ದಸರಾ ಶುಭಾಶಯಗಳು.
ನಕಾರಾತ್ಮಕ ಶಕ್ತಿ ಹೋಗಿ ಸಕಾರಾತ್ಮಕ ಶಕ್ತಿಯಿಂದ ಲೋಕಕಲ್ಯಾಣವಾಗಲೆಂದು ಪ್ರಾರ್ಥನೆ ಮಾಡೋಣ.
ನಕಾರಾತ್ಮಕ ಯಾವುದು? ಸಕಾರಾತ್ಮಕ ಯಾವುದೆನ್ನುವ ಸುಜ್ಞಾನ ನೀಡುವ ಭಗವತಿಯನ್ನು ನಾವು ಹೇಗೆ ಆರಾಧಿಸುವೆವೋ ಹಾಗೇ ನಮ್ಮ ಶಕ್ತಿ ಬೆಳೆಯುತ್ತದೆ. ಅಂದರೆ ಜ್ಞಾನ ಎಲ್ಲರಲ್ಲಿಯೂ ಅಡಗಿರುವ ಶಕ್ತಿಯೇ ಆದರೆ ಅದನ್ನು ಹೇಗೆ ಬಳಸಿದರೆ ಲೋಕಕಲ್ಯಾಣವಾಗುವುದೆನ್ನುವ ಸತ್ಯ ದ ಅಗತ್ಯತೆ ಇಂದಿದೆ. ಕಲಿಕೆಯೇ ಅಸತ್ಯದೆಡೆಗೆ ಹೊರಟಾಗ ಕಾಣೋದಷ್ಟೆ ಸತ್ಯ.ಕಾಣದ ಸತ್ಯವನ್ನು ಅರಿಯುವ ಶಕ್ತಿ ಇಲ್ಲದವರಿಗೆ ತಾನು ಮಾಡೋದಷ್ಟೆ ಉತ್ತಮ ಕಾರ್ಯ ಎನ್ನುವ ಅಹಂಕಾರ ಒಳಗೇ ಬೆಳೆದಾಗ ಅದೇ ಮುಂದೆ ನಕಾರಾತ್ಮಕ ಶಕ್ತಿಗೆ ಪ್ರೇರಣೆ ನೀಡುತ್ತಾ ಹೊರಗಿನ ರಾಜಕೀಯದ ದಾಳವಾಗಿ ಜೀವಾತ್ಮ ನಿಗೆ ತನ್ನ ತಾನರಿಯದ ಪರಿಸ್ಥಿತಿ ಒದಗುತ್ತದೆ.
ಹೀಗಾಗಬಾರದೆಂದರೆ ಮೊದಲು ನಮ್ಮ ಅಂತರಂಗದ ಶುದ್ದಿ ಆಗಬೇಕೆಂದು ಮಹಾತ್ಮರುಗಳು ತಿಳಿದು ತಿಳಿಸಿ ನಡೆದಿರುವರು.
ಅವರಲ್ಲೇ ತಪ್ಪನ್ನು ಹುಡುಕಿಕೊಂಡು ತಾವು ಅವರಿಗಿಂತ ದೊಡ್ಡವರೆನ್ನುವ ಅಜ್ಞಾನವನ್ನು ಪ್ರದರ್ಶನ ಮಾಡುವಷ್ಟು ಬುದ್ದಿವಂತಿಕೆ ಇಂದಿನ ಮಾನವರಿಗಿದೆ .ಆದರೆ ಒಂದು ಸತ್ಯ ಅರ್ಥ ವಾಗಬೇಕಷ್ಟೆ ಇಲ್ಲಿ ಯಾರೂ ಶ್ರೇಷ್ಠ ರು ಕನಿಷ್ಟರು ಎಂದು ಜನ್ಮ ತಾಳಿರುವುದಿಲ್ಲ.ಎಲ್ಲರಲ್ಲಿಯೂ ಅಡಗಿರುವ ಚೇತನಾತ್ಮ. ಪವಿತ್ರವೇ ಆಗಿದ್ದು ಸುಜ್ಞಾನದಿಂದ ಜೀವನ ನಡೆಸುವ ಶಿಕ್ಷಣ ನೀಡುವುದು ಮಾನವ ಧರ್ಮ. ಯಾವಾಗ ಇದನ್ನು ನಿರ್ಲಕ್ಷ್ಯ ಮಾಡಿ ಲಕ್ಷ ಹಣಗಳಿಸುವ ವಿಜ್ಞಾನಕ್ಕೆ ನೇರವಾಗಿ ಏಣಿಏರಿಸುವ ಯೋಚನೆ ಬೆಳೆಯಿತೋ ಏಣಿ ಏರಿದರೂ ಕೆಳಗಿದ್ದ ಭೂಮಿಯ ಸತ್ಯ ಸತ್ವ ತತ್ವದ ಅರಿವಿಲ್ಲದೆ ಕೆಳಗೆ ಬಿದ್ದು ಹೋದವರೆ ಬೆಳೆದರು.
