ಸ್ತ್ರೀ ಶಕ್ತಿಯನ್ನು ಜ್ಞಾನದಿಂದ ಗೆಲ್ಲಬಹುದೆ
ಹೊರತು ವಿಜ್ಞಾನದಿಂದ ಕಷ್ಟ.
ಪುರಾಣ,ಇತಿಹಾಸದ ಕಥೆಗಳಲ್ಲಿ ನಾವು ಕಾಣುವ ಸ್ತ್ರೀ ಶಕ್ತಿ
ಅವಳ ಜ್ಞಾನವನ್ನು ತೋರಿಸುತ್ತದೆ. ಪುರುಷರು ಜ್ಞಾನಿಗಳಾಗಿ ಧರ್ಮದ ಪರವಾಗಿದ್ದ ಕಾರಣ ಎಷ್ಟೋ ಕಷ್ಟ ನಷ್ಟಗಳನ್ನು ಅನುಭವಿಸಿ ದೈವತ್ವ ಪಡೆದಿದ್ದಾರೆ. ಅಲ್ಲಿಯೂ
ಪುರುಷರ ರಾಜಕೀಯತೆಗೆ ಬಲಿಯಾದ ಸ್ತ್ರೀ ಶಕ್ತಿ ತನ್ನ ರೌದ್ರ
ರೂಪ ತೋರಿಸಿ ಜೀವ ಬಲಿ,ಪ್ರಾಣ ಬಲಿಗಳಾಗಿರೋದನ್ನು
ನಾವು ಕಾಣುತ್ತೇವೆ.
ಅಂದಿನಿಂದ ಇಂದಿನವರೆಗೂ ಭೂಮಿಯನ್ನು ಅರ್ಥ ಮಾಡಿ ಕೊಳ್ಳದೆ ರಾಜಕೀಯ ನಡೆಸಿದವರು ಈಗಲೂ ಅದೇಸರಿ ಎಂದು ವಾದ ಮಾಡಿದರೆ ನಷ್ಟ ಯಾರಿಗೆ?
ಭೂಮಿಯ ಮೇಲೆ ಜೀವನ ಮಾಡಲು ಕಲಿಯದ ಮೇಲೆ ಆಕಾಶದೆತ್ತರ ಹಾರುವ ಅಜ್ಞಾನ ಬೇಕೆ? ಜೀವ ಹುಟ್ಡಿ ಬೆಳೆದು
ನಡೆದು ಸಾಯೋದು ಭೂಮಿಯ ಮೇಲೆ.ಅದನ್ನು ತಿಳಿಯದ
ಮನುಕುಲ ಈಗ ಸಮಸ್ಯೆಗಳಿಗೆ ಪರಿಹಾರ ಸಿಗದೆ ಹೊರಗೆ
ಹುಡುಕುತ್ತಾ, "ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪ ಕ್ಕೆ
ಹುಡುಕಾಡಿದಂತೆ" ಹೊರಗಿನ ರಾಜಕೀಯಕ್ಕೆ ಸ್ತ್ರೀ ಶಕ್ತಿಯ
ಸಹಕಾರ ಪಡೆದು ಹಿರ ನಡೆದರೆ ಜೀವಕ್ಕೆ ಮುಕ್ತಿ ಸಿಗುವುದೆ?
ಪುರಾಣ,ಇತಿಹಾಸದ ರಾಜಾದಿರಾಜರ ಕಥೆಗಳಲ್ಲಿ ಪುರುಷರ
ಹಿಂದೆ ಸ್ತ್ರೀ ಇರುವುದನ್ನು ಉಲ್ಲೇಖಿಸದೆ ಪುರುಷರನ್ನಷ್ಟೇ
ದೇವರು ,ಮಹಾತ್ಮರು ಎಂದರೆ ಅರ್ಧಸತ್ಯವಷ್ಟೆ.ಇದರಲ್ಲಿ
ರಾಜಕೀಯ ಅಡಗಿದೆಯೇ ಹೊರತು ರಾಜಯೋಗವಿಲ್ಲ.
ಈಗಿನ ನಮ್ಮ ಭಾರತದಲ್ಲಿ ಸ್ತ್ರೀ ಯರ ಸಾಧನೆ ಹೊರಮುಖ
ಹೆಚ್ಚಾಗಿರಲು ಕಾರಣವೆ ತನ್ನ ಅಸ್ತಿತ್ವಕ್ಕೆ ಆದ ಹಿಂದಿನ ಕಾಲದ ಅಪಚಾರ,ಅನಾಚಾರ,ಅತ್ಯಾಚಾರ, ಅನಾಧರ,ಅನಾಥ ಪ್ರಜ್ಞೆ ಈ ಜನ್ಮದಲ್ಲಿ ಇದಕ್ಕೆ ಅವಕಾಶ ಸಿಕ್ಕಿದಾಗ ಜೀವ ಬಿಡುವುದೆ?
ಜೀವಕ್ಕೆ ಸ್ತ್ರೀ ಪುರುಷನೆಂಬ ಬೇಧಭಾವ ಆಧ್ಯಾತ್ಮಿಕ ದಲ್ಲಿಲ್ಲ.
