ಸತ್ಯ ಯಾವುದು ಮಿಥ್ಯ ಯಾವುದು ಎನ್ನುವುದರ ಹಿಂದೆ ಬಿದ್ದ ಮೇಲೆ ಸತ್ಯ ಒಪ್ಪಿಕೊಂಡರೆ ಹಣದ ನಷ್ಟ ಮಿಥ್ಯ ಒಪ್ಪಿದರೆ ಹಣದ ಲಾಭ. ಆದರೆ ಎಷ್ಟೋ ನಷ್ಟಗಳ ನಂತರ ಜ್ಞಾನದ ಲಾಭವಾದಾಗ ಸ್ವಲ್ಪ ನೆಮ್ಮದಿ ಶಾಂತಿ.ಆದರೂ ಅನುಭವಿಸಿದ ವಿಚಾರಗಳ ಹಿಂದೆ ಇರುವ ರಾಜಕೀಯತೆ ನೋಡಿದರೆ ಅಸಹ್ಯದ ಜೊತೆಗೆ ಅಸಮಾಧಾನವೂ ಇದೆ.
ಯಾಕಿಷ್ಟು ಸಂಸಾರದಲ್ಲಿ ಸಮಸ್ಯೆ ಎಂದರೆ ರಾಜಕೀಯ ಎನ್ನುವ ಉತ್ತರ ಬರುತ್ತದೆ.
ರಾಜಕೀಯ ಮನೆಮನೆಯೊಳಗೇ ಬೆಳೆದಿರುವಾಗ ಹೊರಗೆ ಸರಿಪಡಿಸಲಾಗದು. ಇಲ್ಲಿ ನಾನೇ ಸರಿ ಎನ್ನುವ ಅಹಂಕಾರ ಸ್ವಾರ್ಥ ವೇ ಮಾನವನ ಅಸುರಿ ಗುಣಕ್ಕೆ ತಕ್ಕಂತೆ ಪಾಠ ಕಲಿಸಿ ಹೊರಗಿನವರು ಬಂದು ಆಳುತ್ತಿರೋದು.
ಕಣ್ಣಿಗೆ ನಮ್ಮ ದೇಶ ಸ್ವತಂತ್ರ. ಆದರೆ ಎಷ್ಟೋ ಭಾರತೀಯರ ಸ್ಥಿತಿ ಅತಂತ್ರವಾಗಿದೆ. ಜನ್ಮಕೊಟ್ಟ ತಾಯಿಯನ್ನೇ ದೂರವಿಟ್ಟು ವಿದೇಶದಲ್ಲಿ ಆರಾಮಾಗಿರುವೆ ಎಂದರೆಕರ್ಮ ಬಿಡುವುದೆ? ಭಾರತೀಯ ಹಿಂದೂಗಳ ಪರಿಸ್ಥಿತಿ ವಿದೇಶದಲ್ಲಿ ಹೇಗಿದೆ ಎನ್ನುವುದನ್ನು ಪ್ರಸಾರ ಮಾಡುವವರು ಸ್ವದೇಶದಲ್ಲಿ ಯಾರ ಕೈಕೆಳಗಿದ್ದಾರೆ ಎಂದು ಗಮನಿಸಲು ಒಳಗಣ್ಣು ತೆರೆಯಬೇಕಷ್ಟೆ. ಋಣವಿದ್ದ ಕಡೆ ಜೀವನ ನಡೆಸಬೇಕು.ಇದು ತಪ್ಪಲ್ಲ.ಆದರೆ ಮೂಲದ ಋಣ ತೀರಿಸದೆ ಹೊರಗಿನವರ ಋಣ ಬೆಳೆಸಿಕೊಂಡರೆ ಹೊರಗಿನವರು ಬಿಡುವರೆ?
ಹಿಂದೆ ಜನರು ಪರದೇಶಿ ಎನ್ನುವಪದವನ್ನು ಬೈಗುಳಕ್ಕೆ ಬಳಸಿದ್ದರು.ಯಾಕೆಂಬುದರ ಅರಿವು ಈಗ ನಮಗಾಗುತ್ತಿದೆ.
ಯಾವುದೋ ಪರಕೀಯರ ಜೀವರಕ್ಷಣೆ ಭಾರತ ಮಾಡಬೇಕಂತೆ ಭಾರತೀಯರ ರಕ್ಷಣೆ ಮಾಡೋರು ಯಾರು?ಭಾರತೀಯ ತತ್ವಜ್ಞಾನಕ್ಕೂ ವಿದೇಶಿ ತಂತ್ರಕ್ಕೂ ಅಂತರ ಬೆಳೆದು ನಮ್ಮವರ ಬುದ್ದಿವಂತಿಕೆ ಜ್ಞಾನವನ್ನು ತಂತ್ರದಿಂದ ಅರ್ಥ ಮಾಡಿಕೊಂಡು ತಮ್ಮ ದೇಶದ ಆಸ್ತಿ ಮಾಡಿಕೊಂಡು ವ್ಯವಹಾರಕ್ಕೆ ಎಳೆದರು. ಪಾಪ ಮಾಡಿದವರು ಇದನ್ನು ಪುಣ್ಯ ಎಂದುಕೊಂಡು ಹೊರ ನಡೆದ ಮೇಲೇ ತಿಳಿದದ್ದು ದೂರದ ಬೆಟ್ಟ ನುಣ್ಣಗೆ ಎಂದು.ಹಾಗಂತ ಎಲ್ಲರಿಗೂ ಸಮಸ್ಯೆ ಎಂದರೆ ತಪ್ಪಾಗಬಹುದು.
