ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Monday, November 10, 2025

ಕನ್ನಡದ ರಕ್ಷಣೆ ಹೇಗೆ?

ಕನ್ನಡ ಪುಸ್ತಕ ಮಾರಾಟಕ್ಕೆ ಇಷ್ಟು ಸಮಸ್ಯೆ ಯಿದೆ  ಅದರಲ್ಲಿ ಬರೆದು ಪ್ರಕಟಿಸೋರಿಗೆ ಇನ್ನೂ ಸಮಸ್ಯೆ ಯಿದೆ. ಕಾರಣವಿಷ್ಟೆ ನಮ್ಮ ಶಿಕ್ಷಣವೇ ಕನ್ನಡದಿಂದ ದೂರವಾಗಿದೆ. ಏನಿದ್ದರೂ ಅನ್ಯಭಾಷಿಗರಿಗಿರುವಷ್ಟು ಭಾಷೆಯ ಮೇಲಿನ ಪ್ರೀತಿ ನಮ್ಮಲ್ಲಿಲ್ಲ.ವ್ಯವಹಾರಕ್ಕೆ ಇಳಿದಾಗ ಲಾಭವಷ್ಟೆ ಮುಖ್ಯ.ಧರ್ಮದ ಪ್ರಶ್ನೆ ಬಂದಾಗ ಜ್ಞಾನ ಮುಖ್ಯ. ಪುಸ್ತಕದ ವಿಷಯಗಳು ಜ್ಞಾನವನ್ನು ನೀಡುತ್ತಿದೆಯೆ ಎನ್ನುವುದು ಮುಖ್ಯ. ಎಷ್ಟೋ ಮನರಂಜನೆಗೆ ಸಾಹಿತ್ಯ ಬಳಕೆಯಾಗುತ್ತವೆ. ಆದರೆ ಸಾಹಿತ್ಯದಲ್ಲಿ ಸತ್ಯ ಮರೆಯಾಗಿರುತ್ತದೆಂದರೆ  ಅಜ್ಞಾನ.
ಯಾಕೆ ಹೀಗೆ ತಿಳಿಸಿದೆನೆಂದರೆ ನಾನೊಬ್ಬಳು ಗೃಹಿಣಿಯಾಗಿ ಕನ್ನಡದ ಲೇಖಕಿಯಾಗಿ  ಲೇಖನಗಳ ‌ಮೂಲಕ ಜನಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಪುಸ್ತಕ ಬರೆದು ಪ್ರಕಟಿಸಿದರೂ ಅದರಲ್ಲಿನ ವಿಚಾರ ನೋಡದೆ  ಬದಿಗಿಟ್ಟು  ತಮ್ಮ ಸ್ವಾರ್ಥ ನೋಡಿಕೊಂಡಿರೋರೆ ಇಂದು ಹೆಚ್ಚು. ಹಣವಿದ್ದರೆ  ಪುಸ್ತಕ ಖರೀದಿಸಬಹುದು. ಆದರೆ ಜ್ಞಾನವಿದ್ದರಷ್ಟೆ ಪುಸ್ತಕದ ಸತ್ಯ ಸತ್ವ ತತ್ವ ಅರ್ಥ ವಾಗೋದು.ನಮ್ಮನೆ ಪುಸ್ತಕದ ಮಳಿಗೆಯಾಗಿದೆ  ಕಾರಣ  ಸತ್ಯ ಹೊರಬಂದರೆ  ನಮ್ಮ ‌ಮಸ್ತಕಕ್ಕೆ ಏರಿಸಿಕೊಂಡ ಅನಾವಶ್ಯಕ ವಿಷಯಗಳಿಗೆ ಸ್ಥಾನವಿರದು. ಒಟ್ಟಿನಲ್ಲಿ  ಒಳ್ಳೆಯ ಪುಸ್ತಕ  ಲೇಖಕರಿಗೆ ಮತ್ತು ಮಾರಾಟಗಾರರಿಗೆ ಕಾಲವಲ್ಲ ಎನ್ನಬಹುದೆ? ಸತ್ಯ ಧರ್ಮ  ಎಂದು ಹೊಡೆದಾಡುವ ರಾಜಕೀಯಕ್ಕೆ ಬೆಲೆ ಹೊರಗೆ ಕೊಟ್ಟರೆ   ಉತ್ತಮ ಸಾಹಿತ್ಯ ಹೊರಬರದು. 
