ಸಂಸ್ಕೃತ ಭಾಷೆ ಅರ್ಥ ವಾಗದಿದ್ದರೂ ಪರವಾಗಿಲ್ಲರಿ ಸಂಸ್ಕಾರಯುತ ಶಿಕ್ಷಣ ಸಿಕ್ಕಿದ್ದರೆ ಜ್ಞಾನಿಗಳಾಗಲು ಸಮಸ್ಯೆಯಿಲ್ಲ.ಜ್ಞಾನಕ್ಕೆ ಭಾಷೆ ಮುಖ್ಯವಲ್ಲ ಕೊಟ್ಟ ಭಾಷೆ ಉಳಿಸಿ ಬೆಳೆಸೋದೇ ಮುಖ್ಯ. ಭಾಷಾಂತರದಿಂದಾಗುತ್ತಿರುವ ಅವಾಂತರಗಳು ಜ್ಞಾನ ಕುಸಿಯುವಂತೆ ಮಾಡುತ್ತಿವೆ. ಒಂದೇ ವಿಷಯವನ್ನು ಹಲವಾರು ಭಾಷೆಗಳಲ್ಲಿ ಹಲವಾರು ಶಬ್ದಕೋಶ ಹಿಡಿದು ಹಲವಾರು ರೀತಿಯ ಗೊಂದಲ ಸೃಷ್ಟಿ ಮಾಡೋ ಬದಲು ತಮ್ಮ ಸ್ವಂತ ಭಾಷೆಯಲ್ಲಿ ಒಮ್ಮೆ ತಿಳಿದು ಕಲಿಯುವುದೇ ಶ್ರೇಷ್ಠ.
ಸಂಸ್ಕೃತ ಪುರಾತನ ದೇವಭಾಷೆಯಾಗಿದ್ದು ಎಲ್ಲಾ ವೇದ ಪುರಾಣಗಳ ವಿಷಯ ಓದಿ ತಿಳಿಯುವಲ್ಲಿ ಸಹಾಯಕವಾಗಿದ್ದರೂ ಮುಖ್ಯವಾಗಿ ಶಿಕ್ಷಣ ಕ್ಷೇತ್ರದಿಂದ ದೂರವಾಗುತ್ತಾ ಪರಭಾಷೆಗಳಿಗೆ ಜಾಗ ಮಾಡಿಕೊಟ್ಟಿತು. ಹೊರಗಿನಿಂದ ಬೆಳೆದ ಭಾಷೆ ಕೇವಲ ಹೊರಗಿನ ವಿಷಯವನ್ನು ಸರಿಯಾಗಿ ಅರ್ಥ ಮಾಡಿಸಬಹುದು.ಆದರೆ ಮೂಲ ಭಾಷೆಯನ್ನರಿಯದೆ ಹೊರ ನಡೆದವರಿಗೆ ಮೂಲದ ಭಾಷೆ ಅನಗತ್ಯವೆನಿಸಿದರೂ ತಪ್ಪು. ಹೀಗಾಗಿ ತಿರುಗಿ ಮೂಲಕ್ಕೆ ಹೋಗುವಾಗ ಹೊರಗಿನ ಭಾಷೆಯ ಮೂಲಕವೇ ಅರ್ಥ ತಿಳಿಯುವಂತಾಗಿ ಅನರ್ಥಗಳೇ ಹೆಚ್ಚಾದವು. ಈ ಅನರ್ಥ ವಿರೋಧಿಸಿದವರನ್ನು ಮೂಲೆಗುಂಪು ಮಾಡಿಯಾದರೂ ಭಾಷೆ ಬೆಳೆಯಿತು. ಆದರೆ ಇದರಿಂದ ಯಾರಿಗಾದರೂ ಲಾಭವಾಯಿತೆ? ಜ್ಞಾನ ಬಂದಿತೆ? ಸತ್ಯ ತಿಳಿಯಿತೆ ಎಂದರೆ ಹೊರಗಿನ ಸತ್ಯ ಮೇಲೆ ಬಂತು ಹೊರಗಿನ ಜ್ಞಾನ ಬೆಳೆಯಿತು ಒಳಗೇ ಇದ್ದ ಸತ್ಯ ಧರ್ಮ ಹಿಂದುಳಿಯಿತು.
