ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, August 4, 2023

ಹಿಂದೂ ಒಂದಾಗೋದು ಕಷ್ಟವೇಕೆ?

 ಹಿಂದಿನಿಂದಲೂ‌  ನಡೆದು  ಬಂದಿರುವ  ಈ ಮನುಕುಲದ   
ಸಮಸ್ಯೆಗೆ ಕಾರಣವೇ  ಒಗ್ಗಟ್ಟಿನ ಅಭಾವ. ಹಾಗಂತ ಎಲ್ಲಾ ಸರಿ ಎನ್ನುವ   ಹಾಗಿಲ್ಲ.ಎಲ್ಲಾ ಮಾನವರೆಂದರೂ ಎಲ್ಲರಲ್ಲೂ ಮಾನವೀಯತೆಯಿಲ್ಲ.ಹಾಗೆ ದೇವರು ಅಸುರರ ನಡುವಿನ  ಭಿನ್ನಾಭಿಪ್ರಾಯ ದಲ್ಲಿ ದೈವತ್ವವಿದ್ದರೆ ದೇವರು ಅಸುರಿ ಗುಣ ಹೆಚ್ಚಾದರೆ ಅಸುರರಾಗುವರು. ಇಲ್ಲಿ ದೇವಾನುದೇವತೆಗಳು ಭೂಮಿಗೆ ಬಂದು ತಮ್ಮ  ಕಾರ್ಯ ನಡೆಸಿದ್ದರೂ ಈಗ ನಮಗೆ ದೇವರು ಕಾಣಿಸುತ್ತಿಲ್ಲ. ಯಾರು ಕೇಳಿದ್ದನ್ನು ಕೊಡುವರೋ ಅವರು ದೇವರಾಗುವರು. ಹಾಗಾದರೆ ಸರ್ಕಾರ ಕೇಳಿದ್ದು ಕೊಟ್ಟರೆ ರಾಜಕಾರಣಿಗಳು ದೇವರಾಗುವರೆ? ಪ್ರಜಾಪ್ರಭುತ್ವದ ದೇಶದಲ್ಲಿ ನಡೆದಿರುವ  ಅಧರ್ಮ, ಅನ್ಯಾಯ,ಅಸತ್ಯ ಭ್ರಷ್ಟಾಚಾರ ದ ಹಿಂದೆ ನಿಂತವರು ಯಾರು? ಎನ್ನುವ ಪ್ರಶ್ನೆಗೆ ಉತ್ತರ ಪ್ರಜೆಗಳೆ ಆಗುತ್ತಾರೆ. ಯಾವಾಗ  ಮಾನವ ಸತ್ಯ ಧರ್ಮದ ವಿರುದ್ದ ನಿಂತು ಅಸುರ ಶಕ್ತಿಗೆ ಸಹಕಾರ ನೀಡಿ ಬೆಳೆಸಿದನೋ ಆಗಲೇ ಭೂಮಿಯನ್ನು ತನ್ನ ವಶದಲ್ಲಿಟ್ಟುಕೊಂಡು ಹೆಣ್ಣು ಹೊನ್ನು ಮಣ್ಣಿಗಾಗಿ ತನ್ನ ಆತ್ಮವಂಚನೆ ಮಾಡಿಕೊಂಡು  ಬದುಕುವುದು ಮಾನವನ ಬುದ್ದಿ. ಈ ಬುದ್ಧಿಯನ್ನು  ಬೇರೆಯವರಿಗೂ ಹಂಚಿಕೊಂಡು ಮಾಡಬಾರದ ಕೆಲಸ ಮಾಡಿ ಈ. ಕಡೆ ಭೂಮಿ ಹಾಳು ಇನ್ನೊಂದು ಕಡೆ  ಮನುಕುಲವೇ ದಾರಿತಪ್ಪಿ ನಡೆಯುವುದು.
