ಮೊದಲಿನಿಂದಲೂ ನನಗೆ ದೇವರ ಬಗ್ಗೆ ಪ್ರಶ್ನೆಯಿತ್ತು. ಎಲ್ಲಾ ದೇವರನ್ನು ಸರಿಸಮಾನವಾಗಿ ಕಾಣಲು ಯಾಕೆ ಸಾಧ್ಯವಿಲ್ಲ? ಯಾಕೆ ನಮಗಮ ದೇವರು ಬೇರೆ ನಿಮ್ಮ ದೇವರು ಬೇರೆ ಎನ್ನುವ ಅಂತರ ಹೀಗೇ ಪ್ರಶ್ನೆಗೆ ಉತ್ತರ ಕೇಳೋದಕ್ಕೆ ಯಾವ ಗುರುವೂ ಇರಲಿಲ್ಲ. ಬೆಳೆದಂತೆಲ್ಲಾ ಗುರುಗಳ ಬಗ್ಗೆಯೇ ಅ ಬೇರೆ ಬೇರೆ ಅಭಿಪ್ರಾಯ ಇರೋದನ್ನು ನೋಡಿದಾಗ ಇದರ ಒಳಗಿನ ಸತ್ಯಾಸತ್ಯತೆಯನ್ನು ತಿಳಿಯುವ ಕುತೂಹಲ ಅದರೆ ತಿಳಿಯಲಾಗದ ಪರಿಸ್ಥಿತಿ. ಯಾರೇನೇ ಹೇಳಿದರೂ ಒಗ್ಗಟ್ಟಿನ ಕೊರತೆ ಒಂದೇ ಕಾಣುತ್ತಿತ್ತು.ಅದರಲ್ಲಿ ಲಿಂಗಬೇಧ ಜಾತಿ ಬೇದ ಧರ್ಮ ಬೇಧವಿದ್ದರೂ ಮುಖ್ಯವಾಗಿದ್ದದ್ದು ಶ್ರೀಮಂತ ಬಡವರ ನಡುವಿನ ಅಂತರದಲ್ಲಿ ನಡೆಯುತ್ತಿರುವ ವ್ಯವಹಾರಿಕ ಬೇಧಭಾವ.
ಪ್ರತಿಯೊಂದು ಜಾತಿ ಕುಲ ಗೋತ್ರವನ್ನು ಹಿಡಿದು ಅಂತರ ಬೆಳೆಸಿದ ಹಲವು ಶಾಸ್ತ್ರ ಸಂಪ್ರದಾಯಗಳಲ್ಲಿ ಸಾಕಷ್ಟು ಜನರ ಮನಸ್ಸು ಹದಗೆಟ್ಟು ದೂರವಾಗಿರೋದನ್ನು ಈಗಲೂನಾವು ಹಿಂದೂಗಳಲ್ಲಿ ಕಾಣುತ್ತಿದ್ದೇವೆಂದರೆ ದೇವರಿರೋದೆಲ್ಲಿ,?
ಹಲವಾರು ಮಹಾತ್ಮರುಗಳು ಇದನ್ನು ಸರಿಪಡಿಸಲು ಜನ್ಮ ತಳೆದು ಜನಸಾಮಾನ್ಯರಲ್ಲಿ ಅಡಗಿರುವ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಕೆಲಸ ಮಾಡಿದ್ದಾರೆ.ಆದರೂ ಈಗಲೂ ಪ್ರಚಾರಕ್ಕೆ ಬಂದರೆ ಸಮಾನತೆ ಆಚರಣೆಗೆ ಹೋದಾಗ ಅಸಮಾನತೆ. ದ್ವಂದ್ವ ದ ಹೇಳಿಕೆಯಿಂದ ಏಕತೆ ಸಮಾನತೆ,ಐಕ್ಯತೆಯನ್ನು ತರಲಾಗದು. ಆದರೂ ನಾವೆಲ್ಲರೂ ಮಾನವರು. ನಮ್ಮ ಮನಸ್ಸನ್ನು ಹೊರಗೆಳೆದು ಒಳಮನಸ್ಸನ್ನು ಹಿಡಿತಕ್ಕೆ ತರುವುದರಲ್ಲಿ ಸೋತಿರುವಾಗ ಒಳಗೇ ಇರುವ ದೈವತ್ವ ದೈವತತ್ವ ರಾಜಕೀಯದ ಮುಖ ಮಾಡಿದರೆ ಪರಮಾತ್ಮನಿಂದ ದೂರವಾದಂತೆ.
ಇಡೀ ವಿಶ್ವವನ್ನು ಆಳೋದು ಅಸಾಧ್ಯ.ವಿಶ್ವವಿಖ್ಯಾತ ಎಂದರೂ ಅರ್ಧ ಸತ್ಯ. ವಿಶ್ವೇಶ್ವರನ ಒಂದು ಸಣ್ಣ ಬಿಂದುವಿಗೇ ಇಷ್ಟು ಶಕ್ತಿಯಿರೋವಾಗ ಆಮಹಾಶಕ್ತಿಯನ್ನು ಅರಿಯುವುದು ಸಾಧ್ಯವೆ?
