವಂತಾಯಿತು. ಇದನ್ನು ಕಲಿಗಾಲವೆಂದರು. ಇದರಲ್ಲಿ ಅಸತ್ಯವೇ ಹೆಚ್ಚಾದರೆ  ಅಜ್ಞಾನದ ಅಮಲಿನಲ್ಲಿ ಜೀವ ಹೋಗುತ್ತದೆ. ಮತ್ತೆ
ಜನ್ಮಪಡೆಯುತ್ತದೆ.ಎಲ್ಲಿಯವರೆಗೆ ಸತ್ಯಜ್ಞಾನ ಬರುವುದಿಲ್ಲವೋ ಅಲ್ಲಿಯವರೆಗೆ ಮುಕ್ತಿ ಸಿಗದೆ ಅಲೆಯುತ್ತದೆ ಎನ್ನುವ ಕಾರಣಕ್ಕಾಗಿ ಕಷ್ಟಪಟ್ಟು ಸತ್ಯನುಡಿದು ಆತ್ಮರಕ್ಷಣೆಗಾಗಿ ಧರ್ಮವನರಿತು ಹಿಂದಿನ‌ ಮಹಾತ್ಮರುಗಳು ಮೇಲಿರುವ ಗ್ರಹ ನಕ್ಷತ್ರಗಳ  ಅರಿವಿನಲ್ಲಿ ಜನ್ಮಕ್ಕೆ ಕಾರಣ ಕಂಡುಕೊಂಡಿದ್ದರು. ನಮಗೆಲ್ಲಾ  ವಿಷಯ ತಿಳಿದಿದೆ ಆದರೆ, ಹಾಗೆ ನಡೆಯೋ ಮಾರ್ಗದರ್ಶಕರ  ಸಹಕಾರದ ಕೊರತೆಯಿದೆ.ಅಂತಹ ಶಿಕ್ಷಣದ ಕೊರತೆಯಿದೆ. ಅದರಲ್ಲೂ ರಾಜಕೀಯ ಬೆರೆತರೆ  ಬದಲಾವಣೆ ಸಾಧ್ಯವೆ? ಎಲ್ಲಿರುವರು ಮಹಾತ್ಮರು ದೇವರು? ಆತ್ಮಜ್ಞಾನದೆಡೆಗೆ  ನಡೆದರೆ ಆತ್ಮನಿರ್ಭರ ಭಾರತ ಸಾಧ್ಯ..
ವಿದ್ಯೆಯಿಂದ ಬುದ್ದಿ ಬೆಳೆಯಬಹುದು. ಹಣಗಳಿಸಬಹುದು ಆದರೆ ಆ ಹಣದ ಹಿಂದಿನ ಋಣ ತೀರಿಸುವ‌ ಜ್ಞಾನ  ಅಗತ್ಯವಿದೆ. ಅಂತಹ ಜ್ಞಾನದ ಶಿಕ್ಷಣವೇ ಮೂಲ ಶಿಕ್ಷಣವಾದಾಗಲೇ ಹೊರಗಿನ ವಿಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ. ದುರ್ಭಳಕೆಯಾದಷ್ಟೂ ಸಮಸ್ಯೆಯೇ ಹೆಚ್ಚಾಗುವುದು.ಸತ್ಯಜ್ಞಾನದಿಂದ ವಿದ್ಯೆ ಬೆಳೆದರೆ  ಆತ್ಮೋನ್ನತಿ.ಈ ವಿಚಾರ  ಕಣ್ಣಿಗೆ ಕಾಣದ ಸತ್ಯ.ಸಾಮಾನ್ಯವಾಗಿ  ಕಣ್ಣಿಗೆ ಕಾಣೋದಕ್ಕೆ ಹೆಚ್ಚಿನ ಸಹಕಾರ ಸಹಾಯ ಸಿಗುವುದರಿಂದ ಅದು ಬೆಳೆಯುತ್ತದೆ ಸಾಯುತ್ತದೆ.ದೇಹದೊಳಗಿನ‌ ಜೀವ  ಬೆಳೆಯುತ್ತದೆ ಸಾಯುತ್ತದೆ ಆತ್ಮವಲ್ಲ. ಹೆಚ್ಚಿಗೆ ತಿಳಿದವರು ಇದಕ್ಕೆ ಇನ್ನಷ್ಟು ವಿಚಾರ ಸೇರಿಸಬಹುದು.

No comments:

Post a Comment