ಇದರಿಂದಾಗಿ ದೈವತತ್ವವನರಿತು  ಮಾನವ ಸತ್ಯ ಧರ್ಮಕ್ಕೆ ಸಹಕಾರ ಕೊಟ್ಟರೆ  ಹಿಂದಿರುಗಿ ಬರಲು ಸಾಧ್ಯ. ಹಿಂದಿನ ಧರ್ಮದ ಉದ್ದೇಶ ಜೀವನ್ಮುಕ್ತಿ ಆಗಿದ್ದರೆ  ಭೂಮಿಯ ಋಣ ತೀರಿಸದೆ ಮುಕ್ತಿ ಸಿಗದು. ಎಷ್ಟೇ ಭೂಮಿಯಲ್ಲಿ ಆಸ್ತಿ ಅಂತಸ್ತು ಹೆಸರು ಹಣ ಪದವಿ ಪ್ರಶಸ್ತಿ ಪಡೆದಿದ್ದರೂ ಜೀವ ಇರೋತನಕ ಅಥವಾ ಅಧಿಕಾರ ಹಣವಿರೋತನಕ ಜನ ಹಿಂದೆ ಬರುವರು.ಹೋದ ಮೇಲೇ  ಅರಿವಾಗೋದು.ಕಾರಣ ಜನರಿಗೆ ಸೇರಬೇಕಾದ ಹಣ ಅಧಿಕಾರ ಸ್ಥಾನ ಹೋರಾಟ ಹಾರಾಟ ಮಾರಾಟದಿಂದ. ಪಡೆಯುವುದು ತಾತ್ಕಾಲಿಕ ವಷ್ಟೆ.
ಇದರ ಫಲ ಹಿಂದಿರುಗಿ ಬರುವಾಗ  ಜನರು ಇರೋದಿಲ್ಲ.ಋಣ ಮಾತ್ರ ಇರುತ್ತದೆ. ಹೀಗಾಗಿ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದರು, ತಾಳಿದವನು ಬಾಳಿಯಾನು ಎಂದರು. ಕಾಲೆಳೆದು ಬೀಳಿಸು ಎಂದು ಯಾವ ಮಹಾತ್ಮರು ಹೇಳಿಲ್ಲವಾದರೂ ಇತ್ತೀಚೆಗೆ ಈ ಕೆಲಸ  ಬೇಕಾದಷ್ಟು ನಡೆದಿದೆ ಎಂದರೆ ಅಜ್ಞಾನ ಮಿತಿಮೀರಿದೆ ಎಂದರ್ಥ. ಕಾಲದ ಪ್ರಭಾವದಿಂದಾಗಿ ಮಾನವನೊಳಗೆ  ತನಗೆ ತಿಳಿಯದೆಯೇ  ವಿಷಯಗಳು ತುಂಬಿಹೋಗುತ್ತಿದೆ.ಅದು ಹೊರಗಿನಿಂದ ಹೆಚ್ಚು ಸೇರುತ್ತಿರುವಾಗ ಮನಸ್ಸು ಹೊರಗೇ ನಡೆಯುತ್ತದೆ. ಆಂತರಿಕ ಜ್ಞಾನಶಕ್ತಿ ಕ್ಷೀಣವಾಗುತ್ತಾ ಕಣ್ಣಿಗೆ ಕಂಡದ್ದೇ ಸತ್ಯ ಎನ್ನುವ  ನಂಬಿಕೆಯಲ್ಲಿ ಮುಂದೆ ನಡೆದು ಎಡವಿ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವ ಮಂದಿ ಮೋಸ ಹೋಗುವುದು
