ಕೆಲವು ವಿಚಾರಗಳನ್ನು ಬರವಣಿಗೆಯಲ್ಲಿ ಇಳಿಸುವಾಗ ಭವಿಷ್ಯದಲ್ಲಿ ಇದು ಎಷ್ಟರ ಮಟ್ಟಿಗೆ ಉಪಯೋಗಕ್ಕೆ ಬರುವುದೆನ್ನುವ ಅರಿವಿದ್ದರೆ ಉತ್ತಮ.ಇಲ್ಲ ನನ್ನ ಹೆಸರು,ಹಣ,ಅಧಿಕಾರಕ್ಕೆ ವಿಷಯ ತಿಳಿಸುವುದಾದರೆ ಇವೆಲ್ಲವೂ ಮುಂದೆ ಕಳೆದುಕೊಂಡಾಗ ಆಗುವ ಕಷ್ಟ ನಷ್ಟಕ್ಕೆ ಬರವಣಿಗೆ ಕಾರಣವಾಗದಂತಿರಬೇಕು. ಭೌತಿಕದಲ್ಲಿ ಬದುಕಲು ಹಣ ಹೆಸರು,ಅಧಿಕಾರವಿರಬೇಕು ಹಾಗಂತ ಅದು ಶಾಶ್ವತವಾಗಿರಬೇಕೆಂದು ಅಸತ್ಯ ಅನ್ಯಾಯ, ಅಧರ್ಮವನ್ನು ಬೆಳೆಸುವುದರಿಂದ ಆತ್ಮಹತ್ಯೆಯಾಗುತ್ತದೆ.
ಆತ್ಮ ಸಾಯೋದಿಲ್ಲ ಆದರೂ ಹತ್ಯೆ ಎನ್ನುವ ಪದವನ್ನು ಯಾಕೆ ಬಳಸುವರೆಂದರೆ ಮಾನವನ ಒಳಗೇ ಅಡಗಿರುವ ಆತ್ಮಸಾಕ್ಷಿಗೆ ವಿರುದ್ದ ನಡೆದಂತೆಲ್ಲಾ ಹಿಂದುಳಿಯುವುದು ಪರಮ ಆತ್ಮ . ಪವಿತ್ರ ಆತ್ಮ ಪರಮಾತ್ಮ.ಆತ್ಮಾನುಸಾರ ನಡೆದವರು ಮಹಾತ್ಮರಾದರು ಎಂದರೆ ಜೀವ ಸತ್ತರೂ ಆತ್ಮ ಅಮರ. ಹೀಗಾಗಿ ಅಮರತ್ವದೊಂದಿಗೆ ಬದುಕುವುದರಿಂದ ಆತ್ಮಹತ್ಯೆಯಾಗದು. ಇಲ್ಲವಾದರೆ ಇದ್ದೂ ಸತ್ತಂತೆ ಎನ್ನುವರು. ಇಂದು ಓದಿ ತಿಳಿಯುವುದಕ್ಕೆ ಎಲ್ಲರಿಗೂ ಅವಕಾಶ ಸ್ವಾತಂತ್ರ್ಯ ವಿದೆ. ಮಾಡಿ ಕಲಿಯುವುದಕ್ಕೆ ಎಲ್ಲರೂ ತಯಾರಿಲ್ಲ. ಹೇಳಿದ್ದನ್ನು ಕೇಳಿಕೊಂಡಿರುವವರು ಹೆಚ್ಚಾಗುತ್ತಾ ಹೇಳೋರೆ ಹೆಚ್ಚು.ಬೇಡದ್ದನ್ನುಕೇಳೋರ ಹುಚ್ಚನ್ನು ಸರಿಪಡಿಸಲಾಗದಿದ್ದರೆ ಹೇಳಿ ಉಪಯೋಗವಿಲ್ಲ. ಅದಕ್ಕೆ ಸಾಹಿತ್ಯದಲ್ಲಿ ಸತ್ಯವಿರಬೇಕು. ಅಸತ್ಯವೇ ತುಂಬಿಕೊಂಡಿದ್ದರೆ ವಾಸ್ತವ ಜಗತ್ತಿನ ಸಮಸ್ಯೆಗೆ ಪರಿಹಾರವಿಲ್ಲವಾಗಿದ್ದರೆ ಪ್ರಯೋಜನವಿಲ್ಲ. ಶಾಶ್ವತ ಪರಿಹಾರಕ್ಕೆ ಸತ್ಯ,ಸತ್ವ,ತತ್ವದ ವಿಚಾರವಿರಬೇಕು,ತಾತ್ಕಾಲಿಕ ಪರಿಹಾರ ಎಲ್ಲಾ ಪಡೆಯಬಹುದು.