ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Monday, November 13, 2023

ದಾನ ಅತಿಯಾದರೆ ದಾನವರು ಬೆಳೆಯುವರು

ಬಲಿ ಚಕ್ರವರ್ತಿಯ  ಅತಿಯಾದ ದಾನವೂ  ಕೊನೆಯಲ್ಲಿ ಕಡೆಗಣಿಸಲಾಯಿತು ಕರ್ಣನ ಕಥೆಯೂ ಹಾಗೇ ಆಗಿದೆ ಅಂದರೆ ದಾನ ಮಾಡೋ ಮೊದಲು ಯಾರಿಗೆ ಯಾವುದಕ್ಕೆ ಯಾವಾಗ ಯಾಕೆ ಕೊಡಬೇಕೆಂಬ ಅರಿವಿದ್ದರೆ  ಉತ್ತಮವೆನ್ನಬಹುದೆ? ದಾನ ಮಾಡುವಷ್ಟು ಸಂಪತ್ತಿರುವಾಗ  ಆ ಸಂಪತ್ತನ್ನು ತಿರುಗಿ ಕೊಡುವುದೂ ಕಷ್ಟವಾಗುತ್ತದೆ. ತಿರುಗಿ ಕೊಡುವಾಗ  ಅರಿವಿನಲ್ಲಿರೋದೂ ಕಷ್ಟ. ಹೀಗಾಗಿ ದಾನವರು ಎಂದರು. ಬಲಿ ಚಕ್ರವರ್ತಿಯು  ಅಸುರನೆಂದರೆ ಸರಿಯೆನಿಸುವುದಿಲ್ಲವಲ್ಲ.  ಇಲ್ಲಿ  ಅಸುರರೊಳಗೇ ಸುರರಿದ್ದರೂ ಕಾಣೋದಿಲ್ಲ.  ಸುರರು ಮಾಡಬೇಕಾದ್ದನ್ನು ಅಸುರರು ಮಾಡಲು ಹೋದರೆ ಸರಿಯಾಗಿರದು. ಕೆಲವು ಸೂಕ್ಷ್ಮ ಸತ್ಯ ವಿಚಾರಗಳು ಅಸುರರಿಗೆ ಅರ್ಥ ವಾಗದು ಆದರೂ ಅಧಿಕಾರ ಸ್ಥಾನ ಸಿಕ್ಕಾಗ. ಸುರರಂತೆ  ದಾನ ಧರ್ಮ ಕಾರ್ಯದಲ್ಲಿ ತೊಡಗಿಸಿಕೊಂಡು  ಲೋಕದ ಜನತೆಗೆ ಸಂತೋಷ ಸುಖ  ಕೊಟ್ಟರೂ   ಅಸುರರೆಂದರೆ‌ಈಗ ಒಪ್ಪೋದಿಲ್ಲ. 
ಸರ್ಕಾರ  ಎಲ್ಲರಿಗೂ  ಉಚಿತವಾಗಿ  ಸಾಲ ಸೌಲಭ್ಯಗಳನ್ನು ಭಾಗ್ಯಗಳನ್ನು ಹಂಚಿದ್ದರೂ  ಬಡತನ ಮಾತ್ರ  ಕಡಿಮೆಯಾಗದೆ ಅಜ್ಞಾನ ಮಿತಿಮೀರಿದೆ ಅಸುರಿ ಗುಣ ಜನಸಾಮಾನ್ಯವರೆಗೂ‌  ಹರಡುತ್ತಿದೆ  ಎಂದಾಗ ತಪ್ಪಾಗಿದ್ದು ಎಲ್ಲಿ?  ಕೊಡೋದು ತಪ್ಪಲ್ಲ.ಯಾರಿಗೆ ಯಾವಾಗ ಎಷ್ಟು ಯಾಕೆ ಹೇಗೆ ಕೊಡಬೇಕೆಂಬುದೇ ಮುಖ್ಯವಾಗಿತ್ತು.  ಉಚಿತದ ಹಿಂದಿರುವ  ಸಾಲವನ್ನು ತೀರಿಸಲು  ಕಷ್ಟಪಟ್ಟು ದುಡಿಯಲೇಬೇಕು ಅದೇ ಧರ್ಮ. ದುಡಿಯದೆ ಕುಳಿತು ತಿಂದರೆ  ಸೋಮಾರಿತನ ಹೆಚ್ಚಾಗಿ  ರೋಗಗಳು  ಬಂದು ಜೀವಹೋಗುತ್ತದೆ.ಜೀವ ಆರೋಗ್ಯವಾಗಿತ್ತು ಹೊರಗಿನಿಂದ  ಒಳಗೆಳೆದುಕೊಂಡ  ರೋಗದಿಂದ ಹೋಯಿತೆಂದರೆ   ನಂಬಲಾಗದು. ಕಷ್ಟದಲ್ಲಿದ್ದಾಗ ಸಹಾಯ ಮಾಡುವುದು ಸರಿ ಕಷ್ಟಪಡದವರಿಗೆ ಸಹಾಯ ಮಾಡೋದು ಸರಿಯಲ್ಲ.ಹಾಗೆ ದಾನ ಮಾಡುವುದು ಸರಿ ಆದರೆ ದಾನವರಿಗೆ  ದಾನ ಮಾಡಬಾರದೆನ್ನುವರು.ಕಾರಣ ಅಸುರರಿಗೆ ಸತ್ಯಧರ್ಮದ ಬಗ್ಗೆ ಅರಿವಿರದು. ಒಳಗಿನ ಆತ್ಮಸಾಕ್ಷಿಯಂತೆ ನಡೆಯುವುದಕ್ಕೆ  ಕಷ್ಟ. ಕಣ್ಣಿಗೆ ಕಂಡದ್ದೇ ಸತ್ಯವೆಂದು ನಂಬಿ ನಡೆಯುವಾಗ  ಕಾಣದ ಶಕ್ತಿಗಳ ಕೈಚಳಕದಲ್ಲಿ ಮಾನವ ಮೋಸಹೋಗೋದೇ ಹೆಚ್ಚು.ಹೀಗಾಗಿ ಪುರಾಣ ಕಥೆಗಳಲ್ಲಿ  ಕೆಲವೆಡೆ ಧರ್ಮ ಸೂಕ್ಮವನ್ನು  ಭೌತಿಕದ ಅಂದಿನ ಪರಿಸ್ಥಿತಿಗೆ  ಅರ್ಥ ಮಾಡಿಕೊಂಡರೆ  ಕೆಲವನ್ನು ಇಂದಿನ ಪರಿಸ್ಥಿತಿಯನ್ನರಿತು ತಿಳಿಯಬೇಕಿದೆ. ಅಂದು ಭೂಮಿಯಲ್ಲಿ ಸಾಕಷ್ಟು ಸಂಪತ್ತಿತ್ತು.ಜನರಲ್ಲಿ  ಧಾರ್ಮಿಕ ಶ್ರದ್ದೆಯಿತ್ತು ಶಿಕ್ಷಣವೂ ಉತ್ತಮವಾಗಿತ್ತು.ಆದರೂ  ರಾಜರ ಕಾಲವಾಗಿದ್ದರಿಂದ  ಒಬ್ಬನೇ ರಾಜ ಕೊನೆಯವರೆಗೂ ಒಂದೇ  ರೀತಿಯಲ್ಲಿ ಆಡಳಿತ ನಡೆಸಲಾಗುತ್ತಿರಲಿಲ್ಲ . ಯುದ್ದಗಳು ನಡೆಯುತ್ತಿತ್ತು.ಚಕ್ರವರ್ತಿಗಳಾಗುತ್ತಿದ್ದರು. ಎತ್ತರಕ್ಕೆ ಬೆಳೆದಾಗ ಅಧರ್ಮ ವೂ  ಬೆಳೆಯುತ್ತಿತ್ತು.ಇದನ್ನು ತಡೆಯಲು  ದೇವತೆಗಳಿಗೇ ಸಾಧ್ಯವಾಗದಿದ್ದಾಗ ಭಗವಂತನ  ಅವತಾರಗಳು ನಡೆದವು.  ಬಲಿಚಕ್ರವರ್ತಿ ಯಂತಹ ಮಹಾದಾನಶೂರನ  ಸೋಲಿಸಲು  ವಾಮನಾವತಾರವಾಯಿತು. ಮೂರ್ತಿಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತಾಯಿತು. ಕಣ್ಣಿಗೆ ಕಾಣೋದೆಲ್ಲಾ ದಾನವಾಗಿರದು.ಅದರ ಹಿಂದಿನ ಋಣಭಾರ ತೀರಿಸುವ‌ ಜ್ಞಾನವಿದ್ದರೆ    ದಾನ‌ಪಡೆಯಬಹುದು.ಸರ್ಕಾರದ ಉಚಿತಗಳು  ದೇಶದ ಸಾಲವಷ್ಟೆ. ದೇಶಸೇವೆ ಮಾಡುವವರಿಗೆ ಕೊಟ್ಟರೆ ದಾನಕ್ಕೆ ಬೆಲೆಯಿರುತ್ತದೆ.ದೇಶವನ್ನೇ  ಹಾಳು ಮಾಡುವವರಿಗೆ ಹಂಚಿದರೆ ದಾನವರಿಗೇ ಕೊಟ್ಟಂತಾಗುತ್ತದೆ.ಇದರಿಂದಾಗಿ  ಎಲ್ಲರಿಗೂ ಕಷ್ಟ ನಷ್ಟ.  ಮೊದಲು  ಶಿಕ್ಷಣದಲ್ಲಿ   ಇದನ್ನು ತಿಳಿಸುವ ಅಗತ್ಯವಿದೆ.