ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Monday, November 10, 2025

ಅಂಗಾಂಗಗಳ ದೈವೀಕ ಶಕ್ತಿ

ದೇವರು ಕೊಟ್ಟರೂ ಪೂಜಾರಿ ಬಿಡೋದಿಲ್ಲ ಎನ್ನುವಂತೆ  ಮಾನವ‌ ಇಂದು ತನ್ನೊಳಗೆ ಇರುವ ದೈವೀಕ ಶಕ್ತಿ‌ಮರೆತು ಹೊರಗೆ ಹೊರಟು ಮಾಡಬಾರದ ಸಾಲ‌ಮಾಡಿ  ಎಷ್ಟು ಇದ್ದರೂ ಸಾಲದು ಎನ್ನುವ ‌ಪರಿಸ್ಥಿತಿಗೆ ಬಂದಿರುವನೆಂದರೆ
 ಇದಕ್ಕೆ ಕಾರಣ ಅಜ್ಞಾನ. ಆಂತರಿಕ ಶಕ್ತಿಯ ದುರ್ಭಳಕೆ  ಒಂದೆಡೆ ಯಾದರೆ  ಅದರ ಅರಿವಿನ ಶಿಕ್ಷಣ ನೀಡದೆ ಆಳುವ ರಾಜಕೀಯ ಇನ್ನೊಂದು ಕಡೆ. 

ದೇಹವೇ ದೇಗುಲ.
ಈ ಚಿಂತನಶೀಲ ವಿಷಯಗಳನ್ನು ಓದಿ ಮತ್ತು ನಿಮ್ಮ ಮನಸ್ಸಿನಿಂದ ಅವುಗಳನ್ನು ಅರ್ಥಮಾಡಿಕೊಳ್ಳಿ.

1. ಟೈರ್‌ಗಳು ಚಾಲನೆ ಮಾಡುವಾಗ ಸವೆದುಹೋಗುತ್ತವೆ, ಆದರೆ ನಿಮ್ಮ ಪಾದಗಳ ಅಡಿಭಾಗವು ಜೀವಿತಾವಧಿಯ ಓಟದ ನಂತರವೂ ಹೊಸದಾಗಿ ಉಳಿಯುತ್ತದೆ.

ದಾರಿ ಉತ್ತಮವಾಗಿದ್ದರೆ‌  ಪಾದರಕ್ಷೆಗೂ ಪೂಜೆ ನಡೆಯುತ್ತದೆ.

2. ದೇಹವು 75% ನೀರಿನಿಂದ ಕೂಡಿದೆ, ಆದರೆ ಅದರ ಲಕ್ಷಾಂತರ ರಂಧ್ರಗಳ ಹೊರತಾಗಿಯೂ, ಒಂದು ಹನಿಯೂ ಸೋರಿಕೆಯಾಗುವುದಿಲ್ಲ.
ಸೋರುತಿಹುದು‌ಮನೆಯ ಮಾಳಿಗೆ ಅಜ್ಞಾನದಿಂದ ಎಂದಿರೋದರ ಅರ್ಥ  ಇದೇ ಆಗಿದೆ.

3. ಬೆಂಬಲವಿಲ್ಲದೆ ಯಾವುದೂ ನಿಲ್ಲಲು ಸಾಧ್ಯವಿಲ್ಲ, ಆದರೆ ದೇಹವು ತನ್ನ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.

ಸಹಕಾರ ಬೆಂಬಲ ಎಲ್ಲವೂ ಆಧ್ಯಾತ್ಮಿಕ ವಾಗಿದ್ದರೆ ಜೀವನದಲ್ಲಿ ಸಮಸ್ಯೆ ಬಂದರೂ ಪರಿಹಾರ ಸಿಗುತ್ತದೆ. ವಿರುದ್ದವಿದ್ದರೆ ಅಸಮತೋಲನವೇ ಗತಿ.

4. ಚಾರ್ಜ್ ಮಾಡದೆ ಯಾವುದೇ ಬ್ಯಾಟರಿ ಚಲಿಸಲು ಸಾಧ್ಯವಿಲ್ಲ, ಆದರೆ ಹೃದಯವು ಹುಟ್ಟಿನಿಂದ ಸಾವಿನವರೆಗೆ ನಿರಂತರವಾಗಿ ಬಡಿಯುತ್ತದೆ.

ಹೃದಯದ ಬಡಿತ ನಿರಂತರವಾಗಿ ಇದ್ದಂತೆ ಒಳಗಿನ ಆತ್ಮಚೈತನ್ಯ ಶಕ್ತಿಯನ್ನು ನಿರಂತರವಾಗಿ  ಅರಿತವರು ಹೃದಯವಂತರಾದರು. ಇದಕ್ಕೆ ಚಾರ್ಜ್ ಮಾಡುವ  ಗುರು  ಇಂದು ಅಗತ್ಯವಾಗಿದೆ.

5. ಯಾವುದೇ ಪಂಪ್ ಶಾಶ್ವತವಾಗಿ ಚಲಿಸಲು ಸಾಧ್ಯವಿಲ್ಲ, ಆದರೆ ರಕ್ತವು ದೇಹದಾದ್ಯಂತ ನಿರಂತರವಾಗಿ ಹರಿಯುತ್ತದೆ.

ದೇಹದ ತುಂಬಾ ರಕ್ತವಿದ್ದರೂ ರಕ್ತಹೀನತೆಯಿಂದ ಬಳಲುವವರು ಹೆಚ್ಚಾಗಿರುವರೆಂದರೆ ಅದಕ್ಕೆ ಪೂರಕವಾದ ಆಹಾರ  ಸೇವಿಸದೆ  ಹೊರಗಿನವರ ರಕ್ತ ಪಡೆದರೂ ರೋಗವೇ ಆಗಿರುತ್ತದೆ.

6. ವಿಶ್ವದ ಅತ್ಯಂತ ದುಬಾರಿ ಕ್ಯಾಮೆರಾಗಳು ಸಹ ಸೀಮಿತವಾಗಿವೆ, ಆದರೆ ಕಣ್ಣುಗಳು ಸಾವಿರಾರು ಮೆಗಾಪಿಕ್ಸೆಲ್‌ಗಳ ಗುಣಮಟ್ಟದಲ್ಲಿ ಪ್ರತಿ ದೃಶ್ಯವನ್ನು ಸೆರೆಹಿಡಿಯಬಹುದು.

ಹೊರಗಿನ ದೃಷ್ಟಿ  ಹೆಚ್ಚಾದಷ್ಟೂ ಒಳದೃಷ್ಟಿ ಹಿಂದುಳಿಯುತ್ತದೆ. ಹಾಗಂತ  ದೃಷ್ಟಿ ದೋಷದ ಸಮಸ್ಯೆಗೆ ಕನ್ನಡಕ ಹೊರಗೆ ಪರಿಹಾರವಾದರೆ  ಒಳದೃಷ್ಟಿ ಗೆ ಪರಿಹಾರ ಆಧ್ಯಾತ್ಮ ವಾಗುತ್ತದೆ. 

7. ಯಾವುದೇ ಪ್ರಯೋಗಾಲಯವು ಪ್ರತಿಯೊಂದು ರುಚಿಯನ್ನು ಪರೀಕ್ಷಿಸಲು ಸಾಧ್ಯವಿಲ್ಲ, ಆದರೆ ಯಾವುದೇ ಉಪಕರಣಗಳಿಲ್ಲದೆ ನಾಲಿಗೆಯು ಸಾವಿರಾರು ಅಭಿರುಚಿಗಳನ್ನು ಗುರುತಿಸಬಹುದು.

ಮಾನವನಿಗೆ ನಾಲಿಗೆ ಚೆನ್ನಾಗಿದ್ದರೆ ಜೀವನದಲ್ಲಿ ಸಾರವಿರುತ್ತದೆ. ಕೇವಲ ತಿನ್ನೋದಕ್ಕೆ ನಾಲಿಗೆ ರುಚಿ ಇರಬೇಕು ಆದರೆ  ಮಾತನಾಡಲು ನಾಲಿಗೆಗೆ ತಿಳುವಳಿಕೆಯಿರಬೇಕು.
ಮಾತು ಮನೆಕೆಡಿಸಿತು ತೂತು ಒಲೆಕೆಡಿಸಿತು ಎಂದಂತಾಗಬಾರದು. ಶುದ್ದ  ಸತ್ಯ ಸತ್ವ ತತ್ವಯುತ ನುಡಿಗಳಿಂದ  ಮಾನವ ಮಹಾತ್ಮರೆಡೆಗೆ ಸಾಗಬಹುದು.

