ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, October 17, 2023

ದೇವಾಸುರರು ಎಲ್ಲಿರುವುದು?

ವಾಸ್ತವದಲ್ಲಿ ದೇವರು ಅಸುರರು ಎನ್ನುವ ಬಗ್ಗೆ ಅರಿವಿದ್ದವರು ಕಡಿಮೆ. ಅಗೋಚರ ಶಕ್ತಿ ಎಂದು ದೇವರನ್ನು ಪೂಜಿಸುವುದು ಅಸುರರನ್ನು ದ್ವೇಷಿಸೋದಾಗಿದೆ. ಸತ್ಯ ವೇನೆಂದರೆ ಈ ಶಕ್ತಿಯಿರೋದೆ ಮಾನವನ ಗುಣಗಳಲ್ಲಿ .
ವ್ಯಕ್ತಿಯನ್ನು ಪ್ರೀತಿಸೋದು ದ್ವೇಷಿಸೋದಕ್ಕೆ ಕಾರಣವೇ ಗುಣವಾಗಿದೆ. ಹಾಗಾಗಿ ಒಳ್ಳೆಯ ಕೆಲಸ ಮಾಡಿದವರು ದೇವರು ಕೆಟ್ಟ ಕೆಲಸಮಾಡಿದವರು ಅಸುರರೆಂದರೆ ಸರಿಯಾಗುವುದೆ? ಒಳ್ಳೆಯದು  ಕಾಣೋದಿಲ್ಲ.ಕೆಟ್ಟದ್ದು ಕಾಣುತ್ತದೆ ಎಂದರೆ ನಮ್ಮೊಳಗೇ  ಇರುವ  ಶಕ್ತಿಗೆ ಒಳ್ಳೆಯದು ಕಾಣದೆ ಕೆಟ್ಟದ್ದೇ ಕಾಣುತ್ತಿದೆ ಎಂದರ್ಥ .ಹಾಗಾಗಿ ಎಲ್ಲಿ ದೈವತ್ವವಿರುವುದೋ ದೈವತ್ವ ಕಾಣುವುದು.ಅಸುರತೆ ಇರುವುದೋ ಅಸುರರೆ ಕಾಣುವರು.
ದೇವರನ್ನು ಅಸುರರು ದ್ವೇಷ ಮಾಡಿದಂತೆ ಅಸುರರೂ ದೇವತೆಗಳನ್ನು ದ್ವೇಷ ಮಾಡುತ್ತಾ ಕೊನೆಗೆ ಮಹಾಯುದ್ದ ನಡೆದಿರೋದನ್ನು ಪುರಾಣ ಕಥೆ ಹೇಳುತ್ತದೆ.ಒಳ್ಳೆಯದೆಂದರೆ ಏನು? ಹಣ ಕೊಟ್ಟು ಬೆಳೆಸುವುದೆ? ಜ್ಞಾನ ಕೊಟ್ಟು ಬೆಳೆಸುವುದೆ? ಭಾರತದ ಈ ಸ್ಥಿತಿಗೆ ಅಜ್ಞಾನವೇ ಕಾರಣವೆಂದರೆ ಜ್ಞಾನ ಕೊಡದೆ ಬೆಳೆಸಿರೋದಲ್ಲವೆ? ಜ್ಞಾನ ಎಂದರೆ ತಿಳುವಳಿಕೆ.ಇದರಲ್ಲಿ ಅಧ್ಯಾತ್ಮ ಸತ್ಯ ಭೌತಿಕ ಸತ್ಯವಿದೆ. ಇವೆರಡರ ನಡುವಿರುವ ಮನುಕುಲಕ್ಕೆ ಸಾಮಾನ್ಯ ಜ್ಞಾನವಿದ್ದರೆ ತನ್ನ ಆತ್ಮರಕ್ಷಣೆಗಾಗಿ  ಯಾವ ದಾರಿ ಒಳ್ಳೆಯದು ಕೆಟ್ಟದ್ದು ಎನ್ನುವ ತಿಳುವಳಿಕೆ ಯಿದ್ದರೆ ತನ್ನೊಳಗೆ ಇರುವ ಅಸುರಿ ಗುಣಗಳಾದ  ಅತಿಯಾದ ಸ್ವಾರ್ಥ ಅಹಂಕಾರವನ್ನು   ಅರ್ಥ ಮಾಡಿಕೊಳ್ಳಲುಸಾಧ್ಯವಾಗುತ್ತಿತ್ತು. 