ಭೂಮಿಯನ್ನು ಆಳಿದವರಲ್ಲಿ ಇದನ್ನು ಕಾಣಬಹುದು.
ಇನ್ನು ಸಂನ್ಯಾಸಿಗಳು,ಸಾದು,ಸಂತರು . .. ಹೆಣ್ಣು,ಹೊನ್ನು,ಮಣ್ಣು ಮಾಯೆ ಎಂದು ಸಂಸಾರ ತೊರೆದು
ಹೊರನಡೆದರು. ಸಂಸಾರಕ್ಕೆ ಬಂದ ಮೇಲೆ ಕೊನೆಯವರೆಗೆ
ಈಸಬೇಕು ಇದ್ದು ಜೈಸಬೇಕು..ಎಂದಂತೆ ಇವರಲ್ಲಿ ನಾವು
ಕಾಣದೆ ಇದೇ ಸತ್ಯ ಸ್ತ್ರೀ ಬಿಟ್ಟು ನಡೆದರೆ ಮುಕ್ತಿ ಮೋಕ್ಷ ಎಂದು ಪುರುಷರಿಗೆ ಸಹಕರಿಸುವ ಸಮಾಜ ,ಅದೇ ಸ್ತ್ರೀ
ಸಂಸಾರ ತೊರೆದು ಆಶ್ರಮ ಸೇರಿದರೆ ಅಧರ್ಮ ಎನ್ನುತ್ತಾರೆ.
ಅಂದರೆ, ಇಲ್ಲಿ ಕೇವಲ ಲಿಂಗ ಬೇಧ ಮಾತ್ರ ಕಾಣುತ್ತೇವೆ. ಜೀವ ಹಾಗು ಆತ್ಮ ಇಬ್ಬರಿಗೂ ಒಂದೇ ನ್ಯಾಯ ಒದಗಿಸಿದ್ದರೂ ಭೂಮಿ ಮೇಲೆ ಇದು ನಡೆಯದ ಕಾರಣವೆ
ಇಂದಿನ ಸಮಾಜದಲ್ಲಿ ಹೊರಗಿನ ವಿರುದ್ದ ಹೋರಾಟ
ಹೆಚ್ಚಾಗಿದೆ. ಇದನ್ನು ಜ್ಞಾನದಿಂದ ಸರಿಪಡಿಸೋ ಬದಲು ಹಣ
ದಿಂದ ಸರಿಪಡಿಸಿದರೆ ಅಜ್ಞಾನ ಇನ್ನಷ್ಟು ಬೆಳೆದು, ಸಂಸಾರ ಬೀದಿಗೆ ಬರುತ್ತದೆ.
ಮನೆ,ಮಾಧ್ಯಮ, ಮಠ ಇದರಲ್ಲಿರುವ ಮಾನವರಲ್ಲಿ ಮನೆಯ ಒಳಗಿನ ಸ್ತ್ರೀ ಯನ್ನು ಅರ್ಥ ಮಾಡಿಕೊಳ್ಳದೆ ಅವಳ ವಿರುದ್ದ ಮಾಧ್ಯಮ ಕ್ಕೆ ಹೋದರೆ ಮಠಗಳಾದರೂ
ಏನು ಮಾಡಲಾಗದು.
ಮನೆಯ ಲಕ್ಮಿ ಯನ್ನು ಅಲಕ್ಷ್ಯ ಮಾಡಿ, ಮಾಧ್ಯಮಗಳಲ್ಲಿ
ಬರುವ ಮಹಾಲಕ್ಮೀಯ ಅವತಾರ ಹಾಕಿಕೊಂಡು ನಾಟಕ
ಮಾಡುವವರನ್ನು ನೋಡಿ, ಮಠ ಮಠಗಳಲ್ಲಿ ದೇವರನ್ನು
ಬೇಡಿಕೊಂಡಿದ್ದರೆ ಹೊರಗಿನ ಲಕ್ಮಿ ಒಳಗೆ ಬಂದರೂ ಮನೆ
ಒಳಗಿರುವ ಲಕ್ಮಿಯ ಕೋಪ ಹೆಚ್ಚಾಗಿ,ಒಂದು ದಿನ ನಾಶ
ನಷ್ಟ ಕಟ್ಟಿಟ್ಟ ಬುತ್ತಿ.