8. ಅತ್ಯಂತ ಮುಂದುವರಿದ ಸಂವೇದಕಗಳು ಸಹ ಸೀಮಿತವಾಗಿವೆ, ಆದರೆ ಚರ್ಮವು ಸಣ್ಣದೊಂದು ಸಂವೇದನೆಯನ್ನು ಸಹ ಗ್ರಹಿಸುತ್ತದೆ.

ಚರ್ಮವೇ ದೇಹಕ್ಕೆ ಹೊದಿಕೆಯಾಗಿದೆ  ಒಳಗಿರುವ ಎಲ್ಲಾ ಶ್ರೀಮಂತ  ಅಂಗಾಂಗಗಳನ್ನು ತನ್ನೊಳಗೆ ಇಟ್ಟುಕೊಂಡಿರುವ ಚರ್ಮ ಎಲ್ಲಾ ಸಂವೇದನೆ ಯನ್ನು ಗ್ರಹಿಸುತ್ತದೆಂದರೆ ನಮ್ಮ ರಕ್ಷಣಾ ಕವಚದ  ವೇದನೆ  ಅನ್ಯರಿಗೆ ತಿಳಿಯದಿದ್ದರೂ ನಮ್ಮ ಅರಿವಿಗೆ  ಬಂದಾಗ  ನಾವೇ ಜಾಗೃತರಾಗಬೇಕು.

9. ಯಾವುದೇ ಉಪಕರಣವು ಪ್ರತಿಯೊಂದು ಶಬ್ದವನ್ನು ಉತ್ಪಾದಿಸಲು ಸಾಧ್ಯವಿಲ್ಲ, ಆದರೆ ಗಂಟಲು ಸಾವಿರಾರು ಆವರ್ತನಗಳ ಶಬ್ದಗಳನ್ನು ಉತ್ಪಾದಿಸಬಹುದು.

ಗಂಟಲು  ಕೆಟ್ಟರೆ  ಬೇರೆ ಗಂಟಲನ್ನು ಜೋಡಿಸಬಹುದೆ? ಉಪಕರಣಗಳು ಹೊರಗಿನವರ ಸೃಷ್ಟಿ. ಇದು ತಾತ್ಕಾಲಿಕ ಪರಿಹಾರವಷ್ಟೆ .

10. ಯಾವುದೇ ಸಾಧನವು ಶಬ್ದಗಳನ್ನು ಸಂಪೂರ್ಣವಾಗಿ ಡಿಕೋಡ್ ಮಾಡಲು ಸಾಧ್ಯವಿಲ್ಲ, ಆದರೆ ಕಿವಿಗಳು ಪ್ರತಿಯೊಂದು ಶಬ್ದವನ್ನು ಅರ್ಥಮಾಡಿಕೊಳ್ಳುತ್ತವೆ ಮತ್ತು ಅರ್ಥೈಸುತ್ತವೆ.

