ದೇವರನ್ನು ಒಳಗೆ ಹುಡುಕಿದವರಿಗೆ ದೇವರು ಕಂಡಿರುವರೆಂದರು ಮಹಾತ್ಮರು ಆದರೆ ಇಂದಿನ ಜನರು ದೇವರನ್ನು ಹೊರಗೆ ಹುಡುಕುತ್ತಾ ಹೊರಗೆ ಹೊರಟಿರುವರೆಂದರೆ ದೇವರು ಹೊರಗಿರುವನೋ ಒಳಗೋ ಎನ್ನುವುದೇ ಜನರಿಗೆ ಅರಿವಿಲ್ಲದೆ ತಿರುಗುತ್ತಿರುವರು. ಹಣಕೊಟ್ಟರೆ ದೇವರದರ್ಶನ ಎಂದರೆ ಹಣದಲ್ಲಿರುವನೆ ದೇವರು? ಜನಮರುಳೋ ಜಾತ್ರೆ ಯೋ ಎಂದಂತಹ ಪರಿಸ್ಥಿತಿ ಯಲ್ಲಿ ಜನರ ಜಾತ್ರೆ ನಡೆಯುತ್ತಿದೆ...ಕಲಿಯುಗದಲ್ಲಿ ಜನರು ಹೇಗಿರುವರು ಅರಸರು ಹೇಗಿರುವರು ಎನ್ನುವುದನ್ನು ಶ್ರೀ ಕೃಷ್ಣ ಮೊದಲೇ ತಿಳಿಸಿದಂತೆ ಕೆಲವೆಡೆ ತೋರಿಸುತ್ತಿದೆ. ಜನಜಾಗೃತರಾಗದೆ ಯಾವ ದೇವರೂ ಸರಿಪಡಿಸಲಾಗದು. ಕಾರಣ ಜನರಲ್ಲಿ ದೈವತ್ವವಿದ್ದರಷ್ಟೆ ದೇವರ ದರ್ಶ ನ ಸಾಧ್ಯ. ಅಸುರರ ವಶದಲ್ಲಿ ಇದ್ದರೆ ಅಸುರರ ದರ್ಶನ. ಇಷ್ಟೇ ಜೀವನ.
ಎಲ್ಲಿರುವನು ಹರಿ? ಎಂದ ಹಿರಣ್ಯಕಶ್ಯಪುವಿನ ವಧೆ ಮಾಡೋದಕ್ಕೆ ಎಷ್ಟೋ ವರ್ಷಗಳು ಹಿಡಿದವು ಎಂದರೆ ಹಿರಣ್ಯಕಶ್ಯಪುವಿನ ಅಧಿಕಾರ ಹಣ ಸ್ಥಾನವನ್ನು ನೋಡಿ ಜನ ಅವನನ್ನು ದೇವರೆಂದು ಸಹಕರಿಸಿದ್ದರು. ಇದರಲ್ಲಿ ತಪ್ಪು ಯಾರದ್ದು?
ಕೃತಯುಗದಲ್ಲಿದ್ದ ಪ್ರಹ್ಲಾದ ನು ಶ್ರೀ ಹರಿಯ ಒಂದು ರೂಪ.
ಹಿರಣ್ಯಾಕ್ಷ ಹಿರಣ್ಯಕಷ್ಯಪುವಾಗಿ ಅಸುರ ಜನ್ಮತಳೆದ ಜಯವಿಜಯರೂ ದೇವತೆಗಳೇ ಆಗಿದ್ದವರು. ಅಹಂಕಾರದ ಫಲವಾಗಿ ಭೂಮಿಯಲ್ಲಿ ಅಸುರಜನ್ಮತಾಳಬೇಕಾಯಿತೆನ್ನುವ ಪುರಾಣ. ಕಥೆ ಎಲ್ಲರಿಗೂ ತಿಳಿದಿದೆ. ಅಂದರೆ ಅಹಂಕಾರ ವೇ ದೈವತ್ವದಿಂದ ದೂರ ಮಾಡುತ್ತದೆಂದರೆ ನಮ್ಮಲ್ಲಿ ತುಂಬಿರುವ. ಈ ಶಕ್ತಿಯನ್ನು ಯಾರು ಹೊರಹಾಕಬೇಕು? ಅಜ್ಞಾನದಿಂದ ಅಹಂಕಾರ ಬೆಳೆದಿರುವಾಗ ಸುಜ್ಞಾನದೆಡೆಗೆ ನಡೆಯೋದೆ ಉತ್ತಮಮಾರ್ಗ.
ಅಂದಿನ ಕಾಲದಲ್ಲಿ ರಾಜನೇ ಪ್ರಜೆಗಳಿಗೆ ದೇವರು. ಉತ್ತಮ ಶಿಕ್ಷಣ. ನೀಡುವುದರ ಮೂಲಕ ಜನರಲ್ಲಿ ಜ್ಞಾನವಿತ್ತು. ಈಗ ಹೊರಗಿನ ಜ್ಞಾನವೇ ಬಂಡವಾಳವಾಗಿ ಒಳಗೇ ಇದ್ದ ಸತ್ಯ ಧರ್ಮ ಹಿಂದುಳಿದರೆ ದೇವರು ಕಾಣೋದಿಲ್ಲ.