ಭಾರತದ ಧರ್ಮ ಸಂಸ್ಕೃತಿ ಭಾಷೆ ಸಾಹಿತ್ಯ ಪ್ರಚಾರ ಹೊರಗೆ ಮಾಡಿರುವುದರಿಂದ ಹಿಂದಿನ ಸನಾತನಧರ್ಮ ಭೂಮಿಯಲ್ಲಿ ಉಳಿದಿದೆ. ಆದರೆ, ಪ್ರಶ್ನೆ ಮೂಲ ಭಾರತದ ಶಿಕ್ಷಣ ವ್ಯವಸ್ಥೆ ಭಾರತದಲ್ಲೇ ಕಡೆಗಣಿಸಲಾಗಿದೆ ಎನ್ನುವ ಸತ್ಯ ಇಷ್ಟು ವರ್ಷ ಗಳಾದರೂ ಇದರ ವಿರುದ್ದ ದ್ವನಿ ಎತ್ತದವರು ಈಗ ಹಿಂದೂ ಧರ್ಮ ಹಾಳಾಗಿದೆ ಎಂದರೆ ನಮ್ಮ ಸಹಕಾರ ಇಲ್ಲದೆ ಏನಾದರೂ ನಡೆದಿದೆಯೆ?
ವೈಜ್ಞಾನಿಕ ಜಗತ್ತನ್ನು ಆಳುವುದು ಸುಲಭ.ಅಧ್ಯಾತ್ಮ ಜಗತ್ತನ್ನು ಆಳಲಾಗದು. ಹೀಗಾಗಿ ರಾಜಕೀಯದಿಂದ ಅಧ್ಯಾತ್ಮ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಕಷ್ಟವೆಂದು ಸಂಸಾರ ತೊರೆದು ಹೋದವರೆಷ್ಟೋ ಮಹಾತ್ಮರು ಪರದೇಶವನ್ನು ನೋಡೋದಿರಲಿ ಕೇಳಿರಲಿಲ್ಲ. ಎಲ್ಲೋ ಕೆಲವು ರಾಜರುಗಳು ಅಖಂಡ ಭಾರತವನ್ನು ಆಳುವಷ್ಟು ಶಕ್ತಿಹೊಂದಿದ್ದರು. ಈಗ ನಾವು ಪ್ರಜಾಪ್ರಭುತ್ವದ ಪ್ರಜೆಗಳಷ್ಟೆ ರಾಜರಲ್ಲ ಆದರೂ ಇಡೀ ದೇಶ ಆಳುತ್ತೇನೆನ್ನುವ ಅಹಂಕಾರ ದಲ್ಲಿ ಒಳಗೇನು ನಡೆಯುತ್ತಿದೆ ಎಂದು ಗೊತ್ತಿಲ್ಲ.
ಕುಣಿಯಬಾರದವ ನೆಲಡೊಂಕು ಎಂದಂತೆ ಪ್ರಜೆಗಳಿಗೆ ಸರಿಯಾದ ಶಿಕ್ಷಣ ನೀಡದವರು ಪ್ರಜೆಗಳೇ ಸರಿಯಿಲ್ಲ ಎನ್ನುವರು. ಮಕ್ಕಳ ತಪ್ಪನ್ನು ತಿದ್ದಬೇಕಾದ ಪೋಷಕರೆ ಮಕ್ಕಳು ದಾರಿತಪ್ಪಿದ್ದಕ್ಕೆ ಸರ್ಕಾರ ಕಾರಣವೆಂದರೆ ಸರಿಯೆ?ಇಲ್ಲಿ ಸಹಕಾರ =ಸರ್ಕಾರ ಒಂದೇ. ಎಲ್ಲಿಯವರೆಗೆ ನಾವು ಹೊರಗಿನ ಭ್ರಷ್ಟ ರಾಜಕೀಯಕ್ಕೆ ಸಹಕರಿಸುವೆವೋ ಅಲ್ಲಿಯವರೆಗೆ ಒಳಗೂ ಭ್ರಷ್ಟಚಾರಿ ಇರುವನು.
