ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Wednesday, January 28, 2026

ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ಧರ್ಮದಿಂದ ದುಡಿದು ಗಳಿಸಿದರಲ್ಲಿಯೇ ದಾನ ಮಾಡಿ ಹೋಗಿದ್ದಾರೆಂದರೆ  ಆತ್ಮಜ್ಞಾನದ ನಂತರವೇ  ಪರಮಸತ್ಯದ ಅರಿವಾಗೋದು. ಅಜ್ಞಾನದ ಕಣ್ಣಿಗೆ ಎಲ್ಲವೂ ತನ್ನದೆಂದೇ ಕಾಣೋದು ಮಾಯೆಯಾಗಿದೆ. ಅದಕ್ಕೆ ಶ್ರೀ ಶಂಕರರು ತಿಳಿಸಿದಂತೆ ಜಗತ್ ಮಿಥ್ಯ ಬ್ರಹ್ಮನ್ ಸತ್ಯ. ಸತ್ಯವನ್ನು ಬಿಟ್ಟು ಜಗತ್ತಿನಲ್ಲಿ ನಡೆದರೆ ಭೂಮಿ  ಅತೃಪ್ತ ಆತ್ಮಗಳ ಸಾಮ್ರಾಜ್ಯವಾಗುತ್ತದೆ.
ಹಣಕೊಟ್ಟು ಬಡತನ ತೀರಿಸುವ ಅಜ್ಞಾನ ಬಿಟ್ಟು ಒಳಗಿನ ಸುಜ್ಞಾನ ಬೆಳೆಸೋ ಶಿಕ್ಷಣ ಕೊಟ್ಟು ನಡೆಯಲು ಸಹಕರಿಸಿದರೆ  ಸ್ವಂತ ಬುದ್ದಿ ಜ್ಞಾನ ಸ್ವಾತಂತ್ರ್ಯ ಎಲ್ಲವೂ ಆಸ್ತಿಯಾಗಿರುತ್ತದೆ.
ಕಾಲ ಬಂದಾಗ ನಮಗೆ ಸೇರಬೇಕಾಗಿದ್ದು ಸೇರುತ್ತದೆ.ಇದು ಜ್ಞಾನವೂ ಆಗಿರುತ್ತದೆ. ತಾಳ್ಮೆ ಇರಬೇಕಷ್ಟೆ.
ಯೋಗಿ ಬಯಸಿದ್ದು ಯೋಗಿಗೆ ಭೋಗಿ ಬಯಸಿದ್ದು ಬೋಗಿಗೆ ಎನ್ನುವುದು ಸತ್ಯ. ಯೋಗದಿಂದ ಋಣ ಕಳ ಎಸ್ ದರೆ ಭೋಗದಿಂದ ಋಣ ಹೆಚ್ಚುವುದಷ್ಟೆ ವ್ಯತ್ಯಾಸ.

Sunday, January 25, 2026

ಸತ್ಯಾನ್ವೇಷಣೆಗೆ ಆತ್ಮಾವಲೋಕನ ಅಗತ್ಯವಿದೆ.

ಜೀವನದಲ್ಲಿ ಸ್ವತಂತ್ರ ವಾಗಿ ಸತ್ಯಾನ್ವೇಷಣೆ ಮಾಡೋದು ಕಷ್ಟ.ಸತ್ಯವನ್ನು ಒಳಗೆ ಅನುಭವಿಸಲೂ  ಕಷ್ಟ. ಹೊರಗೆ ನೋಡಲೂ ಕಷ್ಟ. ಕಾಣದ ಸತ್ಯ ಕಾಣುವ ಸತ್ಯಕ್ಕಿಂತ ಬಹಳ ಆಳ ಅಗಲ ಎತ್ತರ ಇರುವುದರಿಂದ  ಸತ್ಯ  ಮರೀಚಿಕೆಯಂತಿರುತ್ತದೆ. ಎಲ್ಲೋ ಒಮ್ಮೆ ಅನುಭವಕ್ಕೆ ಬಂದರೂ ಹಿಡಿದಿಡಲಾಗದು. ಹೀಗಾಗಿ ಎಷ್ಟೋ ಮಹಾತ್ಮರು ಸಾದುಪುರುಷರು ಸತ್ಯವನ್ನು  ತೋರಿಸಲಾಗದೆ ಮುಂದೆ ಹೋಗಿರುವರು. ಹಾಗಾದರೆ ಸತ್ಯ ಯಾವುದು ಎಲ್ಲಿದೆ ಎಂದು ಪ್ರಶ್ನೆ ಮಾಡೋದೇ ತಪ್ಪೆ? 
ತಪ್ಪು ಪ್ರಶ್ನೆ ಮಾಡೋದರಲ್ಲಿಲ್ಲ  ತೋರಿಸಲಾಗದ್ದನ್ನು  ನೋಡಿದೆ ಎನ್ನುವುದು ತಪ್ಪು. ಅನುಭವಿಸಿರೋದನ್ನು ಹೇಳಬಹುದಷ್ಟೆ ಆದರೆ ಅಂತಹ ಅನುಭವ ಎಲ್ಲರಿಗೂ ಆಗಲೇಬೇಕು ಆಗುತ್ತದೆ ಎನ್ನಲಾಗದು. 
ದೇವರ ವಿಷಯದಲ್ಲೂ ಇದೇ ನಡೆದಿದೆ. ದೈವತ್ವಕ್ಕೆ ಇತಿಮಿತಿಗಳಿಲ್ಲ ಇದು ಯಾವ ರೂಪದಲ್ಲಿ ಯಾರಲ್ಲಾದರೂ  ಇರಬಹುದು. ಹಾಗಂತ ಅವರೆ ದೇವರು ಎನ್ನಲಾಗದು.
