ನಾನು ಎಲ್ಲರಿಂದಲೂ ಕಲಿತು ಮುಂದೆ ಬಂದೆ.ಅದರಲ್ಲಿ ಒಳ್ಳೆಯದು ಕೆಟ್ಟದ್ದು ಎನ್ನುವುದು ಬಿಟ್ಟು ತನ್ನ ಆತ್ಮಕ್ಕೆ ತೃಪ್ತಿ ಸಿಗುವುದೆ ಎನ್ನುವ ಪ್ರಶ್ನೆ ಯ ಹಿಂದೆ ನಡೆದ ಪರಿಣಾಮ ಇಂದು ಲೇಖಕಿಯಾಗಿ ಗುರುತಿಸಿಕೊಂಡರೂ ಇನ್ನೂ ಕಲಿಕೆಯುವುದು ಸಾಕಷ್ಟು ಇದೆ. ಇದಕ್ಕೆ ಇದನ್ನು ಕಲಿಯುಗ ಎನ್ನುವರು. ಉಸಿರಿರುವವರೆಗೂ ಈ ಕಲಿಕೆಯಲ್ಲಿ ಬದಲಾವಣೆಗಳಾಗುತ್ತಲೇ ಇರುತ್ತದೆ. ಎಷ್ಟು ಓದಿ ಕಲಿತರೂ ಜೀವನ ಪಾಠ ಅರ್ಥ ಆಗಲು ಅದರೊಳಗಿನ ಸತ್ಯ ಅರಿಯಬೇಕಿದೆ. ಅನುಭವ ಎನ್ನುವುದು ನಮಗಷ್ಟೆ ಸತ್ಯದರ್ಶನ ಮಾಡಿಸುವುದರಿಂದ ನಾವೇ ಅನುಭವದಡಿ ಇದ್ದು ಹೋಗಬೇಕಿದೆ.ಯಾರಿಗೂ ಆಗಿರುವ ಅನುಭವ ನಮಗೆ ಆಗದು.ಕಾರಣ ನಮ್ಮದೇ ಆದ ಸ್ವಂತ ಜ್ಞಾನ ಬುದ್ದಿಯ ಮೇಲಿರುತ್ತದೆ. ಒಟ್ಟಿನಲ್ಲಿ ಶ್ರೀ ಗುರುದತ್ತಾತ್ರೇಯರಿಗೆ 24 ಮುಖ್ಯ ಗುರುವಾಗಿದ್ದರಂತೆ ಇವರು ವ್ಯಕ್ತಿಗಳಲ್ಲ ಚರಾಚರದಲ್ಲಿನ ಅಧ್ಬುತ ಶಕ್ತಿ.
ಇರುವೆ ಎನ್ನುವ ಒಂದರಿವಿನ ಜೀವಿಯಿಂದ ಹಿಡಿದು ಮಾನವ ಎನ್ನುವ ಆರನೇ ಅರಿವಿನ ಜೀವಾತ್ಮನವರೆಗೂ ಅರಿವು ಬೆಳೆದಿದೆ ಆದರೆ ಒಂದೇ ತರಹವಿಲ್ಲದ ಕಾರಣದಿಂದ ಒಂದು ಅರಿವಿನ ಇರುವೆಯಲ್ಲಿರುವ ಒಗ್ಗಟ್ಟು ಮಾನವನಲ್ಲಿಲ್ಲದೆ ಅಜ್ಞಾನ ಬೆಳೆದಿದೆ. ಅರಿವಿಗೆ ಯಾವುದೇ ಬೇದವಿಲ್ಲ ಆದರೂ ಇದು ಮಾನವನಲ್ಲಿರುವುದರಿಂದ ಜ್ಞಾನದಕೊರತೆ ಹೆಚ್ಚಾಗಿ ಮಾನವನಲ್ಲಿಯೇ ಇರುತ್ತದೆ.
ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅಂತರಗಳ ಅವಾಂತರಗಳಿಗೆ ನಮ್ಮಲ್ಲಿನ ಬೇಧಭಾವ ಭಿನ್ನಾಭಿಪ್ರಾಯ ಧರ್ಮ ಸೂಕ್ಮವನರಿಯದಂತೆ ಮಾಡಿರೋದೆ ಕಲಿಕೆಯ ವಿಷಯವಾಗಿದೆ. ಹೊರಮುಖದ ಕಲಿಕೆ ಹಣವಿದ್ದರೂ ಸತ್ಯಜ್ಞಾನದಿಂದ ದೂರವಾಗಿರುವುದರಿಂದ ಯಾಂತ್ರಿಕ ಜೀವನವಾಗಿದೆ. ಮಂತ್ರ ತಂತ್ರ ಯಂತ್ರಗಳಿಂದ ಸ್ವತಂತ್ರ ಜ್ಞಾನ ಯಾರಿಗೆ ಸಿಕ್ಕಿದೆಯೋ ದೇವರಿಗೇ ಗೊತ್ತು. ದೇವರನ್ನು ಕಂಡವರಿಲ್ಲ ಕಂಡವರು ತೋರಿಸಲಾಗಿಲ್ಲ.ಅವರವರ ಅಂತರಂಗದ ಶುದ್ದತೆಯಿಂದಷ್ಟೆ ಇದು ಸಾಧ್ಯವಾದಾಗ ಅಂತರ ಬೆಳೆಸಿಕೊಂಡರೆ ಶುದ್ದವಾಗುವುದೆ? ಹಿಂದಿನ ಮಹರ್ಷಿಗಳ ಆಧ್ಯಾತ್ಮಿಕ ಸಾಧನೆಗೆ ಸ್ವತಂತ್ರ ಜ್ಞಾನವೇ ಮೂಲಾಧಾರವಾಗಿತ್ತು.
ಈಗಿದು ಸಹಸ್ರಾರು ವರ್ಷದ ಹಿಂದಿನ ಕಥೆ ಪುರಾಣ ಗ್ರಂಥಗಳ ಮೂಲಕ ತಿಳಿಯುವ ಪ್ರಯತ್ನ ನಡೆಸಿದ್ದರೂ ಮಹರ್ಷಿಗಳ ಕಾಲದವರೆಗೆ ಹೋಗಲಾಗದಿದ್ದರೂ ಸರಿ ವಾಸ್ತವದಲ್ಲಿ ಸತ್ಯ ಧರ್ಮ ವನರಿಯುವಷ್ಟು ಬುದ್ದಿಶಕ್ತಿ ಮಾನವನಿಗಿದೆ. ಅದು ಸಮಾಜಕಲ್ಯಾಣಕ್ಕೆ ಬಳಸಿದರೆ ಜ್ಞಾನೋದಯ. ಕೇವಲ ಸ್ವಾರ್ಥ ಪೂರ್ಣ ರಾಜಕೀಯ ವ್ಯವಹಾರಕ್ಕೆ ಬಳಸಿದರೆ ಅಜ್ಞಾನ. ಇಷ್ಟೇ ಜೀವನ.
No comments:
Post a Comment