ಶಿಕ್ಷಣದ ವಿಷಯವೇ  ಸರಿಯಿಲ್ಲವಾದರೆ ಶಿಕ್ಷಣಕೊಟ್ಟು ಉಪಯೋಗವಿಲ್ಲ. ಹೀಗೆ ಆಹಾರ ವಿಹಾರದಲ್ಲಿಯೂ   ಯಾವುದನ್ನು ತಿನ್ನಬಾರದೋ ಮಾಡಬಾರದೋ ನೋಡಬಾರದೋ ಅವುಗಳಿಗೆ ಹೆಚ್ಚಿನ ಹಣ ನೀಡಲಾಗಿ  ಬೆಳೆಸಿದ ಮೇಲೇ‌  ಅಸುರರನ್ನು ತಡೆಯಲಾಗದೆ   ಪರಿತಪಿಸುವಂತಾಗಿರೋದು. ಒಳಗಿದ್ದ ಜ್ಞಾನ  ಸದ್ಭಳಕೆ  ಮಾಡಿಕೊಳ್ಳುವ ಶಿಕ್ಷಣವೇ ನಿಜವಾದ ಶಿಕ್ಷಣ.ಈಗಿನ ಶಿಕ್ಷಣವೇ ಹೊರಗಿನ ವಿಷಯದ್ದಾಗಿರುವಾಗ  ಶಿಕ್ಷಣ ದಾಸೋಹವಾಯಿತೆ.ಶಿಕ್ಷಣವೇ  ಪರಕೀಯರ ದಾಸ್ಯಕ್ಕೆ ಒಳಗಾಯಿತೆ? ಈಗಲೂ ಕಾಲಮಿಂಚಿಲ್ಲ.ಆತ್ಮರಕ್ಷಣೆಗಾಗಿ  ದಾನ ಧರ್ಮ ಕಾರ್ಯ ನಡೆಸಲು ಆತ್ಮಜ್ಞಾನವಿರಬೇಕು.. ಎಷ್ಟೇ ದಾನ ಧರ್ಮ   ಮಾಡಿದರೂ  ನಾನು ಎನ್ನುವ ಅಹಂಕಾರ  ಹೋಗದೆ ಹೆಚ್ಚಾಗುತ್ತಿದ್ದರೆ  ದಾನವರಾಗುವರು.  
ಮಕ್ಕಳ ದಿನಾಚರಣೆಯಂದು  ಬಲಿಪಾಡ್ಯಮಿ ಬಂದಿದೆ. ಮಕ್ಕಳಿಗೆ ದಾನದ ಬಗ್ಗೆ ತಿಳಿಸಿ ಬೆಳೆಸಿ. ಜ್ಞಾನವನ್ನು ಸದ್ಬಳಕೆ ಮಾಡಿಕೊಂಡರೆ  ಉತ್ತಮ  ದಾನಿಗಳಾಗುವರು. ಒಳ್ಳೆಯದನ್ನು ಹಂಚಿದರೆ ಒಳ್ಳೆಯದಾಗುವುದು.ಕೆಟ್ಟದ್ದನ್ನು ಹಂಚಿದರೆ ಕೆಟ್ಟದ್ದಾಗುವುದು. ಇಷ್ಟೇ  ಜೀವನ.ಒಳ್ಳೆಯದು ಯಾವುದು, ದಾನ ಯಾವುದು ಸತ್ಯ ಯಾವುದೆನ್ನುವ  ಅರಿವೇ ನಿಜವಾದ ಗುರು  ಜೀವನದ ಗುರಿಯೆಡೆಗೆ ನಡೆಸುತ್ತದೆ. ಹಿಂದೆ ಇಂದು ಮುಂದೆ  ಇರುವ ಈ ಗುರು ಒಳಗೇ ಇರೋವಾಗ  ಹುಡುಕಿಕೊಂಡು  ಸತ್ಯ ತಿಳಿದರೆ  ಮಕ್ಕಳೇ ದೇವರಾಗಬಹುದು. 

ಗುರುಗಳಲ್ಲಿಯೂ ದೇವಗುರು ಅಸುರಗುರು ಎನ್ನುವರಿದ್ದರು.ಈಗಲೂ ಇದ್ದಾರೆ ಕಾಣೋ ದೃಷ್ಟಿ ಸರಿಯಿಲ್ಲವಷ್ಟೆ. ಯಾವುದೂ ಅತಿಯಾಗಬಾರದು ಯಾರೂ ಅತಿಯಾಗಿ ಬೆಳೆಯಬಾರದು  ಅಜ್ಞಾನದ ಜೊತೆಗೆ ಅಹಂಕಾರ ಸ್ವಾರ್ಥ ವೇ ಮಾನವನ ಶತ್ರುವಾಗಿರುತ್ತದೆ. ಆಗೋದೆಲ್ಲಾ  ಒಳ್ಳೆಯದಕ್ಕೆ ಆಗೋದನ್ನು ತಡೆಯಲಾಗದು ಆಗಿದ್ದಕ್ಕೆ ಕಾರಣ ತಿಳಿಯಬಹುದು. 

No comments:

Post a Comment