ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, August 20, 2023

ಹಾವಿನ ದ್ವೇಷ= ಮಾನವನ ವೇಷ, ದ್ವೇಷ?


ಹಾವಿನ ದ್ವೇಷ ಹನ್ನೆರಡು ವರುಷ
ಮಾನವನ ರೋಷ ವೇಷ ನೂರು ವರುಷ. ನಾಟಕದ ಪಾತ್ರ ದ್ವೇಷವನ್ನು ಹರಡಿದಷ್ಟೂ  ಬೆಳೆಯುತ್ತದೆ ಇದಕ್ಕಾಗಿ ವೇಷ ಹಾಕಿಕೊಂಡರೆ  ಪರಿಣಾಮ ಅಪಾಯಕಾರಿಯಾಗಿರುವುದು.‌ವಿಶ್ವದ ತುಂಬಾ ತುಂಬಿರುವ ಈ ರಾಜಕೀಯ ದ್ವೇಷ,ವೇಷಗಳನ್ನು ನೋಡಿಕೊಂಡಿರುವವರು  ವೇದದ ಸಾರವನರಿಯರು.ತತ್ವ ಬಿಟ್ಟು ತಂತ್ರವೇ  ಮುಗಿಲುಮುಟ್ಟಿದಾಗ  ಮನುಕುಲ ಅತಂತ್ರಸ್ಥಿತಿಗೆ  ತಲುಪುವುದು ಸಹಜ . ಸೃಷ್ಟಿ ಯೇ ಸರಿಪಡಿಸಿದರೆ ಸ್ಥಿತಿ ಉತ್ತಮವಾಗಿರುವುದು. ನಮ್ಮ ಪರಿಸ್ಥಿತಿ ನಮಗಷ್ಟೇ ತಿಳಿದರೆ  ಮೇಲೇರಿದವರ ಪರಿಸ್ಥಿತಿ  ಸಾಕಷ್ಟು ಮಂದಿಗೆ  ಪೂರ್ಣ ಅರಿವಾಗದೆ  ಅವರಿಗೇ ಸಹಕರಿಸುತ್ತಾ ತಾವೂ ಮೂಲ ಬಿಟ್ಟು  ದೂರ ಹೋಗುವುದಾಗುತ್ತದೆ.‌
ಹಾವಿನ ವಿಷ ಕ್ಕಿಂತಲೂ ಮಾನವನ ದ್ವೇಷ ಅಪಾಯಕಾರಿ ಇದಕ್ಕೆ ಕಾರಣವೇ ಬೇಧಭಾವದ ಅಸಮಾನತೆಯ ರಾಜಕೀಯ ಬುದ್ದಿ. ಅಜ್ಞಾನದಲ್ಲಿ ಬೆಳೆದಿರೋದನ್ನು ಜ್ಞಾನದಿಂದ  ತಿಳಿದು ಸರಿಪಡಿಸಿಕೊಂಡರೆ  ಶಾಂತಿ ಆತ್ಮತೃಪ್ತಿ.
ಬೇಧವಿಲ್ಲದ್ದು ಅಧ್ವೈತ. ಬೇಧ ಹೆಚ್ಚಾದದ್ದು ಅದ್ವೈತದೊಳಗೇ ಅಡಗಿದ್ದ ದ್ವೈತದಿಂದ.ಹಾಗಾದರೆ ದ್ವೈತವನ್ನು ಸಮಾನತೆಗೆ ಬಳಸಿ ಏಕತೆ ತರಲು ಸಾಧ್ಯವಾದರೆ ಅದೂ ಅಧ್ವೈತವಾಗುವುದು.ನಾನಿಲ್ಲದೆ ನೀನಿಲ್ಲ ಅವನಿಲ್ಲದೆ  ಯಾರೂ ಇಲ್ಲ .ಮನುಕುಲಕ್ಕೆ ಇರೋದು ಒಂದೇ ಭೂಮಿ  ಭೂಮಿ ಆಕಾಶದಲ್ಲಿ ತಿರುಗುತ್ತಿದೆ ಆಕಾಶದಲ್ಲಿ  ಎಲ್ಲಾ ಇದೆ  ಆದರೆ ಮಾನವ ಕುಲ ಬದುಕೋದಿಲ್ಲ. ಇದ್ದರೂ ಭೂಮಿಯ  ಗಾಳಿಯಿಂದಲೇ ಆದಾಗ‌ ವಾಯುಜೀವೋತ್ತಮ. ಭೂಮಿಯಲ್ಲಿ ಮಾತ್ರ ಬೇಧಭಾವ ಎಂದಾಗ  ಇಲ್ಲಿಗೆ ಬಂದ ಜೀವಾತ್ಮನಿಗೆ ಪರಮಸತ್ಯ ತಿಳಿದ ಮೇಲೇ  ಜ್ಞಾನೋದಯ.ಜ್ಞಾನದಿಂದ  ಬೇಧ ಹೋದಾಗಲೇ ತತ್ವದರ್ಶನ. ತಂತ್ರದಿಂದ  ಬೇಧವಳಿಸುವ‌ಪ್ರಯತ್ನ ನಡೆಸಿದರೂ  ತತ್ವದರ್ಶನ ವಾಗದೆ  ಇದ್ದರೆ  ತಾತ್ಕಾಲಿಕ ವಷ್ಟೆ.
ದ್ವೇಷದಿಂದ  ಹೋರಾಟ ನಡೆಸುವುದಕ್ಕೂ ಪ್ರೀತಿಗಾಗಿ ಹೋರಾಡುವುದಕ್ಕೂ ವ್ಯತ್ಯಾಸವಿದೆ. ಪ್ರೀತಿಯ ಹೋರಾಟ ಸತ್ವಯುತವಾಗಿದ್ದರೆ ಶಾಂತಿ ಸುಖ ಸಂತೋಷ ನಿಧಾನವಾಗಿ ಸಿಕ್ಕರೂ ಶಾಶ್ವತವಾಗಿರುವುದು. ಒಳಗೇ ದ್ವೇಷವಿಟ್ಟುಕೊಂಡು ಹೊರಗೆ ಪ್ರೀತಿಯ ನಾಟಕ ಮಾಡಿ ಗೆದ್ದರೆ‌  ಕೊನೆಗೆ ದು:ಖವೇ ಗತಿ. ಹಾಗೆ ಒಗ್ಗಟ್ಟು ಒಮ್ಮತ ಏಕತೆ, ಐಕ್ಯತೆಯು  ಪ್ರೀತಿಯಿಂದಲೇ ತತ್ವದಿಂದಲೇ  ಬೆಳೆದಾಗ ಧರ್ಮ ರಕ್ಷಣೆ.
ಪಾಂಡವ ಕೌರವರಿಗೆ  ಭೀಷ್ಮ ಪಿತಾಮಹರಾಗಲಿ ಶ್ರೀ ಕೃಷ್ಣ ರಾಗಲಿ  ದ್ವೇಷ  ಮಾಡದೆಯೇ ಗೆದ್ದರು. ಧರ್ಮರಕ್ಷಣೆಗಾಗಿ ನಡೆದ  ಹೋರಾಟ‌ದಲ್ಲಿ  ತತ್ವವಿತ್ತು .ತಂತ್ರದ ಬಳಕೆಯೂ ಆಗಿತ್ತು ಆದರೆ  ತತ್ವಕ್ಕೆ ವಿರುದ್ದವಿರಲಿಲ್ಲ.
ಮಹಾಭಾರತಯುದ್ದ ರಾಮಾಯಣಯುದ್ದದ ಹಿಂದೆ ಸ್ತ್ರೀ ಶಕ್ತಿಯ ದುರ್ಭಳಕೆ ಕಾರಣವಾದಂತೆ  ಈಗಲೂ ಭಾರತದ ಈ ಸ್ಥಿತಿಗೆ  ಇದೇ ಕಾರಣವಾಗಿದೆ. ಎಲ್ಲಿಯವರೆಗೆ ಸ್ತ್ರೀ ತನ್ನ ಐಹಿಕ ಸುಖಾಭೋಗಕ್ಕಾಗಿ ಪುರುಷರಿಗೆ ಸಹಕರಿಸಿ ಅಧರ್ಮ  ಇರುವುದೋ ಅಲ್ಲಿಯವರೆಗೆ  ಭಾರತ  ಭರತಭೂಮಿ ಆಗದು. ಮೇಲೇರಿದ ಮೇಲೆ ಕೆಳಗೆ ಇಳಿಯುವುದು ಸಹಜ. ಇಳಿಯುವುದನ್ನೂ  ಮೊದಲೇ ಕಲಿತಿದ್ದರೆ ಉತ್ತಮ. ಇಲ್ಲ  ನಾನು ಮೇಲೇ ಇರೋದೆಂದರೆ  ಎಳೆದು  ಹಾಕುವವರು ಇರುತ್ತಾರೆ. ಅದಕ್ಕೆ ಡಿ.ವಿ.ಜಿಯವರು  ಹೇಳಿರೋದು ಮೊದಲು ಮಾನವನಾಗು, ಎಲ್ಲರೊಳಗೊಂದಾಗು ಮಂಕುತಿಮ್ಮ .ಜ್ಞಾನ ಎಲ್ಲರನ್ನೂ ಒಂದಾಗಿಸಿ  ಸತ್ಯಧರ್ಮದ ಕಡೆಗೆ ನಡೆಸಿದರೆ, ಅಜ್ಞಾನ ಬೇರೆ ಬೇರೆ ಮಾಡುತ್ತಾ ತಾನೇ ಮೇಲೆನ್ನುವುದು ಮಾನವನ ಸಹಜ ಗುಣವಾಗಿರುತ್ತದೆ.
ವಿಷ್ಣುವಿನ ಅವತಾರ ಅಸಂಖ್ಯಾತವಾದಂತೆ ಬ್ರಹ್ಮ ಶಿವಾವತಾರವಾಗಿದೆ.ಸ್ಥಿತಿಗೆ ಬೆಲೆಕೊಟ್ಟಂತೆ ಸೃಷ್ಟಿ ಲಯವೂ ಮುಖ್ಯವಾಗಿರುವುದೆ?  ಇಲ್ಲವೆಂದರೂ  ನಡೆಯೋದನ್ನು ನಿಲ್ಲಸಲಾಗದು. ಆಗೋದನ್ನು ತಡೆಯಲಾಗದು  ತಡೆದರೂ  ಶಾಶ್ವತವಿರದು.ಇದೇ ಜನನ ಮರಣದ ನಡುವಿರುವ ಜೀವನದ ಸತ್ಯ.  ಎಲ್ಲಾ ಇದ್ದಾಗ  ಕಾಣೋದಿಲ್ಲ.ಹೋದ ಮೇಲೆ ಸಿಗೋದಿಲ್ಲ. ಆದರೂ ಬೇಧಭಾವ ಬಿಡೋದಿಲ್ಲ.
ಹುಟ್ಟುಗುಣ ಸುಟ್ಟರೂ ಹೋಗೋದಿಲ್ಲ.ಇದು ಹೊರಗಿಲ್ಲ ಒಳಗೇ ಇರೋದು.

Wednesday, August 16, 2023

ಸ್ವಾತಂತ್ರ್ಯ ಯಾರಿಗೆ ಸಿಕ್ಕಿದೆ?

