ಭಾರತ ಬಡವರ ದೇಶವೆ?
ಮಧ್ಯಮವರ್ಗದವರಿಂದ ಮುಂದುವರಿಯುತ್ತಿರುವ ದೇಶವೆನ್ನುವುದರ ಹಿಂದೆ ಬಡತನ ಕಾಣುತ್ತಿದೆ ಎಂದರೆ ನಂಬಲಸಾಧ್ಯ ಯಾವುದೇ ದೇಶದ ಸಂಪತ್ತು ಅದರೊಳಗಿರುವ ಪ್ರಜೆಗಳಾಗಿರುವರು.ಪ್ರಜೆಗಳೇ ದೇಶವನ್ನು ಸಾಲದ ದವಡೆಗೆ ಸಿಲುಕಿಸಿದರೆ ಬಡತನವನ್ನು ಎತ್ತಿ ಹಿಡಿದಂತೆ. ದೇಶದೊಳಗೆ ಇರುವ ಎಲ್ಲಾ ಶ್ರೀಮಂತರಿಗೆ ಸಾಲ ತೀರಿಸುವ ಮನಸ್ಸಿಲ್ಲ. ನಿಜವಾದ ಶ್ರಮ ಜೀವಿಗಳಿಗೆ ತಮ್ಮ ಸಾಲ ತೀರಿಸುವುದೇ ಸಮಸ್ಯೆ. ಇಬ್ಬರ ನಡುವೆ ನಿಂತಿರುವ ಮಧ್ಯಮವರ್ಗ ಈ ಕಡೆ ಶ್ರೀಮಂತ ರು ಇನ್ನೊಂದು ಕಡೆಯ ಬಡವರ ಪಾಲನ್ನು ಮಧ್ಯವರ್ತಿಗಳಾಗಿ ಹಂಚಿಕೊಳ್ಳುವುದೇ ಕಾಯಕ. ಹೀಗಾಗಿ ಹಣದಿಂದ ಯಾವುದೇ ಸಮಸ್ಯೆ ಗೆ ಪೂರ್ಣ ಪರಿಹಾರ ಸಿಗೋದಿಲ್ಲ. ಮಧ್ಯಮವರ್ಗ ಶ್ರೀಮಂತ ರ ಸಾಲಿಗೆ ಹೋದರೆ ಅಧರ್ಮ, ಬಡವರ ಸಾಲಿಗೆ ಹೋದರೆ ಧರ್ಮ ಎನ್ನುವ ಹಾಗೂ ಇಲ್ಲ.ಕಾರಣ ಇವರಿಗೆ ಸಹಕಾರ ನೀಡುವವರೆ ಇದಕ್ಕೆ ಕಾರಣ. ಮಾಧ್ಯಮಗಳ ಒಂದೊಂದು ಕಾರ್ಯಕ್ರಮ ಕ್ಕೆ ಸುರಿಯುವ ಹಣ ಎಲ್ಲಿಂದ ಹೇಗೆ ಯಾಕೆ ಬರುವುದೆನ್ನುವುದನ್ನು ಯಾರೂ ಬಾಯಿಬಿಡೋದಿಲ್ಲ.
ಮನರಂಜನೆಯ ಜೊತೆಗೆ ಆತ್ಮವಂಚನೆಯೂ ಹೆಚ್ಚಾದಂತೆಲ್ಲಾ ಜಗತ್ತಿನಲ್ಲಿ ಹಾಲಾಹಲವೆ ಹೆಚ್ಚುವುದು.
ಸತ್ಯದ ವಿಷಯಕ್ಕೆ ಬೆಲೆಕೊಡದವರ ಹಿಂದೆ ಎಷ್ಟೇ ನಡೆದರೂ ಅಸತ್ಯವೇ ಬೆಳೆಯುವುದು. ಒಟ್ಟಿನಲ್ಲಿ ಬಡತನವಿರೋದೆ ಮಧ್ಯಮವರ್ಗದ ವಿಷಯದಲ್ಲಿ. ಇಲ್ಲಿ ಸತ್ಯವಿದ್ದರೆ ದೇಶದ ಸಾಲ ತೀರುತ್ತದೆ.ಅಸತ್ಯವೇ ಬಡತನ ಬೆಳೆಸಿರೋದು.
ಹಾಗಾದರೆ ಸತ್ಯ ಯಾವುದು ಅಸತ್ಯ ಯಾವುದು?
ರಾಜಕೀಯವೇ ಅಸತ್ಯವಾಗಿದೆ.ಅಂದರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಭ್ರಷ್ಟರ ಹಿಂದೆ ನಡೆಯುತ್ತಾ ಹಣದ ಶ್ರೀಮಂತಿಕೆಗೆ
ಉಚಿತ ಸಾಲ ಸೌಲಭ್ಯಗಳನ್ನು ಪಡೆಯುತ್ತಾ ಮುಂದೆ ನಡೆದು ಹಿಂದಿನವರಲ್ಲಿದ್ದ ಆತ್ಮವಿಶ್ವಾಸವನ್ನು ಗಾಳಿಗೆ ತೂರಿ ಭ್ರಷ್ಟ ರಾಜಕೀಯಕ್ಕೆ ಸಹಕಾರ ನೀಡಿದಂತೆಲ್ಲಾ ಒಳಗೇ ಬೆಳೆದ ಅಜ್ಞಾನ ಸಾಲವನ್ನು ಬೆಳೆಸಿತು.ಸಾಲ ತೀರಿಸದೆ ಆತ್ಮಕ್ಕೆ ತೃಪ್ತಿ ಶಾಂತಿ ಮುಕ್ತಿ ಸಿಗೋದಿಲ್ಲ ಎನ್ನುವ ಅಧ್ಯಾತ್ಮ ಸತ್ಯವನ್ನು ವಿರೋಧಿಸಿದವರಿಗೆ ಈಗಲೂ ನಮ್ಮ ಜೀವವಿರೋದು ಸಾಲದಲ್ಲಿ ಎನ್ನುವ ಸತ್ಯದ ಅರಿವಿಲ್ಲದೆ ಆತ್ಮಹತ್ಯೆ ನಡೆದಿದೆ.
ಇದಕ್ಕೆಲ್ಲ ಕಾರಣ ಸರ್ಕಾರ ಎನ್ನುವುದೇ ಸುಳ್ಳು, ಇದಕ್ಕೆ ಕಾರಣ ಅಜ್ಞಾನದ ಪ್ರಜಾ ಸಹಕಾರ. ಒಂದು ಕಡೆ ಧಾರ್ಮಿಕ ರಾಜಕೀಯ ಇನ್ನೊಂದು ಕಡೆ ರಾಜಕಾರಣಿಗಳ ರಾಜಕೀಯ ಇವರಿಬ್ಬರ ನಡುವಿರುವ ಮಾದ್ಯಮ ದ ರಾಜಕೀಯತೆ ದೇಶವನ್ನು ವಿದೇಶ ಮಾಡುತ್ತಾ ದೇಶದ ಶಿಕ್ಷಣದಲ್ಲಿಯೇ ಮಕ್ಕಳು ಮಹಿಳೆಯರಿಗೆ ಹಣ ಸಂಪಾದಿಸುವ ಮಾರ್ಗ ತೋರಿಸಿ ಸತ್ಯಜ್ಞಾನದಿಂದ ದೂರಮಾಡಿ ಮನರಂಜನೆಯೇ ಜೀವನ ಎಂದರೆ ಮನಸ್ಸು ಸ್ಥಿರವಾಗಿರುವುದೆ? ಚಂಚಲ ಮನಸ್ಸನ್ನು ತಡೆಹಿಡಿದು ಒಳಗಿರುವ ಆತ್ಮಶಕ್ತಿಯನ್ನು ಬೆಳೆಸಿಕೊಂಡು ಸತ್ಯ ಧರ್ಮದೆಡೆಗೆ ನಡೆದವರು ಮಹಾತ್ಮರಾಗಿದ್ದಾರೆ. ಹಾಗಾದರೆ ಬಡತನವನ್ನು ಹೋಗಲಾಡಿಸಲು ಜ್ಞಾನ ಬೇಕೆ? ಹಣವೇ?
