ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, August 11, 2024

ಮಾನವನಲ್ಲಿ ದೊಡ್ಡ ಜೀವ ಸಣ್ಣ ಜೀವ ಎನ್ನುವುದು ಇದೆಯೆ?

ಹಿಂದೂಗಳು ವಿದೇಶದಲ್ಲಿ ಸಂಕಟಪಟ್ಟರೆ ನಮ್ಮಲ್ಲಿ ದೊಡ್ಡ ಸಂಕಟವಾಗುತ್ತದೆ.ಅದೇ ಹಿಂದೂ ನಮ್ಮಲ್ಲಿ ನರಳುತ್ತಿದ್ದರೆ ಕೇಳೋರಿಲ್ಲ ಎಂದರೆ ಇಬ್ಬರಿಗೂ ವ್ಯತ್ಯಾಸವೇನು? ಹೊರಹೋದವರೂ ಮಾನವ ಒಳಗಿದ್ದವರೂ ಮಾನವರೆ,ಹೊರಗೆ ನಾವೇ ಕಳಿಸಿದೆವೋ ಅವರೆ ಹೋದರೋ  ಗೊತ್ತಿಲ್ಲ ಒಳಗಿದ್ದವನನ್ನು ನಾವೇ ಹೊರಗೆ ಕಳಿಸಿ ಸಂಕಟಪಡೋದರಲ್ಲಿ ಅರ್ಥ ವಿಲ್ಲ. ಇಲ್ಲಿ ಜೀವ  ಮುಖ್ಯವೆಂದಾಗ ಅದರಲ್ಲಿ ಶ್ರೀಮಂತ ಬಡವ,ಹೊರಗಿನವ ಒಳಗಿನವ  ಎನ್ನುವ ಬೇಧಯಾಕೆ? ತನ್ನ ಸ್ವಾರ್ಥ ಸುಖಕ್ಕಾಗಿ ಎಲ್ಲರನ್ನೂ ಬಿಟ್ಟು ಹೊರಹೋದಾಗ  ಪರದೇಶದಲ್ಲಿರುವ ಪರಮಾತ್ಮನೆ ಕಾಯೋದು.ಹಾಗೆ ಇಲ್ಲಿರುವವರನ್ನೂ ಅವನೆ ಕಾಯೋದು.ಈ ಮಧ್ಯವರ್ತಿ ಮಾನವ ನಾನೇ ಎಲ್ಲಾ ಮಾಡೋದು ಎನ್ನುವ ಅಹಂಕಾರ ಬೆಳೆಸಿಕೊಂಡು ಇವನಮ್ಮವ ಅವನಿಮ್ಮವ ಎಂದು ಬೇರೆ ಮಾಡಿದರೂ ಕಾಯೋನು ಒಬ್ಬನೆ ಎನ್ನುವ ಸತ್ಯತಿಳಿದವರು ಹೊರಗೆ ಹೋದವರನ್ನೂ  ಅವನೆ ರಕ್ಷಣೆ ಮಾಡುವನೆಂಬ ನಂಬಿಕೆ ಬೆಳೆಯಲು ಮೊದಲು ಕಣ್ಣೆದುರೆ ನರಳುತ್ತಿರುವವರ ಸಂಕಟಕ್ಕೆ ಪರಿಹಾರ ಕೊಟ್ಟರೆ ಹೊರಗಿನ ನಮ್ಮ ಮಕ್ಕಳು ಮೊಮ್ಮಕ್ಕಳಿಗೂ  ಅಲ್ಲಿಯೇ ಸುರಕ್ಷೆ ಇರುತ್ತದೆ.
ಮಧ್ಯವರ್ತಿಗಳು ಮಾಧ್ಯಮಗಳು ಹೊರಗಿನವರ ಸಮಸ್ಯೆ ಎತ್ತಿ ಹಿಡಿದು ಪ್ರಚಾರ ಮಾಡುವುದರಿಂದ ಸರ್ಕಾರಗಳು ಹೊರಗಿರುವವರಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಬಹುದಷ್ಟೆ.ಆದರೆ ಮಾನವೀಯತೆಯ ದೃಷ್ಟಿಯಿಂದ ಒಳಗಿರುವ ಸಮಸ್ಯೆ ಸಂಕಟಗಳಿಗೆ ಸರಿಯಾದ ಕಾರಣ ಮತ್ತು ಪರಿಹಾರ ಕಂಡುಕೊಳ್ಳಲು  ನಮ್ಮಲ್ಲಿ  ಜ್ಞಾನವಿರಬೇಕು.
ಹೊರಗೆ ಹೋಗುವಾಗ ಸರ್ಕಾರದ ಅನುಮತಿ ಪಡೆದು ದೇಶ ಭಕ್ತಿ ತೊರೆದು  ನಡೆದ ಮೇಲೆ ಜೀವರಕ್ಷಣೆಗೆ ದೇಶ ಬೇಕೆ?
