"ಹೋಗಿ ನಿನ್ನ ದೇವರಾದ ವಿಷ್ಣುವಿಗೇ ಕೇಳು" ಈ ವಾಕ್ಯವನ್ನು ನಾವುಪುರಾಣ ಕಥೆಗಳಲ್ಲಿ ಹೇಳಿದ್ದನ್ನು ತಿಳಿದಿದ್ದೇವೆ. ಅಂದು ದೇವರನ್ನು ನೋಡಲಾಗದವರು ದೇವರಿಗೇ ಗೊತ್ತು ಅವನೇ ಎಲ್ಲದ್ದಕ್ಕೂ ಉತ್ತರ ಕೊಡಬೇಕು..ಎಂದೆಲ್ಲಾ ಹೇಳಿ ತಮ್ಮ ಕೆಲಸ ತಾವು ಮಾಡಿಕೊಂಡು ಹೋಗುತ್ತಿದ್ದರು. ಈಗಲೂ ಇದೇ ನಡೆಯುತ್ತಿದೆ ಆದರೆ ಇಂದು ಸ್ವಯಂ ತಾವೇ ಶ್ರೇಷ್ಠ ಎನ್ನುವ ಅಹಂಕಾರ ಬೆಳೆದಿದೆಯಷ್ಟೆ.
ಇಷ್ಟಕ್ಕೂ ದೇವರನ್ನು ತೋರಿಸುವವರು ಎಲ್ಲಿರುವರು?
ಅಂದಿನ ಮಹರ್ಷಿಗಳು ಮಕ್ಕಳಲ್ಲಿನ ದೈವತ್ವವನ್ನು ಬೆಳೆಸುವ ಶಿಕ್ಷಣ ನೀಡಿ ಸ್ವಯಂ ಗುರುದೇವರಾಗಿದ್ದರು.
ನ್ಯಾಯ ನೀತಿ ಧರ್ಮ ಸಂಸ್ಕೃತಿಯಿಂದ ದೇವರನ್ನು ಕಾಣಬೇಕೆನ್ನುವ ಸನಾತನ ಧರ್ಮ ಇಂದು ಹಿಂದುಳಿದವರನ್ನು ಹಣದಿಂದ ಮೇಲೆತ್ತುವ ಹರಸಾಹಸಕ್ಕೆ ಇಳಿದು ಇನ್ನಷ್ಟು ಅಜ್ಞಾನ ಹೆಚ್ಚು ಮಾಡಿದೆ ಎಂದರೆ ಅರ್ಥ ಆದವರು ಮಾತನಾಡೋದಿಲ್ಲ.ಆಗದವರು ಮಾತಿಗಿಳಿಯಲಾರರು.
ಎಲ್ಲರಮನೆ ದೋಸೆ ತೂತು ಎಂದಂತೆ ನಮ್ಮ ದೇಶದ ಕಾವಲಿಯನ್ನೇ ತೂತು ಮಾಡಿ ಆಳುವವರಿಗೆ ಇವೆಲ್ಲವೂ ಮನರಂಜನೆಯಾಗುತ್ತಿದೆ.
ಅಂದಿನ, ನಚಿಕೇತ,ದ್ರುವ,ಪ್ರಹ್ಲಾದರಂತಹ ಮಹಾಭಕ್ತರು
ಇಂತಹ ಹೇಳಿಕೆಯನ್ನು ಸ್ವಯಂ ಪ್ರಕಾಶಕರಾಗಿ ಮಹಾವಿಷ್ಣುವಿನ ಭಕ್ತರಾದರು. ನಚಿಕೇತನಂತೂ ಯಮನ ದರ್ಶನ ಮಾಡಿ ಧರ್ಮ ಜ್ಞಾನಿಯಾದ .ಇಂತಹ ಪುರಾಣ ಕಥೆ
ಇಂದಿನಮಕ್ಕಳಿಗೆ ತಿಳಿಸುವುದಿರಲಿ ಪೋಷಕರೆ ಕೇಳಿಸಿಕೊಳ್ಳದ ಪರಿಸ್ಥಿತಿ ಯಿದೆ.
ನ್ಯಾಯ ದೇವತೆಗೆ ಕಣ್ಣಿಗೆ ಬಟ್ಟೆ ಕಟ್ಟಿರುವ. ಹಿಂದಿನ ಉದ್ದೇಶ
ನ್ಯಾಯವನ್ನು ಸಮಾನವಾಗಿ ಯಾವುದೇ ಜಾತಿ ಪಂಗಡ ಪಕ್ಷ, ಮತ ಬೇದವಿಲ್ಲದೆ ನೀಡೋದಾದರೆ ಈಗ ನಡೆದಿರೋದು ಏನು?