ಹಣವನ್ನು ಸದ್ಬಳಕೆ ಮಾಡಿಕೊಳ್ಳಲು ಜ್ಞಾನ ಬೇಕಿದೆ.ಒಂದು ರುಪಾಯಿಯೂ ಸಾಲವಾಗಿದ್ದರೆ ಅದನ್ನು ತೀರಿಸಲು ಎರಡು ರುಪಾಯಿ ಕಷ್ಟಪಟ್ಟು ದುಡಿಯಲೇಬೇಕು.ಒಬ್ಬ ಬಿಕ್ಷುಕ ತನ್ನ ಹೊಟ್ಟೆಪಾಡಿಗಾಗಿ ಬೇಡೋದು ತಪ್ಪಲ್ಲ. ಆದರೆ ಒಬ್ಬ ಬಿಕ್ಷು ತನ್ನ ಸ್ವಾರ್ಥ ಸಾಧನೆಗಾಗಿ ಬೇಡೋದು ತಪ್ಪು. ಹೀಗೇ ದೇಶದ ಪ್ರಜೆಗಳಾದವರು ದೇಶಕ್ಕಾಗಿ ದುಡಿಯದೆ ದೇಶದ ಸಾಲ ಏರಿಸಿದರೆ ಅಧರ್ಮ. ಇದಕ್ಕೆ ತಕ್ಕ ಫಲವನ್ನು ಅನುಭವಿಸಲೇಬೇಕು.
ಸರ್ಕಾರದ ಒಂದೊಂದು ಯೋಜನೆಗಳು ಸರಿಯಾಗಿ ಕಾರ್ಯ ರೂಪಕ್ಕೆ ಬರಬೇಕಾದರೆ ಮಧ್ಯವರ್ತಿಗಳು ಸರಿಯಾಗಿರಬೇಕು.ನೇರವಾಗಿ ತಲುಪಿಸುವ ಯೋಜನೆಗಳಲ್ಲಿ ತಂತ್ರಜ್ಞಾನದ ಕೊರತೆಯಿರುವಾಗ ಅಲ್ಲಿಯೂ ಮಧ್ಯವರ್ತಿಗಳು ತಮ್ಮ ಸ್ವಾರ್ಥ ಬುದ್ದಿ ತೋರಿಸುವುದು ಅಸಹ್ಯ. ಆದರೆ ಇವುಗಳಿಗೆಲ್ಲಾ ಸೂಕ್ತ ಕ್ರಮ ತೆಗೆದುಕೊಳ್ಳುವ ಕಾನೂನಿನಲ್ಲಿಯೂ ನ್ಯಾಯ ಅನ್ಯಾಯದ ಲೆಕ್ಕಾಚಾರವೂ ಹಣದಿಂದಲೇ ನಡೆದರೆ ಸತ್ಯಕ್ಕೆ ಬೆಲೆಯಿಲ್ಲದೆ ಹಿಂದುಳಿಯುತ್ತದೆ. ಸತ್ಯವೇ ದೇವರೆಂದರು.
ದೇವರು ಕಾಣದೆ ಅಸತ್ಯಕ್ಕೆ ಶರಣಾದರು. ದೇವತೆಗಳು ಅಸುರರು ಮಾನವರು ಈಗಲೂ ಭೂಮಿಯ ಮೇಲಿರುವರು.ಮೂಲ ದೇವತೆಗಳಿಗಷ್ಟೆ ಜನನ ಮರಣವಿಲ್ಲ. ಹಾಗಾದರೆ ನಮ್ಮೊಳಗೇ ಅಡಗಿರುವ ಸಾತ್ವಿಕ ಶಕ್ತಿಯನ್ನು ಬೆಳೆಸಿಕೊಳ್ಳಲು ಹೋದರೆ ಜ್ಞಾನ ಬರುವುದು.ಜ್ಞಾನದಿಂದ ವಿಜ್ಞಾನ ಬೆಳೆದು ಜನರಲ್ಲಿ ಸತ್ಯದರ್ಶ ನವಾಗಬೇಕೇ ಹೊರತು ವಿಜ್ಞಾನದಿಂದ ಜ್ಞಾನ ಕುಸಿಯಬಾರದಷ್ಟೆ.ಯಾವಾಗ ಧರ್ಮ, ದೇವರು,