ಕಿವಿ ಕೇಳಿಸದಿದ್ದರೆ  ಯಂತ್ರವಿಡುವರು. ಕೇಳದಿರೋದಕ್ಕೆ ಕಾರಣ  ಅದರ ದುರ್ಭಳಕೆ. ನಮ್ಮ ಪಂಚ ಇಂದ್ರಿಯ ಗಳು ನಮ್ಮ ಆರೋಗ್ಯ ಕಾಪಾಡುವ  ಮಹಾಶಕ್ತಿ ವರ್ದಕಗಳಾಗಿವೆ.
ಯಾವಾಗಿದನ್ನು  ಸರಿಯಾಗಿ ಅರಿತು‌ಬಳಸದೆ  ಮಾನವನೇ ಯಂತ್ರದ ದಾಸನಾದನೋ ಆಗ. ದೇವರು ಕಾಣದೆ  ಹೋಯಿತು. ದೈವೀಕ ಶಕ್ತಿಯನ್ನು  ಬೆಳೆಸಿಕೊಳ್ಳಲು ದೇಹವನ್ನು ದೇಗುಲವಾಗಿಸಿಕೊಂಡಂತಹ ಮಹರ್ಷಿಗಳಿಗೂ ಖುಷಿಗಾಗಿ  ದೇಹವನ್ನು  ಯಂತ್ರಕ್ಕೆ ಒಪ್ಪಿಸಿಕೊಂಡಿರುವ  ನಮಗೂ  ಅಂತರ‌ಬೆಳೆದಿದೆ. ಇದರ ಮಧ್ಯೆ ನಿಂತು  ನಾಟಕ‌ಮಾಡುವ ಅಸಂಖ್ಯಾತ‌  ಜನರು‌ನೋಡುವ ಜನರು ದೇವರನ್ನು  ಮಧ್ಯೆ ನಿಲ್ಲಿಸಿ ದರೆ ಆರೋಗ್ಯ ರಕ್ಷಣೆ ಆಗುವುದಾಗಿದ್ದರೆ‌ ನಮ್ಮ  ದೇಶದಲ್ಲಿ  ರೋಗಕ್ಕೆ ಸ್ಥಾನವಿರುತ್ತಿರಲಿಲ್ಲ. ದೇಶಕ್ಕೆ  ಕಾಡುತ್ತಿರುವ ಈ ಭ್ರಷ್ಟಾಚಾರ ರೋಗಕ್ಕೆ  ಔಷಧ ಶಿಷ್ಟಾಚಾರದ ಶಿಕ್ಷಣ. ಇದನ್ನು ವಿರೋಧಿಸಿದರೆ  ಭ್ರಷ್ಟಾಚಾರಕ್ಕೆ‌  ಬಲ. 
ಪ್ರಕೃತಿಯ  ಸಣ್ಣ ಬಿಂದು ಪುರುಷಶಕ್ತಿಯನ್ನು ಸೇರಿ ಆದ ಜೀವಾತ್ಮನಿಗೆ  ಇದರ ಅರಿವಿಲ್ಲದಿದ್ದರೆ ಜೀವನ ವ್ಯರ್ಥ ಎಂದರು. ಮನೆ ತುಂಬಾ  ವಸ್ತುವಿದ್ದರೂ‌  ವಾಸ್ತು ಸರಿಯಿಲ್ಲದಿದ್ದರೆ  ಹೇಗೆ ಸಮಸ್ಯೆ ಬೆಳೆಯುವುದೋ‌ಹಾಗೆ ದೇಹದೊಳಗಿರುವ ಆರೋಗ್ಯಕರವಾದ ಅಂಗಾಂಗಗಳ ಒಳಗಿನ ದೈವೀಕ ಶಕ್ತಿ ಅರಿಯದೆ  ಕಲಬೆರೆಕೆಯ ಆಹಾರ ವಿಹಾರ  ಶಿಕ್ಷಣ ಒಳಗೆ ತುಂಬಿದರೆ  ರೋಗದ ಗೂಡಾಗುತ್ತದೆ.
ಕಾಲ ಮೀರಿ ಹೋಗಿದೆ  ಆದರೂ  ಮಕ್ಕಳಿಗೆ  ಅವಕಾಶವಿದೆ.ಸಹಕಾರ ಗುರುಹಿರಿಯರು  ನೀಡಿದರೆ  ಸಾಧ್ಯ.
ಇದಕ್ಕೆ ಹೊರಗಿನ ರಾಜಕೀಯಕ್ಕಿಂತ ಒಳಗಿನ ರಾಜಯೋಗ ಅಗತ್ಯವಿದೆ. ನಮ್ಮೊಳಗೇ ಇರುವ ದೈವೀಕ ಶಕ್ತಿಯನ್ನು  ನಾವು ಸದ್ಬಳಕೆ ಮಾಡಿಕೊಳ್ಳಲು ಸುಜ್ಞಾನ  ಅಗತ್ಯವಿದೆ.

ದೇವರು ನಮಗೆ ನೀಡಿರುವ ಅಮೂಲ್ಯ ವಸ್ತುಗಳಿಗಾಗಿ ಅವನಿಗೆ ಕೃತಜ್ಞರಾಗಿರಿ, ಮತ್ತು ಆತನಿಗೆ ದೂರು ನೀಡಲು ನಮಗೆ ಯಾವುದೇ ಹಕ್ಕಿಲ್ಲ!