ಈ ರಹಸ್ಯ ವನರಿತ ನಮ್ಮ ಮಹರ್ಷಿಗಳೂ ಇದೇ ಭೂಮಿಯ ಮೇಲಿದ್ದವರು. ಹಾಗಾದರೆ ಮಹರ್ಷಿಗಳ ಅಧ್ಯಾತ್ಮಿಕ ಸಾಧನೆಗೂ ಮಹಾಜನರ ಭೌತಿಕ ಸಾಧನೆಗೂ ವ್ಯತ್ಯಾಸವೇನು? ಒಂದೇ ಶಕ್ತಿಯ ಎರಡು ಬಿಂದುಗಳ ದೃಷ್ಟಿ ಬೇರೆ ಬೇರೆ ಆದರೂ ಇಬ್ಬರೂ ಸಾಧಕರೆ. ನಿರಾಕಾರ ಬ್ರಹ್ಮನ್ ಸಾಕಾರ ಬ್ರಹ್ಮನ್ ಸೃಷ್ಟಿ ಯಿಂದ ಜಗತ್ತು ನಡೆದಿದೆ.ಕಣ್ಣಿಗೆ ಕಾಣದ್ದು ಸುಳ್ಳಲ್ಲ ಕಾಣೋದು ಶಾಶ್ವತವಲ್ಲ.ಇದನ್ನು ನಮ್ಮ ಸಾಮಾನ್ಯಜ್ಞಾನದಿಂದ ಅರ್ಥ ಮಾಡಿಕೊಳ್ಳಲು ನಾನು ಎನ್ನುವ. ಅಹಂ ಹೋಗಬೇಕೆಂದರು. ಎಲ್ಲಿಯವರೆಗೆ ನಾನಿರುವೆ ಅಲ್ಲಿಯವರೆಗೆ ನನ್ನ ಒಳಗಿದ್ದು ನಡೆಸೋ ಪರಮಶಕ್ತಿ ಕಾಣೋದಿಲ್ಲ ಕಾರಣ ನಿರಾಕಾರ ಆತ್ಮ ಎಲ್ಲೆಡೆ ಇದ್ದರೂ ಕಾಣದು. ಮಹರ್ಷಿಗಳು ಮಹಾತ್ಮರಾಗಿದ್ದರು.
ಚರಾಚರದಲ್ಲಿ ಅಡಗಿರುವ ಈ ಅಣು ಪರಮಾಣುಗಳ ಸಹಕಾರವಿಲ್ಲದೆ ವಿಜ್ಞಾನದ ಸಂಶೋಧನೆಯಾಗಿಲ್ಲವೆಂದರೆ ನಾನು ಯಾರು? ಹಾಗೆ ಪ್ರತಿಯೊಬ್ಬರಲ್ಲಿಯೂ ಅಡಗಿರುವಜೀವಾತ್ಮನು ಅಗೋಚರ ಶಕ್ತಿಯಾಗಿರುವ ಪರಮಾತ್ಮನ ಪ್ರೇರಣೆಯಿಂದ ನಡೆದಿರುವಾಗ ನಾನ್ಯಾರು?
ಎಲ್ಲಾ ಪ್ರಶ್ನೆಗೆ ಉತ್ತರ ಸಿಕ್ಕಿದೆ.ಆದರೆ ನನಗೆ ಒಳಗೇ ಸಿಗದೆ ಹೊರಗಿನಿಂದ ಯಾರೋ ಹೇಳಿದ್ದು ಕೇಳಿದರೂ ಒಳಗೇ ಹೊಕ್ಕಿ ತಿಳಿಯುವವರೆಗೂ ನಮ್ಮ ಅಹಂ ಅಳಿಯದು.
ಅಹಂಕಾರ ಸ್ವಾರ್ಥ ವಿಲ್ಲದೆ ಜೀವನವಿಲ್ಲ ಎಂದರೂ ಎಷ್ಟೋ ಜೀವರಾಶಿಗಳು ನೇರವಾಗಿ ಪ್ರಕೃತಿಯ ಅಧೀನದಲ್ಲಿರುವಾಗ ಅದನ್ನು ನನ್ನದೆಂದರೆ ಸರಿಯಲ್ಲ ಎಂದರು ಮಹಾತ್ಮರು.
ಇದೊಂದು ಅಸುರಿ ಶಕ್ತಿಯಾದ್ದರಿಂದ ಅತಿಯಾದ ನಾನು ಪರಮಾತ್ಮನ ಕಾಣೋದಿಲ್ಲ. ಯೋಗದ ಮೂಲಕವೇ ಇದು ಸಾಧ್ಯ.ಅದರಲ್ಲಿ ಜ್ಞಾನಯೋಗ,ರಾಜಯೋಗ,ಭಕ್ತಿಯೋಗ,ಕರ್ಮ ಯೋಗ.
ಜ್ಞಾನದಿಂದ ಮಾಡಿದ ಕರ್ಮ ದಿಂದಮುಕ್ತಿ ಸಾಧ್ಯ.
ಇದರಲ್ಲಿ ಸತ್ಯಜ್ಞಾನವೇ ಶ್ರೇಷ್ಠ.
ಮಿಥ್ಯಜ್ಞಾನ ತಾತ್ಕಾಲಿಕ ವಷ್ಟೆ ಆದರೂ ಜೀವನನಡೆಸಲು ಇವೆರಡರ ಸಮಾನ ಬಳಕೆ ಅಗತ್ಯ. ಅಂದರೆ ತಾನೂ ಬದುಕಿ ಇತರರನ್ನು ಬದುಕಲು ಬಿಡೋದೆ ಜೀವನ. ತಾನೂ ಸತ್ತು ಇತರರನ್ನು ಸಾಯಿಸೋದರಲ್ಲಿ ಏನಿದೆ? ಸತ್ತರೆ ಧರ್ಮ ಕ್ಕಾಗಿ ಇರಲಿ.
ಜೀವ ಹೋದರೂ ಆತ್ಮ ಶಾಶ್ವತ ವೆಂದಾಗ ಕಾಣದ ಆತ್ಮಶಕ್ತಿಯನ್ನು ಬೆಳೆಸಿಕೊಂಡು ಒಗ್ಗಟ್ಟಿನಿಂದ ಜೀವನ
ನಡೆಸೋದೆ ತತ್ವದ ಗುರಿಯಾಗಿದೆ.