ಸ್ವಾತಂತ್ರ್ಯ ಸಿಕ್ಕಿ 76 ವರ್ಷ ಕಳೆದೇ ಹೋಯಿತು.ಈಗಲೂ ಉತ್ಸವಾಚರಣೆಯಲ್ಲಿ ಯಾವುದೇ ಕೊರತೆಯಿಲ್ಲವಾದರೂ ಸ್ವಾತಂತ್ರ್ಯ ವನ್ನು ಸ್ವೇಚ್ಚಾಚಾರವೆಂದರಿತ ಯುವಪೀಳಿಗೆಯ ಸಂಖ್ಯೆ ಮಿತಿಮೀರಿರೋದು ಭಾರತೀಯರ ದೋಷವೋ ಅಥವಾ ಪರಕೀಯರ ವೇಷವೋ?
ವೇಷಭೂಷಣಗಳಿಂದ ನಾಟಕವಾಡಿಕೊಂಡು ಸ್ವತಂತ್ರ ಭಾರತದಲ್ಲಿ  ನಡೆಯೋದೇ ಬೇರೆ ಯಾವ ವೇಷಧರಿಸದೆಯೇ ದೇಶಕ್ಕಾಗಿ ದುಡಿದು ಬದುಕುವುದೇ ಬೇರೆ. ಹೀಗಿರುವಾಗ ದೇಶದ ಸಾಲವನ್ನು ತೀರಿಸುವ ಹಿಂದಿನ ಮಹಾತ್ಮರ ಜೀವಬಲಿದಾನವನ್ನು ನೆನಪಿಸಿಕೊಳ್ಳಲು ಕೇವಲ ಒಂದು ದಿನಸಾಕೆ? ಪ್ರತಿದಿನವೂ ಮಕ್ಕಳ ತಲೆಗೆ ತುಂಬುದ ವಿಷಯದಲ್ಲಿ ದೇಶಭಕ್ತಿಯ ವಿಚಾರವಿದ್ದರೆ ದೇಶದಲ್ಲಿ ಇಷ್ಟು ಭ್ರಷ್ಟಾಚಾರವಿರುತ್ತಿರಲಿಲ್ಲ. ಕಾಲದ ಪ್ರಭಾವ. ಪ್ರಭಾವಿ ವ್ಯಕ್ತಿಗಳನ್ನು ಕರೆದು  ರಾಷ್ಟ್ರ ದ್ವಜಾರೋಹಣ ಮಾಡುವಾಗ ಪ್ರಭಾವಿ ವ್ಯಕ್ತಿಯ ಹಿಂದಿನ ಶಕ್ತಿಯನ್ನು  ಗಮನಿಸುವುದೂ ಅಗತ್ಯವಿದೆ. ಅಷ್ಟೊಂದು ಪ್ರಭಾವ  ಬೀರುವ ವ್ಯಕ್ತಿತ್ವವುಳ್ಳವರು ದೇಶದ ಸಾಲ ತೀರಿಸಲು ಯಾವ  ಕೆಲಸ ಕಾರ್ಯ ದಲ್ಲಿರುವರು? ಸಮಾಜದ ಪರಿಸ್ಥಿತಿಯನ್ನು ಎಷ್ಟು ಅರ್ಥ ಮಾಡಿಕೊಂಡಿರುವರು? ಜನಸಾಮಾನ್ಯರಂತೆ  ಎಷ್ಟು ಸರಳಜೀವನ ನಡೆಸಿರುವರು? ಭಾರತ ಮಾತೆ ಇರೋದೆ ಸರಳತೆಯಲ್ಲಿ.ಮಾನವ ಎಷ್ಟು ಸರಳವಾಗಿರುವನೋ ಅಷ್ಟು ಉಳಿತಾಯ ಮಾಡುವನು.ಉಳಿತಾಯದಲ್ಲಿ ಹಣ ಮಾತ್ರ ಬರೋದಿಲ್ಲ‌  ನಮ್ಮ ಧರ್ಮ, ಸಂಸ್ಕೃತಿ, ಭಾಷೆ,  ನೆಲ,ಜಲ,ದೇಶವನ್ನು ಉಳಿಸಿ ಬೆಳೆಸುವುದು ಉಳಿತಾಯ.ಇದರಿಂದಾಗಿ ನಮ್ಮ ಋಣ ಅಥವಾ ಸಾಲ ಕಳೆದು ಹಿಂದಿನ ಮಹಾತ್ಮರ ನಡೆ ನುಡಿಯಲ್ಲಿದ್ದ ಸತ್ಯದ ಅರಿವಾಗುವುದು. ಎಲ್ಲೆಂದರಲ್ಲಿ  ಯಾರು ಯಾರಿಗೋ ರಾಷ್ಟ್ರದ ದ್ವಜ ಹಂಚುವ  ಬದಲಾಗಿ  ರಾಷ್ಟ್ರೀಯ ಚಿಂತನೆ  ಹೆಚ್ಚಿಸುವ   ದೇಶಭಕ್ತರನ್ನು ಅರಿತು ನಡೆಯೋ ಮಹಾತ್ಮರನ್ನು  ಸೃಷ್ಟಿ ಮಾಡುವ ಶಿಕ್ಷಣ ಭಾರತಕ್ಕೆ ಅಗತ್ಯವಿದೆ.
ಹೀಗೆ ಹೇಳಿದರೂ ನೀವ್ಯಾರು  ನಿಮಗೇನು ಕೆಲಸ ನಿಮಗೇನು ಅಧಿಕಾರ ಎಂದು ಕೇಳುವ ನಮ್ಮವರೆ ನಮಗೆ ಪರಕೀಯರು.
ಇದು ಭಾರತವನ್ನು ರಾಜಕೀಯವಾಗಿ ಬೆಳೆಸಿ ರಾಜಯೋಗದ  ಸತ್ಯದಿಂದ ದೂರಮಾಡಿರೋದಕ್ಕೆ ಕಾರಣವೇ ನಮ್ಮ ಶಿಕ್ಷಣ.
ಬ್ರಿಟಿಷ್ ರಿಂದ ನಮ್ಮ ದೇಶ ಹಾಳಾಗಿಲ್ಲ ನಮ್ಮಲ್ಲಿಯ ಒಡಕಿನಿಂದ ಹಾಳಾಗಿದೆ. ನಮ್ಮೊಳಗೇ ಸರಿಯಾದ ಒಗ್ಗಟ್ಟು ಇಲ್ಲದ ಮೇಲೆ ಹೊರಗಿನವರ ಹೆಸರಿನಲ್ಲಿ ನಮ್ಮ ಮಹಾತ್ಮರ ತಪ್ಪು ಎತ್ತಿ ಹಿಡಿಯುವಷ್ಟು  ಸ್ವಾರ್ಥ ಅಹಂಕಾರದ ಅಜ್ಞಾನ ನಮ್ಮವರನ್ನೇ ದೂರ ಮಾಡಿಕೊಂಡು  ಪರಕೀಯರನ್ನು ಅತಿಥಿ ಸತ್ಕಾರ ಮಾಡುತ್ತಾ ಸ್ವಾತಂತ್ರ್ಯ ದಿನಾಚರಣೆ ಮಾಡಿ ನಾವು ಸ್ವತಂತ್ರ ಪ್ರಜೆಗಳೆನ್ನುವವರೊಮ್ಮೆ  ಸ್ವತಂತ್ರ ಜ್ಞಾನ  ನಮ್ಮೊಳಗೇ ಇರೋವಾಗ. ಯಾಕಿಷ್ಟು ಅತಂತ್ರಸ್ಥಿತಿಗೆ ಜನ ಜೀವನ ತಲುಪುತ್ತಿದೆ ಎಂದು ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡಬೇಕಿತ್ತು.
ದೇಶದ ಪ್ರತಿಯೊಬ್ಬ ಪ್ರಜಾಶಕ್ತಿ ಸರಿಯಾಗಿ ದುಡಿದು  ಜೀವನ ನಡೆಸಲಾಗದೆ ಸರ್ಕಾರದ ಹಿಂದೆ ನಿಂತಿರೋದು ಸ್ವಾತಂತ್ರ್ಯ ದ  ಚಿಹ್ನೆಯಾಗದು. ಒಟ್ಟಿನಲ್ಲಿ ಹೇಳೋದಾದರೆ ಸ್ವಾತಂತ್ರ್ಯ ನಮಗೆ ಸಿಕ್ಕಿದ್ದು ಮಹಾತ್ಮರಿಂದ. ಅದನ್ನು ದುರ್ಭಳಕೆ ಮಾಡಿಕೊಂಡು ಆಳಿದ್ದು ನಮ್ಮವರೆನ್ನಿಸಿಕೊಂಡವರೆ ಹೊರತು ಪರಕೀಯರಲ್ಲ.ಇದಕ್ಕೆ ಕಾರಣ ಪರಕೀಯರ ಶಿಕ್ಷಣ.ಈಗಲೂ ಬುದ್ದಿವಂತ ವಿದ್ಯಾವಂತ,ಜ್ಞಾನವಂತರಿಗೆ ದೇಶದಲ್ಲಿ ಸ್ವತಂತ್ರ ವಾಗಿ ದುಡಿದು ಬದುಕಲಾಗದೆ ಹೊರ ದೇಶದವರ ಕೈಕೆಳಗಿದ್ದೇ  ಲಕ್ಷಾಂತರ ರೂ ಸಂಪಾದಿಸಿದರೂ ದೇಶದ ಸಾಲ ತೀರುತ್ತಿಲ್ಲವೆಂದರೆ  ನಮ್ಮದೇ ಜ್ಞಾನದ ಶಿಕ್ಷಣ ಬಿಟ್ಟು ಹೊರಗಿನ ವಿಜ್ಞಾನದಿಂದ  ಪಡೆದ ವಿಷಯದಲ್ಲಿ ಪೂರ್ಣ ಸತ್ಯವಿಲ್ಲದೆ ಭೌತಿಕಾಸಕ್ತಿ ಬೆಳೆದಿದೆ.ಅಧ್ಯಾತ್ಮ ಸತ್ಯ ಹಿಂದುಳಿದಿದೆ. ಅಧ್ಯಾತ್ಮ ವಿಚಾರಗಳನ್ನು ಪ್ರಚಾರ ಮಾಡಲು ಸ್ವಾತಂತ್ರ್ಯ ವಿದ್ದರೂ ಅದೂ  ಕೆಲವರಿಗಷ್ಟೆ ಸೀಮಿತವಾಗಿದ್ದು ಜನಸಾಮಾನ್ಯರೊಳಗಿದ್ದ ಜ್ಞಾನವನ್ನು ನಿರ್ಲಕ್ಷ್ಯ ಮಾಡಿ ಆಳುವ  ರಾಜಕೀಯತೆ ಮನೆ ಮನೆಯೊಳಗಿದೆ. 
ಭ್ರಷ್ಟಾಚಾರದ ಹಣದಲ್ಲಿ ಉತ್ಸವ,ಆಚರಣೆ,ಪ್ರಚಾರ ಮಾಡಿ ಹೆಸರು ಹಣ,ಅಧಿಕಾರ ಪಡೆದವರು ಪ್ರತಿಷ್ಟಿತರು.  ಆದರೆ ಈ ಉತ್ಸವ ಆಚರಣೆಗಳಿಗೆ ಸುರಿಯುವ ಕೋಟ್ಯಾಂತರ ಹಣ ಪ್ರಜೆಗಳೇ  ದುಡಿದು ತೀರಿಸುವವರೆಗೂ ದೇಶದ ಋಣ ತೀರದು. ಕೆರೆಯ ನೀರನು ಕೆರೆಗೆ ಚೆಲ್ಲಿ ಸರಿ,ಆದರೆ ಕೆರೆಯ ನೀರನು ಕೊಳಚೆಗೆ ಚೆಲ್ಲಿದರೆ  ಸ್ವಚ್ಚತೆ ಎಲ್ಲಿರುವುದು.
 ಕೆಲವೆಡೆ ಉತ್ತಮ ವ್ಯಕ್ತಿಗಳಿಂದ ದ್ವಜಾರೋಹಣವಾಗಿದೆ. ಆದರೆ ಕೆಲವೆಡೆ   ದೇಶವನ್ನೇ ಇಕ್ಕಟ್ಟಿಗೆ ಸಿಲುಕಿಸುತ್ತಾ ಜನರ ದಾರಿ ತಪ್ಪಿಸಿ ಆಳುವವರು  ಸ್ವಾತಂತ್ರ್ಯ ದ ದ್ವಜ ಹಿಡಿದು ಹಾರಿಸಿದರೆ ನಿಜವಾದ ಸ್ವಾತಂತ್ರ್ಯ ಯಾರಿಗೆ ಸಿಕ್ಕಿದೆ?
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಸಹಕಾರವಿಲ್ಲದೆ ಏನೂ ನಡೆಯದು ಎಂದಾಗ ಎಲ್ಲದ್ದಕ್ಕೂ ಕಾರಣವೇ ಸಹಕಾರ.
ಇದು ಜ್ಞಾನದ ಪರವಿದೆಯೋ ಅಜ್ಞಾನದ ಪರ ಇದೆಯೋ ತಿಳಿದುಕೊಂಡು ನಡೆಯಲೂ ಉತ್ತಮ ಶಿಕ್ಷಣದ ಅಗತ್ಯವಿದೆ.
ಪ್ರಗತಿಪರ ದೇಶದಲ್ಲಿ ಪ್ರಜೆಗಳಾದವರು ದೇಶದ ಸಾಲ ತೀರಿಸುವತ್ತ ನಡೆಯುತ್ತಾರೆ. ಸಾಲ ಬೆಳೆಸೋ ಕಾರ್ಯಕ್ರಮ ಗಳು  ಕಡಿಮೆಯಾದಷ್ಟೂ‌  ದೇಶದ ಜೊತೆಗೆ ದೇಶವಾಸಿಗಳ ಸಾಲವೂ ತೀರುವುದು.
ಒಂದು ಹೊತ್ತಿನ ಊಟವಿಲ್ಲದವರ ಮುಂದೆ ‌ ದ್ವಜ ಹಾರಿಸಿ ಒಂದು ದಿನದ ಊಟ ಕೊಟ್ಟರೆ  ಕಾರ್ಯಕ್ರಮವಾಗುತ್ತದೆ.
ಅದೇ ಅವರಿಗೆ ಸರಿಯಾಗಿ ದುಡಿದು ಬದುಕುವ ಸ್ವಾತಂತ್ರ್ಯ ಕೊಟ್ಟು ಕೆಲಸ ಕೊಟ್ಟರೆ ಆತ್ಮನಿರ್ಭರ ಭಾರತ. ಒಂದು ದಿನದ ಖರ್ಚು ವೆಚ್ಚ ಬಡವರ ಪಾಲಿಗೆ  ಒಂದು ವರ್ಷದ ಜೀವನಕ್ಕೆ ಸಾಕು. 
ರಾಷ್ಟ್ರ ಭಕ್ತರನ್ನು  ಹೊರಗಿನ ವೇಷದಿಂದ ತೀರ್ಮಾನ ಮಾಡುವ‌ ಬದಲಾಗಿ ಒಳಗಿನ‌ಜ್ಞಾನದಿಂದ ತಿಳಿಯುವವರೆಗೆ ಭಾರತ ಸ್ವತಂತ್ರ ದೇಶವೆನಿಸಿಕೊಳ್ಳುವುದು ಕಷ್ಟವಿದೆ.ಈಗ ವಿದೇಶಿ ಬಂಡವಾಳ, ಸಾಲ,ವ್ಯವಹಾರ, ಶಿಕ್ಷಣವೇ ಸ್ವದೇಶಿಗಳಿಗೆ‌  ನುಂಗಲಾರದ ತುತ್ತಾಗಿದೆ. ಎಷ್ಟೇ ಹೊಟ್ಟೆಗೆ ಹಾಕಿಕೊಂಡರೂ ಒಳ ಹೋದ ಮೇಲೇ ಅದರ ಪರಿಣಾಮ ಅನುಭವಿಸಬೇಕಿದೆ. ಕಣ್ಣಿಗೆ ಕಾಣುವ ಸ್ವಾತಂತ್ರ್ಯ ಕಾಣದ ಸ್ವಾತಂತ್ರ್ಯ ವನ್ನು  ಎಷ್ಟೇ ವಿರೋಧಿಸಿದರೂ ಆತ್ಮತೃಪ್ತಿ ಸಿಗಲು ಕಾಣದ ಸ್ವಾತಂತ್ರ್ಯ ವೇ  ಬೇಕಿದೆ. ಅದು ಭಾರತೀಯರ  ಆಂತರಿಕ ಶಕ್ತಿಯಾಗಿತ್ತು. ಈಗಲೂ ಇದೆ ಎಚ್ಚರವಾದರೆ ಉತ್ತಮ. ಆತ್ಮಶಕ್ತಿಯನ್ನು ಸರ್ಕಾರ ಬೆಳೆಸದು. ಕಾರಣ ಸರ್ಕಾರವೇ ಜನರಿಂದ ನಡೆದಿದೆ.ಇನ್ನು ಜನರನ್ನು ನಡೆಸುವವರು ಯಾರು? ಒಳಗೇ ಇರುವ ಮಹಾಶಕ್ತಿಭಾರತ ಮಾತೆ ಎಂದರೆ ಅವಳ ಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಶಿಕ್ಷಣವೇ ನಮ್ಮ ಭಾರತೀಯ ಶಿಕ್ಷಣವಾಗಿತ್ತು.ದೇಶಭಕ್ತಿಗೆ ದೇಶೀಯ ಶಿಕ್ಷಣವೇ ಮೂಲಾಧಾರ.ನಂತರವಷ್ಟೆ ವಿದೇಶಿ ಶಿಕ್ಷಣದ ಪ್ರಚಾರ.ಈಗಿದು‌ ಮೊದಲೇ ವಿದೇಶಿ ಶಿಕ್ಷಣ ನಂತರ‌ವೃದ್ದರಿಗೆ ಸ್ವದೇಶಿ ಜ್ಞಾನೋಪದೇಶ ಮಾಡುವ ಪರಿಸ್ಥಿತಿಯಲ್ಲಿ ದೇಶವಿದೆ.ಬದಲಾವಣೆ ಜಗದ ನಿಯಮ. ಬದಲಾದರೆ ಉತ್ತಮ ಜೀವನ. ಪರರನ್ನು ಬದಲಾಯಿಸುವ ಸ್ವಾತಂತ್ರ್ಯ ಇದ್ದವರು ತಮ್ಮನ್ನು  ತಾವುಬದಲಾಯಿಸಿಕೊಂಡರೆ ಉತ್ತಮ.
ಆಂತರಿಕ ಶಕ್ತಿ ಒಲಿಯೋದು ಹಣಕ್ಕಲ್ಲ ಜ್ಞಾನಕ್ಕೆ.  ಅದಕ್ಕಾಗಿ ಹೊರಗಿನ ಹೋರಾಟ,ಹಾರಾಟ ಮಾರಾಟದ ಬದಲು ಒಳಗಿನ ಸಾತ್ವಿಕ ಹೋರಾಟವಾದ ಉಪವಾಸ ಸತ್ಯಾಗ್ರಹ, ಸ್ವದೇಶೀ ಚಳುವಳಿ, ಅಸಹಕಾರ ಚಳುವಳಿ..ಮುಂತಾದ ಚಳುವಳಿಗಳ ಹಿಂದೆ ಅಧ್ಯಾತ್ಮಿಕ ಸತ್ಯವಡಗಿತ್ತು.ಇದನ್ನು ಅರ್ಥ ಮಾಡಿಕೊಳ್ಳಲು ಸೋತವರು ತಮ್ಮ ಅಧಿಕಾರಕ್ಕಾಗಿ ಮಹಾತ್ಮರನ್ನೇ ಸರಿಯಿಲ್ಲವೆನ್ನುವ  ಮಟ್ಟಿಗೆ ಬೆಳೆದಿರೋದು ಭಾರತೀಯರ ದುರಂತವಷ್ಟೆ.ನಮ್ಮವರೆ ನಮಗೆ ಶತ್ರುಗಳಾದರೆ ಪರಕೀಯರನ್ನು ಮಿತ್ರರಾಗಿಸಿಕೊಳ್ಳುವುದರ ಹಿಂದೆ ಕೇವಲ ರಾಜಕೀಯವಿರುತ್ತದೆ.ರಾಜಯೋಗವಿರದು.
ಸ್ವಾಮಿ ವಿವೇಕಾನಂದರ ರಾಜಯೋಗವನ್ನು ಅರ್ಥ ಮಾಡಿಕೊಂಡು ನಡೆದ  ಯುವಕರು ವಿದೇಶದೆಡೆಗೆ ನಡೆದಿದ್ದಾರೆಂದರೆ ಅದರಲ್ಲಿ ಯೋಗವಿರಲಿಲ್ಲ ಭೋಗವಷ್ಟೆ‌ ಇರೋದು. ಇದು ಅಧರ್ಮ ದೆಡೆಗೆ‌  ನಡೆಸುತ್ತಿದೆ ಎಂದರ್ಥ.
ಸ್ವದೇಶದ ಸಾಲ ತೀರಿಸಲು ಸ್ವದೇಶ ಸೇವೆ  ಮಾಡಬೇಕೇಹೊರತು ವಿದೇಶ ಸೇವೆ ಮಾಡೋದರಿಂದ ವಿದೇಶಿ ಸಾಲ ತೀರಿಸಬಹುದು. ನಮ್ಮ‌ ಸಾಲ ವಿದೇಶದ ವರೆಗೂ ಹರಡಿದೆ ಎಂದರೆ ಇದರ ಮೂಲವೇ ವಿದೇಶಿ ಶಿಕ್ಷಣ.ಅಜ್ಞಾನದ ಅಂದಕಾರದಲ್ಲಿ ಎಷ್ಟು ಓದಿದರೂ ಸಾಲ ತೀರದು.ಇದೇ ಹಿಂದೂ ಧರ್ಮ ಕ್ಕೂ‌ಪರಧರ್ಮ ಕ್ಕೂ ಇರುವ ವ್ಯತ್ಯಾಸ. ಹಿಂದೂಗಳ ದೇಶವಾಗಿದ್ದ ಭಾರತದೊಳಗೆ ಎಲ್ಲಾ ಧರ್ಮದವರೂ ಬೆಳೆದರು.ಆದರೆ ದೇಶಭಕ್ತಿ ಇಲ್ಲದೆ ಮೆರೆದ ಕಾರಣ‌ ಧರ್ಮ ಕುಸಿದಿದೆ.ಹಾಗೆಯೇ ಭಗವಂತನೊಳಗೇ ಇರುವ‌ ಮನುಕುಲಕ್ಕೆ ದೈವತ್ವವಿರಬೇಕಿತ್ತು. ಸ್ವಾರ್ಥ ಅಹಂಕಾರದ ಅಸುರಿತನವೇ  ದೇಹದೊಳಗೆ ಸೇರಿಕೊಂಡು ಎಷ್ಟೇ ದೇವರನ್ನು ಬೇಡಿ ಕಾಡಿದರೂ ಸಿಕ್ಕಿದ್ದೆಲ್ಲಾ ನನಗೇ ಎನ್ನುವ ಅತಿಆಸೆಯೇ ಸಾಲವೇ ಶೂಲವಾಗಿಸಿದೆ. ಅದ್ವೈತ ದೊಳಗೇ ದ್ವೈತ ದ ರಾಜಕೀಯತೆ. ವಿದೇಶದೊಳಗೇ  ದೇಶವಿದ್ದು  ಬೇರೆ ಬೇರೆ  ಎನ್ನುವ ರಾಜಕೀಯತೆ ದೇಶವನ್ನು ಕಟ್ಟುವುದರಲ್ಲಿ  ತೊಡಗಿದೆ. ಅಜ್ಞಾನದೊಳಗೇ ಅಡಗಿರುವ ಜ್ಞಾನವನ್ನು ಆಂತರಿಕ ಶುದ್ದಿಯಿಂದ ಮಾತ್ರ ಕಂಡುಕೊಳ್ಳಲು ಸಾಧ್ಯವಾದಾಗ ಶುದ್ದ ಮನಸ್ಸಿನ ನಿಗ್ರಹಕ್ಕೆ ಬೇಕಾದ ಯೋಗ ಶಿಕ್ಷಣ,ಯೋಗ್ಯ ಶಿಕ್ಷಣ,ಯೋಗ್ಯಗುರು,ಯೋಗ್ಯ ಪಠ್ಯಕ್ರಮ ಅಗತ್ಯವಿಲ್ಲವೆ? 
ಓದುಗರು ಇದರಲ್ಲಿರುವ ಸತ್ಯವನರಿತರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ದಲ್ಲಿ ನಾವೆಷ್ಟು ಸ್ವತಂತ್ರ ಚಿಂತನೆ ನಡೆಸುತ್ತಾ ದೇಶದೊಳಗಿರಲು ಸ್ವಾತಂತ್ರ್ಯ ಸಿಕ್ಕಿದೆ ಎನ್ನುವ ಪ್ರಶ್ನೆ ಹಾಕಿಕೊಂಡರೆ  ಬೆರಗಾಗಬಹುದು.ಗಾಭರಿಯಾಗಬಹುದು.
ಕಾರಣ ನಾವು ಹೊರಗಿನಿಂದ ಸ್ವಾತಂತ್ರ್ಯ ಪಡೆದರೂ ಒಳಗಿನ 
ಸ್ವಾತಂತ್ರ್ಯ ದಿಂದ ದೂರವಾಗಿದ್ದೇವೆ. ಇದಕ್ಕೆ ಅತಂತ್ರಸ್ಥಿತಿಗೆ ಜೀವನ ತಲುಪಿದೆ.  ದೇಶದಲ್ಲಿ  ವೃದ್ದಾಶ್ರಮ, ಅನಾಥಾಶ್ರಮ, ಅಬಲಾಶ್ರಮ,  ಬಿಕ್ಷುಕಾಶ್ರಮಗಳ ಸಂಖ್ಯೆ ಮಿತಿಮೀರಿದೆ ಎಂದರೆ  ಯಾರಿಗೆ ಸ್ವತಂತ್ರ ಸಿಕ್ಕಿದೆ? ಯೋಗಿಗಳ ದೇಶ ರೋಗಿಗಳ ದೇಶವಾಗುತ್ತಾ ಎಲ್ಲೆಂದರಲ್ಲಿ ಹೈಟೆಕ್  ಆಸ್ಪತ್ರೆಗಳು,  ಔಷಧ ಅಂಗಡಿಗಳಿವೆ  ಆದರೆ  ಆರೋಗ್ಯಕರ  ಸದ್ವಿಚಾರ ತಿಳಿಸುವವರಿಗೆ ಸಹಕಾರ ನೀಡದ  ಜನರು  ತಮ್ಮ  ಆರೋಗ್ಯವನ್ನೇ  ರಕ್ಷಣೆ ಮಾಡಿಕೊಳ್ಳಲಾಗದ  ಉಪದೇಶ,ಭಾಷಣಕಾರರು, ಇನ್ನಿತರ  ಮಧ್ಯವರ್ತಿಗಳು   ಆರೋಗ್ಯ ಹೆಚ್ಚಿಸುವ ಶಿಕ್ಷಣ ಕೊಡಲು ಸೋತರೆ ಮುಂದೆ ನಡೆದವರನ್ನಾಗಲಿ, ನಡೆಯುವವರನ್ನಾಗಲಿ ಅರ್ಥ ಮಾಡಿಕೊಳ್ಳರು.  ಆರೋಗ್ಯವಿದ್ದರೆ  ಸಾಧನೆ ಸಾಧ್ಯ.ಅದೂ ಅಧ್ಯಾತ್ಮಿಕ  ಸಾಧನೆಗೆ ಯೋಗ ಬೇಕಿದೆ. ಯೋಗದಿಂದ ಪರಮಾತ್ಮನ ಸಾಲ ತೀರಿಸಬಹುದು. ಈಗ ಭೋಗದ ಭೌತಿಕ ವಿಜ್ಞಾನಕ್ಕೆ ಸಾಲ ಬೆಳೆದಿದೆ ಎಂದರೆ ಸಾಲ ತೀರಿಸಲು ಸರ್ಕಾರದಿಂದ ಕಷ್ಟವಿದೆ.ಇದಕ್ಕೆ ಪ್ರಜೆಗಳ ಸರಳ ಜೀವನದ ಅಗತ್ಯವಿದೆ. ಇಂದಿನ ಶ್ರೀಮಂತ ಮುಂದಿನ‌ ಬಡವ.
ಇಂದಿನ‌ ಬಡವ ಮುಂದಿನ ಶ್ರೀಮಂತ. ಶ್ರೀಮಂತ ರಿಗೆ ಹಣದ ಕೊರತೆಯಿರದೆ ಜ್ಞಾನದ ಕೊರತೆಯಿದ್ದರೆ ಬಡವನಿಗೆ ಹಣದ ಕೊರತೆ ಇದ್ದು ಜ್ಞಾನವಿರುತ್ತದೆ.ಪೂರಕವಾದ ಶಿಕ್ಷಣ ನೀಡದೆ ಆಳಿದರೆ ತಪ್ಪು ಯಾರದ್ದು? ಹಿಂದೂ ಧರ್ಮ ದವರು ಇದನ್ನು ಕರ್ಮ ಫಲ ಎಂದರೂ‌ ಭೌತಿಕ ಜಗತ್ತು ಒಪ್ಪಲಾಗದು.
ಸಮಾನತೆಗೆ ಬೇಕು ಜ್ಞಾನದ ಶಿಕ್ಷಣ.  ಎಲ್ಲರಲ್ಲಿಯೂ ಅಡಗಿರುವ ಚೇತನಾಶಕ್ತಿಗೆ ಸರಿಯಾದ   ಜ್ಞಾನದ ಶಿಕ್ಷಣ ಸಿಗುವುದಕ್ಕೂ  ಪ್ರಾರಬ್ದ ಕರ್ಮ ಬಿಡದು. ಎಂದರೆ  ಋಣ ಮತ್ತು ಕರ್ಮ ವೇ  ಮಾನವನ ಸ್ವಾತಂತ್ರ್ಯ ವನ್ನು  ಕಸಿದುಕೊಂಡು ಆಳುತ್ತಿದೆ. ಸತ್ಕರ್ಮದಿಂದ ಋಣಮುಕ್ತರಾಗೋದು ಜೀವನ.ದುಷ್ಕರ್ಮದಿಂದ ಋಣಭಾರ ಹೊತ್ತು ಜೀವ ಹೋಗುತ್ತದೆನ್ನುವರು ಮಹಾತ್ಮರು. ಸಾಲ ತೀರಿಸಲು ಬಂದ ಜೀವಕ್ಕೆ ಇನ್ನಷ್ಟು ಸಾಲದ ಹೊರೆ ಹಾಕಿ ಬೆಳೆಸಿದರೆ  ಇದಕ್ಕೆ ಕಾರಣ ಅಜ್ಞಾನ.
ಮಹಿಳೆ ಮಕ್ಕಳ ಜ್ಞಾನ ಶಕ್ತಿಯನ್ನು ಮನೆಯೊಳಗಿದ್ದೇ ಬೆಳೆಸುವ ಗುರು ಹಿರಿಯರ ಕೊರತೆ ಭಾರತೀಯರ ಈ ಸ್ಥಿತಿಗೆ ಕಾರಣ.ಸತ್ಯವನ್ನು ನುಡಿದು ಧರ್ಮದಲ್ಲಿ ನಡೆದರೆ ಜ್ಞಾನಪ್ರಾಪ್ತಿಯಾಗುತ್ತದೆ.ಜ್ಞಾನದ ನಂತರವೇ ಸ್ವಾತಂತ್ರ್ಯ ಜೀವಕ್ಕೆ ಸಿಗೋದು. ಈಗಿನ ಸ್ವಾತಂತ್ರ್ಯ ತಾತ್ಕಾಲಿಕ ವಷ್ಟೆ.

ಉತ್ಸವಗಳಿರಲಿ‌  ಆದರೆ ಜ್ಞಾನದಿಂದ ನಡೆಯಲಿ. ಅತಿಯಾದ ಊಟ,ಉಪಚಾರ, ಉಡುಗೊರೆಗಳು  ಸಾಲವಾಗಿರುತ್ತದೆ.

ಕಲಿಯುಗದಲ್ಲಿ ದೇವರೆಲ್ಲಿ?