ಕನ್ನಡದ ರಕ್ಷಣೆ ಹೇಗೆ?

ಕನ್ನಡ ಪುಸ್ತಕ ಮಾರಾಟಕ್ಕೆ ಇಷ್ಟು ಸಮಸ್ಯೆ ಯಿದೆ  ಅದರಲ್ಲಿ ಬರೆದು ಪ್ರಕಟಿಸೋರಿಗೆ ಇನ್ನೂ ಸಮಸ್ಯೆ ಯಿದೆ. ಕಾರಣವಿಷ್ಟೆ ನಮ್ಮ ಶಿಕ್ಷಣವೇ ಕನ್ನಡದಿಂದ ದೂರವಾಗಿದೆ. ಏನಿದ್ದರೂ ಅನ್ಯಭಾಷಿಗರಿಗಿರುವಷ್ಟು ಭಾಷೆಯ ಮೇಲಿನ ಪ್ರೀತಿ ನಮ್ಮಲ್ಲಿಲ್ಲ.ವ್ಯವಹಾರಕ್ಕೆ ಇಳಿದಾಗ ಲಾಭವಷ್ಟೆ ಮುಖ್ಯ.ಧರ್ಮದ ಪ್ರಶ್ನೆ ಬಂದಾಗ ಜ್ಞಾನ ಮುಖ್ಯ. ಪುಸ್ತಕದ ವಿಷಯಗಳು ಜ್ಞಾನವನ್ನು ನೀಡುತ್ತಿದೆಯೆ ಎನ್ನುವುದು ಮುಖ್ಯ. ಎಷ್ಟೋ ಮನರಂಜನೆಗೆ ಸಾಹಿತ್ಯ ಬಳಕೆಯಾಗುತ್ತವೆ. ಆದರೆ ಸಾಹಿತ್ಯದಲ್ಲಿ ಸತ್ಯ ಮರೆಯಾಗಿರುತ್ತದೆಂದರೆ  ಅಜ್ಞಾನ.
ಯಾಕೆ ಹೀಗೆ ತಿಳಿಸಿದೆನೆಂದರೆ ನಾನೊಬ್ಬಳು ಗೃಹಿಣಿಯಾಗಿ ಕನ್ನಡದ ಲೇಖಕಿಯಾಗಿ  ಲೇಖನಗಳ ‌ಮೂಲಕ ಜನಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಪುಸ್ತಕ ಬರೆದು ಪ್ರಕಟಿಸಿದರೂ ಅದರಲ್ಲಿನ ವಿಚಾರ ನೋಡದೆ  ಬದಿಗಿಟ್ಟು  ತಮ್ಮ ಸ್ವಾರ್ಥ ನೋಡಿಕೊಂಡಿರೋರೆ ಇಂದು ಹೆಚ್ಚು. ಹಣವಿದ್ದರೆ  ಪುಸ್ತಕ ಖರೀದಿಸಬಹುದು. ಆದರೆ ಜ್ಞಾನವಿದ್ದರಷ್ಟೆ ಪುಸ್ತಕದ ಸತ್ಯ ಸತ್ವ ತತ್ವ ಅರ್ಥ ವಾಗೋದು.ನಮ್ಮನೆ ಪುಸ್ತಕದ ಮಳಿಗೆಯಾಗಿದೆ  ಕಾರಣ  ಸತ್ಯ ಹೊರಬಂದರೆ  ನಮ್ಮ ‌ಮಸ್ತಕಕ್ಕೆ ಏರಿಸಿಕೊಂಡ ಅನಾವಶ್ಯಕ ವಿಷಯಗಳಿಗೆ ಸ್ಥಾನವಿರದು. ಒಟ್ಟಿನಲ್ಲಿ  ಒಳ್ಳೆಯ ಪುಸ್ತಕ  ಲೇಖಕರಿಗೆ ಮತ್ತು ಮಾರಾಟಗಾರರಿಗೆ ಕಾಲವಲ್ಲ ಎನ್ನಬಹುದೆ? ಸತ್ಯ ಧರ್ಮ  ಎಂದು ಹೊಡೆದಾಡುವ ರಾಜಕೀಯಕ್ಕೆ ಬೆಲೆ ಹೊರಗೆ ಕೊಟ್ಟರೆ   ಉತ್ತಮ ಸಾಹಿತ್ಯ ಹೊರಬರದು. 