ಪಕ್ಷ,ದೇಶ,ವಿಶ್ವದ ಹೆಸರಿನಲ್ಲಿ ರಾಜಕೀಯ ವ್ಯಾಪಾರ ವ್ಯವಹಾರ ಹೆಚ್ಚಾಯಿತೋ ಹಣವೇನೂ ಸಿಗುತ್ತಿದೆ ಆದರೆ ಋಣ ಕರ್ಮ ಕಳೆಯದೆ ದುಷ್ಕರ್ಮ ಬೆಳೆದು ದುಷ್ಟರ ಸಂಖ್ಯೆ ಮಿತಿಮೀರಿದೆ. ಭ್ರಷ್ಟಾಚಾರ ಬೆಳೆದಿರೋದೆ ಅಜ್ಞಾನದಿಂದ. ಅಜ್ಞಾನಕ್ಕೆ ಶಿಕ್ಷಣವೇ ಕಾರಣ.ನಮ್ಮದೇಶದ ಮೂಲ ಶಿಕ್ಷಣವೇ ಪರಕೀಯರ ಭಾಷೆಯಲ್ಲಿದ್ದರೆ ಅರ್ಥ ವಾಗದ ವಿಷಯವನ್ನು ಮಕ್ಕಳ ತಲೆಗೆ ತುಂಬಲು ಪೋಷಕರೆ ಸಹಕರಿಸಿದರೆ ಅದರ ಫಲವನ್ನು ಮುಂದೆ ಪೋಷಕರೆ ಅನುಭವಿಸೋದಷ್ಟೆ.ಇದೀಗ ಸತ್ಯವಾಗಿ ಕಾಣುತ್ತಿದೆ.
ನಾವು ಸಹಕಾರ ನೀಡಿದವರೆ ನಮ್ಮನ್ನು ಅಧರ್ಮದಲ್ಲಿ ಆಳುತ್ತಿರೋದಕ್ಕೆ ಕಾರಣವೇ ನಮ್ಮೊಳಗೇ ಅಡಗಿರುವ ಬಡತನ. ಸಾಲ ತೀರಿಸಲು ಹಣದ ಹಿಂದಿರುವ ಭ್ರಷ್ಟಾಚಾರ ದಿಂದ ಸಾಧ್ಯವಿಲ್ಲ.ಎಷ್ಟೋ ಜನ್ಮಗಳ ಫಲ ಈಗ ಪಡೆದರೂ ಇಂದಿನ ಕರ್ಮ ಫಲ ಮುಂದಿನ ಪೀಳಿಗೆಯವರೆಗೂ ಇರುತ್ತದೆ ಹೀಗಾಗಿ ಬಡತನವನ್ನು ಜ್ಞಾನದಿಂದ ದೂರಮಾಡುವ ಶಿಕ್ಷಣವನ್ನು ಮಾನವ ಪಡೆದಾಗಲೇ ನಿಜವಾದ ಜೀವನ. ಎಷ್ಟು ಓದಿ ತಿಳಿದೆನೆಂಬುವಬದಲು ಓದಿದ್ದರಲ್ಲಿ ಎಷ್ಟು ಸತ್ಯವಿದೆ ಎಂದರಿತು ಅಳವಡಿಸಿಕೊಂಡು
ಒಳಗೇ ಶುದ್ದವಾದರೆ ಭಗವಂತ ನೀಡಿರುವುದರಲ್ಲಿಯೇ
ತೃಪ್ತಿ ಯ ಜೀವನನಡೆಸಬಹುದು.ಆದರೆ ಹಾಗೆ ಬದುಕಲು ಸಮಾಜದಲ್ಲಿ ಕಷ್ಟ ವಾಗಿ ಸಮಾಜದ ಮಧ್ಯೆ ಸಿಲುಕಿದರೆ ತಿರುಗಿ ಹೊರಬರೋದೆ ಕಷ್ಟ.ಕಾಲದ ಪ್ರಭಾವ.ಶತ್ರುಗಳನ್ನು ಪ್ರೀತಿಸುವ ಶಕ್ತಿ ಹಿಂದೂ ಧರ್ಮ ದಲ್ಲಿತ್ತು.ಆದರೆ ಹಣಕ್ಕಾಗಿ ಅಜ್ಞಾನದಲ್ಲಿ ನಮ್ಮವರನ್ನೇ ದ್ವೇಷಿಸುವ ಮಟ್ಟಿಗೆ ರಾಜಕೀಯ ಬೆಳೆದು ಅಧರ್ಮ ಆಕಾಶದೆತ್ತರ ಬೆಳೆಯುತ್ತಿದೆ ಎಂದರೆ ಬಡತನವಿದೆ ಎಂದರ್ಥ. ತತ್ವನರಿಯದ ತಂತ್ರಜ್ಞಾನದಿಂದ ಭಾರತ ಬಡತನದೆಡೆಗೆ ಸಾಗುತ್ತಿದೆ. ಉಳ್ಳವರು ಶಿವಾಲಯವ ಕಟ್ಟುವರು ನಾನೇನು ಮಾಡಲಿ ಬಡವನಯ್ಯಾ ಎಂದ ಮಹಾತ್ಮರಿಗೆ ಒಳಗಿದ್ದ ಅಪಾರವಾದ ಜ್ಞಾನಶಕ್ತಿಯನ್ನು ಗುರುತಿಸುವ ಜನಬಲ ಹಣಬಲವಿರಲಿಲ್ಲ.