ತಿರುಗಿ ಸಮಸ್ಯೆಯೂ ಬೆಳೆಯುವುದು. ಯಾರದ್ದೋ ಕಥೆ ಯಾವುದೋ ಕಾಲದ್ದು ಓದಿದಾಗ ನಮ್ಮ ಸಮಸ್ಯೆಗೆ ಪರಿಹಾರ ಸಿಗಲೂಬಹುದು ಸಿಗದಿರಬಹುದು ಹಾಗಾಗಿ ಸಮಸ್ಯೆಯ ಮೂಲವೇ ನಮ್ಮ ಹಿಂದಿದೆ. ಹಿಂದೆ ತಿರುಗಿ ನೋಡಿ ಸರಿಪಡಿಸಬಹುದಾದರೆ ಉತ್ತಮ. ಇಲ್ಲವಾದರೆ ಮುಂದೆ ಹಾಗೆ ನಡೆಯದಂತೆ ಎಚ್ಚರ
ವಹಿಸಬೇಕಷ್ಟೆ. ಈಗಿನ ಸಮಸ್ಯೆ ಹಿಂದಿರಲಿಲ್ಲ.ಹಿಂದಿನ ಸಮಸ್ಯೆ ಈಗಿಲ್ಲ.ಒಟ್ಟಿನಲ್ಲಿ ಸಮಸ್ಯೆಯಿಲ್ಲದ ಜೀವನವಿಲ್ಲ. ಸಮಸ್ಯೆ ಹುಟ್ಟಿಸುವ ಲೇಖನಕ್ಕಿಂತ ಪರಿಹರಿಸುವ ಲೇಖನ ಉತ್ತಮವಾಗಿದ್ದರೂ ಕಷ್ಟಪಡಬೇಕೆನ್ನುವಕಾರಣಕ್ಕಾಗಿ ಸುಖವನ್ನು ಆರಿಸಿಕೊಂಡರೆ ಇನ್ನಷ್ಟು ಕಷ್ಟ ಹೆಚ್ಚುವುದು.ಎಲ್ಲಾ ಕಷ್ಟವನ್ನು ಬರೆದು ಇಳಿಸುವುದು ನಮ್ಮ ಮನಸಂತೋಷಕ್ಕಾಗಿಇದರಿಂದ ಬೇರೆಯವರ ಸಮಸ್ಯೆಗೂ ಪರಿಹಾರ ಸಿಗೋದಾದ್ರೆ ಹಂಚಿಕೊಳ್ಳಬಹುದು. ಇದರಿಂದ ಇನ್ನಷ್ಟು ಸಮಸ್ಯೆ ಬೆಳೆಯೋದಾದರೆ ಹಂಚುವಾ ಅಗತ್ಯವಿಲ್ಲ.
ಸಾಮಾಜಿಕಜಾಲತಾಣಗಳಲ್ಲಿ ಸಾಕಷ್ಟು ನಕಾರಾತ್ಮಕ ಸುದ್ದಿ ವಿಶೇಷವೇ ಹರಡಿರುತ್ತದೆ. ಈ ಪೋಸ್ಟ್ ಯಾವುದೋ
ಮೂಲದಿಂದ ಹರಡಿಕೊಂಡು ಬಂದಿದ್ದರೂ ಮೂಲದ ಉದ್ದೇಶ ಉತ್ತಮವಾಗಿದ್ದರೆ ಸರಿ .ಹೀಗಾಗಿ ಯಾವ ಸುದ್ದಿಯಾಗಿರಲಿ ಅದನ್ನು ಬೇರೆಯವರಿಗೆ ಹಂಚುವ ಮೊದಲು ಸೂಕ್ಮದೃಷ್ಟಿಯಿಂದ ಸತ್ಯಾಸತ್ಯತೆಯನ್ನು, ಧರ್ಮಾಧರ್ಮಗಳನ್ನು ತಿಳಿಯುವುದು ಅಗತ್ಯ. ಇಲ್ಲಿ ಯಾರೂ ಯಾರನ್ನೂ ನಡೆಸುತ್ತಿಲ್ಲ ಆಗೋದು ಇಲ್ಲವಾದಾಗ ತಮ್ಮೊಳಗೇ ಅಡಗಿರುವ ಆ ಚೇತನಾಶಕ್ತಿಯನ್ನರಿತು ಸದ್ಬಳಕೆ ಮಾಡಿಕೊಳ್ಳಲು ಉತ್ತಮ ವಿಚಾರದ ಬಗ್ಗೆ ಗಮನಹರಿಸಲೂ ನಮ್ಮಲ್ಲಿ ಆತ್ಮಜ್ಞಾನವಿರಬೇಕಿದೆ. ವಿಜ್ಞಾನ ಜಗತ್ತಿನ ಹೊರಮುಖ ಅಧ್ಯಾತ್ಮ ಜಗತ್ತಿನಒಳಮುಖದ ವಿರುದ್ಧ ಎಷ್ಟು ನಿಂತರೂ ಮಧ್ಯೆಇರುವ ನಮ್ಮ ಮುಖಪರಿಚಯ ನಮಗೇ ಆಗಿರುವುದಿಲ್ಲ ಎಂತಹ ವಿಪರ್ಯಾಸವಲ್ಲವೆ? ಕಾಣದ ಕೈಗಳ ಕೈಚಳಕದಲ್ಲಿ ಕಾಣುವ ಕೈಗಳು ಕಾಣಿಸುತ್ತವೆ ಆದರೆ ಇದು ಸತ್ಯವಲ್ಲ. ಬರವಣಿಗೆಯ ಹಿಂದಿನ ಶಕ್ತಿಯೇ ಬೇರೆ ಬರೆಯುವವರೆ ಬೇರೆ ಎಂದರೆ ದ್ವೈತ. ಇಬ್ಬರೂ ಒಂದೇ ಎಂದರೆ ಅದ್ವೈತ.
ಇಲ್ಲಿ ಕಣ್ಣಿಗೆ ಕಾಣುವಂತೆ ಅದ್ವೈತ ದೊಳಗೇ ದ್ವೈತವಿದ್ದರೂ ಇವೆರಡೂ ಬೇರೆ ಬೇರೆ ಎಂದರೆ ನಂಬುವ ನಾವು ನಮ್ಮ ಒಳಗೇ ಇದ್ದು ನೆಡೆಸೋ ಶಕ್ತಿಯನ್ನೂ ಬೇರೆ ಮಾಡುತ್ತಾ ಸಾಧನೆ ಮಾಡಿದರೆ ಧರ್ಮ ವಾಗುವುದೆ? ತತ್ವ. ಯಾವತ್ತೂ ಒಂದು ಮಾಡಬೇಕಿತ್ತು.ತಂತ್ರದಿಂದ ಬೇರೆ ಮಾಡಿದರೆ ಸತ್ಯ ಅರ್ಥ ವಾಗದು. ಒಟ್ಟಿನಲ್ಲಿ ಭೂಮಿ ತನ್ನ ಕೆಲಸ ನಡೆಸಿದೆ.ತನ್ನ ಅಸ್ತಿತ್ವಕ್ಕೆ ಆದ ದಕ್ಕೆಯ ವಿರುದ್ದ ಸಿಡಿದೆದ್ದು ನಿಂತಿರುವಾಗ ಅವಳ ರೂಪವನ್ನು ರಾಕ್ಷಸಿ ಎಂದರೆ ಸರಿಯಲ್ಲ. ನಾರಿಯಾಗಿದ್ದವಳನ್ನು ಮಾರಿ ಮಾಡುವ ದುಷ್ಟತನ ಮಾನವನಲ್ಲಿದ್ದಾಗ ಇದಕ್ಕೆ ಕಾರಣ ಅಜ್ಞಾನ ವಷ್ಟೆ.ಅಜ್ಞಾನ ವನ್ನು ವೈಭವೀಕರಿಸಿದರೆ ಆಗೋದು ಹೀಗೇ.
ಬರವಣಿಯು ಜ್ಞಾನದಿಂದ ಹೊರಬರುವುದಕ್ಕೂ ಅಜ್ಞಾನದಿಂದ ಹೊರಬರುವುದಕ್ಕೂ ವ್ಯತ್ಯಾಸವಿಷ್ಟೆ. ಅನುಭವಕ್ಕೆ ಸಾಕ್ಷಿಯಿರದು. ಕಣ್ಣಿಗೆ ಕಾಣುವ ಸಾಕ್ಷಿಯಲ್ಲಿ ಸತ್ಯವಿರದು.