ತಪ್ಪಿಸಲಾಗದು. ಮಕ್ಕಳ ಶಿಕ್ಷಣವೇ ಅಸತ್ಯದ ದಾರಿಯಲ್ಲಿ ಇದ್ದರೆ  ಮೂಲವೇ ಸರಿಯಿಲ್ಲದೆ ರೆಂಬೆ ಕೊಂಬೆಗಳನ್ನು  ಕಡಿದರೂ  ಉಪಯೋಗವಿಲ್ಲ. ಈ ಗಲಾಟೆ,ದೊಂಬಿ, ಕಿತ್ತಾಟ,ಹೋರಾಟ,ಹಾರಾಟ,ಮಾರಾಟದಿಂದ. ಏನಾದರೂ ಶಾಂತಿ ಸಿಕ್ಕಿದ್ದರೆ ಅದು ಅಧ್ಯಾತ್ಮ ದಿಂದ ಮಾತ್ರ. ಅಧ್ಯಾತ್ಮ ಎಂದರೆ ತನ್ನ ತಾನರಿತು ನಡೆಯೋದು. ತನ್ನ ಆತ್ಮಸಾಕ್ಷಿಗೆ  ಎಷ್ಟು ಸಾಧ್ಯವೋ ಅಷ್ಟು ಸರಿಯಾಗಿ ನಡೆಯೋ ಪ್ರಯತ್ನ ಮಾನವ‌ಮಾಡಿದರೆ  ಫಲ ಸಿಗುವುದು.ನಿಧಾನವಾಗಿ ಸಿಗುವ ಫಲವಾದ್ದರಿಂದ  ಇಂದಿನ ಸ್ಪರ್ಧಾತ್ಮಕ ರಾಜಕೀಯ ಜಗತ್ತು ಇದನ್ನು ವಿರೋಧಿಸುತ್ತಾ  ನಡೆದಿದೆ. ಇದಕ್ಕೆ ಈ ಭಯೋತ್ಪಾದಕರ  ಮೂಲಕ ಭಗವಂತ ಎಚ್ಚರಿಸುವ ಕೆಲಸ ಮಾಡಿ ಪ್ರಕೃತಿ ವಿಕೋಪ, ಯುದ್ದ ಕಲಹ, ಹೋರಾಟ,ಕೊಲೆ ಸುಲಿಗೆ, ರೋಗಗಳಂತಹ ಲಯ ಕಾರ್ಯ ಹೆಚ್ಚಾಗುತ್ತಿದೆ. ಮಾನವನಿಗೆ ಮಾನವನೇ ವೈರಿ. ಇದನ್ನು ತಪ್ಪಿಸಲು ದೇವರಿಗೂ ಕಷ್ಟ ಅಸುರರಿಗೂ ನಷ್ಟ. ದ್ವೇಷದಿಂದ ದೇಶ ಕಟ್ಟಲಾಗದು.. ಹೀಗಿರುವಾಗ ನಾವೆಲ್ಲರೂ ಎಲ್ಲಿ ಎಡವಿದ್ದೇವೋ ಅಲ್ಲಿಂದ ಎದ್ದು ಹಿಂದಿರುಗಿ ಸರಿದಾರಿ ಹಿಡಿಯಲು ಭಾರತದಲ್ಲಿ ಸ್ವಾತಂತ್ರ್ಯ ವಿದೆ. ಶಿಕ್ಷಣದಲ್ಲಿಯೇ ಬದಲಾವಣೆ ಮಾಡಲು ತಯಾರಿಲ್ಲವೆಂದರೆ ಮನೆ ಮನೆಯೊಳಗೆ ಉತ್ತಮ ಶಿಕ್ಷಣ ಕೊಟ್ಟು ಬೆಳೆಸಲು ಸಹಕಾರ ಇಲ್ಲವೆ? ಇಲ್ಲವಾದರೆ  ನಮ್ಮವರೆ ನಮಗೆ ಶತ್ರುಗಳಷ್ಟೆ.ಈ ಹೋರಾಟದಿಂದ. ಏನಾದರೂ ಶಾಂತಿ ಸಮಾಧಾನವಿದ್ದರೆ ಸರಿ ಇಲ್ಲವಾದರೆ  ನಾವೇ ಪ್ರಶ್ನೆ ಹಾಕಿಕೊಂಡಿರಬೇಕಷ್ಟೆ.
