ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, August 4, 2024

ಪತಿ ಪತ್ನಿ, ಸ್ನೇಹ ಸಂಬಂಧ ಸತ್ವಯುತವಿರಲಿ

ಎಲ್ಲರಿಗೂ ಸ್ನೇಹಿತರ ದಿನಾಚರಣೆಯ ಶುಭಾಶಯಗಳು ಸ್ನೇಹ ಎನ್ನುವುದು ಒಂದು ಸಾತ್ವಿಕ ಶಕ್ತಿ.ಇದರಲ್ಲಿ ವ್ಯವಹಾರ ಹೆಚ್ಚಾದರೆ ರಾಜಸವಾಗಿ ತಾಮಸಶಕ್ತಿಯಾಗಿ ಕೆಟ್ಟುಹೋಗುತ್ತದೆ. ಯಾವುದೇ ಸಂಬಂಧ ಉತ್ತಮವಾಗಿರಬೇಕಾದರೆ  ಅದು ಸತ್ವ ತತ್ವ ಸತ್ಯದ ಕಡೆಗಿರಬೇಕು. ಯಾವಾಗ ಅದು ಹೊರಗಿನ ರಾಜಕೀಯದ ಕಡೆಗೆ ಹೊರಟು ಸ್ವಾರ್ಥ ಸುಖಕ್ಕೆ ತಿರುಗುವುದೋ ಆಗದು ಕೇವಲ ನಾಟಕವಾಗಿ ವ್ಯವಹಾರಕ್ಕೆ ಬಳಸಿ  ಕೊನೆಯಲ್ಲಿ ಸತ್ವ ಹಾಗು ಸತ್ಯದಿಂದ ದೂರವಾಗುತ್ತದೆ. ಹೀಗಾಗಿ ಸ್ನೇಹಿತರನ್ನು  ಮಾಡಿಕೊಳ್ಳುವ ಅಗತ್ಯವಿಲ್ಲ.‌ಇದ್ದವರನ್ನು ಸ್ನೇಹದಿಂದ ನೋಡಿಕೊಳ್ಳುವುದು  ಅಗತ್ಯ. ಇದು ಅಷ್ಟು ಸುಲಭವಿಲ್ಲ.
ಯಾವಾಗ ನಾವು ನಿಸ್ವಾರ್ಥ ನಿರಹಂಕಾರದಿಂದ  ಸ್ನೇಹಕ್ಕೆ ಬೆಲೆಕೊಟ್ಟು ಮುಂದೆ ನಡೆಯುವೆವೋ  ಅದು ನಮಗೆ ಸಂತೋಷಕೊಟ್ಟರೆ ಸರಿ ದು:ಖವೇ ಕೊಟ್ಟರೆ ನಾವು ಅಪಾರ್ಥರ ಸ್ನೇಹ ಮಾಡಿದ್ದೇವೆಂದರ್ಥ.
ಈಗಿನ ಕಾಲದಲ್ಲಿ ಇಂತಹ ಪವಿತ್ರವಾದ ಸ್ನೇಹ ಸಂಬಂಧ ನೇರವಾಗಿ ನೋಡಲು ಕಷ್ಟ.ಹೀಗಾಗಿ ಪರಮಾತ್ಮನ ಸ್ನೇಹ ಮಾಡಿದರೆ ಎಲ್ಲರಲ್ಲೂ ಅಡಗಿರುವ ಆ ಪರಮಾತ್ಮನಿಗೇ ತಲುಪುತ್ತದೆ.ಅಂದರೆ ವ್ಯಕ್ತಿಯ ಜೊತೆಗೆ ಸ್ನೇಹ ಬೆಳೆಸುವ ಮೊದಲು ಶಕ್ತಿಯ ಬಗ್ಗೆ ಅರಿವಿದ್ದರೆ ಉತ್ತಮ ಎಂದರ್ಥ.
ಯುವಪೀಳಿಗೆ ಇಂದು ದಾರಿತಪ್ಪಿದೆ ಎಂದರೆ ಅವರ ದೃಷ್ಟಿ ವ್ಯಕ್ತಿಯ ಮೇಲೇ ಇದೆ .ತಮ್ಮೊಳಗೇ ಅಡಗಿದ್ದ ಸತ್ಯ ಸತ್ವ ತತ್ವದ ಅರಿವಿಲ್ಲದ ಶಿಕ್ಷಣ ಪಡೆದ ಮೇಲೆ ಹೊರಗಿನ ವ್ಯಕ್ತಿ ಮಾತ್ರ ಕಾಣೋದು.ಹೀಗಾಗಿ ಮನೆಯವರೊಂದಿಗಿನ ಸ್ನೇಹ ಕುಸಿದು ಹೊರಗಿನ ಅನ್ಯರ ಸ್ನೇಹಕ್ಕಾಗಿ ಹಾತೊರೆದು ಮನೆ ಬಿಟ್ಟು ಹೊರನಡೆದವರೆ ಹೆಚ್ಚು. ಆಚರಣೆಯ ಉದ್ದೇಶ ಚೆನ್ನಾಗಿದೆ.ಆದರೆ ಯಾರ ಜೊತೆಗೆ ಆಚರಿಸಬೇಕೆಂಬ ಅರಿವು ಅಗತ್ಯ. ಒಟ್ಟಿನಲ್ಲಿ  ಎಲ್ಲಾ ಸಂಬಂಧ ಗಳು  ವ್ಯವಹಾರಕ್ಕೆ ಸೀಮಿತವಾದರೆ ಧರ್ಮ ವಿರದು. 
ಉತ್ತಮ ವಿಚಾರಕ್ಕೆ ಸಹಕರಿಸುವವರು ಬೆಳೆದರೆ ಸಂಬಂಧ ದ ಜೊತೆಗೆ ಧರ್ಮ ವಿರುತ್ತದೆ. ನಮ್ಮ ದೈಹಿಕ ಸುಖಕ್ಕಾಗಿ ಆತ್ಮವಂಚನೆ ಮಾಡಿಕೊಂಡು ಸ್ನೇಹವನ್ನು ಬೆಳೆಸಿಕೊಂಡರೆ ಆತ್ಮಹತ್ಯೆಯಾಗುತ್ತದೆ.
ಕಣ್ಣಿಗೆ ಕಾಣದ ಪರಮಾತ್ಮನ  ಶುದ್ದ ಸ್ನೇಹ ಕಣ್ಣಿಗೆ ಕಾಣುವ ಅನ್ಯರ  ಸ್ನೇಹ  ಮಾನಸಿಕವಾಗಿ  ಸಂತೋಷ ಕೊಡುವುದೋ  ಇಲ್ಲವೋ ತಿಳಿದು ನಡೆಯುವುದು ಅಗತ್ಯ. 
ಕಷ್ಟಕಾಲದಲ್ಲಿ  ಹಿಡಿದೆತ್ತುವವರೆ ನಿಜವಾದ ಸ್ನೇಹಿತರು.
ಸಮಯ ನೋಡಿಕೊಂಡು ಕೆಳಗೆ ಹಾಕುವವರು ಸ್ನೇಹಿತರಲ್ಲ.

