ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ...
ಹೆಂಡತಿಯೊಬ್ಬಳು ನೋಟಿನ ಹಿಂದೆ ಬಿದ್ದರೆ ನಾನೊಬ್ಬ ಬಡಪಾಯಿ.
ಹೆಣ್ಣು ಹೊನ್ನು ಮಣ್ಣಿನ ಋಣ ತೀರಿಸಲು ಬಂದವ ಸ್ತ್ರೀ ಹಾಗು ಭೂಮಿಯನ್ನು ತನ್ನ ಸ್ವಾರ್ಥ ಸುಖಕ್ಕಾಗಿ ದುರ್ಭಳಕೆ ಮಾಡಿಕೊಂಡು ಎಷ್ಟೇ ಆಸ್ತಿ ಅಂತಸ್ತು ಅಧಿಕಾರ ಹಣ ಪಡೆದರೂ ಸ್ತ್ರೀ ಯನ್ನು ಗೆಲ್ಲಲಾಗದು. ಯಾವಾಗ ಸ್ತ್ರೀ ಹಣದ ಹಿಂದೆ ನಿಂತು ಜ್ಞಾನದಿಂದ ದೂರವಾದಳೋ ಮನೆಯೊಳಗೆ ಇರಲಾಗದೆ ಹೊರಗೆ ಬರುವಂತಾಯಿತು. ಜ್ಞಾನದಿಂದ ಹೊರಗೆ ಬಂದವರನ್ನು ಸಮಾಜ ಗುರುತಿಸುವ ರೀತಿಯೇ ಬೇರೆ ಅಜ್ಞಾನದಿಂದ ಹೊರಗೆ ಹೊರಟವರನ್ನು ಸಮಾಜ ಬಳಸಿಕೊಂಡ ರೀತಿಯೇ ಬೇರೆ. ಭಾರತ ಜ್ಞಾನಿಗಳ ದೇಶ.ಇಲ್ಲಿ ಯಾವುದು ಶಾಶ್ವತವೆನ್ನುವ ಸತ್ಯದ ಹಿಂದೆ ನಡೆದ ಹಿಂದೂಗಳಿಂದ ಮುಂದೆ ನಡೆದ ಮಹಾತ್ಮರಿದ್ದರು. ಅವರ ಯೋಗ ಶಕ್ತಿಯಿಂದ ದೇಶ ವಿಶ್ವಗುರುವಾಗಿತ್ತು. ಕಾಲಾನಂತರದ ಅಂತರದಲ್ಲಿ ಹೆಣ್ಣೇ ತನ್ನ ಸಂಸಾರ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಹೊತ್ತು ಹೊರಗೆ ಒಳಗೆ ದುಡಿಯುವ ಸ್ಥಿತಿ ಬಂದಿದೆಯೆಂದರೆ ಇದರಲ್ಲಿ ಜ್ಞಾನ ಎಲ್ಲಿದೆ? ಧರ್ಮ ಯಾವುದು?
ವ್ಯವಹಾರದಿಂದ ಹಣಪಡೆದರೂ ಜ್ಞಾನಕ್ಕೆ ವಿರುದ್ದವಾದ ವ್ಯವಹಾರದಿಂದ ಕಷ್ಟ ನಷ್ಟವೇ ಹೆಚ್ಚು. ಸಾಲ ಅಥವಾ ಋಣ ತೀರಿಸಲು ಜೀವಾತ್ಮನಿಗೆ ಪರಮಸತ್ಯದ ಅಗತ್ಯವಿದೆ. ಈ ಸತ್ಯವೇ ದೇವರಾಗಿ,ಆತ್ಮವಾಗಿದೆ. ಆತ್ಮಸಾಕ್ಷಿಗೆ ವಿರುದ್ದ ನಡೆದರೆ ಸತ್ಯದಿಂದ ದೂರವಾದಂತೆ. ಹಾಗಾಗಿ ಮಾನವ ತನ್ನ ಒಳಗೇ ಅಡಗಿರುವ ದೇವಾಸುರ ಗುಣಗಳನ್ನು ಯಾವ ರೀತಿಯಲ್ಲಿ ಬಳಸಿದರೆ ಯಾವ ಕರ್ಮ ಫಲ ಎನ್ನುವ ಅರಿವನ್ನು ಬೆಳೆಸಿಕೊಂಡು ಭೂಮಿಯ ಋಣ ತೀರಿಸುವ ಧರ್ಮ ಮಾರ್ಗ ಹಿಡಿಯುವುದಕ್ಕೆ ಬಹಳ ಕಷ್ಟಪಡಬೇಕು.
