ದಿನದಲ್ಲಿ ಒಮ್ಮೆಯಾದರೂ ನಿಮ್ಮ ಜೊತೆ ನೀವೇ ಮಾತಾಡಿಕೊಳ್ಳಿ,
ಇಲ್ಲದಿದ್ದರೆ ಈ ಪ್ರಪಂಚದಲ್ಲೇ ಅತ್ಯುತ್ತಮ ವ್ಯಕ್ತಿಯನ್ನು ನೀವು ಕಳೆದು ಕೊಳ್ಳುತ್ತೀರಿ.
- ಸ್ವಾಮಿವಿವೇಕಾನಂದ
ಎಲ್ಲಾ ದ್ಯಾನಗಳಲ್ಲಿ ಶ್ರೇಷ್ಠ ವಾದದ್ದೆ ಮೌನ ದ್ಯಾನ. ಮೌನವಾಗಿರುವಾಗಷ್ಟೆ ನಮ್ಮ ಆತ್ಮಾವಲೋಕನ. ಯಾವುದೇ ಹೊರಗಿನ ದೇವರು,ಧರ್ಮ ದೇಶ ಭಾಷೆ, ಸಂಸ್ಕೃತಿ, ಸಂಪ್ರದಾಯ,ಸಾಹಿತ್ಯ ಸಂಗೀತ ಕಲೆ ಶಿಕ್ಷಣ ಮೌನವಾಗಿ ಬೆಳೆದಿಲ್ಲ ಹಾಗಾಗಿ ಇಂದಿಗೂ ಮಾನವನ ಮಾತೇ ಶಾಸನವಾಗಿ ಮಾತುಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎಂದಂತಾಗಿದೆ.ಹಾಗಾದರೆ ಮಾತಿನಿಂದ ಕೆಲಸ ಆಗೋದಿಲ್ಲವೆ ಎಂದರೆ ಮಾತಿನಿಂದಲೇ ಕೆಲಸ ನಡೆಯೋದು.ಆದರೆ ಅನಾವಶ್ಯಕ ಮಾತು ಹರಟೆ ಚರ್ಚೆ ವಾದ ವಿವಾದಗಳಿಂದ ಕೆಲಸ ಕೆಡುವುದೇ ಹೆಚ್ಚು. ಇಲ್ಲಿ ಅವಶ್ಯಕವಿದ್ದ ಕಡೆ ಮಾತನಾಡೋರು ಕಡಿಮೆ ಅನಾವಶ್ಯಕ ಮಾತನಾಡೋರ ಹಿಂದೆ ಬಿದ್ದವರು ಹೆಚ್ಚು.
ಮಾಧ್ಯಮ ಗಳಲ್ಲಿ ಪ್ರಸಾರವಾಗುವ ಎಷ್ಟೋ ಕಾರ್ಯಕ್ರಮವಾಗಲಿ, ಹೊರಗಿನ ಕಾರ್ಯಕ್ರಮಗಳಲ್ಲಿ ಮಾತನಾಡುವ ಎಷ್ಟೋ ರಾಜಕೀಯ ಭಾಷಣವಾಗಲಿ ,ಹಾಗೆ ಮಕ್ಕಳಿಗೆ ತಿಳಿಸಲಾಗುತ್ತಿರುವ ಎಷ್ಟೋ ವಿಷಯವಾಗಲಿ ಇದರಲ್ಲಿ ಸತ್ಯವೇ ಇರೋದಿಲ್ಲವಾದಾಗ ಇದರಿಂದಾಗಿ ಮಕ್ಕಳ ಭವಿಷ್ಯ ಉತ್ತಮವಾಗುವುದೆ? ಅಥವಾ ನಮ್ಮ ಸಂಸಾರದಲ್ಲಿ ಶಾಂತಿಯಿರುವುದೆ? ಈ ಎಲ್ಲಾ ಪ್ರಶ್ನೆಗೆ ಉತ್ತರ ಕೊಡಬೇಕಾದವರೆ ಮೌನವಹಿಸಿ ನನಗೂ ಇದಕ್ಕೂ ಸಂಬಂಧ ವಿಲ್ಲವೆನ್ನುವಂತಿದ್ದರೆ ಅದ್ವೈತ ವಾಗದು. ಒಟ್ಟಿನಲ್ಲಿ ನಾವೆಲ್ಲರೂ ಮಾತನಾಡುವ ಮನುಷ್ಯರೆ ಆಗಿದ್ದರೂ ಕೆಲವೇ ಕೆಲವರ ಮಾತಿಗೆ ಹೆಚ್ಚು ಸಹಕಾರ ಸಹಾಯ ಪ್ರೋತ್ಸಾಹ ದೊರೆತು ನಿಜವಾಗಿಯೂ ಮೌನವಾಗಿರುವವರ ಸತ್ಯ ಹೊರ ಬರದಂತೆ ತಡೆಯುವುದರಿಂದ ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ಸತ್ಯ ಕೊನೆಯಲ್ಲಿ ಅರ್ಥ ವಾಗುತ್ತದೆ.