ಇಲ್ಲಿ ಕಲಿಗಾಲ ಎಂದರೆ ಕಲಿಯುವುದೇ ಕಾಲ. ಯಾವುದನ್ನು ಕಲಿತರೆ ಅಧ್ಯಾತ್ಮ ಪ್ರಗತಿಯಾಗುವುದೋ ಅದನ್ನು ಆತ್ಮಜ್ಞಾನ ಎಂದರೆ ಭೌತಿಕದಲ್ಲಿ ಪ್ರಗತಿ ಕಾಣುವುದು ವಿಜ್ಞಾನ. ವಿಜ್ಞಾನ ವಿಶೇಷಜ್ಞಾನವಾಗಿದ್ದು ಸಂಶೋಧನೆಯಿಂದ ಬೆಳೆದಿರುವ ಸತ್ಯವಾಗಿದೆ. ಇದರಲ್ಲಿ ಅಂತರಂಗ ಸಂಶೋಧನೆಯೇ ಬೇರೆ ಸತ್ಯ ತಿಳಿಸಿದರೆಬಹಿರಂಗ ಸಂಶೋಧನೆ ಬೇರೆ ಸತ್ಯ ತಿಳಿಸಿದ್ದರೂ ಎರಡೂ ಮಧ್ಯವರ್ತಿ ಮಾನವನಿಗೆ ಜೀವನದಲ್ಲಿ ಅಗತ್ಯವಿದೆ.
ಯಾವುದೂ ಅತಿಯಾಗದೆ ಇತಿಮಿತಿಗಳನ್ನು ಕಾಯ್ದುಕೊಂಡು ಬಳಸಿದಾಗಲೇ ಸಮಾಧಾನಕರ ಜೀವನವಾಗುತ್ತದೆ. ಸಮಾಧಾನ ಇಲ್ಲದ ಮನುಷ್ಯನಿಗೆ ಎಲ್ಲರಲ್ಲಿಯೂ ಎಲ್ಲದರಲ್ಲೂ ಅನುಮಾನವೇ ಇದ್ದಾಗ ನಕಾರಾತ್ಮಕ ವಿಷಯವಾಗುತ್ತಾ ಸತ್ಯ ಹಿಂದುಳಿದು ಧರ್ಮಕ್ಕೆ ಚ್ಯುತಿ ಬಂದಾಗ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಅನ್ಯರನ್ನು ಬೇಡೋದೇ ಕೆಲಸವಾಗುತ್ತದೆ.
ಬೇಡೋನು ದೀನ ಸ್ಮರಿಸೋನೆ ಜಾಣ ಎಂದ ಮಹಾತ್ಮರುಗಳು ಪರಮಾತ್ಮನ ಸ್ಮರಣೆ ಮಾತ್ರದಿಂದ ಸತ್ಯಜ್ಞಾನ ಪಡೆದು ಏನೂ ಬೇಡದೆಯೇ ಜೀವನ್ಮುಕ್ರರಾದರು.