ಹೀಗಾಗಿ ಅಂದು ಇಂದು ಮುಂದು ನಮ್ಮೊಳಗೇ ಜ್ಞಾನವೂ ಇದೆ ಅಜ್ಞಾನವೂ ಇದೆ.ದೈವಶಕ್ತಿ ಅಸುರಶಕ್ತಿಯ ಪ್ರಚೋಧನೆಯಿಂದ ಎಲ್ಲಾ ನಡೆದಿದೆ. ಮಧ್ಯವರ್ತಿಗಳ ಅರ್ಧ ಸತ್ಯದ ಪ್ರಚಾರವೇ ಎಲ್ಲಾ ಅತಂತ್ರಸ್ಥಿತಿಗೆ ತಂದಿದೆ .ಸತ್ಯದೆಡೆಗೆ ಹೋದವರು ಸ್ವತಂತ್ರ ಜ್ಞಾನಿಗಳಾದರು.ಮಿಥ್ಯದೆಡೆಗೆ ಹೋದವರೆ ಅತಂತ್ರಸ್ಥಿತಿಗೆ ಕಾರಣರು. ವೈಜ್ಞಾನಿಕ ವಿಚಾರಗಳಿಂದ ಭೌತಿಕದಲ್ಲಿ ಸುಖ ಪಡೆದರೂ ಅಧ್ಯಾತ್ಮದ ಮೂಲ ತಿಳಿಯದಿದ್ದರೆ ಅಧರ್ಮ.
ವಿಜ್ಞಾನಿಗಳಂತೆ ಆತ್ಮಜ್ಞಾನಿಗಳೂ ಭೂಮಿಯಲ್ಲಿ ಶ್ರೀಮಂತರ ಸಾಲಿನಲ್ಲಿ ಇದ್ದಾರೆಂದರೆ ಹಣದಿಂದ ಜ್ಞಾನೋದಯವೆ? ಜ್ಞಾನದಿಂದ ಹಣಸಂಪಾದನೆಯೇ? ಹಿಂದಿನ ಮಹರ್ಷಿಗಳು ಸಂಸಾರದೊಳಗಿದ್ದು ಯಾವ ಸಾಲ ಇಲ್ಲದೆಯೇ ಲೋಕಕಲ್ಯಾಣಕ್ಕಾಗಿ ಜೀವನ ನಡೆಸಿದ್ದರು.ಈಗ ಹೇಗಿದೆ? ಜನ ಹಣವಿದ್ದವರಿಗಷ್ಟೆ ಸಹಕಾರ ನೀಡುವಾಗ ಹಣದಿಂದಲೇ ಜನಬಲ ಹೆಚ್ಚಿಸಿಕೊಂಡು ಬದುಕುವ ಪರಿಸ್ಥಿತಿ ಇದೆ. ಎಂದರೆ ಹಣಸಂಪಾದನೆಯ ಮೂಲ ಸಾತ್ವಿಕವಾಗಿದ್ದರೆ ಧರ್ಮ. ಕೇವಲ ರಾಜಕೀಯವಾಗಿದ್ದರೆ ಅಸತ್ಯದ ಅಧರ್ಮ. ಇದರ ಹಿಂದೆ ನಡೆದವರೂ ಅದೇ ಮಾರ್ಗ ಹಿಡಿಯುವರು. ಮನೆಯ ಮೂಲ ಧರ್ಮ ಕರ್ಮ ವನರಿಯದೆ ಹೊರಬಂದು ಹಣಗಳಿಸಿದರೂ ಸದ್ವಿಚಾರ ಸತ್ಯ ಧರ್ಮದ ಕೊರತೆ ಇರುತ್ತದೆ. ದೇವರಿಗೆ ದೈವತ್ವಕ್ಕೆ ಸ್ಥಾನಮಾನ ಕೊಡುವಷ್ಟು ಮಹಾತ್ಮರ ಸಂಖ್ಯೆ ಬೆಳೆದಾಗಲೇ ದೇಶದ ಬಡತನ ನಿವಾರಣೆ ಸಾಧ್ಯ.