ಮಕ್ಕಳ ಮಾತಿನಲ್ಲಿ ಸತ್ಯವಿರುತ್ತದೆ.ಆದರೆ ದೊಡ್ಡವರು ಅದನ್ನು ನಿರ್ಲಕ್ಷ್ಯ ಮಾಡಿ ತಡೆಯುವರು.ಅದೇ ದೊಡ್ಡವರಲ್ಲಿ ಸತ್ಯವಿಲ್ಲದಿದ್ದರೂ ಮಕ್ಕಳು ಮಾತು ಕೇಳದಿದ್ದರೆ ಶಿಕ್ಷೆ ನೀಡುವರು.ಹೇಗಿದೆ ನಮ್ಮ ರಾಜಕೀಯ ಬುದ್ದಿವಂತಿಕೆ.
ಮೌನದಿಂದ ಏನೂ ಸಾಧನೆಯಾಗದು ಎನ್ನುವರು.ಇದು ಭೌತಿಕದಲ್ಲಿ ಸತ್ಯವಾದರೂ ಅಧ್ಯಾತ್ಮ ದಲ್ಲಿ ಮೌನದ್ಯಾನವೇ ಶ್ರೇಷ್ಠ ವಾಗಿದೆ.
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದ್ಯಾನದ ಶಿಬಿರಗಳು ನಡೆಯುತ್ತಿದೆ. ಎಲ್ಲೆಲ್ಲಿಂದಲೋ ಜನರು ಶಿಬಿರಕ್ಕೆ ಬಂದು ದ್ಯಾನ ಕಲಿತು ಹೋಗುತ್ತಿದ್ದಾರೆ. ಮನೆಗೆ ಹೋದನಂತರ ಮೌನವಾಗಿರಬಹುದೆ? ವ್ಯವಹಾರಕ್ಕೆ ಇಳಿದಮನಸ್ಸಿಗೆ ಇದು ಅಸಾಧ್ಯ. ಕೊನೆಪಕ್ಷ ನಮ್ಮ ಮನೆಯೊಳಗೆ ಮೌನವಾಗಿರೋಣವೆಂದರೂ ದ್ಯಾನಕ್ಕೆ ಹೋಗದವರ ಜೊತೆಗೆ ಅಸಾಧ್ಯ. ಒಬ್ಬರೆ ಇದ್ದಾಗ ಸಾಧ್ಯವಿದೆ.ಹಿಂದಿನ ಋಷಿಮುನಿಗಳ ಆಂತರಿಕ ಜ್ಞಾನಶಕ್ತಿ ತಪಸ್ಸಿನಿಂದ ಮೌನದಿಂದ ವೃದ್ದಿಯಾಗಿತ್ತು.ಒಳಗೇ ಅಡಗಿರುವಜಗತ್ತನ್ನು ಮೌನವಾಗಿ ಅರ್ಥ ಮಾಡಿಕೊಂಡು ಹೊರಜಗತ್ತನ್ನು ತಿದ್ದುವ ಪ್ರಯತ್ನ ನಡೆಸಿದ್ದರು. ಯಾವಾಗ ಕಲಿಕೆಯ ದಾರಿ ಹೊರಗೆ ಹೆಚ್ಚಾಯಿತೋ ದ್ಯಾನವೂ ಹಿಂದುಳಿಯಿತು.ವ್ಯವಹಾರ ಬೆಳೆಯಿತು.ಮೌನವಾಗಿ ಹಣಗಳಿಸುವ ತಂತ್ರ ಹೆಚ್ಚಾಗಿ ತತ್ವಕುಸಿಯಿತು. ಇದೇ ಇಂದಿಗೂ ಮಾನವನಿಗೆ ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
ಒಟ್ಟಿನಲ್ಲಿ ಮೌನವಾಗಿದ್ದಷ್ಟೂ ಶಾಂತಿ ಎನ್ನುವರು. ಮಾತು ಬೆಳೆದಷ್ಟೂ ಅಶಾಂತಿ. ನಾವೆಲ್ಲರೂ ಮಾನವರೆ ಎನ್ನುವ ಸತ್ಯವನ್ನು ಅಲ್ಲಗೆಳೆಯುವುದೇ ಮಾತಿಗೆ ಕಾರಣವಾಗಿದೆ.