 ಮಾನವರ ಗಲಾಟೆ ಕೇಳಲು ಮಾನವರಿಗಷ್ಟೆ ಸಾಧ್ಯ. ಒಮ್ಮೆ ಬ್ರಹ್ಮ ಎಲ್ಲಿಗೋ ಹೊರಟಾಗ ಭೂ‌ಲೋಕದ ಜನರ ಗಲಾಟೆ ಕೇಳಿ ಏನಾಯಿತೆಂದು ಕೇಳಿದನಂತೆ ಲಂಕೆಯಲ್ಲಿ ರಾವಣ ಹುಟ್ಟಿದ್ದಾನೆಂದಾಗ ಸರಿ ಎಂದು ಮುಂದೆ ನಡೆದು ತಿರುಗಿ ಎಷ್ಟೋ ವರ್ಷದ ನಂತರ ಬಂದಾಗಲೂ ಗಲಾಟೆ ನಡೆದಿತ್ತಂತೆ ಮತ್ತೆ ಕೇಳಿದಾಗ ರಾಮ ರಾವಣನನ್ನು ಕೊಂದನಂತೆ  ಎಂದರಂತೆ.ಅಂದರೆ  ನಮ್ಮ ಒಂದು ಸಾವಿರ ವರ್ಷ  ಬ್ರಹ್ಮನಿಗೆ ಒಂದು  ದಿನ ಆಗಿರಬಹುದು ಆದರೆ ನಮಗೆ ಪ್ರತಿಕ್ಷಣ ಅತ್ಯಂತ  ಪವಿತ್ರ. ಕಳೆದು ಹೋದ ಕ್ಷಣ ತಿರುಗಿ ಬರೋದಿಲ್ಲವಲ್ಲ. ಕ್ಷಣಕ್ಷಣವೂ  ಕಣ್ಣುಮುಚ್ಚಾಲೆ ಆಟವಾಡುತ್ತಾ ಸ್ವಾರ್ಥ ಅಹಂಕಾರ  ಹಿಂಸೆಗಳನ್ನು ಗೆದ್ದು ಸಮಾಜದಲ್ಲಿ ಸುಖ ಶಾಂತಿ ನೆಮ್ಮದಿಯ ಜೀವನ ‌ನಡೆಸೋದೆಂದರೆ ಸುಲಭವಿಲ್ಲ.ಇದಕ್ಕೆ ಬೇಕು ಬ್ರಹ್ಮ ಜ್ಞಾನ.  ಸೃಷ್ಟಿ ಯಂತೆ ಸ್ಥಿತಿ ಲಯಗಳು ನಿರಂತರವಾಗಿ ನಡೆಯುತ್ತಿದೆ. ಯಾರೂ ಇಲ್ಲಿ  ಉತ್ತಮ  ಸೃಷ್ಟಿ ಮಾಡಿ ಅಧಮ ಲಯ ಕಂಡಿಲ್ಲವಾದರೂ ನಮ್ಮ ದೃಷ್ಟಿಕೋನದ ಬದಲಾವಣೆಗೆ  ಈ ಸತ್ಯದ ಅರಿವಾಗದಿರೋದು  ಮಾಯೆಯ  ಮುಷ್ಟಿಯಲ್ಲಿ ಮಾನವನಿರೋದರಿಂದ. ಈ ಮಾಯಾಲೋಕದಲ್ಲಿ  ಗೆದ್ದವರು ಯಾರು ಸೋತವರು ಯಾರು? ಗೆದ್ದವನು ಸೋಲಬಹುದು.ಸೋತವನು  ಗೆಲ್ಲಬಹುದು. ದೃಷ್ಟಿಕೋನ  ಬದಲಾಗೋದು‌ ಅಗತ್ಯವಿದೆ.
ಕಾಂಗ್ರೆಸ್ ಬಿಜೆಪಿ ಪಕ್ಷಗಳಂತೆ ಒಂದು ಪಕ್ಷ ಇನ್ನೊಂದು ಪಕ್ಷದ ಲೋಪಧೋಷಗಳನ್ನೇ  ಹರಡಿಕೊಂಡಿದ್ದರೆ ಒಳ್ಳೆಯದು ಬೆಳಕಿಗೆ ಕಾಣದೆ ಕೆಟ್ಟದ್ದೇ ಬೆಳೆಯುತ್ತದೆ.ಆದರೂ ಇಬ್ಬರೂ ದೇಶವಾಳೋದಕ್ಕೆ  ಇಷ್ಟು ವರ್ಷ ಸಹಕಾರ‌ ನೀಡಿದವರು  ಸಾಮಾನ್ಯ ಪ್ರಜೆಗಳೆ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದರೆ  ಸಹಕಾರವೇ ಕಾರಣ. ಇದರಿಂದಾಗಿ ಸಮಸ್ಯೆ ಎದುರಿಸಬೇಕಾಗಿರೋದು ರಾಜಕಾರಣಿಗಳೆ? ಪ್ರಜೆಗಳೆ?
