ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Thursday, October 19, 2023

ಮಹಾಕಾಳಿ,ಲಕ್ಮಿ,ಸರಸ್ವತಿಯರ ಅವತಾರ

ಮಹಾಕಾಳಿ,ಮಹಾಲಕ್ಷ್ಮಿ, ಮಹಾಸರಸ್ವತಿಯಾಗಿ  ಪೂಜಿಸಲ್ಪಡುವ ಮಹಾದುರ್ಗೆಯ ಅವತಾರದಲ್ಲಿ ಮೊದಲು ರೌದ್ರಳಾಗಿ ಲಕ್ಮಿಯಾಗಿ ಶಾಂತಳಾಗುವಳೆನ್ನಬಹುದು. ಮಾನವನಿಗೆ ಜೀವ ಕೊಟ್ಟು ಜೀವನ ಕೊಟ್ಟು ನಡೆಸೋ ತಾಯಿಯನ್ನು ಮರೆತವರ ಪಾಲಿಗೆ ರುದ್ರಿಯ ಕೋಪದಿಂದ ಸರಿಪಡಿಸುತ್ತಾ ನಿಧಾನವಾಗಿ‌ಲಕ್ಮಿಯಾಗಿ ಸಲಹಿ ನಂತರ ಜ್ಞಾನಬರುವಂತೆ ಆಶೀರ್ವಾದ ಮಾಡುವಳಾದರೆ ಪ್ರತಿವರ್ಷದ ನವರಾತ್ರಿಯಿಂದ  ಮನಸ್ಸು ಶಾಂತಿಯಕಡೆಗೆ ನಡೆಯಬೇಕು. ಇದಕ್ಕೆ  ಭಾರತೀಯರು ಮನೆಯೊಳಗಿರುವ ಆ ದುರ್ಗೆಯರನ್ನು ಸರಿಯಾಗಿ ಅರ್ಥ ಮಾಡಿಕೊಂಡು  ಅಗತ್ಯಕ್ಕೆ ತಕ್ಕಂತೆ ಹಣ ನೀಡಿ  ಸರಿಯಾದ ಜ್ಞಾನದ ಶಿಕ್ಷಣ ನೀಡಿದರೆ  ಮನೆಯ ಜೊತೆಗೆ ಮನಸ್ಸೂ ಶಾಂತವಾಗುತ್ತದೆ. ಆದರೆ ಈಗ‌ ಈ ರೀತಿಯಲ್ಲಿ  ನಡೆಯುತ್ತಿದೆಯೆ? ಮನೆಯಿಂದ ಹೊರಬರುವವರೆ ಹೆಚ್ಚಾದರೆ  ಶಾಂತಿ ಹೊರಗೆ  ಸಿಗುವುದೆ?ಪ್ರತಿಯೊಂದು  ದೇವಿದೇವತೆಯರ ಶಕ್ತಿಯ ವಿಶೇಷತೆಯನ್ನು ಸರಿಯಾಗಿ ಅರ್ಥ ಮಾಡಿಸುವ  ಹಬ್ಬ ಹರಿದಿನಗಳ ಆಚರಣೆ ಹಿಂದೆ ಜ್ಞಾನವಿದೆ. ಇದೊಂದು ತೋರುಗಾಣಿಕೆಯ ವೈಭವದ ಆಚರಣೆಯಾದಂತೆಲ್ಲಾ ಹೊರಗಿನ ಕಣ್ಣು ತೆರೆಯುತ್ತದೆ ಒಳಗಣ್ಣು ಮುಚ್ಚಿಹೋಗುತ್ತದೆ. ಹಲವರಿಗೆ  ಹಿಂದೂ ಸನಾತನ ಧರ್ಮ ದ ಸೂಕ್ಮತೆಯಿಲ್ಲದೆ ಮನಸ್ಸಿಗೆ ಬಂದಂತೆ ವಿಚಾರಗಳನ್ನು ಹರಡಿಕೊಂಡು ತಮ್ಮ ಸ್ವಾರ್ಥ ದ ಬೇಳೆ ಬೇಯಿಸಿಕೊಂಡರೆ ಕೆಲವರಷ್ಟೆ ಎಲ್ಲಾ ತಿಳಿದು ಸ್ವಚ್ಚವಾಗಿದ್ದು  ಉತ್ತಮವಾದ  ಸಾತ್ವಿಕ ಆಚಾರ,ವಿಚಾರ,ಪ್ರಚಾರದಲ್ಲಿದ್ದು ಜನರನ್ನು ಎಚ್ಚರಿಸುವುದರ ಮೂಲಕ  ಭೂಮಿಯಲ್ಲಿ ಧರ್ಮ ನೆಲೆಸುತ್ತಿದ್ದಾರೆ. ಈ ಕೆಲವರನ್ನು ಕೇವಲವಾಗಿ ಕಾಣುವ ಹಲವರು ಬಹಳಬೇಗ ಹೆಸರು,ಹಣ,ಅಧಿಕಾರ ಪಡೆದು ಜನರನ್ನು ದಾರಿತಪ್ಪಿಸಿದರೆ  ಮೇಲಿನ ಶಕ್ತಿ ಬಿಡುವಳೆ? ಎಲ್ಲದ್ದಕ್ಕೂ ಸಾಕ್ಷಿಭೂತಳಾಗಿರುವ ಮಹಾಕಾಳಿ ತನ್ನ ರೌದ್ರತೆಯಿಂದ  ಅವತಾರವೆತ್ತಿ‌  ಲಕ್ಮಿಯಾಗುವಳೋ ಅ ಲಕ್ಮಿ ಯಾಗಿ ಕಾಡುವಳೋ ಅವರವರ ಕರ್ಮಕ್ಕೆ ತಕ್ಕಂತೆ ಫಲ ಕೊಟ್ಟು ಕೊನೆಗೆ ಜ್ಞಾನದೆಡೆಗೆ ನಡೆಸೋ  ಸರಸ್ವತಿಯಾಗಿ ಬ್ರಹ್ಮಜ್ಞಾನ  ಸಿಗುತ್ತದೆ. ಒಟ್ಟಿನಲ್ಲಿ ಬ್ರಹ್ಮನ ಸೃಷ್ಟಿ ಗೆ ಜ್ಞಾನದೇವತೆ ವಿಷ್ಣುವಿನ ಕಾರ್ಯಕ್ಕೆ ಲಕ್ಮಿ,ಶಿವನ ಕಾರ್ಯಕ್ಕೆ ದುರ್ಗೆಯರು ಸರಿಸಮನಾಗಿ  ಕಾರ್ಯ ನಡೆಸಿದ್ದರೂ ಭೂಮಿಯ ಮೇಲಿನ ಮಾನವ ಮಾತ್ರ ಲಿಂಗಭೇಧ ಹೆಚ್ಚಿಸಿಕೊಂಡು ಒಬ್ಬರನ್ನೊಬ್ಬರು  ದ್ವೇಷ ಮಾಡುತ್ತಾ ಹಿಂದೆ ತಳ್ಳುತ್ತಾ ಕಾಲೆಳೆದುಕೊಂಡು ಬೀಳಿಸುತ್ತ ನಿಂತಲ್ಲಿಯೇ ಕುಸಿದು ಹೋಗುವ ಅಜ್ಞಾನಕ್ಕೆ ಹೆಚ್ಚು ಬೆಲೆ  ಕಟ್ಟಿದರೆ ಜಗನ್ಮಾತೆಯಾಗಲಿ ಜಗತ್ ರಕ್ಷಕರಾಗಲಿಕಾರಣರಾಗೋದಿಲ್ಲ.
ಎಲ್ಲದ್ದಕ್ಕೂ ಕಾರಣ ಮಾನವನ ಅಜ್ಞಾನ. ಅಜ್ಞಾನಕ್ಕೆ ಕಾರಣ ಶಿಕ್ಚಣದ ವಿಷಯ.ವಿಷಯದಲ್ಲಿ ವಿಷ ತುಂಬಿದ್ದರೆ ಅಮೃತ ಜ್ಞಾನ ಬರೋದಿಲ್ಲವಲ್ಲ.  ಯಾರದ್ದೋ ತಪ್ಪನ್ನು ಯಾರೋ ಪ್ರಚಾರ ಮಾಡಿ ಯಾರಲ್ಲೋ ದ್ವೇಷದ ವಿಷಬೀಜ ಬಿತ್ತಿ ಯಾರನ್ನೂ ಕೊಂದರೆ ಏನರ್ಥ? ಯಾರನ್ನೂ ಕೊಲ್ಲಲಾಗದು.ಕೊಂದರೂ ಮತ್ತೆ ಜನ್ಮವಿದೆ ಎಂದಾಗ ಆತ್ಮಹತ್ಯೆಯಾಗುತ್ತಿದೆ.