ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Saturday, October 7, 2023

ಹುಟ್ಟು ಹಬ್ಬವಾಗಿರಲಿ ಡಬ್ಬವಾಗದಿರಲಿ


ಹುಟ್ಟು ಹಬ್ಬದ ಶುಭಾಶಯಗಳೆಂದು ನಾವೆಲ್ಲರೂ ಹೇಳುತ್ತೇವೆ,ಕೇಳುತ್ತೇವೆ,ಕಳಿಸುತ್ತೇವೆ,ಆಶೀರ್ವಾದ ಮಾಡುತ್ತೇವೆಂದರೆ ಇದೊಂದು ದೈವೀಕ ಪ್ರಜ್ಞೆ. ಇದನ್ನು ಡಬ್ಬದಂತೆ‌ ಮುಚ್ಚಿಡಲಾಗದು. ಹಬ್ಬವನ್ನು ಹಂಚಿಕೊಂಡಷ್ಟೂ ಸಂತೋಷ ಹೆಚ್ಚುವುದು. ಹಾಗಾಗಿ ಹುಟ್ಟಿದ ದಿನದಂದು‌ಗುರುಹಿರಿಯರು ದೇವರುಗಳ ಆಶೀರ್ವಾದ ಪಡೆಯುವುದು ನಮ್ಮ ಹಿಂದೂ ಸನಾತನದ ಸಂಸ್ಕಾರದ ಒಂದು ಭಾಗವಾಗಿದೆ. ಇದನ್ನು ಜನ್ಮತಿಥಿ ನಕ್ಷತ್ರಕ್ಕೆ ತಕ್ಕಂತೆ ಆಚರಣೆ ಮಾಡಿದರೆ ಮಾತ್ರ ಹಬ್ಬ.ಇಲ್ಲವಾದರೆ‌ ಡಬ್ಬ. ಯಾವ ದೇವತೆಗೂ ‌ತಲುಪದ ಡಬ್ಬ ಕಾರ್ಯಕ್ರಮ ವಷ್ಟೆ.

 ಆಚರಣೆಗೂ ಜನ್ಮ ತಿಥಿಯ ಆಚರಣೆಗೂ ವ್ಯತ್ಯಾಸವಿದೆ. ಜನ್ಮ ದಿನಾಂಕ ನಮ್ಮ ಜೀವನವನ್ನು ಮುಂದಕ್ಕೆ ಎಳೆದರೆ ಜನ್ಮ ತಿಥಿ ನಮ್ಮ ಜೀವನವನ್ನು ಹಿಂದಕ್ಕೆಳೆಯುತ್ತದೆ. ಇಲ್ಲಿ ತಿಥಿ ಮಾಡೋದರಿಂದ ಹಿಂದಿನವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಹಿಂದೂ ಧರ್ಮ ತಿಳಿಸುತ್ತದೆ. ಇದ್ದಾಗಲೇ ಜನ್ಮಾಚರಣೆ ಮಾಡೋದು ಜನ್ಮದಿನಾಂಕ. ಒಟ್ಟಿನಲ್ಲಿ ಜನ್ಮ ಪಡೆದ ಮೇಲೆ ಒಮ್ಮೆ ಹೋಗಲೇಬೇಕು.ಇದ್ದಾಗಲೇ ತಿಥಿ ಮಾಡೋಕೊಳ್ಳುವವರು ಯೋಗಿಗಳಾಗಿರುತ್ತಾರೆಂದರೆ  ಗುರುಪೀಠ ಏರುವಾಗ ಮಾಡಿಕೊಳ್ಳುವ  ತಿಥಿಯ ಅರ್ಥ ನಾನೆಂಬುದಿಲ್ಲ ಎಲ್ಲಾ ಪರಮಾತ್ಮನದೇ ಎಂದಾಗಿರುತ್ತದೆ.
