“ದೇವರೊಂದಿಗೆ ಮಾತನಾಡಲು ಪದಗಳೇ ಬೇಕಿಲ್ಲ…
ಕೆಲವೊಮ್ಮೆ ಮೌನವಾಗಿ ಅವನ ನೆಲೆಯಲ್ಲಿ ಕುಳಿತುಕೊಳ್ಳುವುದೇ ಸಾಕು.
ನಮ್ಮ ಮನಸ್ಸು ಹೇಳಲಾಗದ್ದನ್ನೂ ಅವನು ಕೇಳುತ್ತಾನೆ.
ಹಾಗಾದರೆ ಒಳಗಿರುವದೇವರನ್ನು ಅರ್ಥ ಮಾಡಿಕೊಳ್ಳಲು ಮೌನ ಅಗತ್ಯವಿದೆ. ಇದೊಂದು ಸಣ್ಣ ವಯಸ್ಸಿನಲ್ಲಿ ಬಂದ ಪ್ರಶ್ನೆಗೆ ಉತ್ತರವಾದರೂ ಬೆಳೆದಂತೆಲ್ಲ ಭೌತಿಕಾಸಕ್ತಿಯ ಭೌತವಿಜ್ಞಾನದ ಶಿಕ್ಷಣದಲ್ಲಿ ಒಳಗಿಳಿದು ಪ್ರಶ್ನಿಸಿಕೊಳ್ಳಲಾಗದೆ ಬಹಳ ದೂರನಡೆದಮೇಲೆ. ಮತ್ತದ ಪ್ರಶ್ನೆ ಉತ್ತರವಿಲ್ಲದೆ ಅಸಮಧಾನ ಅಸಂತೋಷದ ನಡೆ ನುಡಿಗಳ ನಡುವೆ 34 ವರ್ಷ ಕಳೆದೇ ಹೋಯಿತು. ಒಳಗಿನ ಸದ್ವಿಚಾರಕ್ಕೂ ಹೊರಗಿನ ವ್ಯವಹಾರಿಕ ಬದುಕಿಗೂ ಅಂತರ ಬೆಳೆಯುತ್ತಿದೆ ಎಂದರಿತಾಗ ವ್ಯವಹಾರದಿಂದ ದೂರವಾಗಲು ಪ್ರಯತ್ನಪಟ್ಟಾಗ ಸಾಕಷ್ಟು ಹಣದನಷ್ಟ. ಅದರ ಹಿಂದಿನ ಅನುಭವವೂ ವಿಶೇಷವಾಗಿದ್ದ ಕಾರಣದಿಂದ ಪರಮಾತ್ಮನೇ ಎಲ್ಲರಲ್ಲಿಯೂ ಇದ್ದು ನಡೆಸುವುದರಿಂದ ನಮ್ಮ ಧರ್ಮ ಕರ್ಮಕ್ಕೆ ತಕ್ಕಂತೆ ಋಣವೂ ಬೆಳೆಯುವಾಗ ಪರಮಾತ್ಮನ ಸ್ಮರಣೆಯೊಂದೇ ಸಾಕು. ಪೂರ್ವಜರ ಆಚಾರ ವಿಚಾರ ಶಾಸ್ತ್ರ ಸಂಪ್ರದಾಯದ ಹಿಂದಿನ ಪರಮತತ್ವವ ಅರಿಯದಿದ್ದರೆ ಅನಾಚಾರ ಭ್ರಷ್ಟಾಚಾರದ ರೂಪತಳೆದಾಗ ದೇವರಿರದೆ ಅಸುರರೆ ದೇವಸ್ಥಾನದಲ್ಲಿ ಕುಳಿತರೆ ಅಧೋಗತಿ ಕಲಿಯುಗದ ಪ್ರಾರಂಭವೇ ಹೀಗಾದರೆ ಮುಂದೆ ಹೇಗೆ?
ಕೆಲವು ಮಾತುಗಳು ಪ್ರಾರ್ಥನೆಯಾಗುತ್ತವೆ…
ಕೆಲವು ಮೌನಗಳು ದೇವರೊಂದಿಗೆ ಸಂಭಾಷಣೆಯಾಗುತ್ತವೆ.
ದೇವರೆಂದರೆ ವ್ಯಕ್ತಿಯಲ್ಲ ಆತ್ಮಶಕ್ತಿಯಾಗಿದೆ.