ಆತ್ಮನ ಅರಿವಿಲ್ಲದೆ ಜೀವನ ನಡೆದಿದೆ. ತನ್ನ. ಒಳಗಿರುವ ಮೂರೂ ಶಕ್ತಿ ತನ್ನ ದೇಹವನ್ನು ಮನಸ್ಸಿಗೆ ಬಂದಂತೆ ನಡೆಯೋದಕ್ಕೆ  ಸ್ವಾತಂತ್ರ್ಯ ಕೊಟ್ಟಿರುವಾಗ ಹೊರಗಿನವರಿಂದ ಪಾಠ ಕಲಿಸಲು  ಆಗಲೇಬೇಕು ಮಹಾಶಕ್ತಿಯ ಅವತಾರ. ಇದು ನಡೆಯುತ್ತಲೇ ಇರುತ್ತದೆ. ಕಣ್ಣಿಗೆ  ಕಾಣುವ ದೇಹದೊಳಗೆ ಕಾಣದ  ಶಕ್ತಿಗಳ ಆಟವನ್ನು  ಕಾಣೋದಕ್ಕೆ ಆತ್ಮಜ್ಞಾನದ ಅಗತ್ಯವಿದೆ ಎಂದಿದ್ದಾರೆ. ಇದರಲ್ಲಿ ದೇವರು,ಮಾನವರು,ಅಸುರರ ಶಕ್ತಿಯ ನಡುವೆ ನಿಂತು ಆಡಿಸೋ ಶಕ್ತಿ ಒಬ್ಬಳೇ. ಜಗನ್ಮಾತೆಯ ಆಜ್ಞೆ ಯಂತೆಯೇ ಬ್ರಹ್ಮವಿಷ್ಣು ಮಹೇಶ್ವರರ ಕಾರ್ಯ ನಡೆಯುತ್ತಿದೆ ಎನ್ನುವ ದೇವಿ ಪುರಾಣ  ನವರಾತ್ರಿಯಲ್ಲಿ  ಹೆಚ್ಚಾಗಿ ಪಠಣೆಯಾಗುತ್ತದೆ.  ಹೀಗಾಗಿ ಈ ಸಮಯದಲ್ಲಿ ದೇವಿ ಶಕ್ತಿ ಜಾಗೃತವಾಗಿದ್ದು ದುಷ್ಟರನ್ನು ಸಂಹರಿಸಿ ಶಿಷ್ಯರನ್ನು ರಕ್ಷಿಸುತ್ತಾಳೆನ್ನುವರು. ಹಾಗಾದರೆ ದೇವಿ ಶಕ್ತಿ ಇರೋದೆಲ್ಲಿ?
ಸ್ತ್ರೀ ಯರಲ್ಲಿದ್ದು  ನಡೆಸಿದಂತೆ ಪುರುಷರಲ್ಲಿಯೂ ಇರುವಳು.
ಸ್ತ್ರೀ ಗಾದ ಅನುಭವ ಮಾತ್ರ ಪುರುಷ ರಿಗಾಗೋದಿಲ್ಲ. ಒಟ್ಟಿನಲ್ಲಿ  ಭಕ್ತಿ ಶ್ರದ್ಧೆಯಿಂದ  ತಾಯಿಯನ್ನು ಆರಾಧಿಸಿದಂತೆ ಕಣ್ಣಿಗೆ ಕಾಣುವ ತಾಯಂದಿರನ್ನು ಗೌರವಿಸುವ‌ ಜ್ಞಾನ‌
ಮಕ್ಕಳಿಗೆ  ಬರೋದಿಲ್ಲ. ಕಾರಣ ಕಣ್ಣಿಗೆ ಕಾಣುವ ತಾಯಿಯ ಅತಿಯಾದ ಮೋಹ, ಪ್ರೀತಿಯ ಬಂಧನ ದಲ್ಲಿ  ಸತ್ಯ ಧರ್ಮದ  ದಾರಿ ಕಾಣೋದಿಲ್ಲ. ಭಾರತಮಾತೆಯೊಳಗೇ ಇದ್ದು ಅವಳ ಜ್ಞಾನವನ್ನು ತಿರಸ್ಕರಿಸಿ  ದೇಶವಾಳುವವರಿಗೆ  ನಮ್ಮದೇ ಸಹಕಾರವಿದ್ದರೆ  ಜ್ಞಾನೋದಯವಾಗುವುದೆ?
ಓದಿ ತಿಳಿದರೆ ಬುದ್ದಿವಂತರು, ನಡೆದು ಕಲಿತರೆ ಜ್ಞಾನಿಗಳು.
ಏನೇ ಇರಲಿ  ನಮ್ಮ ಸಂಸ್ಕಾರ,ಸಂಸ್ಕೃತಿ, ಸದಾಚಾರ, ಸಮ ಆರಂಭ, ಕ್ರಮಬದ್ದ ಕಾರ್ಯ ಯೋಗದಿಂದ ಮಾತ್ರ ಬೆಳೆಯುತ್ತದೆ .ಭೋಗಕ್ಕಾಗಿ ನಡೆಸಿದಷ್ಟೂ ಅಜ್ಞಾನವೇ ಬೆಳೆಯುತ್ತದೆ. ಭೋಗವಿರಲಿ ,ಅತಿಯಾದರೆ ರೋಗವಾಗುತ್ತದೆ.

No comments:

Post a Comment