ಮಾಡಿದ್ದುಣ್ಣೋ ಮಹಾರಾಯ ಎಂದಂತೆ ಒಬ್ಬರು ಹೊರಗಿನಿಂದ ಸಾಲ ತಂದು  ಮನೆ ಹಾಗು ದೇಶ ನಡೆಸಲು ತಯಾರಿ ಮಾಡಿಕೊಂಡರೆ ಒಳಗಿನವರು ಸಾಲ ಪಡೆದು ಹೊರಗೆ  ಹೋಗಿ ದುಡಿದರೂ  ತೀರದೆ ಬೆಳೆಯುತ್ತಿದೆ.ಇದಕ್ಕೆ ಮತ್ತಷ್ಟು ಉಚಿತ ಕೊಡುಗೆಗಳಮೂಲಕ ಜನರಲ್ಲಿ ಅಜ್ಞಾನ ಹೆಚ್ಚಿಸಿಕೊಂಡು  ರಾಜಕೀಯ ನಡೆಸಿದರೆ  ಯಾರೂ ಇಲ್ಲಿ ಶಾಶ್ವತವಾಗಿರೋದಿಲ್ಲ . ಶ್ರೀ  ರಾಮಚಂದ್ರ ಶ್ರೀ ಕೃಷ್ಣ ನಂತಹ  ಮಹಾದೇವಾನುದೇವತೆಗಳಿಗೇ   ಈ ಭೂಮಿಯಲ್ಲಿಕೋಪ ತಾಪ  ಸಂಕಷ್ಟ   ಆಪಾದನೆ  ತಪ್ಪಲಿಲ್ಲವೆಂದರೆ
‌ಹುಲುಮಾನವ  
ತನ್ನ ಕರ್ಮಕ್ಕೆ ತಕ್ಕಂತೆ ಫಲ ಅನುಭವಿಸಿಯೇ ತೀರಬೇಕು ಎನ್ನುವ ಅಧ್ಯಾತ್ಮ ಸತ್ಯವನ್ನು ಎಷ್ಟೇ ತಿರುಚಿದರೂ ಸತ್ಯಕ್ಕೆ ಸಾವಿಲ್ಲ. ತಿರುಚಿದವರಿಗಿದೆ. ತಿರುಗಿ ಬಂದಾಗ  ಸತ್ಯಕ್ಕೆ ಬೆಲೆ ಕೊಡಲೇಬೇಕಾದಾಗ ಈ ಜನ್ಮದಲ್ಲಿಯೇ ತಿರುಗಿ ನಡೆಯುವುದು ಒಳ್ಳೆಯದಲ್ಲವೆ?  ಮನಸ್ಸು ಅಷ್ಟು ಸುಲಭವಾಗಿ ಒಪ್ಪದ ಕಾರಣ  ಮಾನವ ಮರುಳಾಗೋದು  ಒಪ್ಪಂದಕ್ಕೆ. ಆ ಒಪ್ಪಂದ ನಮ್ಮವರೊಂದಿಗೆ ಮಾಡಿಕೊಳ್ಳದೆ ಪರಕೀಯರೊಂದಿಗೆ ಮಾಡಿಕೊಂಡರೆ ಪರಮಾತ್ಮನೂ ಒಪ್ಪೋದಿಲ್ಲ.  ಇಬ್ಬರ ಜಗಳದಲ್ಲಿ ‌ಮೂರನೆಯವರಿಗೆ ಲಾಭ.ಲಾಭ ನಷ್ಟ  ಒಂದೇ ನಾಣ್ಯದ ಎರಡು ಮುಖವಷ್ಟೆ. ವ್ಯವಹಾರಿಕ ಜೀವನದಲ್ಲಿ ಧರ್ಮ ಸತ್ಯ ಹಿಂದುಳಿಸಿ ಹಿಂದೂ ಹಿಂದಿನಿಂದಲೂ  ಒಂದಾಗಿ ಬಾಳಲು ಕಷ್ಟಪಡಬೇಕಾಗಿದೆ. 