ಕಲಿಯುಗದಲ್ಲಿ ಕಲ್ಲಿನಲ್ಲಿ ದೈವತ್ವವಿದೆ ಮಾನವನಲ್ಲಿ ದೈವತ್ವವಿಲ್ಲವಾಗುತ್ತಿದೆ. ಕಾರಣ ವ್ಯವಹಾರಿಕ ಧಾರ್ಮಿಕ ಜೀವನ. ಇಲ್ಲಿ ದೇವರನ್ನು ವ್ಯವಹಾರಕ್ಕೆ ಎಳೆದಾಗ ಹಣ ಮಾತ್ರ ಕಾಣೋದು ಜ್ಞಾನವಲ್ಲ. ಹಣವಿಲ್ಲದವರಲ್ಲಿ ಜ್ಞಾನವಿದ್ದರೂ  ಗಮನಿಸದ ಶಿಕ್ಷಣ ವ್ಯವಸ್ಥೆ  ಮಾನವೀಯತೆಯನ್ನು ಹಾಳು ಮಾಡುತ್ತಿದೆ. ಗುರುವೇ  ವ್ಯವಹಾರಕ್ಕೆ ಬೆಲೆಕೊಟ್ಟರೆ ಶಿಷ್ಯರ ಗತಿ ಏನು?
ಭಾರತೀಯ ಶಿಕ್ಷಣ ಪದ್ದತಿ ಜಾರಿಗೆ ತರುವುದಕ್ಕೆ ಭಾರತೀಯ ಪ್ರಜೆಗಳೆ ತಯಾರಿಲ್ಲ. ಇನ್ನು ಶಿಕ್ಷಣ ಸಂಸ್ಥೆ ನಡೆಸೋರಿಗೆ  ಹಣವೇ ಮುಖ್ಯ. ಯಾವ ಶಾಲೆಯಲ್ಲಿ ಹೈಫೈ ವ್ಯವಸ್ಥೆ ಇರುವುದೋ ಅಲ್ಲಿಗೆ ಶ್ರೀಮಂತ ಮಂದಿ ಮಕ್ಕಳು ಬರುವುದು.
 ಆದರೆ ಅದರೊಳಗೆ ಕಲಿಸುವ ವಿಷಯ ಧಾರ್ಮಿಕವಾಗಿದ್ದರೆ  ಧರ್ಮ ರಕ್ಷಣೆಯಾಗುವುದು.ಆದರೆ ಹೈ ಫೈ ಜೀವನ ನಡೆಸುವಾಗ ಕಷ್ಟದ ಅನುಭವವಿರದ ಮಕ್ಕಳಿಗೆ ಶಿಕ್ಷೆ ನೀಡದೆ ಶಿಕ್ಷಣ ಕಲಿಸಲಾಗದ ಕಾರಣ  ವೈಜ್ಞಾನಿಕ ವಿಚಾರ ತಲೆಗೆ ತುಂಬಬಹುದು. ವೈಚಾರಿಕತೆಯ ವಿಚಾರದ ಹಿಂದಿನ ವೈಜ್ಞಾನಿಕತೆಯನ್ನೂ ತಿಳಿದು ತಿಳಿಸುವ ಕೆಲಸವಾದರೆ ಕೆಲವು ಸತ್ಯಾಸತ್ಯತೆ ಹೊರಬರುವುದು. ಅಧ್ಯಾತ್ಮ ವಿಜ್ಞಾನ ಭೌತಿಕ ವಿಜ್ಞಾನದ ಅಂತರವನ್ನು ಕಡಿಮೆಗೊಳಿಸುವುದೇ ಶಿಕ್ಷಣದ ಗುರಿಯಾದರೆ ಮಾನವನೊಳಗೂ ಇರುವ ದೈವತ್ವ ಎಚ್ಚರ ಆಗುತ್ತದೆ. 
ಇದನ್ನು ಮಾಡಬೇಕಾದವರು ಪೋಷಕರು. ಮಕ್ಕಳಿಗೆ ಮನೆಯೊಳಗೆ ಹೊರಗೆ ಕೊಡುವ ಶಿಕ್ಷಣದಲ್ಲಿಯೇ  ಉತ್ತಮ ಸದ್ವಿಚಾರವಿದ್ದರೆ ಸಂಸಾರದಲ್ಲೂ ನೆಮ್ಮದಿ ಸಮಾಜದಲ್ಲೂ  ನೆಮ್ಮದಿಯಿಂದ ಬದುಕಬಹುದು.ಹೇಳುವಷ್ಟು ಸುಲಭವಿಲ್ಲ. ಆದರೆ ಪ್ರಚಾರ ಮಾಡಿಕೊಂಡು  ಸತ್ಯ ತಿಳಿಯದೆ  ವ್ಯವಹಾರಕ್ಕೆ ಇಳಿದರೆ ಅಧರ್ಮ ಹೆಚ್ಚಾಗುವುದು ಸತ್ಯ.ಈಗ ಪರಿಸ್ಥಿತಿ ಹದಗೆಟ್ಟಿರುವಾಗ  ಅದನ್ನು ಯಾರದ್ದೋ ತಪ್ಪು ಎನ್ನುವ ಬದಲಾಗಿ ನಮ್ಮ ತಪ್ಪು ಎಷ್ಟಿದೆ ಎಂದು ತಿಳಿದರೆ ಮನೆಯೊಳಗೆ ವಿಗ್ರಹಕ್ಕೆ ಪೂಜಿಸಿ ದೇವರನ್ನು ಕಾಡಿ ಬೇಡಿ ಆಸೆ ಪೂರೈಸಿಕೊಳ್ಳುವವರಿಗೇನೂ ಕಡಿಮೆಯಿಲ್ಲ.ಇದಕ್ಕೆ ಜೊತೆಯಾಗಿ ನಿಂತು ಸಹಕಾರ ನೀಡುವ  ಸಹಚರರು, ಸಂಬಂಧಿ ಗಳು, ಸ್ನೇಹಿತರು  ಶ್ರೀಮಂತಿಕೆ ಬಂದಾಗ ದೂರದವರಾಗುವುದೂ  ಸಹಜವಾಗಿದೆ. ಅಂದರೆ ಸಹಾಯಕ್ಕೆ ನಿಂತವರೆ  ದೇವರಲ್ಲವೆ? ಅವರೊಂದಿಗೆ  ನಮಗೆ ಸಿಕ್ಕ. ಸುಖ ಸಂತೋಷ ಹಂಚಿಕೊಳ್ಳಲು  ಸಾಧ್ಯವಾದರೆ ಅದೇ ನಿಜವಾದ ಮಾನವೀಯತೆ. ದೈವತ್ವವುಳ್ಳವರು ನಮಗಾಗಿ ಏನೂ ಮಾಡಿಕೊಳ್ಳದೆ ಪರರಿಗಾಗಿ ಮಾಡುವರು.ಇದು ಪರಮಾತ್ಮನ ಸೇವೆಯಾದರೆ, ಮಾನವರು ತನ್ನ ಜೊತೆಗೆ ಪರರಿಗೂ  ಒಳ್ಳೆಯದಾಗಲಿ ಎಂದು ಬಯಸುವರು.ಅಸುರರು ಮಾತ್ರ ತನ್ನ ಸ್ವಾರ್ಥ ಸುಖಕ್ಕಾಗಿ ಪರರನ್ನು ಬಳಸಿಕೊಂಡು  ಅಧಿಕಾರ ಚಲಾಯಿಸುವರು. ಮೂರೂ ತರಹದವರು ಯಾವಾಗಲೂ ಭೂಮಿಯಲ್ಲಿರುವರು. ಇದನ್ನು ಸೂಕ್ಷ್ಮ ವಾಗಿ ಗಮನಿಸುವುದು ಕೇವಲ ಕೆಲವರಷ್ಟೆ. ಹೀಗಾಗಿ ಯಾರೇ ದೇವರ ಹೆಸರಿನಲ್ಲಿ ವ್ಯವಹಾರ ನಡೆಸಿದರೂ  ದೈವತ್ವಕ್ಕೆ ಬೆಲೆ ಕೊಡುವುದು ಸರಿ. ಭೌತಿಕದೆಡೆಗೆ ನಮ್ಮ ಆಸೆ ಆಕಾಂಕ್ಷೆಗಳನ್ನು  ಮಿತಿಮೀರಿ ಬೆಳೆಸುತ್ತಿದ್ದರೆ  ಅದೊಂದು ಅಜ್ಞಾನವೆಂದರಿತು  ಸ್ವಲ್ಪ ತಡೆದುಕೊಂಡು ಆತ್ಮಾವಲೋಕನ ನಡೆಸಿಕೊಂಡರೆ ತಿರುಗಿ ದೈವತ್ವದೆಡೆಗೆ ಬರಬಹುದು. ಇದೇ ಕಾರಣಕ್ಕಾಗಿ  ಶಿವ ಶರಣರು,ದಾಸರು,ಸಂತರು ವಿಗ್ರಹಾರಾಧನೆ ಬಿಟ್ಟು ಪರಮಾತ್ಮನ  ಕಾಣುವ ಸ್ವತಂತ್ರ ಮಾರ್ಗವನ್ನು  ಕಂಡುಕೊಂಡರು. ಆದರೆ ಸಮಾಜದ ಜನತೆ ಅವರನ್ನು ಬಡವರು ಬಿಕ್ಷುಕರೆನ್ನುವ ಭಾವನೆಯಲ್ಲಿ  ನಿರ್ಲಕ್ಷ್ಯ ಮಾಡಿದ್ದರೂ ಈಗವರು ಮಹಾತ್ಮರೆನಿಸಿಕೊಂಡರು ಎಂದರೆ ಜೀವ ಇದ್ದಾಗ ಪರಮಾತ್ಮ ಕಾಣೋದಿಲ್ಲ.ಪರಮಾತ್ಮನ ಕಂಡವರು ಜೀವಕ್ಕೆ ಬೆಲೆಕೊಡೋದಿಲ್ಲ. ಜೀವ ಹೋದ ಮೇಲೆ ಅವರನ್ನು ದೇವರೆನ್ನುವವರೆ ಹೆಚ್ಚಾದರೆ ಜೀವನಕ್ಕೆ ಬೆಲೆಯಿಲ್ಲವೆ? ಜ್ಞಾನ ಕಣ್ಣಿಗೆ ಕಾಣೋದಿಲ್ಲವೆಂದರೆ ಜ್ಞಾನವಿಲ್ಲದ ಜೀವನ ಜೀವನವೆ? ಅಥವಾ ವಿಜ್ಞಾನಕ್ಕೆ  ಜ್ಞಾನವೇ ಮೂಲವಲ್ಲವೆ? ಜನರಲ್ಲಿನ ಜ್ಞಾನವನ್ನು ಸರಿಯಾಗಿ ಗುರುತಿಸಿ ಬೆಳೆಸುವ ಧರ್ಮ ಗುರು ಹಿರಿಯರದ್ದಾಗಿದೆ.ಇದು ಭಾರತೀಯ ಶಿಕ್ಷಣದಲ್ಲಿಯೇ  ಪ್ರಾಥಮಿಕ ಹಂತದಲ್ಲೇ ಕೊಟ್ಟು ಮಾನವನನ್ನು ಮಹಾತ್ಮನಾಗಿಸಿತ್ತು. ಒಟ್ಟಿನಲ್ಲಿ ದೈವತ್ವವನ್ನು ತತ್ವಜ್ಞಾನದಿಂದ ಬೆಳೆಸುವ ಶಿಕ್ಷಣದಿಂದ ಆತ್ಮನಿರ್ಭರ ಭಾರತ ಸಾಧ್ಯ. ಶಿಕ್ಷಕರು ಗುರುಗಳಾದವರಲ್ಲಿ ತತ್ವಜ್ಞಾನದ  ಅನುಭವವಿರಬೇಕಿದೆ.ಒಗ್ಗಟ್ಟು ಏಕತೆ ಐಕ್ಯತೆ ಸಮಾನತೆಯನ್ನು ಹಣದಿಂದ ಬೆಳೆಸೋ ಬದಲು ಜ್ಞಾನದಿಂದ ಬೆಳೆಸಿದ್ದರೆ ಭ್ರಷ್ಟಾಚಾರ ದ ಬದಲು ಶಿಷ್ಟಾಚಾರವಿರುತ್ತದೆ.
ಭಾರತ ಭ್ರಷ್ಟರ ದೇಶವಾಗಲು ಕಾರಣವೇ  ವೈಜ್ಞಾನಿಕವಾಗಿ ಅತಿಯಾಗಿ ಚಿಂತನೆ ನಡೆಸಿ ವೈಚಾರಿಕತೆಯ ಹಿಂದಿನ ವೈಜ್ಞಾನಿಕ ಸತ್ಯವನರಿಯದೆ ವಿರೋಧಿಸುತ್ತಾ ಭೂಮಿಯ ಸತ್ಯ ಸತ್ವ ತತ್ವವನರಿಯದ  ವಿಜ್ಞಾನ ಜಗತ್ತು. ವಿಜ್ಞಾನ ದಿಂದ ಎಲ್ಲಾ ಸಾಧ್ಯವಿದೆ ಆದರೆ  ಜನನ ಮರಣಗಳ ಹಿಂದಿನ ಧರ್ಮ ಕರ್ಮ ಋಣಗಳ‌ ವಿಷಯ ತಿಳಿಯಲಾಗದು. ಸೂಕ್ಷ್ಮ ವಾಗಿರುವ ಈ ಸತ್ಯ ಅನುಭವಿಸಿಯೇ ತಿಳಿಯಬೇಕಿದೆ.  ಇದು ಅಸತ್ಯವೆಂದಾದರೆ  ಹಿಂದಿನ ಮಹಾತ್ಮರುಗಳು ಕಷ್ಟಪಟ್ಟು ಯಾಕೆ ಅಧ್ಯಾತ್ಮ ಸತ್ಯದೆಡೆಗೆ ನಡೆದರು? ಈಗ ಯಾಕೆ ಧಾರ್ಮಿಕ ಕಾರ್ಯಕ್ರಮ ನಡೆಸಿದರೂ ರೋಗ ರುಜಿನ ಭ್ರಷ್ಟಾಚಾರ ತಡೆಯಲಾಗುತ್ತಿಲ್ಲ? ಎಂದರೆ ಧಾರ್ಮಿಕ ಕಾರ್ಯವೇ ಭ್ರಷ್ಟರ ಹಣದಲ್ಲಿ ನಡೆಯುತ್ತಿದ್ದರೆ ಅದರ ಫಲ ಭ್ರಷ್ಟರಿಗೆ ಸಿಗೋದು.ರಾಜಪ್ರಭುತ್ವದ ಸತ್ಯಾಸತ್ಯತೆಯನ್ನು ಪ್ರಜಾಪ್ರಭುತ್ವದಲ್ಲಿ ಪ್ರಚಾರ ಮಾಡಿ ನಾನೇ ರಾಜ, ನಾನೇ ದೇವರು ಎಂದರೆ ಧರ್ಮ ವಲ್ಲ ಸತ್ಯವೇ ಇಲ್ಲದೆ ಧರ್ಮ ರಕ್ಷಣೆ ಹೇಗಾಗುತ್ತದೆ?  ಸತ್ಯ ಹರಿಶ್ಚಂದ್ರ ನಂತೆ  ಬದುಕಲಾಗದು.ಶ್ರೀ ರಾಮಚಂದ್ರನಂತೆ ಇರಲಾಗದು ಎನ್ನುವವರು ಅಸತ್ಯ ಅಧರ್ಮಕ್ಕೆ ಸಹಕಾರ ಕೊಟ್ಟು ಜನರನ್ನು ಆಳುವುದೇ ದೊಡ್ಡ ಭ್ರಷ್ಟಾಚಾರ. ಒಟ್ಟಿನಲ್ಲಿ ಪ್ರಜೆಗಳಲ್ಲಿ ದೈವತ್ವವಿದ್ದರೂ ಗಮನಿಸದ ಶಿಕ್ಷಣ  ಪಡೆದವರಿಗೆ ಗುಡಿಗೋಪುರಗಳಲ್ಲಿ ದೇವರನ್ನು ಹುಡುಕಿದರೂ ಸಿಗೋದಿಲ್ಲ. ಹಾಗಂತ ದೇವರಿಲ್ಲ ನಾನೇ ಎಲ್ಲಾ ಎಂದರೆ  ಸರಿಯಲ್ಲ.ಅಣು ರೇಣು ತೃಣಕಾಷ್ಟ ಪರಿಪೂರ್ಣ ಗೋವಿಂದ ಎಂದಿರುವರಲ್ಲ ಮಹಾತ್ಮರು. ಒಳಗೇ ಅಡಗಿರುವ  ದೇವರು ದೈವೀ ಗುಣವನ್ನು ಬೆಳೆಸೋ ಶಿಕ್ಷಣ ಕೊಡದೆ ಪೋಷಕರನ್ನೇ ಶೋಷಣೆ ಮಾಡುವ ಮಕ್ಕಳೆ ಸರಿಯಿಲ್ಲವೆಂದರೆ ತಪ್ಪು ಯಾರದ್ದು? ಕಲಿಯಬೇಕಾದ್ದನ್ನು ಕಲಿತರೆ ತಿಳಿಯಬೇಕಾದ್ದನ್ನು ತಿಳಿಯಬಹುದು.
ಕಲಿಯುಗದಲ್ಲಿ ಕಲಿತಷ್ಟೂ ಇದೆ. ಯಾವುದನ್ನು ಕಲಿಯುವುದು ಎನ್ನುವ ತಿಳುವಳಿಕೆ  ಅಗತ್ಯವಿದೆ. 
 

Monday, August 7, 2023

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ..ಹೊರಗೆ ನಡೆದರೆ ಬಡಪಾಯಿ

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ...