ಆದರೆ ಇದನ್ನು ಬೆಳೆಸಿದವರು‌ ಹೊರಗಿನವರು ನಮ್ಮವರ ಸಹಕಾರದಿಂದ ಮುಂದೆ ಮುಂದೆ ಹೋದವರ ಹಿಂದೆ ಹಿಂದೆ ಬೆಳೆದ ಇದನ್ನು ಗಮನಿಸಿಲಾಗದ ಮನಸ್ಸನ್ನು ತಡೆಹಿಡಿಯುವ ಶಕ್ತಿ ದೇವರಿಗೆ ಇದೆ.ಅಂದರೆ ದೈವತ್ವದೆಡೆಗೆ  ನಡೆದಾಗಲೇ ಒಳಗಿರುವ ಅಸುರಿ ಗುಣ‌ಹೊರಹೋಗಲು ಸಾಧ್ಯ. ಇದನ್ನು ದೇವರು ಅಸುರರಿಗೆ ಕೊಡೋದಿಲ್ಲ.ಅಸುರರು ದೇವತೆಗಳಿಂದ ಈ ಶಕ್ತಿ ಬೇಡೋದಿಲ್ಲ. ಇದೇ  ಕಾರಣ  ಭೂಮಿಯಲ್ಲಿ ಕ್ರಾಂತಿ ಹೆಚ್ಚಾಗಿ  ಯುದ್ದಗಳು‌ ನಡೆದಿದೆ. ಯುದ್ಧಗಳಿಂದ ಸಾವು ನೋವುಗಳೇ ಹೆಚ್ಚಾಗುತ್ತದೆ  ಹಾಗಂತ  ಇದ್ದೂ ಸತ್ತಂತೆ ಬದುಕುವ ಬದಲು ಸತ್ತು ಅಮರರಾಗೋದೆ ಶ್ರೇಷ್ಠ. ದೇವಾಸುರರ‌ಕಾಳಗದಲ್ಲಿ  ಜೀವಹೋದ ಮೇಲೆ ಅಸುರರಿಗೂ ಸ್ವರ್ಗ ಪ್ರಾಪ್ತಿ ಯಾಗಿದೆ ಎಂದರೆ ಧರ್ಮ ರಕ್ಷಣೆಗಾಗಿ‌ನಡೆಸೋ ಯುದ್ದದಲ್ಲಿ ಯಾರೂ ಸಾಯೋದಿಲ್ಲ ಬದುಕಿರುವಾಗ  ಆತ್ಮಾನುಸಾರ ನಡೆಯೋದೆ ಧರ್ಮ . ಇದರಲ್ಲಿ ಅಸುರರಿಗೆ ಭೌತಿಕ ಜಗತ್ತಿನ ಸತ್ಯವಷ್ಟೆ ಅರ್ಥ ವಾಗಿ  ಅಧರ್ಮದಿಂದ  ಆಳಲು ಹೊರಟಾಗ ಸುರರು ವಿರೋಧಿಸಿರೋದು  ಎಲ್ಲಾ ಯುದ್ದಕ್ಕೆ ಕಾರಣವಾಗಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ಯಾರು ದೇವರು ಅಸುರರು ಎಂದು ಗುರುತಿಸುವ  ಜ್ಞಾನವಿಲ್ಲದೆ‌ ಯಾರಲ್ಲಿ ಹೆಚ್ಚು ಹಣ,ಅಧಿಕಾರ,ಸ್ಥಾನಮಾನ,ಪದವಿ,ವಿದ್ಯೆಯಿದೆಯೋ ಅವರು ದೇವರಾಗಬಹುದು. ನಿಜವಾಗಿಯೂ  ಇದರಲ್ಲಿ ಅವರ ಸ್ವಂತ ಜ್ಞಾನ,ವಿದ್ಯೆ,ಬುದ್ದಿ,ಧರ್ಮ, ಕರ್ಮದಿಂದ ‌ ಗಳಿಸಿರುವರೆ ಅಥವಾ ಅಡ್ಡದಾರಿಯಲ್ಲಿ ತಂತ್ರಮಾರ್ಗದಲ್ಲಿ ಗಳಿಸಿರುವರೆ ಎಂದು ತಿಳಿಯುವುದು  ಅಗತ್ಯ. ಪ್ರಜಾಪ್ರಭುತ್ವ ದೇಶ ಹೆಸರಿಗಷ್ಟೆ ಪ್ರಜಾಪ್ರಭುತ್ವ. ಪ್ರಜೆಗಳ‌ಹಣ,ಸಹಕಾರವಿಲ್ಲದೆ ಯಾರೂ ಶ್ರೀಮಂತ ರಾಗಿಲ್ಲ.ಜೊತೆಗೆ ಪೂರ್ವಜರ ಜ್ಞಾನಬಲ,ಆಸ್ತಿಯೂ ಸೇರಿ ಸಾಮಾನ್ಯಜ್ಞಾನವಿಲ್ಲದೆ‌ ಜನರನ್ನು ದಾರಿತಪ್ಪಿಸಿ ತಮ್ಮ ಸೇವೆ ಮಾಡಿಸಿಕೊಂಡವರು ದೇವರೆಂದರೆ  ಸರಿಯಾಗುವುದೆ?
ಸ್ವಂತ ಬುದ್ದಿ,ಜ್ಞಾನವನ್ನು ಗುರುತಿಸಿ ಶಿಕ್ಷಣ ನೀಡಿ ಸ್ವತಂತ್ರ ವಾಗಿ ಬದುಕಲು‌ ಅವಕಾಶ ಮಾಡಿಕೊಟ್ಟವರು ದೇವರು. ಇದು ಮನೆ ಮನೆಯೊಳಗೇ‌ ನಡೆದಾಗಲೇ ಒಳಗಿರುವ ಅಸುರಿ ಶಕ್ತಿ ಹೊರಗೆ ಹೋಗಬಹುದು. ನಮ್ಮ ಗುಣ ನಮಗೆ ಪ್ರೀತಿ. ಇದನ್ನು ಹೊರಗಿನವರು ವಿರೋಧಿಸಿದರೆ ಅವರು ನಮ್ಮ ಶತ್ರುಗಳಾಗುತ್ತಾರೆಂದರೆ  ನಾವು‌ ಪ್ರತಿಯೊಬ್ಬರ ಸತ್ಯ
ದಲ್ಲಿ ದೇವರನ್ನು ಕಾಣೋದರಲ್ಲಿ ಸೋತು ಅಸುರರಿಗೆ ಮಣೆ ಹಾಕಿ ಬೆಳೆಸಿದ್ದೇವೆ. ಸತ್ಯ ಕಠೋರ ಮಿಥ್ಯದಲ್ಲಿ ಹೊಗಳಿಕೆಯೇ ಹೆಚ್ಚು. ಹೀಗಾಗಿ ಮಿಥ್ಯದೆಡೆಗೆ  ನಡೆದವರಿಗೆ ಹೊಗಳಿಕೆಯೇ ಮುಖ್ಯ. ತಪ್ಪು ತಿಳಿಸಲೇಬಾರದೆಂದರೆ‌ ಸರಿಯಾಗುತ್ತಿತ್ತು.
ಆದರೆ ಇಲ್ಲಿ ಸಾಮಾನ್ಯರ ತಪ್ಪು ಎದ್ದು ಕಾಣುತ್ತದೆ. ಪ್ರತಿಷ್ಟಿತ ರ ತಪ್ಪು ಹಣದಿಂದ ಅಳೆಯಲಾಗಿ ಮುಚ್ಚಿಹೋಗುತ್ತದೆ ಎಂದರೆ ದೇವರಿರೋದೆಲ್ಲಿ?