ವ್ಯಕ್ತಿಗಿಂತ ಶಕ್ತಿ ದೊಡ್ಡದು. ಆ ಶಕ್ತಿ ದೈವೀಕ ,ಅಸುರಿ ಮಾನವೀಯ ಗುಣಗಳನ್ನು ಹೊಂದಿರುವಾಗ  ಅವರವರ ಕಾಯಕ ನಡೆ ನುಡಿಯಲ್ಲಿ  ಕಂಡರೂ  ಅದೂ ಯಾವ ರೂಪ ತಾಳಬಹುದೆನ್ನುವ  ಸ್ಪಷ್ಟವಿರದು. ಕೊನೆಯುಸಿರಿರುವರೆಗೂ ಮಾನಸಿಕ ಬದಲಾವಣೆ ಮನುಷ್ಯನಿಗಾಗುತ್ತದೆ.

ಒಬ್ಬ ಸಾಮಾನ್ಯ ವ್ಯಕ್ತಿ  ತನ್ನ ಸಾತ್ವಿಕ ಗುಣದಿಂದ ದೈವತ್ವಕ್ಕೆ ಏರಬಹುದು.ತಾಮಸಿಕ ಗುಣದಿಂದ  ಅಸುರರಾಗಬಹುದು .
ಹಾಗಾಗಿ ಇರುವ ಒಂದು ಸತ್ಯವ ಹಿಡಿದವರು ದೇವರೆಡೆಗೆ ನಡೆದರೆ  ಅರ್ಧ ಸತ್ಯ ಮಾನವನನ್ನು  ಎರಡೂ ಕಡೆ ಎಳೆಯಿತು.ಅಸತ್ಯವಂತೂ  ತೀರಾ ಕೆಳಮಟ್ಟದವರೆಗೆಳೆದು  ಅಜ್ಞಾನ ಬೆಳೆಸಿತು.‌ಹೀಗಾಗಿ ಸತ್ಯವೇ ದೇವರೆಂದರು. ಅದು ಆತ್ಮವಿಶ್ವಾಸ ಆತ್ಮಜ್ಞಾನ ಆತ್ಮಾವಲೋಕನ ದೆಡೆಗೆ  ನಡೆಸಿ ಆಧ್ಯಾತ್ಮ  ಸಾಧನೆಯಾಯಿತು. ಆಧ್ಯಾತ್ಮ  ಸಾಧನೆ ಅಂತರಂಗದ ಶುದ್ದಿಯಿಂದಾದರೆ  ಆಧ್ಯಾತ್ಮ ವಿಜ್ಞಾನ.
ಭೂಮಿಯ ಮೇಲಿದ್ದೇ  ಆಕಾಶಕಾಯ ಗ್ರಹ ನಕ್ಷತ್ರಗಳ ಚಲನ ವಲನಗಳನ್ನು ತಿಳಿಸೋದಕ್ಕೆ ಆತ್ಮಜ್ಞಾನಿಗಳಿಗೆ‌ಮಹರ್ಷಿಗಳಿಗೆ 
ಸಾಧ್ಯವಾಗಿದೆ ಎಂದರೆ  ಒಳಗಿರುವ ಆತ್ಮವೇ ದೇವರು. ಇದು ಅಸುರರೊಳಗಿದ್ದರೂ  ಸರಿ ಸುರರಲ್ಲಿದ್ದರೂ ಸರಿ ಪರಮಾತ್ಮನೊಬ್ಬನೆ  ಎಲ್ಲರನ್ನೂ ನಡೆಸೋದೆನ್ನುವುದೇ ಅಧ್ವೈತ. ಅಣು ರೇಣು ತೃಷಕಾಷ್ಟ ಪರಿಪೂರ್ಣ ಗೋವಿಂದ. ಎಂದರೆ ಅಣುಗಾತ್ರದ ಈ ಜೀವಾತ್ಮ ನಿಗೆ ಮೋಕ್ಷ ಸಿಗಲು ಗೋವಿಂದನ ನೆನೆದರಾಯಿತು. ಇದಕ್ಕೆ ಮೋಹದ ಕ್ಷಯವಾಗಬೇಕಿದೆ.

ಸ್ಮರಣೆಯೊಂದೇ ಸಾಲದೆ ಗೋವಿಂದನಾ....ನಾಮ ಒಂದೇ ಸಾಲದೇ.. ಎಂದು ದಾಸಶ್ರೇಷ್ಟರು ಹೇಳಿರುವರು.
ಪರಮಸತ್ಯ ಪರಮಾತ್ಮನ ಸತ್ಯ ಒಂದೇ ಆಗಿದ್ದರೂ  ನಾಮ ಹಲವು. ಒಂದೇ ನಾಮವಹಿಡಿದರೂ ಒಂದೇ ಸತ್ಯ.

Friday, January 23, 2026

ಸಾಮಾನ್ಯಜ್ಞಾನ ಮಾನವನಿಗೆ ಅತ್ಯಗತ್ಯ

ಸಾಮಾನ್ಯ ಜ್ಞಾನದಿಂದ ಸಾಮಾನ್ಯ ಪ್ರಜೆಯಾಗಿ ಸಾಮಾನ್ಯರಂತೆ ನಡೆಯುವುದೇ ಪ್ರಜಾಪ್ರಭುತ್ವದ ವಿಶೇಷ ಜ್ಞಾನ.ಆದರಿದು ಕಷ್ಟಪಡುವ ಸ್ಥಿತಿಯಲ್ಲಿದೆ ಎಂದರೆ ನಮ್ಮ ಸಹಕಾರ ಅದಮಾನ್ಯರಿಗೆ ವಿಶೇಷ ವ್ಯಕ್ತಿಗಳಿಗೆ  ವಿಜ್ಞಾನಕ್ಕೆ ನೀಡುತ್ತಾ ನಮ್ಮನ್ನು ನಾವರಿತು ನಡೆಯಲಾಗದಿರುವುದೇ ಕಾರಣ.
