ಸದವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು

🌷*ಸ್ಪೂರ್ತಿ ಕಿರಣ*🌷  *ಪ್ರತಿಯೊಂದು ಅವಕಾಶವನ್ನೂ ಸ್ವೀಕರಿಸಬೇಕಿಲ್ಲ.ಪ್ರತಿಯೊಂದು ಆಹ್ವಾನಕ್ಕೂ ಸ್ಪಂದಿಸಬೇಕಿಲ್ಲ.ಪ್ರತಿಯೊಂದು ಬೇಡಿಕೆಯನ್ನೂ ಪೂರೈಸಬೇಕಿಲ್ಲ.ಪ್ರತಿಯೊ...

Wednesday, September 16, 2026

ಸದವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು

🌷*ಸ್ಪೂರ್ತಿ ಕಿರಣ*🌷 
*ಪ್ರತಿಯೊಂದು ಅವಕಾಶವನ್ನೂ ಸ್ವೀಕರಿಸಬೇಕಿಲ್ಲ.ಪ್ರತಿಯೊಂದು ಆಹ್ವಾನಕ್ಕೂ ಸ್ಪಂದಿಸಬೇಕಿಲ್ಲ.ಪ್ರತಿಯೊಂದು ಬೇಡಿಕೆಯನ್ನೂ ಪೂರೈಸಬೇಕಿಲ್ಲ.ಪ್ರತಿಯೊಂದು ಸಾಧ್ಯತೆಯನ್ನೂ ಬೆನ್ನಟ್ಟಬೇಕಿಲ್ಲ.ಎಲ್ಲವನ್ನೂ ‘ಹೌದು’ ಎನ್ನುವುದೇ ಜೀವನದ ವಿವೇಕವಲ್ಲ. 'ಯಾವಾಗ, ಯಾವುದಕ್ಕೆ ‘ಇಲ್ಲ’ ಎನ್ನಬೇಕೆಂಬ ಅರಿವೇ ನಿಜವಾದ ಪ್ರಬುದ್ಧತೆ. “ಮಾತಿನಿಂದ ಉತ್ತರಿಸಬೇಕಾದರೆ ಬುದ್ಧಿವಂತಿಕೆ ಬೇಕು, ಮಾತಿನ ಮೌಲ್ಯ ಅರಿಯಲು ವಿವೇಕ ಬೇಕು.ಆದರೆ ಮೌನದಿಂದ ಉತ್ತರಿಸಬೇಕಾದರೆ, ಬುದ್ಧನಂತಹ ತಾಳ್ಮೆ ಮತ್ತು ಜ್ಞಾನ ಬೇಕು.ಪ್ರತಿ ಪ್ರಶ್ನೆಗೂ ಉತ್ತರಿಸುವ ಅಗತ್ಯವಿಲ್ಲ,ಕೆಲವೊಮ್ಮೆ ಮೌನವೇ ಅತ್ಯುತ್ತಮ ಉತ್ತರ. ಮಾತು ಗೆಲ್ಲಿಸುವುದು ಬುದ್ಧಿವಂತಿಕೆಯನ್ನು, ಮೌನ ಗೆಲ್ಲಿಸುವುದು ನಮ್ಮ ವ್ಯಕ್ತಿತ್ವವನ್ನು.*