ಹೆಂಡತಿಯೊಬ್ಬಳು ನೋಟಿನ ಹಿಂದೆ ಬಿದ್ದರೆ ನಾನೊಬ್ಬ ಬಡಪಾಯಿ. 
ಹೆಣ್ಣು ಹೊನ್ನು ಮಣ್ಣಿನ ಋಣ ತೀರಿಸಲು ಬಂದವ ಸ್ತ್ರೀ ಹಾಗು ಭೂಮಿಯನ್ನು  ತನ್ನ ಸ್ವಾರ್ಥ ಸುಖಕ್ಕಾಗಿ ದುರ್ಭಳಕೆ ಮಾಡಿಕೊಂಡು ಎಷ್ಟೇ  ಆಸ್ತಿ ಅಂತಸ್ತು ಅಧಿಕಾರ ಹಣ ಪಡೆದರೂ ಸ್ತ್ರೀ ಯನ್ನು ಗೆಲ್ಲಲಾಗದು. ಯಾವಾಗ ಸ್ತ್ರೀ ಹಣದ ಹಿಂದೆ  ನಿಂತು ಜ್ಞಾನದಿಂದ ದೂರವಾದಳೋ ಮನೆಯೊಳಗೆ ಇರಲಾಗದೆ ಹೊರಗೆ ಬರುವಂತಾಯಿತು. ಜ್ಞಾನದಿಂದ  ಹೊರಗೆ ಬಂದವರನ್ನು  ಸಮಾಜ ಗುರುತಿಸುವ ರೀತಿಯೇ ಬೇರೆ ಅಜ್ಞಾನದಿಂದ ಹೊರಗೆ ಹೊರಟವರನ್ನು ಸಮಾಜ ಬಳಸಿಕೊಂಡ ರೀತಿಯೇ ಬೇರೆ. ಭಾರತ ಜ್ಞಾನಿಗಳ ದೇಶ.ಇಲ್ಲಿ ಯಾವುದು ಶಾಶ್ವತವೆನ್ನುವ ಸತ್ಯದ ಹಿಂದೆ ನಡೆದ ಹಿಂದೂಗಳಿಂದ  ಮುಂದೆ ನಡೆದ ಮಹಾತ್ಮರಿದ್ದರು. ಅವರ ಯೋಗ ಶಕ್ತಿಯಿಂದ ದೇಶ ವಿಶ್ವಗುರುವಾಗಿತ್ತು. ಕಾಲಾನಂತರದ ಅಂತರದಲ್ಲಿ  ಹೆಣ್ಣೇ ತನ್ನ ಸಂಸಾರ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಹೊತ್ತು ಹೊರಗೆ ಒಳಗೆ ದುಡಿಯುವ ಸ್ಥಿತಿ ಬಂದಿದೆಯೆಂದರೆ ಇದರಲ್ಲಿ ಜ್ಞಾನ ಎಲ್ಲಿದೆ? ಧರ್ಮ ಯಾವುದು? 
ವ್ಯವಹಾರದಿಂದ ಹಣಪಡೆದರೂ ಜ್ಞಾನಕ್ಕೆ ವಿರುದ್ದವಾದ ವ್ಯವಹಾರದಿಂದ ಕಷ್ಟ ನಷ್ಟವೇ ಹೆಚ್ಚು. ಸಾಲ ಅಥವಾ ಋಣ ತೀರಿಸಲು  ಜೀವಾತ್ಮನಿಗೆ  ಪರಮಸತ್ಯದ ಅಗತ್ಯವಿದೆ. ಈ ಸತ್ಯವೇ ದೇವರಾಗಿ,ಆತ್ಮವಾಗಿದೆ. ಆತ್ಮಸಾಕ್ಷಿಗೆ ವಿರುದ್ದ ನಡೆದರೆ  ಸತ್ಯದಿಂದ ದೂರವಾದಂತೆ. ಹಾಗಾಗಿ ಮಾನವ ತನ್ನ ಒಳಗೇ ಅಡಗಿರುವ  ದೇವಾಸುರ ಗುಣಗಳನ್ನು  ಯಾವ ರೀತಿಯಲ್ಲಿ ಬಳಸಿದರೆ ಯಾವ ಕರ್ಮ ಫಲ ಎನ್ನುವ ಅರಿವನ್ನು  ಬೆಳೆಸಿಕೊಂಡು  ಭೂಮಿಯ ಋಣ ತೀರಿಸುವ ಧರ್ಮ ಮಾರ್ಗ ಹಿಡಿಯುವುದಕ್ಕೆ ಬಹಳ ಕಷ್ಟಪಡಬೇಕು.
ಹಿಂದಿನ ಮಹಾತ್ಮರುಗಳು  ಬೇರೆ ಬೇರೆ ಮಾರ್ಗದಲ್ಲಿ ಪರಮಾತ್ಮನ ಕಾಣುವ  ಸಾಧಕರಾದರೂ ಗುರಿ ಒಂದೇ ಇತ್ತು.
ಇದು ಆಂತರಿಕ ಶುದ್ದತೆಯಿಂದಾಗಿತ್ತು. ಭೌತಿಕದೆಡೆಗೆ  ಎಷ್ಟು ನಡೆದರೂ ಅಧ್ಯಾತ್ಮದ ಮೂಲದಿಂದ ದೂರವಾಗದೆ ಇದ್ದರೆ ಅದು  ಧರ್ಮ ವಾಗಿರುವುದು. ಮನೆಯಿಂದ ಹೊರಗೆ ನಡೆದರೂ ತಿರುಗಿಮನೆಗೆ ಸೇರುವಂತೆ  ಮನೆ,ಮಡದಿ ಮಕ್ಕಳು ಮನೆಯೊಳಗೆ  ಇದ್ದಾಗ ಒಂದು ಜೀವನ.ಹೊರಗೆ ಹೋದರೆ ಒಂದು ಜೀವನ. ತಾನೇ ಬಿಟ್ಟು ನಡೆದರೆ ಒಂದು ರೀತಿ ಎಲ್ಲರನ್ನೂ ಒಟ್ಟು ಗೂಡಿಸಿ ನಡೆದರೆ ಒಂದು ರೀತಿಯ ಅನುಭವಜ್ಞಾನವಿರುತ್ತದೆ.ಹೀಗಾಗಿ  ಎಲ್ಲಾ ಒಂದೇ ಎಂದರೂ ಎಲ್ಲರಲ್ಲಿಯೂ ಅಡಗಿರುವ ಜ್ಞಾನಶಕ್ತಿ ಒಂದೇ ಇರದು.ಇದಕ್ಕೆ ತಕ್ಕಂತೆ  ಹಣಸಂಪಾದನೆ ಜೀವನ ಶೈಲಿ ಬದಲಾಗುತ್ತಾ ಕೊನೆಗೆ   ಮರೆಯಾಗುವುದು  ಸಹಜ ಕ್ರಿಯೆ. ಸೃಷ್ಟಿ ಗೆ ತಕ್ಕಂತೆ ಸ್ಥಿತಿ ಸ್ಥಿತಿಗೆ ತಕ್ಕಂತೆ ಲಯ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಸೃಷ್ಟಿ ಉತ್ತಮವಾಗಿದ್ದರೆ ಸ್ಥಿತಿ ಯೂ ಉತ್ತಮ. ಲಯವನ್ನು  ಸಂತೋಷದಿಂದ ಸ್ವೀಕರಿಸುವ ಜ್ಞಾನ ಮಾನವನಿಗಿರುತ್ತದೆ.
ಯುದ್ದ ಯಾವಾಗ ನಡೆಯುವುದೆಂದು ಸೈನಿಕರು ನಿರೀಕ್ಷೆ ಮಾಡುವುದು ಜ್ಞಾನದ ಸಂಕೇತ. ಯುದ್ದವೇ ನಡೆಯದಂತೆ ಶತ್ರುಗಳ ಜೊತೆಗೆ  ಒಪ್ಪಂದ ಮಾಡಿಕೊಂಡು ಅಧರ್ಮಕ್ಕೆ ಸಹಕರಿಸುವುದು  ಅಜ್ಞಾನಿಗಳ ಸಂಕೇತ. ಯಾವಾಗ ಅಧರ್ಮ ಕ್ಕೆ ಶಕ್ತಿ ಹೆಚ್ಚುವುದೋ ಅಸುರಿ ಶಕ್ತಿಗೆ  ಸಹಕಾರ ಸಿಗುವುದೋ ಆಗಲೇ ಭೂಮಿಯಲ್ಲಿ ಪ್ರಕೃತಿ ವಿಕೋಪದಿಂದ ಪ್ರಳಯ,ಭೂ ಕಂಪ, ಯುದ್ದ, ರೋಗ ಭಯೋತ್ಪಾದನೆ ಮುಂತಾದ  ಅವಘಡಗಳಿಂದ ಜೀವ ಹೋಗುವುದು. ಇದನ್ನು  ಮಾನವನಿಂದ ತಡೆಯಲಾಗದು.ಮಹಾತ್ಮರಿಗೆ ಅರ್ಥ ವಾದರೂ  ಕಾಲಮೀರಿದಾಗ ಏನೂ ಮಾಡಲಾಗದು. ಇದಕ್ಕಾಗಿ ಒಲಿದರೆ ನಾರಿ ಮುನಿದರೆ ಮಾರಿ ಎಂದರು. ಇಲ್ಲಿ ಭೂ ತಾಯಿ, ಭಾರತಮಾತೆ,ಕನ್ನಡಮ್ಮ,ಹೆತ್ತತಾಯಿ ಸ್ತ್ರೀ ಶಕ್ತಿಯ ಸಹಕಾರವಿಲ್ಲದೆ ಏನೂ ನಡೆಯದು. ಪ್ರಕೃತಿಯ ಸಣ್ಣ ಕಣವಾದ ಜೀವ ಕ್ಕೆ ಬೇಕಾದ ಎಲ್ಲಾ ಉಚಿತ  ಸಿಕ್ಕಿದರೂ ಅನಾವಶ್ಯಕ ವಾದ ಆಸೆ ಆಕಾಂಕ್ಷೆಗಳನ್ನು  ಬೆಳೆಸಿಕೊಂಡು ಮುಂದೆ ಬಂದ ಮಾನವನ ಜೀವ ಉಳಿಸಿಕೊಳ್ಳಲು ಪ್ರಕೃತಿಯನ್ನು ದುರ್ಭಳಕೆ ಮಾಡಿಕೊಂಡರೆ ಅಥವಾ ಸ್ತ್ರೀ ಯನ್ನು ದುರ್ಭಳಕೆ ಮಾಡಿಕೊಂಡರೆ  ಮಾರಿಯಾಗಿ ಹೊರಗೆ ಹೊರಟು ಜೀವ ತೆಗೆಯುವುದೂ ಅದೇ ಶಕ್ತಿ. ದೈಹಿಕವಾಗಿ  ದುರ್ಭಲತೆ ಇದ್ದರೂ ಮಾನಸಿಕವಾಗಿ ಸಬಲರಾಗಿ ಸ್ತ್ರೀ ಶಕ್ತಿ ಒಗ್ಗಟ್ಟಿನಿಂದ  ಬಾಳಿ ಬದುಕಿದರೆ ಮನೆಯೊಳಗೆ ಶಾಂತಿ ಸಿಗುತ್ತದೆನ್ನುವ ಕಾರಣಕ್ಕಾಗಿ ಹಿಂದಿನ ಕಾಲದಲ್ಲಿ ಮನೆಯೊಳಗೆ ಸ್ತ್ರೀ ಯರಿಗೆ ಶಿಕ್ಷಣ ನೀಡಿ ಉತ್ತಮ ಗುರುವಿನ ಸ್ಥಾನ ಕೊಟ್ಟು ಗೃಹಮಂತ್ರಿಯೆನಿಸಿದ್ದಳು.ಈಗಲೂ ಇದ್ದಾರೆ ಆದರೆ ಶಿಕ್ಷಣದಲ್ಲಿಯೇ ಬದಲಾವಣೆ ಆದ ಕಾರಣ ಅಧ್ಯಾತ್ಮ ಸತ್ಯ ಬಿಟ್ಟು  ಭೌತಿಕಸತ್ಯವನರಿತು ಮನೆಯಿಂದ ಹೊರಗೆ ಬಂದು ಸಂಸಾರಕ್ಕಾಗಿ  ದುಡಿಯುವ  ಅನಿವಾರ್ಯತೆ ಕೆಲವರಿಗಿದ್ದರೆ. ಅನೇಕರಿಗೆ ತನ್ನ ಕಾಲಮೇಲೆ ತಾನು ನಿಂತು ಬದುಕುವ ಆಸೆ, ಇನ್ನೂ ಕೆಲವರಿಗೆ ಮನೆಯಲ್ಲಿ ಕೆಲಸವಿಲ್ಲದೆ ಅಥವಾ ಮನೆಗೆಲಸಕ್ಕೆ  ಬೇರೆಯವರಿದ್ದಾರೆನ್ನುವ ಕಾರಣಕ್ಕೆ  ಹೊರಗೆ ಕೆಲಸ ಮಾಡಿ ಹಣಸಂಪಾದಿಸುವರು. ಹಣವಿಲ್ಲದೆ ಜೀವನವಿಲ್ಲ.ಅದರೊಂದಿಗೆ ಅದನ್ನು ಸದ್ಬಳಕೆ ಮಾಡಿಕೊಂಡು ಸಂಸಾರದ ಜೊತೆಗೆ‌ ಸಮಾಜದ ಪರಿಸ್ಥಿತಿ ಅರ್ಥ ವಾಗುವ  ಜ್ಞಾನ ಗುಣವೂ ಅಷ್ಟೇ ಮುಖ್ಯ..
ಇದು ಎಲ್ಲರಲ್ಲಿಯೂ ಒಂದೇ ಸಮನಾಗಿರದು. ಆದರೂ ಸಮಾನತೆಯ ಹೋರಾಟ  ನಿಲ್ಲದು.

ಕರ್ಮಕ್ಕೆ ತಕ್ಕಂತೆ ಫಲ.ಸತ್ಕರ್ಮದಿಂದ ಋಣ ಸಂದಾಯ

ಸಾಮಾನ್ಯಜ್ಞಾನವಿಲ್ಲದ ಮಾನವನ ದುಂದುವೆಚ್ಚಕ್ಕೆ  ಇಡೀ ದೇಶವೇ ಸಾಲದೊಳಗೆ ಮುಳುಗಿರೋದಕ್ಕೆ  ಪ್ರಜಾ ಸರ್ಕಾರವೇ ಕಾರಣವೆಂದರೂ ಮಲಗಿರುವ ಪ್ರಜೆಗಳನ್ನು ಎಬ್ಬಿಸಲಾಗದು. ಅರ್ಧ ನಿದ್ರೆಯಲ್ಲಿರುವವರಿಗೆ ಇದೊಂದು ಕನಸಷ್ಟೆ. ಪೂರ್ಣ ಎಚ್ಚರವಾಗಿರುವವರ ಸತ್ಯ ಅರ್ಥ ವಾಗದೆ  ಬೆಂಗಳೂರಿನಂತಹ  ಅನೇಕ ನಗರಗಳು  ಅರೆಬೆಂದ ನಾಡಾಗಿ ಆರೋಗ್ಯ ಕಳೆದುಕೊಂಡು ನರಳುವಂತಾಗಿದೆ. ಇದನ್ನು   ವೈಜ್ಞಾನಿಕ ಚಿಂತಕರು ಪ್ರಗತಿ ಎನ್ನಬಹುದು ಅಧ್ಯಾತ್ಮ ದ ಪ್ರಕಾರ ಇದೇ ಮನುಕುಲದ ಅಧೋಗತಿ
ಯಾಗಿದೆ.  ಸ್ವಾತಂತ್ರ್ಯ ಪೂರ್ವದ ಭಾರತಕ್ಕಿಂತ ಕೆಟ್ಟದಾದ ಮನಸ್ಥಿತಿ  ಹೆಚ್ಚಾಗಿರುವ ಭಾರತೀಯರ ರಾಜಕೀಯತೆಗೆ  ಒಳಗೇ ಅಡಗಿದ್ದ ಸತ್ಯ ಧರ್ಮ, ನ್ಯಾಯ ನೀತಿ,ಶಿಕ್ಷಣವೇ ವ್ಯಾಪಾರದ ವಸ್ತುವಾಗಿರೋದು ಅಜ್ಞಾನವೆನ್ನಬೇಕೋ ಜ್ಞಾನವೆನ್ನಬೇಕೋ? ಶಂಖದಿಂದ ಬಂದದ್ದೆಲ್ಲಾ ತೀರ್ಥ ವಾಗದು. ಮೊದಲು ಶಂಖ ಎಷ್ಟು ಸ್ವಚ್ಚವಾಗಿದೆ ಎನ್ನುವ ಸತ್ಯ ಅರ್ಥ ಮಾಡಿಕೊಳ್ಳುವುದಕ್ಕೆ ಜ್ಞಾನವಿರಬೇಕು. ಆಂತರಿಕ ಶಕ್ತಿ ಬಿಟ್ಟು ಭೌತಿಕ ಶಕ್ತಿಗೇ ಶರಣಾದರೆ ಪರಮಾತ್ಮನ ದರ್ಶನ ವಾಗದು. ಇದೊಂದು ಸಾಮಾನ್ಯ ಜ್ಞಾನವಷ್ಟೆ.ವಿಶೇಷವಾಗಿ ಅಧ್ಯಾತ್ಮದ ಸತ್ಯದೆಡೆಗೆ ನಡೆದ ಹಿಂದಿನ ಮಹಾತ್ಮರೆಲ್ಲಿ? ವಿಶೇಷವಾಗಿ ಭೌತಿಕದೆಡೆಗೆ ನಡೆದ  ಈಗಿನ ಭಾರತವೆಲ್ಲಿದೆ?ವಿದೇಶದೊಳಗಿರುವ ದೇಶವನ್ನು ಸ್ವತಂತ್ರ ಗೊಳಿಸಬಹುದೆ?
ಅತಂತ್ರಸ್ಥಿತಿಗೆ  ಎಳೆದೊಯ್ಯುತ್ತಿರುವ  ರಾಜಕೀಯತೆ ಎಲ್ಲಾ ಕ್ಷೇತ್ರವನ್ನು  ಆಳಲು ಹೊರಟರೂ ಪ್ರಜಾಪ್ರಭುತ್ವದ ನಮ್ಮನ್ನು ನಾವು ಆಳಿಕೊಳ್ಳುವ ಜ್ಞಾನದ ಶಿಕ್ಷಣವನ್ನು ನಾವೇ ವಿರೋಧಿಸಿರುವಾಗ ಮಾಡಿದ್ದುಣ್ಣೋ ಮಹಾರಾಯ. ಕರ್ಮಕ್ಕೆ ತಕ್ಕಂತೆ ಫಲ.
ಸರಿಯಾಗಿ ನೆಲದಮೇಲೆ ನಡೆಯಲಾಗದವರು  ಮೇಲೇರಿ ಹಾರಿದರೂ ಬಿದ್ದು ಸಾಯೋದು ನೆಲದಮೇಲೆ. ಹಿಂದಿನ ಮಹಾತ್ಮರುಗಳು  ಬರಿಗಾಲಲ್ಲಿ ನಡೆದು  ಪರಮಾತ್ಮನ ಒಲಿಸಿಕೊಂಡರೆ  ಈಗ  ನಡೆಯಲು ಕಲಿಸದೆ ಪೋಷಕರು ಮಕ್ಕಳನ್ನು ದೊಡ್ಡವರಾದಮೇಲೂ ಹೊತ್ತು ನಡೆಯುವ  ಪರಿಸ್ಥಿತಿಗೆ  ನಮ್ಮ ಶಿಕ್ಷಣವಿದೆ.ಅಂದರೆ ಎಷ್ಟೇ ಓದಿ ಬುದ್ದಿವಂತರಾದರೂ  ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಸೋತು ದೂರವಾಗುವ ಮಕ್ಕಳ ಮೇಲಿನ ವ್ಯಾಮೋಹ ಬಿಡದಿರೋರೆ  ದೊಡ್ಡ ಮನುಷ್ಯರೆನಿಸಿಕೊಂಡರೆ  ಅಜ್ಞಾನ.
ಇಲ್ಲಿ ಸರ್ಕಾರದ ತಪ್ಪಿಲ್ಲ ನಮ್ಮ ಸಹಕಾರವೇ ಸರಿಯಿಲ್ಲವೆಂದರೆ ಸರಿಯಾಗಬಹುದು. ದೇಶ ಸ್ಮಾರ್ಟ್ ಮಾಡೋದಕ್ಕೆ ಸಹಕರಿಸುವ ಪ್ರಜೆಗಳು ಇದರ ಹಿಂದೆ  ಬೆಳೆಯುವ ಸಾಲದ‌ಮೂಟೆ ಮಕ್ಕಳು ಮೊಮ್ಮಕ್ಕಳು ತೀರಿಸುವ ಜ್ಞಾನದ ಶಿಕ್ಷಣ ಕೊಡದಿರೋದೆ  ಆತ್ಮದುರ್ಭಲತೆಗೆ  ಕಾರಣ ಎನ್ನಬಹುದೆ?

ಬೆಂಗಳೂರಿಗೆ ಸುರಂಗ ಮಾರ್ಗಕ್ಕಿಂತ ಸರಳ ಪರ್ಯಾಯ ಇಲ್ಲವೇ....

50000 ಕೋಟಿ,
100 ಕಿಲೋಮೀಟರ್ ದೂರದ ಸುರಂಗ ರಸ್ತೆಗೆ,
ಎರಡು ಹಂತಗಳಲ್ಲಿ,
500 ಕೋಟಿ ಪ್ರತಿ ಕಿಲೋಮೀಟರ್ಗೆ,
ಈಗಿನ ಅಂದಾಜು ವೆಚ್ಚ ಇದು. ಯೋಜನೆ ಮುಗಿಯುವ ವೇಳೆಗೆ ಇನ್ನೂ 10000 ಕೋಟಿ ಹೆಚ್ಚಾಗಬಹುದು.......

ಸರ್ಕಾರವೇ ನಿರ್ಮಿಸಬಹುದು ಅಥವಾ ಪಿಪಿಪಿ ಅಂದರೆ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವ ಆದರೂ ಆಗಬಹುದು...

ಬೆಂಗಳೂರಿನ ಅತಿಯಾದ ಟ್ರಾಫಿಕ್ ಒತ್ತಡ ನಿವಾರಿಸಲು ಮತ್ತು ಸಮಯ ಉಳಿಸಲು...

ಬ್ರ್ಯಾಂಡ್ ಬೆಂಗಳೂರು ಅಭಿವೃದ್ಧಿ ಪಡಿಸಲು, ರಸ್ತೆ ಅಭಿವೃದ್ಧಿಯಿಂದ ವಿವಿಧ ರೀತಿಯಲ್ಲಿ ಆರ್ಥಿಕ ಲಾಭಗಳಿಸಲು, ಟೋಲ್ ಸಂಗ್ರಹವೂ ಸೇರಿ.......

ಗಮನಿಸಿ,
ಈ ನೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕೃಷಿ ಭೂಮಿ ಇಲ್ಲ. ಕೈಗಾರಿಕಾ ಉತ್ಪಾದನೆಯೂ ಅಷ್ಟೇನು ಇಲ್ಲ, ರಕ್ಷಣಾ ಮಹತ್ವವೂ ಇಲ್ಲ,.........

ಶಿಕ್ಷಣ ಸಂಸ್ಥೆಗಳು, ಸಾಫ್ಟವೇರ್ ಕಂಪನಿಗಳು, ವ್ಯಾಪಾರಿಗಳು, ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು, ಮನರಂಜನಾ ಚಟುವಟಿಕೆಗಳು ಜೊತೆಗೆ ಇವರಿಗೆ ಪೂರಕವಾಗಿ ಕೆಲಸ ಮಾಡುವ ಕಾರ್ಮಿಕರು ಮತ್ತು ಇವರೆಲ್ಲರೂ ಅನುಕೂಲಕ್ಕಾಗಿ ಮತ್ತು ಇವರೆಲ್ಲರೂ ಉತ್ಪಾದನಾ ಕ್ಷೇತ್ರಕ್ಕಿಂತ ಹೆಚ್ಚಾಗಿ  ಸೇವಾ ವಲಯದ ವ್ಯಾಪ್ತಿಗೆ ಸೇರುವವರು.... ಸೇವೆ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದೆ ಮಾಡಿದಾಗಲೇ ಸಾಲ ತೀರುವುದೆನ್ನುವುದು ಅಧ್ಯಾತ್ಮ ಸತ್ಯ ಆದರೆ ಇದಕ್ಕೆ ವಿರುದ್ದದ ಸ್ವಾರ್ಥ ಅಹಂಕಾರ ವೇ  ತುಂಬಿರುವ ಕ್ಷೇತ್ರದಿಂದ. ದೇಶವಾಗಲಿ ಧರ್ಮ ವಾಗಲಿ  ರಕ್ಷಣೆಯಾಗದು.

ಈಗಾಗಲೇ ರಿಂಗ್ ರೋಡ್, ಬೈಪಾಸ್ ರೋಡ್, ಫ್ಲೈ ಓವರ್, ಅಂಡರ್ ಪಾಸ್, ಮೆಟ್ರೋ ರೈಲ್, ಲೋಕಲ್ ಟ್ರೈನ್, ಸ್ಟೀಲ್ ಬ್ರಿಡ್ಜ್ ಹೀಗೆ ಭೂಮಿ ಆಕಾಶ ಪಾತಾಳ ಎಲ್ಲಾ ಉಪಯೋಗಿಸಿಕೊಂಡು ಆಗಿದೆ. ಆದರೂ ಟ್ರಾಫಿಕ್ ಜಾಮ್ ತಪ್ಪಿಲ್ಲ. ಈ ಸುರಂಗ ರಸ್ತೆ ನಿರ್ಮಾಣದ ನಂತರವೂ ತಪ್ಪುವುದಿಲ್ಲ. ಇಸ್ರೇಲ್ ಮಾದರಿಯಲ್ಲಿ ಇಬ್ಬರು ವ್ಯಕ್ತಿಗಳು ಆಕಾಶ ಮಾರ್ಗದಲ್ಲಿ ಸಂಚರಿಸುವ ಡ್ರೋನ್ ಹಾರಾಟ ವ್ಯವಸ್ಥೆ ಮಾಡಿದರೂ ಟ್ರಾಫಿಕ್ ಜಾಮ್ ಇದ್ದೇ ಇರುತ್ತದೆ. ಮುಂದೆ........