ಇಂದಿಗೂ ಮಕ್ಕಳು ಮಹಿಳೆಯರಲ್ಲಿ ಅಡಗಿರುವ ಈ ಸಾಮಾನ್ಯ ಜ್ಞಾನಕ್ಕೆ ಪೂರಕವಾದ ಸಹಕಾರ ಸ್ವಾತಂತ್ರ್ಯ ವಿಲ್ಲ. ಮನೆಯೊಳಗಿನ ಗೃಹಿಣಿಯ ಸಾತ್ವಿಕತೆಗೆ ಬೆಲೆಕೊಡದವರು ಹೊರಗಿನ ಮಹಿಳೆಯರಿಗೆ ಬೆಲೆಕೊಡುವರು ಎಂದರೆ ಆತ್ಮಕ್ಕೆ ಬೆಲೆಯಿಲ್ಲ ಹಣಕ್ಕಿದೆ. 
ಇಲ್ಲಿ   ಭೂಮಿಯನ್ನು ಆಳೋದಕ್ಕಾಗಿಯೇ ಹರಸಾಹಸ ಮಾಡುವ ರಾಜಕೀಯವಿದೆ.ಆದರೆ ಭೂಮಿಗೆ ಬಂದ ಉದ್ದೇಶದ ಜ್ಞಾನವಿಲ್ಲದವರ ಹಿಂದೆ ‌ನಡೆದವರೆ ಹೆಚ್ಚಾಗಿ  ಭೂ ಭಾರ ಹೆಚ್ಚಾಗಿದೆ. ಭೂ ಕಂಪನದಿಂದ ಎಷ್ಟೋ ಜೀವ ಹೋಗುತ್ತದೆಂದರೆ  ಭೂಮಿಯನ್ನು  ಕಾಣುವ  ದೃಷ್ಟಿ ಬದಲಾಗಬೇಕಿದೆ.  ಭೂಮಿ ಒಂದು ಮಾಧ್ಯಮವಷ್ಟೆ.ಇದು ಮನುಕುಲಕ್ಕೆ ಆಶ್ರಯ ಕೊಟ್ಡಿರುವಾಗ ಅದರೊಂದಿಗೆ ಸಹಕರಿಸುತ್ತಿರುವ ಎಲ್ಲಾ ದೈವೀಕ ಶಕ್ತಿಯನ್ನು  ಆರಾಧಿಸುವುದು ಅಗತ್ಯವಿದೆ.  ಆದರೆ ಆರಾಧನೆಯು  ಸ್ವಾರ್ಥ ಅಹಂಕಾರದೆಡೆಗೆ ಸಾಗಿದರೆ ಭೂಕಂಪ,ಪ್ರಕೃತಿ ವಿಕೋಪಕ್ಕೆ ಜೀವಬಲಿಯಾಗುತ್ತದೆ. ಹೀಗಾಗಿ ಇರೋದೊಂದೆ ಭೂಮಿಯಲ್ಲಿ  ಜೀವನದ ಸತ್ಯಾಸತ್ಯತೆಯನರಿಯಲು ಸಾಮಾನ್ಯ ಜ್ಞಾನ ಮಾನವನಿಗೆ ಅಗತ್ಯವಿದೆ.
ಒಂದೆಡೆ ದೈವಶಕ್ತಿ ಇನ್ನೊಂದು ಕಡೆ ಭೋಗದೆಡೆಗೆ ಸೆಳೆಯುವ ಅಸುರ ಶಕ್ತಿಯ ನಡುವಿರುವ ಮಾನವನಿಗೆ ತನ್ನ ಶಕ್ತಿಯ ಸದ್ಬಳಕೆಯಾಗುವುದೋ ದುರ್ಭಳಕೆ ಆಗುವುದೋ ಎನ್ನುವ ಸಾಮಾನ್ಯ ಪ್ರಜ್ಞೆ ಇದ್ದರೆ  ಇತಿಮಿತಿಯಲ್ಲಿ  ಎರಡೂ ಶಕ್ತಿಯನರಿತು ಜೀವನ ನಡೆಸಬಹುದು. ಯಾವುದೇ ಇರಲಿ ಅತಿಯಾದರೆ ಗತಿಗೇಡು.ಅತಿಯಾದ ಆತ್ಮವಿಶ್ವಾಸ ವೂ ದಾರಿತಪ್ಪಿಸಬಹುದು. ಅಹಂಕಾರವೂ ಪಾತಾಳಕ್ಕಿಳಿಸಬಹುದು. ಇದನ್ನರಿತ ಮಾನವ ಪ್ರತಿ ಹೆಜ್ಜೆ ಮುಂದೆ ಇಟ್ಟಾಗ ಹಿಂದಿನ ಹೆಜ್ಜೆಯ ಗುರುತನ್ನು ನೆನಪಿಟ್ಟುಕೊಂಡರೆ ಹಿಂದಿರುಗಿ ಬರಬಹುದು.  ಹಿಂದೂಗಳ ಈ ಸ್ಥಿತಿಗೆ  ಅಪಾರ್ಥ ಮಾಡಿಕೊಂಡು ಮುಂದೆ ಓಡಿರೋರು ಕಾರಣ. ಓಡಿದವರೂ ಒಮ್ಮೆ ನಿಂತು ಆತ್ಮಾವಲೋಕನ ಮಾಡಿಕೊಂಡಿರಬಹುದು.ಆದರೆ ಕಾಲ ಮಿಂಚಿ ಹೋದಾಗ ಚಿಂತಿಸಿ ಫಲವಿಲ್ಲ. ಇದೀಗ ನಮಗೆ ಪುರಾಣ ಇತಿಹಾಸದ ಕಥೆ ಹೇಳುತ್ತದೆ. ಧರ್ಮ ಅಧರ್ಮದ  ಹೋರಾಟದಲ್ಲಿ ಮೊದಲು ಅಧರ್ಮದ ಬಲ ಹೆಚ್ಚಾಗಿ ಕಂಡರೂ ಕೊನೆಯಲ್ಲಿ ಗೆಲುವು ಧರ್ಮದ್ದೇ ಆಗಿರುವಾಗ ಈಗಲೂ ಸಾಮಾನ್ಯರಿಗೆ ಧರ್ಮ ದ ಹಾದಿಯಲ್ಲಿ ನಡೆಯಲು  ಸಹಕರಿಸಿದರೆ ಉತ್ತಮ. 