ನಮ್ಮ ಮನಸ್ಸು ಇದಕ್ಕೆ ಒಪ್ಪದಿರೋದೆ ಇದರ ಮೂಲ. ಹಾಗಾದರೆ ಇದರಲ್ಲಿ ಸತ್ಯವಿಲ್ಲವೆ? ಸತ್ಯ ಇದ್ದರೂ ಯಾಕೆ ಒಪ್ಪಲಾಗದು? ಕಾರಣ ನಾವು ಹೊರಗಿನಿಂದ ಸತ್ಯ ತಿಳಿದು ಒಳಗೇಮೌನವಾಗಿರುವ ಸತ್ಯವನ್ನು ಒಪ್ಪಿಕೊಳ್ಳಲು ಕಷ್ಟ.
ಒಳಗೆ ಶುದ್ದವಿದ್ದರೂ ಹೊರಗಿನ ಅಶುದ್ದತೆಗೆ ಹೆಚ್ಚು ಮಾತು .
ಯಾವಾಗ ಈ ಅಶುದ್ದ ಮಾತುಹರಡುವುದೋ ಒಳಗಿದ್ದ ಶುದ್ದತೆ ಹಾಳಾಗುವುದು. ಇದೇ ಕಾರಣಕ್ಕಾಗಿ ಅಧ್ಯಾತ್ಮ ಸಾಧಕರು ಮಾತು ಕಡಿಮೆ ಮೌನ ಹೆಚ್ಚು ಮಾಡಿಕೊಂಡು ಶಾಂತವಾಗಿರುವರು. ಯಾವಾಗ ಸತ್ಯ ತಿಳಿದೂ ಮಾತಾಡದೆ ಇರುವರೋ ಅದನ್ನು ದುರ್ಭಳಕೆ ಮಾಡಿಕೊಳ್ಳುವ ಮಾತುಗಾರರು ಅಸತ್ಯ ಅನ್ಯಾಯ ಅಧರ್ಮವನ್ನು ಹೊರಗೆ ಹರಡುತ್ತಾ ಜನರೊಳಗಿದ್ದ ಸತ್ಯಕ್ಕೆ ಬೆಲೆಕೊಡದೆ ಜನರನ್ನು ಆಳಾಗಿ ಬಳಸಿ ರಾಜಾರೋಷದಿಂದ ಭೂಮಿಯನ್ನು ತನ್ನ ವಶಕ್ಕೆ ಪಡೆಯಲು ಮಹಿಳೆ ಮಕ್ಕಳನ್ನೂ ಬಿಡದೆ ಮನೆಯಿಂದ ಹೊರಗೆಳೆದು ದುಡಿಸಿಕೊಳ್ಳುವರು. ಯಾವಾಗ ಸ್ತ್ರೀ ಮನೆ ಹೊರಗೆ ಬರುವುದು ಅನಿವಾರ್ಯ ವಾಗುವುದೋ ಹೊರಗೆ ಮಾತು ಬೆಳೆಯುತ್ತಾ ಮೌನಕ್ಕೆ ಬೆಲೆಯಿಲ್ಲವಾಗೋದು. ಹೆಚ್ಚು ಮಾತು ಮನಸ್ಸಿಗೆ ಕಿರಿಕಿರಿಯಾದಾಗ ಮತ್ತೆ ಮೌನದ್ಯಾನದ ಮೊರೆ ಹೋದರೂಬನ ಒಳಗೇ ಬೆಳೆದ ಮಾತಿನಶಕ್ತಿ ಇದನ್ನು ಒಪ್ಪದು.ತಾತ್ಕಾಲಿಕ ಶಾಂತಿ ಬೇಕೋ ಶಾಶ್ವತ ಶಾಂತಿಯೋ ಇದರ ಬಗ್ಗೆ ನಾವೇ ಮೌನವಾಗಿ ಅರಿತು ಬಾಳಿದರೆ ನಮ್ಮ ಮಾತಿನಿಂದ ಯಾರಿಗೆ ಲಾಭನಷ್ಟ ಎಂದು ತಿಳಿಯಬಹುದು.