ಪ್ರಜಾಪ್ರಭುತ್ವದಲ್ಲಿ ಯಾರು ದೇವರು?
ಜೀವ ಜೀವನ ನೀಡಿದ ಪೋಷಕರನ್ನೇ ಬಿಟ್ಟು ಹೊರಗಿನವರನ್ನು ದೇವರೆಂದರೆ ಅಜ್ಞಾನ. ತನ್ನ ಸ್ವಂತ ಬುದ್ದಿ ಜ್ಞಾನ ವಿದ್ಯೆಗೆ ವಿರುದ್ದ ಕೆಲಸ ಮಾಡುತ್ತಾ ಎಷ್ಟು ಹಣಗಳಿಸಿದರೂ ಸಂತೃಪ್ತಿ ಸಮಾಧಾನ ಶಾಂತಿ ಸಿಗಲಿಲ್ಲ ಎಂದರೆ ಯೋಗವಿಲ್ಲ ಎಂದರ್ಥ. ಅಂದರೆ ಪರಮಾತ್ಮನ ಇಚ್ಚೆಯ ವಿರುದ್ದ ಜೀವಾತ್ಮ ನ ಪಯಣ ನಡೆದಿದೆ ಎಂದರ್ಥ.
ಹೊರಗಿನ ಸಂಬಂಧ ಒಳಗಿನ ಸಂಬಂಧ ಒಂದು ಮಾಡೋದು ಯೋಗ. ಅಂತರ ಬೆಳೆಸುತ್ತಿದೆ ಎಂದರೆ ದಾರಿತಪ್ಪಿದೆ ಎಂದಾಗುತ್ತದೆ. ಅಧ್ಯಾತ್ಮ ವಿಜ್ಞಾನ ಭೌತವಿಜ್ಞಾನ ವು ಮಾನವನಿಗೆ ವರವಾಗಬೇಕು ಶಾಪವಾಗಬಾರದು. ಯಾವಾಗಿದು ದುರ್ಭಳಕೆ ಆಗುವುದೋ ಶಾಪವಾಗುತ್ತದೆ.ಸಾಲವಾಗುತ್ತದೆ. ದೇವರ ಸಾಲತೀರಿಸಲು
ದೈವತ್ವದ ಶಿಕ್ಷಣ ಕೊಡಬೇಕು. ದೇವರನ್ನು ಆಳಲು ಹೊರಟರೆ ತಕ್ಕ ಶಿಕ್ಷೆ ಅನುಭವಿಸಲೇಬೇಕು.
ಜ್ಞಾನವೇ ದೇವರು, ಅರಿವೇ ಗುರು, ಗುರುವನ್ನು ಅರಿತ ಮೇಲೆ ದೇವರ ದರ್ಶನ. ಗುರು ವ್ಯಕ್ತಿಯಲ್ಲ ಆತ್ಮಶಕ್ತಿ.ಎಲ್ಲರಲ್ಲಿಯೂ ಅಡಗಿದ್ದರೂ ಎಲ್ಲರನ್ನು ತಿಳಿದೋತಿಳಿಯದೆಯೋ ಸನ್ಮಾರ್ಗ ದಲ್ಲಿ ನಡೆಸುವ ಶಕ್ತಿ ಗುರುವಿನಲ್ಲಿದೆ. ಗುರುವನ್ನು ಗುರುತಿಸಿಕೊಳ್ಳುವುದೇ ಜೀವನದ ಗುರಿಯಾಗಿದೆ .
ಕಲಿಯುವವರೆಗೆ ಬ್ರಹ್ಮವಿದ್ಯೆ ಕಲಿತ ಮೇಲೆ ಕೋತಿವಿದ್ಯೆಯಾದರೆ ಜ್ಞಾನಬರೋದಿಲ್ಲ.
ಇದರಲ್ಲಿ ದೇವಗುರು, ಮಾನವಗುರು, ಅಸುರಗುರು ಇರುವರು. ಗುಣಕರ್ಮಯೋಗದಿಂದ ಅರಿಯಬಹುದು.
ಕೃಷ್ಣಂ ವಂದೆಜಗದ್ಗುರುಂ.
ಕತ್ತಲಿನಿಂದ ಬೆಳಕಿನೆಡೆಗೆ ನಡೆಸುವವರೆ ಗುರುದೇವರು.
ಅಸತ್ಯದಿಂದ ಸತ್ಯದ ಕಡೆಗೆ ನಡೆಸುವವರೆ ಜಗದ್ಗುರು.
ಸದ್ಗುರುಗಳ ಸೇವೆಯಿಂದ ಪಾಪನಾಶವಾಗುತ್ತದೆ.
ಶ್ರೀ ಗುರುಭ್ಯೋ ನಮ:
No comments:
Post a Comment