ಯಾರೋ ದೊಡ್ಡದಾಗಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದಾರೆಂದರೆ ಜನಬಲ ಹಣಬಲ ವೆಲ್ಲವೂ ಸಾಮಾನ್ಯರದ್ದೇ ಆಗಿರುತ್ತದೆ. ಹೆಸರು ಸ್ಥಾನ ಪದವಿ ಪಟ್ಟ ಮಾತ್ರ ಆಯೋಜಕರದ್ದು  ಎಂದಾಗ ಅಪರೋಕ್ಷವಾಗಿ ಪರೋಕ್ಷವಾಗಿ  ಸಹಕರಿಸಿರುವ ಜನರನ್ನು ಕಾಣುವ ದೃಷ್ಟಿ ಹೇಗಿರಬೇಕು? ಪ್ರಜಾಪ್ರಭುತ್ವದ. ಪ್ರಜಾಶಕ್ತಿಯನ್ನು ಸಾತ್ವಿಕವಾಗಿ  ನೋಡೋದಕ್ಕೂ ನಮ್ಮಲ್ಲಿ ಸತ್ವಗುಣವಿರಬೇಕು. ರಾಜಕೀಯದೆಡೆಗೆ ಎಳೆದು  ಮಹಿಳೆ ಮಕ್ಕಳನ್ನು ಹೊರಗೆ ತರುವುದರಿಂದ ಜನಸಂಖ್ಯೆ  ಕಂಡರೂ ಭಕ್ತರ ಸಂಖ್ಯೆ ಇರದು. ಇದೇ ಕಾರ್ಯಕ್ರಮ ಮನೆಯೊಳಗೆ ಮಾಡುವ ಶಕ್ತಿ ಸಹಕಾರವಿದ್ದರೆ ಎಲ್ಲರ‌ಮನೆಯೂ ದೇವಾಲಯವೇ. ಹಾಗೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಶಿಕ್ಷಣ ದಾಸೋಹವಿದ್ದರೆ  ಆತ್ಮನಿರ್ಭರ. ಕೇವಲ ಹೊಟ್ಟೆ ತುಂಬಿಸುವ ಕ್ಷಣಿಕ ಸುಖದ ಅನ್ನದಾಸೋಹ ಎಲ್ಲಾ ಕ್ಷೇತ್ರ ಮಾಡುತ್ತದೆ. ಆದರೆ ಜ್ಞಾನದಾಸೋಹಕ್ಕೆ ಸಾಮಾನ್ಯ ಜ್ಞಾನ ಅಗತ್ಯವಿದೆ.
ಆಗಿಹೋಗಿದ್ದನ್ನು ಕೆದಕಿ ಗಾಯ ಮಾಡಿ ಹುಣ್ಣು ಮಾಡಿಕೊಳ್ಳುವ ಬದಲು ಅದಕ್ಕೆ ನಮ್ಮ ಸಹಕಾರ ಎಷ್ಟಿತ್ತು ಯಾಕಿತ್ತು ಎಂಬ ಪ್ರಶ್ನೆ ಮಾಡಿಕೊಳ್ಳಲು  ನಮಗೆ ಸಮಯವಿಲ್ಲ ಎಂದಾಗಲೇ  ಪರರು ನಮ್ಮನ್ನು ಆಳೋದು.
ಇಲ್ಲಿ ಪರಕೀಯರಿಗೆ ಕೊಡುವ ಗೌರವ ಸ ಹಕಾರ ನಮ್ಮವರಿಗಿಲ್ಲ. ಎಂದರೆ ಹಣದಿಂದ ಪರರು ಕಾಣುವರು.ನಮ್ಮವರ  ಗುಣಜ್ಞಾನ ಕಾಣದೆ ಆಳುವವರು ನಮ್ಮವರೆನಿಸಿಕೊಂಡವರೆ. ಇದರಿಂದಾಗಿ ಮೂಲವೇ ಅರ್ಥ ಆಗದೆ ರೆಂಬೆಕೊಂಬೆಗಳನ್ನು ಹಿಡಿದು  ಜೋತಾಡಿದರೆ ಒಮ್ಮೆ ಕೆಳಗೆ  ಬಿದ್ದು ಹೋಗೋದು ಸಾಮಾನ್ಯಜ್ಞಾನ.ಇರೋವಾಗಲೇ ಮೂಲವನರಿತರೆ  ವಾಸ್ತವದಲ್ಲಿ ಎಷ್ಟು ಬೇಕೋ ಅಷ್ಟು ನಮ್ಮಲ್ಲಿದೆ.ಅದನ್ನು ಸದ್ಬಳಕೆ ಮಾಡಿಕೊಳ್ಳುವ ಜ್ಞಾನವೂ ಇದೆ. ಆದರೂ ಅದನ್ನು ಬಿಟ್ಟು ಹೊರಬಂದರೆ ಅಧೋಗತಿ.ಎಲ್ಲಾ ಋಣದ ಲೆಕ್ಕಾಚಾರ
ಋಣ ನಮ್ಮವರದ್ದೋ ಅನ್ಯರದ್ದೋ? ಶಿಕ್ಷಣವೇ ಅನ್ಯರದ್ದಾದರೆ  ನಮ್ಮ ಜ್ಞಾನ ಬೆಳೆಯುವುದೆ?
