ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Thursday, October 2, 2025

ಭೂಮಿಯಿಲ್ಲದೆ ಮನುಕುಲವಿಲ್ಲ

ಭೂಮಿ‌ ನಡೆದಿರೋದು ಸಂಸಾರಿಗಳಿಂದಲೋ ಸಂನ್ಯಾಸಿಗಳಿಂದಲೋ ಎಂದರೆ ಯಾರಿಂದಲೂ ನಡೆಯುತ್ತಿಲ್ಲ.ಇವರನ್ನು ಹೊತ್ತು ನಡೆಯುತ್ತಿದೆ ಅಷ್ಟೆ.ಇವರಲ್ಲಿ ಸತ್ವ ಗುಣವಿದ್ದರೆ ಶಾಂತಿ ಇಲ್ಲವಾದರೆ ಕ್ರಾಂತಿ.
ಕ್ರಾಂತಿಯಿಂದ  ಯಾವ ಯೋಗವೂ ಕಾಣೋದಿಲ್ಲ.ಹೀಗಾಗಿ ಪರಮಾತ್ಮನ ಜೀವಾತ್ಮ ಸೇರುವ ಯೋಗದಿಂದ ಮಾನವರು ವಂಚಿತರಾಗಿ  ಭೋಗದೆಡೆಗೆ ‌ನಡೆದಷ್ಟೂ ರೋಗದ. ಜೀವನ.

ಭ್ರಷ್ಟಾಚಾರ ಎನ್ನುವ ರೋಗವು ಈಗ ಎಲ್ಲರಲ್ಲಿಯೂ ಅಡಗಿದೆ. ಕಾರಣ  ಸಂಸಾರ ನಡೆಸಲು ಹಣ ಬೇಕು. ಸಂನ್ಯಾಸಿಯಾಗಲು ಜ್ಞಾನ‌ಬೇಕು. ಜ್ಞಾನವೇ ಇಲ್ಲದೆ ಹಣಗಳಿಸಿ  ಶ್ರೀಮಂತ ರಾದವರೂ ಸಂನ್ಯಾಸಿಗಳೆಂದರೆ  ಸಂಸಾರಿಗಳ ಗತಿಏನು?
ಕಣ್ಣಿಗೆ ಕಾಣುವುದೆಲ್ಲವೂ ಸತ್ಯವಾಗಿದ್ದರೆ ಎಲ್ಲರೂ ದೇವರೆ ಆಗಬಹುದಿತ್ತು. ದೈವತ್ವವಿಲ್ಲದ ಸಂಸಾರವಾಗಲಿ ಸಂನ್ಯಾಸವಾಗಲಿ  ರಾಜಕೀಯದ ಹಿಂದೆ ನಡೆದಾಗ ಆಳೋದೆ ಗುರಿಯಾಗಿರುತ್ತದೆ. ಯಾರನ್ನು ಯಾರು ಆಳಬೇಕು? 
ರಾಜಪ್ರಭುತ್ವದ  ಕಾಲ ಹೋಗಿ ಪ್ರಜಾಪ್ರಭುತ್ವ ಬಂದರೂ ಪ್ರಜೆಗಳನ್ನು ಆಳೋದೇ  ರಾಜಕೀಯ ಎಂದರೆ  ಕಾಲ ಬದಲಾಗುತ್ತದೆ. ಕಾಲವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ.
ಆದರೂ ತಡೆಯುವ ಪ್ರಯತ್ನದಲ್ಲಿ ಸೋತವರೆ ಹೆಚ್ಚಾಗಿ ಸಂಸಾರಿಗಳ  ಕಷ್ಟ ಸಂನ್ಯಾಸಿಗಳಿಗಿಲ್ಲ ಆದರೆ ಜ್ಞಾನದ ಪ್ರಕಾರ  ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ದೂರವಿರೋದು ಸಂನ್ಯಾಸಿ ಧರ್ಮ. ಪರಮಾತ್ಮನ ದರ್ಶನ  ಸಂನ್ಯಾಸಿಗಳಿಗೆ ಆದಂತೆ ಸಂಸಾರಿಗಳಿಗೆ ಆಗದು. ಒಟ್ಟಿನಲ್ಲಿ ಇಬ್ಬರೂ ಪರಮಾತ್ಮನ ಅಧೀನರೆ  ಆದಾಗ ಅವರವರ ಧರ್ಮ ಕರ್ಮ ದಲ್ಲಿ ಸತ್ಯ ಸತ್ವ ತತ್ವವಿದ್ದರೆ ಮಾತ್ರ ಯೋಗ.ಯೋಗದಿಂದ ಜ್ಞಾನ,ಜ್ಞಾನದಿಂದ ಹಣ ಸಂಪಾದಿಸಿ ಋಣ ತೀರಿಸುವುದರಿಂದ ಭೂಮಿಯಲ್ಲಿ  ಧರ್ಮ ನೆಲೆಸುತ್ತದೆಂದು ಸನಾತನ ಹಿಂದೂ ಧರ್ಮದ ತಿರುಳಾಗಿತ್ತು.
ಹೊರಗಿನ  ಸಿಪ್ಪೆಯನ್ನೇ  ಸರಿಯಾಗಿ ಅರಿತು ನಡೆಯಲಾಗದ ಅಜ್ಞಾನದಲ್ಲಿ  ಇಂದಿಗೂ ಮಾನವನಿಗೆ ಹಣವಿದೆ ಅದರ ಹಿಂದೆ ಬೆಟ್ಟದ್ದಷ್ಟು ಹಿಂದಿನವರ ಋಣವೂ ಇದೆ. ಇದನ್ನು ಹಿಂದಿನ ಮಹಾತ್ಮರ  ಧರ್ಮ ಕರ್ಮ ವನರಿತು  ನಡೆದಾಗಷ್ಟೆ ಅವರಲ್ಲಿದ್ದ ಜ್ಞಾನದ ಅನುಭವವಾಗಲು ಸಾಧ್ಯವೆಂದರೆ ಇದು ಒಳಗಿನಿಂದ  ಬೆಳೆಸುವುದು ಅಗತ್ಯವಿದೆ. ಹೊರಗೆ ತೇಪೆಹಾಕಿ ಒಳಗಿನಹುಳುಕನ್ನು ಮುಚ್ಚಿದರೂ  ಒಂದು ದಿನ ಹೊರಗೆ ಬರುತ್ತದೆ. ಹಿಂದಿನ ಗುರುಕುಲಗಳಲ್ಲಿದ್ದ  ಶಿಕ್ಷಣದಿಂದ ಗುರುಭಕ್ತಿ ಹೆಚ್ಚಾಗಿತ್ತು. ದೇವರನ್ನು ತೋರಿಸುವ ಗುರುವಲ್ಲಿ ಭಕ್ತಿ ಭಯವಿದ್ದರೆ ಮಾತ್ರ ಅಧ್ಯಾತ್ಮ ಸಾಧನೆ ಸಾಧ್ಯ. 
ಹೈಟೆಕ್ ಶಾಲೆ ಹೈಟೆಕ್ ಆಸ್ಪತ್ರೆ ಗಳು  ಬೆಳೆದಿರೋದು ಅಜ್ಞಾನವನ್ನು ತೋರಿಸುತ್ತದೆ. ಸತ್ಯ ರೋಗವಿಲ್ಲದ ಜೀವವಿಲ್ಲ.
ಆ ರೋಗಕ್ಕೆ ಕಾರಣವೇ  ತಾವೇ ಒಳಗೆಳೆದುಕೊಂಡಿರುವ ವಿಷಯುಕ್ತ ನಕಾರಾತ್ಮಕ ವಿಷಯಗಳು,ಆಹಾರ ವಿಹಾರ ಶಿಕ್ಷಣವೇ  ಎಂದರೆ  ನಂಬಲಾಗದು .ಭೂಮಿ ಒಂದು ಮಾಧ್ಯಮ.ಆ ಮಾಧ್ಯಮದ  ವಿಚಾರಗಳು ಸಂಸಾರವನ್ನು ಗಟ್ಟಿ ಮಾಡುತ್ತದೋ ಟೊಳ್ಳು ಮಾಡುತ್ತದೋ  ಅದರ ಮೇಲೆ ಸಮಾಜ ನಿಂತಿದೆ. ಹೊರಗೆಳೆದು ಆಳೋದೆಂದರೆ  ರಾಜಕೀಯ. ಒಳಗಿನಿಂದ ಕೂಡಿ ಬಾಳೋದೆ ರಾಜಯೋಗ.