ಮಾತೇ ಬಂಡವಾಳ ಮಾಡಿಕೊಂಡವರಜೀವನದಲ್ಲಿ ಶಾಂತಿ ಇರದು. ಆದರೂ ಮಾತಿನಲ್ಲಿ ಸತ್ಯ ಧರ್ಮ ನ್ಯಾಯ ನೀತಿಯಿದ್ದರೆ ಮೌನವಾಗಿಯಾದರೂ ಹಿಂದೆ ಧರ್ಮರಕ್ಷಣೆ ಸಾಧ್ಯ.ಹಿಂದೂಗಳ ಈ ಸ್ಥಿತಿಗೆ ಅನ್ಯಧರ್ಮದವರ ನಕಾರಾತ್ಮಕ ವಿಚಾರದ ಮಾತೇ ಕಾರಣ. ಅದೇ ನಮ್ಮ ಧರ್ಮದವರ ಬಗ್ಗೆಯೂ ಇದೆ ಎಂದರೆ ಸಕಾರಾತ್ಮಕ ಚಿಂತನೆ ನಮ್ಮಲ್ಲಿ ಕುಸಿದಿದೆ. ಅಧಿಕಾರ ಹಣ ಸ್ಥಾನವಿದ್ದರೆ ಏನು ಬೇಕಾದರೂ ಮಾತನಾಡಬಹುದು ಮಾಡಬಹುದು,ಯಾರನ್ನಾದರೂ ಆಳಬಹುದೆನ್ನುವುದೆ ಅಜ್ಞಾನ. ಇದನ್ನು ಮೌನವಾಗಿ ಪರಮಾತ್ಮ ನೋಡುತ್ತಿರುವ ಸತ್ಯದ ಅರಿವಿಲ್ಲದೆ ಮೌನವಾಗಿರುವವರನ್ನೂ ಬಡಿದೆಬ್ಬಿಸಿ ಹೊರಗೆ ಹೋರಾಟ ಹಾರಾಟಮಾರಾಟದ ಮಾತು ಆಡಿದರೆ ಧರ್ಮ ಹಿಂದುಳಿಯೋದಿಲ್ಲ ಜನರೆ ಹಿಂದುಳಿಯುವರು.
ಯಾರದ್ದೋ ವಿಚಾರ ತಿಳಿದು ತಿಳಿಸಿ ಬೆಳೆಸಿದರೆ ಅದು ನನ್ನ ವಿಚಾರವಾಗುವುದೆ? ಮೊದಲು ನಮ್ಮ ಆತ್ಮಕ್ಕೆ ಯಾವ ವಿಷಯ ಬೇಕೆಂಬುದನ್ನರಿತು ಅದನ್ನು ಮೌನವಾಗಿ ತಿಳಿದು ನಡೆಯುವುದರಿಂದ ಹೊರಗಿರುವ ನಕಾರಾತ್ಮಕ ವಿಷಯದಿಂದ ಮೌನವಾಗಿ ದೂರವಿರಲು ಸಾಧ್ಯ. ಎಷ್ಟೋ ದೇವತೆಗಳ ದ್ಯಾನ ಮಾಡಿದರೂ ಮೂಲದ ಒಂದೇ ದೇವರ ಕಡೆಗೆ ಮನಸ್ಸು ಹೋಗದಿದ್ದರೆಮಾತೇ ಬೆಳೆಯೋದು.
ಎಲ್ಲಾ ದೇವತೆಗಳು ಮಾತನಾಡದೆಯೇ ಕೆಲಸ ಮಾಡುವರು.ಅಸುರ ಶಕ್ತಿಯೇ ಇದರ ವಿರುದ್ದ ನಿಂತು ಕೂಗೋದು. ಕೂಗಿದವರಿಗೆ ಸಾಕಷ್ಟು ಸಹಕಾರ ಹೊರಗೆ ಸಿಗಬಹುದು.ಆದರೆ ಒಳಗಿರುವ ಶಕ್ತಿ ಇದಕ್ಕೆ ವಿರುದ್ದವಿದ್ದರೆ ಯುದ್ದವಾಗುತ್ತದೆ ಜೀವ ಹೋಗುತ್ತದೆ. ಮೌನವಾಗಿ ಇದನ್ನು ಓದಿ ಪ್ರತಿಕ್ರಿಯೆ ಮೌನವಾಗಿಯೇ ನೀಡಬಹುದು.
No comments:
Post a Comment