ಎಲ್ಲಾ ಹಣ ಅಧಿಕಾರ ಸ್ಥಾನಕ್ಕೆ ಸೀಮಿತವಾಗಿ ಎಲ್ಲರನ್ನೂ ನಡೆಸುತ್ತಿರುವ ಮಹಾವಿಷ್ಣುವನ್ನೇ ನ್ಯಾಯ ಕೇಳಿ ಎನ್ನುವ ಮಟ್ಟಿಗೆ ನ್ಯಾಯಾಧೀಶರು ಹೇಳುವ ಮೂಲಕ ಜನರಲ್ಲಿ ಎಚ್ಚರಿಕೆಯ ಘಂಟೆ ಬಾರಿಸಿದ್ದಾರೆನ್ನಬಹುದೆ?
ಒಂದಂತೂ ಸತ್ಯ ಕೆಳಗಿನ ನ್ಯಾಯಾಲಯಕ್ಕೆ ಪರಮಾತ್ಮ ಕಾಣದಿದ್ದರೂ ಮೇಲಿನ ನ್ಯಾಯಾಲಯವೇ ಕೆಳಗಿನವರನ್ನು ನಡೆಸಿರೋದು. ಹೀಗಿರುವಾಗ ಮಾನವರಾದವರು ದೇವರನ್ನು ನ್ಯಾಯದಿಂದ ಗೆಲ್ಲಬೇಕೆ ಅನ್ಯಾಯದಿಂದಲೆ ಎಂದು ಸಾಮಾನ್ಯ ಜ್ಞಾನ ಬಳಸಿದರೆ ಆಗೋದೆಲ್ಲಾ ಒಳ್ಳೆಯದಕ್ಕೆ ಆಗೋದನ್ನು ತಡೆಯಲಾಗದು.
ಭಗವಂತನಿಗೇಕೆ ಆಲಯ? ಭಗವಂತನಿಗೇಕೆ ನ್ಯಾಯ?
ಎಲ್ಲಾ ಬೇಕಾಗಿರೋದು ಮಾನವನಿಗಷ್ಟೆ. ಹೀಗಾಗಿ ಯಾವುದೂ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳದೆ ವಾದ ವಿವಾದಕ್ಕೆ ಇಳಿದರೆ ಇರುವ ಅಲ್ಪ ಸ್ವಲ್ಪ ಶಾಂತಿ ಭಂಗ ಆಗುತ್ತದೆ.
ಹೊರಗಿನ ನ್ಯಾಯಾಲಯದಲ್ಲಿ ಎಷ್ಟು ಹಣಕೊಟ್ಟು ಗೆದ್ದರೂ ಮೇಲಿರುವ ನ್ಯಾಯಾಲಯಕ್ಕೆ ವಿರುದ್ದ ತೀರ್ಪು ನೀಡಿದ್ದರೆ ಶಿಕ್ಷೆ ಆಗೋದನ್ನು ತಡೆಯಲಾಗದು.
ಅವರು ದೇವರೇ ಇರಲಿ ಮಾನವರೆ ಇರಲಿ ಅಸುರರೆ ಇರಲಿ ಎಲ್ಲರಿಗೂ ಒಂದೇ ನ್ಯಾಯಾಲಯ.
ಹಿಂದೆಯೂ ಎಷ್ಟೋ ದೇವತೆಗಳು ಇದೇ ಭೂಮಿಯಲ್ಲಿ ಅವತರಿಸಿದ್ದರೂ ಕಷ್ಟ ನಷ್ಟ ತಪ್ಪಿರಲಿಲ್ಲ. ಈಗ ದೇವರ ಮೂರ್ತಿ ಪುನ: ಪ್ರತಿಷ್ಟಾಪಿಸಲು ನ್ಯಾಯಲಯದ ಅನುಮತಿ ಬೇಡುವ ಪರಿಸ್ಥಿತಿ ಬಂದಿರೋದು ಭಗವಂತನ ಇಚ್ಚೆಯೆ?
ಪರಮಾತ್ಮನ ಇಚ್ಚೆಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲ್ಲಾಡದು. ಅದರಲ್ಲಿ ಹುಲುಮಾನವರೂ ಇರುವರು.
ಈ ರೀತಿಯಲ್ಲಿ ಯಾರೂ ಚಿಂತನೆ ನಡೆಸಲಾರರು. ಹೀಗಾಗಿ ಪ್ರತಿಯೊಂದು ರಾಜಕೀಯರೂಪ ತಳೆದು ಆಳುತ್ತಿದೆ.
No comments:
Post a Comment