ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Monday, August 5, 2024

ಮಾಧ್ಯಮಗಳಿಂದ ಧರ್ಮ ರಕ್ಷಣೆ ಸಾಧ್ಯವೆ?

ನನ್ನ ಲೇಖನಿಯಿಂದ ಹೊರಬರುವ ವಿಷಯಗಳಲ್ಲಿ ಎಲ್ಲಾ ಕ್ಷೇತ್ರದ ವಿಚಾರವಿರುತ್ತದೆ ಹಾಗಾಗಿ ಇದು ಕೇವಲ ಅಧ್ಯಾತ್ಮಿಕ ಲೇಖನವೆನ್ನಲಾಗದು. ಕೆಲವು ಪತ್ರಿಕೆಗಳು ಸುಧಾ , ತರಂಗ , ವಿಜಯಕರ್ನಾಟಕ,ವಿಜಯವಾಣಿ, ಪ್ರಜಾವಾಣಿ... ಕರ್ಮ ವೀರ ಇನ್ನೂ ಹಲವು ಪತ್ರಿಕೆಗಳ  ಅನಿಸಿಕೆಯನ್ನು  ತಿಳಿದು ನೇರವಾಗಿ ಸಮಾಜಕ್ಕೆ  ತಲುಪಿಸುವ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾ ಹಲವು ವರ್ಷಗಳ ನಂತರ ನನಗೇ ಅರ್ಥ ವಾಗಿರದ  ಅಧ್ಯಾತ್ಮ ಸೂಕ್ಮ ಅರಿವಿಗೆ ಬಂದಿದೆ. ಇದರ ಪ್ರಕಾರ ಯಾವುದೇ ವ್ಯವಹಾರ ಬೆಳೆಸಬೇಕಾದರೆ ಸತ್ಯಕ್ಕೆ ಬೆಲೆಕೊಡೋದಿಲ್ಲ ಮಿಥ್ಯಕ್ಕೆ ಬೆಲೆ ಕೊಡೋದು. ಕಾರಣ ಮಿಥ್ಯ ಜನರ ಕಣ್ಣಿಗೆ ಕಾಣುತ್ತದೆ.ಜನಬಲ ಹಣಬಲ ಅಧಿಕಾರ ಬಲವಿದ್ದರೆ ಜೀವನ ನಡೆಯುತ್ತದೆ.  ಆದರೆ ಇದು ಅಧರ್ಮ, ಅನ್ಯಾಯ ಅಸತ್ಯದ ಭ್ರಷ್ಟಾಚಾರಕ್ಕೆ  ಎಳೆದಂತೆಲ್ಲಾ ಜೀವನ ಅಲ್ಲೋಲ ಕಲ್ಲೋಲವಾಗಿ ಅಶಾಂತಿಯ ಗೂಡಾಗಿ ಹೋಳಾಗುತ್ತದೆನ್ನುವ ಅಧ್ಯಾತ್ಮ ಸತ್ಯ  ನಡೆದ ಮೇಲೇ ತಿಳಿಯೋದು. ಮಾಧ್ಯಮ ಮಧ್ಯವರ್ತಿಗಳು  ಮಾನವರಾಗಿ ಮಾನವೀಯ ಮೌಲ್ಯಗಳನ್ನು ಜನರಲ್ಲಿ‌ ಬಿತ್ತಬೇಕಾದರೆ ಮುಖ್ಯವಾಗಿ ಮನೆಯೊಳಗಿರುವ  ಮಂದಿಯ ಸಹಾಯ ಬೇಕಿದೆ. ಸಾಮಾನ್ಯವಾಗಿ ಮನರಂಜನೆಗಾಗಿ  ನೋಡುವ ಕೇಳುವ ಹೇಳುವ ಪ್ರತಿಯೊಂದು  ಮಾತಿನಲ್ಲಿ ಸತ್ಯಸತ್ಯತೆ ಇರುತ್ತದೆ.
ಸತ್ಯವಿಲ್ಲದ ಮನರಂಜನೆಯಿಂದ ಅಜ್ಞಾನ ಬೆಳೆದರೆ ಸತ್ಯದಿಂದ ಜ್ಞಾನ ಬೆಳೆಯುತ್ತದೆ. ಆದರೆ ಅದು ವಾಸ್ತವದಲ್ಲಿ ಯಾವ ಬದಲಾವಣೆಗೆ ಪೂರಕವಾಗಿದೆ ಎನ್ನುವುದರ ಮೇಲೆ ಸುದ್ದಿ ಪ್ರಚಾರವಾಗುತ್ತದೆ. ಈ ಬದಲಾವಣೆಯಿಂದ ಕ್ರಾಂತಿ ಎದ್ದರೆ ಜೀವಹಾನಿ ಮಾನಹಾನಿ...ಶಾಂತಿಯಿದ್ದರೆ ಆತ್ಮಕ್ಕೆ ತೃಪ್ತಿ  ಹೀಗಾಗಿ ಹಿಂದಿನ ಮಹರ್ಷಿಗಳು  ಅಧ್ಯಾತ್ಮ ವಿಚಾರಕ್ಕೆ ಹೆಚ್ಚಿನ ಒತ್ತು ಕೊಟ್ಟು ಕಷ್ಟಪಟ್ಟು  ಸತ್ಯ ವರಿತು ಧರ್ಮ ರಕ್ಷಣೆ ಮಾಡಿದ್ದರು.
ಈಗ ಪ್ರಚಾರವಷ್ಟೆ ಮುಖ್ಯ ಸತ್ಯ ಕೇಳೋರಿಲ್ಲ ಹೇಳೋರಿಗೂ‌ ಬೆಲೆಯಿಲ್ಲದ ಜಗತ್ತನ್ನು ಆಳೋದಕ್ಕೆ ನಿಂತಿರುವ ಅಸುರರಿಗೆ ಸುರರ ಸಹಕಾರ ಬೇರೆ. ಇದರಿಂದ ಯಾರ ಬಲ ಹೆಚ್ಚುವುದೋ ಕುಸಿಯುವುದೋ ಭವಿಷ್ಯವೆ‌ನಿರ್ಧಾರ ಮಾಡುತ್ತದೆ.  ಹಿಂದಿನಂತೆ ಜನ  ಈಗಿಲ್ಲ, ಈಗಿನಂತೆ ಮುಂದೆ ಇರಲ್ಲ ಆದರೂ ಹಿಂದಿನ ಪ್ರಚಾರದಲ್ಲಿ ಸಾಕಷ್ಟು ಹಣಸಂಪಾದನೆಗೆ ಅಡ್ಡಿಯಿಲ್ಲ.ಅಡ್ಡಿ ಇರೋದು ವಾಸ್ತವ ದಲ್ಲಿ  ನಾವೆಲ್ಲಿ ಎಡವಿದ್ದೇವೆನ್ನುವುದರಲ್ಲಿ.ಇದನ್ನು ಸಾಮಾನ್ಯರು ತಿಳಿಸಿದರೆ ಪ್ರಚಾರ ಮಾಡೋದಿಲ್ಲ. ಏನಾದರೂ ಕ್ರೈಮ್ ಸುದ್ದಿಯಿದ್ದರೆ ತಿಳಿಸಿ ಪ್ರಸಾರ ಮಾಡುತ್ತೇವೆಂದು  ಸುದ್ದಿ ಮಾಧ್ಯಮದವರು ತಿಳಿಸುತ್ತಾರೆಂದರೆ  ಅವರ ಬಂಡವಾಳವೇ ಕ್ರೈಮ್ ಆಗಿದೆ. ಹೀಗಿರುವಾಗ  ಉತ್ತಮ ದಿನಗಳನ್ನು ಕಾಣುವ ಕನಸು ನನಸಾಗುವುದೆ?

ಯಾವುದೇ ವಿಷಯವಿದ್ದರೂ ಜನರೆಡೆಗೆ ತಲುಪಿಸುವಾಗ ಅದರ ಪರಿಣಾಮದ ಬಗ್ಗೆ ಚಿಂತನೆ ನಡೆಸುವ ತಾಳ್ಮೆ ಸಹನೆ ಇದ್ದವರು‌ಕೆಟ್ಟಸುದ್ದಿಗಳನ್ನು ಬಿಟ್ಟು ಉತ್ತಮ ಅಗತ್ಯದ ಸುದ್ದಿ ಕಾರ್ಯಕ್ರಮ  ನಡೆಸುತ್ತಾ ದೇಶದ ಜೊತೆಗೆ ಧರ್ಮ ರಕ್ಷಣೆ ಆಗುತ್ತದೆ. ಇದನ್ನು ಮೊದಲು ಪ್ರಾದೇಶಿಕ  ಮಾಧ್ಯಮಗಳು ಮಾಡುತ್ತಿತ್ತು.ಈಗ ಸ್ವಲ್ಪ ಬದಲಾಗಿದ್ದರೂ ಪರವಾಗಿಲ್ಲ. ಆದರೆ ಅದನ್ನು ನೋಡೋರ ಸಂಖ್ಯೆ ಕಡಿಮೆ ಆದರೂ ನೋಡುಗರಿಗೆ ಸಮಸ್ಯೆಯಿಲ್ಲ. 
ಒಟ್ಟಿನಲ್ಲಿ ಒಳ್ಳೆಯದು  ಬೆಳೆಯೋದು ಕಷ್ಟ.ಕೆಟ್ಟದ್ದು ಬೇಗ ಬೆಳೆಯುತ್ತದೆ ಎಂದರೆ ನಮ್ಮ ಸಹಕಾರ ಕೆಟ್ಟದ್ದಕ್ಕೆ ಹೆಚ್ಚು. ಇದರಿಂದ  ಹಣಗಳಿಸಿದರೂ ಸತ್ಯಜ್ಞಾನವಿರದು. ಈ ನಷ್ಟಕ್ಕೆ ತಕ್ಕಂತೆ ಕಷ್ಟವೂ  ಇರುತ್ತದೆನ್ನುತ್ತಾರೆ ಅಧ್ಯಾತ್ಮ ಚಿಂತಕರು.

