ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, November 14, 2023

ಮಕ್ಕಳಿಗೆ ದಾನದ‌ಮಹತ್ವ ತಿಳಿಸಿ ಬೆಳೆಸಿದರೆ ಉತ್ತಮ

ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದ ದಾನ ಪರಮಾತ್ಮನಿಗೆ  ಸಲ್ಲುವುದಂತೆ. ದಾನ ಕೊಡೋದು ಸರಿ , ತಪ್ಪಲ್ಲ ಎಷ್ಟು ಯಾರಿಗೆ ಯಾಕೆ ಹೇಗೆ ಕೊಟ್ಟರೆ  ಉತ್ತಮ ಫಲ ಸಿಗೋದೆನ್ನುವ ಅರಿವಿರಬೇಕು. ಕಲಿಗಾಲದಲ್ಲಿ  ಕೊಟ್ಟವರನ್ನೇ  ಕೆಟ್ಟದಾಗಿ ನಡೆಸಿಕೊಳ್ಳುವ ಅಸುರರಿರುವರು.ದಾನವರಿಗೆ ಕೊಟ್ಟರೆ ಮುಗಿಯಿತು ಕಥೆ. ಮತದಾನ ದೇಶದ ಭವಿಷ್ಯವಾದರೆ ಉಳಿದ ಸಣ್ಣ ಪುಟ್ಟ ದಾನ  ಮಕ್ಕಳ ಭವಿಷ್ಯವಾಗಿರುವುದು. ಮಕ್ಕಳು ದೇಶದ ಒಳಗಿರಬೇಕಾದರೆ  ದಾನ ಉತ್ತಮವಾಗಿರಬೇಕು. 
ಮಕ್ಕಳ ದಿನಾಚರಣೆಯಂದು  ಮಕ್ಕಳಿಗೆ ದಾನದ ಬಗ್ಗೆ ಅರಿವು ಮೂಡಿಸುವ ಶಿಕ್ಷಣವಿರಲಿ. ಮಕ್ಕಳನ್ನೇ ದಾನವರಿಗೆ ಒಪ್ಪಿಸಿ  ಹಣಕೊಟ್ಟು ಕಳಿಸಬೇಡಿ. ಹಣದ ಹಿಂದಿನ ಋಣ ತೀರಿಸುವ‌ ಜ್ಞಾನಿಗಳಿಂದ  ಮಕ್ಕಳ ಭವಿಷ್ಯ ಉತ್ತಮವಾಗಿರಲಿ. 
ಬಲಿಚಕ್ರವರ್ತಿ ಕರ್ಣ ನಂತಹ ಮಹಾದಾನಿಗಳ  ಅತಿಯಾದ ದಾನವೇ ಕೊನೆಯಲ್ಲಿ  ಉರುಳಾಯಿತು. ಆಗಿನ ಕಾಲದಲ್ಲಿ ಭೂಮಿ ಸಂಪತ್ತಿನಿಂದ ಕೂಡಿತ್ತು ಈಗಿದು ಆಪತ್ತಿನಲ್ಲಿದೆ. ಕಾರಣ ದಾನವರು ಭೂಮಿಯನ್ನೇ ಹಾಳು ಮಾಡುವ ದಾನಕ್ಕೆ  ಹೊರಟಿದ್ದಾರೆ.ಇದಕ್ಕೆ ಸಹಕಾರವೂ ಹೆಚ್ಚಾಗಿದೆ ಎಂದರೆ ದಾನದ  ಬಗ್ಗೆ ಸರಿಯಾದ ಜ್ಞಾನವಿಲ್ಲದ ಜನಸಂಖ್ಯೆ ಬೆಳೆದಿದೆ ಎಂದರ್ಥ. ಯಾವುದೇ ವಿಷಯ,ವಸ್ತು, ಒಡವೆ,ವಸ್ತ್ರ ದಾನ ಮಾಡಿದರೂ  ಅದು ಜ್ಞಾನದಿಂದ ಗಳಿಸಿದ್ದಾಗಿ ಶುದ್ದವಾಗಿರಬೇಕೆನ್ನುವರು ಜ್ಞಾನಿಗಳು .ಹೆಚ್ಚು ಹಣಸಂಪಾದನೆ ಹೆಚ್ಚು ದಾನಧರ್ಮಕ್ಕೆ  ಕಾರಣವಾಗುತ್ತದೆ.
ಹಣಸಂಪಾದನೆ ಅಧರ್ಮದಲ್ಲಾಗಿದ್ದರೆ  ಜ್ಞಾನವಿಲ್ಲದ ದಾನವರಿಗೇ ಶಕ್ತಿ ಹೆಚ್ಚುವುದು.ಇದನ್ನು ಹೊರಗೆ ಪ್ರಗತಿ ಎಂದರೆ ಅಜ್ಞಾನವಷ್ಟೆ. ಮಿತಿಮೀರಿದ ಯಾವುದೇ ಆದರೂ ಧರ್ಮ ವಾಗಿರದು. 
ಅಸುರರೊಳಗೇ ಸುರರು ಸಿಲುಕಿದರೆ ಅಧರ್ಮ. ಇದಕ್ಕೆ ಕಾರಣ ಸುರರ ಹಣದ ವ್ಯಾಮೋಹ.