ಎಲ್ಲಾ ಕ್ಷಣಿಕವಾದರೂ ಜೀವನನಡೆಸುವಷ್ಟು ಸಂಸಾರ ಸಾಗಿಸುವಷ್ಟು ಸಂಪಾದನೆ ಮಾಡೋದು ಮಾನವನ ಧರ್ಮ ಕರ್ಮ. ಅದರಲ್ಲಿ ಸತ್ಯ ಧರ್ಮ ವಿದ್ದರೆ ಎಲ್ಲಾ ಶುಭವೇ.ಇಲ್ಲವಾದರೆ ನೀರಿನಲ್ಲಿ ಹೋಮಮಾಡಿದಂತಾಗುತ್ತದೆ. ಒಟ್ಟಿನಲ್ಲಿ ಸತ್ಯ ಯಾರೋ ಹೊರಗಿನಿಂದ ತಿಳಿದರೆ ಸಾಲದು ಅಳವಡಿಸಿಕೊಂಡು ಅನುಭವಿಸುವುದರಿಂದ ನಾವೀಗ ಹೊರಗಿನ ರಾಜಕೀಯ ತಂತ್ರದ ವಶದಲ್ಲಿ ನಮ್ಮ ಸ್ವಾತಂತ್ರ್ಯ ಕಳೆದುಕೊಂಡರೂ ಏನೂ ಸಾಧನೆ ಮಾಡಿದಂತೆ ಬೀಗುತ್ತಿರುವ ಸತ್ಯದ ಇನ್ನೊಂದು ಮುಖದರ್ಶನ ಒಳಗೇ ಆದರೂ ನಮ್ಮ ಸಹಕಾರವೇ ಇದಕ್ಕೆ ಕಾರಣವಾಗಿದ್ದರೆ ಅದರ ಫಲ ಅನುಭವಿಸದೆ ವಿಧಿಯಿಲ್ಲ. ಇದನ್ನು ಸಕಾರಾತ್ಮಕ ದೃಷ್ಟಿ ಎಂದರೆ ಕಣ್ಣಿಗೆ ಕಾಣೋದಿಲ್ಲ ಅರಿವಿಗೆ ಬರುತ್ತದೆ. ನಕಾರಾತ್ಮಕ ಎಂದು ತಿರಸ್ಕರಿಸಿದರೂ ಇನ್ನಷ್ಟು ದೊಡ್ಡದಾಗಿ ಬೆಳೆದು ನಿಲ್ಲುತ್ತದೆ. ಯಾರೂ ತಡೆಯಲಾಗದು. ತಡೆದವರೂ ಇಲ್ಲ.
ಇಂದು ಮಹಾತ್ಮರಾಗಿದ್ದ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಯವರ ಜನ್ಮದಿನ.ಇಬ್ಬರೂ ದೇಶಕ್ಕಾಗಿ ಹೋರಾಟಮಾಡಿದ ದೇಶಭಕ್ತರಾದರೂ ಇಬ್ಬರನ್ನೂ ನೋಡುವ ದೃಷ್ಟಿ ಬೇರೆಯಾಗಿರಲು ಕಾರಣವೇ ನಮ್ಮ ಸ್ವಾರ್ಥ ಪೂರ್ಣ ರಾಜಕೀಯ ಪ್ರಜ್ಞೆ.
ಇಬ್ಬರೂ ಭಾರತಮಾತೆಯನ್ನು ಆಂಗ್ಲರಿಂದ ಬಿಡುಗಡೆಗೊಳಿಸಲು ತಮ್ಮದೇ ಆದ ವಿಶೇಷಜ್ಞಾನದಿಂದ ಹೋರಾಟ ನಡೆಸಿದ್ದಾರೆ. ಗಾಂಧಿಯವರು ಸ್ವಾತಂತ್ರ್ಯ ನಂತರ ಅಧಿಕಾರವಹಿಸಿಕೊಳ್ಳದೆ ಅಮರರಾದವರು.ಶಾಸ್ತ್ರೀಜಿ ದೇಶವನ್ನು ಮತ್ತೆ ಪುನನಿರ್ಮಾಣ ಮಾಡುವ ಕೆಲಸದಲ್ಲಿ ನಿಸ್ವಾರ್ಥ ದಿಂದ ದೇಶದ ಪ್ರಧಾನಮಂತ್ರಿಗಳಾಗಿ ಸರಳ ಜೀವನನಡೆಸಿರುವ ಮಹಾತ್ಮರು.
ಆದರೆ ಇಂದಿನ ದೇಶದ ಸ್ಥಿತಿಗೆ ಕಾರಣವಾಗಿರುವ ಭ್ರಷ್ಟದುಷ್ಟರ ಆಡಳಿತ ಅಧಿಕಾರಕ್ಕೆ ಸಹಕಾರ ನೀಡುತ್ತಾ ಇಷ್ಟು ವರ್ಷ ನಡೆದು ಬಂದಿರುವ ಪ್ರಜೆಗಳ ದೃಷ್ಟಿಯಲ್ಲಿ ಇಬ್ಬರೂ ಬೇರೆಯೇ ಕಾರಣವಿಷ್ಟೆ ಅವರ ಆ ಶ್ರಮದ ಹಿಂದೆ ಇದ್ದ ದೇಶಭಕ್ತಿಯಕೊರತೆಯಿದೆ.