ಕೊರೊನ ಒಂದು ಕಣ್ಣಿಗೆ ಕಾಣದ ಮಹಾಮಾರಿ. ಇದನ್ನು
ಹಣದಿಂದ ಶಾಂತಗೊಳಿಸಲಾಗದು. ಜ್ಞಾನದಿಂದ ಇದರ
ಹಿಂದಿನ ಆಧ್ಯಾತ್ಮಿಕತೆಯ ಸತ್ಯವನ್ನು ಸೂಕ್ಷ್ಮ ವಾಗಿ ಅರ್ಥ
ಮಾಡಿಕೊಂಡರೆ ಮನೆಯೊಳಗೆ ಹೊರಗೆ ಓಡಾಡುತ್ತಿರುವ ಈ ಸೂಕ್ಷ್ಮ ಶಕ್ತಿಯನ್ನು ಶಾಂತಗೊಳಿಸಬಹುದು. ಆದರೆ ಇದು
ಸಾಕಷ್ಟು ಪ್ರಮಾಣದಲ್ಲಿ ಬೆಳೆಸಿರುವುದರಿಂದ. ಯಾರ ಜೀವ
ಯಾವಾಗ ಹೋಗುವುದೆನ್ನುವುದು ಯಾರೂ ತಿಳಿಯಲು ಕಷ್ಟ. ಜೀವವನ್ನು ಉಳಿಸುವ ನೆಪದಲ್ಲಿ ಮಾನವನ ಜೀವನವೆ ಮುಗಿದರೆ ಆತ್ಮಹತ್ಯೆಯಲ್ಲವೆ? ಸಾವು ನೋವು
ಹೆಚ್ಚಾಗುವುದೆಂದು ಯುದ್ದ ಮಾಡದೆ ಹಿಂದಿನ ರಾಜರು ಕುಳಿತರೆ? ಆದರೂ ಇಲ್ಲಿ ಎಲ್ಲಾ ಸಾಮಾನ್ಯರೆ ಇರುವಾಗ
ಸಾಮಾನ್ಯಜ್ಞಾನದಿಂದಲೂ ಸತ್ಯದರ್ಶನ ಮಾಡಿಸಿ,ಅವರ ಜೀವ, ಜೀವನ ನಡೆಸಲು ಬಿಡುವುದೇ ಧರ್ಮ. ಇದಕ್ಕೆ ಮಧ್ಯೆ
ರಾಜಕೀಯ ತೂರಿಸಿಕೊಂಡು ಮಧ್ಯವರ್ತಿಗಳು, ಮಾಧ್ಯಮ
ಗಳು ತಮ್ಮ ಹೊಟ್ಟೆ ತುಂಬಿಸಿಕೊಂಡರೆ , ಹೊಟ್ಟೆ ಒಳಗೆ ಸೇರಿದ ಕರ್ಮಫಲ ಒಂದು ದಿನ ಅನುಭವಿಸೋದು ಜೀವವೆ. ಇದಕ್ಕೆ ಸಹಕರಿಸಿದ ಸ್ತ್ರೀ ಗೂ ಇದು ತಪ್ಪಿದ್ದಲ್ಲ.
ಅದಕ್ಕೆ ಸ್ತ್ರೀ ಶಕ್ತಿಯ ಜ್ಞಾನವನ್ನು ಹೆಚ್ಚಿಸಲು ಉತ್ತಮವಾದ
ಶಿಕ್ಷಣವನ್ನು ಸ್ತ್ರೀ ಗೆ ಕೊಡಬೇಕು.ಈಗಿನ ಶಿಕ್ಷಣ ವಿಜ್ಞಾನಕ್ಕೆ
ಸೀಮಿತವಾಗಿದೆ. ಜ್ಞಾನವಿಲ್ಲದ ವಿಜ್ಞಾನ ಕುರುಡು ಪ್ರಪಂಚಕ್ಕೆ
ಸಾಕ್ಷಿಯಾಗಿದೆ. ಇಲ್ಲಿ ಯಾರೂ ಯಾರನ್ನೋ ಆಳೋ ರಾಜಕೀಯ ಬಿಟ್ಟು, ನಮ್ಮನ್ನು ನಾವೇ ಆಳಿಕೊಳ್ಳಲು ಸ್ವತಂತ್ರ
ಜ್ಞಾನದ ಅಗತ್ಯವಿದೆ. ಇದನ್ನು ನಾವೇ ಕಷ್ಟಪಟ್ಟು ಪಡೆಯಲು
ಸ್ತ್ರೀ ಯರ ಸಹಕಾರ ಬೇಕೆಂದರೆ ಅವಳಿಗೆ ಜ್ಞಾನ ಬೇಕಿದೆ.
ಸಾಮಾನ್ಯಜ್ಞಾನದಿಂದಲೆ ಈ ಸತ್ಯ ತಿಳಿಯಬಹುದಲ್ಲವೆ?
ನಾವ್ಯಾರು? ಭಾರತೀಯರೆ? ವಿದೇಶಿಗಳೆ?
ಅತಂತ್ರ ಭಾರತಕ್ಕೆ ಸ್ವತಂತ್ರ ಜ್ಞಾನದ ಶಿಕ್ಷಣ ಬೇಕಿದೆ.ಅದು
ನಮ್ಮ ನಮ್ಮ ಮೂಲ ಗುರು ಹಿರಿಯರು ಬಿಟ್ಟು ನಡೆದ ಧರ್ಮ. ಹಾಗು ಕರ್ಮ(ಕಸುಬು) ದ ಒಳಗಿದೆ. ಮನೆಯಲ್ಲಿದ್ದೇ
ಸಾಧ್ಯವಾದರೆ ಬೆಳೆಸಿ, ಇಲ್ಲವಾದರೆ ಕಲಿಸಿ ಬೆಳೆಸಿ.
No comments:
Post a Comment