ಬದಲಾವಣೆ ಜಗದ ನಿಯಮ ಎಂದಾಗ ಸಾಮಾನ್ಯರಂತೆ ಬದುಕುವ ಕಲೆ ಇದ್ದರೆ ಇದ್ದಲ್ಲಿ ನಿಧಾನವಾಗಿ ಬದಲಾಗಬಹುದು.

Thursday, January 22, 2026

ಭಯದ ನಿವಾರಣೆ ಸಾಧ್ಯವೆ?

ಭಯ ಭಕ್ತಿ ಇರಬೇಕು .ಆದರೆ ಯಾವುದಕ್ಕೆ ಯಾರಲ್ಲಿ ಎನ್ನುವ ಅರಿವಿರಬೇಕು. ಅರಿವು ಎಂದರೆ ತಿಳುವಳಿಕೆ ಜ್ಞಾನ ಎಂದಾಗ  ಎಲ್ಲರಲ್ಲಿಯೂ ತಿಳುವಳಿಕೆಯಿದೆ. ಕೆಲವರಿಗೆ ಹೊರಜಗತ್ತಿನ ಅರಿವು ಹೆಚ್ಚಾದರೆ ಕೆಲವರಿಗೆ ಒಳಜಗತ್ತಿನ ಅರಿವಿರುತ್ತದೆ. ಇವೆರಡರ ನಡುವೆ ನಮ್ಮ ಜೀವನ ಸಾಗುತ್ತಿದೆ.
ಯಾವಾಗಿದರ ಅಂತರ ಬೆಳೆದು ಮಧ್ಯವರ್ತಿಗಳ ಅರಿವಿನ ರಾಜಕೀಯಕ್ಕೆ ಜೀವನ ಬಲಿಪಶುವಾಗುವುದೆನ್ನುವುದರ ಅರಿವಿರದು. ಹೀಗಾಗಿ ಭಯೋತ್ಪಾದನೆ  ಹೆಚ್ಚಿಸುವವರು ಹೆಚ್ಚಾಗಿ ಮಧ್ಯವರ್ತಿಗಳೇ ಆಗಿರುವರು.
ಮಗು ಜನ್ಮತ: ಉತ್ತಮ  ಗುಣ ಹೊಂದಿದ್ದರೂ ಅದನ್ನು ಬೆಳೆಸುವ ಪೋಷಕರಲ್ಲಿ ಅಂತಹ ಗುಣ ಬೆಳೆಸುವ ಅಥವಾ ಗುರುತಿಸುವ ಜ್ಞಾನವಿಲ್ಲವಾದರೆ ಮಕ್ಕಳಿಗೆ ಭೂತ ದೆವ್ವ ಗಳ ನೆಪದಲ್ಲಿ  ತಮ್ಮೆಡೆ ಸೆಳೆದುಕೊಂಡು  ಸ್ವತಂತ್ರ ಬುದ್ಧಿಯಿಂದ  ಬೆಳೆಯದಂತೆ ಮಾಡುವುದೇ ಹೆಚ್ಚು. ಕಷ್ಟ ನಷ್ಟ ಬಂದಾಗ  ಸಹನೆಯಿಂದ  ಧೈರ್ಯದಿಂದ ಮುಂದೆ ಹೋಗುವುದಕ್ಕೂ ಆಗದೆ  ಸುಮ್ಮನಿರಲೂ ಆಗದೆ ಹೊರಗಿನ ಜಗತ್ತಿನಲ್ಲಿ ಬೇಡುವ ಸ್ಥಿತಿ ಬರುತ್ತದೆಂದರೆ ಇಲ್ಲಿ  ಭಯ ಒಳಗೇ ಇದ್ದು  ಒಳಗಿನ  ಶಕ್ತಿಯನ್ನು ಕಾಣದಂತೆ  ಮಾಡುತ್ತದೆ. ಕಷ್ಟದಿಂದ  ಬಿಡುಗಡೆ ಪಡೆಯಲು ಹೊರಗೆ ಬಂದವರಿಗೆ ಹಿಂದಿರುಗಿ ಹೋಗದಂತೆ ಭಯಪಡಿಸುತ್ತದೆ. 