ಅವಕಾಶವಂಚಿತರೆಂದು ಅಜ್ಞಾನಿಗಳನ್ನು ಎತ್ತಿ ಮೇಲಕ್ಕೆ ಕೂರಿಸಿ ಅಧಿಕಾರ ಕೊಟ್ಟರೆ ಅವಕಾಶದ ದುರ್ಭಳಕೆ ಮಾಡಿಕೊಂಡು ಆಳೋದು ಸತ್ಯ. ಎಲ್ಲರಲ್ಲಿಯೂ ಪರಮಾತ್ಮನಿದ್ದಾನೆ. ಎಲ್ಲರೂ ಮಾನವರು ಎಲ್ಲರೂ  ಒಂದೇ  ಎನ್ನುವುದು  ಸುಲಭವೇ ಆಗಿದ್ದರೂ ಎಲ್ಲರ ಜ್ಞಾನ ಒಂದೇ ಆಗಿರದು. ಎಲ್ಲರ‌ಮನಸ್ಸು ಒಂದೇ ಆಗಿರದು ಎಲ್ಲರೂ ದೇವರಾಗಿರೋದಿಲ್ಲ. ಎಲ್ಲರೂ ಕೆಟ್ಟವರೂ ಆಗಿರೋದಿಲ್ಲ. ಅವರವರ ಜನ್ಮಕ್ಕೆ ಕಾರಣವೇ ಅವರ ಹಿಂದಿನ ಕರ್ಮಫಲವಾಗಿರೋದು ಸತ್ಯವೆನ್ನುತ್ತದೆ ಆಧ್ಯಾತ್ಮ.
ಇಂದು ಉಚ್ಚ ಕುಲದಲ್ಲಿದ್ದವ ಮುಂದೆನೀಚಕುಲಕ್ಕೆ ಇಳಿಯಬಹುದು ಅಥವಾ ಇನ್ನಷ್ಟು ಎತ್ತರದ ಲೋಕಕ್ಕೆ ಹೋಗಬಹುದು. ಅದು ಅವನ ಇಂದಿನ ಧರ್ಮ ಕರ್ಮ ವನ್ನು ಅವಲಂಬಿಸಿರುತ್ತದೆ.
ರಾಜಕೀಯದಲ್ಲಿ  ಇಳಿದಾಗ ನಮ್ಮಲ್ಲಿ ಅಹಂಕಾರ ಸ್ವಾರ್ಥ ಜಾಗೃತವಾಗುತ್ತದೆ. ಇದು ಅಸುರಿಗುಣವಾಗಿ ಪರಿವರ್ತನೆ ಆದಾಗ ಅಸುರರು ಮೇಲಿನಲೋಕಕ್ಕೆ ಏರಬಹುದೆ? 
ಅವಕಾಶವನ್ನು ಆಧ್ಯಾತ್ಮಿಕ ದೃಷ್ಟಿಯಿಂದ  ಅಳೆದು ತೂಗಿದರೆ ಅದು ಅದೃಷ್ಟ ವಾಗಿರುತ್ತದೆ. ಆದರೆ  ಭೌತಿಕದೆಡೆಗೆ ನಡೆದಷ್ಟೂ ದುರಾದೃಷ್ಟವೆ . ಇಲ್ಲಿ ಎಷ್ಟು ಎತ್ತರದ ಸ್ಥಾನ‌ಪಡೆದರೂ ಅವರಿಗೆ ಶತ್ರುಗಳೇ ಹೆಚ್ಚು. ಶತ್ರು ಯಾವಾಗ ಕೆಳಗೆಳೆಯುವರೋ ಗೊತ್ತಿರದು. ಹಾಗಾಗಿ  ನಿಧಾನವಾಗಿ   ಅವಕಾಶ, ಆಹ್ವಾನ, ಬೇಡಿಕೆಗಳ ಹಿಂದಿರುವುದು ಯಾವ ಶಕ್ತಿ ಎನ್ನುವ  ವಿವೇಕ ಇದ್ದರೆ ಅದನ್ನು ಸದ್ಬಳಕೆ ಮಾಡಿಕೊಂಡು  ನಡೆಯಬಹುದು.ಭೂಮಿ ಇರೋದು ನಡೆಯುವುದಕ್ಕೆ  ಮೇಲಕ್ಕೆ ಹಾರಿದರೂ ಕೆಳಗೆ ಬೀಳಬೇಕಲ್ಲವೆ? ಮೇಲಕ್ಕೆ ಏಣಿ ಹತ್ತಿ ಕುಳಿತರೂ ಏಣಿಗೆ ಭೂಮಿಯೆ ಆಸರೆ ಅಲ್ಲವೆ? ಮಾನವನು ಭೂ ಸಾಲ ತೀರಿಸುವ ಸತ್ಕರ್ಮದಲ್ಲಿದ್ದರೆ ಅದೇ ಸಂತೃಪ್ತಿ ನೀಡುತ್ತದೆ. ಇದಕ್ಕೆ ಬೇಕು ಸುಜ್ಞಾನದ ವಿಜ್ಞಾನ. ಅಜ್ಞಾನದ ವಿಜ್ಞಾನ ಕೇವಲ ತಾತ್ಕಾಲಿಕ ಸುಖ ನೀಡುತ್ತದೆ ಅಷ್ಟೇ ದು:ಖವೂ ನೀಡುತ್ತದೆ. ‌ಎರಡರ ಮಧ್ಯೆ ಇರುವ ಮಾನವನಿಗೆ  ಮೊದಲು ಸಾಮಾನ್ಯ ಜ್ಞಾನ ಅಗತ್ಯವಿದೆ.

No comments:

Post a Comment