ಎಲ್ಲವೂ ಕಲಿಗಾಲದ ಪ್ರಭಾವವೆಂದು ಸುಮ್ಮನಿರಬೇಕೆ? ಅಥವಾ ಕಲಿಕೆಯಲ್ಲಿ ಉತ್ತಮ ಬದಲಾವಣೆ ತರಲು ಸಹಕಾರ ಕೊಟ್ಟು ಒಗ್ಗಟ್ಟಿನಿಂದ ಸಂನ್ಯಾಸಿಗಳು ಸಂಸಾರಿಗಳನ್ನು ಬಾಳೋದನ್ನು ಕಲಿಸಬೇಕೆ?
ಹಣವಿದ್ದರಷ್ಟೆ‌ ಜೀವನ. ಆದರೆ ಸತ್ಯಜ್ಞಾನವಿಲ್ಲದ  ಜೀವನದಲ್ಲಿ ಋಣ ತೀರೋದಿಲ್ಲವಾದ್ದರಿಂದ ಇದು ಮರಣ ಎನ್ನುವರು ಮಹಾತ್ಮರು. ಬದಲಾವಣೆ ಜಗದ ನಿಯಮ.
ಅನ್ಯರನ್ನು ಬದಲಾಯಿಸೋ ಮೊದಲು ನಮ್ಮವರನ್ನು ಅರಿತು ನಡೆಯೋದನ್ನು ಕಲಿಯುವುದು ಅಗತ್ಯವಿದೆ.
ಸತ್ಯ ಕಣ್ಣಿಗೆ ಕಾಣೋದಿಲ್ಲವೆಂದರೆ ಸತ್ಯವಿಲ್ಲ. ಎಂದರ್ಥ ವಲ್ಲ.
ಸಂಸಾರಿಗಳಲ್ಲಿಯೂ ಸತ್ಯವಿದ್ದರೂ ಗಮನಕ್ಕೆ ಬರೋದಿಲ್ಲ.
ಏನೇ  ಆದರೂ ಯಾರನ್ನು ಯಾರುನಡೆಸಿರೋದೆಂದರೆ ಭೂಮಿಯೇ ಎಲ್ಲರನ್ನೂ ನಡೆಸಿರೋದು. ಪರಮಾತ್ಮನ ಸೊಂಟದ ಭಾಗದಲ್ಲಿ ರುವ ಭೂತಾಯಿ ಮನುಕುಲಕ್ಕೆ ಆಶ್ರಯ ನೀಡಿರುವಾಗ ಅವಳನ್ನು ಸಂಸಾರಿಗಳು ಸಂನ್ಯಾಸಿಗಳು ಹೇಗೆ ಬಳಸುವರೋ ಹಾಗೆ ಜೀವನವಿರುತ್ತದೆ.
ಎಲ್ಲದ್ದಕ್ಕೂ ಸ್ತ್ರೀ ಶಕ್ತಿ ಕಾರಣ ಎನ್ನುವ ಹಿಂದೆ ಅವಳನ್ನು ಹೇಗೆ  ಬಳಸಿದ್ದೇವೆನ್ನುವ ಅರಿವಿದ್ದರೆ ಈಗಲೂ ಸ್ತ್ರೀ ಇಲ್ಲದೆ ಸಂಸಾರವಿಲ್ಲ.ಜನ್ಮ ಕೊಟ್ಟು ಜೀವನ ನಡೆಸಲು ಬಿಟ್ಟಿರುವ ತಾಯಿಗೆ ಸರಿಯಾದ ಜ್ಞಾನದ ಶಿಕ್ಷಣನೀಡದೆ ಆಳಲು ಹೊರಟರೆ ಅಜ್ಞಾನದಿಂದ ಸಂಸಾರ ಹಾಳಾಗುತ್ತದೆ. ಇದು ಹಿಂದೂ ಗಳು ಅರ್ಥ ಮಾಡಿಕೊಳ್ಳಲು ಸೋತರೆ ಹಣವಿದ್ದರೂ  ದುರ್ಭಳಕೆ ಆಗುತ್ತಲೇ ಇರುತ್ತದೆ.ಜೊತೆಗೆ ಋಣವೂ ಬೆಳೆಯುತ್ತಲೇ  ಜೀವಹೋಗುತ್ತದೆ . ಹೊರಗಿನಿಂದ ದೇವಿಯನ್ನು ಅಲಂಕರಿಸಿ ಒಳಗಿದ್ದ ಜ್ಞಾನಶಕ್ತಿ ಗುರುತಿಸದಿದ್ದರೆ  ಅಜ್ಞಾನವಲ್ಲವೆ?
ಸ್ವತಂತ್ರ ವಾಗಿರುವ  ಸತ್ಯ ಒಂದೇ. ಆ ಒಂದರ ಹಿಂದೆ ಒಳಹೊಕ್ಕು ನೋಡಲು ಸಂನ್ಯಾಸಿಗಳಿಗೆ ಸುಲಭ. ಆದರೆ ಅವರು ಸಂಸಾರಿಗಳಹಿಂದೆ ನಡೆಯುವಂತಾದರೆ ಅಧೋಗತಿ.
ಈಗಲೂ ಎಷ್ಟೋ ಮಹಾತ್ಮರಿದ್ದಾರೆ.ಹಾಗಾಗಿ ಭೂಮಿಯಲ್ಲಿ ಮಳೆಬೆಳೆಗಳಾಗುತ್ತಿದೆ. ಹೊಟ್ಟೆ ತುಂಬಿಸುವ ಅನ್ನದಾಸೋಹ ಚೆನ್ನಾಗಿ ನಡೆದಿದೆ. ಆತ್ಮಕ್ಕೆ ತೃಪ್ತಿ ಕೊಡುವ ಜ್ಞಾನದಾಸೋಹದ ಶಿಕ್ಷಣದಿಂದ  ಆತ್ಮನಿರ್ಭರ ಭಾರತವಾಗಬಹುದು. ಇದರ ಬಗ್ಗೆ ಚರ್ಚೆ ನಡೆಸದೆ  ರಾಜಕೀಯ ಸರಿಯಿಲ್ಲ,ಸರ್ಕಾರ ಸರಿಯಿಲ್ಲ ಎಂದರೆ ನಮ್ಮ ಅಧಿಕಾರ ಸರಿಯಿಲ್ಲ ಸಹಕಾರ ಸರಿಯಿಲ್ಲ ಎಂದರ್ಥ .ಆತ್ಮಾವಲೋಕನ  ಒಳಗಿನಿಂದ ಆಗೋದಕ್ಕೆ  ಹೊರಗಿನ ರಾಜಕೀಯದ ಅಗತ್ಯವಿಲ್ಲ ಅಲ್ಲವೆ?

No comments:

Post a Comment