ಇಷ್ಟು ದೊಡ್ಡ ಮೊತ್ತದ ಹಣ ಖರ್ಚು ಮಾಡಿ ಕೆಲವೇ ಲಕ್ಷದಷ್ಟು ಒಂದು ನಗರದ ಜನ ಹಣ ಕೊಟ್ಟು ವಾಹನದಲ್ಲಿ ಓಡಾಡುವುದಕ್ಕೆ ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರ ಸಮಯ ಮತ್ತು ಸಂಪನ್ಮೂಲಗಳನ್ನು ಉಪಯೋಗಿಸುವುದು ಸರಿಯೇ, ಇದಕ್ಕಿಂತ ಉತ್ತಮ ಮತ್ತು ಸರಳ ಪರ್ಯಾಯ ಮಾರ್ಗಗಳು ಇಲ್ಲವೇ....

ಕಲ್ಯಾಣ ಕರ್ನಾಟಕದ ಅನೇಕ ಹಳ್ಳಿಗಳು ಈಗಲೂ ಮನುಷ್ಯರು ವಾಸಿಸಲು ಯೋಗ್ಯವಾಗಿಯೇ ಇಲ್ಲ. ಹಂದಿ ಗೂಡಿನಂತ ಮನೆಗಳಲ್ಲಿ ಲಕ್ಷಾಂತರ ಜನ ವಾಸಿಸುತ್ತಿದ್ದಾರೆ. ಅನೇಕ ತಾಂಡಾಗಳಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ. ಸರ್ಕಾರದ ವಿದ್ಯಾರ್ಥಿ ಹಾಸ್ಟೆಲ್ ಗಳಲ್ಲಿ ಈಗಲೂ ಗ್ರಾಂ ಲೆಕ್ಕದಲ್ಲಿ ಊಟ ನೀಡುತ್ತಿದ್ದಾರೆ. ತಟ್ಟೆ ಲೋಟ ಹಾಸಿಗೆ ಚಾಪೆಗಳಿಗೂ ಬರವಿದೆ. ಕೆರೆ ಕಟ್ಟೆಗಳು ಬಹುತೇಕ ಹೂಳು ಬಿದ್ದು ಅಥವಾ ಮಾಯವಾಗಿ ಮಳೆಯನ್ನೇ ಆಶ್ರಯಿಸಬೇಕಾಗಿದೆ. ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಅನೇಕ ಊರುಗಳಲ್ಲಿ ಸರ್ಕಾರಿ‌ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಶೌಚಾಲಯಗಳು ಉಪಯೋಗಿಸುವ ಸ್ಥಿತಿಯಲ್ಲಿ ಇಲ್ಲ. ಸರ್ಕಾರಿ‌ ಆಸ್ಪತ್ರೆಗಳಲ್ಲಿ‌ ಆಧುನಿಕ ಯಂತ್ರಗಳೇ ಇಲ್ಲ. ಇಡೀ ರಾಜ್ಯದಲ್ಲಿ ಬಹುತೇಕ ಸಾರ್ವಜನಿಕ ಗ್ರಂಥಾಲಯಗಳು ಭೂತ ಬಂಗಲೆಯ ರೀತಿಯಲ್ಲಿ ನಿಗೂಢವಾಗಿವೆ.......

ಇಷ್ಟೆಲ್ಲಾ ಸಮಸ್ಯೆಗಳು ಇರುವಾಗ ಹೊಸ ಸರ್ಕಾರ ಸುರಂಗ ಮಾರ್ಗ ನಿರ್ಮಿಸಲು ಪ್ರಾರಂಭದಲ್ಲಿಯೇ  ಆದ್ಯತೆಯಾಗಿ ಇಷ್ಟೊಂದು ಆಸಕ್ತಿ ತೆಗೆದುಕೊಳ್ಳುವುದು ಸರಿಯೇ.....

ಮೂಲಭೂತವಾಗಿ ನಗರದ ಈ ಆಧುನಿಕ ಕೃತಕ ಬುದ್ಧಿಮತ್ತೆಯ ಜನರಿಗೆ ತಾಳ್ಮೆಯೇ ಇಲ್ಲ. ನೀವು ಸುರಂಗ ಮಾರ್ಗವೇ ನೀಡಿ ಅಥವಾ ದಶಪಥ ರಸ್ತೆಯೇ ನೀಡಿ ಎಷ್ಟೇ ವೇಗವಾಗಿ ಹೋಗಲಿ ಎಷ್ಟೇ ಸಮಯ ಉಳಿಸಲಿ ಅದರಿಂದ ಹೆಚ್ಚಿನ ಲಾಭವೇನು‌ ಆಗುವುದಿಲ್ಲ. ಪ್ರಾರಂಭದಲ್ಲಿ ಸ್ವಲ್ಪ ಉತ್ಸಾಹ ಇರಬಹುದು ಅಷ್ಟೇ. ಈ ಸಮಯದ ಉಳಿತಾಯ ಸಹ ಆ ರಸ್ತೆಯ ಕೊನೆಯವರೆಗೆ ಮಾತ್ರ ನಂತರ ಮತ್ತೆ ಟ್ರಾಫಿಕ್ ಜಾಮ್ ನಲ್ಲಿ‌ ಸಿಕ್ಕಿ ಹಾಕಿ ಕೊಳ್ಳುತ್ತಾರೆ........

ಈಗಾಗಲೇ ಕಾಲ್ನಡಿಗೆಯಿಂದ ವಿಮಾನದವರೆಗೆ, ಪಾರಿವಾಳದಿಂದ ಇಂಟರ್ ನೆಟ್ ವರೆಗೆ, ಗುಡಿಸಲಿನಿಂದ ಸುಸಜ್ಜಿತ ಮನೆಯವರೆಗೆ, ಬೆಂಕಿ ಪೊಟ್ಟಣಕ್ಕಾಗಿ ಕಿಲೋಮೀಟರ್ ದೂರಕ್ಕೆ ಹೋಗುವುದರಿಂದ ಮನೆಯ ಬಾಗಿಲಿಗೆ ಎಲ್ಲವೂ ದೊರೆಯುವವರೆಗೆ, ರಾತ್ರಿ ನಾಟಕಗಳಿಂದ ಓಟಿಟಿವರೆಗೆ ಹೀಗೆ ಸಾಕಷ್ಟು ಅಭಿವೃದ್ಧಿ ಆಗಿದ್ದರು ಆ ಅಭಿವೃದ್ಧಿಗೆ ತಕ್ಕಂತೆ ಮನುಷ್ಯ ಸುಖವಾಗಿ ಸುರಕ್ಷಿತವಾಗಿ ಆರೋಗ್ಯಕರವಾಗಿ ಇದ್ದಾರೆಯೇ.....

ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಬೇಕು ನಿಜ. ಆದರೆ ಅದು ಸುಸ್ಥಿರವಾಗಿರಬೇಕು. ಸರ್ವತೋಮುಖ ಪ್ರಗತಿ ಸಾಧಿಸುವಂತಿರಬೇಕು. ಪ್ರಕೃತಿಗೆ ಅಥವಾ ಪರಿಸರಕ್ಕೆ ಹೆಚ್ಚು ಹಾನಿಯಾಗುವಂತಿರಬಾರದು. ಜನರು ಸೋಮಾರಿಗಳಾಗಿ ಅಹಂಕಾರ ಪಡುವಂತಿರಬಾರದು.......

ನಗರದ ಟ್ರಾಫಿಕ್ ಸಮಸ್ಯೆಗೆ ಹಲವಾರು ಇತರ ಪರ್ಯಾಯ ಮಾರ್ಗಗಳು ಇರುತ್ತದೆ. ಸಾರ್ವಜನಿಕ ಸಂಪರ್ಕ ಸಾರಿಗೆ ಅತ್ಯುತ್ತಮ ಪಡಿಸುವುದು, ಖಾಸಗಿ ವಾಹನಗಳ ನಿಯಂತ್ರಣ, ಶಿಕ್ಷಣ ಮತ್ತು ಎಲ್ಲಾ ಕಚೇರಿಗಳ ಸಮಯ ಮತ್ತು ಸ್ಥಳಗಳ ಮರು ವರ್ಗೀಕರಣ, ಮನರಂಜನಾ ಸ್ಥಳಗಳನ್ನು ನಗರದ ಹೊರಗಡೆ ಕೇಂದ್ರೀಕರಿಸುವುದು, ರಾಜ್ಯದ ಇತರ ನಗರಗಳನ್ನು ಅಭಿವೃದ್ಧಿಪಡಿಸುವುದು ಹೀಗೆ ಅನೇಕ ಯೋಜನೆಗಳು ಇರುತ್ತವೆ. ಇದೆಲ್ಲದರ ಜೊತೆಗೆ ಟ್ರಾಫಿಕ್ ಎಷ್ಟೇ ಹೆಚ್ಚಾದರೂ‌ ಅನಿವಾರ್ಯವಾಗಿ ಅದನ್ನು ಸ್ವಲ್ಪಮಟ್ಟಿಗೆ ಸಹಿಸಿಕೊಳ್ಳುವ ತಾಳ್ಮೆಯೂ ಮುಖ್ಯ. ನಮ್ಮಂತೆ ಇತರರು ಸಂಚರಿಸುವರು. ಅದಕ್ಕಾಗಿ ನಾವು ಕಾಯುವ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ವಿಶಾಲ ಅರಿವೂ ಇರಬೇಕು.‌......

ಅಭಿವೃದ್ಧಿ ಕೇವಲ ವಸ್ತುಗಳಿಗೆ ಮಾತ್ರ ಸೀಮಿತವಾಗಿರಬಾರದು. ಮಾನಸಿಕ ಅಭಿವೃದ್ಧಿ ಸಹ ಮುಖ್ಯ. ಆಗ ಸಮಸ್ಯೆಗಳು ಸಹ ಕಡಿಮೆ ಒತ್ತಡ ಸೃಷ್ಟಿಸುತ್ತದೆ. ನಗರೀಕರಣದ ಲಾಭದ ಜೊತೆಗೆ ಅದರ ದುಷ್ಪರಿಣಾಮಗಳನ್ನು ಸಹ ಅಷ್ಟೇ ತಾಳ್ಮೆಯಿಂದ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು.......

ಸುಮ್ಮನೆ ಇರುವಷ್ಟೇ ಜಾಗದಲ್ಲಿ ಒಂದರಮೇಲೊಂದು ಯೋಜನೆಗಳನ್ನು ರೂಪಿಸುತ್ತಾ, ಜನಸಂಖ್ಯೆ ಹೆಚ್ಚಿಸುತ್ತಾ, ಪರಿಸರ ನಾಶಮಾಡುತ್ತಾ, ಅನಾರೋಗ್ಯ ವಾತಾವರಣ ನಿರ್ಮಿಸುತ್ತಾ ಗಾರ್ಬೇಜ್ ಸಿಟಿ ಮಾಡಿದರೆ ಪ್ರಯೋಜನವೇನು. ಒಮ್ಮೆ ಭೂಮಿ ಬೇಸರವಾಗಿ ಸ್ವಲ್ಪ ಮಗ್ಗಲು ಬದಲಾಯಿಸಿದರು ಸಾಕು ಎಲ್ಲವೂ ಸರ್ವನಾಶವಾಗುತ್ತದೆ. ಅದು ಪ್ರಾಕೃತಿಕ ಅವಘಡ. ಅದನ್ನು ನಿರೀಕ್ಷೆ ಮಾಡಲಾಗದು ನಿಜ.‌ ಆದರೆ ಕನಿಷ್ಠ ಸರ್ಕಾರಕ್ಕೆ ಅಭಿವೃದ್ಧಿಯ ದೂರದೃಷ್ಟಿ ಇರಬೇಕಲ್ಲವೇ. ಟ್ರಾಫಿಕ್ ಹೆಚ್ಚಳದಿಂದ ಸ್ವಲ್ಪ ತೊಂದರೆಯಾಗಬಹದು. ಆದರೆ ಅದರ ನಿವಾರಣೆಗಾಗಿ ಕೈಗೊಳ್ಳುವ ಯೋಜನೆಗಳಿಂದ ಅದಕ್ಕಿಂತ ಹೆಚ್ಚಿನ ಹಾನಿಯಾಗುತ್ತದೆ. ಸಾರ್ವಜನಿಕ ಹಣ ಯಥೇಚ್ಛವಾಗಿ ಖರ್ಚಾಗುತ್ತದೆ. ಈಗಾಗಲೇ ಸರ್ಕಾರದ ಎಷ್ಟೋ ಪರ್ಸೆಂಟ್ ಹಣ ಕೇವಲ ಬಡ್ಡಿಗಾಗಿ ಖರ್ಚಾಗುತ್ತಿದೆ. ಅಂತಹ ಸಂದರ್ಭದಲ್ಲಿ ಈ ಯೋಜನೆ ಹೊಟ್ಟೆಗೆ ಅನ್ನವಿಲ್ಲ ಜುಟ್ಟಿಗೆ ಮಲ್ಲಿಗೆ ಹೂವಿನಂತಿದೆ.....

ಒಟ್ಟಿನಲ್ಲಿ ನಾವು ಅಭಿವೃದ್ಧಿಯ ವಿರೋಧಿಗಳಲ್ಲ. ಆದರೆ ಶೋಕಿ ಬದುಕಿಗಿಂತ ಸರಳ ಸುಂದರ ಶ್ರಮದಾಯಕ ಪ್ರಗತಿಪರ ವೈಚಾರಿಕ ಜೀವನಶೈಲಿಯೇ ನಮ್ಮ ಮೊದಲ ಆಯ್ಕೆ............

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068.....

Friday, August 4, 2023

ಭಾರತ ಬಡವರ ದೇಶವೇ? ಶ್ರೀಮಂತ ದೇಶವೇ?

