ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, August 16, 2023

ಕಲಿಯುಗದಲ್ಲಿ ದೇವರೆಲ್ಲಿ?

ಕಲಿಯುಗದಲ್ಲಿ ಕಲ್ಲಿನಲ್ಲಿ ದೈವತ್ವವಿದೆ ಮಾನವನಲ್ಲಿ ದೈವತ್ವವಿಲ್ಲವಾಗುತ್ತಿದೆ. ಕಾರಣ ವ್ಯವಹಾರಿಕ ಧಾರ್ಮಿಕ ಜೀವನ. ಇಲ್ಲಿ ದೇವರನ್ನು ವ್ಯವಹಾರಕ್ಕೆ ಎಳೆದಾಗ ಹಣ ಮಾತ್ರ ಕಾಣೋದು ಜ್ಞಾನವಲ್ಲ. ಹಣವಿಲ್ಲದವರಲ್ಲಿ ಜ್ಞಾನವಿದ್ದರೂ  ಗಮನಿಸದ ಶಿಕ್ಷಣ ವ್ಯವಸ್ಥೆ  ಮಾನವೀಯತೆಯನ್ನು ಹಾಳು ಮಾಡುತ್ತಿದೆ. ಗುರುವೇ  ವ್ಯವಹಾರಕ್ಕೆ ಬೆಲೆಕೊಟ್ಟರೆ ಶಿಷ್ಯರ ಗತಿ ಏನು?
ಭಾರತೀಯ ಶಿಕ್ಷಣ ಪದ್ದತಿ ಜಾರಿಗೆ ತರುವುದಕ್ಕೆ ಭಾರತೀಯ ಪ್ರಜೆಗಳೆ ತಯಾರಿಲ್ಲ. ಇನ್ನು ಶಿಕ್ಷಣ ಸಂಸ್ಥೆ ನಡೆಸೋರಿಗೆ  ಹಣವೇ ಮುಖ್ಯ. ಯಾವ ಶಾಲೆಯಲ್ಲಿ ಹೈಫೈ ವ್ಯವಸ್ಥೆ ಇರುವುದೋ ಅಲ್ಲಿಗೆ ಶ್ರೀಮಂತ ಮಂದಿ ಮಕ್ಕಳು ಬರುವುದು.
 ಆದರೆ ಅದರೊಳಗೆ ಕಲಿಸುವ ವಿಷಯ ಧಾರ್ಮಿಕವಾಗಿದ್ದರೆ  ಧರ್ಮ ರಕ್ಷಣೆಯಾಗುವುದು.ಆದರೆ ಹೈ ಫೈ ಜೀವನ ನಡೆಸುವಾಗ ಕಷ್ಟದ ಅನುಭವವಿರದ ಮಕ್ಕಳಿಗೆ ಶಿಕ್ಷೆ ನೀಡದೆ ಶಿಕ್ಷಣ ಕಲಿಸಲಾಗದ ಕಾರಣ  ವೈಜ್ಞಾನಿಕ ವಿಚಾರ ತಲೆಗೆ ತುಂಬಬಹುದು. ವೈಚಾರಿಕತೆಯ ವಿಚಾರದ ಹಿಂದಿನ ವೈಜ್ಞಾನಿಕತೆಯನ್ನೂ ತಿಳಿದು ತಿಳಿಸುವ ಕೆಲಸವಾದರೆ ಕೆಲವು ಸತ್ಯಾಸತ್ಯತೆ ಹೊರಬರುವುದು. ಅಧ್ಯಾತ್ಮ ವಿಜ್ಞಾನ ಭೌತಿಕ ವಿಜ್ಞಾನದ ಅಂತರವನ್ನು ಕಡಿಮೆಗೊಳಿಸುವುದೇ ಶಿಕ್ಷಣದ ಗುರಿಯಾದರೆ ಮಾನವನೊಳಗೂ ಇರುವ ದೈವತ್ವ ಎಚ್ಚರ ಆಗುತ್ತದೆ. 
