ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, August 20, 2023

ಹಾವಿನ ದ್ವೇಷ= ಮಾನವನ ವೇಷ, ದ್ವೇಷ?


ಹಾವಿನ ದ್ವೇಷ ಹನ್ನೆರಡು ವರುಷ
ಮಾನವನ ರೋಷ ವೇಷ ನೂರು ವರುಷ. ನಾಟಕದ ಪಾತ್ರ ದ್ವೇಷವನ್ನು ಹರಡಿದಷ್ಟೂ  ಬೆಳೆಯುತ್ತದೆ ಇದಕ್ಕಾಗಿ ವೇಷ ಹಾಕಿಕೊಂಡರೆ  ಪರಿಣಾಮ ಅಪಾಯಕಾರಿಯಾಗಿರುವುದು.‌ವಿಶ್ವದ ತುಂಬಾ ತುಂಬಿರುವ ಈ ರಾಜಕೀಯ ದ್ವೇಷ,ವೇಷಗಳನ್ನು ನೋಡಿಕೊಂಡಿರುವವರು  ವೇದದ ಸಾರವನರಿಯರು.ತತ್ವ ಬಿಟ್ಟು ತಂತ್ರವೇ  ಮುಗಿಲುಮುಟ್ಟಿದಾಗ  ಮನುಕುಲ ಅತಂತ್ರಸ್ಥಿತಿಗೆ  ತಲುಪುವುದು ಸಹಜ . ಸೃಷ್ಟಿ ಯೇ ಸರಿಪಡಿಸಿದರೆ ಸ್ಥಿತಿ ಉತ್ತಮವಾಗಿರುವುದು. ನಮ್ಮ ಪರಿಸ್ಥಿತಿ ನಮಗಷ್ಟೇ ತಿಳಿದರೆ  ಮೇಲೇರಿದವರ ಪರಿಸ್ಥಿತಿ  ಸಾಕಷ್ಟು ಮಂದಿಗೆ  ಪೂರ್ಣ ಅರಿವಾಗದೆ  ಅವರಿಗೇ ಸಹಕರಿಸುತ್ತಾ ತಾವೂ ಮೂಲ ಬಿಟ್ಟು  ದೂರ ಹೋಗುವುದಾಗುತ್ತದೆ.‌
ಹಾವಿನ ವಿಷ ಕ್ಕಿಂತಲೂ ಮಾನವನ ದ್ವೇಷ ಅಪಾಯಕಾರಿ ಇದಕ್ಕೆ ಕಾರಣವೇ ಬೇಧಭಾವದ ಅಸಮಾನತೆಯ ರಾಜಕೀಯ ಬುದ್ದಿ. ಅಜ್ಞಾನದಲ್ಲಿ ಬೆಳೆದಿರೋದನ್ನು ಜ್ಞಾನದಿಂದ  ತಿಳಿದು ಸರಿಪಡಿಸಿಕೊಂಡರೆ  ಶಾಂತಿ ಆತ್ಮತೃಪ್ತಿ.
ಬೇಧವಿಲ್ಲದ್ದು ಅಧ್ವೈತ. ಬೇಧ ಹೆಚ್ಚಾದದ್ದು ಅದ್ವೈತದೊಳಗೇ ಅಡಗಿದ್ದ ದ್ವೈತದಿಂದ.ಹಾಗಾದರೆ ದ್ವೈತವನ್ನು ಸಮಾನತೆಗೆ ಬಳಸಿ ಏಕತೆ ತರಲು ಸಾಧ್ಯವಾದರೆ ಅದೂ ಅಧ್ವೈತವಾಗುವುದು.ನಾನಿಲ್ಲದೆ ನೀನಿಲ್ಲ ಅವನಿಲ್ಲದೆ  ಯಾರೂ ಇಲ್ಲ .ಮನುಕುಲಕ್ಕೆ ಇರೋದು ಒಂದೇ ಭೂಮಿ  ಭೂಮಿ ಆಕಾಶದಲ್ಲಿ ತಿರುಗುತ್ತಿದೆ ಆಕಾಶದಲ್ಲಿ  ಎಲ್ಲಾ ಇದೆ  ಆದರೆ ಮಾನವ ಕುಲ ಬದುಕೋದಿಲ್ಲ. ಇದ್ದರೂ ಭೂಮಿಯ  ಗಾಳಿಯಿಂದಲೇ ಆದಾಗ‌ ವಾಯುಜೀವೋತ್ತಮ. ಭೂಮಿಯಲ್ಲಿ ಮಾತ್ರ ಬೇಧಭಾವ ಎಂದಾಗ  ಇಲ್ಲಿಗೆ ಬಂದ ಜೀವಾತ್ಮನಿಗೆ ಪರಮಸತ್ಯ ತಿಳಿದ ಮೇಲೇ  ಜ್ಞಾನೋದಯ.ಜ್ಞಾನದಿಂದ  ಬೇಧ ಹೋದಾಗಲೇ ತತ್ವದರ್ಶನ. ತಂತ್ರದಿಂದ  ಬೇಧವಳಿಸುವ‌ಪ್ರಯತ್ನ ನಡೆಸಿದರೂ  ತತ್ವದರ್ಶನ ವಾಗದೆ  ಇದ್ದರೆ  ತಾತ್ಕಾಲಿಕ ವಷ್ಟೆ.