ಅಸಂಖ್ಯಾತ ದೇಶಭಕ್ತರ ಜೀವ ದೇಶರಕ್ಷಣೆಗಾಗಿ ಇದೇ ಭೂಮಿಯಲ್ಲಿದ್ದು ಹೋಗಿರುವಾಗ ವಿದೇಶಕ್ಕೆ ಹೋದವರಿಗೆ ದೇಶಭಕ್ತಿ ಇಲ್ಲದೆ  ಒಳಗೆ ಬಂದರೂ ಕಷ್ಟ ನಷ್ಟ ದೇಶಕ್ಕೆ.ರಕ್ಷಣೆ ಇರಲಿ ಆದರೆ ಒಳಗಿರುವ ರನ್ನು ನಿರ್ಲಕ್ಷ  ಮಾಡುತ್ತಾ ಲಕ್ಷ ಕೋಟಿ  ಸರ್ಕಾರದ ಹಣ ಹೊರಗಿನವರಿಗೆ  ಸುರಿದರೆ ಏನರ್ಥ?
ಕೊರೊನ ಸಮಯದಲ್ಲಿ ಯುದ್ದದ ಸಮಯದಲ್ಲಿ ಸಾಕಷ್ಟು ವಿದೇಶದ ಜನರು ಜೀವರಕ್ಷಣೆಗೆ ಒಳ ಬಂದು ಕೆಲಸವಿಲ್ಲದೆ ಕಾಲಕಳೆದು  ನಂತರ ತಿರುಗಿ ಹೋದರು. ಆ ಸಮಯದಲ್ಲಿ ಎಷ್ಟೋ ನಮ್ಮ ಜನರ ಜೀವ ಪ್ರಾಣ ಹೋಗಿದ್ದರೂ ಯಾರೂ ಕೇಳೋರಿರಲಿಲ್ಲ. ಒಟ್ಟಿನಲ್ಲಿ ಯಾರ ಜೀವವಾದರೂ ಒಂದೇ. ಹಣದಿಂದ  ಜೀವ ಬೆಳೆಯೋದಿಲ್ಲ ಉಳಿಯೋದಿಲ್ಲ. ಗುಣವಿದ್ದರೆ ಅದೇ ದೊಡ್ಡ ಜೀವ.ಬಡವರಲ್ಲಿ ಗುಣವಿರುತ್ತದೆ .ಉಳಿಸಿ ಶಿಕ್ಷಣ ಕೊಟ್ಟರೆ ಅದೇ ದೇಶಕ್ಕೆ ಆಸ್ತಿ.
ಅಸಮಾನತೆಯು ಉಸಿರಿನಲ್ಲಿಯೇ ಜನ್ಮತ: ಒಳಗಿನಿಂದ ಬೆಳೆದಿರುವಾಗ ಹೊರಗಿನ ಸಮಾನತೆಯ ಹೋರಾಟ ಹಾರಾಟ ಮಾರಾಟ ಕೇವಲ ತೋರುಗಾಣಿಕೆಯ ರಾಜಕೀಯವಷ್ಟೆ.ಇದಕ್ಕೆ ಸಹಕರಿಸುವ ಮಾಧ್ಯಮಗಳಂತೂ ತಮ್ಮ  ವ್ಯವಹಾರಕ್ಕೆ  ಹೆಚ್ಚಿನ‌ಬೆಲೆಕೊಟ್ಟರೆ ಧರ್ಮ ಎಲ್ಲಿರುವುದು? 
ಎಲ್ಲೋ ಯುದ್ದ ಕಲಹ  ಹೆಚ್ಚಾದರೆ ಅಲ್ಲಿಗಿಂತ ನಮ್ಮಲ್ಲಿಯೇ ಸುದ್ದಿ ಪ್ರಚಾರ ಹೆಚ್ಚಾಗಿರುತ್ತದೆ ಎಂದರೆ ನಮ್ಮವರ ಮಕ್ಕಳು ಮರಿಗಳು ಹೊರಗೇ ಹೆಚ್ಚಾಗಿರುವರೆಂದರ್ಥ. ಕಳಿಸುವಾಗ ಅವರ ಆಸ್ತಿಯನ್ನು  ಸಮಾಜಕ್ಕೆ ದಾನ ಮಾಡಿದರೆ ದೇಶದ ಋಣವಾದರೂ ತೀರಬಹುದು.ಅಲ್ಲಿಯೂ ಸುಖವಾಗಿರಬಹುದು. ದೇಶದೊಳಗಿನ  ಆಸ್ತಿ ಬೇಕು ದೇಶ ಬೇಡ,ಹಾಗೆ ಪಿತೃಗಳ ಆಸ್ತಿ ಅಂತಸ್ತು ಬೇಕು ಅವರ‌ಧರ್ಮ ಕರ್ಮ ಬೇಡವೆಂದರೆ ಅಜ್ಞಾನ ವಷ್ಟೆ. ಜೀವ ಇದ್ದರೆ ಜೀವನ. ಜೀವಿಸಲು ಬಿಟ್ಟ ಸ್ಥಳ ಬಿಟ್ಟು ದೂರ ಹೋದರೂ ನಾವು ಎಷ್ಟು  ಪಡೆದು ಬಂದಿರುವೆವೋ ಅಷ್ಟೇ ಅನುಭವಿಸೋದು.