ಉಚಿತವಾಗಿ ಎಲ್ಲಾ ಪಡೆದ ಮೇಲೂ ಸಾಲವಿದೆ ಬಡತನವಿದೆ, ರೋಗವಿದೆ, ಸಮಸ್ಯೆಗಳಿವೆ ಎಂದರೆ ಅಜ್ಞಾನ ಮಿತಿಮೀರಿದೆ ಎಂದರ್ಥ.
ಪುರಾಣಗಳಿಂದ ತಿಳಿದ ವಿಷಯಗಳಲ್ಲಿಯೂ ರಾಜಕೀಯ ಇತ್ತು.ಆದರೆ ಅದರಲ್ಲಿ ಧರ್ಮ ತತ್ವವಿತ್ತು.ಯಾವಾಗದು ತಂತ್ರಕ್ಕೆ ಬಳಸಿ ಜನಜೀವನ ಅತಂತ್ರಸ್ಥಿತಿಗೆ ತಲುಪಿತೋ ಆಗ ಯುದ್ದಗಳಾಗಿತ್ತು. ಆದರೂ ಯುದ್ದ ತಡೆಯುವ ಸಂಧಾನ ಕಾರ್ಯ ವಾಗಿತ್ತು. ಆಗೋದನ್ನು ತಡೆಯಲಾಗದು ಎಂದಂತೆ ಲಯಕ್ಕೆ ಯುದ್ದವಾಗಿತ್ತು. ಅದರಿಂದ ಸೃಷ್ಟಿ ಯಾದ ನೋವು ಹಿಂಸೆ ಸಾವುಗಳಿಂದ ಭೂಮಿ ಗಳಿಸಿದ್ದೇನು? ತಾತ್ಕಾಲಿಕ ಭಾರವಷ್ಟೆ. ನಂತರಮತ್ತೆ ಅದೇ ಸೃಷ್ಟಿ ನಡೆದಿದೆ. ಉತ್ತಮ ಶಿಕ್ಷಣದ ಮೂಲಕ ಮಾನವ ಮಹಾತ್ಮನಾಗಬಹುದೆನ್ನುವುದೆ ಭಾರತೀಯ ಶಿಕ್ಷಣದ ಗುರಿಯಾಗಿದೆ. ವಾಸ್ತವದಲ್ಲಿ ನಾವು ತಂತ್ರವಿಲ್ಲದೆ ಸ್ವತಂತ್ರ ಜೀವನನಡೆಸಲು ಕಾಡಿನಲ್ಲಿ ವಾಸ ಮಾಡುವ ಶಕ್ತಿವಂತರಲ್ಲದ ಕಾರಣಕೊನೆಪಕ್ಷ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡು ಅಧರ್ಮ ,ಭ್ರಷ್ಟಾಚಾರ, ಅಸತ್ಯ,ಅನ್ಯಾಯವನ್ನು ತಡೆಯಲಾಗದಿದ್ದರೂ ಸರಿ ಅದಕ್ಕೆ ಸಹಕಾರಕೊಡದಿದ್ದರೆ ಉತ್ತಮ.ಮಕ್ಕಳಿಗೂ ಮನೆಯಲ್ಲಿ ಇದನ್ನು ತಿಳಿಸಿ ತಾವೂ ತಿಳಿದುನಡೆಯಲು ಅವಕಾಶವಿದ್ದರೆ ನಮ್ಮ ಸಂಪಾದನೆಯ ಹಣವನ್ನು ಉತ್ತಮವಾಗಿ ಬಳಸಬಹುದು. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದಾಗದೆ ಲಕ್ಮಿಯನ್ನು ಸರಸ್ವತಿಯ ಜ್ಞಾನ ಸಂಪಾದನೆಗೆ ಬಳಸಿ ಸತ್ಯ ತಿಳಿದರೆ ಆತ್ಮಜ್ಞಾನ ಹೊರಗಿಲ್ಲ ಒಳಗೇ ಇತ್ತು ಎನ್ನುವ ಸತ್ಯದರ್ಶನ. ಇದನ್ನು ರಾಜಯೋಗವೆನ್ನಬೇಕೋ ಜ್ಞಾನಯೋಗವೋ ಭಕ್ತಿಯೋಗವೋ ಕರ್ಮ ಯೋಗವೋಒಟ್ಟಿನಲ್ಲಿ ಯೋಗವಿದ್ದರೆ ಪರಮಾತ್ಮನ ಜ್ಞಾನದ ಭಾಗ್ಯ. ಸರ್ಕಾರದ ಭಾಗ್ಯಗಳಿಂದ ಭೋಗದೆಡೆಗೆ ನಡೆದವರಿಗೆ ಈ ಯೋಗದ ಬಗ್ಗೆ ತಿಳಿಸುವ ಶಿಕ್ಷಣ ಕೊಡಲು ಸಾಧ್ಯವೆ?
ಸ್ವಯಂ ಶಿಕ್ಷಕರೆ ಭೋಗಕ್ಕೆ ತಿರುಗಿದ್ದರೆ ಮಕ್ಕಳ ಪಾಡೇನು?
No comments:
Post a Comment