ಪಾಪ ಮಧ್ಯವರ್ತಿ ಮಾನವನಿಗೆ ತನಗೆ ತಾನೇ ಮೋಸಹೋದರೂ ತಿಳಿಯದ ಅರ್ಧ ಸತ್ಯದಲ್ಲಿ ಮಧ್ಯೆ ನಿಂತು ದೇವಾಸುರರನ್ನು  ಸಮಾನವಾಗಿ ಕಾಣುತ್ತಾ ತನ್ನ ಆತ್ಮವಂಚನೆ ಯಲ್ಲಿ  ಬದುಕುವುದೇ ಕರ್ಮ ವಾಗಿ ಜನ್ಮ ಪಡೆಯುತ್ತಲೇ ಇರುವುದಾಗಿದೆ.ಶ್ರೀ ಕೃಷ್ಣ ಪರಮಾತ್ಮನಿಗೇ ಜನ್ಮಗಳಿವೆ ಎಂದಾಗ  ಆ ಶಕ್ತಿಯೊಳಗಿರುವ ಸಣ್ಣ ಶಕ್ತಿಯಾದ ಮಾನವನಿಗಿಲ್ಲವೆ? ಭೂಮಿ ಋಣ ಸ್ತ್ರೀ ಋಣ ತೀರಿಸದೆ  ಮುಕ್ತಿಯಿಲ್ಲವೆಂದರೆ  ಜಗನ್ಮಾತೆ ಇರೋದೆಲ್ಲಿ?  ಮನೆಮನೆ ಒಳಗೆ ಇದ್ದು ಸಂಸಾರದ ಜೊತೆಗೆ ಸಮಾಜದ ಕಲ್ಯಾಣಕಾರ್ಯಕ್ಕೆ ಸಹಕರಿಸುವ ಸ್ತ್ರೀ ಯರನ್ನು ಎಷ್ಟು ಹಿಂದೂಗಳು ಗೌರವದಿಂದ ಕಾಣಲಾಗಿದೆ? ತಿರಸ್ಕರಿಸಿ  ಭೌತಿಕದಲ್ಲಿ ಹೆಸರು ಹಣ ಮಾಡಿದವರನ್ನು ಗೌರವಿಸಿದರೆ  ಅದೇ ಮುಂದೆ  ಸ್ತ್ರೀ ಯೂ  ಮಾಡಿದರೆ ತಪ್ಪು ಎನ್ನುವವರು ಆತ್ಮಾವಲೋಕನ ಮಾಡಿಕೊಂಡರೆ ಉತ್ತಮ ಬದಲಾವಣೆ ಸಾಧ್ಯ.
ನಾಟಕವಾಡೋರಿಗೆ ಆಟವಾಡೋರಿಗೆ  ಹೆಚ್ಚು ಬೆಲೆ ಸಿಕ್ಕರೆ ನೋಡೋರ  ದೃಷ್ಟಿ ದೋಷ. ರಾಜಕೀಯದಲ್ಲಿ ಧರ್ಮ ಸತ್ಯ ಇರದು. ಅದರಲ್ಲೂ ಪ್ರಜಾಪ್ರಭುತ್ವದಲ್ಲಿ  ಕಷ್ಟವಿದೆ.ಯಾವ ಪಕ್ಷ ಬಂದರೂ ಪ್ರಜೆಗಳ ಮತದಾನವೇ ಕಾರಣ. ದಾನವೆಂದರೆ  ಕೊಟ್ಟು ಮರೆಯುವುದು.ಇಲ್ಲಿ ಕೊಟ್ಟು ಪಡೆಯುವುದಕ್ಕೆ ದಾನವಿದೆ.ಸರ್ಕಾರ ಎಷ್ಟು ಕೊಟ್ಟರೂ ಸಾಲದು ಎಂದಾಗ ಸಾಲ ಅದು ಆಗುತ್ತದೆ.ಆ ಸಾಲ ತೀರಿಸಲು  ಇನ್ನೊಂದು ಪಕ್ಷದ ಉಚಿತ ಸಾಲ ಹೀಗೇ ದೇವಾನುದೇವತೆಗಳ ಸಾಲ ಹೊತ್ತು ಹೋಗುವ ಜೀವಕ್ಕೆ ಮುಕ್ತಿ ಕೊಡಲು ಸಾಧ್ಯವೆ?