ಇಂದಿನ ಹೆಚ್ಚಿನ  ಯುವಪೀಳಿಗೆಗೆ ತಮ್ಮ ಭವಿಷ್ಯದ ಭಯ ಕಾಡುತ್ತದೆ. ಕೆಲಸ ಸಿಗುವುದೋ ಇಲ್ಲವೋ ಸಿಕ್ಕರೂ ನಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವಷ್ಟು  ಸಂಪಾದನೆ ಆಗಬಹುದೆ? ಆದರೂ  ಮುಂದೆ ‌ಮದುವೆಯ ನಂತರದಲ್ಲಿ ಸಂಸಾರ ನಡೆಸಲು ಸಾಧ್ಯವೆ? ಮಕ್ಕಳ ಖರ್ಚು ವೆಚ್ಚ ಎಲ್ಲಾ ಒಬ್ಬರ ದುಡಿಮೆಯಿಂದ ಕಷ್ಟ...ಹೀಗೇ  ಭವಿಷ್ಯವನ್ನು ಕೇವಲ ಭೌತಿಕದಲ್ಲಿದ್ದೇ ಚಿಂತನೆ ನಡೆಸುವುದರಿಂದ ಭಯ ಹೆಚ್ಚಾಗುತ್ತಾ ಹೋಗುತ್ತದೆ.ಹಾಗೇ ಸಮಸ್ಯೆಗಳೂ ಎದುರಾಗುತ್ತದೆ. ಹಿಂದೆ ಒಂದು ಕುಟುಂಬದಲ್ಲಿ ಹಲವು ಸದಸ್ಯರಿದ್ದರೂ  ಹೊಟ್ಟೆ ಬಟ್ಟೆಗೆ ಕೊರತೆಯಾಗದಂತೆ ದುಡಿದು ಜೀವನ‌ನಡೆಸುತ್ತಿದ್ದರು.ಈಗ ಒಂದೇ ಮಗುವನ್ನು ಸಾಕಿ ಸಲಹಲು ಹೊರಗಿನವರ ಸಹಕಾರದ ಜೊತೆಗೆ ಸರ್ಕಾರದ ಸಾಲ ಸೌಲಭ್ಯಗಳನ್ನು ಪಡೆದರೂ ಊಟಕ್ಕೆ ಸಮಯವಿಲ್ಲ ಬಟ್ಟೆಗೆ ಗತಿಯಿಲ್ಲ ಎಂದರೆ  ಸಾಲದ ಪ್ರಭಾವ.ಅಜ್ಞಾನದಲ್ಲಿ  ಹೊರಗಿನ ಜಗತ್ತಿಗೆ ದಾಸರಾದಷ್ಟೂ ಒಳಗಿನ ಜಗತ್ತಿನ ದಾಸರ ಪರಿಚಯವಾಗದೆ ಆಸೆ ಬೆಳೆಯುತ್ತದೆ. ಆಸೆಯೇ ದು:ಖಕ್ಕೆ ಕಾರಣ ಎನ್ನುವ ಬದಲು ಅತಿಆಸೆಯೇ  ದುರಾಸೆಯೇ ದು:ಖಕ್ಕೆ ಕಾರಣವೆನ್ನಬಹುದು.

ಇದಕ್ಕೆ ಬದಲಾಗಿ ನಮ್ಮ ಜೀವನದ ಗುರಿ ಏನು ಯಾಕೆ ಭೂಮಿಗೆ ಬಂದೆವು? ಏನು ಮಾಡಿದರೆ ನಮ್ಮ ಋಣ ತೀರುವುದು.ಯಾವುದು ಸತ್ಯ ಮಿಥ್ಯ? ಎಲ್ಲಿಂದ ಎಲ್ಲಿಗೆ ಹೋಗಬೇಕು? ದೈವತ್ವ ಎಂದರೇನು? ದೇವರಿರೋದೆಲ್ಲಿ? ಧರ್ಮ ಯಾವುದು? ಅಧರ್ಮ ಎಲ್ಲಿದೆ? ..ಈ ರೀತಿಯಲ್ಲಿ ಆಧ್ಯಾತ್ಮಿಕದ ಜಗತ್ತಿನೆಡೆಗೆ ನಡೆದವರ ಭಯ ಕಡಿಮೆಯಾಗಿ ಗುರುಹಿರಿಯರಲ್ಲಿ ಭಯ ಭಕ್ತಿ ಯೋಗದಿಂದ ಬೆಳೆದಾಗ  ಒಳ ಮನಸ್ಸು ಜಾಗೃತವಾಗುತ್ತಾ  ಜೀವಭಯ ಬಿಟ್ಟು ಧರ್ಮ ಸತ್ಯದ ರಕ್ಷಣೆಗಾಗಿ  ಮುನ್ನುಗ್ಗುವ ಮಹಾತ್ಮರಾಗುವರು.
ಒಟ್ಟಿನಲ್ಲಿ ಜೀವನದಲ್ಲಿ ಹೋರಾಟ ಇರುತ್ತದೆ. ಹೋರಾಡಲು ದೈರ್ಯ ಅಗತ್ಯವಿದೆ. ಆದರೆ ಅನಾವಶ್ಯಕ ಕೆಳಮಟ್ಟದ ಆಸೆ ತೀರಿಸಿಕೊಳ್ಳುವ ಹೆಣ್ಣು ಹೊನ್ನು ಮಣ್ಣನ್ನು ವಶಪಡಿಸಿಕೊಳ್ಳಲು‌  ನಡೆಸುವ ಹೋರಾಟದಿಂದ  ಪಾರಮಾರ್ಥಿಕ ಸುಖ ಸಿಗದೆ ಜೀವ ಹೋಗುತ್ತದೆ. ಅಂತಹ ಹೋರಾಟ ಕಣ್ಣಿಗೆ ಕಾಣುವುದರಿಂದ ಜನಬಲ ಹಣಬಲ ಅಧಿಕಾರಬಲ ಎಲ್ಲಾ ಸಿಗಬಹುದು ಆದರೆ ಜ್ಞಾನದ ಬಲ ಇಲ್ಲದೆ ಧೈರ್ಯದಿಂದ  ಹೋರಾಟ ನಡೆಸಿದರೂ ಅಧರ್ಮ  ಆಗಿದ್ದರೆ  ವ್ಯರ್ಥ ಪ್ರಯತ್ನವಾಗುತ್ತದೆ.