ಭ್ರಷ್ಟರಿಗೆ ಸಹಕಾರ ಕೊಟ್ಟರೆ ಬಡವರಾಗೇ ಜೀವ ಹೋಗುತ್ತದೆ. ಒಟ್ಟಿನಲ್ಲಿ ಶಿಷ್ಟಾಚಾರದ ಶಿಕ್ಷಣದಿಂದ ಜ್ಞಾನ ಹೆಚ್ಚಿಸಿಕೊಂಡು ಸನ್ಮಾರ್ಗದ ಸತ್ಕರ್ಮದಿಂದ. ಹಣಸಂಪಾದಿಸುತ್ತಾ ದಾನಧರ್ಮ ಕಾರ್ಯ ಮಾಡುತ್ತಾ ನಿಸ್ವಾರ್ಥ ನಿರಹಂಕಾರದಿಂದ ಪ್ರತಿಫಲಾಪೇಕ್ಷೆ ಯಿಲ್ಲದೆ ಮಾಡುವ ಸೇವೆಯಿಂದ ಯೋಗಿಗಳಾಗಬಹುದೆಂದು ಶ್ರೀ ಕೃಷ್ಣ ತಿಳಿಸಿದ್ದರೂ ಭೌತಿಕದ ಭೋಗ ಜೀವನಕ್ಕೆ ಹೆಚ್ಚಿನ ಸಹಕಾರವಿದ್ದರೆ ಬಡವರ ಹೆಸರಿನಲ್ಲಿ ರಾಜಕೀಯದಲ್ಲಿ ದುಷ್ಟರು ಬೆಳೆಯುವರಷ್ಟೆ.
ಕಟ್ಟುವುದು ಕಷ್ಟ ಮೆಟ್ಟುವುದು ಸುಲಭ.ಹಾಗೆ ಜ್ಞಾನಸಂಪಾದನೆ ಕಷ್ಟ ಅಜ್ಞಾನದ ಸಂಪಾದನೆ ಸುಲಭವಾದರೂ ಕಷ್ಟ ನಷ್ಟ ತಪ್ಪಿದ್ದಲ್ಲ. ಭಾರತವನ್ನು ಅಧ್ಯಾತ್ಮದಿಂದ ಆತ್ಮನಿರ್ಭರ ಮಾಡೋದಕ್ಕೆ ತತ್ವಜ್ಞಾನ ಬೇಕು. ವಿಜ್ಞಾನದಿಂದ ಆತ್ಮನಿರ್ಭರ ಮಾಡಲು ತಂತ್ರ ಪ್ರಯೋಗ ಮಾಡಿದಷ್ಟೂ ಮಧ್ಯವರ್ತಿಗಳು ಬೆಳೆಯುವರಷ್ಟೆ. ಸಾಕಷ್ಟು ಸಂಘ ಸಂಸ್ಥೆಗಳು ಮಠ ಮಂದಿರ ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮದಿಂದ ಇಲ್ಲಿ ದೇಶ ಸುಭಿಕ್ಷವಾಗಿದೆಯೆ? ಅಥವಾ ಬಿಕ್ಷುಕರಂತೆ ಬೇಡೋರೆ ಬೆಳೆದರೆ? ಇಲ್ಲಿ ನಾವೆಲ್ಲರೂ ಭಗವಂತನಲ್ಲಿ ಬೇಡುವ ಬಿಕ್ಷುಗಳಾಗಿದ್ದ ಯೋಗಿಗಳಾಗಬೇಕಾಗಿತ್ತು. ಆದರೆ ಪರಕೀಯರಿಗೆ ಮಣೆ ಹಾಕುತ್ತಾ ಒಪ್ಪಂದ ಮಾಡಿಕೊಂಡು ನಮ್ಮವರನ್ನೇ ದೂರ ಮಾಡಿಕೊಂಡು ಸರ್ಕಾರವನ್ನು ಬೇಡಿದರೆ ದೇಶದ ಸಾಲ ತೀರುವುದೆ? ವಿದೇಶಿ ಸಾಲ ಬೆಳೆಯುವುದಲ್ಲವೆ? ಸಾಮಾನ್ಯ ಜ್ಞಾನವಿದ್ದರೆ ಈ ಸತ್ಯ ಅರ್ಥ ಆಗಬಹುದು.