ಇಂದು  ಭೀಮನ ಅಮವಾಸ್ಯೆ. ಉತ್ತಮ ಪತಿ ಸಿಗಲೆಂದು ಪತಿಯ ಆಯಸ್ಸು ಆರೋಗ್ಯ ಶಕ್ತಿವೃದ್ದಿಯಾಗಿ ರಕ್ಷಣೆ ಇರಲೆಂದು ಆ ಪರಶಿವನ ಪೂಜೆ ಮಾಡುವ ಮೂಲಕ‌ ಸ್ತ್ರೀ ವ್ರತ ಮಾಡುವಳು. ಇಂತಹ ಆಚರಣೆ ವ್ರತ ಪೂಜೆಗಳಿಂದ ನಮ್ಮ ಭಾರತದ ಧರ್ಮ ಸಂಸ್ಕೃತಿ ಸಂಪ್ರದಾಯ ಉಳಿದಿದೆ ಎಂದರೆ ತಪ್ಪಿಲ್ಲ.ಹಿಂದಿನ ಕಾಲದಲ್ಲಿ ಪತಿಯ ಸಂಪಾದನೆಯಲ್ಲಿ ಪತ್ನಿ ಜೀವನ‌ನಡೆಸುತ್ತಿದ್ದಳು.ಪತ್ನಿಯ ಪತಿವ್ರತಾ ಶಕ್ತಿಯಿಂದ ಪತಿಯ ರಕ್ಷಣೆಯಾಗುತ್ತಿತ್ತು. ಈಗ ಕಾಲಬದಲಾಗಿದೆ.ಸಂಪಾದನೆ ಎರಡೂ ಕಡೆಯಿಂದ ಆಗುತ್ತಿದೆ ಆದರೆ ಇಬ್ಬರಿಗೂ ರಕ್ಷಣೆ ಕೊಡೋದಕ್ಕೆ ಹೊರಗಿನ ಸರ್ಕಾರ ನಿಂತಿದೆ ಎಂದರೆ ತಪ್ಪು ಯಾರದ್ದು?
ಆರ್ಥಿಕವಾಗಿ  ಸಬಲರಾಗುವ‌ಮೊದಲು ಧಾರ್ಮಿಕವಾಗಿ ಸಬಲರಾಗುವ ಶಿಕ್ಷಣ ಕೊಡದೆ  ಆಳಿದವರು ಹಲವರು.
ಇದೇ ಇಂದಿಗೂ ನಡೆದಿದೆ.  ಒಳಗಿನ ಪೂಜೆ ಯ ಜೊತೆಗೆ ಹೊರಗಿನ  ಶಿಕ್ಷಣಹೊಂದಿಕೆಯಾಗಿದ್ದರೆ  ವಿರೋಧಗಳಿಗೆ ಸ್ಥಳವಿರುತ್ತಿರಲಿಲ್ಲ. ಒಟ್ಟಿನಲ್ಲಿ ಆಚರಣೆಯ ಹಿಂದಿನ ಗುರಿ ಸತ್ವಯುತವಾಗಿದ್ದರೆ ದೈವತ್ವ.

No comments:

Post a Comment