ದ್ವೇಷದಿಂದ  ಹೋರಾಟ ನಡೆಸುವುದಕ್ಕೂ ಪ್ರೀತಿಗಾಗಿ ಹೋರಾಡುವುದಕ್ಕೂ ವ್ಯತ್ಯಾಸವಿದೆ. ಪ್ರೀತಿಯ ಹೋರಾಟ ಸತ್ವಯುತವಾಗಿದ್ದರೆ ಶಾಂತಿ ಸುಖ ಸಂತೋಷ ನಿಧಾನವಾಗಿ ಸಿಕ್ಕರೂ ಶಾಶ್ವತವಾಗಿರುವುದು. ಒಳಗೇ ದ್ವೇಷವಿಟ್ಟುಕೊಂಡು ಹೊರಗೆ ಪ್ರೀತಿಯ ನಾಟಕ ಮಾಡಿ ಗೆದ್ದರೆ‌  ಕೊನೆಗೆ ದು:ಖವೇ ಗತಿ. ಹಾಗೆ ಒಗ್ಗಟ್ಟು ಒಮ್ಮತ ಏಕತೆ, ಐಕ್ಯತೆಯು  ಪ್ರೀತಿಯಿಂದಲೇ ತತ್ವದಿಂದಲೇ  ಬೆಳೆದಾಗ ಧರ್ಮ ರಕ್ಷಣೆ.
ಪಾಂಡವ ಕೌರವರಿಗೆ  ಭೀಷ್ಮ ಪಿತಾಮಹರಾಗಲಿ ಶ್ರೀ ಕೃಷ್ಣ ರಾಗಲಿ  ದ್ವೇಷ  ಮಾಡದೆಯೇ ಗೆದ್ದರು. ಧರ್ಮರಕ್ಷಣೆಗಾಗಿ ನಡೆದ  ಹೋರಾಟ‌ದಲ್ಲಿ  ತತ್ವವಿತ್ತು .ತಂತ್ರದ ಬಳಕೆಯೂ ಆಗಿತ್ತು ಆದರೆ  ತತ್ವಕ್ಕೆ ವಿರುದ್ದವಿರಲಿಲ್ಲ.
ಮಹಾಭಾರತಯುದ್ದ ರಾಮಾಯಣಯುದ್ದದ ಹಿಂದೆ ಸ್ತ್ರೀ ಶಕ್ತಿಯ ದುರ್ಭಳಕೆ ಕಾರಣವಾದಂತೆ  ಈಗಲೂ ಭಾರತದ ಈ ಸ್ಥಿತಿಗೆ  ಇದೇ ಕಾರಣವಾಗಿದೆ. ಎಲ್ಲಿಯವರೆಗೆ ಸ್ತ್ರೀ ತನ್ನ ಐಹಿಕ ಸುಖಾಭೋಗಕ್ಕಾಗಿ ಪುರುಷರಿಗೆ ಸಹಕರಿಸಿ ಅಧರ್ಮ  ಇರುವುದೋ ಅಲ್ಲಿಯವರೆಗೆ  ಭಾರತ  ಭರತಭೂಮಿ ಆಗದು. ಮೇಲೇರಿದ ಮೇಲೆ ಕೆಳಗೆ ಇಳಿಯುವುದು ಸಹಜ. ಇಳಿಯುವುದನ್ನೂ  ಮೊದಲೇ ಕಲಿತಿದ್ದರೆ ಉತ್ತಮ. ಇಲ್ಲ  ನಾನು ಮೇಲೇ ಇರೋದೆಂದರೆ  ಎಳೆದು  ಹಾಕುವವರು ಇರುತ್ತಾರೆ. ಅದಕ್ಕೆ ಡಿ.ವಿ.ಜಿಯವರು  ಹೇಳಿರೋದು ಮೊದಲು ಮಾನವನಾಗು, ಎಲ್ಲರೊಳಗೊಂದಾಗು ಮಂಕುತಿಮ್ಮ .ಜ್ಞಾನ ಎಲ್ಲರನ್ನೂ ಒಂದಾಗಿಸಿ  ಸತ್ಯಧರ್ಮದ ಕಡೆಗೆ ನಡೆಸಿದರೆ, ಅಜ್ಞಾನ ಬೇರೆ ಬೇರೆ ಮಾಡುತ್ತಾ ತಾನೇ ಮೇಲೆನ್ನುವುದು ಮಾನವನ ಸಹಜ ಗುಣವಾಗಿರುತ್ತದೆ.
ವಿಷ್ಣುವಿನ ಅವತಾರ ಅಸಂಖ್ಯಾತವಾದಂತೆ ಬ್ರಹ್ಮ ಶಿವಾವತಾರವಾಗಿದೆ.ಸ್ಥಿತಿಗೆ ಬೆಲೆಕೊಟ್ಟಂತೆ ಸೃಷ್ಟಿ ಲಯವೂ ಮುಖ್ಯವಾಗಿರುವುದೆ?  ಇಲ್ಲವೆಂದರೂ  ನಡೆಯೋದನ್ನು ನಿಲ್ಲಸಲಾಗದು. ಆಗೋದನ್ನು ತಡೆಯಲಾಗದು  ತಡೆದರೂ  ಶಾಶ್ವತವಿರದು.ಇದೇ ಜನನ ಮರಣದ ನಡುವಿರುವ ಜೀವನದ ಸತ್ಯ.  ಎಲ್ಲಾ ಇದ್ದಾಗ  ಕಾಣೋದಿಲ್ಲ.ಹೋದ ಮೇಲೆ ಸಿಗೋದಿಲ್ಲ. ಆದರೂ ಬೇಧಭಾವ ಬಿಡೋದಿಲ್ಲ.
ಹುಟ್ಟುಗುಣ ಸುಟ್ಟರೂ ಹೋಗೋದಿಲ್ಲ.ಇದು ಹೊರಗಿಲ್ಲ ಒಳಗೇ ಇರೋದು.

No comments:

Post a Comment