ಇದನ್ನು ಮಾಡಬೇಕಾದವರು ಪೋಷಕರು. ಮಕ್ಕಳಿಗೆ ಮನೆಯೊಳಗೆ ಹೊರಗೆ ಕೊಡುವ ಶಿಕ್ಷಣದಲ್ಲಿಯೇ  ಉತ್ತಮ ಸದ್ವಿಚಾರವಿದ್ದರೆ ಸಂಸಾರದಲ್ಲೂ ನೆಮ್ಮದಿ ಸಮಾಜದಲ್ಲೂ  ನೆಮ್ಮದಿಯಿಂದ ಬದುಕಬಹುದು.ಹೇಳುವಷ್ಟು ಸುಲಭವಿಲ್ಲ. ಆದರೆ ಪ್ರಚಾರ ಮಾಡಿಕೊಂಡು  ಸತ್ಯ ತಿಳಿಯದೆ  ವ್ಯವಹಾರಕ್ಕೆ ಇಳಿದರೆ ಅಧರ್ಮ ಹೆಚ್ಚಾಗುವುದು ಸತ್ಯ.ಈಗ ಪರಿಸ್ಥಿತಿ ಹದಗೆಟ್ಟಿರುವಾಗ  ಅದನ್ನು ಯಾರದ್ದೋ ತಪ್ಪು ಎನ್ನುವ ಬದಲಾಗಿ ನಮ್ಮ ತಪ್ಪು ಎಷ್ಟಿದೆ ಎಂದು ತಿಳಿದರೆ ಮನೆಯೊಳಗೆ ವಿಗ್ರಹಕ್ಕೆ ಪೂಜಿಸಿ ದೇವರನ್ನು ಕಾಡಿ ಬೇಡಿ ಆಸೆ ಪೂರೈಸಿಕೊಳ್ಳುವವರಿಗೇನೂ ಕಡಿಮೆಯಿಲ್ಲ.ಇದಕ್ಕೆ ಜೊತೆಯಾಗಿ ನಿಂತು ಸಹಕಾರ ನೀಡುವ  ಸಹಚರರು, ಸಂಬಂಧಿ ಗಳು, ಸ್ನೇಹಿತರು  ಶ್ರೀಮಂತಿಕೆ ಬಂದಾಗ ದೂರದವರಾಗುವುದೂ  ಸಹಜವಾಗಿದೆ. ಅಂದರೆ ಸಹಾಯಕ್ಕೆ ನಿಂತವರೆ  ದೇವರಲ್ಲವೆ? ಅವರೊಂದಿಗೆ  ನಮಗೆ ಸಿಕ್ಕ. ಸುಖ ಸಂತೋಷ ಹಂಚಿಕೊಳ್ಳಲು  ಸಾಧ್ಯವಾದರೆ ಅದೇ ನಿಜವಾದ ಮಾನವೀಯತೆ. ದೈವತ್ವವುಳ್ಳವರು ನಮಗಾಗಿ ಏನೂ ಮಾಡಿಕೊಳ್ಳದೆ ಪರರಿಗಾಗಿ ಮಾಡುವರು.ಇದು ಪರಮಾತ್ಮನ ಸೇವೆಯಾದರೆ, ಮಾನವರು ತನ್ನ ಜೊತೆಗೆ ಪರರಿಗೂ  ಒಳ್ಳೆಯದಾಗಲಿ ಎಂದು ಬಯಸುವರು.ಅಸುರರು ಮಾತ್ರ ತನ್ನ ಸ್ವಾರ್ಥ ಸುಖಕ್ಕಾಗಿ ಪರರನ್ನು ಬಳಸಿಕೊಂಡು  ಅಧಿಕಾರ ಚಲಾಯಿಸುವರು. ಮೂರೂ ತರಹದವರು ಯಾವಾಗಲೂ ಭೂಮಿಯಲ್ಲಿರುವರು. ಇದನ್ನು ಸೂಕ್ಷ್ಮ ವಾಗಿ ಗಮನಿಸುವುದು ಕೇವಲ ಕೆಲವರಷ್ಟೆ. ಹೀಗಾಗಿ ಯಾರೇ ದೇವರ ಹೆಸರಿನಲ್ಲಿ ವ್ಯವಹಾರ ನಡೆಸಿದರೂ  ದೈವತ್ವಕ್ಕೆ ಬೆಲೆ ಕೊಡುವುದು ಸರಿ. ಭೌತಿಕದೆಡೆಗೆ ನಮ್ಮ ಆಸೆ ಆಕಾಂಕ್ಷೆಗಳನ್ನು  ಮಿತಿಮೀರಿ ಬೆಳೆಸುತ್ತಿದ್ದರೆ  ಅದೊಂದು ಅಜ್ಞಾನವೆಂದರಿತು  ಸ್ವಲ್ಪ ತಡೆದುಕೊಂಡು ಆತ್ಮಾವಲೋಕನ ನಡೆಸಿಕೊಂಡರೆ ತಿರುಗಿ ದೈವತ್ವದೆಡೆಗೆ ಬರಬಹುದು. ಇದೇ ಕಾರಣಕ್ಕಾಗಿ  ಶಿವ ಶರಣರು,ದಾಸರು,ಸಂತರು ವಿಗ್ರಹಾರಾಧನೆ ಬಿಟ್ಟು ಪರಮಾತ್ಮನ  ಕಾಣುವ ಸ್ವತಂತ್ರ ಮಾರ್ಗವನ್ನು  ಕಂಡುಕೊಂಡರು. ಆದರೆ ಸಮಾಜದ ಜನತೆ ಅವರನ್ನು ಬಡವರು ಬಿಕ್ಷುಕರೆನ್ನುವ ಭಾವನೆಯಲ್ಲಿ  ನಿರ್ಲಕ್ಷ್ಯ ಮಾಡಿದ್ದರೂ ಈಗವರು ಮಹಾತ್ಮರೆನಿಸಿಕೊಂಡರು ಎಂದರೆ ಜೀವ ಇದ್ದಾಗ ಪರಮಾತ್ಮ ಕಾಣೋದಿಲ್ಲ.ಪರಮಾತ್ಮನ ಕಂಡವರು ಜೀವಕ್ಕೆ ಬೆಲೆಕೊಡೋದಿಲ್ಲ. ಜೀವ ಹೋದ ಮೇಲೆ ಅವರನ್ನು ದೇವರೆನ್ನುವವರೆ ಹೆಚ್ಚಾದರೆ ಜೀವನಕ್ಕೆ ಬೆಲೆಯಿಲ್ಲವೆ? ಜ್ಞಾನ ಕಣ್ಣಿಗೆ ಕಾಣೋದಿಲ್ಲವೆಂದರೆ ಜ್ಞಾನವಿಲ್ಲದ ಜೀವನ ಜೀವನವೆ? ಅಥವಾ ವಿಜ್ಞಾನಕ್ಕೆ  ಜ್ಞಾನವೇ ಮೂಲವಲ್ಲವೆ? ಜನರಲ್ಲಿನ ಜ್ಞಾನವನ್ನು ಸರಿಯಾಗಿ ಗುರುತಿಸಿ ಬೆಳೆಸುವ ಧರ್ಮ ಗುರು ಹಿರಿಯರದ್ದಾಗಿದೆ.ಇದು ಭಾರತೀಯ ಶಿಕ್ಷಣದಲ್ಲಿಯೇ  ಪ್ರಾಥಮಿಕ ಹಂತದಲ್ಲೇ ಕೊಟ್ಟು ಮಾನವನನ್ನು ಮಹಾತ್ಮನಾಗಿಸಿತ್ತು. ಒಟ್ಟಿನಲ್ಲಿ ದೈವತ್ವವನ್ನು ತತ್ವಜ್ಞಾನದಿಂದ ಬೆಳೆಸುವ ಶಿಕ್ಷಣದಿಂದ ಆತ್ಮನಿರ್ಭರ ಭಾರತ ಸಾಧ್ಯ. ಶಿಕ್ಷಕರು ಗುರುಗಳಾದವರಲ್ಲಿ ತತ್ವಜ್ಞಾನದ  ಅನುಭವವಿರಬೇಕಿದೆ.ಒಗ್ಗಟ್ಟು ಏಕತೆ ಐಕ್ಯತೆ ಸಮಾನತೆಯನ್ನು ಹಣದಿಂದ ಬೆಳೆಸೋ ಬದಲು ಜ್ಞಾನದಿಂದ ಬೆಳೆಸಿದ್ದರೆ ಭ್ರಷ್ಟಾಚಾರ ದ ಬದಲು ಶಿಷ್ಟಾಚಾರವಿರುತ್ತದೆ.