ಜ್ಞಾನದೇವತೆಯೇ ಐಶ್ವರ್ಯಕ್ಕೆ ಮಣೆಹಾಕಿ  ನಿಜವಾದ ಜ್ಞಾನವನ್ನು ಹಿಂದುಳಿಸಿದರೆ  ಏನರ್ಥ? ಇದು ಜಗನ್ಮಾತೆಯ ಪ್ರೇರಣೆಯಾಗದು  ಮಾನವನ ಬುದ್ದಿವಂತಿಕೆ ಯ ಪ್ರಯೋಗವಷ್ಟೆ ಆಗಿರುತ್ತದೆ. ಹೀಗಾಗಿ ಯಾವ ದೇವರನ್ನಾದರೂ  ನಂಬಿದರೆ ನಮ್ಮ ಆತ್ಮವಂಚನೆಯಾಗದಂತೆ ನಡೆದುಕೊಂಡರೆ ನಮ್ಮೊಳಗೇ ಅಡಗಿರುವ ಅಸುರಿಗುಣ ಹೊರಹೋಗುತ್ತದೆ ದೈವಶಕ್ತಿ ಜಾಗೃತವಾಗುತ್ತದೆ. ಯಾವಾಗಲೂ ಜಾಗೃತವಿರುವ ದೇವರನ್ನು ಎಬ್ಬಿಸುವ ಅಗತ್ಯವಿಲ್ಲ ನಮ್ಮ ಮನಸ್ಸು ಎಚ್ಚರಿಕೆಯಲ್ಲಿರೋದೆ   ಮುಖ್ಯ. ಇದು ಬಹಳ‌ಕಷ್ಟವಾದ‌ಕಾರಣ ಹೊರಗಿನ‌ ರಾಜಕೀಯಕ್ಕೆ  ಸಹಕಾರ ಕೊಟ್ಟು ಒಳಗಿದ್ದ ರಾಜಯೋಗ ಹಿಂದುಳಿದೆ. ಜಗನ್ಮಾತೆಯ ದೃಷ್ಟಿಯಲ್ಲಿ ಎಲ್ಲಾ ಮಕ್ಕಳೇ ಆದರೆ ಅವಳ ಸೇವೆ ಯಾರ ಹಣದಿಂದ ಯಾವ ಮಾರ್ಗದಲ್ಲಿ ಯಾವ ದೃಷ್ಟಿಯಲ್ಲಿ ಎತ್ತ ಸಾಗಿದೆ  ಎನ್ನುವ ಸತ್ಯಜ್ಞಾನ  ಮಾನವನಿಗಿಲ್ಲದೆ  ಕಲಿಕೆ ಹೊರಮುಖವಾಗುತ್ತಾ ಪ್ರಚಾರಕ್ಕೆ ಸೀಮಿತವಾಗುತ್ತಾ ಹೆಚ್ಚು ಹಣ,ಅಧಿಕಾರ ಸ್ಥಾನ ಸನ್ಮಾನಗಳು  ಸಾಲದ ಹಣದಲ್ಲಿಯೇ ನಡೆದು ಅಜ್ಞಾನ ಬೆಳೆದಿದೆ. ಶಿಕ್ಷಣವನ್ನು  ಸಂಸ್ಕರಿಸದೆ‌ ಮಕ್ಕಳಲ್ಲಿ ಅಡಗಿದ್ದ ಜ್ಞಾನ ಗುರುತಿಸದೆ, ದೈವಶಕ್ತಿಯನ್ನು ಬೆಳೆಸದೆ  ಹೊರಗಿನ ರಾಜಕೀಯದೆಡೆಗೆ ಧರ್ಮ ನಡೆದರೆ ಸತ್ಯ ಅರ್ಥ ವಾಗದು. ಒಟ್ಟಿನಲ್ಲಿ ವ್ಯಕ್ತಿಪೂಜೆಗಿಂತ ಶಕ್ತಿಪೂಜೆ ದೊಡ್ಡದು. ಆತ್ಮಶಕ್ತಿ ಆಂತರಿಕ ವಾಗಿರುತ್ತದೆ. ಅಂತರಾತ್ಮನ  ಬಿಟ್ಟು ನೆಡೆದರೆ ಅಸುರಿಶಕ್ತಿಯ ವಶವಾಗುವನು ಮಾನವ.