ಈಗ ಮತ್ತೆ ಸಾಕಷ್ಟು ಜನರು ಸಂಸ್ಕೃತ ಕಲಿಯಲು ಕಲಿಸಲು ಪ್ರಾರಂಭ ಮಾಡಿರೋದರಿಂದ ವೇದಕಾಲದ ಗ್ರಂಥಗಳನ್ನು ಓದಲು ಸಾಧ್ಯ.ಕೆಲವು ಗ್ರಂಥ ಮೂಲದ ಸತ್ಯ ತಿಳಿಸಿದ್ದರೆ ಅದನ್ನು ತಮ್ಮ ಅನುಭವದಿಂದ ತಿಳಿದು ಅಂದಿನ ಕಾಲಕ್ಕೆ ತಕ್ಕಂತೆ ವಿವರಿಸಿರುವುದನ್ನು ಇಂದಿನ ಕಾಲದ ಜನರ ಜ್ಞಾನ ಪರಿಸ್ಥಿತಿ ಮನಸ್ಥಿತಿ ಯ ಆಧಾರದ ಮೇಲೆ ಕೂಲಂಕುಶವಾಗಿ ಅರ್ಥ ಮಾಡಿಕೊಳ್ಳಲು ಇಂದಿನ ಭಾಷೆಯೂ ಅಗತ್ಯವಿದೆ.
ಕಾರಣ ಹಿಂದಿನ ಧರ್ಮ ಸಂಸ್ಕೃತಿ ಸಂಪ್ರದಾಯಶಿಕ್ಷಣ ಭಾಷೆ ಹೇಗೆ ಜನರನ್ನು ಮುಂದೆ ನಡೆಸಿದೆಯೋ ಹಾಗೆ ಈಗಿನದ್ದೂ ನಡೆಸಿದೆ. ದಾರಿ ಮಾತ್ರ ಬದಲಾಗಿದೆ. ಆತ್ಮಜ್ಞಾನದೆಡೆಗೆ ಹಿಂದೆ ನಡೆಸಿತ್ತು ಈಗಿದು ವಿಜ್ಞಾನದೆಡೆಗೆ ನಡೆಸಿದೆ. ಎರಡೂ ಮುಖ್ಯವೆ ಆದ್ದರಿಂದ ಮೂಲ ಸತ್ಯವರಿತು ಹೊರಗಿನ ಸತ್ಯ ತಿಳಿದು ಜೀವನದಲ್ಲಿ ಬದಲಾಗುವುದನ್ನು ಕಂಡುಕೊಳ್ಳಲು ನಮ್ಮ ಮಾತೃಭಾಷೆ ಅಗತ್ಯ. ಯಾವ ಭಾಷೆಯೇ ಇರಲಿ ಅದರಲ್ಲಿ ಸತ್ವ ಸತ್ಯ ತತ್ವವಿದ್ದರೆ ಶಾಂತಿಯ ಜ್ಞಾನ.
ವಿರುದ್ದವಿದ್ದರೆ ಕ್ರಾಂತಿಯ ಅಜ್ಞಾನ. ಕ್ರಾಂತಿಯಿಂದ ಭಾಷೆ ಉಳಿಯದು. ಕೊಟ್ಟ ಮಾತಿಗೆ ತಪ್ಪಿ ನಡೆದರೆ ಕ್ರಾಂತಿಯಾಗುವುದು. ಈ ಮಾತು ಗುರುಹಿರಿಯರಿಗೂ ಅನ್ವಯಿಸುತ್ತದೆ. ದೇವಾನುದೇವತೆಗಳು ಋಷಿಮುನಿಗಳೂ ಧರ್ಮ ಸಂಕಟದಲ್ಲಿ ಮಾತಿಗೆ ತಪ್ಪಿರುವಾಗ ನಾವೇನು ಲೆಕ್ಕ? ಎನ್ನುವ ಹಾಗಿಲ್ಲ.ಅಲ್ಲಿ ಧರ್ಮ ವಿತ್ತು ಇಲ್ಲಿ ಅಧರ್ಮ ವಿದೆ. ಅವರೊಳಗೆ ನಾವಿರೋವಾಗ. ಅಧರ್ಮ ಬೆಳೆದಂತೆಲ್ಲಾ ದೈವಶಕ್ತಿ ಗುರುಶಕ್ತಿಗೇ ದಕ್ಕೆಯಾಗುವುದಲ್ಲವೆ?