ಆದರೆ ಇದು  ಮಾನವನೊಳಗೇ ಇದ್ದರೂ ಒಳಹೊಕ್ಕಿ ಹುಡುಕಿಕೊಳ್ಳಲು  ಸೋತರೆ  ರಾವಣನೂ ಇರುವನು ಹಾಗೇ ರಾಮನೂ ಇರುವನು. ರಾವಣನಿಗೆ ಹೆಚ್ಚು ಸಹಕಾರ ಕೊಟ್ಟರೆ ರಾಮನ ನಡಿಗೆ ನಿಧಾನವಾದರೂ  ಗೆಲುವು ರಾಮನಿಗೇ.
ಹೀಗಾಗಿ ಅಧ್ಯಾತ್ಮ ‌ವಿಜ್ಞಾನ ನಿಧಾನವಾಗಿಯಾದರೂ ಬ್ರಹ್ಮನ ಅರಿವಿನೆಡೆಗೆ ನಡೆಸುತ್ತದೆ. ಆದರೆ, ವೈಜ್ಞಾನಿಕ ಜ್ಞಾನ ಬ್ರಹ್ಮಾಂಡದ ರಹಸ್ಯವರಿಯದೆ ಹೊರಗೇ ಸುತ್ತಿ ಸುಸ್ತಾಗುತ್ತದೆ. ಹೊರಗಿನ ಹೋರಾಟ,ಹಾರಾಟ ಮಾರಾಟದಲ್ಲಿ ಶಾಂತಿ ನೆಲೆಸಿರಬೇಕಾದರೆ  ಅಲ್ಲಿ ಸತ್ಯದ ಜೊತೆಗೆ ಧರ್ಮ ಸರಿಸಮನಾಗಿರಬೇಕು.ಸತ್ಯ ಕಾಣೋದಿಲ್ಲ ಧರ್ಮ  ಉಳಿಯೋದಿಲ್ಲವಾದಾಗಲೇ ಅಸುರ ಶಕ್ತಿ ಹೆಚ್ಚುವುದು. ದೇವಾಸುರರ ನಡುವಿನ ಮಾನವನಿಗೆ ಒಳಗೇ ಇರುವ ಸ್ವಶಕ್ತಿಯ ಪರಿಚಯವು ಅಧ್ಯಾತ್ಮದ ಮೂಲಕ ಅರ್ಥ ಆಗೋದು  ಆತ್ಮಜ್ಞಾನದಿಂದ ,ಬೌತಿಕದ ವಿಜ್ಞಾನ ಆಗ ಸರಿಯಾಗಿ ತಿಳಿಯಬಹುದು. ಎರಡರ ಸಮಾನತೆಯೇ  ನಿಜವಾದ ಜ್ಞಾನ.ಸಂಸಾರ ಸಮಾಜದೊಳಗಿದೆ ಸಮಾಜ ದೇಶದೊಳಗಿದೆ,ದೇಶ ವಿಶ್ವದೊಳಗಿದೆ,ವಿಶ್ವ ಪರಮಾತ್ಮನ ಒಳಗಿದೆ ಅಂದರೆ ಪರಮಾತ್ಮನ ಕಾಣೋದಕ್ಕೆ ವಿಶ್ವ ದರ್ಶನ
ಯೋಗದಿಂದ  ಸಾಧ್ಯವೇ ಹೊರತು  ವಿಶ್ವ ಪರ್ಯಟನೆ ಯಿಂದ. ಯಾರಿಗೂ ಉಪಯೋಗವಿಲ್ಲ.  ಸಾಧನೆ ಆಂತರಿಕ ವಾಗಿದ್ದರೆ ಶಾಂತಿ ತೃಪ್ತಿ ಮುಕ್ತಿ.  ಕಲಿಗಾಲದಲ್ಲಿ ಕಷ್ಟವಿದೆ  ಎಂದರೆ ಮನಸ್ಸನ್ನು ಹಿಡಿದುಕೊಂಡು ಸತ್ಯಾನ್ವೇಷಣೆ ಕಷ್ಟವಿದೆ. ಸತ್ಯ ತಿಳಿದ ಮೇಲೇ ಅಧ್ಯಾತ್ಮ ಸಂಶೋಧನೆ. ಇದೀಗ ಶಿಕ್ಷಣದಲ್ಲಿಯೇ ಹಿಂದುಳಿದಿರೋದೆ ಭಾರತಕ್ಕೆ ನುಂಗಲಾರದ ತುತ್ತಾಗುತ್ತಿದೆ. ವಿನಾಶಕಾಲೇ ವಿಪರೀತ ಬುದ್ದಿ .ಬುದ್ದಿವಂತಿಕೆ ಜ್ಞಾನವನ್ನು ನುಂಗಿ ನೀರುಕುಡಿಯುತ್ತಿದೆ.