ಎಲ್ಲರೂ ಒಮ್ಮೆ ಸಾಯೋರೇ ಎಲ್ಲರಲ್ಲಿಯೂ ದೈರ್ಯ ಶೌರ್ಯ ಇದ್ದರೂ ಅದನ್ನು ಯಾವುದಕ್ಕೆ ಬಳಸಬೇಕೆಂಬ ಸುಜ್ಞಾನ ಎಲ್ಲರಲ್ಲಿಯೂ ಇರದು.‌ಹೀಗಾಗಿ ಅಜ್ಞಾನದಲ್ಲಿ ಧೈರ್ಯದಿಂದ  ಹೋರಾಟ ಹಾರಾಟ‌ ಮಾರಾಟ ಮಾಡಿದರೂ  ಕಷ್ಟನಷ್ಟ ತಪ್ಪಿದ್ದಲ್ಲ.

ನಮ್ಮಲ್ಲಿ ಎರಡೂ ರೀತಿಯ ಶಕ್ತಿಗಳಿವೆ. ಒಂದು ದೈವಶಕ್ತಿ ಇನ್ನೊಂದು ಅಸುರಿ ಶಕ್ತಿ.‌ಅಸುರಿಶಕ್ತಿಯ ವಿರುದ್ದ ದೈವೀ ಶಕ್ತಿ ಹೋರಾಡುವಾಗ  ಅಸುರರ ದೈಹಿಕಬಲ ಹೆಚ್ಚಬಹುದು ಸುರರ ಜ್ಞಾನಬಲ ಹೆಚ್ಚಬಹುದು. ಗೆಲ್ಲುವುದು ಜ್ಞಾನಬಲ.
ಕಾರಣವಿಷ್ಟೆ  ಶಾಶ್ವತ ವಾದ ಜ್ಞಾನದಿಂದ ಆತ್ಮಬಲ ಹೆಚ್ಚುವುದು. ಅಜ್ಞಾನದಿಂದ ಕುಸಿಯುತ್ತದೆ. ಹಿಂದಿನ ಯುದ್ದಗಳಲ್ಲಿ  ಇದನ್ನು  ನಾವು ತಿಳಿಯುತ್ತೇವೆ. 
ವಾಸ್ತವದಲ್ಲಿ ನಮ್ಮ ದೇಶದ  ಪ್ರಮುಖ ಪಕ್ಷಗಳು ಒಬ್ಬರಿಗೊಬ್ಬರು ವಿರುದ್ದದ ಹೇಳಿಕೆಗಳನ್ನು ಕೊಟ್ಟುಕೊಂಡು ಜನರಲ್ಲಿಯ  ಆತ್ಮವಿಶ್ವಾಸ ಕುಗ್ಗಿಸುವ ಕೆಲಸ ಮಾಡುತ್ತಿರುವರೋ ಅಥವಾ ಹೆಚ್ಚಿಸುವ‌ಕೆಲಸ ಮಾಡುತ್ತಿರುವರೋ ಎನ್ನುವುದೂ ನಮ್ಮ ಜ್ಞಾನದ ಮೇಲೇ ನಿಂತಿದೆ.ಇಲ್ಲಿ ರಾಜಕೀಯ ಯಾವತ್ತೂ ಹೊರಗೆ ಕಾಣುತ್ತದೆ.
ಜನರನ್ನು ಭಯಪಡಿಸಿ ಆಳೋದೇ ಬೇರೆ, ಆತ್ಮವಿಶ್ವಾಸ ಹೆಚ್ಚಿಸಿ ಸ್ವಾವಲಂಬನೆ ಕಡೆಗೆ ನಡೆಸೋದೇ ಬೇರೆ.ಆತ್ಮನಿರ್ಭರ ಎಂದರೆ ನಮ್ಮ ಆತ್ಮವಿಶ್ವಾಸ ದಿಂದ ಭಯವಿಲ್ಲದೆ  ದುಡಿದು ಸ್ವತಂತ್ರ ಜೀವನ ನಡೆಸೋದಾದರೆ ನಮ್ಮಲ್ಲಿ  ಯಾರ ಶಿಕ್ಷಣವಿದೆ? ಯಾರ ಕೈಕೆಳಗೆ ದುಡಿಯುತ್ತಿರುವುದು? ದೇಶ ಯಾರ ಕೈಯಲ್ಲಿದೆ? ನಮ್ಮನೆ ಮನಸ್ಸು  ಯಾರಿಂದ ನಡೆದಿದೆ? ಯಾವ ಕಡೆ ನಮ್ಮ ನಡೆ ನುಡಿಯಿದೆ? ಹೀಗೆ ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳುವಷ್ಟು ಸಮಯ ನಮಗಿದೆಯೆ? ಇದ್ದರೆ ಉತ್ತರವು ನಮ್ಮೊಳಗೇ ಸಿಗುತ್ತದೆ. ನಾವೀಗ ಭಯಪಡುತ್ತಿರುವುದು ನಮ್ಮವರಿಗೋ ಅಥವಾ ಹೊರಗಿನವರಿಗೋ?
ನಮ್ಮವರಿಂದಲೇ  ಭಯ ಎಂದರೆ ಯಾವ. ಕಾರಣಕ್ಕಾಗಿ ಭಯ ಸೃಷ್ಟಿ ಮಾಡಲಾಗಿದೆ? ದೇವರು ಧರ್ಮ. ಜಾತಿ ಪಕ್ಷಗಳ ರಾಜಕೀಯತೆಯಿಂದ  ನಮ್ಮ ಸ್ವಂತ ಬುದ್ದಿ ಜ್ಞಾನ ಬೆಳೆಯಿತೆ?