ಇದರಲ್ಲಿನ ಅಧ್ವೈತ ವನ್ನು ಗಮನಿಸಿದರೆ ನಾನೆಂಬುದಿಲ್ಲ ಎಂದಾಗುತ್ತದೆ. ನಾನು ನೀನು ಒಂದೇ ಆಗುತ್ತದೆ.ಎಲ್ಲಾ ಒಂದೇ ಶಕ್ತಿಯ ಅಧೀನದಲ್ಲಿರುವಾಗ ನಾವು ಮಾಡುವ ತಪ್ಪು ನಮ್ಮ ಶಕ್ತಿಯನ್ನು ಹಿಂದುಳಿಸುವುದು. ಆತ್ಮಶಕ್ತಿಗೆ ಭಾಷೆ ಮುಖ್ಯವಲ್ಲ ಅದರೊಳಗಿನ ಸತ್ಯ ಸತ್ವ ತತ್ವವೇ ಮುಖ್ಯ. ಈಗಲಾದರೂ ಭಾಷೆ ಹೆಸರಿನಲ್ಲಿ ರಾಜಕೀಯ ಹೋರಾಟ ನಡೆಸಿ ಇನ್ನಷ್ಟು ಭಾಷಾಂತರವಾದರೆ ಇದರಿಂದ ಭಾಷೆಯ ಮೂಲವೇ ಮೂಲೆಸೇರಬಹುದು. ಹೊರಗಿನವರಿಗೆಬೇಕಾಗಿರೋದು ಇದೇ. ಭಾಷೆ ಬೆಳೆಸಲು ಹೊರಗೆ ಹೋಗುವ ಅಗತ್ಯವಿರಲಿಲ್ಲ ಒಳಗಿದ್ದೇ ರಕ್ಷಣೆ ಮಾಡಬಹುದಿತ್ತು. ಆದರೆ ಆಗಿದ್ದೇ ಬೇರೆ. ಒಟ್ಟಿನಲ್ಲಿ ಭಾಷೆ ನಮ್ಮ ಆತ್ಮಶಕ್ತಿ ಬೆಳೆಸಬೇಕು. ಜ್ಞಾನ ಬೆಳೆದರೆ ಸಾಧ್ಯವಿದೆ.ಯಾರದ್ದೋ ಭಾಷೆ ಯಾರದ್ದೋ ವಿಷಯ,ಯಾರೋ ಬೆಳೆಸಿ ಯಾರೋ ಕೇಳಿ,ಓದಿ ತಿಳಿದು ಇನ್ಯಾರೋ ತಲೆಗೆ ಒತ್ತಾಯದಿಂದ ತುಂಬಿದರೆ ಆ ತಲೆಯಲ್ಲಿ ಮೊದಲೇ ಇದ್ದ ಜ್ಞಾನದ ಜೊತೆಗೆ ಭಾಷೆಗೂ ಅಡ್ಡಿಯಾಗಿ ತಲೆನೋವು ಹೆಚ್ಚಾಗುತ್ತದೆ.ಮಕ್ಕಳ ತಲೆಗೆ ವಿಷಯ ತುಂಬುವಾಗ ಎಚ್ಚರವಿದ್ದರೆ ಉತ್ತಮ. ಶಾಂತವಾಗಿದ್ದ ಮನಸ್ಸನ್ನು ಹದಗೆಡಿಸೋದೇ ಪರಭಾಷೆಯವಿಷಯಜ್ಞಾನ. ಇದನ್ನು ಸರ್ಕಾರವಾಗಲಿ, ರಾಜಕಾರಣಿಗಳಾಗಲಿ, ಪೋಷಕರಾಗಲಿ, ಪ್ರತಿಷ್ಠಿತ ಶಿಕ್ಷಣತಜ್ಞರು, ಜ್ಞಾನಿಗಳು,ಶಿಕ್ಷಕರು, ಸಂಸ್ಕೃತ ಪಂಡಿತರು, ನೇರವಾಗಿ ಮಕ್ಕಳಿಗೆ ತಿಳಿಸಲಾರರು. ಮಕ್ಕಳ ಮನಸ್ಸನ್ನು ಅರಿಯುವ ಕಲೆ ಕೇವಲ ಪೋಷಕರಿಗಿದೆ. ಈಗ ಈ ಪೋಷಕರೆ ಮಕ್ಕಳನ್ನು ಹೊರಗಟ್ಟಿ ಪರಭಾಷೆಯ ವ್ಯಾಮೋಹಕ್ಕೆ ಸಿಲುಕಿ ಸಂಸ್ಕಾರವಿಲ್ಲದ ವಿಷಯವನ್ನು ತಲೆಗೆ ತುಂಬಿ ಮಕ್ಕಳೇ ಸರಿಯಿಲ್ಲವೆಂದರೆ ಮಕ್ಕಳು ದೇವರ ಸಮಾನರು.ಆ ದೇವರಿಗೆ ತಿಳಿಯುವ ಭಾಷೆ ಕಲಿಸಬೇಕಷ್ಟೆ.ವಿಚಾರವನ್ನು ಯಾರಿಗೋ ತಿಳಿಸುತ್ತಿಲ್ಲ.ಪ್ರಜಾಪ್ರಭುತ್ವದ ಈ ಸ್ಥಿತಿಗೆ ಕಾರಣ ಭಾಷೆಯೇ ಆಗಿರುವಾಗ ನಮ್ಮ ಮಾತನ್ನು ಮಕ್ಕಳು ಕೇಳುತ್ತಿಲ್ಲವೆಂದರೆ ನಾವು ನಮ್ಮ ಭಾಷೆಯನ್ನು ಉಳಿಸಿಕೊಂಡಿಲ್ಲವೆಂದರ್ಥ ವಾಗಬಹುದು. ನಮ್ಮ ನಮ್ಮ ಮನೆಯ ಭಾಷೆ ಕಲಿಸುವುದಕ್ಕೆ ಹೊರಗಿನವರ ಅಗತ್ಯವಿಲ್ಲ. ಹೊರಗಿನಿಂದ ಬಂದವರು ಅವರ ಭಾಷೆಯ ಹೇರಿದರೂ ನಾವು ಯಾಕೆಂದು ಕೇಳಲಿಲ್ಲ.ಹಾಗಾಗಿ ಅವರು ಬೆಳೆದರು ನಾವು ಹಿಂದುಳಿದೆವು.ಇದನ್ನು ಸರಿಪಡಿಸಲು ಹಣದಿಂದ ಸಾಧ್ಯವಿಲ್ಲವಾದರೂ ಸರ್ಕಾರದ ಹಣವನ್ನು ನೀರಿನಂತೆಬಳಸಿ ಪ್ರಚಾರ ಮಾಡುವವರ ಹೊಟ್ಟೆ ತುಂಬಿದರೂ ಜ್ಞಾನಬರಲಿಲ್ಲ. ಹಿಂದಿನ ಜ್ಞಾನಿಗಳಲ್ಲಿದ್ದ ಭಕ್ತಿ ಶ್ರದ್ದೆ ಶಾಂತಿ ಈಗಿಲ್ಲವೆಂದರೆ ನಾವು ಅವರಂತೆ ಬದುಕಲಾಗಿಲ್ಲ.