ಹಾಗಾದರೆ ದೃಷ್ಟಿ ದೋಷವೇ ಎಲ್ಲದ್ದಕ್ಕೂ ಕಾರಣವೆಂದರೆ ಅದಕ್ಕೆ ಸರಿಯಾದ ಔಷಧ ಕೊಡುವುದು ಧರ್ಮ.
ಇದೇ ಸುಶಿಕ್ಷಣ ಸತ್ಯ ಧರ್ಮ ದ ನೈತಿಕ ಶಿಕ್ಷಣ. ಮಾನವರಾಗಿ ಮಹಾತ್ಮರಾಗುವ ಶಿಕ್ಷಣ ಕೊಡುವುದೇ ಧರ್ಮ ಕಾರ್ಯ.
ಜ್ಞಾನಕ್ಕೆ ಕೊರತೆಯಿಲ್ಲ ಅದನ್ನು ಬೆಳೆಸುವವರ ಕೊರತೆಯಿದೆ.
ಹೊರಗಿನ ದೃಷ್ಟಿ ಒಳದೃಷ್ಟಿಯನ್ನು ಹಿಂದುಳಿಸಿದರೆ ಅದನ್ನು ಹಣದಿಂದ ಮೇಲೆತ್ತಲಾಗದು.ಹಾಗೇನಾದರೂ ಮಾಡುತ್ತಿದ್ದರೆ ಅಜ್ಞಾನ ಎಂದಿರುವರು.
ಇದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಲು ಸೋತಾಗಲೇ ಅನ್ಯರು ದೇಶದ ಜೊತೆಗೆ ದೇಹವನ್ನು ಆಳುವರು. ಯಾರು ಎಷ್ಟೇ ಆಳಲು ಹೋದರೂ ಅಧರ್ಮಕ್ಕೆ ತಕ್ಕಂತೆ ಫಲವೂ ಇರುತ್ತದೆ. ಹಾಗೆ ಧರ್ಮ ದಿಂದ ಆಳಿದವರೂ ಇಂದಿಗೂ ಅಮರರಾಗಿರುವರೆಂದರೆ ಮರಣವಿಲ್ಲದ ಆತ್ಮವನರಿತರೆ ಸಕಾರಾತ್ಮಕ ದೃಷ್ಟಿ. ಕೇವಲ ದೇಹಕ್ಕೆ ವ್ಯಕ್ತಿಗೆ ಹಣಕ್ಕೆ ಬೆಲೆಕೊಟ್ಟರೆ ನಕಾರಾತ್ಮಕ ಶಕ್ತಿ ಜಾಗೃತವಾಗಿ ಎಷ್ಟು ಇದ್ದರೂ ಸಾಲದು. ಸಾಲವೇ ಅದು.
ಏನಂತೀರ?
ಬರೋವಾಗ ತಂದ ಪಾಪ ಪುಣ್ಯ ದ ಪ್ರಕಾರ ಜೀವನ ನಡೆಯುತ್ತದೆ. ಹೋಗುವಾಗಲೂ ಪುಣ್ಯ ಹೆಚ್ಚಾಗಿದ್ದರೆ ಸದ್ಗತಿ.ಇಲ್ಲವೆಂದರೆ ದುರ್ಗತಿ.
ಎರಡೂ ಕೊಡೋನು ಒಬ್ಬನೇ . ಎರಡಕ್ಕೂ ಕಾರಣ ಜ್ಞಾನವೇ ಆಗಿದೆ. ಕದಿಯಲಾಗದ ಸಂಪತ್ತು ಜ್ಞಾನವಾಗಿದೆ. ಅನುಭವಿಸಿಯೇ ತಿಳಿಯಬೇಕು ತೀರಿಸಬೇಕು ತೀರಬೇಕು...
ಭಗವತಿ
ಬೆಂಗಳೂರು
No comments:
Post a Comment