ಮಕ್ಕಳಿಗೆ ಶಾಲಾಪುಸ್ತಕವೇ ಹೊರೆಯಾಗಿದೆ ಪೋಷಕರಿಗೆ  ಆ ವಿಚಾರ  ತಲೆಗೆ ತುಂಬುವುದೇ ಕರ್ಮವಾಗಿದೆ. ಇದರ ಮಧ್ಯೆ ಸಾಹಿತ್ಯ ಕ್ಷೇತ್ರ ತನ್ನದೇ ಆದ ವ್ಯವಹಾರಕ್ಕೆ ಇಳಿದಿದೆ. ಎಂತಹ ದುರ್ಗತಿ. 
ಅದಕ್ಕೆ ನೇರವಾಗಿ ವಿಚಾರವನ್ನು ಜನರಿಗೆ ಉಚಿತವಾಗಿ ಹಂಚಿ ವಾಸ್ತವದಲ್ಲಿ ಬದುಕುವುದು ಉತ್ತಮ. ಯಾರ ತಲೆ ಯಾರೋ ಆಳಲು ಹೊರಟಿರುವರು. ಕನ್ನಡ ಉಳಿಸಬೇಕೆ ಮೊದಲು‌ಮಕ್ಕಳಿಗೆ ಭಾಷಾ ಶಿಕ್ಷಣ ಕೊಡಬೇಕು.ನಾವೂ ಕರ್ನಾಟಕದಲ್ಲಿ ಇದ್ದೇವೆನ್ನುವ ಅರಿವಿರಬೇಕು. ಹೊರಗಿನವರಿಗೆ ಮಣೆ ಹಾಕೋದನ್ನು ಬಿಡಬೇಕು.ವ್ಯವಹಾರಕ್ಕಿಂತ ಧರ್ಮ ವೇ ಮೇಲೆಂದು ಅರಿತು ಜೀವನದಲ್ಲಿ ಸಾಮರಸ್ಯ ವಿರಬೇಕು. ಇವೆಲ್ಲವೂ ಶಿಕ್ಷಣದಲ್ಲಿಯೇ ಕಲಿಸಬೇಕು. ಯಾವುದೂ ಮಾಡದೆ  ಹಾಳಾಗಿರೋದನ್ನೇ  ಹೇಳುತ್ತಾ ಹರಡುತ್ತಾ ಹೋದರೆ ಪುಸ್ತಕದಲ್ಲೂ ಅದೇ ಇರುತ್ತದೆ. ಸರಿಪಡಿಸೋರಿಲ್ಲದೆ ಬೆಳೆಯುತ್ತದೆ. ಜೀವನ ಯಾತ್ರೆ ಆಗಬೇಕಿತ್ತು ಜಾತ್ರೆಯಾಗಿ ಹೊರಗೆ ನಡೆಯುತ್ತಿದೆ. ಕ್ಷಮಿಸಿ ಸತ್ಯ ಯಾವತ್ತೂ ಕಠೋರ. 
ಸರ್ಕಾರದ ಹಣಪಡೆದು ದುರ್ಭಳಕೆ ಮಾಡೋರೆ  ಹೆಚ್ಚಾದರೆ  ಆಗೋದು ಹೀಗೆ. ಸ್ವಂತ ಹಣ,ಬುದ್ದಿ ಜ್ಞಾನಕ್ಕೆ  ಇಂದು ಬೆಲೆಯಿಲ್ಲ..ಹಾಗಂತ ಇದಕ್ಕೆ ಸೋಲಿಲ್ಲ  ಕನ್ನಡಕ್ಕೆ ಶುಭ ವಾಗಲಿ.  ಮಲಗಿರುವ ಜನತೆ ಎಚ್ಚರವಾಗಲಿ 
ಬಾರಿಸು ಕನ್ನಡ ಡಿಂಡಿಮವ ಶಿಕ್ಷಣದೊಳಗಿರಲಿ.

No comments:

Post a Comment