ಆಧ್ಯಾತ್ಮ ಆದಿಕಾಲದಿಂದಲೂ ಹಿಂದಿನಿಂದಲೂ ಇಂದಿನವರೆಗೂ ಇದ್ದರೂ ಅದನ್ನು ಸರಿಯಾಗಿ ವರ್ಣನೆ ಮಾಡೋದು ಕಷ್ಟ. ಹೀಗಾಗಿ ಅಂತರಗಳ ನಡುವೆಯೂ ಆಧ್ಯಾತ್ಮ ತನ್ನದೇ ಆದ ಅಸ್ತಿತ್ವಕ್ಕೆ ದಕ್ಕೆ ಬರದಂತೆ ಸ್ಥಿತಪ್ರಜ್ಞವಾಗಿರುತ್ತದೆ. ಎಂದೆಂದಿಗೂ ಒಂದೇ ಆಗಿರುವುದೇ ಪರಮಾತ್ಮನ ಸತ್ಯ. ಇದನ್ನು ಯಾವುದೇ ಜೀವಾತ್ಮರೂ ಬೇಧವೆಣಿಸಿದರೂ ಸತ್ಯ ಒಂದೇ ಸ್ಥಿರವಾಗಿರುವುದು.
ಮಾತಿನಲ್ಲಿ ನಾನಿದ್ದರೆ ಮೌನದಲ್ಲಿ ನಾನಿರೋದಿಲ್ಲ. ಹಾಗಾದರೆ ನಾನ್ಯಾರು? ನನ್ನ ಅಸ್ತಿತ್ವಕ್ಕೆ ಬೆಲೆಯಿದೆ ಎಂದರೆ ಅಸ್ತಿತ್ವದ ಹಿಂದೆ ಇರೋದು ಯಾರು? ಎಲ್ಲವೂ ಹೊರಗಿನಿಂದ ಸೇರಿದ್ದಾದರೆ ನನ್ನದೇನಿದೆ? ಎಲ್ಲಾ ಒಳಗಿನಿಂದ ಬರುತ್ತಿದೆ ಎಂದರೆ ಒಳಗಿರೋದು ಯಾರು? ಅದ್ವೈತ ದೊಳಗೆ ಧ್ವೈತ. ವಿಶಿಷ್ಟಾದ್ವೈತ ದೊಳಗೆ ಅದ್ವೈತ ಧ್ವೈತ... ಒಂದರೊಳಗೇ ಎಲ್ಲಾ ಇರೋವಾಗ ಬೇರೆ ಯಾವುದು? ಕಣ್ಣಿಗೆ ಕಾಣುವಂತೆ ಬೇರೆ ಬೇರೆ ಇದ್ದರೂ ಬೇರೆ ಮಾಡಿದವರು ಯಾರು? ಇದರಮೂಲ ಗುರಿ ಒಂದೇ ಆಗಿದ್ದರೂ ಗುರಿ ತಲುಪದಿದ್ದರೆ ಕಾರಣರು ಯಾರು?
ಎಲ್ಲದ್ದಕ್ಕೂ ಪರಮಾತ್ಮನೇ ಕಾರಣವಾದರೆ ಜೀವಾತ್ಮನ ಕೆಲಸವೇನು? ಪ್ರತಿಯೊಂದು ಪ್ರಶ್ನೆಗೆ ಉತ್ತರ ಒಳಗಿಳಿದು ಮೌನವಾದರೆ ಒಂದು ಉತ್ತರ ಸಿಕ್ಕರೆಹೊರಗಿದ್ದು ವಾದ ಮಾಡಿದಾಗ ಹಲವು ಉತ್ತರ ಹೊರಬರುತ್ತದೆ. ಒಂದರ ಹಿಂದೆ ಹೊರಟರೆ ಅಧ್ವೈತ ದರ್ಶನ ಅದೇ ಅಂತಿಮ ಗುರಿ. ಇದಕ್ಕೆ ನಾನು ಹೋಗಬೇಕು. ನಾನೆಂಬ ಅಹಂಕಾರ ದ ಬದಲು ಆತ್ಮವಿಶ್ವಾಸ ಇದ್ದರೆ ಉತ್ತಮ. ಆದರೆ ಸತ್ಯ ಹೇಳುವುದು ಕೇಳುವುದು ಕಷ್ಟವೆನ್ನುವ ಕಾರಣದಿಂದ ಮೌನ ಧ್ಯಾನವಾಯಿತು
ಆಗದವರು ಮಾತನಾಡಿ ಹೊರಬಂದರು. ಸತ್ಯ ಸತ್ವ ತತ್ವವಿರುವ ಕಡೆ ದೈವತ್ವದರ್ಶನ.ದೈವತ್ವದಿಂದ ತತ್ವದರ್ಶನ. ತತ್ವದಿಂದ ಸ್ವತಂತ್ರ ಜ್ಞಾನ..
No comments:
Post a Comment