ಹೆಣ್ಣು ಹೊನ್ನು ಮಣ್ಣಿಲ್ಲದೆ ಭೂಮಿಯಲ್ಲಿ ಜೀವನವೇ ಇಲ್ಲ.ಜೀವನ ಎಂದರೆ ಜೀವಿಗಳ ವನ. ಎಲ್ಲಾ ಜೀವ ಜಂತುಗಳ ಸೃಷ್ಟಿಗೆ  ಭೂಮಿಯೇ ಆಧಾರ. ಆ ಆಧಾರವನ್ನು ಸರಿಯಾಗಿ ತಿಳಿಯುವುದೇ  ಜೀವನದ ಗುರಿ. ಭೂಮಿಯಲ್ಲಿ ಜನ್ಮ ಪಡೆಯಬಾರದೆನ್ನುವ‌  ಮಹಾತ್ಮರೆ ಮತ್ತೆ ಮತ್ತೆ ಜನ್ಮ ಪಡೆದಿರೋದಕ್ಕೆ ಕಾರಣ ಇಲ್ಲಿ ಧರ್ಮ ಸ್ಥಾಪನೆ ಮಾಡಿ ‌ ಅಧರ್ಮದಿಂದ  ಮನುಕುಲವನ್ನು  ದೂರಮಾಡಿ ಭೂ ರಕ್ಷಣೆ ಮಾಡೋದಾಗಿತ್ತು. ಯುಗಯುಗದಿಂದಲೂ  ಈ ಕಾರ್ಯ ನಡೆದಿದೆ ನಡೆಯುತ್ತಿದೆ ನಡೆಯುತ್ತದೆ.ಆದರೆ ಇದನ್ನು  ನಾನು ಮಾತ್ರ  ಮಾಡುವೆನೆಂಬ ಅಹಂಕಾರ ದಲ್ಲಿ  ತನ್ನ ತಪ್ಪು ತಿಳಿಯದೆ  ಮುಂದೆ ನಡೆದವರು  ಸೃಷ್ಟಿ ಗೆ ವಿರುದ್ದ ನಡೆದು ಸ್ಥಿತಿಯನ್ನು  ಹಾಳುಮಾಡುತ್ತಾ ದೊಡ್ಡ ಲಯದ ವಿನಾಶಕ್ಕೆ ಕಾರಣವಾಗಿದ್ದಾರೆ. ಅಂತವರನ್ನೇ  ಆಧಾರವಾಗಿಟ್ಟುಕೊಂಡು
ಪ್ರಚಾರ ನಡೆಸೋರೊಮ್ಮೆ  ಅಧ್ಯಾತ್ಮ ದ ಸತ್ಯದೆಡೆಗೆ ಕಣ್ಣು ಹಾಯಿಸಿದರೆ  ಸಾವು ಎಲ್ಲರಿಗೂ ಒಂದು ದಿನ ಬರೋದೆ ಆದರೂ ಸತ್ತಂತೆ ಬದುಕೋದರಿಂದ ಎಲ್ಲರನ್ನೂ ಸಾಯಿಸಿದ
ಪಾಪಕಾರ್ಯ ವಾಗುವುದು.ಅಂದರೆ ಸತ್ಯಕ್ಕೆ ಸಾವಿಲ್ಲ ನಿಜ ಸತ್ಯವನ್ನು ಬಿಟ್ಟು  ಅಸತ್ಯವನ್ನು ಜೀವಂತವಾಗಿಸಿದರೆ  ಇದ್ದೂ ಸತ್ತಂತೆ  ಇದರಿಂದಾಗಿ  ಜನರಲ್ಲಿ ಅಸತ್ಯ ಹೆಚ್ಚಾಗುತ್ತಾ ತನ್ನ ಆತ್ಮವಂಚನೆಯಲ್ಲಿಯೇ ಜೀವನ‌ನಡೆಸೋ ಪರಿಸ್ಥಿತಿ ಬಂದರೆ ಭೂಮಿಯಲ್ಲಿ  ಅಸುರಶಕ್ತಿಯೇ ಹೆಚ್ಚಾಗುವುದು. ಒಟ್ಟಿನಲ್ಲಿ ಸತ್ಯ ಒಂದೇ ಅದೇ ನಮ್ಮ ಆತ್ಮ ಸಾಕ್ಷಿಯಾಗಿತ್ತು.