ಇದು ಮಾನವನೊಳಗಿದೆ. ದೇವಾಸುರರು ವಿಶೇಷಜ್ಞಾನಿಗಳು. ಭೂಮಿ ನಡೆದಿರೋದು ಮಾನವರಿಂದ...ಸಹಕಾರ ಯಾರಿಗೆ ಕೊಡಬೇಕೆಂಬ ಸಾಮಾನ್ಯಜ್ಞಾನ ದ ಕೊರತೆಯೇ ಬಡತನಕ್ಕೆ ಕಾರಣವಾಗಿದೆ.
ಬಡವನ ಕೋಪ ದವಡೆಗೆ ಮೂಲವೆನ್ನುವಂತೆ ಎಷ್ಟೇ ಬಡವರು ಹೊರಗೆ ಹೋರಾಡಿದರೂ ಒಳಗೇ ಅಡಗಿರುವ ಅಮೃತತತ್ವ ಬಿಟ್ಟು ನಡೆದರೆ ವಿಷವೇ ಸಿಗೋದು. ವಿಷಯಗಳು ಅಮೃತಮಯವಾದಷ್ಟೂ ಜೀವನದಲ್ಲಿ ಶಾಂತಿ ನೆಮ್ಮದಿ ಸುಖ, ಸಮೃದ್ದಿ ಹೆಚ್ಚಾಗುವುದು. ಹೆಚ್ಚಾಗಿದ್ದನ್ನು ಹಂಚಿಕೊಂಡಷ್ಟೂ ಮುಕ್ತಿ ಮಾರ್ಗದಲ್ಲಿ ನಡೆಯಬಹುದು.
ವೇದ ಶಾಸ್ತ್ರ ಪುರಾಣಗಳು ಸಮಾಜವನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕಾದರೆ ಪ್ರಚಾರಕರು ಶುದ್ದವಾದ ವಿಷಯಗಳನ್ನು ಶಿಕ್ಷಣದಲ್ಲಿಯೇ ಕಲಿತು ಕಲಿಸಿ ತಿಳಿಸುವವರಾಗಬೇಕಿತ್ತು. ಹಣ,ಅಧಿಕಾರ,ಸ್ಥಾನಮಾನಕ್ಕಾಗಿ ಹಾತೊರೆದು ಸತ್ಯ ಸತ್ವ ತತ್ವ ಬಿಟ್ಟರೆ ಅದೇ ರೀತಿಯಲ್ಲಿ ಅಜ್ಞಾನಿಗಳೂ ಅವರ ವಿಷಯವನ್ನು ಪ್ರಚಾರ ಮಾಡುತ್ತಾ ನಡೆಯುವರು. ಇದರಲ್ಲಿ ಯಾರದ್ದು ತಪ್ಪು? ಯಥಾ ಗುರು ತಥಾ ಶಿಷ್ಯ , ಯಥಾ ಪ್ರಜಾ ತಥಾ ಪ್ರಜಾಪ್ರಭುತ್ವ ಎಂದಂತೆ ಗುರುವಿನಲ್ಲಿಯೂ ದೇವ ಗುರು ಅಸುರ ಗುರು ಇರೋವಾಗ ಮಾನವರಿಗೆ ಗುರು ಅರಿವೇ ಗುರು.ಆತ್ಮ ಸಾಕ್ಷಿಯೇ ಗುರುವಲ್ಲವೆ?
No comments:
Post a Comment