ಇಲ್ಲವೆ? ಹಾಗಾದರೆ ಭಯದಿಂದ ನಮಗೆ ನಾವೇ ಮೋಸ ಹೋಗಿರುವುದು ಸತ್ಯ.ಸತ್ಯ ಒಂದೇ ಇರೋದು.ಆ ಸತ್ಯದಿಂದ ದೂರವಾಗಿರುವ‌ಜೀವಾತ್ಮನಿಗೆ ಹಿಂದಿರುಗಲು ಭಯ ಎಂದರೆ  ಅಜ್ಞಾನವಾಗುತ್ತದೆ. ಆಗೋದನ್ನು ತಡೆಯಲಾಗಿಲ್ಲ, ಆಗಿದ್ದೆಲ್ಲಾ ಒಳ್ಳೆಯದೇ  ಎಂದಾಗ  ಭಯ ಬಿಟ್ಟು ಒಳ್ಳೆಯ ಕಾರ್ಯಕ್ಕೆ  ಒಗ್ಗಟ್ಟಿನಿಂದ ಮುಂದೆ ನಡೆದು ಸಹಕರಿಸುವಷ್ಟು ಧೈರ್ಯ  ಬೆಳೆಯಬೇಕಿದೆ.
ಸತ್ಯ ಬಿಟ್ಟು ಧರ್ಮ ಬಿಟ್ಟು  ದೂರ ಹೋಗೋದು ಸುಲಭ.ಆದರೆ‌ಹಿಂದಿರುಗೋದು‌ ಬಹಳ ಕಷ್ಟ. ಸುಲಭವಾದಕ್ಕೆ ಸಹಕರಿಸಿ ಕಷ್ಟಕ್ಕೆ ಸಹಕರಿಸದಿದ್ದರೆ  ಅದೇ ಮುಂದೆ ಇನ್ನಷ್ಟು ಕಷ್ಟ ನಷ್ಟಕ್ಕೆ ಕಾರಣವಾಗುತ್ತದೆ. 
ಕಲಿಗಾಲದ ಪ್ರಭಾವದಿಂದಾಗಿ ಸತ್ಯವನ್ನು ಸುಳ್ಳೆಂದು ಅದರ ಸುಳ್ಳನ್ನು   ಸತ್ಯವೆಂದು ಸಾಭೀತು ಮಾಡಲು ಧೈರ್ಯದಿಂದ ಮುಂದೆ ಹೋದರು. ಹಿಂದೆ ಇದ್ದವರೂ ಅವರನ್ನು ಅನುಸರಿಸಿ ಕೊನೆಯಲ್ಲಿ  ಕಷ್ಟ ನಷ್ಟವಾದಾಗ ಹಿಂದಿರುಗಲಾಗದೆ  ಇದೇ ಸತ್ಯ ಎಂದು ವಾದ ಮಾಡಿ ಸೋತವರು  ಇನ್ನೊಬ್ಬರ ನ್ನು ಭಯಪಡಿಸಿ  ಆಳಲು ಹೋದರೆ  ಮಂಗ ತಾನು ಕೆಟ್ಟು ವನವೆಲ್ಲಾ ಕೆಡಿಸಿದಂತೆ ಎಂದಾಗುತ್ತದೆ.
ಎಷ್ಟಾದರೂ ಮಂಗನಿಂದಲೇ ‌ ಮಾನವನಾಗಿರುವಾಗ  ನೆಗೆಯುತ್ತಾ ಹೋಗುವುದು ಸಹಜ. ಆ ನಗೆತದಿಂದ  ಹೊಟ್ಟೆ ತುಂಬಿಸಿಕೊಳ್ಳಬಹುದು   ಅದರೊಂದಿಗೆ ರೋಗವೂ ಇರುವ ವಿಷಯಜ್ಞಾನವನರಿತರೆ  ನಿಜವಾದ ಭಕ್ತಿಯೋಗವಾಗುತ್ತದೆ.
ವಾನರ ಸೇನೆಯ ಸಹಾಯದಿಂದ ಶ್ರೀ ರಾಮಚಂದ್ರನು  ಗೆದ್ದನು  ಎಂದರೆ ವಾನರರ  ಸಂಘಟನೆಯು ಧರ್ಮದ ಪರವಾಗಿತ್ತು. ಹೀಗಾಗಿ ಭಯವಿಲ್ಲದೆ  ಅಸುರ ಶಕ್ತಿಯ ವಿರುದ್ದ ಹೋರಾಡಿ ಗೆದ್ದರು. ಈಗಿನ ಸೇವಕರು ಭ್ರಷ್ಟರ ಅಧೀನದಲ್ಲಿದ್ದು  ಭಯದಿಂದ ಜೀವನ‌ ನಡೆಸೋ ಸ್ಥಿತಿಗೆ ಬರಲು ಕಾರಣ ಅಧರ್ಮಕ್ಕೆ ನೀಡಿದ ಸಹಕಾರ. ಸತ್ಯ ಕಠೋರವಾಗಲು ಕಾರಣವೇ ಅದನ್ನು ನಿರ್ಲಕ್ಷ್ಯ ಮಾಡಿ ಲಕ್ಷ ಲಕ್ಷ  ಹಣನುಂಗಿರುವ ಭ್ರಷ್ಟಾಚಾರವಾಗಿದೆ. ಭ್ರಷ್ಟ ದುಷ್ಟರನ್ನು    ಅನುಸರಿಸಿದರೆ  ಭಯೋತ್ಪಾದಕರೂ ಬೆಳೆಯುವರು. 
ಏನನ್ನು ಬೆಳೆಸುವೆವೋ ,ಹರಡುವೆವೋ, ಹಂಚುವೆವೋ, ನೋಡಿ ಕೇಳಿ ಹೇಳುವೆವೋ ಅದೇ ಹೊರಗೆ ಒಳಗೆ ತುಂಬಿ ಆಳೋದು. 
ಸಾಧನೆ  ಅಂತರಂಗದ ಶುದ್ದಿಯೆಡೆಗೆ‌ ನಡೆದರೆ ಭಯವಿರದು.
ಬಹಿರಂಗದ ಶುದ್ದಿ  ಭಯದಿಂದ ಮಾಡಲಾಗದು.