ಸೋಲು ಗೆಲುವು, ಕಷ್ಟ ಸುಖ ಇವೆರಡೂ ಒಂದೇ ನಾಣ್ಯದ ಎರಡು ಮುಖವಾಗಿದೆ. ಯಾವಾಗ ಮಾನವ ಸತ್ಯದೆಡೆಗೆ ಹೊರಡುವನೋ ಸೋಲಿನಮುಖ ಹೆಚ್ಚಾಗಿ ಕಾಣುತ್ತದೆ. ಆಗ ಅಸತ್ಯದೆಡೆಗೆ ಮುಖ ಮಾಡಿಕೊಂಡು ಜೀವನ ನಡೆಸಲು ಪ್ರಾರಂಭಿಸುವನು. ಆಗಲೂ ಕಷ್ಟಗಳು ನಷ್ಟಗಳು ಎದುರಾದಾಗ ಮತ್ತೆ ಸತ್ಯವನ್ನು ಅರಸುವನು. ಹೀಗೇ ತನ್ನ ಗೆಲುವಿಗಾಗಿ ಸುಖಕ್ಕಾಗಿ ಪ್ರಯತ್ನ ಪಡುವಾಗ ಪರಮಾತ್ಮನ ಸತ್ಯ ಬಿಟ್ಟು ಪರಕೀಯರನ್ನು ಸೋಲಿಸುವುದೇ ಮುಖ್ಯ ಎನಿಸಿದರೆ ಅದೇ ಮುಂದೆ ದೊಡ್ಡ ದೊಡ್ಡ ಸಮಸ್ಯೆಗೆ ಕಾರಣವಾಗಿ ಕೊನೆಯಲ್ಲಿ ಸೋತು ಹೋಗುವನು. ಮಹಾತ್ಮರು ಸತ್ಯ ತಿಳಿದು ಗೆಲ್ಲುವರು.
ಒಟ್ಟಿನಲ್ಲಿ ಸೋತವನು ಗೆಲ್ಲಲು ಪ್ರಯತ್ನ ಪಡುವುದು ಸಹಜ.
ಆದರೆ ಆ ಗೆಲುವಿನ ಹಿಂದೆ ಸತ್ಯವಿದೆಯೋ ಅಸತ್ಯವಿದೆಯೋ ಎನ್ನುವ ಜ್ಞಾನ ಅತಿ ಮುಖ್ಯ.
ಯಾರನ್ನೂ ಯಾರೂ ಆಳಲಾಗದು ಎನ್ನುವುದು ಸತ್ಯ ಹೀಗಾಗಿ ಜ್ಞಾನಿಗಳಾದವರು ಪರಮಾತ್ಮನ ದಾಸರಾಗಿ ಶರಣರಾಗಿ ಮುಂದೆ ನಡೆದರು. ಹಿಂದಿನ ರಾಜಪ್ರಭುತ್ವದ ರೀತಿ ನೀತಿ ಸಂಸ್ಕೃತಿ ಸಂಸ್ಕಾರದ ಶಿಕ್ಷಣವನ್ನು ನೀಡದೆ ಜನರನ್ನು ಆಳಲು ಹೋದವರಿಗೆ ಗೆಲುವು ಸಿಗುತ್ತಿದೆ ಎಂದರೆ ಜನರ ಅಜ್ಞಾನವಷ್ಟೆ. ಅಜ್ಞಾನವೇ ಎಲ್ಲಾ ಸಮಸ್ಯೆಗೆ ಕಾರಣ.