ವ್ಯಾಮೋಹವೇ‌  ಮೋಸಕ್ಕೆ  ಕಾರಣವಾಗಬಹುದು.ಮಕ್ಕಳ ಮೇಲಿನ ವ್ಯಾಮೋಹದಲ್ಲಿ ತಪ್ಪಿ ನಡೆದರೂ  ತಪ್ಪಿ ಸಿಕೊಂಡು ಮುಂದೆ ಹೋಗಬಹುದು ಆದರೆ ಹಿಂದೆ ಬರೋದು ಕಷ್ಟ. ಹೀಗಾಗಿ ತಪ್ಪಿಗೆ ಶಿಕ್ಷೆ ನೀಡಿ ಸರಿಪಡಿಸುವುದಾಗಿತ್ತು. ಇಂದಿನ  ಮಕ್ಕಳಿಗೆ ಶಿಕ್ಷೆ ನೀಡುತ್ತಿರುವ ವಿಷಯವೇ  ಸರಿಯಿಲ್ಲ. ಸತ್ಯದಲ್ಲಿ ನಡೆಯಲು  ಪೋಷಕರಿಗೆ ಸಾಧ್ಯವಾಗದಿರೋವಾಗ  ಮಕ್ಕಳನ್ನು ಸತ್ಯದೆಡೆಗೆ ನಡೆಸಲು ಸಾಧ್ಯವಾಗದೆ  ಅಸತ್ಯ ಅನ್ಯಾಯ ಅಧರ್ಮ ವೆಂದು ತಿಳಿದೂ ಅದೇ ದಾರಿಯಲ್ಲಿ  ಸಹಿಸಿಕೊಂಡು ಬದುಕಲು ಹೋದರೆ ಸಹನೆಗೂ ಇತಿಮಿತಿ ಇರುತ್ತದೆ. ಹೀಗಾಗಿ ಯಾವುದೂ ಅತಿಯಾದರೆ ಗತಿಗೇಡು.ಮಕ್ಕಳಿಗಾಗಿ  ಮಾಡುವ ಆಸ್ತಿ ಮಕ್ಕಳು ಅನುಭವಿಸದೇ ಇರಬಹುದು. ಆದರೆ ಅವರಿಗೆ ನೀಡುವ‌ಜ್ಞಾನದ ಆಸ್ತಿ‌ ಎಲ್ಲರನ್ನೂ ರಕ್ಷಿಸಬಹುದು. ಒಂದು ದಿನದ ಮಕ್ಕಳ ದಿನಾಚರಣೆಯ  ಬದಲಾಗಿ ಪ್ರತಿಕ್ಷಣವೂ ಮಕ್ಕಳಿಂದಲೇ ದಿನ‌ನಡೆದಿದೆ‌ ಎನ್ನುವ ಸತ್ಯ ತಿಳಿದರೆ ಅವರ ಕ್ಷಣಕ್ಷಣದ‌  ನಡೆ ನುಡಿಯೇ ಭವಿಷ್ಯವಾಗಿರುತ್ತದೆ. ಹಾಗಾಗಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದವರ ಭವಿಷ್ಯವೂ  ಉತ್ತಮವಾಗಿರುತ್ತದೆನ್ನುವರು.ಇಲ್ಲಿ ಸಂಸ್ಕಾರ ಎಂದರೆ ಬೇಡದ ವಿಚಾರ ವಿಷಯವನ್ನು ಬಿಟ್ಟು  ಕಲಿಸುವುದಾಗಿತ್ತು.ಶುದ್ದ ಸತ್ವಸತ್ಯದ  ವಿಚಾರಗಳು ಯಾವತ್ತೂ ಮನಸ್ಸನ್ನು ಶುದ್ದಗೊಳಿಸುತ್ತದೆ. ಅದೇ ಶಾಂತಿಯ ಕಡೆಗೆ ನಡೆಸುತ್ತಾ ಯೋಗ ಮಾರ್ಗ ವಾಗುತ್ತದೆ. ಯೋಗ್ಯ ಗುರು‌ ಯೋಗ್ಯ ಶಿಷ್ಯ‌  ಹೊರಗಿನಿಂದ ಬೆಳೆಸುವುದು ಕಷ್ಟ ಒಳಗಿನಿಂದ  ಕಲಿಸಿ ಬೆಳೆಸುವುದೇ ಗುರುಕುಲ. 
ಹಿಂದೆ ಮನೆಮನೆಯು ಗುರುಕುಲವಾದ ಹಾಗೆ ಮನೆಮನೆಯಲ್ಲಿ ಗೋಕುಲವಿತ್ತು. ಈಗ ಇವೆರಡೂ  ಮರೆಯಾಗುತ್ತಿರುವುದಕ್ಕೆ   ಗೋವಿಂದನಿಲ್ಲ. ಮಕ್ಕಳನ್ನು ಕೃಷ್ಣನೆಂದು  ಕರೆಯುತ್ತಿದ್ದ‌ಕಾಲವಿತ್ತು. ಕಾಲದ ಅಂತರದಲ್ಲಿ  ಅಜ್ಞಾನ‌ ಬೆಳೆದಂತೆಲ್ಲಾ  ಸತ್ಯ ಧರ್ಮ ಹಿಂದುಳಿದು ಈಗ ಹೊರಗಿದೆ ಒಳಗಿಲ್ಲ. ದೇವರು ಧರ್ಮ ಜಾತಿ ಪಂಗಡ, ಪಕ್ಷಗಳ  ರಾಜಕೀಯದೆಡೆಗೆ ಮಕ್ಕಳು ಮಹಿಳೆಯರೂ‌
ಮನೆಯಿಂದ ಹೊರಬಂದರೆ   ಏನಾಗುವುದೆನ್ನುವುದು ಕೆಲವರಿಗೆ ಅನುಭವಕ್ಕೆ ಬಂದರೂ ಅನೇಕರಿಗೆ  ಅನುಭವಕ್ಕೆ ಬರದೆ  ಮನಸ್ಸು ಹೊರಗುಳಿದಿದೆ.

No comments:

Post a Comment