ದೊಡ್ಡ ದೊಡ್ಡ ವ್ಯಕ್ತಿಗಳ ವಿಷಯಗಳು ಬಹುಬೇಗ ಹರಡುತ್ತದೆ ಆದರೆ ಹಿಂದಿರುವ ದೊಡ್ಡ ಶಕ್ತಿಯ ಬಗ್ಗೆ ಅರಿವಿರೋದಿಲ್ಲ.ವ್ಯಕ್ತಿ ಬೆಳೆದು ಮರಣ ಹೊಂದುವನು ಶಕ್ತಿಯಲ್ಲ.ಅದಕ್ಕಾಗಿ ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಅವರ ಒಳಗಿದ್ದ ಶಕ್ತಿಯನರಿತು ನಡೆದರೆ ಉತ್ತಮ.
ಎಲ್ಲರಲ್ಲಿಯೂ ಅಡಗಿರುವ ಆ ಮಹಾಶಕ್ತಿ ನಮ್ಮಲ್ಲೂ ಇರೋವಾಗ ಯಾಕೆ ಕಾಣಿಸುತ್ತಿಲ್ಲವೆಂದರೆ ನಾವು ಒಳಹೊಕ್ಕಿ ನೋಡದೆ ಹೊರಗಿನಿಂದ ಓದಿ ಬರೆದು ಇಳಿಸಿದ್ದೇವೆ. ಯಾರಿಗೆ ಗೊತ್ತು ಯಾರಲ್ಲಿ ಯಾವ ದೇವರು ಅಸುರರು ಇರುವರೆಂದು. ಒಟ್ಟಿನಲ್ಲಿ ದೇಹ ಒಂದು ಮಾಧ್ಯಮ. ಈ ಮಾಧ್ಯಮದೊಳಗೆ ಎರಡೂ ಶಕ್ತಿ ತನ್ನ ಸ್ಥಾನಕ್ಕೆ ಹೊಡೆದಾಟ ಮಾಡಿಕೊಂಡಿದ್ದರೂ ಮಾನವ ಮಾತ್ರ ಇದು ನನ್ನದೆಂಬ. ಭ್ರಮೆಯಲ್ಲಿದ್ದು ಸತ್ಯ ತಿಳಿಯದೆ ಸೋತು ಹೋಗುತ್ತಿದ್ದಾನೆ. ಮಾತಿಗಿಂತ ಕೃತಿಯೇ ಮೇಲು ಎಂದರು.
ಕೃತಿ ಸತ್ಯದ ಪರವಿದ್ದರೆ ಸಂಸ್ಕೃತಿ. ಅಸತ್ಯದ ಪರವಿದ್ದರೆ ವಿಕೃತಿಯಾಗಿರುತ್ತದೆ. ಗುರುವೇ ದೇವರಾದಾಗ ಅವರು ಆತ್ಮಸಾಕ್ಷಿಯಂತೆ ನಡೆಯುವರು. ಆತ್ಮ ಯಾವತ್ತೂ ಸತ್ಯದ ಪರವಾಗಿರುತ್ತದೆ.ಸತ್ಯವೇ ದೇವರು.
18 ವರ್ಷಗಳ ಲೇಖನಗಳನ್ನು ಶ್ರೀ ಶ್ರೀ ಮಹಾಗುರುಗಳ
ವರೆಗೆ ತಲುಪಿಸುವುದರ ಮೂಲಕ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ನನಗೆ ಯಾವ ಅಧಿಕಾರ ಹಣ ಹೆಸರಿನ ಹಿಂದೆ ನಡೆಯುವುದು ಗೊತ್ತಿಲ್ಲ. ಕಾರಣ ನನ್ನ ಹೆಸರೇ ನನ್ನದಾಗಿ ಉಳಿದಿಲ್ಲ ಅದಕ್ಕೆ ಲೇಖನಗಳು ಭಗವತಿಯ ಹೆಸರಿನಲ್ಲಿಯೇ ಹೊರಬಂದಿದೆ. ತಾಯಿಗೆ ಗೊತ್ತು ಸತ್ಯ ಯಾವುದು ಅಸತ್ಯ ಯಾವುದೆಂದು. ಅಸತ್ಯಕ್ಕೆ ಬೆಲೆಕಟ್ಟುವ ಜನರಿಗೆ ಸತ್ಯದ ಬೆಲೆ ಅರ್ಥ ವಾಗದ ಕಾರಣ ಆತ್ಮಹತ್ಯೆ ಹೆಚ್ಚಾಗುತ್ತಿದೆ. ಅಧರ್ಮ ಮಿತಿಮೀರಿದೆ.ಅಸುರ ಶಕ್ತಿಯೊಳಗೇ ಸುರರೂ ಸಿಲುಕಿದ್ದಾರೆ.
No comments:
Post a Comment