ಹೇಗೆ ಹಬ್ಬಗಳ ಹಿಂದೆ ಕಥೆಯಿರುವುದೋ ಹಾಗೆ ಭಾಷೆಗೂ ಕಥೆಯಿರುತ್ತದೆ. ಕಥೆ ಸರಿಯಾಗಿ ಅರ್ಥ ವಾಗಲು ಭಾಷೆ ನಮಗೆ ಅರ್ಥ ವಾಗುವಂತಿರಬೇಕು.ಯಾರದ್ದೋ ಒತ್ತಾಯಕ್ಕೆ ಭಾಷೆ ಬೆಳೆಯೋದಿಲ್ಲ ನಾವೇ ಬೆಳೆಸಬೇಕು.
ರಾಮಾಯಣ ಮಹಾಭಾರತ ಭಗವದ್ಗೀತೆ ಮುಂತಾದ ಧರ್ಮ ಗ್ರಂಥ ಗಳ ವಿಷಯ ಸಂಸ್ಕೃತ ದಲ್ಲಿದ್ದರೂ ಭಾಷಾಂತರ ಮಾಡಿದವರಿಗೆ ಏನೇನೋ ವಿಷಯ ಹೇಗೇಗೋ ಅರ್ಥ ವಾಗಿ ಅವರ ಭಾಷೆಗೆ ಇಳಿಸಲಾಯಿತು.ಆ ಕಾಲಕ್ಕೆ ತಕ್ಕಂತೆ ಕಥೆಯನ್ನು ತಿರುಚಲಾಗಿದ್ದರೆ ಸತ್ಯವಿರದು. ಹಾಗೆ ಮಾಡಿದ್ದರಿಂದ ಧರ್ಮ ಉಳಿಯಿತೆ ಇಲ್ಲವಾದರೆ ಅದೂ ಕಷ್ಟ ನಷ್ಟಕ್ಕೆ ಕಾರಣವಾಯಿತು. ಪುರಾಣದ ತತ್ವ ವಾಸ್ತವದ ತಂತ್ರ ಭವಿಷ್ಯದ ಕುತಂತ್ರಕ್ಕೆ ದಾರಿಯಾಗದಂತೆ ಭಾಷೆಯ ಜೊತೆಗೆ ಸತ್ಯ ಧರ್ಮವನರಿತರೆ ಉತ್ತಮ.ರಾಮನಂತೆ ಶ್ರೀ ಕೃಷ್ಣ ನ ಕಾಲ ನಡೆದಿಲ್ಲವೆಂದರೆ ಇಂದಿನ ಕಲಿಯುಗದಲ್ಲಿ ಸಣ್ಣಪುಟ್ಟ ಸಮಸ್ಯೆ ಯನ್ನು ಬಂಡವಾಳವಾಗಿಸಿಕೊಂಡು ಹೊರಬರುವವರಿಗೆ ಭಾಷೆಯ ಮಹತ್ವ ತಿಳಿಸುವ ಪ್ರಯತ್ನ ಮಾಡಿದರೆ ಉತ್ತಮ. ಆದರೂ ಎಲ್ಲರಿಗೂ ಜ್ಞಾನ ವಿದೆ. ಆದರೆ ಎಲ್ಲರಿಗೂ ಅವರ ಮಾತೃಭಾಷೆಯ ಜ್ಞಾನವಿಲ್ಲದೆ ಪೂರ್ಣ ಸತ್ಯ ಅರ್ಥ ವಾಗಿಲ್ಲ. ಇದಕ್ಕೆ ಸರ್ಕಾರ ಹೊಣೆಯಾಗದು ನಮ್ಮದೇ ಅಸಹಕಾರವೇ ಹೊಣೆಯಾಗಿದೆ. ಆಂಗ್ಲ ಮಾಧ್ಯಮವಿರಲಿ ಪರಭಾಷೆಯೇ ಇರಲಿ ವಿಷಯದಲ್ಲಿ ಸತ್ವ ಸತ್ಯ ತತ್ವವಿದ್ದರೆ ಜ್ಞಾನ ಬರುತ್ತದೆ.
No comments:
Post a Comment