ಸಾಮಾನ್ಯ‌ಜನರ ಜನ್ಮದಿನವನ್ನು ಬಹಳ ವೈಭವದಿಂದ ‌ನಡೆಸಿದಂತೆ ಮಹಾತ್ಮರ ತಿಥಿಯನ್ನೂ ಆಚರಿಸುತ್ತಾರೆ. ಹಾಗಾದರೆ ಇಲ್ಲಿ ಜನ್ಮದಿನ ಜನ್ಮ ತಿಥಿಯ ನಡುವಿರುವ ಅಂತರಕ್ಕೆ ಕಾರಣ  ತಿಳಿಯುವುದು ಜ್ಞಾನದಿಂದ ಸಾಧ್ಯ. ಭೂಮಿಯಲ್ಲಿ ಜನ್ಮ‌ಪಡೆಯಲು ಜೀವಾತ್ಮನ ಹಿಂದಿನ ಋಣ ಮತ್ತು ಕರ್ಮ ವೇ ಕಾರಣವೆನ್ನುವ ಅಧ್ಯಾತ್ಮ ಸತ್ಯವನ್ನು ಯಾರು ತಿಳಿದು ನಡೆಯುವರೋ ಅವರು ತಮ್ಮ ಜನ್ಮದಿನವನ್ನು ತಿಥಿಗನುಸಾರ  ಆಚರಿಸಿಕೊಳ್ಳುವರು.ದಿನಾಂಕದ ಪ್ರಕಾರ ವರ್ಷ ವಾಗಿದ್ದರೂ ಮೇಲಿರುವ‌ಗ್ರಹನಕ್ಷತ್ರದ ಚಲನೆಯನ್ನು ಆಧರಿಸಿ ತಿಥಿಯನ್ನು ನಿರ್ಧರಿಸುವ‌ಹಿಂದೂ ಸನಾತನ ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಯಾಕೆ ತಿಥಿ ನಕ್ಷತ್ರಗಳು ಜೀವನದ ಮೇಲೆ ಪ್ರಭಾವ ಬೀರುತ್ತವೆ, ಅದನ್ನು ಮರೆತು‌ನಡೆದರೆ ಯಾಕೆ ಗ್ರಹಚಾರ ದೋಷದಿಂದ ಕಷ್ಟ ನಷ್ಟಗಳಾಗುತ್ತದೆ ಯಾವ ಶಕ್ತಿಯಿಂದ ಈ ದೇಹ ನಡೆಯುತ್ತಿದೆ ಎಲ್ಲಾ ವಿಚಾರ ಮಾನವನಿಗೆ ವಾಸ್ತವದಲ್ಲಿ ನಡೆಯುತ್ತಿರುವ  ಅಧರ್ಮ, ಅಸತ್ಯ,ಅನ್ಯಾಯ, ಅಸತ್ಯಕ್ಕೆ  ಸಹಕಾರ ಕೊಟ್ಟು  ನಮ್ಮ ಜನ್ಮಜಾಲಾಡುತ್ತಿರುವ ಅಸುರ ಶಕ್ತಿ ಬೆಳೆದಿರೋದು‌ಕಣ್ಣಿಗೆ ಕಾಣಬಹುದು. ಇಷ್ಟಕ್ಕೂ ಇಲ್ಲಿ ಯಾರೂ ಶಾಶ್ವತವಾಗಿರಲ್ಲ.ಮೇಲಿರುವ ಗ್ರಹನಕ್ಷತ್ರಗಳನ್ನು ಯಾರೂ ಆಳಲಾಗುತ್ತಿಲ್ಲ.ಕೊನೆಪಕ್ಷ ಭೂ ಗ್ರಹದ  ಮೇಲಿರುವ ಸತ್ಯ ತಿಳಿಯುವ ಪ್ರಯತ್ನ ಮಾನವ ಮಾಡುತ್ತಾ ಭೂಮಿಯಲ್ಲಿ ಶಾಂತಿ,ಧರ್ಮ, ಸತ್ಯ,ನ್ಯಾಯ ನೆಲೆಸುವ ಕೆಲಸದಲ್ಲಿದ್ದರೆ ಅದೇ ನಮ್ಮ ತಿಥಿಯನ್ನು ಸರಿಯಾಗಿ ನಡೆಸುತ್ತದೆ.ಅಂದರೆ ಇದ್ದಾಗಲೇ ತಿಥಿ ಮಾಡಿಕೊಳ್ಳಲು  ಗುರುವಾಗಿರಬೇಕು.ಅದು ಅರಿವಿನಿಂದ ಬರಬೇಕು.ಅಂತಹ‌ಜ್ಞಾನಶಕ್ತಿ ಆಂತರಿಕ ವಾಗಿ ನಮ್ಮನ್ನು ಅಧ್ಯಾತ್ಮದ ಕಡೆಗೆ ಎಳೆಯುತ್ತಾ ಹೋದಂತೆಲ್ಲ ಅದ್ವೈತ ದರ್ಶನ ವಾಗುತ್ತದೆ. ಅಂದರೆ ನಾನೆಂಬುದಿಲ್ಲ ನಾನು ಕಾರಣಮಾತ್ರದವ, ನಾನು ದೇವರ ದಾಸ,ಶರಣ,ಆತ್ಮವೇ ದೇವರು...ಇಂತಹ ವಿಚಾರ ಹೊರಗಿನಿಂದ ಕೇಳಿ ತಿಳಿದು ತಿಳಿಸಿ‌ಜನ್ಮದಿನ ಆಚರಣೆ ಮಾಡಿಕೊಳ್ಳಬಹುದು.ಆದರೆ ಇದು ಸತ್ಯವೆಂದು ಒಳಗಿನಿಂದ ತಿಳಿದು ತಿಥಿಯ ಪ್ರಕಾರ ನಡೆಯುವುದು ಶ್ರೇಯಸ್ಕರ.ಹಾಗಾಗಿ ಹೊರಗಿನವರಿಗೆ ಜನ್ಮ ದಿನಾಂಕ  ಒಳಗಿನವರಿಗೆ ತಿಥಿಯೇ  ಜನ್ಮವಾಗಿರುತ್ತದೆ.