ಹಿಂದಿನ ಮಹಾತ್ಮರುಗಳು ಬೇರೆ ಬೇರೆ ಮಾರ್ಗದಲ್ಲಿ ಪರಮಾತ್ಮನ ಕಾಣುವ ಸಾಧಕರಾದರೂ ಗುರಿ ಒಂದೇ ಇತ್ತು.
ಇದು ಆಂತರಿಕ ಶುದ್ದತೆಯಿಂದಾಗಿತ್ತು. ಭೌತಿಕದೆಡೆಗೆ ಎಷ್ಟು ನಡೆದರೂ ಅಧ್ಯಾತ್ಮದ ಮೂಲದಿಂದ ದೂರವಾಗದೆ ಇದ್ದರೆ ಅದು ಧರ್ಮ ವಾಗಿರುವುದು. ಮನೆಯಿಂದ ಹೊರಗೆ ನಡೆದರೂ ತಿರುಗಿಮನೆಗೆ ಸೇರುವಂತೆ ಮನೆ,ಮಡದಿ ಮಕ್ಕಳು ಮನೆಯೊಳಗೆ ಇದ್ದಾಗ ಒಂದು ಜೀವನ.ಹೊರಗೆ ಹೋದರೆ ಒಂದು ಜೀವನ. ತಾನೇ ಬಿಟ್ಟು ನಡೆದರೆ ಒಂದು ರೀತಿ ಎಲ್ಲರನ್ನೂ ಒಟ್ಟು ಗೂಡಿಸಿ ನಡೆದರೆ ಒಂದು ರೀತಿಯ ಅನುಭವಜ್ಞಾನವಿರುತ್ತದೆ.ಹೀಗಾಗಿ ಎಲ್ಲಾ ಒಂದೇ ಎಂದರೂ ಎಲ್ಲರಲ್ಲಿಯೂ ಅಡಗಿರುವ ಜ್ಞಾನಶಕ್ತಿ ಒಂದೇ ಇರದು.ಇದಕ್ಕೆ ತಕ್ಕಂತೆ ಹಣಸಂಪಾದನೆ ಜೀವನ ಶೈಲಿ ಬದಲಾಗುತ್ತಾ ಕೊನೆಗೆ ಮರೆಯಾಗುವುದು ಸಹಜ ಕ್ರಿಯೆ. ಸೃಷ್ಟಿ ಗೆ ತಕ್ಕಂತೆ ಸ್ಥಿತಿ ಸ್ಥಿತಿಗೆ ತಕ್ಕಂತೆ ಲಯ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಸೃಷ್ಟಿ ಉತ್ತಮವಾಗಿದ್ದರೆ ಸ್ಥಿತಿ ಯೂ ಉತ್ತಮ. ಲಯವನ್ನು ಸಂತೋಷದಿಂದ ಸ್ವೀಕರಿಸುವ ಜ್ಞಾನ ಮಾನವನಿಗಿರುತ್ತದೆ.
ಯುದ್ದ ಯಾವಾಗ ನಡೆಯುವುದೆಂದು ಸೈನಿಕರು ನಿರೀಕ್ಷೆ ಮಾಡುವುದು ಜ್ಞಾನದ ಸಂಕೇತ. ಯುದ್ದವೇ ನಡೆಯದಂತೆ ಶತ್ರುಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಅಧರ್ಮಕ್ಕೆ ಸಹಕರಿಸುವುದು ಅಜ್ಞಾನಿಗಳ ಸಂಕೇತ. ಯಾವಾಗ ಅಧರ್ಮ ಕ್ಕೆ ಶಕ್ತಿ ಹೆಚ್ಚುವುದೋ ಅಸುರಿ ಶಕ್ತಿಗೆ ಸಹಕಾರ ಸಿಗುವುದೋ ಆಗಲೇ ಭೂಮಿಯಲ್ಲಿ ಪ್ರಕೃತಿ ವಿಕೋಪದಿಂದ ಪ್ರಳಯ,ಭೂ ಕಂಪ, ಯುದ್ದ, ರೋಗ ಭಯೋತ್ಪಾದನೆ ಮುಂತಾದ ಅವಘಡಗಳಿಂದ ಜೀವ ಹೋಗುವುದು. ಇದನ್ನು ಮಾನವನಿಂದ ತಡೆಯಲಾಗದು.