ಭಾರತ ಬಡವರ ದೇಶವೆ?
ಮಧ್ಯಮವರ್ಗದವರಿಂದ ಮುಂದುವರಿಯುತ್ತಿರುವ ದೇಶವೆನ್ನುವುದರ ಹಿಂದೆ ಬಡತನ ಕಾಣುತ್ತಿದೆ ಎಂದರೆ ನಂಬಲಸಾಧ್ಯ ಯಾವುದೇ ದೇಶದ ಸಂಪತ್ತು ಅದರೊಳಗಿರುವ ಪ್ರಜೆಗಳಾಗಿರುವರು.ಪ್ರಜೆಗಳೇ ದೇಶವನ್ನು ಸಾಲದ ದವಡೆಗೆ ಸಿಲುಕಿಸಿದರೆ  ಬಡತನವನ್ನು ಎತ್ತಿ ಹಿಡಿದಂತೆ. ದೇಶದೊಳಗೆ ಇರುವ ಎಲ್ಲಾ ಶ್ರೀಮಂತರಿಗೆ ಸಾಲ ತೀರಿಸುವ ಮನಸ್ಸಿಲ್ಲ. ನಿಜವಾದ ಶ್ರಮ ಜೀವಿಗಳಿಗೆ ತಮ್ಮ ಸಾಲ ತೀರಿಸುವುದೇ ಸಮಸ್ಯೆ. ಇಬ್ಬರ‌ ನಡುವೆ ನಿಂತಿರುವ ಮಧ್ಯಮವರ್ಗ ಈ ಕಡೆ ಶ್ರೀಮಂತ ರು ಇನ್ನೊಂದು ಕಡೆಯ ಬಡವರ  ಪಾಲನ್ನು ‌ ಮಧ್ಯವರ್ತಿಗಳಾಗಿ ಹಂಚಿಕೊಳ್ಳುವುದೇ ಕಾಯಕ. ಹೀಗಾಗಿ ಹಣದಿಂದ ಯಾವುದೇ ಸಮಸ್ಯೆ ಗೆ ಪೂರ್ಣ ಪರಿಹಾರ ಸಿಗೋದಿಲ್ಲ. ಮಧ್ಯಮವರ್ಗ ಶ್ರೀಮಂತ ರ ಸಾಲಿಗೆ ಹೋದರೆ ಅಧರ್ಮ, ಬಡವರ ಸಾಲಿಗೆ ಹೋದರೆ ಧರ್ಮ ಎನ್ನುವ ಹಾಗೂ ಇಲ್ಲ.ಕಾರಣ ಇವರಿಗೆ ಸಹಕಾರ ನೀಡುವವರೆ ಇದಕ್ಕೆ ಕಾರಣ. ಮಾಧ್ಯಮಗಳ ಒಂದೊಂದು ಕಾರ್ಯಕ್ರಮ ಕ್ಕೆ ಸುರಿಯುವ ಹಣ ಎಲ್ಲಿಂದ ಹೇಗೆ ಯಾಕೆ ಬರುವುದೆನ್ನುವುದನ್ನು ಯಾರೂ ಬಾಯಿಬಿಡೋದಿಲ್ಲ.
ಮನರಂಜನೆಯ ಜೊತೆಗೆ  ಆತ್ಮವಂಚನೆಯೂ  ಹೆಚ್ಚಾದಂತೆಲ್ಲಾ ಜಗತ್ತಿನಲ್ಲಿ ‌ ಹಾಲಾಹಲವೆ  ಹೆಚ್ಚುವುದು.
ಸತ್ಯದ ವಿಷಯಕ್ಕೆ ಬೆಲೆಕೊಡದವರ ಹಿಂದೆ ಎಷ್ಟೇ ನಡೆದರೂ ಅಸತ್ಯವೇ ಬೆಳೆಯುವುದು. ಒಟ್ಟಿನಲ್ಲಿ ಬಡತನವಿರೋದೆ‌ ಮಧ್ಯಮವರ್ಗದ ವಿಷಯದಲ್ಲಿ. ಇಲ್ಲಿ ಸತ್ಯವಿದ್ದರೆ  ದೇಶದ ಸಾಲ ತೀರುತ್ತದೆ.ಅಸತ್ಯವೇ ಬಡತನ ಬೆಳೆಸಿರೋದು.
ಹಾಗಾದರೆ ಸತ್ಯ ಯಾವುದು ಅಸತ್ಯ ಯಾವುದು?
ರಾಜಕೀಯವೇ ಅಸತ್ಯವಾಗಿದೆ.ಅಂದರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ  ಭ್ರಷ್ಟರ ಹಿಂದೆ ನಡೆಯುತ್ತಾ ಹಣದ ಶ್ರೀಮಂತಿಕೆಗೆ 
ಉಚಿತ ಸಾಲ ಸೌಲಭ್ಯಗಳನ್ನು ಪಡೆಯುತ್ತಾ ಮುಂದೆ ನಡೆದು ಹಿಂದಿನವರಲ್ಲಿದ್ದ ಆತ್ಮವಿಶ್ವಾಸವನ್ನು ಗಾಳಿಗೆ ತೂರಿ ಭ್ರಷ್ಟ ರಾಜಕೀಯಕ್ಕೆ  ಸಹಕಾರ ನೀಡಿದಂತೆಲ್ಲಾ  ಒಳಗೇ ಬೆಳೆದ ಅಜ್ಞಾನ  ಸಾಲವನ್ನು ಬೆಳೆಸಿತು.ಸಾಲ ತೀರಿಸದೆ ಆತ್ಮಕ್ಕೆ ತೃಪ್ತಿ ಶಾಂತಿ ಮುಕ್ತಿ ಸಿಗೋದಿಲ್ಲ ಎನ್ನುವ  ಅಧ್ಯಾತ್ಮ ಸತ್ಯವನ್ನು  ವಿರೋಧಿಸಿದವರಿಗೆ ಈಗಲೂ   ನಮ್ಮ ಜೀವವಿರೋದು ಸಾಲದಲ್ಲಿ ಎನ್ನುವ ಸತ್ಯದ ಅರಿವಿಲ್ಲದೆ ಆತ್ಮಹತ್ಯೆ ನಡೆದಿದೆ.
ಇದಕ್ಕೆಲ್ಲ ಕಾರಣ ಸರ್ಕಾರ ಎನ್ನುವುದೇ ಸುಳ್ಳು, ಇದಕ್ಕೆ ಕಾರಣ  ಅಜ್ಞಾನದ ಪ್ರಜಾ  ಸಹಕಾರ. ಒಂದು ಕಡೆ ಧಾರ್ಮಿಕ ರಾಜಕೀಯ ಇನ್ನೊಂದು ಕಡೆ ರಾಜಕಾರಣಿಗಳ ರಾಜಕೀಯ ಇವರಿಬ್ಬರ ನಡುವಿರುವ ಮಾದ್ಯಮ ದ ರಾಜಕೀಯತೆ ದೇಶವನ್ನು ವಿದೇಶ ಮಾಡುತ್ತಾ  ದೇಶದ ಶಿಕ್ಷಣದಲ್ಲಿಯೇ ಮಕ್ಕಳು ಮಹಿಳೆಯರಿಗೆ ಹಣ ಸಂಪಾದಿಸುವ  ಮಾರ್ಗ ತೋರಿಸಿ  ಸತ್ಯಜ್ಞಾನದಿಂದ ದೂರಮಾಡಿ ಮನರಂಜನೆಯೇ ಜೀವನ ಎಂದರೆ ಮನಸ್ಸು ಸ್ಥಿರವಾಗಿರುವುದೆ? ಚಂಚಲ ಮನಸ್ಸನ್ನು ತಡೆಹಿಡಿದು ಒಳಗಿರುವ ಆತ್ಮಶಕ್ತಿಯನ್ನು ಬೆಳೆಸಿಕೊಂಡು  ಸತ್ಯ ಧರ್ಮದೆಡೆಗೆ  ನಡೆದವರು ಮಹಾತ್ಮರಾಗಿದ್ದಾರೆ. ಹಾಗಾದರೆ ಬಡತನವನ್ನು ಹೋಗಲಾಡಿಸಲು  ಜ್ಞಾನ ಬೇಕೆ? ಹಣವೇ?
ಹಣವನ್ನು ಸದ್ಬಳಕೆ ಮಾಡಿಕೊಳ್ಳಲು ಜ್ಞಾನ ಬೇಕಿದೆ.ಒಂದು ರುಪಾಯಿಯೂ ಸಾಲವಾಗಿದ್ದರೆ ಅದನ್ನು ತೀರಿಸಲು ಎರಡು ರುಪಾಯಿ ಕಷ್ಟಪಟ್ಟು ದುಡಿಯಲೇಬೇಕು.ಒಬ್ಬ ಬಿಕ್ಷುಕ ತನ್ನ ಹೊಟ್ಟೆಪಾಡಿಗಾಗಿ ಬೇಡೋದು ತಪ್ಪಲ್ಲ. ಆದರೆ ಒಬ್ಬ ಬಿಕ್ಷು ತನ್ನ ಸ್ವಾರ್ಥ ಸಾಧನೆಗಾಗಿ ಬೇಡೋದು ತಪ್ಪು. ಹೀಗೇ ದೇಶದ  ಪ್ರಜೆಗಳಾದವರು  ದೇಶಕ್ಕಾಗಿ ದುಡಿಯದೆ ದೇಶದ ಸಾಲ ಏರಿಸಿದರೆ ಅಧರ್ಮ. ಇದಕ್ಕೆ ತಕ್ಕ ಫಲವನ್ನು ಅನುಭವಿಸಲೇಬೇಕು.
ಸರ್ಕಾರದ ಒಂದೊಂದು ಯೋಜನೆಗಳು ಸರಿಯಾಗಿ ಕಾರ್ಯ ರೂಪಕ್ಕೆ ಬರಬೇಕಾದರೆ  ಮಧ್ಯವರ್ತಿಗಳು ಸರಿಯಾಗಿರಬೇಕು.ನೇರವಾಗಿ ತಲುಪಿಸುವ ಯೋಜನೆಗಳಲ್ಲಿ  ತಂತ್ರಜ್ಞಾನದ ಕೊರತೆಯಿರುವಾಗ ಅಲ್ಲಿಯೂ ಮಧ್ಯವರ್ತಿಗಳು ತಮ್ಮ ಸ್ವಾರ್ಥ  ಬುದ್ದಿ ತೋರಿಸುವುದು  ಅಸಹ್ಯ. ಆದರೆ ಇವುಗಳಿಗೆಲ್ಲಾ ಸೂಕ್ತ ಕ್ರಮ ತೆಗೆದುಕೊಳ್ಳುವ ಕಾನೂನಿನಲ್ಲಿಯೂ ನ್ಯಾಯ ಅನ್ಯಾಯದ ಲೆಕ್ಕಾಚಾರವೂ ಹಣದಿಂದಲೇ ನಡೆದರೆ ಸತ್ಯಕ್ಕೆ ಬೆಲೆಯಿಲ್ಲದೆ ಹಿಂದುಳಿಯುತ್ತದೆ. ಸತ್ಯವೇ ದೇವರೆಂದರು.
ದೇವರು ಕಾಣದೆ ಅಸತ್ಯಕ್ಕೆ ಶರಣಾದರು. ದೇವತೆಗಳು ಅಸುರರು ಮಾನವರು ಈಗಲೂ ಭೂಮಿಯ ಮೇಲಿರುವರು.ಮೂಲ ದೇವತೆಗಳಿಗಷ್ಟೆ ಜನನ ಮರಣವಿಲ್ಲ. ಹಾಗಾದರೆ ನಮ್ಮೊಳಗೇ ಅಡಗಿರುವ ಸಾತ್ವಿಕ ಶಕ್ತಿಯನ್ನು ಬೆಳೆಸಿಕೊಳ್ಳಲು ಹೋದರೆ ಜ್ಞಾನ ಬರುವುದು.ಜ್ಞಾನದಿಂದ ವಿಜ್ಞಾನ ಬೆಳೆದು  ಜನರಲ್ಲಿ ಸತ್ಯದರ್ಶ ನವಾಗಬೇಕೇ ಹೊರತು ವಿಜ್ಞಾನದಿಂದ ಜ್ಞಾನ ಕುಸಿಯಬಾರದಷ್ಟೆ.ಯಾವಾಗ ಧರ್ಮ, ದೇವರು,
ಪಕ್ಷ,ದೇಶ,ವಿಶ್ವದ ಹೆಸರಿನಲ್ಲಿ  ರಾಜಕೀಯ ವ್ಯಾಪಾರ ವ್ಯವಹಾರ ಹೆಚ್ಚಾಯಿತೋ ಹಣವೇನೂ ಸಿಗುತ್ತಿದೆ ಆದರೆ ಋಣ ಕರ್ಮ ಕಳೆಯದೆ‌ ದುಷ್ಕರ್ಮ  ಬೆಳೆದು ದುಷ್ಟರ ಸಂಖ್ಯೆ ಮಿತಿಮೀರಿದೆ. ಭ್ರಷ್ಟಾಚಾರ ಬೆಳೆದಿರೋದೆ ಅಜ್ಞಾನದಿಂದ. ಅಜ್ಞಾನಕ್ಕೆ ಶಿಕ್ಷಣವೇ ಕಾರಣ.ನಮ್ಮದೇಶದ ಮೂಲ ಶಿಕ್ಷಣವೇ ಪರಕೀಯರ ಭಾಷೆಯಲ್ಲಿದ್ದರೆ ಅರ್ಥ ವಾಗದ ವಿಷಯವನ್ನು ಮಕ್ಕಳ ತಲೆಗೆ ತುಂಬಲು ಪೋಷಕರೆ ಸಹಕರಿಸಿದರೆ ಅದರ ಫಲವನ್ನು ಮುಂದೆ ಪೋಷಕರೆ ಅನುಭವಿಸೋದಷ್ಟೆ.ಇದೀಗ ಸತ್ಯವಾಗಿ ಕಾಣುತ್ತಿದೆ.
ನಾವು ಸಹಕಾರ ನೀಡಿದವರೆ ನಮ್ಮನ್ನು ಅಧರ್ಮದಲ್ಲಿ ಆಳುತ್ತಿರೋದಕ್ಕೆ ಕಾರಣವೇ ನಮ್ಮೊಳಗೇ ಅಡಗಿರುವ ಬಡತನ. ಸಾಲ ತೀರಿಸಲು ಹಣದ ಹಿಂದಿರುವ ಭ್ರಷ್ಟಾಚಾರ ದಿಂದ ಸಾಧ್ಯವಿಲ್ಲ.ಎಷ್ಟೋ ಜನ್ಮಗಳ ಫಲ‌ ಈಗ ಪಡೆದರೂ ಇಂದಿನ ಕರ್ಮ ಫಲ ಮುಂದಿನ ಪೀಳಿಗೆಯವರೆಗೂ ಇರುತ್ತದೆ  ಹೀಗಾಗಿ ಬಡತನವನ್ನು ಜ್ಞಾನದಿಂದ ದೂರಮಾಡುವ ಶಿಕ್ಷಣವನ್ನು  ಮಾನವ ಪಡೆದಾಗಲೇ ನಿಜವಾದ ಜೀವನ. ಎಷ್ಟು ಓದಿ ತಿಳಿದೆನೆಂಬುವ‌ಬದಲು ಓದಿದ್ದರಲ್ಲಿ ಎಷ್ಟು ಸತ್ಯವಿದೆ ಎಂದರಿತು ಅಳವಡಿಸಿಕೊಂಡು
ಒಳಗೇ ಶುದ್ದವಾದರೆ  ಭಗವಂತ ನೀಡಿರುವುದರಲ್ಲಿಯೇ
ತೃಪ್ತಿ ಯ ಜೀವನ‌ನಡೆಸಬಹುದು.ಆದರೆ ಹಾಗೆ ಬದುಕಲು ಸಮಾಜದಲ್ಲಿ ಕಷ್ಟ ವಾಗಿ ಸಮಾಜದ ಮಧ್ಯೆ ಸಿಲುಕಿದರೆ ತಿರುಗಿ ಹೊರಬರೋದೆ ಕಷ್ಟ.ಕಾಲದ ಪ್ರಭಾವ.ಶತ್ರುಗಳನ್ನು ಪ್ರೀತಿಸುವ ಶಕ್ತಿ ಹಿಂದೂ ಧರ್ಮ ದಲ್ಲಿತ್ತು.ಆದರೆ ಹಣಕ್ಕಾಗಿ ಅಜ್ಞಾನದಲ್ಲಿ ನಮ್ಮವರನ್ನೇ ದ್ವೇಷಿಸುವ ಮಟ್ಟಿಗೆ ರಾಜಕೀಯ ಬೆಳೆದು ಅಧರ್ಮ  ಆಕಾಶದೆತ್ತರ ಬೆಳೆಯುತ್ತಿದೆ ಎಂದರೆ ಬಡತನವಿದೆ ಎಂದರ್ಥ. ತತ್ವನರಿಯದ ತಂತ್ರಜ್ಞಾನದಿಂದ ಭಾರತ ಬಡತನದೆಡೆಗೆ ಸಾಗುತ್ತಿದೆ. ಉಳ್ಳವರು ಶಿವಾಲಯವ ಕಟ್ಟುವರು ನಾನೇನು ಮಾಡಲಿ ಬಡವನಯ್ಯಾ ಎಂದ ಮಹಾತ್ಮರಿಗೆ ಒಳಗಿದ್ದ ಅಪಾರವಾದ ಜ್ಞಾನಶಕ್ತಿಯನ್ನು ಗುರುತಿಸುವ ಜನಬಲ ಹಣಬಲವಿರಲಿಲ್ಲ.ಹೀಗಾಗಿ ಅಂದು ಇಂದು ಮುಂದು ನಮ್ಮೊಳಗೇ  ಜ್ಞಾನವೂ ಇದೆ  ಅಜ್ಞಾನವೂ ಇದೆ.ದೈವಶಕ್ತಿ ಅಸುರಶಕ್ತಿಯ  ಪ್ರಚೋಧನೆಯಿಂದ ಎಲ್ಲಾ ನಡೆದಿದೆ. ಮಧ್ಯವರ್ತಿಗಳ ಅರ್ಧ ಸತ್ಯದ ಪ್ರಚಾರವೇ ಎಲ್ಲಾ ಅತಂತ್ರಸ್ಥಿತಿಗೆ ತಂದಿದೆ .ಸತ್ಯದೆಡೆಗೆ ಹೋದವರು ಸ್ವತಂತ್ರ ಜ್ಞಾನಿಗಳಾದರು.ಮಿಥ್ಯದೆಡೆಗೆ ಹೋದವರೆ ಅತಂತ್ರಸ್ಥಿತಿಗೆ ಕಾರಣರು. ವೈಜ್ಞಾನಿಕ ವಿಚಾರಗಳಿಂದ ಭೌತಿಕದಲ್ಲಿ  ಸುಖ ಪಡೆದರೂ ಅಧ್ಯಾತ್ಮದ ಮೂಲ ತಿಳಿಯದಿದ್ದರೆ ಅಧರ್ಮ.
ವಿಜ್ಞಾನಿಗಳಂತೆ ಆತ್ಮಜ್ಞಾನಿಗಳೂ ಭೂಮಿಯಲ್ಲಿ ಶ್ರೀಮಂತರ ಸಾಲಿನಲ್ಲಿ  ಇದ್ದಾರೆಂದರೆ ಹಣದಿಂದ ಜ್ಞಾನೋದಯವೆ? ಜ್ಞಾನದಿಂದ ಹಣಸಂಪಾದನೆಯೇ? ಹಿಂದಿನ ಮಹರ್ಷಿಗಳು ಸಂಸಾರದೊಳಗಿದ್ದು ಯಾವ ಸಾಲ ಇಲ್ಲದೆಯೇ  ಲೋಕಕಲ್ಯಾಣಕ್ಕಾಗಿ ಜೀವನ‌ ನಡೆಸಿದ್ದರು.ಈಗ ಹೇಗಿದೆ? ಜನ  ಹಣವಿದ್ದವರಿಗಷ್ಟೆ ಸಹಕಾರ ನೀಡುವಾಗ ಹಣದಿಂದಲೇ ಜನಬಲ ಹೆಚ್ಚಿಸಿಕೊಂಡು ಬದುಕುವ ಪರಿಸ್ಥಿತಿ ಇದೆ. ಎಂದರೆ ಹಣಸಂಪಾದನೆಯ ಮೂಲ ಸಾತ್ವಿಕವಾಗಿದ್ದರೆ  ಧರ್ಮ. ಕೇವಲ ರಾಜಕೀಯವಾಗಿದ್ದರೆ ಅಸತ್ಯದ ಅಧರ್ಮ. ಇದರ ಹಿಂದೆ ನಡೆದವರೂ ಅದೇ ಮಾರ್ಗ ಹಿಡಿಯುವರು. ಮನೆಯ ಮೂಲ ಧರ್ಮ ಕರ್ಮ ವನರಿಯದೆ  ಹೊರಬಂದು ಹಣಗಳಿಸಿದರೂ  ಸದ್ವಿಚಾರ ಸತ್ಯ ಧರ್ಮದ ಕೊರತೆ ಇರುತ್ತದೆ. ದೇವರಿಗೆ  ದೈವತ್ವಕ್ಕೆ ಸ್ಥಾನಮಾನ ಕೊಡುವಷ್ಟು ಮಹಾತ್ಮರ ಸಂಖ್ಯೆ ಬೆಳೆದಾಗಲೇ ದೇಶದ ಬಡತನ ನಿವಾರಣೆ ಸಾಧ್ಯ.
ಭ್ರಷ್ಟರಿಗೆ ಸಹಕಾರ ಕೊಟ್ಟರೆ ಬಡವರಾಗೇ ಜೀವ ಹೋಗುತ್ತದೆ. ಒಟ್ಟಿನಲ್ಲಿ  ಶಿಷ್ಟಾಚಾರದ ಶಿಕ್ಷಣದಿಂದ ಜ್ಞಾನ ಹೆಚ್ಚಿಸಿಕೊಂಡು ಸನ್ಮಾರ್ಗದ ಸತ್ಕರ್ಮದಿಂದ. ಹಣಸಂಪಾದಿಸುತ್ತಾ ದಾನಧರ್ಮ ಕಾರ್ಯ ಮಾಡುತ್ತಾ ನಿಸ್ವಾರ್ಥ ನಿರಹಂಕಾರದಿಂದ ‌ ಪ್ರತಿಫಲಾಪೇಕ್ಷೆ ಯಿಲ್ಲದೆ ಮಾಡುವ ಸೇವೆಯಿಂದ ಯೋಗಿಗಳಾಗಬಹುದೆಂದು ಶ್ರೀ ಕೃಷ್ಣ ತಿಳಿಸಿದ್ದರೂ ಭೌತಿಕದ ಭೋಗ ಜೀವನಕ್ಕೆ  ಹೆಚ್ಚಿನ ಸಹಕಾರವಿದ್ದರೆ‌  ಬಡವರ ಹೆಸರಿನಲ್ಲಿ ರಾಜಕೀಯದಲ್ಲಿ ದುಷ್ಟರು ಬೆಳೆಯುವರಷ್ಟೆ. 
ಕಟ್ಟುವುದು ಕಷ್ಟ ಮೆಟ್ಟುವುದು ಸುಲಭ.ಹಾಗೆ ಜ್ಞಾನಸಂಪಾದನೆ ಕಷ್ಟ ಅಜ್ಞಾನದ ಸಂಪಾದನೆ ಸುಲಭವಾದರೂ ಕಷ್ಟ ನಷ್ಟ ತಪ್ಪಿದ್ದಲ್ಲ. ಭಾರತವನ್ನು ಅಧ್ಯಾತ್ಮದಿಂದ ಆತ್ಮನಿರ್ಭರ ಮಾಡೋದಕ್ಕೆ ತತ್ವಜ್ಞಾನ ಬೇಕು. ವಿಜ್ಞಾನದಿಂದ ಆತ್ಮನಿರ್ಭರ ಮಾಡಲು ತಂತ್ರ ಪ್ರಯೋಗ ಮಾಡಿದಷ್ಟೂ ಮಧ್ಯವರ್ತಿಗಳು ಬೆಳೆಯುವರಷ್ಟೆ. ಸಾಕಷ್ಟು ಸಂಘ ಸಂಸ್ಥೆಗಳು ಮಠ ಮಂದಿರ ಶಾಲಾ ಕಾಲೇಜುಗಳಲ್ಲಿ  ನಡೆಯುತ್ತಿರುವ ಕಾರ್ಯಕ್ರಮದಿಂದ ಇಲ್ಲಿ ದೇಶ ಸುಭಿಕ್ಷವಾಗಿದೆಯೆ? ಅಥವಾ ಬಿಕ್ಷುಕರಂತೆ ಬೇಡೋರೆ ಬೆಳೆದರೆ? ಇಲ್ಲಿ ನಾವೆಲ್ಲರೂ ಭಗವಂತನಲ್ಲಿ ‌ಬೇಡುವ ಬಿಕ್ಷುಗಳಾಗಿದ್ದ ಯೋಗಿಗಳಾಗಬೇಕಾಗಿತ್ತು. ಆದರೆ ಪರಕೀಯರಿಗೆ ಮಣೆ ಹಾಕುತ್ತಾ  ಒಪ್ಪಂದ ಮಾಡಿಕೊಂಡು ನಮ್ಮವರನ್ನೇ ದೂರ ಮಾಡಿಕೊಂಡು ಸರ್ಕಾರವನ್ನು ಬೇಡಿದರೆ  ದೇಶದ ಸಾಲ ತೀರುವುದೆ? ವಿದೇಶಿ ಸಾಲ ಬೆಳೆಯುವುದಲ್ಲವೆ? ಸಾಮಾನ್ಯ ಜ್ಞಾನವಿದ್ದರೆ ಈ ಸತ್ಯ ಅರ್ಥ ಆಗಬಹುದು.ಇದು ಮಾನವನೊಳಗಿದೆ. ದೇವಾಸುರರು ವಿಶೇಷಜ್ಞಾನಿಗಳು. ಭೂಮಿ  ನಡೆದಿರೋದು ಮಾನವರಿಂದ...ಸಹಕಾರ ಯಾರಿಗೆ ಕೊಡಬೇಕೆಂಬ ಸಾಮಾನ್ಯಜ್ಞಾನ ದ ಕೊರತೆಯೇ ಬಡತನಕ್ಕೆ ಕಾರಣವಾಗಿದೆ.
ಬಡವನ ಕೋಪ ದವಡೆಗೆ ಮೂಲವೆನ್ನುವಂತೆ ಎಷ್ಟೇ ಬಡವರು ಹೊರಗೆ ಹೋರಾಡಿದರೂ ಒಳಗೇ ಅಡಗಿರುವ ಅಮೃತತತ್ವ ಬಿಟ್ಟು ನಡೆದರೆ ವಿಷವೇ ಸಿಗೋದು. ವಿಷಯಗಳು ಅಮೃತಮಯವಾದಷ್ಟೂ  ಜೀವನದಲ್ಲಿ ಶಾಂತಿ ನೆಮ್ಮದಿ ಸುಖ, ಸಮೃದ್ದಿ ಹೆಚ್ಚಾಗುವುದು. ಹೆಚ್ಚಾಗಿದ್ದನ್ನು ಹಂಚಿಕೊಂಡಷ್ಟೂ ಮುಕ್ತಿ ಮಾರ್ಗದಲ್ಲಿ ನಡೆಯಬಹುದು.
ವೇದ ಶಾಸ್ತ್ರ ಪುರಾಣಗಳು ಸಮಾಜವನ್ನು  ಸರಿದಾರಿಗೆ ತರುವ ಪ್ರಯತ್ನ ಮಾಡಬೇಕಾದರೆ  ಪ್ರಚಾರಕರು ಶುದ್ದವಾದ ವಿಷಯಗಳನ್ನು  ಶಿಕ್ಷಣದಲ್ಲಿಯೇ ಕಲಿತು ಕಲಿಸಿ ತಿಳಿಸುವವರಾಗಬೇಕಿತ್ತು. ಹಣ,ಅಧಿಕಾರ,ಸ್ಥಾನಮಾನಕ್ಕಾಗಿ  ಹಾತೊರೆದು ಸತ್ಯ ಸತ್ವ ತತ್ವ ಬಿಟ್ಟರೆ  ಅದೇ    ರೀತಿಯಲ್ಲಿ ಅಜ್ಞಾನಿಗಳೂ  ಅವರ ವಿಷಯವನ್ನು ಪ್ರಚಾರ ಮಾಡುತ್ತಾ ‌ನಡೆಯುವರು. ಇದರಲ್ಲಿ ಯಾರದ್ದು ತಪ್ಪು?  ಯಥಾ ಗುರು ತಥಾ ಶಿಷ್ಯ , ಯಥಾ ಪ್ರಜಾ ತಥಾ ಪ್ರಜಾಪ್ರಭುತ್ವ ಎಂದಂತೆ ಗುರುವಿನಲ್ಲಿಯೂ ದೇವ ಗುರು ಅಸುರ ಗುರು ಇರೋವಾಗ ಮಾನವರಿಗೆ ಗುರು ಅರಿವೇ ಗುರು.ಆತ್ಮ ಸಾಕ್ಷಿಯೇ ಗುರುವಲ್ಲವೆ? 