ಸುಖ ದು:ಖ ಒಂದೇ ನಾಣ್ಯದ ಎರಡು ಮುಖವಷ್ಟೆ. ಸುಖ ಬಂದಾಗ ದೂರ ಹೋಗೋದು ಕಷ್ಟ ಬಂದಾಗಹತ್ತಿರ ಬರೋದರಲ್ಲಿ  ಯಾವುದೇ  ಧರ್ಮ ವಿಲ್ಲ. 
ವಿದೇಶಿವ್ಯಾಮೋಹ ಬಿಟ್ಟು ಸ್ವದೇಶದಲ್ಲಿದ್ದು ಮೂಲದ ಧರ್ಮ ಕರ್ಮದೊಳಗಿನ ಸೂಕ್ಮ ಸತ್ಯವರಿತು ನಡೆದ ನಮ್ಮ ಹಿಂದಿನ  ಮಹಾತ್ಮರನ್ನು  ನಾವೀಗ‌ಕಾಣೋದು ಕಷ್ಟವಿದೆ.ಕಾರಣ ಅವರು ಅಮರರು ಜೀವನ್ಮುಕ್ತರು. ಆದರೂ ಅವರ  ನಡೆ ನುಡಿಯನರಿತು ಸ್ವಲ್ಪ ನಾವೂ ಇಲ್ಲೇ ಇದ್ದು ನಡೆಯಲು ಕಲಿಯಬಹುದು. ಕಲಿಕೆಯೇ ಹೊರಗಿನದ್ದಾಗಿರುವಾಗ ಹೊರಗೇ ಹೋಗಿ ದುಡಿದು ಸಾಲ ತೀರಿಸೋದು  ಕರ್ಮ ಫಲ.  ಜನ್ಮಕ್ಕೆ ದೇಶ ಆಸರೆ ಕೊಟ್ಟರೆ ಅದರ ಸಾಲ ತೀರಿಸುವ‌ಕರ್ಮ  ಅಥವಾ ಕೆಲಸವನ್ನು ಇಲ್ಲೇ ಮಾಡಿದರೆ ಇಲ್ಲೇ ಮುಕ್ತಿ. ಹಾಗಾಗಿ ಹಿಂದೆ ಜನರು ಇದ್ದಲ್ಲೇ ಒಗ್ಗಟ್ಟಿನ ಬಲದಿಂದ  ಬದುಕಿದ್ದರು. ಈಗ ದೂರಹೋಗಿ ಬದುಕಿದ್ದೂ ಇಲ್ಲದಂತಿರೋದು  ಅಜ್ಞಾನ.ಕಾಲಕ್ಕೆ ತಕ್ಕಂತೆ ನಡೆಯೋದು ಸರಿ. ಆದರೆ ಕಲಿಕೆ  ಉತ್ತಮ ನಡೆ ನುಡಿಯತ್ತ ಇದ್ದರೆ ಎಲ್ಲಿದ್ದರೂ  ಪರಮಾತ್ಮನ  ಕೃಪೆ ಇರುತ್ತದೆ. ಇಷ್ಟಕ್ಕೂ ದೇವಾನುದೇವತೆಗಳು ಅವತಾರವೆತ್ತಿ ಹೋಗಿರುವ ಈಭೂಮಿಯ ಋಣ ತೀರಿಸಲು  ಧರ್ಮ ಮಾರ್ಗ ಅಗತ್ಯ.
ಮೂಲವನ್ನು ಬಿಡುವ‌ಮೊದಲು ಜಾಗೃತರಾಗಿರಬೇಕಷ್ಡೆ.
ಇಲ್ಲಿ ಯಾರನ್ನೂ  ದೋಷಿಸುತ್ತಿಲ್ಲ.ನಮ್ಮ ದೃಷ್ಟಿ ದೋಷ ಎಷ್ಟಿದೆ ಎನ್ನುವ  ಪ್ರಯತ್ನವಾಗಿದೆ.ತಪ್ಪು ಯಾವುದು?ಸರಿ ಎಲ್ಲಿದೆ? ಅವರವರ ಜನ್ಮ ಸ್ಥಳ,ದೇಶೀಯ ಶಿಕ್ಷಣ,ಸಂಸ್ಕಾರ,ಸಂಸ್ಕೃತಿ, ಭಾಷೆಯ ಜೊತೆಗೆ ಸಂಬಂಧ ಹತ್ತಿರವಿದ್ದಷ್ಟೂ ಸುರಕ್ಷಿತ. ದೂರಹೋದಷ್ಟೂ ಅತಂತ್ರ.

No comments:

Post a Comment