ಭಾರತ ಭ್ರಷ್ಟರ ದೇಶವಾಗಲು ಕಾರಣವೇ  ವೈಜ್ಞಾನಿಕವಾಗಿ ಅತಿಯಾಗಿ ಚಿಂತನೆ ನಡೆಸಿ ವೈಚಾರಿಕತೆಯ ಹಿಂದಿನ ವೈಜ್ಞಾನಿಕ ಸತ್ಯವನರಿಯದೆ ವಿರೋಧಿಸುತ್ತಾ ಭೂಮಿಯ ಸತ್ಯ ಸತ್ವ ತತ್ವವನರಿಯದ  ವಿಜ್ಞಾನ ಜಗತ್ತು. ವಿಜ್ಞಾನ ದಿಂದ ಎಲ್ಲಾ ಸಾಧ್ಯವಿದೆ ಆದರೆ  ಜನನ ಮರಣಗಳ ಹಿಂದಿನ ಧರ್ಮ ಕರ್ಮ ಋಣಗಳ‌ ವಿಷಯ ತಿಳಿಯಲಾಗದು. ಸೂಕ್ಷ್ಮ ವಾಗಿರುವ ಈ ಸತ್ಯ ಅನುಭವಿಸಿಯೇ ತಿಳಿಯಬೇಕಿದೆ.  ಇದು ಅಸತ್ಯವೆಂದಾದರೆ  ಹಿಂದಿನ ಮಹಾತ್ಮರುಗಳು ಕಷ್ಟಪಟ್ಟು ಯಾಕೆ ಅಧ್ಯಾತ್ಮ ಸತ್ಯದೆಡೆಗೆ ನಡೆದರು? ಈಗ ಯಾಕೆ ಧಾರ್ಮಿಕ ಕಾರ್ಯಕ್ರಮ ನಡೆಸಿದರೂ ರೋಗ ರುಜಿನ ಭ್ರಷ್ಟಾಚಾರ ತಡೆಯಲಾಗುತ್ತಿಲ್ಲ? ಎಂದರೆ ಧಾರ್ಮಿಕ ಕಾರ್ಯವೇ ಭ್ರಷ್ಟರ ಹಣದಲ್ಲಿ ನಡೆಯುತ್ತಿದ್ದರೆ ಅದರ ಫಲ ಭ್ರಷ್ಟರಿಗೆ ಸಿಗೋದು.ರಾಜಪ್ರಭುತ್ವದ ಸತ್ಯಾಸತ್ಯತೆಯನ್ನು ಪ್ರಜಾಪ್ರಭುತ್ವದಲ್ಲಿ ಪ್ರಚಾರ ಮಾಡಿ ನಾನೇ ರಾಜ, ನಾನೇ ದೇವರು ಎಂದರೆ ಧರ್ಮ ವಲ್ಲ ಸತ್ಯವೇ ಇಲ್ಲದೆ ಧರ್ಮ ರಕ್ಷಣೆ ಹೇಗಾಗುತ್ತದೆ?  ಸತ್ಯ ಹರಿಶ್ಚಂದ್ರ ನಂತೆ  ಬದುಕಲಾಗದು.ಶ್ರೀ ರಾಮಚಂದ್ರನಂತೆ ಇರಲಾಗದು ಎನ್ನುವವರು ಅಸತ್ಯ ಅಧರ್ಮಕ್ಕೆ ಸಹಕಾರ ಕೊಟ್ಟು ಜನರನ್ನು ಆಳುವುದೇ ದೊಡ್ಡ ಭ್ರಷ್ಟಾಚಾರ. ಒಟ್ಟಿನಲ್ಲಿ ಪ್ರಜೆಗಳಲ್ಲಿ ದೈವತ್ವವಿದ್ದರೂ ಗಮನಿಸದ ಶಿಕ್ಷಣ  ಪಡೆದವರಿಗೆ ಗುಡಿಗೋಪುರಗಳಲ್ಲಿ ದೇವರನ್ನು ಹುಡುಕಿದರೂ ಸಿಗೋದಿಲ್ಲ. ಹಾಗಂತ ದೇವರಿಲ್ಲ ನಾನೇ ಎಲ್ಲಾ ಎಂದರೆ  ಸರಿಯಲ್ಲ.ಅಣು ರೇಣು ತೃಣಕಾಷ್ಟ ಪರಿಪೂರ್ಣ ಗೋವಿಂದ ಎಂದಿರುವರಲ್ಲ ಮಹಾತ್ಮರು. ಒಳಗೇ ಅಡಗಿರುವ  ದೇವರು ದೈವೀ ಗುಣವನ್ನು ಬೆಳೆಸೋ ಶಿಕ್ಷಣ ಕೊಡದೆ ಪೋಷಕರನ್ನೇ ಶೋಷಣೆ ಮಾಡುವ ಮಕ್ಕಳೆ ಸರಿಯಿಲ್ಲವೆಂದರೆ ತಪ್ಪು ಯಾರದ್ದು? ಕಲಿಯಬೇಕಾದ್ದನ್ನು ಕಲಿತರೆ ತಿಳಿಯಬೇಕಾದ್ದನ್ನು ತಿಳಿಯಬಹುದು.
ಕಲಿಯುಗದಲ್ಲಿ ಕಲಿತಷ್ಟೂ ಇದೆ. ಯಾವುದನ್ನು ಕಲಿಯುವುದು ಎನ್ನುವ ತಿಳುವಳಿಕೆ  ಅಗತ್ಯವಿದೆ. 
 

No comments:

Post a Comment