ಅಧ್ಯಾತ್ಮ ಎಂದರೆ ನಮ್ಮನ್ನು ನಾವರಿಯೋದಷ್ಟೆ. ನಮ್ಮೊಳಗೇ ಇರುವ ಆತ್ಮನ ಬಗ್ಗೆ ಅರಿವಿದ್ದರೆ  ನಾವು ಸ್ವತಂತ್ರರು.ಇಲ್ಲ ಕೆಲಸದಲ್ಲಿರಬೇಕಂತೆ.ಪ್ರಿಂಟ್ ಮಾಧ್ಯಮ ಜನರನ್ನು ನಿಧಾನವಾಗಿ ಎಚ್ಚರಿಸಿದರೆ   ಟಿವಿ ಮಾಧ್ಯಮ ಜನರನ್ನು ಹುಚ್ಚು ಹಿಡಿಸಿ ಹೊರಗೆಳೆಯುತ್ತದೆ. ಒಟ್ಟಿನಲ್ಲಿ ನಾವಿನ್ನೂ ಮನೆಯೊಳಗೆ ಇದ್ದೇವೆ ಎಂದರೆ ಮಾಧ್ಯಮಗಳಿಗೆ ಅಂಟಿಕೊಂಡಿಲ್ಲವೆಂದರ್ಥ. ಕೆಲವರು ಉತ್ತಮ ಸುದ್ದಿ ಪ್ರಸಾರ ಮಾಡುತ್ತಿದ್ದರೂ  ಪ್ರಚಾರಕರಲ್ಲಿ ಜನಸಾಮಾನ್ಯರ ಸ್ಥಿತಿಯನರಿತವರು ಕಡಿಮೆ. ಶಿಕ್ಷಣದಲ್ಲಿಯೇ  ಎಡವಿರುವಾಗ ತಲೆಗೆ ತುಂಬಿದ ವಿಷಯವೇ ಜೀವನ ನಡೆಸುತ್ತದೆ.ಇದರಲ್ಲಿ ಸತ್ಯವಿದೆಯೆ ಮಿಥ್ಯವಿದೆಯೆ ತಿಳಿಯುವುದು ಬಹಳಷ್ಟಿದೆ.

ಪುರಾಣವನ್ನೇ ತೆಗೆದುಕೊಂಡರೆ ದೇವರನ್ನು ಆಳೋರೆ  ಜನರನ್ನು ಆಳುತ್ತಿದ್ದಾರೆ. ಶ್ರೀ ಕೃಷ್ಣನ  ಭಗವದ್ಗೀತೆ ಯ ಒಳಗಿನ ವಿಶ್ವ ರೂಪ ದರ್ಶನ  ಆಗ ಎಲ್ಲರಿಗೂ ಆಗಿಲ್ಲವೆಂದರೆ ಸೂಕ್ಮವಾಗಿರುವ ಈ ವಿಶ್ವ ವನ್ನು ಬರಿಗಣ್ಣಿನಲ್ಲಿ ತಿಳಿಯಲಾಗದೆಂದರ್ಥ. ಹೊರನೋಟಕ್ಕೆ ಕಾಣುವ ಜಗತ್ತಿನ ವಿಷಯ ಹರಡಿದರೆ ಹಣ ಸಿಗಬಹುದು ಸತ್ಯಜ್ಞಾನವಿರದು. ಆದರೂ  ಸಮಾನತೆ ಇರಬೇಕು. ಅಧ್ಯಾತ್ಮ ವಿಚಾರವೆಂದು ತಿರಸ್ಕರಿಸಿದಷ್ಟೂ ಅಜ್ಞಾನವೇ ಬೆಳೆಯೋದು.
ಲೇಖನದಿಂದ ಒಂದು ಪೈಸೆ ಸಿಗದಿದ್ದರೂ  ಜ್ಞಾನ ಬಂದಿದೆ  .ಒಂದು ದೇಶದ ಹಿತದೃಷ್ಟಿಯಿಂದ  ಸರಳವಾಗಿ ಸಾಮಾನ್ಯರಂತೆ  ಸತ್ಯದಿಂದ  ಬದುಕೋದೆ ಕಷ್ಟ.ಅದರಲ್ಲಿ ನಮ್ಮವರೆ ನಮಗೆ ಶತ್ರುವಾದಾಗ ಧರ್ಮ ಸಂಕಟ.  ಒಳಗಿನ ಶಕ್ತಿಯ ಕೂಗಿಗೆ ಕಿವಿಗೊಡದಿರಲು  ಏನಾದರೂ ಹೊರಗಿನ ಕೆಲಸದಲ್ಲಿರಬೇಕಂತೆ

No comments:

Post a Comment