ಮಕ್ಕಳಿಗೆ ಶಾಲಾಪುಸ್ತಕವೇ ಹೊರೆಯಾಗಿದೆ ಪೋಷಕರಿಗೆ  ಆ ವಿಚಾರ  ತಲೆಗೆ ತುಂಬುವುದೇ ಕರ್ಮವಾಗಿದೆ. ಇದರ ಮಧ್ಯೆ ಸಾಹಿತ್ಯ ಕ್ಷೇತ್ರ ತನ್ನದೇ ಆದ ವ್ಯವಹಾರಕ್ಕೆ ಇಳಿದಿದೆ. ಎಂತಹ ದುರ್ಗತಿ. 
ಅದಕ್ಕೆ ನೇರವಾಗಿ ವಿಚಾರವನ್ನು ಜನರಿಗೆ ಉಚಿತವಾಗಿ ಹಂಚಿ ವಾಸ್ತವದಲ್ಲಿ ಬದುಕುವುದು ಉತ್ತಮ. ಯಾರ ತಲೆ ಯಾರೋ ಆಳಲು ಹೊರಟಿರುವರು. ಕನ್ನಡ ಉಳಿಸಬೇಕೆ ಮೊದಲು‌ಮಕ್ಕಳಿಗೆ ಭಾಷಾ ಶಿಕ್ಷಣ ಕೊಡಬೇಕು.ನಾವೂ ಕರ್ನಾಟಕದಲ್ಲಿ ಇದ್ದೇವೆನ್ನುವ ಅರಿವಿರಬೇಕು. ಹೊರಗಿನವರಿಗೆ ಮಣೆ ಹಾಕೋದನ್ನು ಬಿಡಬೇಕು.ವ್ಯವಹಾರಕ್ಕಿಂತ ಧರ್ಮ ವೇ ಮೇಲೆಂದು ಅರಿತು ಜೀವನದಲ್ಲಿ ಸಾಮರಸ್ಯ ವಿರಬೇಕು. ಇವೆಲ್ಲವೂ ಶಿಕ್ಷಣದಲ್ಲಿಯೇ ಕಲಿಸಬೇಕು. ಯಾವುದೂ ಮಾಡದೆ  ಹಾಳಾಗಿರೋದನ್ನೇ  ಹೇಳುತ್ತಾ ಹರಡುತ್ತಾ ಹೋದರೆ ಪುಸ್ತಕದಲ್ಲೂ ಅದೇ ಇರುತ್ತದೆ. ಸರಿಪಡಿಸೋರಿಲ್ಲದೆ ಬೆಳೆಯುತ್ತದೆ. ಜೀವನ ಯಾತ್ರೆ ಆಗಬೇಕಿತ್ತು ಜಾತ್ರೆಯಾಗಿ ಹೊರಗೆ ನಡೆಯುತ್ತಿದೆ. ಕ್ಷಮಿಸಿ ಸತ್ಯ ಯಾವತ್ತೂ ಕಠೋರ. 
ಸರ್ಕಾರದ ಹಣಪಡೆದು ದುರ್ಭಳಕೆ ಮಾಡೋರೆ  ಹೆಚ್ಚಾದರೆ  ಆಗೋದು ಹೀಗೆ. ಸ್ವಂತ ಹಣ,ಬುದ್ದಿ ಜ್ಞಾನಕ್ಕೆ  ಇಂದು ಬೆಲೆಯಿಲ್ಲ..ಹಾಗಂತ ಇದಕ್ಕೆ ಸೋಲಿಲ್ಲ  ಕನ್ನಡಕ್ಕೆ ಶುಭ ವಾಗಲಿ.  ಮಲಗಿರುವ ಜನತೆ ಎಚ್ಚರವಾಗಲಿ 
ಬಾರಿಸು ಕನ್ನಡ ಡಿಂಡಿಮವ ಶಿಕ್ಷಣದೊಳಗಿರಲಿ.