ಮಹಾಕ್ಷೇತ್ರವೇ  ರಾಜಕೀಯದ ವಶದಲ್ಲಿದ್ದರೆ  ಆತ್ಮನಿರ್ಭರ ಆಗುವುದೆ? ಯಾತ್ರಸ್ಥಳಗಳು ಪ್ರವಾಸಿತಾಣವಾದರೆ  ಪ್ರವಾಸ ಅಸುರರಿಗೆ ಪ್ರಿಯ.ಯಾತ್ರೆ ಭಕ್ತರಿಗೆ ಪ್ರಿಯ. ಹಣವಿದ್ದವರಲ್ಲಿ ಭಕ್ತಿಯ ಕೊರತೆ,ಭಕ್ತರಲ್ಲಿ ಹಣದ ಕೊರತೆ. ವೈಭವವನ್ನು ನೋಡಲು ಹಣವಂತರು ಬರುವರೆಂದರೆ  ಭಾರತದ ಪುಣ್ಯಕ್ಷೇತ್ರ ದರ್ಶ ನ‌ಮಾಡುವ ಯೋಗ  ಭಕ್ತರಿಗಿಲ್ಲ ಹಾಗಾಗಿ  ಒಳಗೇ ಅಡಗಿರುವ‌ಪುಣ್ಯದ ಫಲವನ್ನು ಹೊರಗೆ ಹೋಗಿ ಹಂಚುವ ಬದಲು ಮನೆಯೊಳಗೆ  ಇದ್ದು ಪುಣ್ಯ ಕಾರ್ಯ ನಡೆಸಿದರೆ  ಆತ್ಮಜ್ಞಾನದಿಂದ ದೇವರದರ್ಶನ.
ವಿಜ್ಞಾನದಿಂದ ಈವರೆಗೆ ಯಾರಾದರೂ ದೇವರ ದರ್ಶನ ಮಾಡಿಸಿದ್ದಾರೆಯೆ? ಅಥವಾ ದೇವಸ್ಥಾನದ ರಕ್ಷಣೆಯಾಗಿದೆಯೆ?  ಯಾರೋ ಒಬ್ಬರಿಂದ ದೇಶ ನಡೆದಿಲ್ಲ.ದೇವರೂ ನಡೆದಿಲ್ಲ ದೇಹವೇ ನಡೆದಿಲ್ಲ.ಕಾರಣ ಒಳಗಿರುವ ಅಸಂಖ್ಯಾತ ಶಕ್ತಿಗಳ ಒಗ್ಗಟ್ಟಿನಿಂದ ನಡೆದಿದೆ. ಇದರಲ್ಲಿ ದ್ವೇಷದ ಬಿಕ್ಕಟ್ಟು ಹೆಚ್ಚಾದರೆ  ಸದ್ಗತಿಯಾಗದೆ ಅಧೋಗತಿಯಾಗುತ್ತದೆ.ಗತಿಸಿದ ಮೇಲೆ ಸರಿಪಡಿಸಲಾಗದು 
ಇದ್ದಾಗಲೇ ಸತ್ಯ ತಿಳಿದು ಸರಿಯಾಗಬೇಕು.ತನ್ನ ತಾನರಿತು ನಡೆಯೋದಕ್ಕಿಂತ ಇತರರನ್ನು ಅರಿಯುವುದೇ ಮಾನವನ ಈ ಸ್ಥಿತಿಗೆ ಕಾರಣವಾಗುತ್ತಿರೋದು  ದುರಂತ. ಪುರಾಣ ಕಥೆ ದೇವತೆಗಳ‌ಕಾಲದ್ದು. ಇಂದಿನ‌ಕಥೆ‌ಮಾನವರದ್ದು ಮುಂದಿನ‌ಕಥೆ ಅಸುರರದ್ದಾಗಬಹುದು.ಕಾರಣ ಕಥೆಯಲ್ಲಿ ಸತ್ಯವೇ ಇಲ್ಲ ಎಲ್ಲಾ ಅಸತ್ಯ ಅನ್ಯಾಯ ಅಧರ್ಮ ವೇ ಎದ್ದು ಕುಣಿಯುತ್ತಿದೆ ಎಂದರೆ ಇದೊಂದು ಅಸುರ ಶಕ್ತಿಯ ಕಥೆ.