ಹೃದಯ ಜೀವ ಶಕ್ತಿಯಾದರೆ ಹೃದಯವಂತಿಕೆ ಆತ್ಮಶಕ್ತಿ


 ಆತ್ಮಜ್ಞಾನವನ್ನು ಕಣ್ಣಿನಿಂದ ನೋಡಲಾಗದು.  ಜೀವವಿಜ್ಞಾನ  ಸಂಶೋಧನಾ ಕೇಂದ್ರಗಳಿಂದ ಜಗತ್ತು ಹೇಗೆ ನಡೆದಿದೆಯೋ ಹಾಗೆಯೇ ಆತ್ಮವಿಜ್ಞಾನದ ಸಂಶೋಧಕರು  ಒಳಗಿದ್ದೇ ಸೂಕ್ಮದೃಷ್ಟಿಯಿಂದ  ಸತ್ಯವರಿತು ಆತ್ಮವೇ ದೇವರೆಂದರು. ಕಾಣದ ಆತ್ಮ ಕಾಣದ ದೇವರ ಹೆಸರಿನಲ್ಲಿ ಸಾಕಷ್ಟು ಮಂದಿ ರಾಜಕೀಯ ನಡೆಸುತ್ತಾ ಜನರನ್ನು ಆಳಿದರು.ಈಗಲೂ ಇದೆ ನಡೆದಿದೆ ಎಂದರೆ ಎಲ್ಲರಲ್ಲಿಯೂ ಜೀವಶಕ್ತಿಯ ಜೊತೆಗೆ ಆತ್ಮಶಕ್ತಿಯಿದ್ದರೂ  ಕೆಲವರಷ್ಟೆ ಆತ್ಮಜ್ಞಾನಿಗಳಾಗಿರೋದು. ಇದಕ್ಕೆ ಕಾರಣ ಆತ್ಮಾವಲೋಕನ. ತನ್ನ ತಾನರಿತು ಜಗತ್ತಿನಲ್ಲಿ ಜೀವಿಸೋದಷ್ಟೆ. ತನ್ನ ಹಿಂದೆ ಎಷ್ಟು ಜನರಿದ್ದಾರೆನ್ನುವುದು ರಾಜಕೀಯ .ನನ್ನೊಳಗೇ ಎಷ್ಟು ಆತ್ಮ ಶಕ್ತಿಯಿದೆ ಎನ್ನುವ ಸತ್ಯ ವರಿತು  ಭೂಮಿಯನ್ನು ಸದ್ಬಳಕೆ ಮಾಡಿಕೊಂಡವರು ರಾಜಯೋಗಿಗಳು. ಯೋಗ  ಜೀವಾತ್ಮ ಪರಮಾತ್ಮನ ಸೇರೋ ಕಡೆಗಿತ್ತು. ಈಗ ಪರಮಾತ್ಮನ ಆಳೋ ಕಡೆಗೆ ಹೊರಟು ಸೋತು  ಹೋಗುತ್ತಿದೆ. ದೇಶವನ್ನೇ ತೆಗೆದುಕೊಂಡರೆ ಭಾರತ ಮಾತೆ ಒಳಗೆ ಇದ್ದು ನಾನೇ ಬೇರೆ ನೀನೇ ಬೇರೆ, ನಿನ್ನ ನಾ ಆಳುವೆ ಎಂದರೆ ದೇಶ ಭಕ್ತಿ ಇರದು.ಹಾಗೆ ದೇವರು ಪರಮಾತ್ಮ,ಆತ್ಮನ  ಅರಿವು ಒಳಗಿನಿಂದಲೇ  ಬರಬೇಕು. ಅನುಭವಕ್ಕೆ ಬರೋವರೆಗೂ  ಸುಳ್ಳಾಗಿರುವುದು. ಸತ್ಯಕ್ಕೆ ಸಾವಿಲ್ಲ.  ಅದಕ್ಕೆ ದೇಹಕ್ಕೆ ಅಂತ್ಯವಿದೆ ಆತ್ಮಕ್ಕಿಲ್ಲವೆಂದರು.

ಭೂಮಿಯ ಮೇಲಷ್ಟೇ ಮನುಕುಲವಿರೋದು, ಮಾನವನಿಗಷ್ಟೆ ಆರನೇ ಅರಿವಿರೋದು. ಅದನ್ನು ಆತ್ಮಸಾಕ್ಷಾತ್ಕಾರದ ನಂತರವೇ ತಿಳಿಯೋದು. ಅಂದರೆ ಮೇಲಿರುವ ಎಲ್ಲಾ ಗ್ರಹ ನಕ್ಷತ್ರ ಗಳ ಪ್ರಭಾವದಿಂದಾಗಿ ಮನಸ್ಸು  ನಡೆಯುತ್ತದೆ. ಭೂಮಿಯೇ ಒಂದು ಗ್ರಹ ಅದರ ಸುತ್ತಮುತ್ತಲಿನ ಎಲ್ಲಾ ಗ್ರಹ ನಕ್ಷತ್ರಗಳ ಚಲನಗಳು ಭೂಮಿ ಮೇಲಿರುವ‌  ಮಾನವನ ಜೀವನದ ಮೇಲೆ ಪರಿಣಾಮ ಬೀರುವುದೆನ್ನುವ ಜ್ಯೋತಿಷ್ಯ ವಿಜ್ಞಾನವು  ಹಿಂದಿನಿಂದಲೂ ಭವಿಷ್ಯ  ಹೇಳಿಕೊಂಡು ಬಂದಿದೆ. ನಡೆದಿದೆ ನಡೆಯುತ್ತಿದೆ ಎಂದರೆ ಇದನ್ನು ತಪ್ಪು ಸುಳ್ಳು ಎನ್ನುವ ವಾದ ವಿವಾದದಿಂದ ಏನಾದರೂ ಬದಲಾವಣೆ ಆಗಿದೆಯೆ? ಪ್ರಕೃತಿ ವಿಕೋಪ ಕ್ಕೆ ಬಲಿಯಾದವರಲ್ಲಿ  ಮಾನವರೂ ದೇವಾಸುರರೂ ಇದ್ದಾರೆ ಎಂದರೆ ಈ ಮೂರೂ ಗುಣಗಳ ಭಿನ್ನಾಭಿಪ್ರಾಯ  ಆತ್ಮನ ಸರಿಯಾದ ತಿಳಿವಳಿಕೆಯಿಂದ ದೂರ ಮಾಡುತ್ತಾ ರಾಜಕೀಯ  ಬೆಳೆಸಿದೆ. ಆದರೂ ಮಾನವ ಕಾರಣಮಾತ್ರ ಎನ್ನುವ ಅದ್ವೈತ. ಎಲ್ಲದ್ದಕ್ಕೂ ನಾನೇ ಕಾರಣ ಎನ್ನುವ ದ್ವೈತ  ಎಲ್ಲರಲ್ಲಿಯೂ ಇದ್ದು ನಡೆಸೋನು ನಾನೇ ಎನ್ನುವ ವಿಶಿಷ್ಟಾದ್ವೈತ  ತಮ್ಮ ತಮ್ಮ ದರ್ಶನವನ್ನು  ತಿಳಿಸಿದ್ದರೂ ಅದನ್ನು ಒಳಹೊಕ್ಕಿ ಸತ್ಯಾಸತ್ಯತೆ ತಿಳಿಯುವುದು ಬಿಡುವುದು  ಮಾನವ ಧರ್ಮ ಕರ್ಮ. ಬಡವನಲ್ಲಿ ಜ್ಞಾನವಿದ್ದರೆ ಹಣವಿರದು,ಶ್ರೀಮಂತ ನಲ್ಲಿ ಹಣವಿದ್ದರೆ ಜ್ಞಾನವಿರದು.ಜ್ಞಾನವಿದ್ದರೂ ಸತ್ಯವಿರದು. ಕಾರಣ ಇಲ್ಲಿ ಬಡವನ ಪಾಲನ್ನು ಪಡೆದು ಶ್ರೀಮಂತ ಸ್ವತಂತ್ರ ಜೀವನ ನಡೆಸಿದರೂ  ಅದು  ಬಡವನ ಕರ್ಮ ಎನ್ನುವವರೆ ಹೆಚ್ಚು. ಬಡವನಿಗೆ ಕೊಟ್ಟು ಸಮಾನ ಜೀವನ ನಡೆಸೋರು ಇಲ್ಲ. ಹಾಗಾಗಿ ಆತ್ಮ ಎಲ್ಲರನ್ನೂ ಒಂದಾಗಿ ಕಾಣು ಎಂದರೆ ಜೀವ ಬೇರೆ ಬೇರೆಯಾಗೇ ಇರುತ್ತದೆ. ಯಾರಲ್ಲಿ ಆತ್ಮಜ್ಞಾನವಿದ್ದು ಜೀವದ ಹಂಗುತೊರೆದು  ಪರಮಾತ್ಮನ ಶರಣಾಗುವ ಭಾಗ್ಯ ಇರುವುದೋ ಅವರು ಮಹಾತ್ಮರಾದರು. ಇದಕ್ಕೆ ಯೋಗ ಎಂದರು. ಜ್ಞಾನಯೋಗ, ರಾಜಯೋಗ,ಭಕ್ತಿಯೋಗ,ಕರ್ಮ ಯೋಗವೆಲ್ಲವೂ ಮುಕ್ತಿಯ ಮಾರ್ಗಗಳಾಗಿವೆ. ಇದನ್ನು ಶ್ರೀ ಕೃಷ್ಣ ಪರಮಾತ್ಮನೇ ಭಗವದ್ಗೀತೆ ಮೂಲಕ ವಿವರವಾಗಿ ತಿಳಿಸಿದ್ದರೂ ರಾಜಕೀಯ ಬಿಡದೆ ಯೋಗ ಸಿದ್ದಿಸದು, ಯೋಗ ಸಿದ್ದಿ ಆದವರಿಗೆ ರಾಜಕೀಯ ಹಿಡಿಸದು.ಆದರೆ ವಾಸ್ತವದಲ್ಲಿ ಭಾರತ ದೇಶದ ಯೋಗ ಭಾರತೀಯರ ತತ್ವಶಾಸ್ತ್ರ ದಲ್ಲಿದೆ. ತಂತ್ರದಿಂದ ತತ್ವವನರಿಯದೆ ರಾಜಕೀಯ ನಡೆಸಿದರೆ ಅತಂತ್ರ ಜೀವನ. ಸ್ವತಂತ್ರ ಭಾರತಕ್ಕೆ ಬೇಕಿದೆ ಸ್ವತಂತ್ರ ಜ್ಞಾನದ ಶಿಕ್ಷಣ. ಕೊಡುವವರು ಯಾರು? ಪಡೆಯುವವರು ಯಾರು? ಒಳಗೇ ಅಡಗಿರುವ ಆತ್ಮಶಕ್ತಿಯನ್ನು ಅಧ್ಯಾತ್ಮದ ಸತ್ಯ ತಿಳಿಯುವ ಕಡೆಗೆ ಹೊರಡಿಸಲೂ  ಮನಸ್ಸು ಬೇಕು.ಇದನ್ನು ಒಳಗಿದ್ದೇ ಹಿಡಿತದಲ್ಲಿಟ್ಟುಕೊಂಡವರು ವಿರಳ. ಹೊರಗೆಷ್ಟು ಪ್ರಚಾರ ಮಾಡಿದರೂ ಒಳಗೇ ಶುದ್ದವಾಗದಿದ್ದರೆ ಸ್ವಚ್ಚ ಭಾರತ ಕನಸು. ವೈಜ್ಞಾನಿಕ ಸಂಶೋಧನೆಯಿಂದ ವೈಧ್ಯಕೀಯ ಸೇವೆ ಹೆಚ್ಚಾಗಿ ರೋಗಿಗಳೂ ಬೆಳೆದರು. ವೈಚಾರಿಕತೆಯ ಸಂಶೋಧನೆಯಲ್ಲಿ  ಹಿಂದೂಗಳು ಹಿಂದುಳಿದು  ವೈಜ್ಞಾನಿಕತೆಯ ಹಿಂದೆ ನಡೆದು ಯೋಗದಿಂದ ದೂರವಾದರು. ಕಾಲದ ಪ್ರಭಾವವೆಂದರೆ ಸರಿಯಾಗಬಹುದಷ್ಡೆ.ಯಾವುದೂ ನಮ್ಮ‌ಕೈಯಲ್ಲಿಲ್ಲ ಎನ್ನುವ ಬದಲಾಗಿ ನಮ್ಮ ಕೈ ಯಾವುದಕ್ಕೆ ಜೋಡಿಸಿ ಉಪಯೋಗಿಸಿದರೆ ಬಲವಾಗುತ್ತದೆಂದು ಅರಿವಾಗಬೇಕಿದೆ. 
ಸತ್ಯ ಕಣ್ಣಿಗೆ ಕಾಣದು ಅಸತ್ಯ  ಬೆನ್ನ ಬಿಡದು.ಬೆನ್ನ ಬಿಡದ ಬೇತಾಳಗಳು ಭೂತಕಾಲದಲ್ಲಿದ್ದೇ ವಾಸ್ತವತೆಯನರಿಯದೆ ಭವಿಷ್ಯ ನಿರ್ಮಾಣ ಮಾಡಲು ಹೋದರೆ ಆಗೋದು ಹೀಗೆ. 

ಹಿಂದೂ ಒಂದಾಗೋದು ಕಷ್ಟವೇಕೆ?