ಮಹಾತ್ಮರಿಗೆ ಅರ್ಥ ವಾದರೂ ಕಾಲಮೀರಿದಾಗ ಏನೂ ಮಾಡಲಾಗದು. ಇದಕ್ಕಾಗಿ ಒಲಿದರೆ ನಾರಿ ಮುನಿದರೆ ಮಾರಿ ಎಂದರು. ಇಲ್ಲಿ ಭೂ ತಾಯಿ, ಭಾರತಮಾತೆ,ಕನ್ನಡಮ್ಮ,ಹೆತ್ತತಾಯಿ ಸ್ತ್ರೀ ಶಕ್ತಿಯ ಸಹಕಾರವಿಲ್ಲದೆ ಏನೂ ನಡೆಯದು. ಪ್ರಕೃತಿಯ ಸಣ್ಣ ಕಣವಾದ ಜೀವ ಕ್ಕೆ ಬೇಕಾದ ಎಲ್ಲಾ ಉಚಿತ ಸಿಕ್ಕಿದರೂ ಅನಾವಶ್ಯಕ ವಾದ ಆಸೆ ಆಕಾಂಕ್ಷೆಗಳನ್ನು ಬೆಳೆಸಿಕೊಂಡು ಮುಂದೆ ಬಂದ ಮಾನವನ ಜೀವ ಉಳಿಸಿಕೊಳ್ಳಲು ಪ್ರಕೃತಿಯನ್ನು ದುರ್ಭಳಕೆ ಮಾಡಿಕೊಂಡರೆ ಅಥವಾ ಸ್ತ್ರೀ ಯನ್ನು ದುರ್ಭಳಕೆ ಮಾಡಿಕೊಂಡರೆ ಮಾರಿಯಾಗಿ ಹೊರಗೆ ಹೊರಟು ಜೀವ ತೆಗೆಯುವುದೂ ಅದೇ ಶಕ್ತಿ. ದೈಹಿಕವಾಗಿ ದುರ್ಭಲತೆ ಇದ್ದರೂ ಮಾನಸಿಕವಾಗಿ ಸಬಲರಾಗಿ ಸ್ತ್ರೀ ಶಕ್ತಿ ಒಗ್ಗಟ್ಟಿನಿಂದ ಬಾಳಿ ಬದುಕಿದರೆ ಮನೆಯೊಳಗೆ ಶಾಂತಿ ಸಿಗುತ್ತದೆನ್ನುವ ಕಾರಣಕ್ಕಾಗಿ ಹಿಂದಿನ ಕಾಲದಲ್ಲಿ ಮನೆಯೊಳಗೆ ಸ್ತ್ರೀ ಯರಿಗೆ ಶಿಕ್ಷಣ ನೀಡಿ ಉತ್ತಮ ಗುರುವಿನ ಸ್ಥಾನ ಕೊಟ್ಟು ಗೃಹಮಂತ್ರಿಯೆನಿಸಿದ್ದಳು.ಈಗಲೂ ಇದ್ದಾರೆ ಆದರೆ ಶಿಕ್ಷಣದಲ್ಲಿಯೇ ಬದಲಾವಣೆ ಆದ ಕಾರಣ ಅಧ್ಯಾತ್ಮ ಸತ್ಯ ಬಿಟ್ಟು ಭೌತಿಕಸತ್ಯವನರಿತು ಮನೆಯಿಂದ ಹೊರಗೆ ಬಂದು ಸಂಸಾರಕ್ಕಾಗಿ ದುಡಿಯುವ ಅನಿವಾರ್ಯತೆ ಕೆಲವರಿಗಿದ್ದರೆ. ಅನೇಕರಿಗೆ ತನ್ನ ಕಾಲಮೇಲೆ ತಾನು ನಿಂತು ಬದುಕುವ ಆಸೆ, ಇನ್ನೂ ಕೆಲವರಿಗೆ ಮನೆಯಲ್ಲಿ ಕೆಲಸವಿಲ್ಲದೆ ಅಥವಾ ಮನೆಗೆಲಸಕ್ಕೆ ಬೇರೆಯವರಿದ್ದಾರೆನ್ನುವ ಕಾರಣಕ್ಕೆ ಹೊರಗೆ ಕೆಲಸ ಮಾಡಿ ಹಣಸಂಪಾದಿಸುವರು. ಹಣವಿಲ್ಲದೆ ಜೀವನವಿಲ್ಲ.ಅದರೊಂದಿಗೆ ಅದನ್ನು ಸದ್ಬಳಕೆ ಮಾಡಿಕೊಂಡು ಸಂಸಾರದ ಜೊತೆಗೆ ಸಮಾಜದ ಪರಿಸ್ಥಿತಿ ಅರ್ಥ ವಾಗುವ ಜ್ಞಾನ ಗುಣವೂ ಅಷ್ಟೇ ಮುಖ್ಯ..
ಉತ್ತಮವಾದ ಲೇಖನ
ReplyDelete