ಇದನ್ನು ಮಕ್ಕಳು ಮೊಮ್ಮಕ್ಕಳ ವರೆಗೆ ತಲುಪಿಸಲು  ಬರೆದಿಟ್ಟರೆ ಮುಗಿಯಿತು ಮನುಕುಲದ ಕಥೆ.ಏನು ಓದುವೆವೋ ಅದೇ ನಮ್ಮ ಒಳಹೊಕ್ಕಿ ನಡೆಸೋದಲ್ಲವೆ.ಈ ಸತ್ಯ ತಿಳಿದಾಗಲೇ  ಏನು ತಿಳಿಸಬೇಕು  ಕಲಿಸಬೇಕೆಂಬ ಅರಿವು ಪೋಷಕರಿಗೆ ಬರುತ್ತದೆ. ಜ್ಞಾನವಿಜ್ಞಾನದ ನಡುವಿರುವ ಸಾಮಾನ್ಯ ಜ್ಞಾನ ಬಹಳ ಅಗತ್ಯವಾಗಿದೆ. ಈ ವಿಚಾರ  ಯಾರೂ ಇಷ್ಟಪಡೋದಿಲ್ಲ ಕಾರಣ ಇದರಲ್ಲಿ ಮನರಂಜನೆಯಿಲ್ಲ. ಆತ್ಮವಂಚನೆಯಲ್ಲಿ ಮನರಂಜನೆಗಾಗಿ ಹೊರಗೆ ಹೋದ‌ಮನಸ್ಸನ್ನು ಹಿಂದಿರುಗಿಸಲು‌ ಕಷ್ಟವಿದೆ.ಇದು ಅಧ್ಯಾತ್ಮ ಸಾಧನೆಯ ಮಾರ್ಗವೆಂದಿದ್ದಾರೆ. ಅಧ್ಯಾತ್ಮ ಸಾಧನೆ  ಹೊರಗೆ ತೋರುಗಾಣಿಕೆಯ ಪ್ರಚಾರಕ್ಕೆ ಸೀಮಿತವಾಗದೆ ಒಳಗಿರುವ ಅಸುರಿಗುಣ ಹೋಗುವಂತಿದ್ದರೆ   ಸನಾತನ ಧರ್ಮ  ಉಳಿದಂತೆ. ಹೊರಗೆ ಶ್ರೀಮಂತ ಒಳಗೆ ಜ್ಞಾನದಲ್ಲಿ ಬಡವ .ಇದೊಂದು ನಾಟಕವಷ್ಟೆ. ನಾಟಕ ಅರ್ದಸತ್ಯವಾಗೇ ಇರೋದಲ್ಲವೆ?
ರಾಜಕೀಯ ಬಿಟ್ಟು ಸತ್ಯ  ಚಿಂತನೆ ನಡೆಸಿದರೆ‌ ಒಂದೇ ಭೂಮಿಯಲ್ಲಿ ಒಂದೇ ದೇಶದಲ್ಲಿ ಒಂದೇ ನೆಲಜಲ ಬಳಸುತ್ತಾ‌  ಒಗ್ಗಟ್ಟನ್ನು  ಹಣದಿಂದ ಬೆಳೆಸಿ  ಒಂದುಮಾಡದ ತಂತ್ರದಿಂದ  ನಮ್ಮವರನ್ನೇ ದೂರಮಾಡಿಕೊಂಡು ಪರರನ್ನು ದ್ವೇಷ ಮಾಡುತ್ತಾ ಪರಮಾತ್ಮನ ಸೇವೆ ಮಾಡಬಹುದೆ? ಮಾಡಲು ಸಾಧ್ಯವೆ? ದ್ವೇಷವಿರುವಲ್ಲಿ  ಮನಸ್ಸು ಶಾಂತವಾಗಿರದು. ಶಾಂತಿಯಿಂದಲೇ  ಅಧ್ಯಾತ್ಮ ಸತ್ಯ ತಿಳಿಯುವುದು.

No comments:

Post a Comment