ಉಪದೇಶ ಮಾಡೋದು ತಪ್ಪಲ್ಲ. ಉಪ ಆದೇಶದ ಹಿಂದಿನ ವಿಜ್ಞಾನವನ್ನು ಅರಿತು ನಡೆಯೋದು ಮುಖ್ಯ. ವಾಸ್ತವದಲ್ಲಿ ದೇಶದ ಸ್ಥಿತಿಗೆ ಕಾರಣವಾಗಿರುವ ಶಿಕ್ಷಣದ ವಿಚಾರಗಳು ಮಕ್ಕಳನ್ನು ತಂತ್ರದಿಂದ ಆಳಲು ಹೊರಟಿವೆ. ಸ್ವತಂತ್ರ ಜ್ಞಾನ ಒಳಗೇ ಅಡಗಿದ್ದರೂ ಗುರುತಿಸಲಾಗದ ಪಠ್ಯ ಪುಸ್ತಕದ ಹೊರೆಯ ಜೊತೆಗೆ ಆಹಾರವೂ ಕಲಬೆರೆಕೆ ಆಗಿ ಆರೋಗ್ಯ ಹಾಳು ಮಾಡಿದರೆ ಗೆಲುವು ಯಾರದ್ದು? ಸೋಲುವುದು ಯಾರು?
ಅಜ್ಞಾನದಲ್ಲಿ ಸೋಲಿಸುವುದು ಸುಲಭದ ಕೆಲಸ. ಆದರೆ ಜ್ಞಾನದ ನಂತರವೇ ಸೋತವರು ಯಾರು ಗೆದ್ದವರು ಯಾರು ಎನ್ನುವುದು ಅರ್ಥ ವಾಗುವುದು.
ಈಗಲೂ ಭಾರತ ವಿಶ್ವಗುರು ಎನಿಸಿಕೊಂಡಿದೆ .ಆದರೆ ಅದನ್ನು ದುರ್ಭಳಕೆ ಮಾಡಿಕೊಂಡು ರಾಜಕೀಯ ನಡೆಸೋರ ಸ್ಥಿತಿ ಚಿಂತಾಜನಕವಾಗಿದೆ. ಇದನ್ನು ಗೆಲುವು ಎಂದು ಹೊರಗೆ ಸಮಾರಂಭ ನಡೆಸಿದರೆ ನಿಜವಾದ ಸೋಲು ಜನರದ್ದೆ ಆಗುತ್ತದೆ. ಎಷ್ಟು ಹೊರಗೆ ಗೆದ್ದರೂ ಒಳಗಿನ ಸೋಲಿನ ಅನುಭವಿಸೋದನ್ನು ತಡೆಯಲಾಗದು.
ಸ್ಪರ್ಧೆ ನಡೆಸೋದಾದರೆ ಸತ್ಯ ಧರ್ಮ ದಲ್ಲಿರಬೇಕು. ಅಸತ್ಯ ಅಧರ್ಮ ದೆಡೆಗೆ ನಡೆಸಿದಷ್ಟೂ ಜೀವನದಲ್ಲಿ ಸೋಲುವುದು ಹೆಚ್ಚಾಗುತ್ತದೆ. ಆದರೂ ಸೋತ ಮೇಲೇ ಗೆಲುವಿನ ರುಚಿ ಹೆಚ್ಚುವುದು. ಸೋಲೇ ಗೆಲುವಿನಮೆಟ್ಟಿಲು ಎಂದಿರುವರು...
ಭಯ ಹುಟ್ಟಿಸಿ ಭಯೋತ್ಪಾದಕರಾಗಿ ಜನರನ್ನು ಸೋಲಿಸಬಹುದು ಆದರೆ ಇದರಿಂದ ಆತ್ಮರಕ್ಷಣೆ ಆಗಿದ್ದರೆ ಸರಿ.ಆತ್ಮಹತ್ಯೆಯಾದರೆ? ಆತ್ಮಕ್ಕೆ ಸಾವಿಲ್ಲ , ಆತ್ಮವೇ ದೇವರು, ಸತ್ಯವೇ ದೇವರು...ಅಂದರೆ ಹತ್ಯೆಯಾಗೋದು ಸತ್ಯ. ಸತ್ಯ ಹಿಂದುಳಿದಷ್ಟೂ ಧರ್ಮ ಸಂಕಟವೇ ಹೆಚ್ಚುವುದು.
ಇದನ್ನರಿತು ಮಾನವ ನಡೆದಾಗಲೇ ಸೋಲು ಗೆಲುವಿನ ಲೆಕ್ಕಾಚಾರ ಚೆನ್ನಾಗಿ ಅರ್ಥ ವಾಗುತ್ತದೆ.
No comments:
Post a Comment