ಯಾವಾಗ ಅಸತ್ಯವನ್ನು ಸತ್ಯವೆಂದು  ನಂಬಿಸಿ ರಾಜಕೀಯದೆಡೆಗೆ  ಹೆಚ್ಚು  ಮನಸ್ಸು ಓಡಿತೋ ಆಗಲೇ ಸತ್ಯ ಹಿಂದುಳಿಯುತ್ತಾ ಮೂಲೆ ಸೇರಿದೆ. ಅಧರ್ಮ ವೂ ಅಸತ್ಯದೊಂದಿಗೆ ಕುಣಿದು ಕುಪ್ಪಳಿಸಿ ಮೆರೆದಾಡುತ್ತಿದ್ದರೆ ಕಣ್ಣಿಗೆ ಮನರಂಜನೆ ಆತ್ಮಕ್ಕೆ ವಂಚನೆ. ಯಾರನ್ನೂ ಮೆಚ್ಚಿಸಲಾಗದು. ಹೀಗಿರುವಾಗ ನಮ್ಮ ಆತ್ಮವಿಶ್ವಾಸ ಕ್ಕೆ ದಕ್ಕೆಯಾಗುವಂತಹ ಸಮಾಜ ಘಾತಕ ವಿಷಯಗಳಿಂದ  ಏನಾದರೂ ಸಾಧನೆ ಮಾಡುವುದರಲ್ಲಿ ಅರ್ಥ ವಿದೆಯೆ? ಮನರಂಜನೆಯಿರಲಿ ಆತ್ಮವಂಚನೆ ಆಗದಿರಲಿ.ಎಲ್ಲರಿಗೂ ಮನಸ್ಸಿಗೆ ಶಾಂತಿ ಸಮಾಧಾನ,ತೃಪ್ತಿ  ಸಿಗೋದಿಲ್ಲವೆಂದರೆ ಇದು ಹಣದಿಂದ ಪಡೆಯೋ ವಸ್ತುವಲ್ಲ. ಜ್ಞಾನದಿಂದ  ಪಡೆಯುವ ಶಕ್ತಿಯಾಗಿದೆ. ಎಲ್ಲರಲ್ಲಿಯೂ ಅಡಗಿರುವ. ಆ ಪರಮ ಶಕ್ತಿಯ ಸದ್ಬಳಕೆಯಾದರೆ ಆತ್ಮತೃಪ್ತಿ.
ಇದಕ್ಕೆ ಹೊರಗಿನಿಂದ ಸಾಲ ಮಾಡಿಕೊಂಡು  ಹೊರಗಿನ ರಾಜಕೀಯಕ್ಕೆ ಅಂಟಿಕೊಂಡಿದ್ದರೆ ಒಳಗಿನ ಸಾಲ ಬೆಳೆದು  ಪರಮಸತ್ಯದಿಂದ ದೂರವಾಗುತ್ತಾ ಜೀವ ಹೋಗುತ್ತದೆ. ಇದನ್ನು ಸರ್ಕಾರವಾಗಲಿ  ಪೋಷಕರಾಗಲಿ ಸಮಾಜವಾಗಲಿ ತಡೆಯಲಾಗದು.

No comments:

Post a Comment