ಇಲ್ಲಿ  ಆತ್ಮಕ್ಕೆ ಸಾವಿಲ್ಲ ಹಾಗಾದರೆ ಸಾಯುವುದು ದೇಹವಷ್ಟೆ ಆದಾಗ ಎಷ್ಟೋ ಜನ್ಮಪಡೆದ ಆತ್ಮಕ್ಕೆ  ತಿಥಿ ಮಾಡಿಕೊಂಡರೆ ಬೇಗ ಮುಕ್ತಿ. ಅದಕ್ಕೆ ಹಿಂದೂ ಸನಾತನ ಧರ್ಮ ಸಾವನ್ನು ಪ್ರೀತಿಸು ಎಂದಿದೆ.ವಿಪರ್ಯಾಸವೆಂದರೆ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡವರನ್ನು ವಿಜೃಂಬಿಸುವಷ್ಟು  ವ್ಯವಹಾರ ನಡೆದಿದೆ. ಇದರಿಂದಾಗಿ ಆತ್ಮಕ್ಕೆ ಶಾಂತಿಸಿಗದೆ ಅತಂತ್ರಸ್ಥಿತಿಗೆ ತಲುಪಿ  ಅತೃಪ್ತ ಆತ್ಮಗಳು ಮಕ್ಕಳು ಮಹಿಳೆಯೆನ್ನದೆ ಸೇರಿಕೊಂಡು  ಆಟವಾಡಿಸಿ  ಜನ್ಮಜಾಲಾಡುತ್ತಿವೆ. ಸೂಕ್ಷ್ಮ ವಾಗಿರುವ ಅಗೋಚರ ಶಕ್ತಿಯನ್ನು ಕಾಣುವ ಶಕ್ತಿ ಕಳೆದುಕೊಂಡ  ಮಾನವರಿಗೆ  ಇದರ ಅರಿವಿಲ್ಲದೆ  ಹುಚ್ಚರ ಸಂತೆಯಲ್ಲಿ ಶಾಂತಿ ಹುಡುಕಿದರೆ ಸಿಗುತ್ತಿಲ್ಲ. 
ನಾನು ಹುಟ್ಟಿದ್ದೇನೆಂದರೆ ನನಗನ ಭೂ ಋಣ ತೀರಿಲ್ಲವೆಂದರ್ಥ, ಭೂ ಋಣ ತೀರಿಸಲು  ಸತ್ಕರ್ಮ, ಸ್ವಧರ್ಮ,ಸತ್ಯದೆಡೆಗೆ ನಡೆಯಬೇಕು. ಹಾಗೆ ನಡೆಯುವಾಗ ಮೇಲಿರುವ ಗ್ರಹ ನಕ್ಷತ್ರಗಳ ಬಗ್ಗೆ ಅರಿವು ಹೆಚ್ಚಾಗುತ್ತದೆ. ಆಗ ತನ್ನನ್ನು ನಡೆಸುತ್ತಿರುವ  ಶಕ್ತಿಯ ಪರಿಚಯವಾಗಿ ನಾನು ಕಾರಣಮಾತ್ರನೆಂಬ ಸತ್ಯದರ್ಶನ ವಾದಾಗ  ಧರ್ಮ ಯಾವುದು ಅಧರ್ಮ ಯಾವುದು ಎಂಬ ಸತ್ಯ ತಿಳಿಯುತ್ತಾ ಜೀವ ಹಿಂದಕ್ಕೆ ಹೋಗಿ ಮೂಲ ಸೇರುತ್ತದೆ. ಇದನ್ನು ಬಿಟ್ಟು ದೂರ ಹೋದಂತೆಲ್ಲ ಮೂಲ ತಿಳಿಯದೆ ಸೇರದೆ ಪುನರ್ಜನ್ಮ ಪಡೆಯುತ್ತದೆ. ಕೆಲವು ಮತಗಳು ಪುನರ್ಜನ್ಮ ವಿಲ್ಲ ವೆಂದು ಸಾರುತ್ತಾ ಭೂಮಿ ಇರೋದೇ ಮನರಂಜನೆಗೆಂದು ದುರ್ಭಳಕೆ ಮಾಡಿಕೊಂಡರೆ ‌ ಹಿಂದೂ ಧರ್ಮ ಪುನರ್ಜನ್ಮ ಬೇಡವೆಂದು ಭೂಮಿಯನ್ನು  ಸದ್ಬಳಕೆ ಮಾಡಿಕೊಂಡು ತಾನು ಬದುಕಿ ಇತರರನ್ನು ಬದುಕಲು ಬಿಡುವ ತತ್ವದೆಡೆಗೆ ನಡೆಸಿತ್ತು. ಯಾವಾಗ ಮಧ್ಯವರ್ತಿಗಳು  ಹೆಚ್ಚಾಗಿ  ಅರ್ಧಸತ್ಯ ಬೆಳೆಯಿತೋ  ಕಣ್ಣಿಗೆ ಕಾಣೋದಷ್ಟೆ ಸತ್ಯವೆಂದರಿತು ಗ್ರಹ ನಕ್ಷತ್ರಗಳ  ವಿಚಾರಕ್ಕೆ ಹೋಗದೆ  ಗ್ರಹಗಳ ಮೇಲೇ ಹಾರುವ  ಬಗ್ಗೆ ಚಿಂತನೆ ನಡೆಸುತ್ತಾ ಭೂಮಿಯ ಮೇಲಿರುವ ಸತ್ಯ ಮರೆತವರನ್ನೇ ದೇವರೆಂದರು. ಹಾಗಾದರೆ ದೇವರು ಯಾರು?
ಆತ್ಮವೇ ದೇಹವೇ? ದೇಹವೇ ದೇಗುಲವಾಗಲು ಆತ್ಮಾನುಸಾರ ನಡೆದವರು ದೈವತ್ವ ಪಡೆದರು.ನಿರಾಕಾರ ಬ್ರಹ್ಮನ ಅರಿಯಲು ಮಹಾತ್ಮರಿಂದ ಸಾಧ್ಯವಾಯಿತು. ಮಹರ್ಷಿಗಳ  ಬ್ರಹ್ಮಜ್ಞಾನದಿಂದ  ಜಗತ್ತನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿತ್ತು.ಆದರೆ ಅವರು ಜಗತ್ತನ್ನು ಆಳಲು ಹೋಗಲಿಲ್ಲ ಕಾರಣ‌ನಾವೇ ಆಳಾಗಿರುವಾಗ ಆಳೋದಕ್ಕೆ ಸಾಧ್ಯವಿಲ್ಲವಾದರೂ ಭೂಮಿಯಲ್ಲಿ ಧರ್ಮ ಸ್ಥಾಪನೆ ಮಾಡಲು  ಮಹಾತ್ಮರ ಜನ್ಮವಾಗಿದೆ.ದೇವರ ಅವತಾರವಾಗಿದೆ.ಇದನ್ನು ಪುರಾಣ ತಿಳಿಸುತ್ತದೆ. ಪುರಾಣ ಓದಿ‌ನಾನೇ ದೇವರೆಂದರೆ  ನನ್ನಲ್ಲಿ ದೈವತ್ವ ವಿದೆಯೆ? ಅಸುರತ್ವವಿದೆಯೆ? ಅಸುರರೊಳಗೇ ಸಿಲುಕಿರುವ ಸುರರು ಹೊರಬರಲು  ತಮ್ಮ ತಿಥಿ ತಾವೇ ಮಾಡಿಕೊಳ್ಳುವ ಗುರುವಿಗೆ ಸಾಧ್ಯವಿದೆ.ಗುರುವೇ ಅಸುರರಿಗೆ ಶರಣಾದರೆ ಅಧೋಗತಿ. ಕಲಿಗಾಲ ಕಲಿಕೆಯ ಕಾಲ. ಕಲಿತು ಹೊರಗಿನ‌ನಕ್ಷತ್ರವಾಗೋ ಮೊದಲು ಮೇಲಿರುವ ನಕ್ಷತ್ರಗಳ ಅರಿವಿದ್ದರೆ ಉತ್ತಮ ಜನ್ಮ.

No comments:

Post a Comment