 ಹಿಂದಿನಿಂದಲೂ‌  ನಡೆದು  ಬಂದಿರುವ  ಈ ಮನುಕುಲದ   
ಸಮಸ್ಯೆಗೆ ಕಾರಣವೇ  ಒಗ್ಗಟ್ಟಿನ ಅಭಾವ. ಹಾಗಂತ ಎಲ್ಲಾ ಸರಿ ಎನ್ನುವ   ಹಾಗಿಲ್ಲ.ಎಲ್ಲಾ ಮಾನವರೆಂದರೂ ಎಲ್ಲರಲ್ಲೂ ಮಾನವೀಯತೆಯಿಲ್ಲ.ಹಾಗೆ ದೇವರು ಅಸುರರ ನಡುವಿನ  ಭಿನ್ನಾಭಿಪ್ರಾಯ ದಲ್ಲಿ ದೈವತ್ವವಿದ್ದರೆ ದೇವರು ಅಸುರಿ ಗುಣ ಹೆಚ್ಚಾದರೆ ಅಸುರರಾಗುವರು. ಇಲ್ಲಿ ದೇವಾನುದೇವತೆಗಳು ಭೂಮಿಗೆ ಬಂದು ತಮ್ಮ  ಕಾರ್ಯ ನಡೆಸಿದ್ದರೂ ಈಗ ನಮಗೆ ದೇವರು ಕಾಣಿಸುತ್ತಿಲ್ಲ. ಯಾರು ಕೇಳಿದ್ದನ್ನು ಕೊಡುವರೋ ಅವರು ದೇವರಾಗುವರು. ಹಾಗಾದರೆ ಸರ್ಕಾರ ಕೇಳಿದ್ದು ಕೊಟ್ಟರೆ ರಾಜಕಾರಣಿಗಳು ದೇವರಾಗುವರೆ? ಪ್ರಜಾಪ್ರಭುತ್ವದ ದೇಶದಲ್ಲಿ ನಡೆದಿರುವ  ಅಧರ್ಮ, ಅನ್ಯಾಯ,ಅಸತ್ಯ ಭ್ರಷ್ಟಾಚಾರ ದ ಹಿಂದೆ ನಿಂತವರು ಯಾರು? ಎನ್ನುವ ಪ್ರಶ್ನೆಗೆ ಉತ್ತರ ಪ್ರಜೆಗಳೆ ಆಗುತ್ತಾರೆ. ಯಾವಾಗ  ಮಾನವ ಸತ್ಯ ಧರ್ಮದ ವಿರುದ್ದ ನಿಂತು ಅಸುರ ಶಕ್ತಿಗೆ ಸಹಕಾರ ನೀಡಿ ಬೆಳೆಸಿದನೋ ಆಗಲೇ ಭೂಮಿಯನ್ನು ತನ್ನ ವಶದಲ್ಲಿಟ್ಟುಕೊಂಡು ಹೆಣ್ಣು ಹೊನ್ನು ಮಣ್ಣಿಗಾಗಿ ತನ್ನ ಆತ್ಮವಂಚನೆ ಮಾಡಿಕೊಂಡು  ಬದುಕುವುದು ಮಾನವನ ಬುದ್ದಿ. ಈ ಬುದ್ಧಿಯನ್ನು  ಬೇರೆಯವರಿಗೂ ಹಂಚಿಕೊಂಡು ಮಾಡಬಾರದ ಕೆಲಸ ಮಾಡಿ ಈ. ಕಡೆ ಭೂಮಿ ಹಾಳು ಇನ್ನೊಂದು ಕಡೆ  ಮನುಕುಲವೇ ದಾರಿತಪ್ಪಿ ನಡೆಯುವುದು.
ಇದರಿಂದಾಗಿ ದೈವತತ್ವವನರಿತು  ಮಾನವ ಸತ್ಯ ಧರ್ಮಕ್ಕೆ ಸಹಕಾರ ಕೊಟ್ಟರೆ  ಹಿಂದಿರುಗಿ ಬರಲು ಸಾಧ್ಯ. ಹಿಂದಿನ ಧರ್ಮದ ಉದ್ದೇಶ ಜೀವನ್ಮುಕ್ತಿ ಆಗಿದ್ದರೆ  ಭೂಮಿಯ ಋಣ ತೀರಿಸದೆ ಮುಕ್ತಿ ಸಿಗದು. ಎಷ್ಟೇ ಭೂಮಿಯಲ್ಲಿ ಆಸ್ತಿ ಅಂತಸ್ತು ಹೆಸರು ಹಣ ಪದವಿ ಪ್ರಶಸ್ತಿ ಪಡೆದಿದ್ದರೂ ಜೀವ ಇರೋತನಕ ಅಥವಾ ಅಧಿಕಾರ ಹಣವಿರೋತನಕ ಜನ ಹಿಂದೆ ಬರುವರು.ಹೋದ ಮೇಲೇ  ಅರಿವಾಗೋದು.ಕಾರಣ ಜನರಿಗೆ ಸೇರಬೇಕಾದ ಹಣ ಅಧಿಕಾರ ಸ್ಥಾನ ಹೋರಾಟ ಹಾರಾಟ ಮಾರಾಟದಿಂದ. ಪಡೆಯುವುದು ತಾತ್ಕಾಲಿಕ ವಷ್ಟೆ.
ಇದರ ಫಲ ಹಿಂದಿರುಗಿ ಬರುವಾಗ  ಜನರು ಇರೋದಿಲ್ಲ.ಋಣ ಮಾತ್ರ ಇರುತ್ತದೆ. ಹೀಗಾಗಿ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದರು, ತಾಳಿದವನು ಬಾಳಿಯಾನು ಎಂದರು. ಕಾಲೆಳೆದು ಬೀಳಿಸು ಎಂದು ಯಾವ ಮಹಾತ್ಮರು ಹೇಳಿಲ್ಲವಾದರೂ ಇತ್ತೀಚೆಗೆ ಈ ಕೆಲಸ  ಬೇಕಾದಷ್ಟು ನಡೆದಿದೆ ಎಂದರೆ ಅಜ್ಞಾನ ಮಿತಿಮೀರಿದೆ ಎಂದರ್ಥ. ಕಾಲದ ಪ್ರಭಾವದಿಂದಾಗಿ ಮಾನವನೊಳಗೆ  ತನಗೆ ತಿಳಿಯದೆಯೇ  ವಿಷಯಗಳು ತುಂಬಿಹೋಗುತ್ತಿದೆ.ಅದು ಹೊರಗಿನಿಂದ ಹೆಚ್ಚು ಸೇರುತ್ತಿರುವಾಗ ಮನಸ್ಸು ಹೊರಗೇ ನಡೆಯುತ್ತದೆ. ಆಂತರಿಕ ಜ್ಞಾನಶಕ್ತಿ ಕ್ಷೀಣವಾಗುತ್ತಾ ಕಣ್ಣಿಗೆ ಕಂಡದ್ದೇ ಸತ್ಯ ಎನ್ನುವ  ನಂಬಿಕೆಯಲ್ಲಿ ಮುಂದೆ ನಡೆದು ಎಡವಿ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವ ಮಂದಿ ಮೋಸ ಹೋಗುವುದು
ತಪ್ಪಿಸಲಾಗದು. ಮಕ್ಕಳ ಶಿಕ್ಷಣವೇ ಅಸತ್ಯದ ದಾರಿಯಲ್ಲಿ ಇದ್ದರೆ  ಮೂಲವೇ ಸರಿಯಿಲ್ಲದೆ ರೆಂಬೆ ಕೊಂಬೆಗಳನ್ನು  ಕಡಿದರೂ  ಉಪಯೋಗವಿಲ್ಲ. ಈ ಗಲಾಟೆ,ದೊಂಬಿ, ಕಿತ್ತಾಟ,ಹೋರಾಟ,ಹಾರಾಟ,ಮಾರಾಟದಿಂದ. ಏನಾದರೂ ಶಾಂತಿ ಸಿಕ್ಕಿದ್ದರೆ ಅದು ಅಧ್ಯಾತ್ಮ ದಿಂದ ಮಾತ್ರ. ಅಧ್ಯಾತ್ಮ ಎಂದರೆ ತನ್ನ ತಾನರಿತು ನಡೆಯೋದು. ತನ್ನ ಆತ್ಮಸಾಕ್ಷಿಗೆ  ಎಷ್ಟು ಸಾಧ್ಯವೋ ಅಷ್ಟು ಸರಿಯಾಗಿ ನಡೆಯೋ ಪ್ರಯತ್ನ ಮಾನವ‌ಮಾಡಿದರೆ  ಫಲ ಸಿಗುವುದು.ನಿಧಾನವಾಗಿ ಸಿಗುವ ಫಲವಾದ್ದರಿಂದ  ಇಂದಿನ ಸ್ಪರ್ಧಾತ್ಮಕ ರಾಜಕೀಯ ಜಗತ್ತು ಇದನ್ನು ವಿರೋಧಿಸುತ್ತಾ  ನಡೆದಿದೆ. ಇದಕ್ಕೆ ಈ ಭಯೋತ್ಪಾದಕರ  ಮೂಲಕ ಭಗವಂತ ಎಚ್ಚರಿಸುವ ಕೆಲಸ ಮಾಡಿ ಪ್ರಕೃತಿ ವಿಕೋಪ, ಯುದ್ದ ಕಲಹ, ಹೋರಾಟ,ಕೊಲೆ ಸುಲಿಗೆ, ರೋಗಗಳಂತಹ ಲಯ ಕಾರ್ಯ ಹೆಚ್ಚಾಗುತ್ತಿದೆ. ಮಾನವನಿಗೆ ಮಾನವನೇ ವೈರಿ. ಇದನ್ನು ತಪ್ಪಿಸಲು ದೇವರಿಗೂ ಕಷ್ಟ ಅಸುರರಿಗೂ ನಷ್ಟ. ದ್ವೇಷದಿಂದ ದೇಶ ಕಟ್ಟಲಾಗದು.. ಹೀಗಿರುವಾಗ ನಾವೆಲ್ಲರೂ ಎಲ್ಲಿ ಎಡವಿದ್ದೇವೋ ಅಲ್ಲಿಂದ ಎದ್ದು ಹಿಂದಿರುಗಿ ಸರಿದಾರಿ ಹಿಡಿಯಲು ಭಾರತದಲ್ಲಿ ಸ್ವಾತಂತ್ರ್ಯ ವಿದೆ. ಶಿಕ್ಷಣದಲ್ಲಿಯೇ ಬದಲಾವಣೆ ಮಾಡಲು ತಯಾರಿಲ್ಲವೆಂದರೆ ಮನೆ ಮನೆಯೊಳಗೆ ಉತ್ತಮ ಶಿಕ್ಷಣ ಕೊಟ್ಟು ಬೆಳೆಸಲು ಸಹಕಾರ ಇಲ್ಲವೆ? ಇಲ್ಲವಾದರೆ  ನಮ್ಮವರೆ ನಮಗೆ ಶತ್ರುಗಳಷ್ಟೆ.ಈ ಹೋರಾಟದಿಂದ. ಏನಾದರೂ ಶಾಂತಿ ಸಮಾಧಾನವಿದ್ದರೆ ಸರಿ ಇಲ್ಲವಾದರೆ  ನಾವೇ ಪ್ರಶ್ನೆ ಹಾಕಿಕೊಂಡಿರಬೇಕಷ್ಟೆ.
 ಮಾನವರ ಗಲಾಟೆ ಕೇಳಲು ಮಾನವರಿಗಷ್ಟೆ ಸಾಧ್ಯ. ಒಮ್ಮೆ ಬ್ರಹ್ಮ ಎಲ್ಲಿಗೋ ಹೊರಟಾಗ ಭೂ‌ಲೋಕದ ಜನರ ಗಲಾಟೆ ಕೇಳಿ ಏನಾಯಿತೆಂದು ಕೇಳಿದನಂತೆ ಲಂಕೆಯಲ್ಲಿ ರಾವಣ ಹುಟ್ಟಿದ್ದಾನೆಂದಾಗ ಸರಿ ಎಂದು ಮುಂದೆ ನಡೆದು ತಿರುಗಿ ಎಷ್ಟೋ ವರ್ಷದ ನಂತರ ಬಂದಾಗಲೂ ಗಲಾಟೆ ನಡೆದಿತ್ತಂತೆ ಮತ್ತೆ ಕೇಳಿದಾಗ ರಾಮ ರಾವಣನನ್ನು ಕೊಂದನಂತೆ  ಎಂದರಂತೆ.ಅಂದರೆ  ನಮ್ಮ ಒಂದು ಸಾವಿರ ವರ್ಷ  ಬ್ರಹ್ಮನಿಗೆ ಒಂದು  ದಿನ ಆಗಿರಬಹುದು ಆದರೆ ನಮಗೆ ಪ್ರತಿಕ್ಷಣ ಅತ್ಯಂತ  ಪವಿತ್ರ. ಕಳೆದು ಹೋದ ಕ್ಷಣ ತಿರುಗಿ ಬರೋದಿಲ್ಲವಲ್ಲ. ಕ್ಷಣಕ್ಷಣವೂ  ಕಣ್ಣುಮುಚ್ಚಾಲೆ ಆಟವಾಡುತ್ತಾ ಸ್ವಾರ್ಥ ಅಹಂಕಾರ  ಹಿಂಸೆಗಳನ್ನು ಗೆದ್ದು ಸಮಾಜದಲ್ಲಿ ಸುಖ ಶಾಂತಿ ನೆಮ್ಮದಿಯ ಜೀವನ ‌ನಡೆಸೋದೆಂದರೆ ಸುಲಭವಿಲ್ಲ.ಇದಕ್ಕೆ ಬೇಕು ಬ್ರಹ್ಮ ಜ್ಞಾನ.  ಸೃಷ್ಟಿ ಯಂತೆ ಸ್ಥಿತಿ ಲಯಗಳು ನಿರಂತರವಾಗಿ ನಡೆಯುತ್ತಿದೆ. ಯಾರೂ ಇಲ್ಲಿ  ಉತ್ತಮ  ಸೃಷ್ಟಿ ಮಾಡಿ ಅಧಮ ಲಯ ಕಂಡಿಲ್ಲವಾದರೂ ನಮ್ಮ ದೃಷ್ಟಿಕೋನದ ಬದಲಾವಣೆಗೆ  ಈ ಸತ್ಯದ ಅರಿವಾಗದಿರೋದು  ಮಾಯೆಯ  ಮುಷ್ಟಿಯಲ್ಲಿ ಮಾನವನಿರೋದರಿಂದ. ಈ ಮಾಯಾಲೋಕದಲ್ಲಿ  ಗೆದ್ದವರು ಯಾರು ಸೋತವರು ಯಾರು? ಗೆದ್ದವನು ಸೋಲಬಹುದು.ಸೋತವನು  ಗೆಲ್ಲಬಹುದು. ದೃಷ್ಟಿಕೋನ  ಬದಲಾಗೋದು‌ ಅಗತ್ಯವಿದೆ.
ಕಾಂಗ್ರೆಸ್ ಬಿಜೆಪಿ ಪಕ್ಷಗಳಂತೆ ಒಂದು ಪಕ್ಷ ಇನ್ನೊಂದು ಪಕ್ಷದ ಲೋಪಧೋಷಗಳನ್ನೇ  ಹರಡಿಕೊಂಡಿದ್ದರೆ ಒಳ್ಳೆಯದು ಬೆಳಕಿಗೆ ಕಾಣದೆ ಕೆಟ್ಟದ್ದೇ ಬೆಳೆಯುತ್ತದೆ.ಆದರೂ ಇಬ್ಬರೂ ದೇಶವಾಳೋದಕ್ಕೆ  ಇಷ್ಟು ವರ್ಷ ಸಹಕಾರ‌ ನೀಡಿದವರು  ಸಾಮಾನ್ಯ ಪ್ರಜೆಗಳೆ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದರೆ  ಸಹಕಾರವೇ ಕಾರಣ. ಇದರಿಂದಾಗಿ ಸಮಸ್ಯೆ ಎದುರಿಸಬೇಕಾಗಿರೋದು ರಾಜಕಾರಣಿಗಳೆ? ಪ್ರಜೆಗಳೆ?
ಮಾಡಿದ್ದುಣ್ಣೋ ಮಹಾರಾಯ ಎಂದಂತೆ ಒಬ್ಬರು ಹೊರಗಿನಿಂದ ಸಾಲ ತಂದು  ಮನೆ ಹಾಗು ದೇಶ ನಡೆಸಲು ತಯಾರಿ ಮಾಡಿಕೊಂಡರೆ ಒಳಗಿನವರು ಸಾಲ ಪಡೆದು ಹೊರಗೆ  ಹೋಗಿ ದುಡಿದರೂ  ತೀರದೆ ಬೆಳೆಯುತ್ತಿದೆ.ಇದಕ್ಕೆ ಮತ್ತಷ್ಟು ಉಚಿತ ಕೊಡುಗೆಗಳಮೂಲಕ ಜನರಲ್ಲಿ ಅಜ್ಞಾನ ಹೆಚ್ಚಿಸಿಕೊಂಡು  ರಾಜಕೀಯ ನಡೆಸಿದರೆ  ಯಾರೂ ಇಲ್ಲಿ ಶಾಶ್ವತವಾಗಿರೋದಿಲ್ಲ . ಶ್ರೀ  ರಾಮಚಂದ್ರ ಶ್ರೀ ಕೃಷ್ಣ ನಂತಹ  ಮಹಾದೇವಾನುದೇವತೆಗಳಿಗೇ   ಈ ಭೂಮಿಯಲ್ಲಿಕೋಪ ತಾಪ  ಸಂಕಷ್ಟ   ಆಪಾದನೆ  ತಪ್ಪಲಿಲ್ಲವೆಂದರೆ
‌ಹುಲುಮಾನವ  
ತನ್ನ ಕರ್ಮಕ್ಕೆ ತಕ್ಕಂತೆ ಫಲ ಅನುಭವಿಸಿಯೇ ತೀರಬೇಕು ಎನ್ನುವ ಅಧ್ಯಾತ್ಮ ಸತ್ಯವನ್ನು ಎಷ್ಟೇ ತಿರುಚಿದರೂ ಸತ್ಯಕ್ಕೆ ಸಾವಿಲ್ಲ. ತಿರುಚಿದವರಿಗಿದೆ. ತಿರುಗಿ ಬಂದಾಗ  ಸತ್ಯಕ್ಕೆ ಬೆಲೆ ಕೊಡಲೇಬೇಕಾದಾಗ ಈ ಜನ್ಮದಲ್ಲಿಯೇ ತಿರುಗಿ ನಡೆಯುವುದು ಒಳ್ಳೆಯದಲ್ಲವೆ?  ಮನಸ್ಸು ಅಷ್ಟು ಸುಲಭವಾಗಿ ಒಪ್ಪದ ಕಾರಣ  ಮಾನವ ಮರುಳಾಗೋದು  ಒಪ್ಪಂದಕ್ಕೆ. ಆ ಒಪ್ಪಂದ ನಮ್ಮವರೊಂದಿಗೆ ಮಾಡಿಕೊಳ್ಳದೆ ಪರಕೀಯರೊಂದಿಗೆ ಮಾಡಿಕೊಂಡರೆ ಪರಮಾತ್ಮನೂ ಒಪ್ಪೋದಿಲ್ಲ.  ಇಬ್ಬರ ಜಗಳದಲ್ಲಿ ‌ಮೂರನೆಯವರಿಗೆ ಲಾಭ.ಲಾಭ ನಷ್ಟ  ಒಂದೇ ನಾಣ್ಯದ ಎರಡು ಮುಖವಷ್ಟೆ. ವ್ಯವಹಾರಿಕ ಜೀವನದಲ್ಲಿ ಧರ್ಮ ಸತ್ಯ ಹಿಂದುಳಿಸಿ ಹಿಂದೂ ಹಿಂದಿನಿಂದಲೂ  ಒಂದಾಗಿ ಬಾಳಲು ಕಷ್ಟಪಡಬೇಕಾಗಿದೆ. 
ಆದರೆ ಇದು  ಮಾನವನೊಳಗೇ ಇದ್ದರೂ ಒಳಹೊಕ್ಕಿ ಹುಡುಕಿಕೊಳ್ಳಲು  ಸೋತರೆ  ರಾವಣನೂ ಇರುವನು ಹಾಗೇ ರಾಮನೂ ಇರುವನು. ರಾವಣನಿಗೆ ಹೆಚ್ಚು ಸಹಕಾರ ಕೊಟ್ಟರೆ ರಾಮನ ನಡಿಗೆ ನಿಧಾನವಾದರೂ  ಗೆಲುವು ರಾಮನಿಗೇ.
ಹೀಗಾಗಿ ಅಧ್ಯಾತ್ಮ ‌ವಿಜ್ಞಾನ ನಿಧಾನವಾಗಿಯಾದರೂ ಬ್ರಹ್ಮನ ಅರಿವಿನೆಡೆಗೆ ನಡೆಸುತ್ತದೆ. ಆದರೆ, ವೈಜ್ಞಾನಿಕ ಜ್ಞಾನ ಬ್ರಹ್ಮಾಂಡದ ರಹಸ್ಯವರಿಯದೆ ಹೊರಗೇ ಸುತ್ತಿ ಸುಸ್ತಾಗುತ್ತದೆ. ಹೊರಗಿನ ಹೋರಾಟ,ಹಾರಾಟ ಮಾರಾಟದಲ್ಲಿ ಶಾಂತಿ ನೆಲೆಸಿರಬೇಕಾದರೆ  ಅಲ್ಲಿ ಸತ್ಯದ ಜೊತೆಗೆ ಧರ್ಮ ಸರಿಸಮನಾಗಿರಬೇಕು.ಸತ್ಯ ಕಾಣೋದಿಲ್ಲ ಧರ್ಮ  ಉಳಿಯೋದಿಲ್ಲವಾದಾಗಲೇ ಅಸುರ ಶಕ್ತಿ ಹೆಚ್ಚುವುದು. ದೇವಾಸುರರ ನಡುವಿನ ಮಾನವನಿಗೆ ಒಳಗೇ ಇರುವ ಸ್ವಶಕ್ತಿಯ ಪರಿಚಯವು ಅಧ್ಯಾತ್ಮದ ಮೂಲಕ ಅರ್ಥ ಆಗೋದು  ಆತ್ಮಜ್ಞಾನದಿಂದ ,ಬೌತಿಕದ ವಿಜ್ಞಾನ ಆಗ ಸರಿಯಾಗಿ ತಿಳಿಯಬಹುದು. ಎರಡರ ಸಮಾನತೆಯೇ  ನಿಜವಾದ ಜ್ಞಾನ.ಸಂಸಾರ ಸಮಾಜದೊಳಗಿದೆ ಸಮಾಜ ದೇಶದೊಳಗಿದೆ,ದೇಶ ವಿಶ್ವದೊಳಗಿದೆ,ವಿಶ್ವ ಪರಮಾತ್ಮನ ಒಳಗಿದೆ ಅಂದರೆ ಪರಮಾತ್ಮನ ಕಾಣೋದಕ್ಕೆ ವಿಶ್ವ ದರ್ಶನ
ಯೋಗದಿಂದ  ಸಾಧ್ಯವೇ ಹೊರತು  ವಿಶ್ವ ಪರ್ಯಟನೆ ಯಿಂದ. ಯಾರಿಗೂ ಉಪಯೋಗವಿಲ್ಲ.  ಸಾಧನೆ ಆಂತರಿಕ ವಾಗಿದ್ದರೆ ಶಾಂತಿ ತೃಪ್ತಿ ಮುಕ್ತಿ.  ಕಲಿಗಾಲದಲ್ಲಿ ಕಷ್ಟವಿದೆ  ಎಂದರೆ ಮನಸ್ಸನ್ನು ಹಿಡಿದುಕೊಂಡು ಸತ್ಯಾನ್ವೇಷಣೆ ಕಷ್ಟವಿದೆ. ಸತ್ಯ ತಿಳಿದ ಮೇಲೇ ಅಧ್ಯಾತ್ಮ ಸಂಶೋಧನೆ. ಇದೀಗ ಶಿಕ್ಷಣದಲ್ಲಿಯೇ ಹಿಂದುಳಿದಿರೋದೆ ಭಾರತಕ್ಕೆ ನುಂಗಲಾರದ ತುತ್ತಾಗುತ್ತಿದೆ. ವಿನಾಶಕಾಲೇ ವಿಪರೀತ ಬುದ್ದಿ .ಬುದ್ದಿವಂತಿಕೆ ಜ್ಞಾನವನ್ನು ನುಂಗಿ ನೀರುಕುಡಿಯುತ್ತಿದೆ.
ಹೆಣ್ಣು ಹೊನ್ನು ಮಣ್ಣಿಲ್ಲದೆ ಭೂಮಿಯಲ್ಲಿ ಜೀವನವೇ ಇಲ್ಲ.ಜೀವನ ಎಂದರೆ ಜೀವಿಗಳ ವನ. ಎಲ್ಲಾ ಜೀವ ಜಂತುಗಳ ಸೃಷ್ಟಿಗೆ  ಭೂಮಿಯೇ ಆಧಾರ. ಆ ಆಧಾರವನ್ನು ಸರಿಯಾಗಿ ತಿಳಿಯುವುದೇ  ಜೀವನದ ಗುರಿ. ಭೂಮಿಯಲ್ಲಿ ಜನ್ಮ ಪಡೆಯಬಾರದೆನ್ನುವ‌  ಮಹಾತ್ಮರೆ ಮತ್ತೆ ಮತ್ತೆ ಜನ್ಮ ಪಡೆದಿರೋದಕ್ಕೆ ಕಾರಣ ಇಲ್ಲಿ ಧರ್ಮ ಸ್ಥಾಪನೆ ಮಾಡಿ ‌ ಅಧರ್ಮದಿಂದ  ಮನುಕುಲವನ್ನು  ದೂರಮಾಡಿ ಭೂ ರಕ್ಷಣೆ ಮಾಡೋದಾಗಿತ್ತು. ಯುಗಯುಗದಿಂದಲೂ  ಈ ಕಾರ್ಯ ನಡೆದಿದೆ ನಡೆಯುತ್ತಿದೆ ನಡೆಯುತ್ತದೆ.ಆದರೆ ಇದನ್ನು  ನಾನು ಮಾತ್ರ  ಮಾಡುವೆನೆಂಬ ಅಹಂಕಾರ ದಲ್ಲಿ  ತನ್ನ ತಪ್ಪು ತಿಳಿಯದೆ  ಮುಂದೆ ನಡೆದವರು  ಸೃಷ್ಟಿ ಗೆ ವಿರುದ್ದ ನಡೆದು ಸ್ಥಿತಿಯನ್ನು  ಹಾಳುಮಾಡುತ್ತಾ ದೊಡ್ಡ ಲಯದ ವಿನಾಶಕ್ಕೆ ಕಾರಣವಾಗಿದ್ದಾರೆ. ಅಂತವರನ್ನೇ  ಆಧಾರವಾಗಿಟ್ಟುಕೊಂಡು
ಪ್ರಚಾರ ನಡೆಸೋರೊಮ್ಮೆ  ಅಧ್ಯಾತ್ಮ ದ ಸತ್ಯದೆಡೆಗೆ ಕಣ್ಣು ಹಾಯಿಸಿದರೆ  ಸಾವು ಎಲ್ಲರಿಗೂ ಒಂದು ದಿನ ಬರೋದೆ ಆದರೂ ಸತ್ತಂತೆ ಬದುಕೋದರಿಂದ ಎಲ್ಲರನ್ನೂ ಸಾಯಿಸಿದ
ಪಾಪಕಾರ್ಯ ವಾಗುವುದು.ಅಂದರೆ ಸತ್ಯಕ್ಕೆ ಸಾವಿಲ್ಲ ನಿಜ ಸತ್ಯವನ್ನು ಬಿಟ್ಟು  ಅಸತ್ಯವನ್ನು ಜೀವಂತವಾಗಿಸಿದರೆ  ಇದ್ದೂ ಸತ್ತಂತೆ  ಇದರಿಂದಾಗಿ  ಜನರಲ್ಲಿ ಅಸತ್ಯ ಹೆಚ್ಚಾಗುತ್ತಾ ತನ್ನ ಆತ್ಮವಂಚನೆಯಲ್ಲಿಯೇ ಜೀವನ‌ನಡೆಸೋ ಪರಿಸ್ಥಿತಿ ಬಂದರೆ ಭೂಮಿಯಲ್ಲಿ  ಅಸುರಶಕ್ತಿಯೇ ಹೆಚ್ಚಾಗುವುದು. ಒಟ್ಟಿನಲ್ಲಿ ಸತ್ಯ ಒಂದೇ ಅದೇ ನಮ್ಮ ಆತ್ಮ ಸಾಕ್ಷಿಯಾಗಿತ್ತು.ಯಾವಾಗ ಅಸತ್ಯವನ್ನು ಸತ್ಯವೆಂದು  ನಂಬಿಸಿ ರಾಜಕೀಯದೆಡೆಗೆ  ಹೆಚ್ಚು  ಮನಸ್ಸು ಓಡಿತೋ ಆಗಲೇ ಸತ್ಯ ಹಿಂದುಳಿಯುತ್ತಾ ಮೂಲೆ ಸೇರಿದೆ. ಅಧರ್ಮ ವೂ ಅಸತ್ಯದೊಂದಿಗೆ ಕುಣಿದು ಕುಪ್ಪಳಿಸಿ ಮೆರೆದಾಡುತ್ತಿದ್ದರೆ ಕಣ್ಣಿಗೆ ಮನರಂಜನೆ ಆತ್ಮಕ್ಕೆ ವಂಚನೆ. ಯಾರನ್ನೂ ಮೆಚ್ಚಿಸಲಾಗದು. ಹೀಗಿರುವಾಗ ನಮ್ಮ ಆತ್ಮವಿಶ್ವಾಸ ಕ್ಕೆ ದಕ್ಕೆಯಾಗುವಂತಹ ಸಮಾಜ ಘಾತಕ ವಿಷಯಗಳಿಂದ  ಏನಾದರೂ ಸಾಧನೆ ಮಾಡುವುದರಲ್ಲಿ ಅರ್ಥ ವಿದೆಯೆ? ಮನರಂಜನೆಯಿರಲಿ ಆತ್ಮವಂಚನೆ ಆಗದಿರಲಿ.ಎಲ್ಲರಿಗೂ ಮನಸ್ಸಿಗೆ ಶಾಂತಿ ಸಮಾಧಾನ,ತೃಪ್ತಿ  ಸಿಗೋದಿಲ್ಲವೆಂದರೆ ಇದು ಹಣದಿಂದ ಪಡೆಯೋ ವಸ್ತುವಲ್ಲ. ಜ್ಞಾನದಿಂದ  ಪಡೆಯುವ ಶಕ್ತಿಯಾಗಿದೆ. ಎಲ್ಲರಲ್ಲಿಯೂ ಅಡಗಿರುವ. ಆ ಪರಮ ಶಕ್ತಿಯ ಸದ್ಬಳಕೆಯಾದರೆ ಆತ್ಮತೃಪ್ತಿ.
ಇದಕ್ಕೆ ಹೊರಗಿನಿಂದ ಸಾಲ ಮಾಡಿಕೊಂಡು  ಹೊರಗಿನ ರಾಜಕೀಯಕ್ಕೆ ಅಂಟಿಕೊಂಡಿದ್ದರೆ ಒಳಗಿನ ಸಾಲ ಬೆಳೆದು  ಪರಮಸತ್ಯದಿಂದ ದೂರವಾಗುತ್ತಾ ಜೀವ ಹೋಗುತ್ತದೆ. ಇದನ್ನು ಸರ್ಕಾರವಾಗಲಿ  ಪೋಷಕರಾಗಲಿ ಸಮಾಜವಾಗಲಿ ತಡೆಯಲಾಗದು.